YouTube ಚಾನಲ್ ಲೇಔಟ್ ಕಸ್ಟಮೈಸ್ ಮಾಡಿ

ನಿಮ್ಮ YouTube ಚಾನಲ್‌ನ ಲೇಔಟ್ ಅನ್ನು ನೀವು ಕಸ್ಟಮೈಸ್ ಮಾಡಬಹುದು, ಇದರಿಂದ ವೀಕ್ಷಕರು ನಿಮ್ಮ ಚಾನಲ್ ಹೋಮ್ ಟ್ಯಾಬ್‌ಗೆ ಬಂದಾಗ, “ನಿಮಗಾಗಿ” ಮತ್ತು “ಟಾಪ್ ಸಮುದಾಯ ಕ್ಲಿಪ್‌ಗಳು” ವಿಭಾಗಗಳು ಸೇರಿದಂತೆ, ನಿಮ್ಮ ಚಾನಲ್ ಟ್ರೇಲರ್, ವೈಶಿಷ್ಟ್ಯಪೂರ್ಣ ವೀಡಿಯೊ, ಫೀಚರ್ ಮಾಡಿದ ವಿಭಾಗಗಳನ್ನು ಅವರು ವೀಕ್ಷಿಸಬಹುದು.

ಸಬ್‌ಸ್ಕ್ರೈಬ್ ಆಗಿರದ ಜನರಿಗಾಗಿ ಚಾನಲ್ ಟ್ರೇಲರ್ ಅನ್ನು ರಚಿಸಿ

ನಿಮ್ಮ ಚಾನಲ್ ಕುರಿತಾದ ಪೂರ್ವ ವೀಕ್ಷಣೆಯನ್ನು ನಿಮ್ಮ ಚಾನಲ್ ಟ್ರೈಲರ್ ನೀಡುತ್ತದೆ, ಇದರಿಂದ ವೀಕ್ಷಕರು ಇನ್ನಷ್ಟು ತಿಳಿಯಬಹುದು ಮತ್ತು ಸಬ್ಸ್‌ಕ್ರೈಬ್ ಮಾಡಬಹುದು. ನಿಮ್ಮ ವೀಡಿಯೊ ಥರ್ಡ್ ಪಾರ್ಟಿ ಕ್ಲೈಮ್ ಮಾಡಿದ ಕಂಟೆಂಟ್ ಅನ್ನು ಹೊಂದಿರದ ಹೊರತು, ಡೀಫಾಲ್ಟ್ ಆಗಿ ನಿಮ್ಮ ಚಾನಲ್ ಟ್ರೇಲರ್‌ನಲ್ಲಿ ಆ್ಯಡ್‌ಗಳು ಗೋಚರಿಸುವುದಿಲ್ಲ.
  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಸ್ಟಮೈಸೇಷನ್ ನಂತರ ಲೇಔಟ್ ಆಯ್ಕೆಮಾಡಿ.
  3. ವೀಡಿಯೊ ಸ್ಪಾಟ್‍ಲೈಟ್ ಅಡಿಯಲ್ಲಿ, ಸೇರಿಸಿ ಕ್ಲಿಕ್ ಮಾಡಿ ಮತ್ತು ನಿಮ್ಮ ಚಾನಲ್ ಟ್ರೈಲರ್‌ಗೆ ವೀಡಿಯೊವನ್ನು ಆಯ್ಕೆಮಾಡಿ.
  4. ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.

ಮರಳಿ ಭೇಟಿ ನೀಡುತ್ತಿರುವ ಸಬ್‌ಸ್ಕ್ರೈಬರ್‌ಗಳಿಗಾಗಿ ಸಾದರಪಡಿಸಲಾದ ವೀಡಿಯೊ

ಮರಳಿ ಭೇಟಿ ನೀಡುವ ಸಬ್‌ಸ್ಕ್ರೈಬರ್‌ಗಳು ನಿಮ್ಮ ಚಾನಲ್ ಹೋಮ್ ಟ್ಯಾಬ್‌ಗೆ ಹೋದಾಗ ಅವರು ವೀಕ್ಷಿಸುವುದಕ್ಕಾಗಿ YouTube ನಲ್ಲಿ ನಿಮ್ಮ ವೀಡಿಯೊ ಅಥವಾ ಯಾವುದೇ ವೀಡಿಯೊವನ್ನು ನೀವು ಹೈಲೈಟ್ ಮಾಡಬಹುದು.
  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಸ್ಟಮೈಸೇಷನ್ ನಂತರ ಲೇಔಟ್ ಆಯ್ಕೆಮಾಡಿ.
  3. ವೀಡಿಯೊ ಸ್ಪಾಟ್‍ಲೈಟ್ ಅಡಿಯಲ್ಲಿ, ಸೇರಿಸಿ ಕ್ಲಿಕ್ ಮಾಡಿ ಮತ್ತು ಫೀಚರ್ ಮಾಡಲು ವೀಡಿಯೊವೊಂದನ್ನು ಆಯ್ಕೆಮಾಡಿ.
  4. ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.

ಫೀಚರ್ ಮಾಡಿದ ವಿಭಾಗಗಳು

ಗರಿಷ್ಠ 12 ಕಸ್ಟಮ್ ವಿಭಾಗಗಳೊಂದಿಗೆ ನಿಮ್ಮ ಚಾನಲ್ ಹೋಮ್ ಟ್ಯಾಬ್‌ನ ಲೇಔಟ್ ಅನ್ನು ನೀವು ಕಸ್ಟಮೈಸ್ ಮಾಡಬಹುದು. ನಿಮ್ಮ ಲೇಔಟ್ 4 ಸ್ವಯಂಚಾಲಿತವಾಗಿ ಭರ್ತಿಮಾಡಿರುವ ವಿಭಾಗಗಳನ್ನು ಪ್ರದರ್ಶಿಸಲು ಡೀಫಾಲ್ಟ್ ಆಗಿರುತ್ತದೆ: Short ವೀಡಿಯೊಗಳು, ಅಪ್‌ಲೋಡ್‌ಗಳು, ರಚಿಸಿದ ಪ್ಲೇಪಟ್ಟಿಗಳು ಮತ್ತು ನೀವು ಸಾರ್ವಜನಿಕಗೊಳಿಸಿರುವ ಸಬ್‌ಸ್ಕ್ರಿಪ್ಶನ್‌ಗಳು.

ವಿಭಾಗವನ್ನು ರಚಿಸಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಸ್ಟಮೈಸೇಷನ್ ನಂತರ ಲೇಔಟ್ ಆಯ್ಕೆಮಾಡಿ.
  3. ಕೆಳಭಾಗದಲ್ಲಿ, ಸೇರಿಸಿ ವಿಭಾಗ ಅನ್ನು ಕ್ಲಿಕ್ ಮಾಡಿ.
  4. ನಿಮ್ಮ ಕಂಟೆಂಟ್ ಆಯ್ಕೆಮಾಡಲು ಸ್ಕ್ರಾಲ್ ಮಾಡಿ.
    1. ವೀಡಿಯೊಗಳು: ನಿಮ್ಮ ವೀಡಿಯೊಗಳು, Shorts ಮತ್ತು ಲೈವ್ ಸ್ಟ್ರೀಮ್‍ಗಳನ್ನು ಹೈಲೈಟ್ ಮಾಡಲು ಆಯ್ಕೆಮಾಡಿ.
    2. ಪ್ಲೇಪಟ್ಟಿಗಳು: ಸಿಂಗಲ್, ರಚನೆ ಮಾಡಿದ ಮತ್ತು ಬಹು ಪ್ಲೇಪಟ್ಟಿಗಳನ್ನು ಹೈಲೈಟ್ ಮಾಡಲು ಆಯ್ಕೆಮಾಡಿ.
    3. ಸದಸ್ಯತ್ವಗಳು: ಸದಸ್ಯತ್ವಗಳನ್ನು ಆನ್ ಮಾಡಿರುವ ಚಾನಲ್‍ಗಳು, ಸದಸ್ಯರಿಗೆ ಮಾತ್ರ ವೀಡಿಯೊಗಳು ಮತ್ತು ಹೆಚ್ಚಿನವುಗಳನ್ನು ಹೈಲೈಟ್ ಮಾಡಲು ಆಯ್ಕೆ ಮಾಡಬಹುದು.
    4. ಚಾನಲ್‍ಗಳು: ಸಬ್ಸ್‌ಕ್ರಿಪ್ಶನ್‌ಗಳು ಮತ್ತು ವೈಶಿಷ್ಟ್ಯಪೂರ್ಣ ಚಾನಲ್‍ಗಳನ್ನು ಹೈಲೈಟ್ ಮಾಡಲು ಆಯ್ಕೆ ಮಾಡಬಹುದು.
    5. 'ನಿಮಗಾಗಿ' ವಿಭಾಗ: ನಿಮ್ಮ ವೀಕ್ಷಕರಿಗೆ ತಮ್ಮ ಆಸಕ್ತಿಗಳ ಆಧಾರದ ಮೇಲೆ ಕಂಟೆಂಟ್ ಅನ್ನು ಶಿಫಾರಸು ಮಾಡಲು ಆಯ್ಕೆಮಾಡಿ.
    6. 'ಟಾಪ್ ಸಮುದಾಯ ಕ್ಲಿಪ್‍ಗಳು' ವಿಭಾಗ: ನಿಮ್ಮ ಚಾನಲ್ ಹೋಮ್ ಟ್ಯಾಬ್‌ನಲ್ಲಿ ನಿಮ್ಮ ವೀಡಿಯೊಗಳ ಟಾಪ್ ಕ್ಲಿಪ್‌ಗಳನ್ನು ಪ್ರದರ್ಶಿಸಲು ಆಯ್ಕೆಮಾಡಿ.
  5. ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.

ವಿಭಾಗವನ್ನು ಎಡಿಟ್ ಮಾಡಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಸ್ಟಮೈಸೇಷನ್ ನಂತರ ಲೇಔಟ್ ಆಯ್ಕೆಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವಿಭಾಗದ ಮೇಲೆ ಹೋವರ್ ಮಾಡಿ ಮತ್ತು ಆಯ್ಕೆಗಳನ್ನು ಕ್ಲಿಕ್ ಮಾಡಿ '' ನಂತರ ಕಂಟೆಂಟ್‍ಗಳ ವಿಭಾಗವನ್ನು ಎಡಿಟ್ ಮಾಡಿ .
  4. ಎಡಿಟ್ ಸ್ಕ್ರೀನ್‍ನಲ್ಲಿ, ವಿಭಾಗದ ಕಂಟೆಂಟ್ ಅನ್ನು ಬದಲಾಯಿಸಿ.
  5. ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.

ನಿಮ್ಮ ಚಾನಲ್‍ನಲ್ಲಿ ವಿಭಾಗಗಳನ್ನು ಮರುಕ್ರಮಗೊಳಿಸಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಸ್ಟಮೈಸೇಷನ್ ನಂತರ ಲೇಔಟ್ ಆಯ್ಕೆಮಾಡಿ.
  3. ನೀವು ಸರಿಸಲು ಬಯಸುವ ವಿಭಾಗದ ಮೇಲಿನ ವರ್ಟಿಕಲ್ ಪಟ್ಟಿಯನ್ನು ಕ್ಲಿಕ್ ಮಾಡಿ, ನಂತರ ಮರುಕ್ರಮಗೊಳಿಸಲು ಎಳೆದು ಬಿಡಿ.
  4. ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.

"ನಿಮಗಾಗಿ" ವಿಭಾಗ

ನಿಮ್ಮ ವೀಕ್ಷಕರು ನಿಮ್ಮ ಚಾನಲ್ ಹೋಮ್ ಟ್ಯಾಬ್‌ಗೆ ಭೇಟಿ ನೀಡಿದಾಗ, “ನಿಮಗಾಗಿ” ವಿಭಾಗವು ಅವರಿಗೆ ಸೂಕ್ತವಾದ ಅನುಭವವನ್ನು ನೀಡುತ್ತದೆ. ಈ ವಿಭಾಗವು ವೈಯಕ್ತಿಕ ವೀಕ್ಷಕರು ಏನನ್ನು ವೀಕ್ಷಿಸಿದ್ದಾರೆ ಎಂಬುದರ ಆಧಾರದ ಮೇಲೆ ವೈಯಕ್ತೀಕರಿಸಿದ ಕಂಟೆಂಟ್‌ನ ಮಿಕ್ಸ್ ಅನ್ನು ತೋರಿಸುತ್ತದೆ. ಯಾವ ರೀತಿಯ ಕಂಟೆಂಟ್ ಅನ್ನು ತೋರಿಸಬೇಕೆಂದು ನೀವು ಆಯ್ಕೆಮಾಡಬಹುದು ಮತ್ತು ಕಳೆದ 12 ತಿಂಗಳುಗಳಲ್ಲಿ ಪೋಸ್ಟ್ ಮಾಡಿದ ಕಂಟೆಂಟ್ ಅನ್ನು ಮಾತ್ರ ತೋರಿಸಲು ಆಯ್ಕೆಮಾಡಬಹುದು.

“ನಿಮಗಾಗಿ” ವಿಭಾಗವನ್ನು ನಿರ್ವಹಿಸಿ

YouTube Studio

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಕಸ್ಟಮೈಸೇಶನ್ ನಂತರ ಲೇಔಟ್ ಎಂಬುದನ್ನು ಆಯ್ಕೆಮಾಡಿ.
    • ವಿಭಾಗವನ್ನು ಸೇರಿಸಲು, ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು "ಫೀಚರ್ ಮಾಡಿದ ವಿಭಾಗಗಳು" ಪಕ್ಕದಲ್ಲಿರುವ ವಿಭಾಗವನ್ನು ಸೇರಿಸಿ ಅನ್ನು ಕ್ಲಿಕ್ ಮಾಡಿ ನಂತರ ನಂತರ ನಿಮಗಾಗಿ ಎಂಬುದನ್ನು ಆಯ್ಕೆಮಾಡಿ.
    • ವಿಭಾಗವನ್ನು ತೆಗೆದುಹಾಕಲು, "ನಿಮಗಾಗಿ" ಶೆಲ್ಫ್‌ನಿಂದ 3 ಡಾಟ್ ಮೆನುವನ್ನು '' ಕ್ಲಿಕ್ ಮಾಡಿ ಮತ್ತುವಿಭಾಗ ತೆಗೆದುಹಾಕಿ ಎಂಬುದನ್ನು ಆಯ್ಕೆಮಾಡಿ.

YouTube Studio ಆ್ಯಪ್

  1. YouTube Studio ಆ್ಯಪ್  ತೆರೆಯಿರಿ.
  2. ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ  ನಂತರ ಚಾನಲ್ ಎಡಿಟ್ ಮಾಡಿ .
  3. "ನಿಮಗಾಗಿ" ವಿಭಾಗವನ್ನು ಆನ್ ಅಥವಾ ಆಫ್‍ಗೆ ಬದಲಾಯಿಸಿ.

"ನಿಮಗಾಗಿ" ವಿಭಾಗವನ್ನು ಎಡಿಟ್ ಮಾಡಿ

YouTube Studio

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಕಸ್ಟಮೈಸೇಶನ್  ನಂತರ ಲೇಔಟ್ ಎಂಬುದನ್ನು ಆಯ್ಕೆಮಾಡಿ.
  3. “ನಿಮ್ಮ ವೀಕ್ಷಕರಿಗಾಗಿ ಶಿಫಾರಸುಗಳು” ಎಂಬುದಕ್ಕೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಇನ್ನಷ್ಟು ಸೆಟ್ಟಿಂಗ್‌ಗಳು ಎಂಬುದನ್ನು ಕ್ಲಿಕ್ ಮಾಡಿ.
  4. ಯಾವ ಪ್ರಕಾರದ ಕಂಟೆಂಟ್ ಅನ್ನು ತೋರಿಸಬೇಕು ಮತ್ತು ಕಳೆದ 12 ತಿಂಗಳ ಪೋಸ್ಟ್‌ಗಳಿಂದ ಮಾತ್ರ ತೋರಿಸಬೇಕೆ ಎಂಬುದನ್ನು ಆರಿಸಿ.
  5. ಸರಿ ಎಂಬುದನ್ನು ಕ್ಲಿಕ್ ಮಾಡಿ.
  6. ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.

YouTube Studio ಆ್ಯಪ್

  1. YouTube Studio ಆ್ಯಪ್  ತೆರೆಯಿರಿ.
  2. ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ  ನಂತರ ಚಾನಲ್ ಎಡಿಟ್ ಮಾಡಿ .
  3. "ನಿಮಗಾಗಿ" ಅಡಿಯಲ್ಲಿ, ಇನ್ನಷ್ಟು ಸೆಟ್ಟಿಂಗ್‌ಗಳು ಅನ್ನು ಟ್ಯಾಪ್ ಮಾಡಿ.
  4. ನೀವು ತೋರಿಸಲು ಬಯಸುವ ಕಂಟೆಂಟ್ ಪ್ರಕಾರಗಳನ್ನು ಆಯ್ಕೆಮಾಡಿ. ನಿಮ್ಮ ಎಲ್ಲಾ ಕಂಟೆಂಟ್ ಅನ್ನು ತೋರಿಸಲು ಅಥವಾ ಕಳೆದ 12 ತಿಂಗಳುಗಳ ಒಳಗೆ ಪೋಸ್ಟ್ ಮಾಡಿದ ಕಂಟೆಂಟ್ ಅನ್ನು ತೋರಿಸಲು ನೀವು ಆರಿಸಬಹುದು.
  5. ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

"ಟಾಪ್ ಸಮುದಾಯ ಕ್ಲಿಪ್‌ಗಳು" ವಿಭಾಗ

ನಿಮ್ಮ ಚಾನಲ್ ಹೋಮ್ ಟ್ಯಾಬ್‌ನಲ್ಲಿ ನಿಮ್ಮ ವೀಡಿಯೊಗಳ ಟಾಪ್ ಕ್ಲಿಪ್‌ಗಳನ್ನು ನೀವು ಪ್ರದರ್ಶಿಸಬಹುದು. ಈ ಕ್ಲಿಪ್‌ಗಳನ್ನು ನೀವು ಅಥವಾ ನಿಮ್ಮ ವೀಕ್ಷಕರು ಮಾಡಿರಬಹುದು. ಒಮ್ಮೆ ನಿಮ್ಮ ಹೋಮ್ ಟ್ಯಾಬ್‌ಗೆ ಸೇರಿಸಿದರೆ, ಜನಪ್ರಿಯತೆ ಮತ್ತು ಅದನ್ನು ಇತ್ತೀಚೆಗೆ ಯಾವಾಗ ಅಪ್‌ಲೋಡ್ ಮಾಡಲಾಗಿದೆ ಎಂಬುದರ ಆಧಾರದ ಮೇಲೆ ಕ್ಲಿಪ್‌ಗಳು ಸಾರ್ವಜನಿಕವಾಗಿ ಗೋಚರಿಸುತ್ತವೆ ಮತ್ತು ಅವುಗಳನ್ನು ವ್ಯವಸ್ಥಿತಗೊಳಿಸಲಾಗುತ್ತದೆ. "ಟಾಪ್ ಸಮುದಾಯ ಕ್ಲಿಪ್‌ಗಳು" ವಿಭಾಗವನ್ನು ಹೇಗೆ ನಿರ್ವಹಿಸುವುದು ಎಂದು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
18140462051968349397
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false