YouTube ಆ್ಯಪ್ ಅನ್ನು ಡೌನ್‍ಲೋಡ್ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ YouTube ವೀಕ್ಷಿಸಲು, YouTube ಆ್ಯಪ್ ಮೂಲಕ ಡೌನ್‌ಲೋಡ್ ಮಾಡಿ. YouTube ಆ್ಯಪ್ ಮೊಬೈಲ್ ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಮಾಧ್ಯಮ ಸ್ಟ್ರೀಮಿಂಗ್ ಸಾಧನಗಳು ಸೇರಿದಂತೆ ಅನೇಕ ವಿಭಿನ್ನ ಸಾಧನಗಳಲ್ಲಿ ಲಭ್ಯವಿದೆ.  YouTube ಅನ್ನು ಎಲ್ಲಿ ವೀಕ್ಷಿಸಬೇಕು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ನಿಮ್ಮ ಟಿವಿಯಲ್ಲಿ YouTube ಗೆ ಸೈನ್ ಇನ್ ಮಾಡುವುದು ಹೇಗೆ

ನೀವು ಆ್ಯಪ್ ಸ್ಟೋರ್‌ನಲ್ಲಿ YouTube ಆ್ಯಪ್ ಅನ್ನು ಡೌನ್‌ಲೋಡ್ ಮಾಡಬಹುದು.

ಆ್ಯಪ್ ಸ್ಟೋರ್‌ನಿಂದ iOS ಆ್ಯಪ್ ಡೌನ್‌ಲೋಡ್‌ಗಳನ್ನು ನಿರ್ವಹಿಸುವ ಕುರಿತು ತಿಳಿಯಲು Apple ಬೆಂಬಲ ಕೇಂದ್ರಕ್ಕೆ ಭೇಟಿ ನೀಡಿ.

ಗಮನಿಸಿ: iOS ಆವೃತ್ತಿ 12 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಯನ್ನು ರನ್ ಮಾಡುತ್ತಿರುವ ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳಲ್ಲಿ ಮಾತ್ರ ಆ್ಯಪ್ ಕಾರ್ಯನಿರ್ವಹಿಸುತ್ತದೆ.

ಹೊಸ ಸ್ಮಾರ್ಟ್ ಟಿವಿಗಳು ಮತ್ತು ಮಾಧ್ಯಮ ಸಾಧನಗಳಲ್ಲಿ YouTube

YouTube ಆ್ಯಪ್‌ನ ಇತ್ತೀಚಿನ ಆವೃತ್ತಿಯು 2013 ಮತ್ತು ನಂತರದ ಸಾಧನದ ಮಾಡೆಲ್‌ಗಳು, ಮತ್ತು ಕೆಲವು 2012 ಸಾಧನದ ಮಾಡೆಲ್‌ಗಳಲ್ಲಿ ಲಭ್ಯವಿದೆ.

Android TV ಯಲ್ಲಿ YouTube

ನೀವು Android TV ಅನ್ನು ರನ್ ಮಾಡುತ್ತಿರುವ ಸಾಧನವನ್ನು ಹೊಂದಿದ್ದರೆ, YouTube ಆ್ಯಪ್ ಡೀಫಾಲ್ಟ್ ಆಗಿ ನಿಮ್ಮ ಆ್ಯಪ್‌ಗಳ ಪಟ್ಟಿಯಲ್ಲಿ ಲಭ್ಯವಿರುತ್ತದೆ.

Android TV ಗಾಗಿ YouTube ಆ್ಯಪ್ ಆವೃತ್ತಿ 1.0 ಇನ್ನು ಮುಂದೆ ಬೆಂಬಲಿತವಾಗಿಲ್ಲ.

Apple TV ಯಲ್ಲಿ YouTube

ನೀವು 4ನೇ ಜನರೇಷನ್ Apple TV ಅಥವಾ ಹೊಸದನ್ನು ಹೊಂದಿದ್ದರೆ, ಆ್ಯಪ್ ಸ್ಟೋರ್‌ನಿಂದ ಇನ್‌ಸ್ಟಾಲ್ ಮಾಡಲು YouTube ಆ್ಯಪ್ ಲಭ್ಯವಿರುತ್ತದೆ.

ಟಿಪ್ಪಣಿ: ಮೂರನೇ ಜನರೇಷನ್ ಮತ್ತು ಹಳೆಯ Apple TV ಗಳು ಇನ್ನು ಮುಂದೆ ಬೆಂಬಲಿತ YouTube ಆ್ಯಪ್ ಅನ್ನು ಹೊಂದಿಲ್ಲ. ನೀವು ಈ ಸಾಧನಗಳಲ್ಲಿ ಒಂದನ್ನು ಬಳಸುತ್ತಿದ್ದರೆ, YouTube ಅನ್ನು ಸ್ಟ್ರೀಮ್ ಮಾಡಲು ನೀವು ಸಾಧನದಲ್ಲಿ Airplay ಅನ್ನು ಬಳಸಬಹುದು.

ಗೇಮ್ ಕನ್ಸೋಲ್‌ಗಳಲ್ಲಿ YouTube

Nintendo, PlayStation, Xbox ನಂತಹ ಹಲವು ಗೇಮ್ ಕನ್ಸೋಲ್ ಸ್ಟೋರ್‌ಗಳಿಂದ ನೀವು YouTube ಅನ್ನು ಡೌನ್‌ಲೋಡ್ ಮಾಡಬಹುದು.

  1. ನಿಮ್ಮ ಗೇಮ್ ಕನ್ಸೋಲ್ ಸ್ಟೋರ್‌ಗೆ ಹೋಗಿ ಮತ್ತು YouTube ಗಾಗಿ ಹುಡುಕಿ.
  2. ಡೌನ್‌ಲೋಡ್‌ ಮಾಡಿ ಅನ್ನು ಆಯ್ಕೆಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
iPhone ಮತ್ತು iPad Android
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15086979650546151201
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false