ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಬಳಕೆದಾರರನ್ನು ಆಹ್ವಾನಿಸಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.
ನಿಮ್ಮ ಸಂಸ್ಥೆಯು ಕಂಟೆಂಟ್ ಮ್ಯಾನೇಜರ್ ಅನ್ನು ರಚಿಸಿದಾಗ, ಒಬ್ಬ ಬಳಕೆದಾರರು ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಾರೆ. ನಿರ್ವಾಹಕರು ಕಂಟೆಂಟ್ ಅನ್ನು ನಿರ್ವಹಿಸಲು ಇತರ ಜನರನ್ನು ಆಹ್ವಾನಿಸಬಹುದು. 

ಯಾವ ಬಳಕೆದಾರರಿಗೆ ಯಾವ ಫೀಚರ್‌ಗಳು ಲಭ್ಯವಿವೆ ಮತ್ತು ಯಾವ ನಿರ್ಬಂಧಗಳನ್ನು ಅನ್ವಯಿಸಬೇಕು ಎಂಬುದನ್ನು ನಿರ್ದಿಷ್ಟಪಡಿಸುವ ವಿಭಿನ್ನ ಹುದ್ದೆಗಳನ್ನು ನಿರ್ವಾಹಕರು ರಚಿಸಬಹುದು. ಇನ್ನಷ್ಟು ತಿಳಿಯಿರಿ ಹುದ್ದೆಗಳನ್ನು ರಚಿಸುವ ಮತ್ತು ನಿಮ್ಮಕಂಟೆಂಟ್ ಮ್ಯಾನೇಜರ್ ಅನ್ನು ಸೆಟ್ ಮಾಡುವ ಕುರಿತಾಗಿ ಇನ್ನಷ್ಟು ತಿಳಿಯಿರಿ.

ಒಮ್ಮೆ ಆಹ್ವಾನ ಕಳುಹಿಸಿದರೆ, ಅದು 30 ದಿನಗಳ ನಂತರ ಮುಕ್ತಾಯಗೊಳ್ಳುತ್ತದೆ.

ಆಹ್ವಾನ ಕಳುಹಿಸಿ

ನೀವು ಆಹ್ವಾನವನ್ನು ಕಳುಹಿಸುವ ಮೊದಲು, ನೀವು ಆಹ್ವಾನಿಸಲು ಬಯಸುವ ಬಳಕೆದಾರರು Google ಖಾತೆಯನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ. Google ಖಾತೆಗಳನ್ನು ಹೊಂದಿರುವ ಇಮೇಲ್ ವಿಳಾಸಗಳನ್ನು ಮಾತ್ರ ಆಹ್ವಾನಿಸಬಹುದು.

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡ ಮೆನುವಿನಿಂದ ಸೆಟ್ಟಿಂಗ್‌ಗಳು ಅನ್ನು ಕ್ಲಿಕ್ ಮಾಡಿ.
  3. ಅನುಮತಿಗಳು ಅನ್ನು ಕ್ಲಿಕ್ ಮಾಡಿ. ಈ ಪುಟವು ಕಂಟೆಂಟ್ ಮ್ಯಾನೇಜರ್‌ನ ಆ್ಯಕ್ಸೆಸ್ ಅನ್ನು ಹೊಂದಿರುವ ಬಳಕೆದಾರರು ಮತ್ತು ಅವರಿಗೆ ನಿಯೋಜಿಸಲಾಗಿರುವ ಹುದ್ದೆಯ ಪಟ್ಟಿಯನ್ನು ತೋರಿಸುತ್ತದೆ.
  4. ಆಹ್ವಾನಿಸಿ ಅನ್ನು ಕ್ಲಿಕ್ ಮಾಡಿ.
  5. ಇಮೇಲ್ ಫೀಲ್ಡ್‌ನಲ್ಲಿ, ನೀವು ಆಹ್ವಾನಿಸಲು ಬಯಸುವ ಬಳಕೆದಾರರ ಇಮೇಲ್ ವಿಳಾಸವನ್ನು ನಮೂದಿಸಿ.
  6. ಆ್ಯಕ್ಸೆಸ್ ಫೀಲ್ಡ್‌‌ನಲ್ಲಿ, ನೀವು ಆಹ್ವಾನಿಸಿದ ಬಳಕೆದಾರರು ಪಡೆದುಕೊಳ್ಳಬೇಕಾದ ಹುದ್ದೆಯನ್ನು ಆಯ್ಕೆ ಮಾಡಿ. ಹುದ್ದೆಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
  7. ಮುಗಿದಿದೆ ಅನ್ನು ಕ್ಲಿಕ್ ಮಾಡಿ.
  8. ಅನುಮತಿಗಳು ಪುಟಗಳಿಗೆ ಮರಳಿ, ಆಹ್ವಾನವನ್ನು ಕಳುಹಿಸಲು ಸೇವ್ ಮಾಡಿ ಅನ್ನು ಕ್ಲಿಕ್ ಮಾಡಿ.
    • ನೆನಪಿನಲ್ಲಿಡಿ, ಆಹ್ವಾನಗಳು 30 ದಿನಗಳ ನಂತರ ಮುಕ್ತಾಯಗೊಳ್ಳುತ್ತವೆ.

ಆಹ್ವಾನವನ್ನು ಕಳುಹಿಸಲಾಗಿದೆ ಎಂದು ಖಾತ್ರಿಪಡಿಸಿಕೊಳ್ಳಿ.

ಒಂದು ಬಾರಿ ಆಹ್ವಾನ ಕಳುಹಿಸಿದ ನಂತರ,ಅನುಮತಿಗಳು ಪುಟದ ಕೆಳಭಾಗದಲ್ಲಿ ಒಂದು ದೃಢೀಕರಣ ಸಂದೇಶ ಗೋಚರಿಸುತ್ತದೆ. ನೀವು ಮತ್ತೊಮ್ಮೆ ಮರಳಿ ಕೂಡ ಹೋಗಬಹುದು ಮತ್ತು ನೀವುಅನುಮತಿಗಳು ಪುಟದಿಂದ ಆಹ್ವಾನ ಕಳುಹಿಸಿದ್ದೀರೇ ಇಲ್ಲವೇ ಎಂಬುದನ್ನು ದೃಢೀಕರಿಸಿಕೊಳ್ಳಬಹುದು:

  1. ಫಿಲ್ಟರ್ ಆಯ್ಕೆ ಮಾಡಿ ಅನ್ನು ಕ್ಲಿಕ್ ಮಾಡಿ.
  2. ಕೀವರ್ಡ್ ಅನ್ನು ಆಯ್ಕೆ ಮಾಡಿ.
  3. ಆಹ್ವಾನಿತ ಬಳಕೆದಾರರ ಇಮೇಲ್ ವಿಳಾಸವನ್ನು ನಮೂದಿಸಿ.
  4. ಅನ್ವಯಿಸಿ ಅನ್ನು ಕ್ಲಿಕ್ ಮಾಡಿ.
  5. ಆಹ್ವಾನಿಸಿದ ಐಕಾನ್ ಅನ್ನು ಪರಿಶೀಲಿಸಿ,ಅವರ ಇಮೇಲ್ ವಿಳಾಸದ ಪಕ್ಕಕ್ಕೆ ಕಾಣಿಸುತ್ತದೆ.
    • ಆಹ್ವಾನಿಸಿದ ಐಕಾನ್ ಇದ್ದರೆ, ನೀವು ಆಹ್ವಾನವನ್ನು ಯಶಸ್ವಿಯಾಗಿ ಕಳುಹಿಸಿದ್ದೀರಿ ಎಂದರ್ಥ. ಈಗ ವ್ಯಕ್ತಿಯು ತಮ್ಮ ಇಮೇಲ್‌ನಲ್ಲಿರುವ ಲಿಂಕ್ ಅನ್ನು ಬಳಸಿಕೊಂಡು ಆಹ್ವಾನವನ್ನು ಸ್ವೀಕರಿಸಬೇಕಾಗಿದೆ.
    • ಆಹ್ವಾನಿತ ಐಕಾನ್ ಇಲ್ಲದಿದ್ದರೆ, ವ್ಯಕ್ತಿಯು ಈಗಾಗಲೇ ಆಹ್ವಾನವನ್ನು ಸ್ವೀಕರಿಸಿದ್ದಾರೆ ಮತ್ತು ಈಗ ಕಂಟೆಂಟ್ ಅನ್ನು ನಿರ್ವಹಿಸಬಹುದು ಎಂದರ್ಥ.
    • ಅವರ ಇಮೇಲ್ ವಿಳಾಸವನ್ನು ಪಟ್ಟಿಯಲ್ಲಿಲ್ಲದಿದ್ದರೆ, ಆಹ್ವಾನವನ್ನು ಯಶಸ್ವಿಯಾಗಿ ಕಳುಹಿಸಲಾಗಿಲ್ಲ ಎಂದರ್ಥ. ನೀವು ಸರಿಯಾದ ಇಮೇಲ್ ವಿಳಾಸವನ್ನು ಹೊಂದಿದ್ದೀರಿ ಎಂದು ಖಚಿತಪಡಿಸಿ ಮತ್ತು ಆಹ್ವಾನವನ್ನು ಮರುಕಳುಹಿಸಿ.
ಗಮನಿಸಿ: ಕೆಲವು ಥರ್ಡ್ ಪಾರ್ಟಿ ಎಕ್ಸ್‌ಟೆನ್ಶನ್‌ಗಳು ಬಳಕೆದಾರರು ಅಥವಾ ಪಾತ್ರಗಳ ಪಟ್ಟಿಯನ್ನು ಅಸ್ಪಷ್ಟಗೊಳಿಸಬಹುದು. ನೀವು ಅನುಮತಿಗಳೊಂದಿಗೆ ಯಾವುದೇ ಸಮಸ್ಯೆಗಳನ್ನು ಹೊಂದಿದ್ದರೆ, ಥರ್ಡ್ ಪಾರ್ಟಿ ಎಕ್ಸ್‌ಟೆನ್ಶನ್‌ಗಳನ್ನು ಆಫ್ ಮಾಡಿ ಮತ್ತು ನಿಮ್ಮ ಬದಲಾವಣೆಗಳನ್ನು ಮತ್ತೆ ಮಾಡಲು ಪ್ರಯತ್ನಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15194145587799226773
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false