ಕಾಮೆಂಟ್‌ಗಳನ್ನು ವೀಕ್ಷಿಸಿ, ನಿಭಾಯಿಸಿ ಅಥವಾ ಅಳಿಸಿ

YouTube ನಲ್ಲಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವುದು ಮತ್ತು ತೊಡಗಿಸಿಕೊಳ್ಳುವುದು ಹೇಗೆ

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

ವೀಡಿಯೊದ ಮಾಲೀಕರು ಕಾಮೆಂಟ್‌ಗಳನ್ನು ಆನ್ ಮಾಡಿದರೆ, ನೀವು ಕಾಮೆಂಟ್‌ಗಳನ್ನು ಪೋಸ್ಟ್ ಮಾಡಬಹುದು ಮತ್ತು ವೀಡಿಯೊದಲ್ಲಿ ಇತರ ಕಾಮೆಂಟ್‌ಗಳನ್ನು ಇಷ್ಟಪಡಬಹುದು, ಇಷ್ಟವಿಲ್ಲ ಎಂದು ಸೂಚಿಸಬಹುದು ಅಥವಾ ಪ್ರತ್ಯುತ್ತರಿಸಬಹುದು

ವೀಡಿಯೊದಲ್ಲಿ ಕಾಮೆಂಟ್‌ಗಳನ್ನು ವೀಕ್ಷಿಸಿ

ವೀಡಿಯೊದಲ್ಲಿ ಕಾಮೆಂಟ್‌ಗಳನ್ನು ವೀಕ್ಷಿಸಲು, ವೀಡಿಯೊದ ಪುಟದಲ್ಲಿ ಸ್ಕ್ರಾಲ್ ಮಾಡಿ. ಸಂಭಾಷಣೆಗಳನ್ನು ಅನುಸರಿಸಲು ಸುಲಭವಾಗುವಂತೆ ಪ್ರತ್ಯುತ್ತರಗಳನ್ನು ಥ್ರೆಡ್ ಮಾಡಲಾಗಿದೆ. YouTube ಕಾಮೆಂಟ್‌ಗಳು ಸಾರ್ವಜನಿಕವಾಗಿವೆ ಮತ್ತು ನೀವು ಪೋಸ್ಟ್ ಮಾಡುವ ಕಾಮೆಂಟ್‌ಗೆ ಯಾರಾದರೂ ಪ್ರತ್ಯುತ್ತರಿಸಬಹುದು.

ನೀವು ನೋಟಿಫೀಕೇಶನ್ ಅನ್ನು ಪಡೆದ ನಂತರ ನೀವು ಕಾಮೆಂಟ್ ಅನ್ನು ಹುಡುಕಲಾಗದಿದ್ದರೆ, ಕಾಮೆಂಟ್ ಅನ್ನು ಈಗಾಗಲೇ ತೆಗೆದುಹಾಕಿರುವ ಸಾಧ್ಯತೆಯಿದೆ. ಮೂಲ ಪೋಸ್ಟರ್, ಚಾನಲ್ ಮಾಲೀಕರು ಅಥವಾ ನೀತಿಯನ್ನು ಉಲ್ಲಂಘಿಸಿರುವ ಕಾರಣದಿಂದಾಗಿ ಕಾಮೆಂಟ್‌ಗಳನ್ನು ತೆಗೆದುಹಾಕಬಹುದು.

ಕಾಮೆಂಟ್ ಸೂಕ್ತವಾಗಿಲ್ಲ ಎಂದು ನೀವು ಭಾವಿಸಿದರೆ, ನೀವು ಅದನ್ನು ಸ್ಪ್ಯಾಮ್ ಅಥವಾ ನಿಂದನೆ ಎಂದು ವರದಿ ಮಾಡಬಹುದು. ನೀವು ರಚನೆಕಾರರಾಗಿದ್ದರೆ, ನಿಮ್ಮ ವೀಡಿಯೊಗಳಲ್ಲಿನ ಕಾಮೆಂಟ್‌ಗಳನ್ನು ನಿರ್ವಹಿಸಲು ಕಾಮೆಂಟ್ ಮಾಡರೇಶನ್ ಟೂಲ್‌ಗಳನ್ನು ಸಹ ನೀವು ಬಳಸಬಹುದು.
ನಿಮ್ಮ ಕಾಮೆಂಟ್ ಇತಿಹಾಸವನ್ನು ವೀಕ್ಷಿಸಿ

YouTube ನಾದ್ಯಂತ ನೀವು ನೋಡದೇ ಇರುವ ಸಾರ್ವಜನಿಕ ಕಾಮೆಂಟ್‌ಗಳನ್ನು ನೀವು ವೀಕ್ಷಿಸಬಹುದು.

  1. ಕಾಮೆಂಟ್ ಇತಿಹಾಸಕ್ಕೆ ಹೋಗಿ.
  2. ನಿಮ್ಮ ಕಾಮೆಂಟ್ ಅನ್ನು ನೀವು ಪೋಸ್ಟ್ ಮಾಡಿದ ಮೂಲ ಸ್ಥಳಕ್ಕೆ ಹೋಗಲು, ಕಂಟೆಂಟ್ ಅನ್ನು ಕ್ಲಿಕ್ ಮಾಡಿ ಅಥವಾ ಟ್ಯಾಪ್ ಮಾಡಿ.

ಅಳಿಸಲಾದ ವೀಡಿಯೊದಲ್ಲಿ ನೀವು ಕಾಮೆಂಟ್ ಮಾಡಿದ್ದರೆ ಅಥವಾ ನೀತಿ ಉಲ್ಲಂಘನೆಗಾಗಿ YouTube ನಿಮ್ಮ ಕಾಮೆಂಟ್ ಅನ್ನು ತೆಗೆದುಹಾಕಿದರೆ, ಈ ಇತಿಹಾಸದಲ್ಲಿ ಅದನ್ನು ತೋರಿಸುವುದಿಲ್ಲ.

ಕಾಮೆಂಟ್‌ಗಾಗಿ ಹಂಚಿಕೊಳ್ಳಬಹುದಾದ ಲಿಂಕ್ ಪಡೆಯಿರಿ

ಹೈಲೈಟ್ ಮಾಡಲಾದ ಕಾಮೆಂಟ್ ಲಿಂಕ್ ಅನ್ನು ರಚಿಸಲು ನೀವು ಕಾಮೆಂಟ್‌ನ ಟೈಮ್‌ಸ್ಟ್ಯಾಂಪ್ ಅನ್ನು ಕ್ಲಿಕ್ ಮಾಡಬಹುದು ಅಥವಾ ಟ್ಯಾಪ್ ಮಾಡಬಹುದು. ಈ ಕ್ರಿಯೆಯು ನಿರ್ದಿಷ್ಟ ಕಾಮೆಂಟ್ ಮತ್ತು ಅದರ ಥ್ರೆಡ್‌ಗಾಗಿ ವಿಳಾಸ ಪಟ್ಟಿಯಲ್ಲಿ ಹಂಚಿಕೊಳ್ಳಬಹುದಾದ ಲಿಂಕ್ ಅನ್ನು ನಿಮಗೆ ನೀಡುತ್ತದೆ.

ಕಾಮೆಂಟ್‌ಗಳಲ್ಲಿ ಮೊದಲು ಯಾವುದು ಕಾಣಿಸಿಕೊಳ್ಳಬೇಕು ಎಂಬುದನ್ನು ಬದಲಾಯಿಸಿ

ವೆಬ್‌ನಲ್ಲಿ, ವೀಡಿಯೊದ ಅಡಿಯಲ್ಲಿ ಕಾಮೆಂಟ್‌ಗಳು ಹೇಗೆ ತೋರಿಸಬೇಕು ಎಂಬುದನ್ನು ನೀವು ಬದಲಾಯಿಸಬಹುದು. ಪ್ರಮುಖ ಕಾಮೆಂಟ್‌ಗಳುಅಥವಾ ಹೊಚ್ಚಹೊಸದು ಮೊದಲಿಗೆ ಎಂಬ ಆಯ್ಕೆಯನ್ನು ಆರಿಸಲು ಈ ಪ್ರಕಾರ ವಿಂಗಡಿಸಿ ಅನ್ನು ಬಳಸಿ.

'ಹೈಲೈಟ್ ಮಾಡಲಾದ ಕಾಮೆಂಟ್' ಲಿಂಕ್ ಅನ್ನು ರಚಿಸಲು ಟೈಮ್‌ಸ್ಟ್ಯಾಂಪ್ ಅನ್ನು ಕ್ಲಿಕ್ ಮಾಡಿ. ಈ ಕ್ರಿಯೆಯು ನಿಮ್ಮ ಕಾಮೆಂಟ್ ಥ್ರೆಡ್ ಅನ್ನು ಪ್ರತ್ಯೇಕಿಸುತ್ತದೆ ಮತ್ತು ವಿಳಾಸ ಪಟ್ಟಿಯಲ್ಲಿ ಹಂಚಿಕೊಳ್ಳಬಹುದಾದ ಲಿಂಕ್ ಅನ್ನು ನೀಡುತ್ತದೆ.

ಕಾಮೆಂಟ್‌‌ಗಳನ್ನು ಅಳಿಸಿ
  1. ಕಾಮೆಂಟ್ ಇತಿಹಾಸಕ್ಕೆ ಹೋಗಿ.
  2. ವೀಡಿಯೊ ಲಿಂಕ್ ಅನ್ನು ಕ್ಲಿಕ್ ಮಾಡಿ ಅಥವಾ ಟ್ಯಾಪ್ ಮಾಡಿ.
  3. YouTube ನಲ್ಲಿ ಕಾಮೆಂಟ್‌ನ ಪಕ್ಕದಲ್ಲಿರುವ, ಇನ್ನಷ್ಟು ಆಯ್ಕೆಮಾಡಿ ''.
    1. ಎಡಿಟ್ ಮಾಡಿ  ಅಥವಾ ಅಳಿಸಿ ಅನ್ನು ಆಯ್ಕೆಮಾಡಿ.

ನಿಮ್ಮ ಸ್ಮಾರ್ಟ್ ಟಿವಿಯಲ್ಲಿ ಕಾಮೆಂಟ್‌ಗಳೊಂದಿಗೆ ಸಂವಹನ ನಡೆಸಿ

ನೀವು ಈಗ ನಿಮ್ಮ ಸ್ಮಾರ್ಟ್ ಟಿವಿ ಅಥವಾ ಗೇಮ್ ಕನ್ಸೋಲ್‌ನಲ್ಲಿ ಕಂಟೆಂಟ್ ಅನ್ನು ವೀಕ್ಷಿಸುತ್ತಿರುವಾಗ ಕಾಮೆಂಟ್‌ಗಳನ್ನು ವೀಕ್ಷಿಸಬಹುದು ಮತ್ತು ಸಂವಹನ ನಡೆಸಬಹುದು. ವೀಡಿಯೊದ ಕಾಮೆಂಟ್‌ಗಳನ್ನು ವೀಕ್ಷಿಸಲು, ವೀಡಿಯೊದ ವೀಕ್ಷಣಾ ಪುಟಕ್ಕೆ ಹೋಗಿ ಮತ್ತು ವೀಡಿಯೊದ ಶೀರ್ಷಿಕೆಯನ್ನು ಆಯ್ಕೆಮಾಡಿ. ಕುರಿತು ಎಂಬ ವಿಭಾಗವು ವೀಡಿಯೊದ ಕಾಮೆಂಟ್‌ಗಳ ಫ್ಯಾನೆಲ್‌ ಜೊತೆಗೆ ಗೋಚರಿಸುತ್ತದೆ. ವೀಡಿಯೊಗಾಗಿ ಕಾಮೆಂಟ್‌ಗಳ ಸಂಪೂರ್ಣ ಪಟ್ಟಿಯನ್ನು ವೀಕ್ಷಿಸಲು ಕಾಮೆಂಟ್‌ಗಳ ಟೈಲ್ ಅನ್ನು ಆಯ್ಕೆಮಾಡಿ, ಅವುಗಳೆಂದರೆ:

  • ರಚನೆಕಾರರು ಪಿನ್ ಮಾಡಿರುವ ಕಾಮೆಂಟ್‌ಗಳು
  • ಲೈಕ್ ಮಾಡಿದವರ ಸಂಖ್ಯೆ
  • ಪ್ರತ್ಯುತ್ತರ ನೀಡಿದವರ ಸಂಖ್ಯೆ 

ಕಾಮೆಂಟ್ ಅನ್ನು ಸಂಪೂರ್ಣವಾಗಿ ಓದಲು, ಪ್ರತ್ಯುತ್ತರಗಳನ್ನು ವೀಕ್ಷಿಸಲು, ಕಾಮೆಂಟ್ ಅನ್ನು ಲೈಕ್ ಮಾಡಲು ಅಥವಾ ಲೈಕ್ ಮಾಡದೇ ಇರಲು ಕಾಮೆಂಟ್ ಅನ್ನು ಆಯ್ಕೆಮಾಡಿ.

ಕಾಮೆಂಟ್‌ಗೆ ಪ್ರತ್ಯುತ್ತರಿಸಲು ಅಥವಾ ಪೋಸ್ಟ್ ಮಾಡಲು, ನಿಮ್ಮ ಸ್ಮಾರ್ಟ್ ಟಿವಿ ಅಥವಾ ಗೇಮ್ ಕನ್ಸೋಲ್ ಅನ್ನು ನಿಮ್ಮ ಫೋನ್‌ ಜೊತೆಗೆ ಸಿಂಕ್ ಮಾಡಿ ಮತ್ತು ನಿಮ್ಮ ಫೋನ್ ಬಳಸಿ ಕಾಮೆಂಟ್ ಮಾಡಿ. 

ಕಾಮೆಂಟ್ ಅಥವಾ ಪ್ರತ್ಯುತ್ತರವನ್ನು ಸೇರಿಸಲು:

  1. ನಿಮ್ಮ ಫೋನ್‌ನಲ್ಲಿ YouTube ಆ್ಯಪ್ ಅನ್ನು ತೆರೆಯಿರಿ.
  2. ನೀವು ಎರಡೂ ಸಾಧನಗಳಲ್ಲಿ ಒಂದೇ Google ಖಾತೆಗೆ ಸೈನ್ ಇನ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. 
  3. ನಿಮ್ಮ YouTube ಆ್ಯಪ್‌ನಲ್ಲಿ ಪಾಪ್-ಅಪ್ ತೆರೆಯುತ್ತದೆ, ನಿಮ್ಮ ಟಿವಿಯಲ್ಲಿ YouTube ಗೆ ಕನೆಕ್ಟ್ ಮಾಡಲು ನಿಮ್ಮನ್ನು ಕೇಳುತ್ತದೆ.
  4. ಕನೆಕ್ಟ್ ಮಾಡಿ ಅನ್ನು ಟ್ಯಾಪ್‌ ಮಾಡಿ
  5. ನಿಮ್ಮ ಟಿವಿಯಲ್ಲಿ ನೀವು ವೀಕ್ಷಿಸುತ್ತಿರುವ ವೀಡಿಯೊದ ಕಾಮೆಂಟ್‌ಗಳು YouTube ಆ್ಯಪ್‌ನಲ್ಲಿ ಲೋಡ್ ಆಗುತ್ತವೆ, ಇದು ನಿಮಗೆ ಅಡಚಣೆ ರಹಿತವಾಗಿ ಪೋಸ್ಟ್ ಮಾಡಲು ಮತ್ತು ಅವರೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ.
ಗಮನಿಸಿ: ನೀವು ಸೈನ್ ಔಟ್ ಆಗಿರುವಾಗ, ನೀವು ಕಾಮೆಂಟ್‌ಗಳನ್ನು ವೀಕ್ಷಿಸಬಹುದು, ಆದರೆ ಅವುಗಳಿಗೆ ಪ್ರತ್ಯುತ್ತರಿಸಲು ಅಥವಾ ನಿಮ್ಮ ಸ್ವಂತ ಕಾಮೆಂಟ್ ಅನ್ನು ಪೋಸ್ಟ್ ಮಾಡಲು ಸಾಧ್ಯವಿಲ್ಲ.

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16286827720834257352
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false