ನೀವು ವೀಕ್ಷಿಸುವ ವೀಡಿಯೊಗಳಲ್ಲಿ ಆ್ಯಡ್‌ಗಳು

YouTube ವೀಡಿಯೊಗಳಲ್ಲಿ ಪ್ಲೇ ಆಗುವ ಆ್ಯಡ್‌ಗಳು ಅಥವಾ ನೀವು ವೀಕ್ಷಿಸುವ Shorts ನಿಮ್ಮ ಆಸಕ್ತಿಗಳಿಗೆ ಅನುಗುಣವಾಗಿರುತ್ತವೆ. ಅವುಗಳು ನಿಮ್ಮ Google Ad ಸೆಟ್ಟಿಂಗ್‌ಗಳು, ನೀವು ವೀಕ್ಷಿಸಿದ ಕಂಟೆಂಟ್ ಮತ್ತು ನೀವು ಸೈನ್ ಇನ್ ಮಾಡಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಆಧರಿಸಿವೆ.

How to personalize the ads you see on YouTube and Google

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

ನೀವು ಸೈನ್ ಇನ್ ಮಾಡಿರುವಾಗ, ಈ ಅನಾಮಧೇಯ ಸಿಗ್ನಲ್‌ಗಳು ನೀವು ಯಾವ ಆ್ಯಡ್‌ಗಳನ್ನು ನೋಡುತ್ತೀರಿ ಎಂಬುದನ್ನು ನಿರ್ಧರಿಸಬಹುದು:

  • ನೀವು ವೀಕ್ಷಿಸಿದ ವೀಡಿಯೊಗಳ ಪ್ರಕಾರಗಳು
  • ನಿಮ್ಮ ಸಾಧನದಲ್ಲಿನ ಆ್ಯಪ್‌ಗಳು ಮತ್ತು ನಿಮ್ಮ ಆ್ಯಪ್‌ಗಳ ಬಳಕೆ
  • ನೀವು ಭೇಟಿ ನೀಡುವ ವೆಬ್‌ಸೈಟ್‌ಗಳು
  • ನಿಮ್ಮ ಮೊಬೈಲ್ ಸಾಧನದ ಜೊತೆಗೆ ಸಂಯೋಜಿತವಾಗಿರುವ ಅನಾಮಧೇಯ ಗುರುತಿಸುವಿಕೆಗಳು
  • Google ನ ಆ್ಯಡ್‌ಗಳು ಅಥವಾ ಜಾಹೀರಾತು ಸೇವೆಗಳ ಜೊತೆಗಿನ ಹಿಂದಿನ ಸಂವಹನಗಳು
  • ನಿಮ್ಮ ಭೌಗೋಳಿಕ ಸ್ಥಳ
  • ವಯಸ್ಸಿನ ವ್ಯಾಪ್ತಿ
  • ಲಿಂಗ
  • YouTube ವೀಡಿಯೊ ಸಂವಹನಗಳು

ಈ ಆ್ಯಡ್‌ಗಳು ನೀವು ಸೈನ್ ಇನ್ ಮಾಡಿದ್ದರೂ ಅಥವಾ ಇಲ್ಲದಿದ್ದರೂ ನೀವು ವೀಕ್ಷಿಸಿದ ವೀಡಿಯೊಗಳ ಕಂಟೆಂಟ್ ಅನ್ನು ಆಧರಿಸಿವೆ.  

ಆ್ಯಡ್‌ಗಳಿಗಾಗಿ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನಿರ್ವಹಿಸಿ

ನಿಮ್ಮ Google ಖಾತೆಯ ಆ್ಯಡ್ ಸೆಟ್ಟಿಂಗ್‌ಗಳನ್ನು ಆಧರಿಸಿ ನೀವು ನೋಡುವ ಆ್ಯಡ್‌ಗಳನ್ನು ನೀವು ನಿಯಂತ್ರಿಸಬಹುದು. ನೀವು ನಿಮ್ಮ YouTube ವೀಕ್ಷಣೆ ಇತಿಹಾಸವನ್ನು ವೀಕ್ಷಿಸಬಹುದು, ಅಳಿಸಬಹುದು ಅಥವಾ ವಿರಾಮಗೊಳಿಸಬಹುದು.

ಆ್ಯಡ್‌ಗಳನ್ನು ಆಫ್ ಮಾಡಿ

ನೀವು YouTube ನಲ್ಲಿ ಆ್ಯಡ್‌ಗಳನ್ನು ಆಫ್ ಮಾಡಲು ಬಯಸಿದರೆ, ಆ್ಯಡ್-ಫ್ರೀ ಅನುಭವಕ್ಕಾಗಿ ನಮ್ಮ ಪಾವತಿಸಿದ ಸದಸ್ಯತ್ವಗಳನ್ನು ಪರಿಶೀಲಿಸಿ. 

ನಿರ್ದಿಷ್ಟ ಆ್ಯಡ್ ಕುರಿತು ವರದಿ ಮಾಡದೆಯೇ ಅದನ್ನು ನೋಡುವುದನ್ನು ತಪ್ಪಿಸಲು, ಆ್ಯಡ್‌ನಲ್ಲಿ ಇನ್ನಷ್ಟು '' ಅಥವಾ ಮಾಹಿತಿ ನಂತರ ಆ್ಯಡ್ ನಿರ್ಬಂಧಿಸಿ   ಎಂಬುದನ್ನು ಆಯ್ಕೆ ಮಾಡಿ. ನೀವು ನನ್ನ ಜಾಹೀರಾತು ಕೇಂದ್ರ ಎಂಬುದರಲ್ಲಿ ನೋಡುವ ಆ್ಯಡ್‌ಗಳನ್ನು ಕಸ್ಟಮೈಸ್ ಮಾಡುವುದನ್ನು ನೀವು ಆರಿಸಿದರೆ ಮಾತ್ರ ಈ ಆಯ್ಕೆ ಲಭ್ಯವಿರುತ್ತದೆ.

ಆ್ಯಡ್ ಕುರಿತು ವರದಿ ಮಾಡಿ

ನಿಮಗೆ ಇಷ್ಟವಿಲ್ಲದಿರುವ ಆ್ಯಡ್ ಅನ್ನು ನೀವು ನೋಡಿದರೆ, ನಿಮ್ಮ ಆ್ಯಡ್ ಸೆಟ್ಟಿಂಗ್‌ಗಳನ್ನು ನಿರ್ವಹಿಸಲು ಮೇಲಿನ ಮಾಹಿತಿಯನ್ನು ಬಳಸಿ. ನೀವು ಸೂಕ್ತವಲ್ಲದ ಅಥವಾ Google ನ ಆ್ಯಡ್ ನೀತಿಗಳನ್ನು ಉಲ್ಲಂಘಿಸುವ ಆ್ಯಡ್ ಅನ್ನು ನೋಡಿದರೆ, ನೀವು ಅದರ ಕುರಿತು ವರದಿ ಮಾಡಬಹುದು. 

ಆ್ಯಡ್ ಕುರಿತು ವರದಿ ಮಾಡಲು, ಇನ್ನಷ್ಟು '' ಅಥವಾ ಮಾಹಿತಿ ನಂತರ ಆ್ಯಡ್ ಕುರಿತು ವರದಿ ಮಾಡಿ   ಎಂಬುದನ್ನು ಆಯ್ಕೆ ಮಾಡಿ ಅಥವಾ ಈ ಫಾರ್ಮ್ ಅನ್ನು ಭರ್ತಿ ಮಾಡಲು ಮತ್ತು ಸಲ್ಲಿಸುವುದನ್ನು ಆರಿಸಿ. ನಂತರ ನಮ್ಮ ತಂಡವು ಆ್ಯಡ್ ಕುರಿತ ನಿಮ್ಮ ವರದಿಯನ್ನು ಪರಿಶೀಲಿಸುತ್ತದೆ ಮತ್ತು ಸೂಕ್ತವಾಗಿದ್ದರೆ, ವರದಿಯ ಕುರಿತು ಅಗತ್ಯ ಕ್ರಮ ಕೈಗೊಳ್ಳುತ್ತದೆ. 

ಆ್ಯಡ್‌ಗಳನ್ನು ವರದಿ ಮಾಡುವುದು YouTube ಮೊಬೈಲ್ ಮತ್ತು ಕಂಪ್ಯೂಟರ್‌ನಲ್ಲಿ ಮಾತ್ರ ಲಭ್ಯವಿದೆ.

ಲೀಡ್ ಫಾರ್ಮ್‌ಗಳನ್ನು ಭರ್ತಿ ಮಾಡಿ

YouTube ನಲ್ಲಿ ವೀಡಿಯೊ ಕ್ಯಾಂಪೇನ್‌ನಲ್ಲಿ ನೀವು ಲೀಡ್ ಫಾರ್ಮ್ ಅನ್ನು ತೆರೆದಾಗ, ನಿಮ್ಮ Google ಖಾತೆಗೆ ನೀವು ಸೈನ್ ಇನ್ ಮಾಡಿರುವಾಗ ಕೆಲವು ಫೀಲ್ಡ್‌ಗಳನ್ನು ಮೊದಲೇ ಭರ್ತಿ ಮಾಡಿರಲಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು
13849360276271879217
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59