YouTube ವೀಡಿಯೊ ದೋಷಗಳನ್ನು ಟ್ರಬಲ್‌ಶೂಟ್ ಮಾಡಿ

ನಿಮ್ಮ YouTube ವೀಡಿಯೊವನ್ನು ಪ್ಲೇ ಮಾಡುವಲ್ಲಿ ನಿಮಗೆ ಸಮಸ್ಯೆಗಳಿದ್ದರೆ, ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಈ ಟ್ರಬಲ್‌ಶೂಟಿಂಗ್ ಹಂತಗಳನ್ನು ಅನುಸರಿಸಿ. ಕೆಲವು ಅತಿ ಸಾಮಾನ್ಯ ದೋಷ ಸಂದೇಶಗಳು ಹೀಗಿವೆ:

  • ದೋಷವೊಂದು ಸಂಭವಿಸಿದೆ.
  • ಪ್ಲೇಬ್ಯಾಕ್ ದೋಷ. ಮರುಪ್ರಯತ್ನಿಸಲು ಟ್ಯಾಪ್ ಮಾಡಿ.
  • ಸರ್ವರ್‎ಗೆ ಸಂಪರ್ಕ ವಿಫಲಗೊಂಡಿದೆ.
  • ಈ ವೀಡಿಯೊ ಲಭ್ಯವಿಲ್ಲ.
  • ಏನೋ ತಪ್ಪಾಗಿದೆ. ಮರುಪ್ರಯತ್ನಿಸಲು ಟ್ಯಾಪ್ ಮಾಡಿ.
  • ನಿಮ್ಮ ನೆಟ್‍ವರ್ಕ್ ಕನೆಕ್ಷನ್ ಅನ್ನು ಪರಿಶೀಲಿಸಿ (ಮರುಪ್ರಯತ್ನಿಸಿ).
  • ಈ ಕಂಟೆಂಟ್ ಲಭ್ಯವಿಲ್ಲ

ನಿಮ್ಮ ಇಂಟರ್ನೆಟ್ ವೇಗವನ್ನು ಪರಿಶೀಲಿಸಿ

  • ನಿಮ್ಮ ಇಂಟರ್ನೆಟ್ ಕನೆಕ್ಷನ್ ಅನ್ನು ಮರುಪ್ರಾರಂಭಿಸಿ.
  • ಆಯ್ಕೆಮಾಡಿದ ವೀಡಿಯೊ ರೆಸಲ್ಯೂಷನ್ ಅನ್ನು ನಿಮ್ಮ ಇಂಟರ್ನೆಟ್ ಬೆಂಬಲಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಇಂಟರ್ನೆಟ್ ವೇಗದ ಪರೀಕ್ಷೆಯನ್ನು ರನ್ ಮಾಡಿ. ನಿಮ್ಮ ಅನುಭವವನ್ನು ಸುಧಾರಿಸಲು ನಿಮ್ಮ ವೀಡಿಯೊದ ಗುಣಮಟ್ಟವನ್ನು ಸಹ ನೀವು ಬದಲಾಯಿಸಬಹುದು. ಗಮನಿಸಿ: ಒಂದೇ ನೆಟ್‌ವರ್ಕ್‌ನಲ್ಲಿ ಬಹು ಸಾಧನಗಳನ್ನು ಬಳಸುವುದರಿಂದ ನಿಮ್ಮ ಸಾಧನವು ಪಡೆಯುವ ವೇಗವು ಕಡಿಮೆಯಾಗಬಹುದು.
  • YouTube ವೀಡಿಯೊದ ರೆಸಲ್ಯೂಷನ್ ಮತ್ತು ವೀಡಿಯೊವನ್ನು ಪ್ಲೇ ಮಾಡಲು ಶಿಫಾರಸು ಮಾಡಲಾದ ವೇಗವನ್ನು ಪರಿಶೀಲಿಸಿ. ಕೆಳಗಿನ ಕೋಷ್ಟಕವು ಪ್ರತಿ ವೀಡಿಯೊ ರೆಸಲ್ಯೂಶನ್ ಪ್ಲೇ ಮಾಡಲು ಶಿಫಾರಸು ಮಾಡಲಾದ ಅಂದಾಜು ವೇಗವನ್ನು ತೋರಿಸುತ್ತದೆ.
 
ವೀಡಿಯೊ ರೆಸಲ್ಯೂಷನ್ ಶಿಫಾರಸು ಮಾಡಿದ ನಿರಂತರ ವೇಗ
4K 20 Mbps
HD 1080p 5 Mbps
HD 720p 2.5 Mbps
SD 480p 1.1 Mbps
SD 360p 0.7 Mbps
 
  • ನಿಮ್ಮ ವೀಡಿಯೊಗಳನ್ನು ಹೇಗೆ ಪ್ಲೇ ಬ್ಯಾಕ್ ಮಾಡಲಾಗುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ನೋಡಲು ನೀವು ಆಸಕ್ತಿ ಹೊಂದಿದ್ದರೆ, ನೆರ್ಡ್ಸ್‌ಗಾಗಿ ಅಂಕಿಅಂಶಗಳನ್ನು ಪರಿಶೀಲಿಸಿ.
ನೀವು YouTube ಗೆ ಸೈನ್ ಇನ್ ಆಗಿರುವಿರಿ ಎಂಬುದನ್ನು ಪರಿಶೀಲಿಸಿ

ನೀವು YouTube ಗೆ ಸೈನ್ ಇನ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

YouTube ಸಮುದಾಯವನ್ನು ರಕ್ಷಿಸುವ ಸಲುವಾಗಿ, ಸೈನ್ ಔಟ್ ಮಾಡಿದ ಬಳಕೆದಾರರು ಆಫ್‌ಲೈನ್ ಬಳಕೆಗಾಗಿ ವಿಷಯವಸ್ತುವನ್ನು ಡೌನ್‌ಲೋಡ್ ಮಾಡಲು ಪ್ರಯತ್ನಿಸುತ್ತಿರುವಾಗ ಅವರು YouTube ವೀಡಿಯೊಗಳನ್ನು ಆ್ಯಕ್ಸೆಸ್ ಮಾಡದಂತೆ ನಾವು ತಡೆಗಟ್ಟಬಹುದು.

ನಿಮ್ಮ ಶೈಕ್ಷಣಿಕ ಸಂಶೋಧನೆಗಾಗಿ YouTube ಡೇಟಾವನ್ನು ಆ್ಯಕ್ಸೆಸ್ ಮಾಡಲು ಪ್ರಯತ್ನಿಸುತ್ತಿರುವ ಸಂಶೋಧಕರು ನೀವಾಗಿದ್ದರೆ, ನೀವು YouTube ನ ಸಂಶೋಧಕರ ಕಾರ್ಯಕ್ರಮಕ್ಕೆ ನೀವು ಅರ್ಜಿ ಸಲ್ಲಿಸಬಹುದು. ಈ ಪ್ರಕ್ರಿಯೆ ಮತ್ತು ಲಭ್ಯವಿರುವ ಡೇಟಾದ ಕುರಿತು ನೀವು ಇಲ್ಲಿ ಇನ್ನಷ್ಟು ತಿಳಿಯಬಹುದು.

YouTube ಆ್ಯಪ್ ಅನ್ನು ಮರುಪ್ರಾರಂಭಿಸಿ ಅಥವಾ ನಿಮ್ಮ ಸಾಧನವನ್ನು ರೀಬೂಟ್ ಮಾಡಿ

YouTube ಆ್ಯಪ್ ಮುಚ್ಚಲು ಅಥವಾ ನಿಮ್ಮ ಸಾಧನ ರೀಬೂಟ್ ಮಾಡಲು ಪ್ರಯತ್ನಿಸಿ. ನೀವು YouTube ಆ್ಯಪ್ ಅನ್ನು ಅನ್ಇನ್‌ಸ್ಟಾಲ್ ಮಾಡಬಹುದು ಮತ್ತು ಮರುಇನ್‌ಸ್ಟಾಲ್ ಮಾಡಬಹುದು. 

ನಿಮ್ಮ ಬ್ರೌಸರ್ ಅನ್ನು ಅಪ್‌ಡೇಟ್ ಮಾಡಿ ಮತ್ತು ನಿಮ್ಮ ಎಕ್ಸ್‌ಟೆನ್ಶನ್‌ಗಳನ್ನು ಪರಿಶೀಲಿಸಿ

ನಿಮ್ಮ ಬ್ರೌಸರ್ ಅಪ್‌ಡೇಟ್ ಮಾಡಲು ಪ್ರಯತ್ನಿಸಿ ಅಥವಾ ನಿಮ್ಮ ಬ್ರೌಸರ್‌ನ ಕ್ಯಾಷ್ ಮತ್ತು ಕುಕೀಗಳನ್ನು ತೆರವುಗೊಳಿಸಿ. ಆ್ಯಡ್‌ಗಳನ್ನು ನಿರ್ಬಂಧಿಸುವ ನಿಮ್ಮ ಬ್ರೌಸರ್ ಎಕ್ಸ್‌ಟೆನ್ಶನ್‌ಗಳು ವೀಡಿಯೊ ಪ್ಲೇಬ್ಯಾಕ್ ಮೇಲೆ ಪರಿಣಾಮ ಬೀರುತ್ತಿವೆಯೇ ಎಂಬುದನ್ನು ಸಹ ನೀವು ಪರಿಶೀಲಿಸಬಹುದು. ಮತ್ತೊಂದು ಆಯ್ಕೆಯಾಗಿ, ಎಲ್ಲಾ ಎಕ್ಸ್‌ಟೆನ್ಶನ್‌ಗಳನ್ನು ನಿಷ್ಕ್ರಿಯಗೊಳಿಸಿರುವ ಅಜ್ಞಾತ ವಿಂಡೋದಲ್ಲಿ YouTube ಅನ್ನು ತೆರೆಯಲು ಪ್ರಯತ್ನಿಸಿ ಮತ್ತು ಸಮಸ್ಯೆ ಮುಂದುವರಿಯುತ್ತದೆಯೇ ಎಂದು ಪರಿಶೀಲಿಸಿ.

YouTube ಆ್ಯಪ್ ಅನ್ನು ಅಪ್‌ಡೇಟ್ ಮಾಡಿ

YouTube ಆ್ಯಪ್‌ನ ಲಭ್ಯವಿರುವ ಹೊಸ ಆವೃತ್ತಿಗೆ ಅಪ್‌ಡೇಟ್ ಮಾಡಲು ಪ್ರಯತ್ನಿಸಿ. ನಿಮ್ಮ ಸಾಧನದ ಫರ್ಮ್‌ವೇರ್/ಸಿಸ್ಟಂ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡಲು ಸಹ ನೀವು ಪ್ರಯತ್ನಿಸಬಹುದು.

ನಿಮ್ಮ ಡೇಟಾ ಬಳಕೆಯನ್ನು ಪರಿಶೀಲಿಸಿ 

ನೀವು YouTube ಗಾಗಿ ಡೇಟಾ ಬಳಕೆಯನ್ನು ಆನ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ:

  1. ನಿಮ್ಮ ಸಾಧನದ ಸೆಟ್ಟಿಂಗ್‌ಗಳಿಗೆ ಹೋಗಿ.
  2. ಸೆಲ್ಯುಲರ್ ಎಂಬುದನ್ನು ಟ್ಯಾಪ್ ಮಾಡಿ.
  3. "ಸೆಲ್ಯುಲರ್ ಡೇಟಾ" ವಿಭಾಗದ ಅಡಿಯಲ್ಲಿ, YouTube ಗೆ ಹೋಗಿ.
  4. YouTube ನ ಪಕ್ಕದಲ್ಲಿ, ಬಟನ್ ಅನ್ನು ಆನ್ ಮಾಡಲು ಟ್ಯಾಪ್ ಮಾಡಿ.

ಇತರ ರೀತಿಯ ದೋಷಗಳು 

ವೀಡಿಯೊ ಪ್ಲೇಯರ್‌ನಲ್ಲಿ ಹಸಿರು ಅಥವಾ ಕಪ್ಪು ಸ್ಕ್ರೀನ್

ನೀವು YouTube ವೀಡಿಯೊದ ಆಡಿಯೊವನ್ನು ಕೇಳಬಹುದಾದರೆ, ಆದರೆ ವೀಡಿಯೊ ಪ್ಲೇಯರ್ ಹಸಿರು ಅಥವಾ ಕಪ್ಪು ಸ್ಕ್ರೀನ್ ಹೊಂದಿದ್ದರೆ, ಇವುಗಳನ್ನು ಮಾಡಲು ಪ್ರಯತ್ನಿಸಿ:

ಅದು ಕೆಲಸ ಮಾಡದಿದ್ದರೆ, ಈ ಟ್ರಬಲ್‌ಶೂಟಿಂಗ್ ಸಲಹೆಗಳನ್ನು ಪ್ರಯತ್ನಿಸಿ.

ಆಡಿಯೊ ಸಮಸ್ಯೆಗಳು

ನೀವು YouTube ವೀಡಿಯೊದ ಆಡಿಯೊವನ್ನು ಕೇಳಲು ಸಾಧ್ಯವಾಗದಿದ್ದರೆ, ಇವುಗಳನ್ನು ಪ್ರಯತ್ನಿಸಿ:

  • ನಿಮ್ಮ ಬ್ರೌಸರ್ ಅಥವಾ ಸಾಧನದ ಸೌಂಡ್/ವಾಲ್ಯೂಮ್ ಆನ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.
  • ನಿಮ್ಮ ಯಂತ್ರದ ಧ್ವನಿ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ.
  • ನಿಮ್ಮ ಬ್ರೌಸರ್ ಅಥವಾ ಸಾಧನವನ್ನು ಮರುಪ್ರಾರಂಭಿಸಿ.

ವಯಸ್ಸಿನ ನಿರ್ಬಂಧಿತ ಕಂಟೆಂಟ್

ಕೆಲವೊಮ್ಮೆ, ಕಂಟೆಂಟ್ ನಮ್ಮ ನೀತಿಗಳನ್ನು ಉಲ್ಲಂಘಿಸುವುದಿಲ್ಲ, ಆದರೆ ಅದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವೀಕ್ಷಕರಿಗೆ ಸೂಕ್ತವೆನಿಸದಿರಬಹುದು. ಈ ಸಂದರ್ಭಗಳಲ್ಲಿ, ನಾವು ವೀಡಿಯೊಗೆ ವಯಸ್ಸಿನ ನಿರ್ಬಂಧವನ್ನು ವಿಧಿಸಬಹುದು. ಸೂಚನೆ: ವೀಡಿಯೊ ಒಂದರಲ್ಲಿ ನಿರ್ಬಂಧಿತ ಮೋಡ್ ಸಹ ಆನ್ ಆಗಿರಬಹುದು.

ವೀಡಿಯೊಗಳನ್ನು ಡೌನ್‌ಲೋಡ್ ಮಾಡುವಾಗ ಎದುರಾಗುವ ಸಮಸ್ಯೆಗಳು

ನಿಮ್ಮ ಬಳಿ YouTube Premium ಇಲ್ಲದಿದ್ದರೆ ಅಥವಾ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವ ಸೌಲಭ್ಯ ನಿಮಗೆ ಲಭ್ಯವಿಲ್ಲದಿದ್ದರೆ, ನೀವು ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ನೀವು ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದಾದರೂ, ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈ ಡೌನ್‌ಲೋಡ್ ಮಾಡುವಿಕೆಯ ಟ್ರಬಲ್‌ಶೂಟಿಂಗ್ ಸಲಹೆಗಳನ್ನು ಪ್ರಯತ್ನಿಸಿ.

ಖಾತೆ ದೋಷದ ಸಮಸ್ಯೆಗಳು

ನಿಮ್ಮ ಖಾತೆಗೆ ಸಂಬಂಧಿಸಿದಂತೆ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈ ಟ್ರಬಲ್‌ಶೂಟಿಂಗ್ ಲೇಖನಗಳನ್ನು ಓದಿರಿ.

YouTube ಪಾವತಿಸಿದ ಉತ್ಪನ್ನಗಳಿಗೆ ಸಂಬಂಧಿಸಿದ ಸಮಸ್ಯೆಗಳು

ಈ ಮೇಲಿನ ಹಂತಗಳು ಕೆಲಸ ಮಾಡದಿದ್ದರೆ ಮತ್ತು ನೀವು:

  • YouTube ನಲ್ಲಿ ಚಲನಚಿತ್ರ ಅಥವಾ TV ಕಾರ್ಯಕ್ರಮವನ್ನು ಖರೀದಿಸಲಾದರೆ, ಅಥವಾ
  • YouTube Music, YouTube Premium ಅಥವಾ YouTube TV ಯ ಸಕ್ರಿಯ ಪಾವತಿಸಿದ ಸದಸ್ಯರಾಗಿದ್ದಾರೆ
ನೀವು ಖರೀದಿಗಳು ಹಾಗೂ ಸದಸ್ಯತ್ವಗಳಿಗೆ ಸಂಬಂಧಿಸಿದ ಬೆಂಬಲಕ್ಕಾಗಿ ನಮ್ಮನ್ನು ಸಂಪರ್ಕಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9848218850935447355
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false