Xbox 360 ನಲ್ಲಿ YouTube ಅನ್ನು ವೀಕ್ಷಿಸಿ

Xbox 360 ನಲ್ಲಿ YouTube ಆ್ಯಪ್‌ನೊಂದಿಗೆ ನಿಮ್ಮ ಮೆಚ್ಚಿನ YouTube ವೀಡಿಯೊಗಳು ಮತ್ತು ಸಬ್‌ಸ್ಕ್ರಿಪ್ಶನ್‌ಗಳನ್ನು ಸುಲಭವಾಗಿ ಹುಡುಕಿ.

ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ ಮೂಲಕ ನೀವು Xbox 360 ನಲ್ಲಿ YouTube ಅನ್ನು ಸಹ ನಿಯಂತ್ರಿಸಬಹುದು.

YouTube ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ

YouTube ಗೆ ಸೈನ್ ಇನ್ ಮಾಡಿ ಅಥವಾ ಅದರಿಂದ ಸೈನ್ ಔಟ್ ಮಾಡಿ

YouTube ಆ್ಯಪ್ ಮೊದಲು ತೆರೆದುಕೊಂಡಾಗ, ನಿಮ್ಮ Xbox ಲೈವ್ ಖಾತೆಯೊಂದಿಗೆ ನೀವು ಸೈನ್ ಇನ್ ಮಾಡಬೇಕಾಗುತ್ತದೆ. ಸೈನ್ ಇನ್ ಮಾಡಲು A ಅನ್ನು ಒತ್ತಿ. ನಿಮ್ಮ Xbox ಲೈವ್ ಖಾತೆಗೆ ಒಮ್ಮೆ ನೀವು ಸೈನ್ ಇನ್ ಮಾಡಿದ ನಂತರ, ನೀವು YouTube ಆ್ಯಪ್‌ಗೆ ಸೈನ್ ಇನ್ ಮಾಡಬಹುದು. ಹೇಗೆ ಎಂಬುದು ಇಲ್ಲಿದೆ:

ನಿಮ್ಮ Xbox 360 ನಲ್ಲಿ:

  1. YouTube ಆ್ಯಪ್ ಅನ್ನು ತೆರೆಯಿರಿ. 
  2. ಎಡಭಾಗದಲ್ಲಿರುವ ಗೈಡ್ ಅನ್ನು ತೆರೆಯಿರಿ ಮತ್ತು ಸೈನ್ ಇನ್ ಅನ್ನು ಆಯ್ಕೆಮಾಡಿ.

ಕಂಪ್ಯೂಟರ್, ಟ್ಯಾಬ್ಲೆಟ್ ಅಥವಾ ಫೋನ್‌ನಲ್ಲಿ:

  1. www.youtube.com/activate ಗೆ ಹೋಗಿ.
  2. ಕೇಳಿದಾಗ, ನೀವು ಯಾವ ಖಾತೆಗೆ ಸೈನ್ ಇನ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ.
  3. Xbox 360 ನಲ್ಲಿ ಪ್ರದರ್ಶಿಸಲಾದ ಸಕ್ರಿಯಗೊಳಿಸುವಿಕೆ ಕೋಡ್ ಅನ್ನು ನಮೂದಿಸಿ ಮತ್ತು ಮುಂದುವರಿಸಿ ಅನ್ನು ಕ್ಲಿಕ್ ಮಾಡಿ.
  4. ಮುಂದಿನ ಸ್ಕ್ರೀನ್‌ನಲ್ಲಿ, ಸ್ವೀಕರಿಸಿ ಅನ್ನು ಆಯ್ಕೆಮಾಡಿ.

ನಿಮ್ಮ Xbox 360 ನಿಂದ ನಿಮ್ಮ ಖಾತೆಯ ಲಿಂಕ್ ರದ್ದುಮಾಡುವುದು ಹೇಗೆ ಎಂದು ತಿಳಿಯಿರಿ.

ವೀಡಿಯೊಗಳನ್ನು ವೀಕ್ಷಿಸಿ ಮತ್ತು ಹುಡುಕಿ

ವೀಡಿಯೊಗಳನ್ನು ಹುಡುಕಿ

YouTube ನ ಮುಖ್ಯ ಮೆನುವಿನಲ್ಲಿ, ವೀಡಿಯೊಗಳನ್ನು ಹುಡುಕಲು Y ಅನ್ನು ಒತ್ತಿ. ಹುಡುಕುತ್ತಿರುವಾಗ, ಜಾಗವನ್ನು ಸೇರಿಸಲು Y ಮತ್ತು ಅಕ್ಷರವನ್ನು ಅಳಿಸಲು X ಅನ್ನು ಒತ್ತಿ.
  • ಹುಡುಕಾಟ ಸಲಹೆಗಳು: ನಿಮ್ಮ ಹುಡುಕಾಟದಲ್ಲಿ ನೀವು ನಮೂದಿಸಿದಾಗ, ಸರ್ಚ್ ಬಾಕ್ಸ್‌ನ ಕೆಳಗೆ ನೀವು ಸಲಹೆಗಳನ್ನು ನೋಡುತ್ತೀರಿ. ಕೀಬೋರ್ಡ್‌ನಿಂದ, ಬಯಸಿದ ಹುಡುಕಾಟವು ಹೈಲೈಟ್ ಆಗುವವರೆಗೆ ನೀವು ಡಿ-ಪ್ಯಾಡ್ ಅಥವಾ ಎಡ ಸ್ಟಿಕ್‌ನಲ್ಲಿ ಮೇಲಕ್ಕೆ ಒತ್ತಬಹುದು. ನಂತರ, ಹುಡುಕಲು A ಅನ್ನು ಒತ್ತಿ. 
  • ವೀಡಿಯೊಗಳನ್ನು ಬ್ರೌಸ್ ಮಾಡಿ: ನೀವು ಹುಡುಕಿದಂತೆಲ್ಲಾ, ಸಂಬಂಧಿತ ವೀಡಿಯೊಗಳು ಸ್ಕ್ರೀನ್‌ನ ಕೆಳಭಾಗದಲ್ಲಿ ಗೋಚರಿಸುತ್ತವೆ. ವೀಡಿಯೊ ಫಲಿತಾಂಶಗಳನ್ನು ಬ್ರೌಸ್ ಮಾಡಲು, ಡಿ-ಪ್ಯಾಡ್ ಅಥವಾ ಎಡ ಸ್ಟಿಕ್‌ನಲ್ಲಿ ಎಡ ಅಥವಾ ಬಲಕ್ಕೆ ಒತ್ತಿ.
  • ನಿಮ್ಮ ಹುಡುಕಾಟವನ್ನು ಮಾರ್ಪಡಿಸಿ: ನಿಮ್ಮ ಹುಡುಕಾಟ ಪದಗಳನ್ನು ಮಾರ್ಪಡಿಸಲು, ಸರ್ಚ್ ಬಾಕ್ಸ್‌ಗೆ ಹಿಂತಿರುಗಲು ಡಿ-ಪ್ಯಾಡ್/ಎಡ ಸ್ಟಿಕ್‌ನಲ್ಲಿ ಮೇಲಕ್ಕೆ ಒತ್ತಿ.

ವೀಡಿಯೊ ನಿಯಂತ್ರಣಗಳು

ವೀಡಿಯೊ ಪ್ಲೇ ಆಗುತ್ತಿರುವಾಗ, ನಿಮ್ಮ ಪ್ಲೇಯರ್ ನಿಯಂತ್ರಣಗಳನ್ನು ಪ್ರದರ್ಶಿಸಲು A ಅನ್ನು ಒತ್ತಿ, ಅದು ನಿಮಗೆ ಈ ಕೆಳಗಿನವುಗಳನ್ನು ಮಾಡಲು ಅನುಮತಿಸುತ್ತದೆ:
  • ರಿವೈಂಡ್  - 10 ಸೆಕೆಂಡುಗಳಷ್ಟು ಹಿಂದಕ್ಕೆ ಸರಿಸಿ.
  • ವಿರಾಮಗೊಳಿಸಿ / ಪ್ಲೇ ಮಾಡಿ  - ವೀಡಿಯೊವನ್ನು ವಿರಾಮಗೊಳಿಸಿ ಅಥವಾ ಪ್ಲೇಬ್ಯಾಕ್ ಅನ್ನು ಪುನರಾರಂಭಿಸಿ.
  • ಫಾಸ್ಟ್ ಫಾರ್ವರ್ಡ್  - 10 ಸೆಕೆಂಡುಗಳಷ್ಟು ಮುಂದಕ್ಕೆ ಸರಿಸಿ.
  • ಉಪಶೀರ್ಷಿಕೆಗಳು  - ವೀಡಿಯೊ ಉಪಶೀರ್ಷಿಕೆಗಳನ್ನು ಆನ್ ಮಾಡಿದ್ದರೆ, ಈ ಫೀಚರ್ ಅನ್ನು ಆನ್ ಮಾಡಲು A ಅನ್ನು ಒತ್ತಿ. CC ಐಕಾನ್ ಬೂದು ಬಣ್ಣದಲ್ಲಿದ್ದರೆ, ಉಪಶೀರ್ಷಿಕೆಗಳು ಲಭ್ಯವಿರುವುದಿಲ್ಲ.
  • ಹಿಂದಕ್ಕೆ ಸ್ಕಿಪ್ ಮಾಡಿ: ಪ್ಲೇಪಟ್ಟಿಯಲ್ಲಿ ಹಿಂದಿನ ವೀಡಿಯೊಗೆ ಸ್ಕಿಪ್ ಮಾಡಿ.
  • ಮುಂದಕ್ಕೆ ಸ್ಕಿಪ್ ಮಾಡಿ: ಪ್ಲೇಪಟ್ಟಿಯಲ್ಲಿ ಮುಂದಿನ ವೀಡಿಯೊಗೆ ಸ್ಕಿಪ್ ಮಾಡಿ.
  • ಇನ್ನಷ್ಟು ಕ್ರಿಯೆಗಳು ಅನ್ನು ಆಯ್ಕೆಮಾಡುವ ಮೂಲಕ ಇನ್ನಷ್ಟು ಫೀಚರ್‌ಗಳನ್ನು ಕಾಣಬಹುದು:
    • ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.
    • ವೀಡಿಯೊವನ್ನು ಲೈಕ್ ಮಾಡಿ / ಡಿಸ್‌ಲೈಕ್ ಮಾಡಿ.
    • ವೀಡಿಯೊ ಅನುಚಿತವಾಗಿದೆ ಎಂದು ರಿಪೋರ್ಟ್ ಮಾಡಿ.
    • ವೀಡಿಯೊಗಳನ್ನು ಹುಡುಕಿ.
Xbox ದೋಷ ಸಂದೇಶ

ನಿಮಗೆ “YouTube ಸದ್ಯಕ್ಕೆ ಲಭ್ಯವಿಲ್ಲ” ಎಂಬ ದೋಷ ಸಂದೇಶವು ಕಾಣಿಸಿದರೆ, ನಿಮ್ಮ ಇಂಟರ್‌ನೆಟ್ ಕನೆಕ್ಷನ್ ನಿಧಾನವಾಗಿರುವುದು ಇದಕ್ಕೆ ಕಾರಣವಿರಬಹುದು.

ಸಮಸ್ಯೆಯನ್ನು ಬಗೆಹರಿಸಲು ಸಹಾಯ ಬೇಕಾದರೆ, ನಮ್ಮ ಸಮಸ್ಯೆ ನಿವಾರಣೆ ಮಾರ್ಗಸೂಚಿಗಳನ್ನು ಅನುಸರಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6648712942867473774
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false