ಅರ್ಹ ಕವರ್ ವೀಡಿಯೊಗಳನ್ನು ಮಾನಿಟೈಸ್ ಮಾಡುವುದು

YouTube ಪಾಲುದಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಕ್ರಿಯೇಟರ್ಸ್, ಸಂಗೀತ ಪ್ರಕಾಶಕರ ಮಾಲೀಕರು ಆ ವೀಡಿಯೊಗಳನ್ನು ಕ್ಲೈಮ್ ಮಾಡಿದ ನಂತರ, YouTube ನಲ್ಲಿ ಅರ್ಹ ಕವರ್ ಸಾಂಗ್ ವೀಡಿಯೊಗಳಿಂದ ಆದಾಯವನ್ನು ಹಂಚಿಕೊಳ್ಳಬಹುದು. ಅನುಪಾತದ ಆಧಾರದ ಮೇಲೆ ಈ ವೀಡಿಯೊಗಳಿಗಾಗಿ ನಿಮಗೆ ಆದಾಯವನ್ನು ಪಾವತಿಸಲಾಗುತ್ತದೆ.

ನಿಮ್ಮ ಕವರ್ ಸಾಂಗ್ ವೀಡಿಯೊ ಮಾನಿಟೈಸೇಶನ್‌ಗೆ ಅರ್ಹವಾಗಿದೆಯೇ ಎಂಬುದನ್ನು ಹುಡುಕುವುದು ಹೇಗೆ

ನಿಮ್ಮ YouTube Studio ದಲ್ಲಿನ ಕಂಟೆಂಟ್ ಪುಟವು ನಿಮ್ಮ ವೀಡಿಯೊ ಈ ಕೆಳಗಿನವುಗಳನ್ನು ಹೊಂದಿವೆ ಎಂದು ತೋರಿಸಿದಾಗ ನಿಮ್ಮ ಕವರ್ ಸಾಂಗ್ ವೀಡಿಯೊ ಮಾನಿಟೈಸೇಶನ್‌ಗೆ ಅರ್ಹವಾಗಿರುತ್ತದೆ:

  • ನಿರ್ಬಂಧಗಳ ಕಾಲಮ್‌ನಲ್ಲಿ ಕೃತಿಸ್ವಾಮ್ಯ
  • ವೀಡಿಯೊದ ಮಾನಿಟೈಸೇಶನ್ ಸ್ಥಿತಿಯನ್ನು  ಆಫ್‌ಗೆ ಸೆಟ್ ಮಾಡಿದ್ದರೆ
  • ವೀಡಿಯೊ ಆ್ಯಡ್ ಆದಾಯವನ್ನು ಹಂಚಿಕೊಳ್ಳಲು ಅರ್ಹವಾಗಿದೆ ಎಂದು ಹೇಳುವ ಹೋವರ್ ಪಠ್ಯ
ಗಮನಿಸಿ: ನೀವು ಈ ಮಾಹಿತಿಯನ್ನು ವೀಡಿಯೊ ಕೃತಿಸ್ವಾಮ್ಯ ಮಾಹಿತಿಯ ಪುಟದಲ್ಲಿ ಮತ್ತು ನಿಮಗೆ ಕಳುಹಿಸಲಾದ ಕ್ಲೈಮ್ ನೋಟಿಫಿಕೇಶನ್ ಇಮೇಲ್‌ನಲ್ಲಿಯೂ ಸಹ ನೋಡಬೇಕು.

ಸಂಗೀತ ಪ್ರಕಾಶಕರು ಅಥವಾ ಪ್ರದರ್ಶಿಸಿದ ಸಂಗೀತದ ಸಂಯೋಜನೆಯಲ್ಲಿ ಕೃತಿಸ್ವಾಮ್ಯವನ್ನು ಹೊಂದಿರುವ ಪ್ರಕಾಶಕರು Content ID ಸಿಸ್ಟಂನ ಮೂಲಕ ಕ್ಲೈಮ್ ಮಾಡಿದ/ಮಾನಿಟೈಸ್ ಮಾಡಿದ ವೀಡಿಯೊಗಳಿಗಾಗಿ ಈ ಸಂದೇಶವು ಗೋಚರಿಸುತ್ತದೆ. ಹೊಸ ಅಪ್‌ಲೋಡ್‌ಗಳು ಮತ್ತು ಹಿಂದಿನ ಅಪ್‌ಲೋಡ್‌ಗಳೆರಡೂ ಅರ್ಹವಾಗಿರಬಹುದು ಎಂಬುದನ್ನು ಗಮನಿಸಿ.

ನಿಮ್ಮ ಕವರ್ ಸಾಂಗ್ ವೀಡಿಯೊಗಾಗಿ ಆದಾಯ ಹಂಚಿಕೆಯನ್ನು ಆನ್ ಮಾಡುವುದು ಹೇಗೆ

  1. ನೀವು ಈಗಾಗಲೇ ಹಾಗೆ ಮಾಡಿಲ್ಲದಿದ್ದರೆ, ನಿಮ್ಮ ಖಾತೆಗಾಗಿ ಮಾನಿಟೈಸೇಶನ್ ಅನ್ನು ಆನ್ ಮಾಡಿ. ನಿಮ್ಮ ಖಾತೆ ಸೆಟ್ಟಿಂಗ್‌ಗಳಲ್ಲಿ ಮಾನಿಟೈಸೇಶನ್ ಟ್ಯಾಬ್‌ಗೆ ಹೋಗಿ.
  2. ನಿಮ್ಮ ಕಂಟೆಂಟ್‌ಪುಟದಲ್ಲಿ ಅರ್ಹವಾದ ಕವರ್ ಸಾಂಗ್ ವೀಡಿಯೊವನ್ನು ಹುಡುಕಿ.
  3. ಮಾನಿಟೈಸೇಶನ್ ಸ್ಥಿತಿಯನ್ನು ಆನ್ ಎಂಬುದಕ್ಕೆ ಬದಲಿಸಿ.
  4. ನೀವು ವೀಡಿಯೊದ ಮಾನಿಟೈಸೇಶನ್ ವಿವರಗಳಿಗೆ ಹೋಗಬಹುದು ಮತ್ತು ಮಾನಿಟೈಸೇಶನ್ ಅನ್ನು ಆಫ್‌ನಿಂದ ಆನ್‌ಗೆ ಬದಲಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17456840370541622107
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false