YouTube ಲಾಭರಹಿತ ಕಾರ್ಯಕ್ರಮದ ಅವಲೋಕನ

YouTube ಲಾಭರಹಿತ ಕಾರ್ಯಕ್ರಮವು ಲಾಭರಹಿತ ಸಂಸ್ಥೆಗಳಿಗೆ ಬೆಂಬಲಿಗರು, ಸ್ವಯಂಸೇವಕರು ಮತ್ತು ದಾನಿಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ.

ಅನೇಕ ಕಾರಣಗಳಿಗಾಗಿ, ವೀಡಿಯೊ ಹೊಸದಾಗಿದ್ದು ಸ್ಟೋರಿ ಹೇಳಲು ಅಗತ್ಯ ಫಾರ್ಮ್ಯಾಟ್ ಆಗಿದೆ. YouTube ನಲ್ಲಿ ಪ್ರತಿ ತಿಂಗಳು ಒಂದು ಬಿಲಿಯನ್ ವೀಕ್ಷಕರಿರುತ್ತಾರೆ, ಎಲ್ಲಾ ಗಾತ್ರಗಳ ಲಾಭರಹಿತ ಸಂಸ್ಥೆಗಳು ತಮ್ಮ ಸ್ಟೋರಿಗಳನ್ನು ಜಾಗತಿಕ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು YouTube ವೀಡಿಯೊಗಳನ್ನು ಬಳಸಬಹುದು. YouTube ಲಾಭರಹಿತ ಕಾರ್ಯಕ್ರಮದ ವೆಬ್‌ಸೈಟ್‌ನಲ್ಲಿ ನೀವು ಎಲ್ಲಾ ಮಾಹಿತಿ ಮೂಲಗಳನ್ನು ಕಂಡುಕೊಳ್ಳಬಹುದು.

ಕಾರ್ಯಕ್ರಮದ ಅಗತ್ಯತೆಗಳು

ನಿಮ್ಮ ಲಾಭರಹಿತ ಸಂಸ್ಥೆಯು YouTube ಲಾಭರಹಿತ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹವಾಗಿದೆಯೇ ಎಂಬುದನ್ನು ಪರಿಶೀಲಿಸಲು, Google ಲಾಭರಹಿತ ಸಂಸ್ಥೆಗಳ ಅರ್ಹತೆ ಮಾರ್ಗಸೂಚಿಗಳನ್ನು ಪರಿಶೀಲಿಸಿ.

ಕಾರ್ಯಕ್ರಮದ ಫೀಚರ್‌ಗಳು

YouTube ಲಾಭರಹಿತ ಕಾರ್ಯಕ್ರಮದ ಪಾಲುದಾರರಾಗಿ, ಪಾಲುದಾರರಿಗಾಗಿ ವಿನ್ಯಾಸಗೊಳಿಸಲಾದ ಈ ಫೀಚರ್‌ಗಳನ್ನು ನೀವು ಬಳಸಬಹುದು:

ನಿಮ್ಮ ವೀಡಿಯೊಗಳಿಂದ ನಿಮ್ಮ ಸೈಟ್‌ಗೆ ನೇರವಾಗಿ ಲಿಂಕ್ ಮಾಡಿ

ಎಲ್ಲಿಯಾದರೂ ಕಾರ್ಡ್ ಲಿಂಕ್ ಮಾಡಿ

ಎಲ್ಲಿಯಾದರೂ ಕಾರ್ಡ್ ಲಿಂಕ್ ಮಾಡಿ ಎಂಬುದರ ಮೂಲಕ ನಿಮ್ಮ ಬಾಹ್ಯ ಅಭಿಯಾನದ ಲ್ಯಾಂಡಿಂಗ್ ಪುಟಗಳಿಗೆ ನಿಮ್ಮ ವೀಕ್ಷಕರನ್ನು ನೀವು ನಿರ್ದೇಶಿಸಬಹುದು, ಇದು ಯಾವುದೇ ಬಾಹ್ಯ URL ಗೆ ಲಿಂಕ್ ಮಾಡಲು ನಿಮಗೆ ಅನುಮತಿಸುವ ವಿಶೇಷವಾದ ಕಾರ್ಡ್ ಪ್ರಕಾರ. ನಿಮ್ಮ ವೀಡಿಯೊಗಳಲ್ಲಿ ಎಲ್ಲಿಯಾದರೂ ಕಾರ್ಡ್‌ಗಳನ್ನು ಲಿಂಕ್ ಮಾಡಿ ಎಂಬುದನ್ನು ಸೆಟಪ್ ಮಾಡುವುದು ಹೇಗೆ ಎಂದು ತಿಳಿಯಿರಿ.

ನಿಮ್ಮ ಕಂಟೆಂಟ್ ಅನ್ನು ಆಪ್ಟಿಮೈಜ್ ಮಾಡಿ 

ನಿಮ್ಮ ಪ್ರೇಕ್ಷಕರನ್ನು ತಿಳಿದುಕೊಳ್ಳಲು ಮತ್ತು ನಿಮ್ಮ ಪ್ರಭಾವವನ್ನು ಹೆಚ್ಚಿಸಲು YouTube ಅನ್ನು ಬಳಸುವುದು ಹೇಗೆ ಎಂದು ತಿಳಿಯಿರಿ.

ಮೀಸಲಿರಿಸಿದ ತಾಂತ್ರಿಕ ಬೆಂಬಲ

YouTube ನಲ್ಲಿ ನಿಮ್ಮ ಲಾಭರಹಿತ ಚಾನಲ್ ಅನ್ನು ಸೆಟಪ್ ಮಾಡುವಾಗ ಎದುರಾಗುವ ಯಾವುದೇ ಸಮಸ್ಯೆಗಳ ಕುರಿತು YouTube ಲಾಭರಹಿತ ಕಾರ್ಯಕ್ರಮದ ಪಾಲುದಾರರನ್ನು ಬೆಂಬಲಿಸಲು ನಾವು ಇಲ್ಲಿದ್ದೇವೆ. ನಮ್ಮೊಂದಿಗೆ ಸಂಪರ್ಕದಲ್ಲಿರವುದು ಹೇಗೆ ಎಂದು ತಿಳಿಯಿರಿ. 

 
ಎಲ್ಲಾ YouTube ಲಾಭರಹಿತ ಕಾರ್ಯಕ್ರಮ ಕ್ರಿಯೇಟರ್‌ಗಳಿಗೆ ಲಭ್ಯವಿರುವ YouTube ಕ್ರಿಯೇಟರ್‌ಗಳಿಗೆ ಇರುವ ವಿವಿಧ ಚಾನಲ್ ಫೀಚರ್‌ಗಳನ್ನು ಪರಿಶೀಲಿಸಲು ಮರೆಯದಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9636273593934668153
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false