ಚಾನಲ್ ಅಥವಾ ಖಾತೆ ಕೊನೆಗೊಳಿಸುವಿಕೆಗಳು

ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾದರೆ, ಕೊನೆಗೊಳಿಸುವಿಕೆಯ ಕಾರಣವನ್ನು ವಿವರಿಸುವ ಒಂದು ಇಮೇಲ್ ಅನ್ನು ನೀವು ಪಡೆಯುತ್ತೀರಿ. ನಿಮ್ಮ YouTube ಚಾನಲ್ ಅನ್ನು ಕೊನೆಗೊಳಿಸಲಾದರೆ, ಬೇರೆ ಯಾವುದೇ YouTube ಚಾನಲ್‌ಗಳನ್ನು ಬಳಸುವ ಅಥವಾ ರಚಿಸುವ ಮೂಲಕ ಕೊನೆಗೊಳಿಸುವಿಕೆಯನ್ನು ವಂಚಿಸಲು ಅಥವಾ ಇತರ ಬಳಕೆದಾರರು ತಮ್ಮ ಕೊನೆಗೊಳಿಸುವಿಕೆಯನ್ನು ಬೈಪಾಸ್ ಮಾಡಲು ನಿಮ್ಮ ಚಾನಲ್ ಅನ್ನು ಬಳಸುವುದಕ್ಕೆ ಅನುಮತಿ ನೀಡಲು ನಿಮಗೆ ಅವಕಾಶವಿರುವುದಿಲ್ಲ.  

ಇದು ನಿಮ್ಮ ಯಾವುದೇ ಅಸ್ತಿತ್ವದಲ್ಲಿರುವ ಚಾನಲ್‌ಗಳು, ನೀವು ರಚಿಸುವ ಅಥವಾ ಸ್ವಾಧೀನಪಡಿಸಿಕೊಳ್ಳುವ ಹೊಸ ಚಾನಲ್‌ಗಳು ಮತ್ತು ನೀವು ಪುನರಾವರ್ತಿತವಾಗಿ ಅಥವಾ ಪ್ರಮುಖವಾಗಿ ಕಾಣಿಸಿಕೊಳ್ಳುವ ಯಾವುದೇ ಚಾನಲ್‌ಗಳಿಗೆ ಅನ್ವಯವಾಗುತ್ತದೆ.

YouTube ಪಾಲುದಾರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವವರ ಚಾನಲ್ ಅನ್ನು ಕೊನೆಗೊಳಿಸಲಾದರೆ ಅವರು ಭವಿಷ್ಯದಲ್ಲಿ ಯಾವುದೇ ಆದಾಯ ಗಳಿಸಲು ಅರ್ಹರಾಗಿರುವುದಿಲ್ಲ. ನಾವು ಪಾವತಿಸದ ಸಂಪಾದನೆಗಳನ್ನು ತಡೆಹಿಡಿಯಬಹುದು ಮತ್ತು ಸೂಕ್ತವಾಗಿರುವಲ್ಲಿ ಹಾಗೂ ಸಾಧ್ಯವಿರುವಲ್ಲಿ ಖರೀದಿಗಳಿಗಾಗಿ ಜಾಹೀರಾತುದಾರರು ಅಥವಾ ವೀಕ್ಷಕರಿಗೆ ಮರುಪಾವತಿ ಮಾಡಬಹುದು. 

ಸಮುದಾಯ ಮಾರ್ಗಸೂಚಿಗಳಿಗೆ ಸಂಬಂಧಿಸಿದ ಕೊನೆಗೊಳಿಸುವಿಕೆಗಳು

ಚಾನಲ್‌ಗಳು ಅಥವಾ ಖಾತೆಗಳನ್ನು ಕೊನೆಗೊಳಿಸುವುದಕ್ಕೆ ಕಾರಣಗಳು:

  • ಯಾವುದೇ ರೀತಿಯ ಕಂಟೆಂಟ್‌ನಾದ್ಯಂತ ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳು (ಉದಾಹರಣೆಗೆ, ನಿಂದನೀಯ, ದ್ವೇಷಪೂರಿತ, ಮತ್ತು/ಅಥವಾ ಕಿರುಕುಳ ನೀಡುವ ವೀಡಿಯೊಗಳು ಅಥವಾ ಕಾಮೆಂಟ್‌ಗಳನ್ನು ಪದೇ ಪದೇ ಪೋಸ್ಟ್ ಮಾಡುವುದು)
  • ತೀವ್ರವಾದ ದುರುಪಯೋಗದ ಒಂದೇ ಪ್ರಕರಣ (ಉದಾಹರಣೆಗೆ, ಆಕ್ರಮಣಕಾರಿ ವರ್ತನೆ, ಸ್ಪ್ಯಾಮ್ ಅಥವಾ ಪೋರ್ನೋಗ್ರಫಿ)
  • ನಿಯಮಾವಳಿ ಉಲ್ಲಂಘನೆಗೆ ಮೀಸಲಾಗಿರುವುದು (ಉದಾಹರಣೆಗೆ, ದ್ವೇಷಪೂರಿತ ಮಾತು, ಕಿರುಕುಳ ಅಥವಾ ಸೋಗು ಹಾಕುವುದು)

ನಿಮ್ಮ ಚಾನಲ್/ಖಾತೆಯನ್ನು ತಪ್ಪಿನಿಂದಾಗಿ ಕೊನೆಗೊಳಿಸಲಾಗಿದೆ ಎಂದು ನೀವು ಭಾವಿಸಿದರೆ, ಈ ಫಾರ್ಮ್ ಮೂಲಕ ನೀವು ಮೇಲ್ಮನವಿಯನ್ನು ಸಲ್ಲಿಸಬಹುದು.

  • ಮೇಲ್ಮನವಿ ವಿನಂತಿಯನ್ನು ಒಂದಕ್ಕಿಂತ ಹೆಚ್ಚು ಬಾರಿ ಸಲ್ಲಿಸಬೇಡಿ. ಹಲವಾರು ವಿನಂತಿಗಳನ್ನು ಸಲ್ಲಿಸುವುದರಿಂದ ಪರಿಶೀಲಿಸಬೇಕಾದ ವಿನಂತಿಗಳ ಪ್ರಮಾಣ ಹೆಚ್ಚುತ್ತದೆ ಮತ್ತು ಇದರಿಂದ ನಾವು ಪ್ರತಿಕ್ರಿಯೆಯನ್ನು ನೀಡುವುದು ವಿಳಂಬವಾಗುತ್ತದೆ.
  • ನಿಮ್ಮ ಚಾನಲ್ ಐಡಿ ಒಳಗೊಂಡಂತೆ, ಫಾರ್ಮ್ ಅನ್ನು ಸಾಧ್ಯವಾದಷ್ಟು ಭರ್ತಿ ಮಾಡಲು ಪ್ರಯತ್ನಿಸಿ. ನೀವು ನಮಗೆ ಹೆಚ್ಚು ಮಾಹಿತಿಯನ್ನು ನೀಡಿದಷ್ಟೂ ನಿಮ್ಮ ವಿನಂತಿಯನ್ನು ಪ್ರಕ್ರಿಯೆಗೊಳಿಸುವುದು ಸುಲಭವಾಗುತ್ತದೆ.

ಕೃತಿಸ್ವಾಮ್ಯಕ್ಕೆ ಸಂಬಂಧಿಸಿದ ಕೊನೆಗೊಳಿಸುವಿಕೆಗಳು

ನಿಮ್ಮ ಚಾನಲ್ ಅನ್ನು ಕೃತಿಸ್ವಾಮ್ಯ ಉಲ್ಲಂಘನೆಯ ಕ್ಲೇಮ್‌ಗಳಿಂದಾಗಿ ಕೊನೆಗೊಳಿಸಲಾಗಿದ್ದರೆ ಮತ್ತು ಕ್ಲೇಮ್‌ಗಳು ತಪ್ಪಾಗಿವೆ ಎಂದು ನಿಮಗನಿಸಿದರೆ, ನೀವು ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದು. ಈ ಪ್ರಕ್ರಿಯೆಯು ಚಾನಲ್‌ಗಳು ಕೊನೆಗೊಂಡಿರುವ ರಚನೆಕಾರರಿಗೆ ಈಗಲೂ ಲಭ್ಯವಿರುತ್ತದೆ, ಆದರೆ ಪ್ರತಿವಾದಿ ನೋಟಿಫಿಕೇಶನ್ ವೆಬ್‌ಫಾರ್ಮ್ ಅನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಾಗುವುದಿಲ್ಲ. ನೀವು ಇಮೇಲ್, ಫ್ಯಾಕ್ಸ್ ಅಥವಾ ಪೋಸ್ಟಲ್ ಮೇಲ್ ಮೂಲಕ ಸಹ ಪ್ರತಿವಾದಿ ನೋಟಿಫಿಕೇಶನ್ ಸಲ್ಲಿಸಬಹುದು.

ಪ್ರತಿವಾದಿ ನೋಟಿಫಿಕೇಶನ್ ಕುರಿತು ಹೆಚ್ಚಿನ ಮಾಹಿತಿಗಾಗಿ, ಕೃತಿಸ್ವಾಮ್ಯ ಕೇಂದ್ರ ಎಂಬಲ್ಲಿಗೆ ಹೋಗಿ.

ಗಮನಿಸಿ: ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಿದರೆ, ಕಾನೂನು ಪ್ರಕ್ರಿಯೆ ಪ್ರಾರಂಭವಾಗುತ್ತದೆ.

ಚಾನಲ್ ಕೊನೆಗೊಳಿಸುವಿಕೆಗಳ ಸಂದರ್ಭದಲ್ಲಿ ಡೇಟಾವನ್ನು ಡೌನ್‌ಲೋಡ್ ಮಾಡುವುದು

ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾದರೆ, ನಿಮ್ಮ YouTube ಕಂಟೆಂಟ್ ಅನ್ನು ಡೌನ್‌ಲೋಡ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಆದಾಗ್ಯೂ, ನಿಮ್ಮ Google ಡೇಟಾವನ್ನು ಡೌನ್‌ಲೋಡ್ ಮಾಡುವ ಸಾಮರ್ಥ್ಯವನ್ನು ನೀವು ಉಳಿಸಿಕೊಳ್ಳುತ್ತೀರಿ. ನಿಮ್ಮ Google ಡೇಟಾವನ್ನು ಡೌನ್‌ಲೋಡ್ ಮಾಡುವುದು ಹೇಗೆಂದು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12214236142165092174
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false