ಸ್ಟ್ರೀಮಿಂಗ್‌ಗೆ ಸಂಬಂಧಿಸಿದ ಸಲಹೆಗಳು

Intro To Live Streaming on YouTube

ನೆಟ್‌ವರ್ಕ್‌ಗೆ ಸಂಬಂಧಿಸಿದ ಸಲಹೆಗಳು

  • ನೀವು ಸ್ಟ್ರೀಮಿಂಗ್ ಮಾಡುತ್ತಿರುವ ಒಟ್ಟು ಬಿಟ್ ಪ್ರಮಾಣ, ಲಭ್ಯವಿರುವ ಅಪ್‌ಲೋಡ್ ಬ್ಯಾಂಡ್‌ವಿಡ್ತ್ ಪ್ರಮಾಣವನ್ನು ಮೀರುವಂತಿಲ್ಲ. ಸ್ವಲ್ಪ ಬ್ಯಾಂಡ್‌ವಿಡ್ತ್ ಖಾಲಿ ಬಿಡಿ (20% ಅನ್ನು ಶಿಫಾರಸು ಮಾಡಲಾಗಿದೆ).
  • ನಿಮ್ಮ ಕಛೇರಿಯು ಹೆಚ್ಚಿನ ವೇಗದ ಕನೆಕ್ಷನ್ ಅನ್ನು ಹೊಂದಿರಬಹುದು, ಆದರೆ ಅನೇಕ ಜನರು ಆ ನೆಟ್‌ವರ್ಕ್ ಅನ್ನು ಹಂಚಿಕೊಳ್ಳುತ್ತಿದ್ದರೆ, ನಿಮ್ಮ ವೈಯಕ್ತಿಕ ಕನೆಕ್ಷನ್‌ನ ವೇಗ ಸೀಮಿತವಾಗಿರಬಹುದು.
  • ಸ್ಪೀಡ್ ಟೆಸ್ಟ್ ರನ್ ಮಾಡಿ. ಇನ್‌ಬೌಂಡ್ ಬ್ಯಾಂಡ್‌ವಿಡ್ತ್ (ಡೌನ್‌ಲೋಡ್ ವೇಗ) ಸಾಮಾನ್ಯವಾಗಿ ಔಟ್‌ಬೌಂಡ್ (ಅಪ್‌ಲೋಡ್) ಬ್ಯಾಂಡ್‌ವಿಡ್ತ್‌ಗಿಂತ ಹೆಚ್ಚಾಗಿರುತ್ತದೆ. ನಿಮ್ಮ ಔಟ್‌ಬೌಂಡ್ ಕನೆಕ್ಷನ್, ನಿಮ್ಮ ಸ್ಟ್ರೀಮ್ ಬಿಟ್ ಪ್ರಮಾಣವನ್ನು ಕಳುಹಿಸಲು ಸಾಕಾಗುವಷ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪ್ರಾಥಮಿಕ + ಬ್ಯಾಕಪ್ + 20% ಶಿಫಾರಸು ಮಾಡಲಾಗಿದೆ.
  • ನೀವು ವಿಶ್ವಾಸಾರ್ಹ ನೆಟ್‌ವರ್ಕ್‌ನಲ್ಲಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಕನೆಕ್ಟಿವಿಟಿಯಲ್ಲಿ ಅಡಚಣೆಯಾದರೆ ಸ್ಟ್ರೀಮಿಂಗ್‌ಗೆ ತೊಂದರೆ ಆಗುತ್ತದೆ ಎಂದು ಅರ್ಥ.
ಎನ್‌ಕೋಡಿಂಗ್‌ಗೆ ಸಂಬಂಧಿಸಿದ ಸಲಹೆಗಳು
  • ಲೈವ್ ಸ್ಟ್ರೀಮ್‌ಗಾಗಿ ಎನ್‌ಕೋಡರ್‌ಗಳನ್ನು ಕನಿಷ್ಠ 2 ಗಂಟೆಗಳ ಮೊದಲು ಸೆಟಪ್ ಮಾಡಿ.
  • ಎನ್‌ಕೋಡರ್‌ಗಳನ್ನು ಈವೆಂಟ್ ಪ್ರಾರಂಭವಾಗಲು ನಿಗದಿಪಡಿಸಲಾದ ಸಮಯಕ್ಕಿಂತ ಕನಿಷ್ಠ 15 ನಿಮಿಷಗಳ ಮೊದಲು ಪ್ರಾರಂಭಿಸಿ.
  • ಸ್ಟ್ರೀಮಿಂಗ್ ಪ್ರಾರಂಭಿಸಿ ಕ್ಲಿಕ್ ಮಾಡುವ ಮೊದಲು, ಲೈವ್ ನಿಯಂತ್ರಣ ಕೊಠಡಿಯಲ್ಲಿ ಪೂರ್ವವೀಕ್ಷಣೆಯನ್ನು ಪರಿಶೀಲಿಸಿ.
  • ಎನ್‌ಕೋಡರ್ ಫೇಲ್‌ಓವರ್ ಪರೀಕ್ಷಿಸಲು, ಪ್ರಾಥಮಿಕ ಎನ್‌ಕೋಡರ್ ಅನ್ನು ನಿಲ್ಲಿಸಿ (ಅಥವಾ ಅದರ ಇಥರ್ನೆಟ್ ಕೇಬಲ್ ಅನ್ನು ಅನ್‌ಪ್ಲಗ್ ಮಾಡಿ) ಮತ್ತು ಪ್ಲೇಯರ್ ಬ್ಯಾಕಪ್ ಎನ್‌ಕೋಡರ್‌ಗೆ ಬದಲಾವಣೆ ಆಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ.
  • ಎಲ್ಲಾ ಸ್ಥಳೀಯ ಆರ್ಕೈವ್ ಫೈಲ್‌ಗಳ ಇಂಟಿಗ್ರಿಟಿಯನ್ನು ಪರಿಶೀಲಿಸಿ. ಸ್ಥಳೀಯ ಆರ್ಕೈವ್‌ನ ಫೈಲ್ ಗಾತ್ರವು ಹೆಚ್ಚುತ್ತಿದೆಯೇ ಎಂದು ಪರಿಶೀಲಿಸಿ.
  • ಚಾನಲ್ ಮತ್ತು ವೀಕ್ಷಣಾ ಪುಟಗಳ ಮೂಲಕ ಈವೆಂಟ್ ಅನ್ನು ಆ್ಯಕ್ಸೆಸ್ ಮಾಡಬಹುದೇ ಎಂದು ಪರಿಶೀಲಿಸಿ.
  • ಈವೆಂಟ್ ಅನ್ನು ಮೊಬೈಲ್ ಸಾಧನಗಳ ಮೂಲಕ ಆ್ಯಕ್ಸೆಸ್ ಮಾಡಬಹುದೇ ಎಂದು ಪರಿಶೀಲಿಸಿ.
  • ಆಡಿಯೋ ಮತ್ತು ವೀಡಿಯೊ ಗುಣಮಟ್ಟಕ್ಕಾಗಿ ಸ್ಟ್ರೀಮ್‌ಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿ.
  • YouTube ನಲ್ಲಿ ನಿಮ್ಮ ಈವೆಂಟ್ ಅನ್ನು ನಿಲ್ಲಿಸಿದ ನಂತರ, ಎನ್‌ಕೋಡರ್ ಅನ್ನು ನಿಲ್ಲಿಸಿ.
ವೆಬ್‌ಕ್ಯಾಮ್ ಬಳಕೆ
  • ನೀವು ಲ್ಯಾಪ್‌ಟಾಪ್ ಮತ್ತು ವೆಬ್‌ಕ್ಯಾಮ್‌ ಮೂಲಕ ಸ್ಟ್ರೀಮ್ ಮಾಡಬಹುದು, ಆದರೆ ಉತ್ತಮ ಸಾಧನವು ಉತ್ತಮ ಲೈವ್ ಸ್ಟ್ರೀಮ್ ಗುಣಮಟ್ಟವನ್ನು ನೀಡುತ್ತದೆ.
  • ನೀವು Wirecast ಅಥವಾ www.youtube.com/webcam ನಂತಹ ಸಾಫ್ಟ್‌ವೇರ್ ಎನ್‌ಕೋಡಿಂಗ್ ಪ್ರೋಗ್ರಾಂ ಅನ್ನು ಬಳಸಬಹುದು.
  • ಹೆಚ್ಚಿನ ಪ್ರೊಡಕ್ಷನ್ ಮೌಲ್ಯದ ಈವೆಂಟ್‌ಗಳಿಗಾಗಿ, ವೃತ್ತಿಪರ-ದರ್ಜೆಯ ಹಾರ್ಡ್‌ವೇರ್ ಎನ್‌ಕೋಡರ್‌ಗಳನ್ನು ಬಳಸಲು ನಾವು ಶಿಫಾರಸು ಮಾಡುತ್ತೇವೆ.
  • ನಿಮ್ಮ ಈವೆಂಟ್‌ಗೆ ಮೊದಲು ನಿಮ್ಮ ಸೆಟಪ್ ಅನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಲೈವ್ ಸ್ಟ್ರೀಮ್‌ಗಳಲ್ಲಿ ಸುರಕ್ಷಿತವಾಗಿರಿ
  • ಕಂಟೆಂಟ್: ಯಾವ ರೀತಿಯ ವೀಡಿಯೊಗಳನ್ನು ಸ್ಟ್ರೀಮ್ ಮಾಡಬೇಕೆಂದು ತಿಳಿಯಿರಿ. ನಿಮ್ಮ ಸ್ನೇಹಿತರು, ಸಹಪಾಠಿಗಳು ಅಥವಾ ಹದಿಹರೆಯದವರ ವೀಡಿಯೊಗಳನ್ನು ಚಿತ್ರೀಕರಿಸುವಾಗ, ಅವು ಎಂದಿಗೂ ಲೈಂಗಿಕವಾಗಿ ಪ್ರಚೋದಿಸುವ, ಹಿಂಸಾತ್ಮಕ ಅಥವಾ ಅಪಾಯಕಾರಿ ರೀತಿಯಲ್ಲಿ ಇರಬಾರದು ಎಂಬುದನ್ನು ನೆನಪಿಡಿ. ಈ ನಿಯಮವು ಲೈವ್ ಚಾಟ್‌ಗೂ ಅನ್ವಯಿಸುತ್ತದೆ ಎಂಬುದನ್ನು ಗಮನಿಸಿ. ನಮ್ಮ ಸಮುದಾಯ ಮಾರ್ಗಸೂಚಿಗಳ ಕುರಿತು ಇನ್ನಷ್ಟು ತಿಳಿಯಿರಿ.
  • ವೈಯಕ್ತಿಕ ಮಾಹಿತಿ: ನೀವು ಲೈವ್ ಸ್ಟ್ರೀಮ್‌ನಲ್ಲಿರುವಾಗ ಮತ್ತು ಲೈವ್ ಚಾಟ್‌ ಮಾಡುತ್ತಿರುವ ಸಮಯದಲ್ಲಿ ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ಕುರಿತು ಜಾಗರೂಕರಾಗಿರಿ. ನಿಮಗೆ ಯಾರ ಮೇಲೆ ವಿಶ್ವಾಸವಿರುತ್ತದೆಯೋ ಅವರಿಗೆ ಮಾತ್ರ ನಿಮ್ಮ ಚಾನಲ್‌ನ ನಿರ್ವಾಹಕ ಆ್ಯಕ್ಸೆಸ್ ಅನ್ನು ನೀಡಬೇಕು. ಸ್ಟ್ರೀಮ್‌ನಲ್ಲಿ ಮಾಡರೇಶನ್ ಸವಲತ್ತುಗಳಿಗಾಗಿ YouTube ನಿಮ್ಮನ್ನು ಕೇಳುವುದಿಲ್ಲ.
  • ನಿಯಂತ್ರಿಸಿ: ಅನುಚಿತ ವೀಡಿಯೊಗಳ ಕುರಿತಂತೆ ವರದಿ ಮಾಡಿ ಅಥವಾ ನಿಮಗೆ ಅಥವಾ ಇತರರಿಗೆ ಅಹಿತವನ್ನು ಉಂಟುಮಾಡುವ ಬಳಕೆದಾರರನ್ನು ಚಾಟ್‌ನಿಂದ ನಿರ್ಬಂಧಿಸಿ. ಲೈವ್ ಚಾಟ್ ನಿರ್ವಹಣೆ ಕುರಿತು ಇನ್ನಷ್ಟು ತಿಳಿಯಿರಿ.
  • ಗೌಪ್ಯತೆ: ನೀವು ಪೋಸ್ಟ್ ಮಾಡುವ ಲೈವ್ ಸ್ಟ್ರೀಮ್‌ಗಳನ್ನು ಯಾರು ನೋಡಬಹುದು ಎಂಬುದನ್ನು ಮಿತಿಗೊಳಿಸುವ ನಿಟ್ಟಿನಲ್ಲಿ ನಿಮಗೆ ಸಹಾಯ ಮಾಡಲು YouTube ಅಂತಹ ಫೀಚರ್‌ಗಳನ್ನು ಸೇರಿಸಿದೆ. ವೈಯಕ್ತಿಕ ಲೈವ್ ಸ್ಟ್ರೀಮ್‌ಗಳನ್ನು "ಖಾಸಗಿ" ಅಥವಾ "ಪಟ್ಟಿ ಮಾಡದಿರುವುದು" ಎಂದು ಸೆಟ್ ಮಾಡುವ ಮೂಲಕ ನಿಮ್ಮ ಗೌಪ್ಯತೆಯನ್ನು ರಕ್ಷಿಸಿಕೊಳ್ಳಿ. ಸೈಟ್‌ನಲ್ಲಿನ ನಿಮ್ಮ ಅನುಭವವನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡಲು ಲಭ್ಯವಿರುವ ಟೂಲ್‌ಗಳನ್ನು ಅನ್ವೇಷಿಸಲು ಗೌಪ್ಯತೆ ಮತ್ತು ಸುರಕ್ಷತೆ ಸೆಟ್ಟಿಂಗ್‌ಗಳ ಪುಟವನ್ನು ಬಳಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3538112864636083862
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false