ನಿಮ್ಮ ಕಂಟೆಂಟ್ ಮ್ಯಾನೇಜರ್‌ನಲ್ಲಿ ಹೊಸ ಚಾನಲ್ ರಚಿಸಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.
ನಿಮ್ಮ ಕಂಟೆಂಟ್ ಮ್ಯಾನೇಜರ್ ಖಾತೆಗೆ ಸ್ವಯಂಚಾಲಿತವಾಗಿ ಲಿಂಕ್ ಮಾಡಲಾದ ಹೊಸ ಚಾನಲ್‌ಗಳನ್ನು ರಚಿಸಲು ನೀವು ಸ್ಟುಡಿಯೋ ಕಂಟೆಂಟ್ ಮ್ಯಾನೇಜರ್ ಅನ್ನು ಬಳಸಬಹುದು. ನಿಮ್ಮ ಕಂಟೆಂಟ್ ಮ್ಯಾನೇಜರ್‌ನಲ್ಲಿ ನೀವು ಹೊಸ ಚಾನಲ್ ಅನ್ನು ರಚಿಸಿದ ನಂತರ, ನೀವು ಹೀಗೆ ಮಾಡಬಹುದು:
  • ಆ ಚಾನಲ್‍ನಲ್ಲಿರುವ ವೀಡಿಯೊಗಳಿಗಾಗಿ ಮಾನಿಟೈಸೇಶನ್ ಕಂಟ್ರೋಲ್ ಮಾಡಿ 
  • ಆ ಚಾನಲ್‌ನ ವೀಡಿಯೊಗಳಿಗಾಗಿ Content ID ಹೊಂದಾಣಿಕೆಯನ್ನು ಆನ್ ಮಾಡಿ
  • ಪ್ರತ್ಯೇಕ ಚಾನಲ್ ಮಾಲೀಕರಿಗೆ ಅನುಮತಿಗಳನ್ನು ಸೆಟ್ ಮಾಡಿ
ಗಮನಿಸಿ: MCN ಅಂಗಸಂಸ್ಥೆಗಳಿಗೆ ಹೊಸ ಚಾನಲ್‌ಗಳನ್ನು ರಚಿಸಲು ಅರ್ಹತೆ ಇರುವುದಿಲ್ಲ.

ಚಾನಲ್ ರಚಿಸಿ

ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಲಿಂಕ್ ಮಾಡಬೇಕಿರುವ ಹೊಸ ಚಾನಲ್ ಅನ್ನು ರಚಿಸಲು ಹೀಗೆ ಮಾಡಿ:

  1. YouTube Studio ಗೆ ಹೋಗಿ.
  2. ಎಡಭಾಗದಿಂದ ಸೆಟ್ಟಿಂಗ್‌ಗಳು ಎಂಬುದನ್ನು ಕ್ಲಿಕ್ ಮಾಡಿ.
  3. ಚಾನಲ್ ನಂತರ ಸುಧಾರಿತ ಸೆಟ್ಟಿಂಗ್‌ಗಳು ಎಂಬುದನ್ನು ಕ್ಲಿಕ್ ಮಾಡಿ.
  4. ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು YouTube ಖಾತೆಯನ್ನು ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. ನಿಮ್ಮ ಚಾನಲ್ ಅನ್ನು(ಗಳನ್ನು) ಸೇರಿಸಿ ಅಥವಾ ನಿರ್ವಹಿಸಿ ನಂತರ ಚಾನಲ್ ಒಂದನ್ನು ರಚಿಸಿ ಎಂಬುದನ್ನು ಕ್ಲಿಕ್ ಮಾಡಿ.
    • ಅಥವಾ ಹೊಸ ಚಾನಲ್ ರಚಿಸಿ ಎಂಬುದನ್ನು ಕ್ಲಿಕ್ ಮಾಡಿ.
  6. ನೀವು ನಿಮ್ಮ ಚಾನಲ್‌ನ ಹೆಸರನ್ನು ನಮೂದಿಸಬಹುದು ಮತ್ತು ನಿಮ್ಮ ಹೊಸ ಚಾನಲ್ ಅನ್ನು ರಚಿಸಬಹುದು.

ಅದನ್ನು ರಚಿಸಿದ ನಂತರ, ನಿಮ್ಮ ಚಾನಲ್‌ಗಳ ಪುಟದಲ್ಲಿ ನೀವು ಹೊಸ ಚಾನಲ್ ಅನ್ನು ನೋಡುತ್ತೀರಿ. ಹೊಸ ಚಾನಲ್ ನಿಮ್ಮ Google ಖಾತೆಯ ಮಾಲೀಕತ್ವದಲ್ಲಿರಲಿದೆ. ನೀವು ಮಾಲೀಕರು ಮತ್ತು ನಿರ್ವಾಹಕರನ್ನು ಸಹ ಸೇರಿಸಬಹುದು ಅಥವಾ ಚಾನಲ್ ಅನ್ನು ಮತ್ತೊಂದು ಖಾತೆಗೆ ಸರಿಸಬಹುದು.

ನಿಮ್ಮ ಹೊಸ ಚಾನಲ್ ಅನ್ನು ಮಾನಿಟೈಸ್ ಮಾಡಿ

ನಿಮ್ಮ ಹೊಸ ಚಾನಲ್ ಅನ್ನು ಮಾನಿಟೈಜ್ ಮಾಡಲು, ಅದು YouTube ನ ಪಾಲುದಾರ ಕಾರ್ಯಕ್ರಮದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು. ನಿಮ್ಮ ಚಾನಲ್ ವೀಕ್ಷಣೆಯ ಸಮಯ ಮತ್ತು ಸಬ್ಸ್‌ಕ್ರೈಬರ್ ಎಣಿಕೆ ಮಾನದಂಡಗಳನ್ನು ತಲುಪಿದರೆ, YouTube ಅದನ್ನು ಸ್ವಯಂಚಾಲಿತವಾಗಿ ಪರಿಶೀಲಿಸುತ್ತದೆ. ಮಿತಿಯನ್ನು ತಲುಪಿದ ನಂತರ, ಸಾಮಾನ್ಯವಾಗಿ ಒಂದು ತಿಂಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಪರಿಶೀಲನೆಯನ್ನು ಪೂರ್ಣಗೊಳಿಸಲಾಗುತ್ತದೆ.

ನಿಮ್ಮ ಚಾನಲ್ ಪರಿಶೀಲನೆ ಪೂರ್ಣಗೊಂಡ ನಂತರ, ನೀವು ಇಮೇಲ್ ಅನ್ನು ಸ್ವೀಕರಿಸುತ್ತೀರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17441066295465383404
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false