YouTube ನಲ್ಲಿ ಅನುಚಿತ ವೀಡಿಯೊಗಳು, ಚಾನಲ್‌ಗಳು ಮತ್ತು ಇತರ ಕಂಟೆಂಟ್‌ನ ಕುರಿತು ವರದಿ ಮಾಡಿ

ಅವರು ಸೂಕ್ತವಲ್ಲದ ಕಂಟೆಂಟ್ ಅನ್ನು ಕಂಡುಕೊಂಡರೆ, ಅದನ್ನು ವರದಿ ಮಾಡಲು ಅಥವಾ ಫ್ಲ್ಯಾಗ್ ಮಾಡಲು ನಾವು YouTube ಸಮುದಾಯದ ಸದಸ್ಯರನ್ನು ಅವಲಂಬಿಸಿದ್ದೇವೆ. ಕಂಟೆಂಟ್ ಅನ್ನು ವರದಿ ಮಾಡುವುದು ಅನಾಮಧೇಯವಾಗಿದೆ, ಆದ್ದರಿಂದ ವರದಿ ಮಾಡಿದವರು ಯಾರು ಎಂಬುದನ್ನು ಇತರರ ಬಳಕೆದಾರರು ಹೇಳಲು ಸಾಧ್ಯವಿಲ್ಲ.

ನಾನು ಕಂಟೆಂಟ್ ಕುರಿತು ವರದಿ ಮಾಡಿದ ನಂತರ ಏನಾಗುತ್ತದೆ?

ಕಂಟೆಂಟ್ ಕುರಿತು ವರದಿ ಮಾಡಿದಾಗ, ಅದನ್ನು ಸ್ವಯಂಚಾಲಿತವಾಗಿ ಹಿಂಪಡೆಯಲಾಗುವುದಿಲ್ಲ. ವರದಿ ಮಾಡಿದ ಕಂಟೆಂಟ್ ಅನ್ನು ಈ ಮಾರ್ಗಸೂಚಿಗಳಿಗೆ ಅನುಸಾರವಾಗಿ ಪರಿಶೀಲಿಸಲಾಗುತ್ತದೆ:

ನೀವು ವರದಿ ಮಾಡಿರುವ ವೀಡಿಯೊವನ್ನು ತೆಗೆದುಹಾಕಲಾಗಿದೆಯೇ ಎಂದು ಪರಿಶೀಲಿಸಲು, ನಿಮ್ಮ ವರದಿ ಇತಿಹಾಸವನ್ನು ವೀಕ್ಷಿಸಬಹುದು.

ಕಂಟೆಂಟ್ ಕುರಿತು ವರದಿ ಮಾಡುವುದು ಹೇಗೆ

ವೀಡಿಯೊ ಕುರಿತು ವರದಿ ಮಾಡಿ

ವರದಿ ಮಾಡಿದ ವೀಡಿಯೊಗಳನ್ನು ದಿನದ 24 ಗಂಟೆಗಳು, ವಾರದ 7 ದಿನಗಳೂ YouTube ಪರಿಶೀಲಿಸುತ್ತದೆ. ವೀಡಿಯೊವನ್ನು YouTube ಗೆ ಅಪ್‌ಲೋಡ್ ಮಾಡಿದ ನಂತರ ಈ ವೀಡಿಯೊದ ಕುರಿತು ಯಾವಾಗ ಬೇಕಾದರೂ ವರದಿ ಮಾಡಬಹುದು. ಯಾವುದೇ ಉಲ್ಲಂಘನೆಗಳಾಗಿರುವ ಕುರಿತು ನಮ್ಮ ಪರಿಶೀಲನಾ ತಂಡದ ಗಮನಕ್ಕೆ ಬಾರದಿದ್ದರೆ, ಎಷ್ಟು ಬಾರಿ ವರದಿ ಮಾಡಿದರೂ ನಮ್ಮ ನಿರ್ಧಾರವು ಬದಲಾಗುವುದಿಲ್ಲ ಮತ್ತು ವೀಡಿಯೊವು ನಮ್ಮ ಸೈಟ್‌ನಲ್ಲಿ ಹಾಗೆಯೇ ಉಳಿಯುತ್ತದೆ.

  1. YouTube ಆ್ಯಪ್ ಅನ್ನು ತೆರೆಯಿರಿ.
  2. ನೀವು ವರದಿ ಮಾಡಲು ಬಯಸುವ ವೀಡಿಯೊಗೆ ಹೋಗಿ.
  3. ವೀಡಿಯೊದ ಮೇಲ್ಭಾಗದಲ್ಲಿ, ಸೆಟ್ಟಿಂಗ್‌ಗಳು  ನಂತರ ವರದಿ ಮಾಡಿ ಟ್ಯಾಪ್ ಮಾಡಿ.
  4. ವೀಡಿಯೊದಲ್ಲಿನ ಉಲ್ಲಂಘನೆಗೆ ಸೂಕ್ತವಾದ ಕಾರಣವನ್ನು ಆಯ್ಕೆಮಾಡಿ.
  5. ವರದಿ ಮಾಡಿ ಟ್ಯಾಪ್ ಮಾಡಿ.
ಗಮನಿಸಿ: ನೀವು ವರದಿ ಮಾಡುವ ವೀಡಿಯೊದ ಸ್ಥಿತಿಯನ್ನು ಪರಿಶೀಲಿಸಲು, ಕಂಪ್ಯೂಟರ್‌ನಲ್ಲಿ ನಿಮ್ಮ ವರದಿ ಇತಿಹಾಸ ಎಂಬಲ್ಲಿಗೆ ಭೇಟಿ ನೀಡಿ. ನಿಮ್ಮ ವರದಿ ಇತಿಹಾಸದ ಕುರಿತು ಇನ್ನಷ್ಟು ತಿಳಿಯಿರಿ.

Short ಕುರಿತು ವರದಿ ಮಾಡಿ

ವರದಿ ಮಾಡಿದ ವೀಡಿಯೊಗಳನ್ನು ದಿನದ 24 ಗಂಟೆಗಳು, ವಾರದ 7 ದಿನಗಳೂ YouTube ಪರಿಶೀಲಿಸುತ್ತದೆ. ವೀಡಿಯೊವನ್ನು YouTube ಗೆ ಅಪ್‌ಲೋಡ್ ಮಾಡಿದ ನಂತರ ಈ ವೀಡಿಯೊದ ಕುರಿತು ಯಾವಾಗ ಬೇಕಾದರೂ ವರದಿ ಮಾಡಬಹುದು. ಯಾವುದೇ ಉಲ್ಲಂಘನೆಗಳಾಗಿರುವ ಕುರಿತು ನಮ್ಮ ಪರಿಶೀಲನಾ ತಂಡದ ಗಮನಕ್ಕೆ ಬಾರದಿದ್ದರೆ, ಎಷ್ಟು ಬಾರಿ ವರದಿ ಮಾಡಿದರೂ ನಮ್ಮ ನಿರ್ಧಾರವು ಬದಲಾಗುವುದಿಲ್ಲ ಮತ್ತು ವೀಡಿಯೊವು ನಮ್ಮ ಸೈಟ್‌ನಲ್ಲಿ ಹಾಗೆಯೇ ಉಳಿಯುತ್ತದೆ.
ನೀವು Shorts ಪ್ಲೇಯರ್‌ನಿಂದ YouTube Shorts ಕುರಿತು ವರದಿ ಮಾಡಬಹುದು.
  1. YouTube ಗೆ ಸೈನ್ ಇನ್ ಮಾಡಿ.
  2. ನೀವು ವರದಿ ಮಾಡಲು ಬಯಸುವ Short ಗೆ ಹೋಗಿ.
  3. ಕೆಳಗಿನ ಬಲ ಮೂಲೆಯಲ್ಲಿ, ಇನ್ನಷ್ಟು 더보기 ನಂತರ ವರದಿ ಮಾಡಿ ಟ್ಯಾಪ್ ಮಾಡಿ.
  4. ವೀಡಿಯೊದಲ್ಲಿನ ಉಲ್ಲಂಘನೆಗೆ ಸೂಕ್ತವಾದ ಕಾರಣವನ್ನು ಆಯ್ಕೆಮಾಡಿ.
  5. ವರದಿ ಮಾಡಿ ಟ್ಯಾಪ್ ಮಾಡಿ.

ಗಮನಿಸಿ: ನೀವು ವರದಿ ಮಾಡುವ ವೀಡಿಯೊದ ಸ್ಥಿತಿಯನ್ನು ಪರಿಶೀಲಿಸಲು, ಕಂಪ್ಯೂಟರ್‌ನಲ್ಲಿ ನಿಮ್ಮ ವರದಿ ಇತಿಹಾಸ ಎಂಬಲ್ಲಿಗೆ ಭೇಟಿ ನೀಡಿ. ನಿಮ್ಮ ವರದಿ ಇತಿಹಾಸದ ಕುರಿತು ಇನ್ನಷ್ಟು ತಿಳಿಯಿರಿ.

ಚಾನಲ್ ಕುರಿತು ವರದಿ ಮಾಡಿ

ನೀವು ಬಳಕೆದಾರರು, ಅನುಚಿತ ಹಿನ್ನೆಲೆ ಚಿತ್ರಗಳು ಅಥವಾ ಅನುಚಿತ ಪ್ರೊಫೈಲ್ ಅವತಾರ್‌ಗಳನ್ನು ವರದಿ ಮಾಡಬಹುದು.
  1. YouTube ಆ್ಯಪ್ ಅನ್ನು ತೆರೆಯಿರಿ.
  2. ನೀವು ವರದಿ ಮಾಡಲು ಬಯಸುವ ಚಾನಲ್ ಪುಟಕ್ಕೆ ಹೋಗಿ.
  3. ಮೇಲಿನ ಬಲಭಾಗದಲ್ಲಿ, ಇನ್ನಷ್ಟು '' ನಂತರ ಬಳಕೆದಾರರ ಕುರಿತು ವರದಿ ಮಾಡಿ ಟ್ಯಾಪ್ ಮಾಡಿ.
  4. ಐಚ್ಛಿಕ: YouTube ನೀತಿಗಳನ್ನು ಉಲ್ಲಂಘಿಸುವ ನಿರ್ದಿಷ್ಟ ವೀಡಿಯೊಗಳನ್ನು ಆಯ್ಕೆಮಾಡಿ.
  5. ಮುಂದಿನದು ಟ್ಯಾಪ್ ಮಾಡಿ.
  6. ಐಚ್ಛಿಕ: ನಂತರ ತೆರೆಯುವ ವಿಂಡೋದಲ್ಲಿ ಇನ್ನಷ್ಟು ವಿವರಗಳನ್ನು ನಮೂದಿಸುವಂತೆ ನಿಮ್ಮನ್ನು ಕೇಳಬಹುದು. ನೀವು ಹಂಚಿಕೊಳ್ಳಲು ಬಯಸುವ ಇತರ ಯಾವುದೇ ವಿವರಗಳನ್ನು ನಮೂದಿಸಿ.
  7. ಸಲ್ಲಿಸಿ ಟ್ಯಾಪ್ ಮಾಡಿ.

ಗಮನಿಸಿ: ನೀವು ಚಾನಲ್ ಕುರಿತು ವರದಿ ಮಾಡಿದಾಗ, ಚಾನಲ್‌ನಲ್ಲಿರುವ ವೀಡಿಯೊಗಳನ್ನು ನಾವು ಪರಿಶೀಲಿಸುವುದಿಲ್ಲ. ಚಾನಲ್ ಕುರಿತು ಇನ್ನಷ್ಟು ಅರ್ಥಮಾಡಿಕೊಳ್ಳಲು ನಿಮ್ಮ ವರದಿಯಲ್ಲಿ ನೀವು ಲಗತ್ತಿಸಬಹುದಾದ ವೀಡಿಯೊಗಳನ್ನು ನಾವು ಬಳಸುತ್ತೇವೆ, ಆದರೆ ವೀಡಿಯೊಗಳಲ್ಲಿ ಉಲ್ಲಘನೆಯಾಗಿದೆಯೇ ಎಂದು ನಾವು ಪರಿಶೀಲಿಸುವುದಿಲ್ಲ. ನಾವು ಪರಿಶೀಲಿಸುವ ಚಾನಲ್ ಫೀಚರ್‌ಗಳು ಚಾನಲ್‌ನ ಪ್ರೊಫೈಲ್ ಫೋಟೋ, ಹ್ಯಾಂಡಲ್ ಮತ್ತು ವಿವರಣೆಯನ್ನು ಒಳಗೊಂಡಿವೆ ಆದರೆ ಕೇವಲ ಇವುಗಳಿಗೆ ಸೀಮಿತವಾಗಿಲ್ಲ. ಚಾನಲ್‌ನ ನಿರ್ದಿಷ್ಟ ವೀಡಿಯೊಗಳು ನಮ್ಮ ನೀತಿಗಳನ್ನು ಉಲ್ಲಂಘಿಸುತ್ತವೆ ಎಂದು ನಿಮಗನಿಸಿದರೆ, ನೀವು ನಿರ್ದಿಷ್ಟ ವೀಡಿಯೊಗಳನ್ನು ವರದಿ ಮಾಡಬೇಕು.

ಪ್ಲೇಪಟ್ಟಿಯ ಕುರಿತು ವರದಿ ಮಾಡಿ

ಪ್ಲೇಪಟ್ಟಿಯಲ್ಲಿರುವ ಕಂಟೆಂಟ್, ಶೀರ್ಷಿಕೆ, ವಿವರಣೆ ಅಥವಾ ಟ್ಯಾಗ್‌ಗಳು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತವೆ ಎಂದಾದರೆ ನೀವು ಆ ಕುರಿತು ವರದಿ ಮಾಡಬಹುದು.

  1. YouTube ಆ್ಯಪ್ ಅನ್ನು ತೆರೆಯಿರಿ.
  2. ನೀವು ವರದಿ ಮಾಡಲು ಬಯಸುವ ಪ್ಲೇಪಟ್ಟಿಗೆ ಹೋಗಿ.
  3. ಮೇಲಿನ ಬಲಭಾಗದಲ್ಲಿ, ಇನ್ನಷ್ಟು '' ನಂತರ ಪ್ಲೇಪಟ್ಟಿಯ ಕುರಿತು ವರದಿ ಮಾಡಿ ನಂತರ ವರದಿ ಮಾಡಿ ಟ್ಯಾಪ್ ಮಾಡಿ.

ಥಂಬ್‌ನೇಲ್ ಕುರಿತು ವರದಿ ಮಾಡಿ

ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವಂತಹ ವೀಡಿಯೊ ಥಂಬ್‌ನೇಲ್ ಕುರಿತು ನೀವು ವರದಿ ಮಾಡಬಹುದು.

  1. YouTube ಆ್ಯಪ್ ಅನ್ನು ತೆರೆಯಿರಿ.
  2. ನಿಮ್ಮ ಮುಖಪುಟದಲ್ಲಿ, ಸಲಹೆಯಾಗಿ ನೀಡಲಾದ ವೀಡಿಯೊಗಳಲ್ಲಿ ಅಥವಾ ಹುಡುಕಾಟ ಫಲಿತಾಂಶಗಳಲ್ಲಿ ನೀವು ವರದಿ ಮಾಡಲು ಬಯಸುವ ವೀಡಿಯೊಗೆ ಹೋಗಿ. ನೀವು ವೀಡಿಯೊದ ವೀಕ್ಷಣಾ ಪುಟದಿಂದ ಥಂಬ್‌ನೇಲ್ ಅನ್ನು ವರದಿ ಮಾಡಲು ಸಾಧ್ಯವಿಲ್ಲ.
  3. ಥಂಬ್‌ನೇಲ್ ಕೆಳಗೆ ಇನ್ನಷ್ಟು '' ನಂತರ ವರದಿ ಮಾಡಿ ಟ್ಯಾಪ್ ಮಾಡಿ.
  4. ನೀವು ಥಂಬ್‌ನೇಲ್ ಕುರಿತು ವರದಿ ಮಾಡುತ್ತಿರುವುದಕ್ಕೆ ಸೂಕ್ತವೆನಿಸುವ ಕಾರಣವನ್ನು ಆಯ್ಕೆಮಾಡಿ.
  5. ವರದಿ ಮಾಡಿ ಟ್ಯಾಪ್ ಮಾಡಿ.

ಕಾಮೆಂಟ್ ಕುರಿತು ವರದಿ ಮಾಡಿ

ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವಂತಹ ಕಾಮೆಂಟ್ ಕುರಿತು ನೀವು ವರದಿ ಮಾಡಬಹುದು.

  1. YouTube ಆ್ಯಪ್ ಅನ್ನು ತೆರೆಯಿರಿ.
  2. ನೀವು ವರದಿ ಮಾಡಲು ಬಯಸುವ ಕಾಮೆಂಟ್‌ಗೆ ಹೋಗಿ.
  3. ಇನ್ನಷ್ಟು  '' ನಂತರ ವರದಿ ಮಾಡಿ ಟ್ಯಾಪ್ ಮಾಡಿ.
  4. ನೀವು ಕಂಟೆಂಟ್ ಕುರಿತು ವರದಿ ಮಾಡುತ್ತಿರುವುದಕ್ಕೆ ಸೂಕ್ತವಾದ ಕಾರಣವನ್ನು ಆಯ್ಕೆಮಾಡಿ.
  5. ವರದಿ ಮಾಡಿ ಟ್ಯಾಪ್ ಮಾಡಿ.
  6. ಐಚ್ಛಿಕ: ರಚನೆಕಾರರಾಗಿ, ನೀವು ಕಾಮೆಂಟ್ ಕುರಿತು ವರದಿ ಮಾಡಿದ ನಂತರ, ನಿಮ್ಮ ಚಾನಲ್‌ನಲ್ಲಿ ಆ ವ್ಯಕ್ತಿಯು ಮಾಡುವ ಕಾಮೆಂಟ್‌ಗಳನ್ನು ತೋರಿಸದಂತೆ ತಡೆಯಬಹುದು. ನನ್ನ ಚಾನಲ್‌ನಲ್ಲಿ ಬಳಕೆದಾರರನ್ನು ಮರೆಮಾಡಿ ನಂತರ ಪಕ್ಕದಲ್ಲಿ ಕಾಣಿಸುವ ಬಾಕ್ಸ್ ಅನ್ನು ಗುರುತು ಮಾಡಿ, ಸರಿ ಕ್ಲಿಕ್ ಮಾಡಿ.

ನನ್ನ ಕಾಮೆಂಟ್ ಅನ್ನು ಸ್ಪ್ಯಾಮ್ ಎಂದು ಗುರುತಿಸಿರುವುದು ತಪ್ಪು ನಿರ್ಧಾರವಾಗಿದೆ

ನಿಮ್ಮ ಕಾಮೆಂಟ್ ಅನ್ನು ಸ್ಪ್ಯಾಮ್ ಎಂದು ಗುರುತಿಸಿರುವ ನಿರ್ಧಾರವು ತಪ್ಪು ಎಂಬುದಾಗಿ ನೀವು ಭಾವಿಸಿದರೆ, ನೀವು ಅಪ್‌ಲೋಡರ್ ಅನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ಕಾಮೆಂಟ್ ಅನ್ನು ಮರುಸ್ಥಾಪಿಸುವಂತೆ ಕೇಳಿಕೊಳ್ಳಬಹುದು.

ಲೈವ್ ಚಾಟ್ ಸಂದೇಶದ ಕುರಿತು ವರದಿ ಮಾಡಿ

ಲೈವ್ ಸ್ಟ್ರೀಮ್‌ಗಳಲ್ಲಿ ಕಳುಹಿಸುವ ಅನುಚಿತ ಸಂದೇಶಗಳ ಕುರಿತು ಸಮುದಾಯದ ಸದಸ್ಯರು ವರದಿ ಮಾಡಬಹುದು.

  1. YouTube ಆ್ಯಪ್ ಅನ್ನು ತೆರೆಯಿರಿ.
  2. ನೀವು ವರದಿ ಮಾಡಲು ಬಯಸುವ ಸಂದೇಶವನ್ನು ಹೊಂದಿರುವ ಲೈವ್ ಸ್ಟ್ರೀಮ್‌ಗೆ ಹೋಗಿ.
  3. ಸಂದೇಶ ನಂತರ ವರದಿ ಮಾಡಿ ಟ್ಯಾಪ್ ಮಾಡಿ.
  4. ನೀವು ಸಂದೇಶದ ಕುರಿತು ವರದಿ ಮಾಡುತ್ತಿರುವುದಕ್ಕೆ ಸೂಕ್ತವಾದ ಕಾರಣವನ್ನು ಆಯ್ಕೆಮಾಡಿ.
  5. ವರದಿ ಮಾಡಿ ಟ್ಯಾಪ್ ಮಾಡಿ.
ಜಾಹೀರಾತಿನ ಕುರಿತು ವರದಿ ಮಾಡಿ

ಅನುಚಿತವಾದ ಅಥವಾ Google ಜಾಹೀರಾತು ನೀತಿಗಳನ್ನು ಉಲ್ಲಂಘಿಸುವ ಜಾಹೀರಾತು ನಿಮ್ಮ ಗಮನಕ್ಕೆ ಬಂದರೆ, ನೀವು ಅದರ ಕುರಿತು ವರದಿ ಮಾಡಬಹುದು. ಈ ಫಾರ್ಮ್ ಭರ್ತಿ ಮಾಡಿ ಮತ್ತು ಸಲ್ಲಿಸಿ.

ವೀಡಿಯೊದಿಂದ ಜಾಹೀರಾತಿನ ಕುರಿತು ವರದಿ ಮಾಡಲು:

  1. ಜಾಹೀರಾತಿನಲ್ಲಿ ಮಾಹಿತಿ ಕ್ಲಿಕ್ ಮಾಡಿ.
  2. ಜಾಹೀರಾತನ್ನು ವರದಿಮಾಡಿ ಎಂಬುದನ್ನು ಆಯ್ಕೆಮಾಡಿ.
  3. ಫಾರ್ಮ್ ಭರ್ತಿ ಮಾಡಿ ಮತ್ತು ಸಲ್ಲಿಸಿ. ನಮ್ಮ ತಂಡವು ನಿಮ್ಮ ಜಾಹೀರಾತು ಸಂಬಂಧಿತ ವರದಿಯನ್ನು ಪರಿಶೀಲಿಸುತ್ತದೆ ಮತ್ತು ಅಗತ್ಯವೆನಿಸಿದರೆ, ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತದೆ.

ಸೂಚನೆ: ನೀವು YouTube ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಮಾತ್ರ ಜಾಹೀರಾತುಗಳ ಕುರಿತು ವರದಿ ಮಾಡಬಹುದು.

ನಿಮ್ಮ ಟಿವಿಯಿಂದ YouTube ನಲ್ಲಿ ಕಂಟೆಂಟ್ ಕುರಿತು ವರದಿ ಮಾಡಿ

ನೀವು YouTube TV ಆ್ಯಪ್‌ನಿಂದ ನೇರವಾಗಿ ವೀಡಿಯೊವನ್ನು ವರದಿ ಮಾಡಬಹುದು.

  1. YouTube ಆ್ಯಪ್ ತೆರೆಯಿರಿ.
  2. ನೀವು ವರದಿ ಮಾಡಲು ಬಯಸುವ ವೀಡಿಯೊಗೆ ಹೋಗಿ.
  3. ಸೆಟ್ಟಿಂಗ್‌ಗಳು  ನಂತರ ವರದಿ ಮಾಡಿ ಎಂಬಲ್ಲಿಗೆ ಹೋಗಿ. 
  4. ನೀವು ವೀಡಿಯೊವನ್ನು ಏಕೆ ವರದಿ ಮಾಡಲು ಬಯಸುತ್ತೀರಿ ಎಂಬ ಕಾರಣವನ್ನು ಆಯ್ಕೆಮಾಡಿ.
  5. ನೀವು ಕಾರಣವನ್ನು ಆಯ್ಕೆ ಮಾಡಿದ ನಂತರ, ಒಂದು ದೃಢೀಕರಣ ಸಂದೇಶವು ಕಾಣಿಸುತ್ತದೆ.

ವರದಿ ಮಾಡುವುದಕ್ಕೆ ಸಂಬಂಧಿಸಿದ ಇತರ ಆಯ್ಕೆಗಳು

ವರದಿ ಮಾಡುವ ಪ್ರಕ್ರಿಯೆಯು ನಿಮ್ಮ ಸಮಸ್ಯೆಯನ್ನು ನಿಖರವಾಗಿ ಕ್ಯಾಪ್ಚರ್ ಮಾಡದಿದ್ದರೆ, ನೀವು ಬಳಸಬಹುದಾದ ಇತರ ವರದಿ ಮಾಡುವ ಕಾರ್ಯವಿಧಾನಗಳನ್ನು ಹೊಂದಿದ್ದೇವೆ.

ಗೌಪ್ಯತೆ ವರದಿ ಮಾಡುವಿಕೆ

ಗೌಪ್ಯತಾ ದೂರನ್ನು ಸಲ್ಲಿಸಲು, ಗೌಪ್ಯತೆ ದೂರು ಪ್ರಕ್ರಿಯೆಯನ್ನು ಪ್ರಾರಂಭಿಸಿ. ಪ್ರಕ್ರಿಯೆಯಲ್ಲಿ ನಿಮ್ಮ ಗೌಪ್ಯತೆಯನ್ನು ಯಾವಾಗಲೂ ಗೌರವಿಸಲಾಗುತ್ತದೆ.
ಕಾನೂನು ವರದಿ ಮಾಡುವಿಕೆ
ನಿಮ್ಮ ಪರವಾಗಿ ಅಥವಾ ನಿಮ್ಮ ಕ್ಲೈಂಟ್ ಪರವಾಗಿ ಕಾನೂನು ಸಮಸ್ಯೆಯನ್ನು ವರದಿ ಮಾಡಲು:
  1. ನೀವು ವರದಿ ಮಾಡಲು ಬಯಸುವ ವೀಡಿಯೊಗೆ ಹೋಗಿ. 
  2. ವೀಡಿಯೊದ ಅಡಿಯಲ್ಲಿ, ಇನ್ನಷ್ಟು  ನಂತರ ವರದಿ ಮಾಡಿ ಕ್ಲಿಕ್ ಮಾಡಿ.
  3. ಕಾಣಿಸುವ ಪಟ್ಟಿಯಲ್ಲಿ, ನನ್ನ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಕ್ಲಿಕ್ ಮಾಡಿ. 
  4. ಡ್ರಾಪ್-ಡೌನ್ ಮೆನುವಿನಲ್ಲಿ, ಸಂಬಂಧಿತ ಸಮಸ್ಯೆಯನ್ನು ಆಯ್ಕೆಮಾಡಿ. ನಿಮ್ಮ ಸಮಸ್ಯೆಯನ್ನು ಕ್ಯಾಪ್ಚರ್ ಮಾಡಿಲ್ಲದಿದ್ದರೆ, ಇತರ ಕಾನೂನು ಸಮಸ್ಯೆ ಕ್ಲಿಕ್ ಮಾಡಿ. 
  5. ಕೆಳಭಾಗದಲ್ಲಿ, ಮುಂದಿನದು ಕ್ಲಿಕ್ ಮಾಡಿ.
  6. ಫಾರ್ಮ್ ಭರ್ತಿ ಮಾಡಿ ಮತ್ತು ಅದನ್ನು ಸಲ್ಲಿಸಿ. 
ನಿಮ್ಮ ಕ್ಲೈಮ್ ಅನ್ನು ವಿಚಾರಣೆ ನಡೆಸಲು ನಮ್ಮ ಸಾಮರ್ಥ್ಯವನ್ನು ಚುರುಕುಗೊಳಿಸುವ ಸಲುವಾಗಿ, ಫ್ಯಾಕ್ಸ್ ಅಥವಾ ಪೋಸ್ಟ್ ಬದಲಿಗೆ ನಮ್ಮ ವೆಬ್‌ಫಾರ್ಮ್ ಅನ್ನು ಬಳಸಿಕೊಂಡು ನಿಮ್ಮ ಕ್ಲೈಮ್ ಅನ್ನು ಸಲ್ಲಿಸುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.
ನೆನಪಿರಲಿ, ನಮ್ಮ ಕಾನೂನು ಫಾರ್ಮ್‌ಗಳನ್ನು ದುರುಪಯೋಗಪಡಿಸಿಕೊಳ್ಳುವುದು ನಿಮ್ಮ Google ಖಾತೆಯನ್ನು ಕೊನೆಗೊಳಿಸಲು ಕಾರಣವಾಗಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9685607955213216484
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false