ಬ್ರ್ಯಾಂಡ್ ಖಾತೆಯ ಮೂಲಕ ಚಾನಲ್ ಮಾಲೀಕರು ಮತ್ತು ನಿರ್ವಾಹಕರನ್ನು ಬದಲಾಯಿಸಿ

 
ವಿಶ್ವಾಸಾರ್ಹ ಬಳಕೆದಾರರಿಗೆ ಮಾತ್ರ ಆ್ಯಕ್ಸೆಸ್ ಅನ್ನು ನೀಡುವುದು ಚಾನಲ್ ಮಾಲೀಕರ ಜವಾಬ್ದಾರಿಯಾಗಿದೆ. ಹಾಗೆ ಮಾಡುವುದರಿಂದ ಚಾನಲ್ ನಿರ್ವಹಣೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಚಾನಲ್ ಅನುಮತಿಗಳು ನಿರ್ದಿಷ್ಟ ಪಾತ್ರಗಳ ಮೂಲಕ ನಿಮ್ಮ ಚಾನಲ್‌ಗೆ ಇತರ ಬಳಕೆದಾರರಿಗೆ ಆ್ಯಕ್ಸೆಸ್ ಅನ್ನು ನೀಡುವ ಸಾಮರ್ಥ್ಯವನ್ನು ನಿಮಗೆ ಒದಗಿಸುತ್ತದೆ. ಗೊತ್ತುಪಡಿಸಿದ ಪಾತ್ರಗಳು ಸರಿಯಾದ ಆ್ಯಕ್ಸೆಸ್ ಮಟ್ಟವನ್ನು ಆಯ್ಕೆ ಮಾಡಲು ನಿಮಗೆ ಅನುಮತಿಸುತ್ತದೆ. ಪಾಸ್‌ವರ್ಡ್ ಹಂಚಿಕೆಯಂತಹ ಭದ್ರತಾ ಅಪಾಯಗಳನ್ನು ತಡೆಗಟ್ಟಲು ಮತ್ತು ಇತರ ಗೌಪ್ಯತೆಯ ಕಾಳಜಿಗಳನ್ನು ಕಡಿಮೆ ಮಾಡಲು ಚಾನಲ್ ಅನುಮತಿಗಳಿಗೆ ಸ್ಥಳಾಂತರಿಸಿ.

YouTube ಚಾನಲ್ ಅನ್ನು ಬ್ರ್ಯಾಂಡ್ ಖಾತೆಗೆ ಲಿಂಕ್ ಮಾಡಿದ್ದರೆ, ಹಲವು ಬಳಕೆದಾರರು ತಮ್ಮ Google ಖಾತೆಗಳನ್ನು ಬಳಸಿಕೊಂಡು ಚಾನಲ್ ಅನ್ನು ನಿರ್ವಹಿಸಬಹುದು. ಬ್ರ್ಯಾಂಡ್ ಖಾತೆಯನ್ನು ಹೊಂದಿರುವ YouTube ಚಾನಲ್‌ಗಳನ್ನು ನಿರ್ವಹಿಸಲು ನೀವು ಪ್ರತ್ಯೇಕ ಬಳಕೆದಾರರ ಹೆಸರು ಅಥವಾ ಪಾಸ್‌ವರ್ಡ್ ಅನ್ನು ಹೊಂದಿರಬೇಕಾದ ಅಗತ್ಯವಿಲ್ಲ. ಬ್ರ್ಯಾಂಡ್ ಖಾತೆಯನ್ನು YouTube ಚಾನಲ್‌ಗೆ ಲಿಂಕ್ ಮಾಡಬಹುದು ಆದರೆ ಇತರ Google ಸೇವೆಗಳಿಗೆ ಲಿಂಕ್ ಮಾಡಲು ಆಗುವುದಿಲ್ಲ.

ಮೊದಲಿಗೆ, ನಿಮ್ಮ ಚಾನಲ್ ಬ್ರ್ಯಾಂಡ್ ಖಾತೆಗೆ ಕನೆಕ್ಟ್ ಆಗಿದೆಯೇ ಎಂದು ಪರಿಶೀಲಿಸಿ. ಅದು ಇಲ್ಲದಿದ್ದರೆ, ನೀವು ಚಾನಲ್ ನಿರ್ವಾಹಕರನ್ನು ಬದಲಾಯಿಸಬಹುದು, ಆದರೆ ಮಾಲೀಕರನ್ನು ಬದಲಾಯಿಸುವಂತಿಲ್ಲ. ಚಾನಲ್ ಮಾಲೀಕತ್ವವನ್ನು ವರ್ಗಾಯಿಸಲು, ಅನುಮತಿಗಳ ಸೆಟಪ್‌ನಲ್ಲಿರುವ ಎಲ್ಲಾ ಪಾತ್ರಗಳನ್ನು ತೆಗೆದುಹಾಕುವ ಮೂಲಕ ಬ್ರ್ಯಾಂಡ್ ಖಾತೆಗೆ ಪರಿವರ್ತಿಸಿ.

ಬ್ರ್ಯಾಂಡ್ ಖಾತೆಗಳಿಗೆ ಪಾತ್ರಗಳನ್ನು ಸೇರಿಸುವುದಕ್ಕೆ ಸಂಬಂಧಿಸಿದಂತೆ ಟ್ರಬಲ್‌ಶೂಟಿಂಗ್

ನಿಮ್ಮ ಚಾನಲ್‌ಗೆ ಬಳಕೆದಾರರ ಆ್ಯಕ್ಸೆಸ್ ಅನ್ನು ನಿರ್ವಹಿಸಲು ನೀವು ಚಾನಲ್ ಅನುಮತಿಗಳನ್ನು ಬಳಸಬೇಕು.

ನೀವು ಬ್ರ್ಯಾಂಡ್ ಖಾತೆ ಪಾತ್ರಗಳನ್ನು ಬಳಸುವ (ಶಿಫಾರಸು ಮಾಡಲಾಗಿಲ್ಲ) ಅಗತ್ಯವಿದ್ದರೆ, ಮತ್ತು ಇತರ ಪಾತ್ರಗಳನ್ನು ಸೇರಿಸುವಾಗ ಸಮಸ್ಯೆಗಳು ಎದುರಾದರೆ, ನೀವು ಚಾನಲ್ ಅನುಮತಿಗಳಿಂದ ಹೊರಗುಳಿಯಬೇಕಾಗಬಹುದು ಮತ್ತು ನಂತರ ಅವುಗಳನ್ನು ಸಕ್ರಿಯಗೊಳಿಸಬೇಕಾಗಬಹುದು. ನಿಮ್ಮ ಬ್ರ್ಯಾಂಡ್ ಖಾತೆಗೆ ಪುನಃ ಹಿಂತಿರುಗಲು, ನೀವು ಪ್ರತಿಯೊಬ್ಬರನ್ನು ಮತ್ತೊಮ್ಮೆ ಬ್ರ್ಯಾಂಡ್ ಖಾತೆಗೆ ಆಹ್ವಾನಿಸಬೇಕು.

ಹೊರಗುಳಿಯುವುದಕ್ಕಾಗಿ, YouTube Studioಸೆಟ್ಟಿಂಗ್‌ಗಳು ನಂತರ ಅನುಮತಿಗಳು ಎಂಬುದರ ಅಡಿಯಲ್ಲಿ “YouTube Studio ದಲ್ಲಿ ಅನುಮತಿಗಳಿಂದ ಹೊರಗುಳಿಯಿರಿ” ಎಂಬುದನ್ನು ಆಯ್ಕೆ ಮಾಡಿ. ಚಾನಲ್ ಅನುಮತಿಗಳಿಂದ ಹೊರಗುಳಿಯುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ನಿಮ್ಮ ಬ್ರ್ಯಾಂಡ್ ಖಾತೆಯಲ್ಲಿ ಪಾತ್ರಗಳನ್ನು ವೀಕ್ಷಿಸಿ ಅಥವಾ ಸೇರಿಸಿ

ಅಗತ್ಯವಿದ್ದರೆ ಮಾತ್ರ ಬ್ರ್ಯಾಂಡ್ ಖಾತೆ ಪಾತ್ರಗಳನ್ನು ಬಳಸಿ. ಭದ್ರತಾ ಸಮಸ್ಯೆಗಳನ್ನು ತಪ್ಪಿಸಲು ಬಳಕೆದಾರರಿಗೆ ಸೂಕ್ತವಾದ ಆ್ಯಕ್ಸೆಸ್ ಹಂತವನ್ನು ನೀಡುವುದು ಮುಖ್ಯವಾಗಿದೆ. ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳುವಂತಹ ಅಸುರಕ್ಷಿತ ಅಭ್ಯಾಸಗಳನ್ನು ತಪ್ಪಿಸಿ.  

ತಮ್ಮ ಬ್ರ್ಯಾಂಡ್ ಖಾತೆಯ ಮಾಲೀಕತ್ವದ ವಿವರಗಳನ್ನು ತಿಳಿದುಕೊಳ್ಳುವುದು ಚಾನಲ್ ಮಾಲೀಕರ ಜವಾಬ್ದಾರಿಯಾಗಿದೆ. ಖಾತೆಯ ಭದ್ರತೆಯನ್ನು ಕಾಪಾಡಿಕೊಳ್ಳಲು ನೀವು ನಿಯಮಿತವಾಗಿ ಬ್ರ್ಯಾಂಡ್ ಖಾತೆಯ ಅನುಮತಿಗಳನ್ನು ಪರಿಶೀಲಿಸಬೇಕೆಂದು ಶಿಫಾರಸು ಮಾಡಲಾಗಿದೆ.

ನಿಮ್ಮ ಬ್ರ್ಯಾಂಡ್ ಖಾತೆಯನ್ನು ಯಾರು ನಿರ್ವಹಿಸುತ್ತಾರೆ ಎಂಬುದನ್ನು ಕಂಡುಹಿಡಿಯಲು:

  1. ನಿಮ್ಮ Google ಖಾತೆಯಲ್ಲಿನ ಬ್ರ್ಯಾಂಡ್ ಖಾತೆಗಳು ವಿಭಾಗಕ್ಕೆ ಹೋಗಿ.
  2. "ನಿಮ್ಮ ಬ್ರ್ಯಾಂಡ್ ಖಾತೆಗಳು" ಅಡಿಯಲ್ಲಿ, ನೀವು ವೀಕ್ಷಿಸಲು ಬಯಸುವ ಖಾತೆಯನ್ನು ಆಯ್ಕೆಮಾಡಿ.
  3. ಅನುಮತಿಗಳನ್ನು ನಿರ್ವಹಿಸಿ ಎಂಬುದನ್ನು ಆಯ್ಕೆ ಮಾಡಿ. ಮಾಲೀಕರು ಸೇರಿದಂತೆ ಖಾತೆಯನ್ನು ನಿರ್ವಹಿಸಬಹುದಾದ ಜನರ ಪಟ್ಟಿಯು ನಿಮಗೆ ಕಾಣಿಸುತ್ತದೆ.

ನಿಮ್ಮ ಬ್ರ್ಯಾಂಡ್ ಖಾತೆಗೆ ಹೊಸ ಜನರನ್ನು ಆಹ್ವಾನಿಸಲು:

  1. ಹೊಸ ಜನರನ್ನು ಆಹ್ವಾನಿಸಲು, ಹೊಸ ಬಳಕೆದಾರರನ್ನು ಆಹ್ವಾನಿಸಿ Invite new users ಎಂಬುದನ್ನು ಆರಿಸಿಕೊಳ್ಳಿ.
  2. ಅವರ ಇಮೇಲ್ ವಿಳಾಸಗಳನ್ನು ನಮೂದಿಸಿ.
  3. ಅವರ ಹೆಸರುಗಳ ಕೆಳಗೆ, ಅವರ ಪಾತ್ರವನ್ನು ಆಯ್ಕೆಮಾಡಿ:
    1. ಮಾಲೀಕರು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬಹುದು ಮತ್ತು ಖಾತೆಯನ್ನು ಯಾರು ನಿರ್ವಹಿಸಬೇಕು ಎಂಬುದನ್ನು ಅವರು ನಿಯಂತ್ರಿಸುತ್ತಾರೆ. ಖಾತೆಯು ಒಬ್ಬ ಪ್ರಾಥಮಿಕ ಮಾಲೀಕರನ್ನು ಹೊಂದಿರಬೇಕು.
    2. ನಿರ್ವಾಹಕರು ಬ್ರ್ಯಾಂಡ್ ಖಾತೆಗಳನ್ನು ಬೆಂಬಲಿಸುವ Google ಸೇವೆಗಳನ್ನು ಬಳಸಬಹುದು (ಉದಾಹರಣೆಗೆ, Google Photos ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದು ಅಥವಾ YouTube ನಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡುವುದು).
    3. ಸಂವಹನ ನಿರ್ವಾಹಕರು ನಿರ್ವಾಹಕರ ರೀತಿಯಲ್ಲಿಯೇ ಕೆಲಸಗಳನ್ನು ಮಾಡಬಹುದು, ಆದರೆ ಅವರು YouTube ಅನ್ನು ಬಳಸಲು ಆಗುವುದಿಲ್ಲ.
  4. ಆಹ್ವಾನಿಸಿ ನಂತರ ಪೂರ್ಣಗೊಂಡಿದೆ ಅನ್ನು ಟ್ಯಾಪ್ ಮಾಡಿ.

ನೀವು ಆಹ್ವಾನಿಸುವ ಯಾರಾದರೂ ಇಮೇಲ್ ಅನ್ನು ಸ್ವೀಕರಿಸುತ್ತಾರೆ, ಅದರಲ್ಲಿ ಅವರು ನಿಮ್ಮ ಆಹ್ವಾನವನ್ನು ಸ್ವೀಕರಿಸಬಹುದು.

ನಿಮ್ಮ ಬ್ರ್ಯಾಂಡ್ ಖಾತೆಯ ಪ್ರಾಥಮಿಕ ಮಾಲೀಕರಾಗಿ ನಿಮ್ಮನ್ನು ಸೆಟ್ ಮಾಡಿಕೊಳ್ಳಿ

ಬ್ರ್ಯಾಂಡ್ ಖಾತೆಯ ಮಾಲೀಕರಾಗಿ, ನಿಮ್ಮನ್ನು ನೀವೇ ಬ್ರ್ಯಾಂಡ್ ಖಾತೆಯ ಮೂಲ ಮಾಲೀಕರೆಂದು ನಿಯೋಜಿಸಿಕೊಳ್ಳಬಹುದು. ಹಾಗೆ ಮಾಡಲು, ನೀವು 7 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಮಾಲೀಕರಾಗಿರಬೇಕು. ಈ ಷರತ್ತನ್ನು ಪೂರೈಸದಿದ್ದರೆ, ನೀವು ದೋಷ ಸಂದೇಶವನ್ನು ಸ್ವೀಕರಿಸುತ್ತೀರಿ.

ಬ್ರ್ಯಾಂಡ್ ಖಾತೆಯಲ್ಲಿ ಒಬ್ಬ ಮೂಲ ಮಾಲೀಕರನ್ನು ಹೊಂದಿರುವುದರ ಜೊತೆಗೆ, ನಿಮ್ಮ ಬ್ರ್ಯಾಂಡ್ ಖಾತೆಗೆ ಸಂಬಂಧಿಸಿದಂತೆ ಕನಿಷ್ಠ ಒಬ್ಬ ಇತರ ಮಾಲೀಕರನ್ನು ನೀವು ಹೊಂದಿರಬೇಕೆಂದು ಶಿಫಾರಸು ಮಾಡಲಾಗಿದೆ.

ನಿಮಗೆ ಹೊಸ ಪ್ರಾಥಮಿಕ ಮಾಲೀಕರನ್ನು ನಿಯೋಜಿಸಲು ಸಾಧ್ಯವಾಗದಿದ್ದರೆ, ನೀವು ಚಾನಲ್ ಅನುಮತಿಗಳಿಂದ ಹೊರಗುಳಿದಿರುವಿರಾ ಎಂಬುದನ್ನು ಪರಿಶೀಲಿಸಿ. ಮೂಲ ಮಾಲೀಕರ ಪಾತ್ರವನ್ನು ಬದಲಾಯಿಸುವ ಆಯ್ಕೆಯನ್ನು ನಿರ್ವಾಹಕರು ಹೊಂದಿರುವುದಿಲ್ಲ.

  1. ನಿಮ್ಮ ಕಂಪ್ಯೂಟರ್‌ನಲ್ಲಿ, ನಿಮ್ಮ Google ಖಾತೆಯ ಬ್ರ್ಯಾಂಡ್ ಖಾತೆಗಳು ವಿಭಾಗಕ್ಕೆ ಹೋಗಿ.
  2. "ನಿಮ್ಮ ಬ್ರ್ಯಾಂಡ್ ಖಾತೆಗಳು" ಅಡಿಯಲ್ಲಿ, ನೀವು ನಿರ್ವಹಿಸಲು ಬಯಸುವ ಖಾತೆಯನ್ನು ಆಯ್ಕೆಮಾಡಿ.
  3. ಅನುಮತಿಗಳನ್ನು ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.
  4. ನಿಮ್ಮ ಹೆಸರನ್ನು ಪಟ್ಟಿ ಮಾಡಲಾಗಿದೆಯೇ ಎಂದು ಹುಡುಕಿ.
    • ಸಲಹೆ: ನಿಮ್ಮ ಹೆಸರನ್ನು ಹುಡುಕಲು ನಿಮಗೆ ಸಾಧ್ಯವಾಗದಿದ್ದರೆ, ಬೇರೊಂದು ಚಾನಲ್‌ನ ಮಾಲೀಕರು ನಿಮ್ಮನ್ನು ಮಾಲೀಕರಾಗಿ ಸೇರಿಸಬೇಕು. ಆಹ್ವಾನವನ್ನು ಸ್ವೀಕರಿಸಿದ ನಂತರ ಮತ್ತು 7 ದಿನ ಕಾಯುವ ಅವಧಿಯ ನಂತರ, ಹಂತ 1 ರಿಂದ ಪುನಃ ಪ್ರಯತ್ನಿಸಿ.
  5. ನಿಮ್ಮ ಹೆಸರಿನ ಮುಂದೆ, ಡೌನ್ ಆ್ಯರೋ ನಂತರ ಮೂಲ ಮಾಲೀಕರು ನಂತರ ವರ್ಗಾಯಿಸಿ ಅನ್ನು ಟ್ಯಾಪ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5451461116102193955
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false