ಆನ್ ಲೈನ್ ನಲ್ಲಿ ಸುರಕ್ಷಿತವಾಗಿರಲು ಟಿಪ್ಸ್

ಫಿಶಿಂಗ್‌

ಫಿಶಿಂಗ್ ಎಂದರೆ ಯಾವುದೇ ವ್ಯಕ್ತಿಯನ್ನು ಅವರ ಕ್ರೆಡಿಟ್ ಕಾರ್ಡ್ ಸಂಖ್ಯೆಗಳು ಅಥವಾ ಇತರ ಹಣಕಾಸಿನ ಡೇಟಾದಂತಹ ವೈಯಕ್ತಿಕ ಮಾಹಿತಿಯನ್ನು ನೀಡುವಂತೆ ವಂಚಿಸುವುದಾಗಿದೆ. ಯಾರಾದರೂ ಈ ಮಾಹಿತಿಯನ್ನು ಹೊಂದಿದ್ದಲ್ಲಿ, ಅವರು ಸಾಮಾನ್ಯವಾಗಿ ಅದನ್ನು ನಿಮ್ಮ ಹಣ, ಆಸ್ತಿ ಅಥವಾ ಗುರುತನ್ನು ಕದಿಯಲು ಬಳಸುತ್ತಾರೆ.

ನೆನಪಿರಲಿ, YouTube ಎಂದಿಗೂ ನಿಮ್ಮ ಪಾಸ್ ವರ್ಡ್, ಇಮೇಲ್ ವಿಳಾಸ ಅಥವಾ ಇತರ ಖಾತೆಯ ಮಾಹಿತಿಯನ್ನು ಕೇಳುವುದಿಲ್ಲ. ಯಾರಾದರೂ YouTube ಹೆಸರಿನಲ್ಲಿ ನಿಮ್ಮನ್ನು ಸಂಪರ್ಕಿಸಿದಲ್ಲಿ ಮೋಸ ಹೋಗಬೇಡಿ.

YouTube ನಲ್ಲಿ ಸ್ಪ್ಯಾಮ್ ಅಥವಾ ಫಿಶಿಂಗ್ ಎಂದು ನೀವು ಭಾವಿಸುವ ವೀಡಿಯೊಗಳೇನಾದರೂ ನಿಮಗೆ ಕಂಡುಬಂದಲ್ಲಿ, ದಯವಿಟ್ಟು ಅವುಗಳನ್ನು YouTube ತಂಡದಿಂದ ವಿಮರ್ಶೆಗಾಗಿ ಫ್ಲ್ಯಾಗ್ ಮಾಡಿ. ಸ್ಪ್ಯಾಮ್ ಮತ್ತು ಫಿಶಿಂಗ್ ಬಗ್ಗೆ ಇನ್ನಷ್ಟು ತಿಳಿಯಲು,ರಾಷ್ಟ್ರೀಯ ಸೈಬರ್ ಸುರಕ್ಷತಾ ಸಹಭಾಗಿತ್ವಗೆ ಭೇಟಿ ನೀಡಿ.

ನಿಮ್ಮ Google ಖಾತೆ ರಾಜಿಯಾಗಿರಬಹುದು ಎಂದು ನಿಮಗೆ ಆತಂಕವಿದ್ದರೆ,ರಾಜಿಯಾಗಿರುವ ಅಥವಾ ಹ್ಯಾಕ್ ಆಗಿರುವ Google ಖಾತೆಯನ್ನು ಭದ್ರಪಡಿಸುವುದುಕುರಿತು ಇನ್ನಷ್ಟು ತಿಳಿಯಿರಿ.

ಖಾತೆ ಸುರಕ್ಷತೆ

YouTube ನಾವು ಸಂಗ್ರಹಿಸುವ ಮಾಹಿತಿಯ ಸುರಕ್ಷತೆಗಾಗಿ ಸೂಕ್ತ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಇನ್ನಷ್ಟು ಮಾಹಿತಿಗಾಗಿ Google ಗೌಪ್ಯತಾ ನೀತಿಅನ್ನು ಓದಿರಿ.

ನಿಮ್ಮ ಪಾಸ್ ವರ್ಡ್ ಅನ್ನು ಭದ್ರವಾಗಿರಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂಬುದು ನೆನಪಿರಲಿ. ನಿಮ್ಮ ಪಾಸ್ ವರ್ಡ್ ಅನ್ನು ಇತರರೊಂದಿಗೆಎಂದಿಗೂಹಂಚಿಕೊಳ್ಳಬೇಡಿ.

ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಿಕೊಳ್ಳಿ

ನಿಮ್ಮ ಕಂಪ್ಯೂಟರ್, ಬ್ರೌಸರ್, Gmail, ಮತ್ತು Google ಖಾತೆ ಸಂರಕ್ಷಿಸುವಲ್ಲಿ ಸಹಾಯ ಮಾಡಲು ನಾವು ಸುಲಭ ಬಳಕೆಯ ಚೆಕ್‌ಲಿಸ್ಟ್ ಅನ್ನು ಪ್ರಾರಂಭಿಸಿದ್ದೇವೆ. ಸಂಪೂರ್ಣ ಪರಿಶೀಲನಾಪಟ್ಟಿಯನ್ನು ಪರಿಶೀಲಿಸುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ, ಆದರೆ ನಿಮ್ಮ YouTube ಚಾನಲ್ ಅನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುವ ಕೆಳಗಿನ ಹಂತಗಳನ್ನು ಹೈಲೈಟ್ ಮಾಡಲು ಬಯಸುತ್ತೇವೆ.
  • ಮರುಪಡೆದುಕೊಳ್ಳುವಿಕೆ ಫೋನ್ ಸಂಖ್ಯೆ ಮತ್ತು ದ್ವಿತೀಯ ಸುರಕ್ಷತೆ ಇಮೇಲ್ ಅನ್ನು ನಿಮ್ಮ Google ಖಾತೆ ಸೇರಿಸಿ. ಫೋನ್ ಸಂಖ್ಯೆ ಮತ್ತು ಭದ್ರತೆಯ ಇಮೇಲ್ ಎರಡೂ ಇಲ್ಲದೆಯೂ, ನಿಮ್ಮ ಭದ್ರತಾ ಪ್ರಶ್ನೆಯನ್ನು ತಿಳಿದುಕೊಳ್ಳುವ ಅಥವಾ ಊಹಿಸುವ ಮೂಲಕ ಯಾರಾದರೂ ನಿಮ್ಮ ಖಾತೆಯನ್ನು ಪ್ರವೇಶಿಸಬಹುದು. ನೀವುಇಲ್ಲಿಭದ್ರತಾ ಮಾಹಿತಿಯನ್ನು ಅಪ್ ಡೇಟ್ ಮಾಡಬಹುದು.
  • ನಿಮ್ಮ ಮರುಪಡೆದುಕೊಳ್ಳುವಿಕೆ ಮಾಹಿತಿಯನ್ನು ಸುರಕ್ಷಿತ ಮತ್ತು ಅಪ್ ಡೇಟ್ ಆಗಿ ಇರಿಸಿ.
  • ನಿಮ್ಮ Google ಖಾತೆ ಅನನ್ಯವಾದ, ದೃಢವಾದ ಪಾಸ್‌ವರ್ಡ್ ರಚಿಸಿ (ಮತ್ತು ಇತರ ಸೈಟ್‌ಗಳಲ್ಲಿ ಆ ಲಾಗಿನ್ ಮತ್ತು ಪಾಸ್‌ವರ್ಡ್ ಬಳಸಬೇಡಿ). ಸದೃಢ ಪಾಸ್‌ವರ್ಡ್ ರಚಿಸುವ ನಿಟ್ಟಿನಲ್ಲಿ ಸಹಾಯ ಮಾಡಲು ಇಲ್ಲಿ ಕೆಲವು ಸಲಹೆಗಳಿವೆ:
    • ನಿಮ್ಮ ಪಾಸ್‌ವರ್ಡ್ ಕನಿಷ್ಟ ಎಂಟು ಅಕ್ಷರಗಳಷ್ಟು ಉದ್ದವಿರಬೇಕು, ಸಂಖ್ಯೆಗಳು ಮತ್ತು ಅಕ್ಷರಗಳನ್ನು ಒಟ್ಟುಗೂಡಿಸಿ ಮತ್ತು ಸಾಮಾನ್ಯ ಬಳಕೆಯ ಪದಗಳನ್ನು ಸೇರಿಸಬೇಡಿ.
    • ಪದ ಅಥವಾ ಪ್ರಥಮಾಕ್ಷರವನ್ನು ಆಯ್ಕೆಮಾಡಿ ಮತ್ತು ಕೆಲವು ಅಕ್ಷರಗಳ ನಡುವೆ ಸಂಖ್ಯೆಗಳನ್ನು ಸೇರಿಸಿ.
    • ವಿರಾಮ ಚಿಹ್ನೆಗಳನ್ನು ಸೇರಿಸಿ.
    • ಕ್ಯಾಪಿಟಲ್ ಮತ್ತು ಲೋಯರ್‌ಕೇಸ್ ಅಕ್ಷರಗಳನ್ನು ಮಿಶ್ರಣ ಮಾಡಿ.
    • ಬೇರೆ ಇತರ ಪ್ರಕಾರದ ಖಾತೆಯೊಂದಿಗೆ ಸಂಯೋಜಿತವಾಗಿರುವ ಪಾಸ್‌ವರ್ಡ್‌ಗಳನ್ನು ಮರುಬಳಸಬೇಡಿ.
    • ನಿಮ್ಮ ಖಾತೆಯನ್ನು ಕಂಪನಿ ಅಥವಾ ಸಂಸ್ಥೆಗಾಗಿ ಹೊಂದಿಸಿದ್ದರೆ, ಯಾರಾದರೂ ನಿಮ್ಮ ಕಂಪನಿಯನ್ನು ತೊರೆದಾಗ ನಿಮ್ಮ ಪಾಸ್‌ವರ್ಡ್ ಮತ್ತು ರಿಕವರಿ ಮಾಹಿತಿಯನ್ನು ಅಪ್ ಡೇಟ್ ಮಾಡಿ.

ಖಾತೆ ದುರ್ಬಳಕೆಯಾಗಿದೆ ಎಂದು ನಿಮಗೆ ಅನ್ನಿಸಿದಲ್ಲಿ, ನೀವು ಇಲ್ಲಿ ವರದಿ ಮಾಡಬಹುದು.

Google ಸ್ಕ್ಯಾಮ್ ಗಳನ್ನು ತಡೆಯಿರಿ ಮತ್ತು ವರದಿ ಮಾಡುವುದು.ಹೇಗೆ ಎಂಬುದನ್ನು ತಿಳಿಯಿರಿ.

Google ಸುರಕ್ಷತಾ ಕೇಂದ್ರ

Google ಮತ್ತು ವೆಬ್‌ನಲ್ಲಿ ನಿಮ್ಮ ಡೇಟಾವನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಡೇಟಾ ಅನ್ನು ನಿಯಂತ್ರಿಸುವುದು ಮತ್ತು ಆನ್ ಲೈನ್ ಅಲ್ಲಿ ಸುರಕ್ಷಿತವಾಗಿರುವುದುಕುರಿತ ಕೆಲವು ಸಲಹೆಗಳು ಮತ್ತು ಟಿಪ್ಸ್ ಗಳನ್ನು ಓದಿರಿ

Google ಡಿಜಿಟಲ್ ಪೌರತ್ಯ ಪಠ್ಯಕ್ರಮ

Google ಡಿಜಿಟಲ್ ಪೌರತ್ಯ ಪಠ್ಯಕ್ರಮವು ಸಂವಾದಾತ್ಮಕ ಮತ್ತು ಬಳಕೆದಾರ ಸ್ನೇಹಿ ಪಠ್ಯಕ್ರಮವಾಗಿದ್ದು, ಶಿಕ್ಷಕರು ಮತ್ತು ಮಾಧ್ಯಮಿಕ ಶಾಲೆಗಳ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿದೆ. ಕೆಲವು ಸಣ್ಣ ಪಠ್ಯಗಳಲ್ಲಿ, ಗೌಪ್ಯತೆ ನೀತಿ, ಮತ್ತು ಜವಾಬ್ದಾರಿಯುತ ಸೈಬರ್ ಪ್ರಜೆಯಾಗಿರುವುದು ಹೇಗೆಎಂಬುದರ ಬಗ್ಗೆ ತಿಳಿಯಿರಿ.

Google ಕುಟುಂಬ ಸುರಕ್ಷತಾ ಕೇಂದ್ರ

Google ಕುಟುಂಬ ಸುರಕ್ಷತಾ ಕೇಂದ್ರಆನ್ ಲೈನ್ ನಲ್ಲಿ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿ ಇರಿಸಿಕುರಿತ ಟಿಪ್ಸ್ ಹಾಗೂ ಸಲಹೆಗಳನ್ನು ಒಳಗೊಂಡಿದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17412503724592950332
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false