ಕೃತಿಸ್ವಾಮ್ಯ ಪ್ರತಿವಾದಿ ನೋಟಿಫಿಕೇಶನ್‌ಗಳಿಗಾಗಿ ಇರುವ ಅವಶ್ಯಕತೆಗಳು

ಒಂದು ವೇಳೆ ನೀವು ಇಮೇಲ್, ಫ್ಯಾಕ್ಸ್ ಅಥವಾ ಅಂಚೆ ಪತ್ರದ ಮೂಲಕ ಕೃತಿಸ್ವಾಮ್ಯ ಪ್ರತಿವಾದಿ ನೋಟಿಫಿಕೇಶನ್ ಸಲ್ಲಿಸುತ್ತಿದ್ದರೆ, ಅದು ಈ ಕೆಳಗೆ ಪಟ್ಟಿಮಾಡಿರುವ ಎಲ್ಲಾ ಅಗತ್ಯ ಮಾಹಿತಿಯನ್ನು ಒಳಗೊಂಡಿರಬೇಕು. ಕೆಳಗೆ ಪಟ್ಟಿಮಾಡಲಾದ ಮಾಹಿತಿಯಲ್ಲಿ ಯಾವುದಾದರೂ ತಪ್ಪಿಹೋಗಿದ್ದರೆ, ನಾವು ಪ್ರತಿವಾದಿ ನೋಟಿಫಿಕೇಶನ್ ಅನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಿಲ್ಲ.
 

ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದು ಒಂದು ಸಮಸ್ಯೆಯಾಗಿದ್ದರೆ, ಅಪ್‌ಲೋಡ್ ಮಾಡಿರುವವರ ಪರವಾಗಿ ಅಧಿಕೃತ ಪ್ರತಿನಿಧಿ (ಅಂದರೆ ವಕೀಲರು) ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದು.

ಪ್ರಾರಂಭಿಸುವುದು

ನೀವು ಪ್ರಾರಂಭಿಸುವ ಮೊದಲು, ಈ ಕೆಳಗಿನವುಗಳನ್ನು ನೆನಪಿನಲ್ಲಿಡಿ:

  • ಇಮೇಲ್ ಮಾಡಲಾದ ಪ್ರತಿವಾದಿ ನೋಟಿಫಿಕೇಶನ್‌ಗಳು copyright@youtube.com ಗೆ ಕಳುಹಿಸಿದ ಇಮೇಲ್‌ನ ಮುಖ್ಯಭಾಗದಲ್ಲಿ (ಪ್ರತ್ಯೇಕ ಲಗತ್ತಾಗಿ ಅಲ್ಲ) ಕೆಳಗಿನ ಮಾಹಿತಿಯನ್ನು ಒಳಗೊಂಡಿರಬೇಕು.
  • ಪ್ರತಿವಾದಿ ನೋಟಿಫಿಕೇಶನ್‌ಗಳನ್ನು ತಕರಾರಿನಲ್ಲಿರುವ ಕಂಟೆಂಟ್‌ನ ಮೂಲ ಅಪ್‌ಲೋಡ್‌ ಮಾಡಿರುವವರು ಸಲ್ಲಿಸಬೇಕು.
  • ಪ್ರತಿವಾದಿ ನೋಟಿಫಿಕೇಶನ್‌ನಲ್ಲಿರುವ ಮಾಹಿತಿಯನ್ನು ಕ್ಲೇಮುದಾರರ ಜೊತೆ ಹಂಚಿಕೊಳ್ಳಲು ಮೂಲ ಅಪ್‌ಲೋಡ್ ಮಾಡಿರುವವರು ಸಮ್ಮತಿಸಬೇಕು.
ತಪ್ಪಾದ ಮಾಹಿತಿಯನ್ನು ಸಲ್ಲಿಸಬೇಡಿ. ವಂಚನೆಯ ಡಾಕ್ಯುಮೆಂಟೇಷನ್ ಅನ್ನು ಸಲ್ಲಿಸುವಂತಹ ಪ್ರಕ್ರಿಯೆಗಳ ದುರುಪಯೋಗವು ನಿಮ್ಮ ಖಾತೆಯ ಕೊನೆಗೊಳಿಸುವಿಕೆ ಅಥವಾ ಇತರ ಕಾನೂನಾತ್ಮಕ ಪರಿಣಾಮಗಳಿಗೆ ಕಾರಣಾಗಬಹುದು.

ಅಗತ್ಯ ಮಾಹಿತಿಯನ್ನು ಒದಗಿಸಿ

ಕೆಳಗಿನ ಮಾಹಿತಿಯನ್ನು ಇಮೇಲ್‌ನ ಮುಖ್ಯಭಾಗದಲ್ಲಿ (ಲಗತ್ತಾಗಿ ಅಲ್ಲ) copyright@youtube.com ಗೆ ಕಳುಹಿಸಿ. ನೀವು ಅದನ್ನು ಫ್ಯಾಕ್ಸ್ ಅಥವಾ ಪೋಸ್ಟಲ್ ಮೇಲ್ ಮೂಲಕ ಸಹ ಕಳುಹಿಸಬಹುದು.

ನಿಮ್ಮ ಸಂಪರ್ಕ ಮಾಹಿತಿ

ನಿಮ್ಮೊಂದಿಗೆ ಅಥವಾ ನಿಮ್ಮ ಪ್ರತಿವಾದಿ ನೋಟಿಫಿಕೇಶನ್ ಕುರಿತು ಕಾರ್ಯನಿರ್ವಹಿಸಲು ಅನುಮತಿ ಪಡೆದಿರುವ ಪ್ರತಿನಿಧಿಯೊಂದಿಗೆ ಸಂಪರ್ಕದಲ್ಲಿರಲು, ಕೆಳಗಿನ ಸಂಪರ್ಕ ಮಾಹಿತಿ ಅಗತ್ಯವಿದೆ:

  • ಕಾನೂನುಬದ್ಧವಾದ ಪೂರ್ಣ ಹೆಸರು: ಮೊದಲ ಮತ್ತು ಕೊನೆಯ ಹೆಸರು, ಕಂಪನಿಯ ಹೆಸರು ಅಲ್ಲ. ನೀವು ಅಧಿಕೃತ ಪ್ರತಿನಿಧಿ ಆಗಿದ್ದರೆ, ಅಪ್‌ಲೋಡ್‌ ಮಾಡುವವರ ಜೊತೆಗಿನ ನಿಮ್ಮ ಸಂಬಂಧವನ್ನು ಸಹ ಸೇರಿಸಿ.
  • ಭೌತಿಕ ವಿಳಾಸ
  • ದೂರವಾಣಿ ಸಂಖ್ಯೆ

ಕಂಟೆಂಟ್ ಪಡೆಯಲು ಇರುವ ಫಾರ್ಮ್ಯಾಟ್ ಮಾಡಲಾದ ಲಿಂಕ್‌ಗಳು

ಪ್ರತಿವಾದಿ ನೋಟಿಫಿಕೇಶನ್‌ಗಳು ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿ ಯಿಂದಾಗಿ ತೆಗೆದುಹಾಕಲಾದ ಕಂಟೆಂಟ್‌ನ ಲಿಂಕ್‌ಗಳನ್ನು ಒಳಗೊಂಡಿರಬೇಕು. ಲಿಂಕ್‌ಗಳನ್ನು ನಿರ್ದಿಷ್ಟ ಫಾರ್ಮ್ಯಾಟ್‌ನಲ್ಲಿ ಕಳುಹಿಸಬೇಕು (ಕೆಳಗೆ ನೋಡಿ). ಚಾನಲ್ ಹೆಸರು ಅಥವಾ ಚಾನಲ್ URL ನಂತಹ ಸಾಮಾನ್ಯ ಮಾಹಿತಿಯು ಸ್ವೀಕಾರಾರ್ಹವಲ್ಲ.

  • ವೀಡಿಯೊಗಳಿಗೆ ಮಾನ್ಯವಾದ URL ಫಾರ್ಮ್ಯಾಟ್www.youtube.com/watch?v=xxxxxxxxxxx
  • ವೀಡಿಯೊ-ಅಲ್ಲದ ಕಂಟೆಂಟ್‌ಗೆ ಮಾನ್ಯವಾದ URL ಫಾರ್ಮ್ಯಾಟ್: ಕೆಳಗಿನ ಮಾನ್ಯವಾದ URL ಫಾರ್ಮ್ಯಾಟ್ ವಿಭಾಗದಲ್ಲಿ ಪಟ್ಟಿಮಾಡಲಾಗಿದೆ.
    • ಟಿಪ್ಪಣಿ: ಚಾನಲ್ ಪ್ರೊಫೈಲ್ ಚಿತ್ರಗಳನ್ನು Google ಹೋಸ್ಟ್ ಮಾಡಿರುವುದರಿಂದಾಗಿ, ಚಾನಲ್ ಪ್ರೊಫೈಲ್ ಚಿತ್ರಗಳಿಗಾಗಿ ಪ್ರತಿವಾದಿ ನೋಟಿಫಿಕೇಶನ್‌ಗಳನ್ನು Google ನ ವೆಬ್‌ಫಾರ್ಮ್ ಮೂಲಕ ಸಲ್ಲಿಸಬೇಕು.

      ಮಾನ್ಯ URL ಫಾರ್ಮ್ಯಾಟ್‌ಗಳು

      ನೀವು ಆಕ್ಷೇಪಿಸುತ್ತಿರುವ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯಿಂದಾಗಿ ತೆಗೆದುಹಾಕಲಾದ ಕಂಟೆಂಟ್‌ಗೆ ಸಂಬಂಧಿಸಿದ URL ಗಳನ್ನು ಮಾತ್ರ ಸೇರಿಸಿ. ವಿಭಿನ್ನ ಚಾನಲ್‌ಗಳಲ್ಲಿನ URL ಗಳಿಗಾಗಿ ಪ್ರತ್ಯೇಕ ಪ್ರತಿವಾದಿ ನೋಟಿಫಿಕೇಶನ್‌ಗಳನ್ನು ಸಲ್ಲಿಸಿ.
      ಕಂಟೆಂಟ್ ಪ್ರಕಾರ ಮಾನ್ಯ URL ಫಾರ್ಮ್ಯಾಟ್ URL ಅನ್ನು ಎಲ್ಲಿ ಹುಡುಕಬಹುದು
      ಚಾನಲ್ ಬ್ಯಾನರ್ ಚಿತ್ರಗಳು

      www.youtube.com/channel/UCxxxxxxxxxxxxxxxxxxxxx

      ಅಥವಾ

      www.youtube.com/user/xxxxxxxxx

      ಚಾನಲ್ ಪುಟಕ್ಕೆ ಹೋಗಿ ನಂತರವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಕಾಪಿ ಮಾಡಿ.

      ಚಾನಲ್ ವಿವರಣೆಗಳು www.youtube.com/user/xxxxxxxxx/about

      ಚಾನಲ್‌ನ ಕುರಿತು ವಿಭಾಗಕ್ಕೆ ಹೋಗಿ ನಂತರ ವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಕಾಪಿ ಮಾಡಿ.

      ಕ್ಲಿಪ್‌ಗಳು www.youtube.com/clip/xxxxxxxxxxxxxxxxxxxxxxxxxx ಕ್ಲಿಪ್‌ನ ಶೀರ್ಷಿಕೆಯನ್ನು ಕ್ಲಿಕ್ ಮಾಡಿ ನಂತರ ವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಕಾಪಿ ಮಾಡಿ.
      ವೀಡಿಯೊ ಕಾಮೆಂಟ್‌ಗಳು www.youtube.com/watch?v=xxxxxxxxxx&lc=xxxxxxxxxxxxxxxxxx ಕಾಮೆಂಟ್‌ನ ಮೇಲಿರುವ ಪೋಸ್ಟ್ ಮಾಡಲಾದ ದಿನಾಂಕವನ್ನು ಕ್ಲಿಕ್ ಮಾಡಿ (ಪುಟವು ಪುನಃ ಲೋಡ್ ಆಗುತ್ತದೆ) ನಂತರ ವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಕಾಪಿ ಮಾಡಿ.
      ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ www.youtube.com/channel/xxxxxxxxxxx/community?lc=xxxxxxxxxxxx&lb=xxxxxxxxxxxx ಕಾಮೆಂಟ್‌ನ ಮೇಲಿರುವ ಪೋಸ್ಟ್ ಮಾಡಲಾದ ದಿನಾಂಕವನ್ನು ಕ್ಲಿಕ್ ಮಾಡಿ (ಪುಟವು ಪುನಃ ಲೋಡ್ ಆಗುತ್ತದೆ) ನಂತರ ವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರಕಾಪಿ ಮಾಡಿ.
      ಸಮುದಾಯ ಪೋಸ್ಟ್‌ಗಳು https://www.youtube.com/post/xxxxxxxxxxxxxxxxxxx ಸಮುದಾಯ ಪೋಸ್ಟ್ ಅನ್ನು ಪೋಸ್ಟ್ ಮಾಡಿದ ದಿನಾಂಕವನ್ನು ಕ್ಲಿಕ್ ಮಾಡಿ (ಪುಟವು ಪುನಃ ಲೋಡ್ ಆಗುತ್ತದೆ) ನಂತರ ವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಕಾಪಿ ಮಾಡಿ.
      ಸದಸ್ಯತ್ವದ ಬ್ಯಾಡ್ಜ್‌ಗಳು, ಎಮೋಜಿ ಅಥವಾ ರಚನೆಕಾರರ ಪರ್ಕ್ ವಿವರಣೆಗಳು yt3.ggpht.com/xxxxx ಮೂಲಕ ಪ್ರಾರಂಭಿಸಲಾಗುತ್ತದೆ ಚಿತ್ರದ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಚಿತ್ರದ ವಿಳಾಸವನ್ನು ಕಾಪಿ ಮಾಡಿ

      ಚಾನಲ್ URL ಅನ್ನು ಸಹ ಸೇರಿಸಿ:

      www.youtube.com/channel/UCxxxxxxxxxxxxxxxxxxxxx

      ಅಥವಾ

      www.youtube.com/user/xxxxxxxxx

      ಚಾನಲ್ ಪುಟಕ್ಕೆ ಹೋಗಿ ನಂತರವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಕಾಪಿ ಮಾಡಿ.
      ಪ್ಲೇಪಟ್ಟಿ ವಿವರಣೆಗಳು

      www.youtube.com/playlist?list=xxxxxxxxxxxxxxxx

      ಪ್ಲೇಪಟ್ಟಿಯ ಶೀರ್ಷಿಕೆಯನ್ನು ಕ್ಲಿಕ್ ಮಾಡಿ ನಂತರ ವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಕಾಪಿ ಮಾಡಿ.

      ಪ್ರೊಫೈಲ್ ಚಿತ್ರಗಳು
      Super Stickers lh3.googleusercontent.com/xxxxx ಮೂಲಕ ಪ್ರಾರಂಭಿಸಲಾಗುತ್ತದೆ ಲೈವ್ ಚಾಟ್‌ನಲ್ಲಿ  ಡಾಲರ್ ಚಿಹ್ನೆಯನ್ನು ಕ್ಲಿಕ್ ಮಾಡಿ ನಂತರ ಸೂಪರ್ ಸ್ಟಿಕ್ಕರ್ ನಂತರ ಚಿತ್ರದ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಚಿತ್ರದ ವಿಳಾಸವನ್ನು ಕಾಪಿ ಮಾಡಿ.

      ಚಾನಲ್ URL ಅನ್ನು ಸಹ ಸೇರಿಸಿ:

      www.youtube.com/channel/UCxxxxxxxxxxxxxxxxxxxxx

      ಅಥವಾ

      www.youtube.com/user/xxxxxxxxx

      ಚಾನಲ್ ಪುಟಕ್ಕೆ ಹೋಗಿ ನಂತರ ವಿಳಾಸ ಪಟ್ಟಿಯ ಮೇಲೆ ಬಲ-ಕ್ಲಿಕ್ ಮಾಡಿ ನಂತರ ಕಾಪಿ ಮಾಡಿ.

       

ಕಾನೂನು ಹೇಳಿಕೆಗಳು:

ಕೆಳಗಿನ ಕಾನೂನು ಹೇಳಿಕೆಗಳನ್ನು ಸಮ್ಮತಿಸಬೇಕು ಮತ್ತು ಸೇರಿಸಬೇಕು:

  • "ನಾನು ವಾಸವಿರುವ ವಿಳಾಸವು ನೆಲೆಸಿರುವ ಜಿಲ್ಲೆಯ ಫೆಡರಲ್‌ ಜಿಲ್ಲಾ ನ್ಯಾಯಾಲಯದ ಅಧಿಕಾರ ಕ್ಷೇತ್ರಕ್ಕೆ, ಅಥವಾ ನನ್ನ ವಿಳಾಸವು ಅಮೆರಿಕದ ಹೊರಭಾಗದಲ್ಲಿದ್ದರೆ, YouTube ನೆಲೆಸಿರುವ ನ್ಯಾಯಾಂಗೀಯ ಜಿಲ್ಲೆಯ ಅಧಿಕಾರ ಕ್ಷೇತ್ರವನ್ನು ನಾನು ಒಪ್ಪಿಕೊಳ್ಳುತ್ತೇನೆ ಹಾಗೂ ಕ್ಲೇಮುದಾರರಿಂದ ಬರುವ ಪ್ರಕ್ರಿಯೆಯ ಸೇವೆಯನ್ನು ಸಮ್ಮತಿಸುತ್ತೇನೆ".
  • "ನಾನು, ಸುಳ್ಳು ಸಾಕ್ಷಿಗಾಗಿ ದಂಡ ವಿಧಿಸಿರುವ ಅನುಸಾರ ಪ್ರಮಾಣ ಮಾಡುವುದು ಏನೆಂದರೆ, ತೆಗೆದುಹಾಕಬೇಕಾದ ಅಥವಾ ನಿಷ್ಕ್ರಿಯಗೊಳಿಸಬೇಕಾದ ಮಟಿರಿಯಲ್ ಬದಲಿಗೆ ತಪ್ಪು ಗ್ರಹಿಕೆಯಿಂದ ಅಥವಾ ತಪ್ಪಿನಿಂದ ಈ ಮಟಿರಿಯಲ್ ಅನ್ನು ತೆಗೆದುಹಾಕಲಾಗಿದೆ ಇಲ್ಲವೇ ನಿಷ್ಕ್ರಿಯಗೊಳಿಸಲಾಗಿದೆ ಎಂಬ ಸದ್ಭಾವನೆ ನನ್ನದು.

ಕ್ಲೇಮುದಾರರಿಗೆ ಹೇಳಿಕೆ

ನಿಮ್ಮದೇ ಸ್ವಂತ ಪದಗಳಲ್ಲಿ, ತಕರಾರಿನಲ್ಲಿರುವ ಕಂಟೆಂಟ್ ಅನ್ನು ತೆಗೆದುಹಾಕಿರುವುದು ತಪ್ಪು ಅಥವಾ ಅಲ್ಲಿ ತಪ್ಪು ಗುರುತಿಸುವಿಕೆ ನಡೆದಿದೆ ಎಂದು ನಿಮಗೇಕೆ ಅನಿಸುತ್ತದೆ ಎಂಬುದನ್ನು ಕ್ಲೇಮುದಾರರಿಗೆ ಸ್ಪಷ್ಟವಾಗಿ ಮತ್ತು ಸಂಕ್ಷಿಪ್ತವಾಗಿ ವಿವರಿಸುವ ಹೇಳಿಕೆಯೊಂದನ್ನು ನೀವು ಸೇರಿಸಬೇಕು. ತಪ್ಪಾಗಿ ಗುರುತಿಸುವಿಕೆಯು ಕೃತಿಸ್ವಾಮ್ಯಕ್ಕೆ ನ್ಯಾಯಯುತ ಬಳಕೆ ಅಥವಾ ನ್ಯಾಯೋಚಿತ ವ್ಯವಹಾರದಂತಹ ವಿನಾಯಿತಿಯ ಸಂದರ್ಭಗಳನ್ನು ಒಳಗೊಂಡಿರುತ್ತದೆ.

ನಿಮ್ಮ ಸಹಿ

ಪೂರ್ಣ ಮತ್ತು ಮಾನ್ಯವಾದ ಪ್ರತಿವಾದಿ ನೋಟಿಫಿಕೇಶನ್‌ಗಳಿಗೆ ಅಪ್‌ಲೋಡ್ ಮಾಡುವವರು ಅಥವಾ ಅವರ ಪರವಾಗಿ ಕಾರ್ಯನಿರ್ವಹಿಸಲು ಅನುಮತಿ ಪಡೆದಿರುವ ಪ್ರತಿನಿಧಿಯ ಭೌತಿಕ ಅಥವಾ ಎಲೆಕ್ಟ್ರಾನಿಕ್ ಸಹಿ ಯ ಅಗತ್ಯವಿರುತ್ತದೆ.

ಈ ಅವಶ್ಯಕತೆಯನ್ನು ಪೂರೈಸಲು, ಅಪ್‌ಲೋಡ್ ಮಾಡುವವರು ಅಥವಾ ಅಧಿಕೃತ ಪ್ರತಿನಿಧಿ ಪ್ರತಿವಾದಿ ನೋಟಿಫಿಕೇಶನ್‌ನ ಕೆಳಭಾಗದಲ್ಲಿ ಅವರ ಕಾನೂನುಬದ್ಧವಾದ ಪೂರ್ಣ ಹೆಸರನ್ನು ಅವರ ಸಹಿಯನ್ನಾಗಿ ನಮೂದಿಸಬಹುದು. ಕಾನೂನುಬದ್ಧವಾದ ಪೂರ್ಣ ಹೆಸರು ಮೊದಲ ಮತ್ತು ಕೊನೆಯ ಹೆಸರು ಆಗಿರಬೇಕು, ಕಂಪನಿಯ ಹೆಸರು ಅಲ್ಲ.

ಹೆಚ್ಚಿನ ಮಾಹಿತಿ

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10864320012583318084
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false