ಇಮೇಲ್ ನೋಟಿಫಿಕೇಶನ್‌ಗಳನ್ನು ಸೆಟಪ್ ಮಾಡಿ

ಈ ಲೇಖನದಲ್ಲಿ ವಿವರಿಸಲಾದ ಫೀಚರ್‌ಗಳು YouTube Studio ಕಂಟೆಂಟ್ ಮ್ಯಾನೇಜರ್ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತವೆ. ಸಾಮಾನ್ಯ YouTube ನೋಟಿಫಿಕೇಶನ್‌ಗಳ ಕುರಿತ ಮಾಹಿತಿಗಾಗಿ, ಇಲ್ಲಿ ಇನ್ನಷ್ಟು ತಿಳಿಯಿರಿ.

ನೀವು ನಿಮ್ಮ ಕಂಟೆಂಟ್ ಮ್ಯಾನೇಜರ್ ಅನ್ನುಸೆಟಪ್ ಮಾಡುವಾಗ, ಖಾತೆಗೆ ಸಂಬಂಧಿಸಿದಂತೆ ವಿವಿಧ ರೀತಿಯ ಚಟುವಟಿಕೆಗಳು ನಡೆದಾಗ ಇಮೇಲ್ ಮೂಲಕ ಯಾರಿಗೆ ತಿಳಿಸಬೇಕು ಎಂಬುದನ್ನು ನೀವು ನಿರ್ದಿಷ್ಟಪಡಿಸಬೇಕು. ಉದಾಹರಣೆಗೆ, ಹಕ್ಕು ಸ್ಥಾಪನೆ ಕುರಿತು ವಿವಾದ ದಾಖಲಿಸಿದಾಗ ಕೆಲವು ಬಳಕೆದಾರರಿಗೆ ಅದರ ಬಗ್ಗೆ ತಿಳಿಸಬೇಕಾಗಬಹುದು ಮತ್ತು ಇತರರಿಗೆ ಅದರ ಅಗತ್ಯವಿಲ್ಲದಿರಬಹುದು. ಇಮೇಲ್ ನೋಟಿಫಿಕೇಶನ್‌ಗಳನ್ನು ಸೆಟಪ್ ಮಾಡುವ ಕುರಿತು:

  1. Studio ಕಂಟೆಂಟ್ ಮ್ಯಾನೇಜರ್ಗೆ ಸೈನ್‌ ಇನ್‌ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಸೆಟ್ಟಿಂಗ್‌ಗಳು ಅನ್ನು ಆಯ್ಕೆಮಾಡಿ.
  3. ಅವಲೋಕನ ವಿಭಾಗದಲ್ಲಿ, ಇಮೇಲ್ ನೋಟಿಫಿಕೇಶನ್‌ಗಳು ಅಡಿಯಲ್ಲಿ, ಸರಿಯಾದ ಟೆಕ್ಸ್ಟ್ ಬಾಕ್ಸ್‌ಗಳಲ್ಲಿ ಇಮೇಲ್ ವಿಳಾಸಗಳನ್ನು ನಮೂದಿಸಿ:
    • ಪ್ರಾಥಮಿಕ ನೋಟಿಫಿಕೇಶನ್: ಕಂಟೆಂಟ್ ಮ್ಯಾನೇಜರ್ ಖಾತೆಗೆ ಸಂಬಂಧಿಸಿದ ಪ್ರಾಥಮಿಕ ಇಮೇಲ್ ವಿಳಾಸಗಳು.
      • ಕೆಳಗೆ ಸೂಚಿಸಿದ ಚಟುವಟಿಕೆಗಳು ಸೇರಿದಂತೆ (ಮಾಲೀಕತ್ವದ ಸಂಘರ್ಷಗಳು, ಹಕ್ಕು ಸ್ಥಾಪನೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ತೆಗೆದುಹಾಕುವಿಕೆಗೆ ಸಂಬಂಧಿಸಿದ ಅಪ್‌ಡೇಟ್‌ಗಳು) ಕಂಟೆಂಟ್ ಮ್ಯಾನೇಜರ್‌ಗೆ ಸಂಬಂಧಿಸಿದ ಚಟುವಟಿಕೆ ನಡೆದಾಗ ಇಮೇಲ್ ಅನ್ನು ಸ್ವೀಕರಿಸುತ್ತಾರೆ.
      • ಈ ಇಮೇಲ್ ವಿಳಾಸಗಳಿಗೆ ಪಾಲುದಾರರ ಖಾತೆಯ ವಿವರಗಳು ಮತ್ತು ವರದಿಯ ಕುರಿತ ನೋಟಿಫಿಕೇಶನ್‌ಗಳನ್ನು ಸಹ ಕಳುಹಿಸಲಾಗುತ್ತದೆ.
    • ಸಂಘರ್ಷದ ಕುರಿತ ನೋಟಿಫಿಕೇಶನ್: ಸ್ವತ್ತಿನ ಮಾಲೀಕತ್ವದ ಸಂಘರ್ಷಗಳಿಗೆ ಸಂಬಂಧಿಸಿದ ಚಟುವಟಿಕೆ ನಡೆದಾಗ ಇಮೇಲ್ ಸ್ವೀಕರಿಸುತ್ತಾರೆ.
    • ಹಕ್ಕು ಸ್ಥಾಪನೆ ಸಮಸ್ಯೆ ಕುರಿತ ನೋಟಿಫಿಕೇಶನ್: ಹಕ್ಕು ಸ್ಥಾಪನೆ ಕುರಿತಂತೆ ಹೊಸ ವಿವಾದಗಳು ಮತ್ತು ಮೇಲ್ಮನವಿಗಳಿದ್ದಾಗ ಇಮೇಲ್ ಸ್ವೀಕರಿಸುತ್ತಾರೆ.
    • ಮೂರನೇ ವ್ಯಕ್ತಿ ಹಕ್ಕುಸ್ಥಾಪನೆ ಕುರಿತ ನೋಟಿಫಿಕೇಶನ್: (ಕೆಲವು ಪಾಲುದಾರರಿಗೆ ಮಾತ್ರ ಲಭ್ಯವಿದೆ) ಮೂರನೇ ವ್ಯಕ್ತಿಗಳಿಂದ ಕ್ಲೈಮ್‌ಗಳ ಸ್ಥಿತಿಗೆ ಸಂಬಂಧಿಸಿದ ಅಪ್‌ಡೇಟ್‌ಗಳಿದ್ದಾಗ ಇಮೇಲ್ ಸ್ವೀಕರಿಸುತ್ತಾರೆ.

    • ತೆಗೆದುಹಾಕುವಿಕೆ ನೋಟಿಫಿಕೇಶನ್: ನೀವು ನೀಡಿದ ತೆಗೆದುಹಾಕುವಿಕೆ ವಿನಂತಿಗಳ ಸ್ಥಿತಿಯ ಕುರಿತಂತೆ ಅಪ್‌ಡೇಟ್‌ಗಳಿದ್ದಾಗ ಇಮೇಲ್ ಅನ್ನು ಸ್ವೀಕರಿಸುತ್ತಾರೆ.
ಸೂಚನೆ: ಟೆಕ್ಸ್ಟ್ ಬಾಕ್ಸ್‌ನಲ್ಲಿ ಒಂದೇ ಇಮೇಲ್ ವಿಳಾಸವನ್ನು ನಮೂದಿಸಲು, ಇಮೇಲ್ ಅನ್ನು ನಮೂದಿಸಿದ ನಂತರ ಅದನ್ನು ಸೇವ್ ಮಾಡಲು Enter ಅನ್ನು ಒತ್ತಿರಿ. ಹಲವು ಇಮೇಲ್ ವಿಳಾಸಗಳನ್ನು ನಮೂದಿಸಲು, ಅವುಗಳನ್ನು ಅಲ್ಪವಿರಾಮವನ್ನು ಬಳಸಿ ಪ್ರತ್ಯೇಕಿಸಿ. ಕೊನೆಯ ಇಮೇಲ್ ನಂತರ, ಅದನ್ನು ಸೇವ್ ಮಾಡಲು Enter ಒತ್ತಿರಿ.
  1. ಸೇವ್ ಮಾಡಿ ಅನ್ನು ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13679570329783885963
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false