ನಿಮ್ಮ ಗುರುತನ್ನು ರಕ್ಷಿಸುವುದು

ನೀವು YouTube ನಲ್ಲಿ ಸುರಕ್ಷಿತರಾಗಿದ್ದೀರಿ ಎಂಬ ಭಾವನೆಯನ್ನು ನಾವು ನಿಮ್ಮಲ್ಲಿ ಮೂಡಿಸಲು ಬಯಸುತ್ತೇವೆ, ಆದ್ದರಿಂದಲೇ ಸೈಟ್‌ನಲ್ಲಿರುವ ವೀಡಿಯೊಗಳು ಅಥವಾ ಟೀಕೆಗಳು ನಿಮ್ಮ ಗೌಪ್ಯತೆಯನ್ನು ಅಥವಾ ಭದ್ರತಾ ಅರಿವನ್ನು ಭಂಗಪಡಿಸುತ್ತಿದೆಯೇ ಎಂಬುದನ್ನು ನೀವು ನಮಗೆ ತಿಳಿಸುವಂತೆ ನಾವು ನಿಮ್ಮನ್ನು ಪ್ರೊತ್ಸಾಹಿಸುತ್ತೇವೆ.

ನಿಮ್ಮ ಅರಿವಿಲ್ಲದೆ ಯಾರೋ ಒಬ್ಬರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪೋಸ್ಟ್ ಮಾಡಿದ್ದರೆ ಅಥವಾ ನಿಮ್ಮ ವೀಡಿಯೊವೊಂದನ್ನು ಅಪ್‌ಲೋಡ್ ಮಾಡಿದ್ದರೆ (ಖಾಸಗಿ ಅಥವಾ ಸೂಕ್ಷ್ಮ ಸನ್ನಿವೇಶಗಳನ್ನು ಒಳಗೊಂಡು) ಕಂಟೆಂಟ್ ಅನ್ನು ತೆಗೆದುಹಾಕಲು ಅಪ್‌ಲೋಡ್‌ ಮಾಡಿದವರಿಗೆ ಹೇಳಿ. ಅಪ್‌ಲೋಡ್ ಮಾಡಿದವರೊಂದಿಗೆ ನಿಮಗೆ ಒಪ್ಪಂದಕ್ಕೆ ಬರಲು ಸಾಧ್ಯವಿಲ್ಲ ಎಂದಾದರೆ, ಅಥವಾ ಅವರನ್ನು ಸಂಪರ್ಕಿಸುವಲ್ಲಿ ನಿಮಗೆ ಸಮಸ್ಯೆ ಕಂಡುಬಂದರೆ, ನಮ್ಮ ಗೌಪ್ಯತೆ ಮಾರ್ಗಸೂಚಿಗಳ ಆಧಾರದ ಮೇಲೆ ಆ ಕಂಟೆಂಟ್‌ ಅನ್ನು ತೆಗೆದುಹಾಕಲು ವಿನಂತಿಸುವುದಕ್ಕಾಗಿ ಗೌಪ್ಯತೆ ದೂರು ಪ್ರಕ್ರಿಯೆಯನ್ನು ನೀವು ಅನುಸರಿಸಬಹುದು. 

ನಿಮ್ಮ ಹಾಗೆ ಕಾಣುವ ಅಥವಾ ಧ್ವನಿಸುವ AI-ಜನರೇಟೆಡ್ ಅಥವಾ ಇತರ ಸಿಂಥೆಟಿಕ್ ಕಂಟೆಂಟ್ ಅನ್ನು ವರದಿ ಮಾಡಿ: ನಿಮ್ಮ ಹಾಗೆ ಕಾಣುವ ಅಥವಾ ಧ್ವನಿಸುವ ಕಂಟೆಂಟ್ ಅನ್ನು ಮಾರ್ಪಡಿಸಲು ಅಥವಾ ರಚಿಸಲು ಯಾರಾದರೂ AI ಅನ್ನು ಬಳಸಿದ್ದರೆ, ನೀವು ಆ ಕಂಟೆಂಟ್ ಅನ್ನು ತೆಗೆದುಹಾಕಲು ವಿನಂತಿಸಬಹುದು. ತೆಗೆದುಹಾಕುವಿಕೆಗೆ ಅರ್ಹವಾಗಲು, ನಿಮ್ಮ ಹೋಲಿಕೆಯಿರುವ ವಾಸ್ತವಿಕವಾದ, ಮಾರ್ಪಡಿಸಿದ ಅಥವಾ ಸಿಂಥೆಟಿಕ್ ಆವೃತ್ತಿಯನ್ನು ಕಂಟೆಂಟ್ ಪ್ರದರ್ಶಿಸಬೇಕು. ದೂರನ್ನು ಮೌಲ್ಯಮಾಪನ ಮಾಡುವಾಗ ನಾವು ಈ ಕೆಳಗಿನಂತಹ ವಿವಿಧ ಅಂಶಗಳನ್ನು ಪರಿಗಣಿಸುತ್ತೇವೆ:

  • ಕಂಟೆಂಟ್ ಅನ್ನು ಮಾರ್ಪಡಿಸಲಾಗಿದೆಯೇ ಅಥವಾ ಅದು ಸಿಂಥೆಟಿಕ್ ಆಗಿದೆಯೇ
  • ವ್ಯಕ್ತಿಯನ್ನು ಅನನ್ಯವಾಗಿ ಗುರುತಿಸಬಹುದೇ
  • ಕಂಟೆಂಟ್ ವಾಸ್ತವಿಕವಾಗಿದೆಯೇ 
  • ಕಂಟೆಂಟ್‌ನಲ್ಲಿ ವಿಡಂಬನೆ, ವ್ಯಂಗ್ಯ ಅಥವಾ ಇತರ ಸಾರ್ವಜನಿಕ ಹಿತಾಸಕ್ತಿಯ ಮೌಲ್ಯವಿದೆಯೇ.
  • ಸಾರ್ವಜನಿಕ ವ್ಯಕ್ತಿಯೊಬ್ಬರು ಅಥವಾ ಖ್ಯಾತ ವ್ಯಕ್ತಿಯೊಬ್ಬರು ಕ್ರಿಮಿನಲ್ ಚಟುವಟಿಕೆ, ಹಿಂಸೆ, ಅಥವಾ ಒಂದು ಉತ್ಪನ್ನ ಅಥವಾ ರಾಜಕೀಯ ಅಭ್ಯರ್ಥಿಯನ್ನು ಅನುಮೋದಿಸುವಂತಹ ಸೂಕ್ಷ್ಮ ವರ್ತನೆಯಲ್ಲಿ ತೊಡಗಿಸಿಕೊಂಡಿರುವುದನ್ನು ಕಂಟೆಂಟ್ ತೋರಿಸುತ್ತದೆಯೇ

ವರದಿಯನ್ನು ಪ್ರಾರಂಭಿಸಲು, ಮಾರ್ಪಡಿಸಿದ ಅಥವಾ ಸಿಂಥೆಟಿಕ್ ಕಂಟೆಂಟ್‌ಗಾಗಿ ಗೌಪ್ಯತೆ ದೂರು ಪ್ರಕ್ರಿಯೆಯನ್ನು ಅನುಸರಿಸಿ. ಮಾರ್ಪಡಿಸಿದ ಅಥವಾ ಸಿಂಥೆಟಿಕ್ ಕಂಟೆಂಟ್ ಲೇಬಲ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.

ಕಂಟೆಂಟ್ ತೆಗೆದುಹಾಕುವಿಕೆಗಾಗಿ ಮಾನದಂಡಗಳು

ನಮ್ಮ ಗೌಪ್ಯತೆ ಮಾರ್ಗಸೂಚಿಗಳು ನಮ್ಮ ಗೌಪ್ಯತೆ ದೂರು ಪ್ರಕ್ರಿಯೆಯ ವಿವರವಾದ ವಿವರಣೆಗಳನ್ನು ನೀಡುತ್ತವೆ. ಗೌಪ್ಯತೆ ಕ್ಲೇಮ್‌ಗಳ ಮೌಲ್ಯಮಾಪನ ಮಾಡುವಾಗ ನಾವು ಪರಿಗಣಿಸುವ ಅಂಶಗಳನ್ನು ಸಹ ಇದು ವಿವರಿಸುತ್ತದೆ.

ಕಂಟೆಂಟ್ ಅನ್ನು ತೆಗೆದುಹಾಕುವಿಕೆಗಾಗಿ ಪರಿಗಣಿಸಲು, ದೂರನ್ನು ಸಲ್ಲಿಸುವ ವ್ಯಕ್ತಿಯನ್ನು ಅನನ್ಯವಾಗಿ ಗುರುತಿಸಲು ಸಾಧ್ಯವಾಗಬೇಕು ಹಾಗೂ ಆ ವ್ಯಕ್ತಿ, ಅಥವಾ ಅವರ ಕಾನೂನು ಪ್ರತಿನಿಧಿ, ದೂರನ್ನು ಸಲ್ಲಿಸತಕ್ಕದ್ದು. ನೀವು ಗೌಪ್ಯತೆ ದೂರು ಪ್ರಕ್ರಿಯೆಯನ್ನು ಬಳಸಲು ಬಯಸಿದರೆ, ಗೌಪ್ಯತೆ ದೂರು ಪ್ರಕ್ರಿಯೆಯನ್ನು ಬಳಸುವಾಗ ಕಂಟೆಂಟ್‌ನಲ್ಲಿ ನಿಮ್ಮನ್ನು ಅನನ್ಯವಾಗಿ ಗುರುತಿಸಲು ಸಾಧ್ಯವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಬ್ಬ ವ್ಯಕ್ತಿಯು ಅನನ್ಯವಾಗಿ ಗುರುತಿಸುವಂತಿದ್ದಾರೆಯೇ ಎಂದು ಪರೀಕ್ಷಿಸಲು, ನಾವು ಈ ಅಂಶಗಳನ್ನು ಪರಿಗಣಿಸುತ್ತೇವೆ:

  • ಚಿತ್ರ ಅಥವಾ ಧ್ವನಿ
  • ಪೂರ್ಣ ಹೆಸರು
  • ಹಣಕಾಸು ಮಾಹಿತಿ
  • ಸಂಪರ್ಕ ಮಾಹಿತಿ
  • ಇತರ ವೈಯಕ್ತಿಕವಾಗಿ ಗುರುತಿಸಬಲ್ಲಂತಹ ಮಾಹಿತಿ

ನೀವು ಒಂದು ಗೌಪ್ಯತೆ ದೂರನ್ನು ವರದಿ ಮಾಡಿದಾಗ, ನಾವು ಸಾರ್ವಜನಿಕ ಹಿತಾಸಕ್ತಿ, ಸುದ್ದಿಯ ಮಹತ್ವ, ಮತ್ತು ಸಮ್ಮತಿಯನ್ನು ನಮ್ಮ ಅಂತಿಮ ತೀರ್ಮಾನದಲ್ಲಿ ಅಂಶಗಳಂತೆ ಪರಿಗಣಿಸುವುದಲ್ಲದೆ ಆ ವೀಡಿಯೊಗಳು ಒಬ್ಬ ವ್ಯಕ್ತಿಯ ಸಾವಿನ ಕ್ಷಣ ಅಥವಾ ತೀವ್ರ ದೈಹಿಕ ಹಾನಿಯನ್ನು ಪ್ರದರ್ಶಿಸುತ್ತಿವೆಯೇ ಎಂಬುದನ್ನು ಸಹ ಪರಿಗಣಿಸುತ್ತದೆ.

ಮರಣಹೊಂದಿರುವ ಬಳಕೆದಾರರ ಗೌಪ್ಯತೆ ಮತ್ತು ನೆನಪನ್ನು ಗೌರವಿಸಲು, ನಾವು ಒಬ್ಬ ವ್ಯಕ್ತಿಯ ಸಾವಿನ ಪರಿಶೀಲನೆಯ ನಂತರ ಅವರ ನಿಕಟ ಕುಟುಂಬ ಸದಸ್ಯರ ಅಥವಾ ಕಾನೂನು ಪ್ರತಿನಿಧಿಗಳ ವಿನಂತಿಗಳನ್ನು ಪರಿಶೀಲಿಸುತ್ತೇವೆ.

ನಿಮ್ಮ ಗೌಪ್ಯತೆಯನ್ನು YouTube ನಲ್ಲಿ ಹೇಗೆ ರಕ್ಷಿಸುವುದು ಎಂಬುದರ ಕುರಿತು ಟಿಪ್ಸ್:

  • ವೈಯಕ್ತಿಕ ಮಾಹಿತಿ ಪೋಸ್ಟ್ ಮಾಡುವ ಮೊದಲು ಚೆನ್ನಾಗಿ ಯೋಚಿಸಿ. ಇದರಲ್ಲಿ ನೀವು ವಾಸಿಸುತ್ತಿರುವ ಪಟ್ಟಣ, ನೀವು ಹೋಗುವ ಶಾಲೆ, ಮತ್ತು ನಿಮ್ಮ ಮನೆ ವಿಳಾಸದಂತಹ ಉದಾಹರಣೆಗಳು ಸೇರಿವೆ.
  • ನಿಮ್ಮ ಖಾತೆಯ ಡೇಟಾವನ್ನು ರಕ್ಷಿಸಿಕೊಳ್ಳಿ ಮತ್ತು ಇತರರೊಂದಿಗೆ ನಿಮ್ಮ ಪಾಸ್‌ವರ್ಡ್ ಅನ್ನು ಹಂಚಬೇಡಿ. YouTube ಉದ್ಯೋಗಿಗಳು ನಿಮ್ಮಲ್ಲಿ ಎಂದಿಗೂ ನಿಮ್ಮ ಪಾಸ್‌ವರ್ಡ್ ಅನ್ನು ಕೇಳುವುದಿಲ್ಲ. ಯಾರಾದರೂ ಅವರು YouTube ನವರು ಎಂದು ನಿಮ್ಮ ಮುಂದೆ ನಟನೆ ಮಾಡಿ ನಿಮ್ಮನ್ನು ಸಂಪರ್ಕಿಸಿದರೆ ಮೋಸ ಹೋಗಬೇಡಿ.
  • ಮೊಟ್ಟಮೊದಲು ಅನುಮತಿ ಪಡೆಯಿರಿ. ಇತರ ಜನರನ್ನು ಚಿತ್ರೀಕರಿಸುವ ಅಥವಾ ಅವರ ವೈಯಕ್ತಿಕ ಮಾಹಿತಿಯನ್ನು ಪೋಸ್ಟ್ ಮಾಡುವ ಮೊದಲು ಅವರ ಅನುಮತಿ ಪಡೆಯಿರಿ.
  • ನಮ್ಮ ಗೌಪ್ಯತೆ ಮತ್ತು ಸುರಕ್ಷತೆ ಸೆಟ್ಟಿಂಗ್‌ಗಳು ಪುಟಕ್ಕೆ ಭೇಟಿ ನೀಡಿ ಹಾಗೂ ಸೈಟ್‌ನಲ್ಲಿ ನಿಮ್ಮ ಕಂಟೆಂಟ್ ಮತ್ತು ನಿಮ್ಮ ಅನುಭವವನ್ನು ನಿರ್ವಹಿಸಲು ನೀವು ಬಳಸಬಹುದಾದ ಟೂಲ್‌ಗಳ ಪಟ್ಟಿಯನ್ನು ಪಡೆಯಿರಿ.
  • ನಿಮ್ಮ Google ಖಾತೆಯನ್ನು ಸುರಕ್ಷಿತಗೊಳಿಸಲು ಅನುಸರಿಸಬಹುದಾದ ಉತ್ತಮ ಅಭ್ಯಾಸಗಳನ್ನು ಪರಿಶೀಲಿಸಿ.
  • ನಿಮ್ಮ Google ಖಾತೆಗಾಗಿ ಪ್ರಬಲ ಭದ್ರತೆ: 2-ಹಂತದ ಪರಿಶೀಲನೆ ಮೂಲಕ ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1136945448159136688
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false