ಕೃತಿಸ್ವಾಮ್ಯದ ಕುರಿತು ಪದೇಪದೇ ಕೇಳಲಾಗುವ ಪ್ರಶ್ನೆಗಳು

ಈ ವೀಡಿಯೊದಲ್ಲಿ ಕೃತಿಸ್ವಾಮ್ಯದ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ನಾವು ಉತ್ತರಿಸಿದ್ದೇವೆ:

Copyright Permissions - Copyright on YouTube

ಸಾಮಾನ್ಯ ಕೃತಿಸ್ವಾಮ್ಯ ಪ್ರಶ್ನೆಗಳು

ನ್ಯಾಯಯುತ ಬಳಕೆ ಎಂದರೇನು?

ನ್ಯಾಯಯುತ ಬಳಕೆ ಎಂದರೆ, ಕೃತಿಸ್ವಾಮ್ಯ-ಸಂರಕ್ಷಿತ ವಿಷಯವನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ, ಕೃತಿಸ್ವಾಮ್ಯ ಮಾಲೀಕರ ಅನುಮತಿ ಇಲ್ಲದೆಯೇ ನೀವು ಮರುಬಳಕೆ ಮಾಡಬಹುದೆಂದು ಹೇಳುವ ಕಾನೂನು ಸಿದ್ಧಾಂತವಾಗಿದೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಯಾವುದು ನ್ಯಾಯಯುತ ಬಳಕೆ ಆಗಿ ಅರ್ಹತೆ ಪಡೆಯುತ್ತದೆ ಎಂಬುದನ್ನು ನ್ಯಾಯಾಲಯ ಮಾತ್ರ ನಿರ್ಧರಿಸುತ್ತದೆ.

ಪ್ರತಿ ಸಂದರ್ಭಕ್ಕೆ ಅನುಸಾರವಾಗಿ ನಿರ್ದಿಷ್ಟ ಅಂಶಗಳನ್ನು ಆಧರಿಸಿ ನ್ಯಾಯಯುತ ಬಳಕೆಯನ್ನು ನಿರ್ಧರಿಸಲು ನ್ಯಾಯಾಲಯಗಳು ನಾಲ್ಕು ಅಂಶಗಳ ಮೇಲೆ ಅವಲಂಬಿಸಿವೆ, ಅವುಗಳು ಈ ಕೆಳಗಿನ ಅಂಶಗಳನ್ನು ಒಳಗೊಂಡಿವೆ:

  • ಬಳಕೆಯ ಉದ್ದೇಶ ಮತ್ತು ಸ್ವರೂಪ
  • ಕೃತಿಸ್ವಾಮ್ಯಕ್ಕೊಳಪಟ್ಟಿರುವ ಕೃತಿಯ ಸ್ವರೂಪ
  • ಬಳಸಲಾದ ಕೃತಿಸ್ವಾಮ್ಯಕ್ಕೊಳಪಟ್ಟಿರುವ ಕೃತಿಯ ಪ್ರಮಾಣ ಮತ್ತು ಗಣನೀಯತೆ
  • ಕೃತಿಸ್ವಾಮ್ಯಕ್ಕೆ ಒಳಪಟ್ಟ ಕೃತಿಗಾಗಿ ಸಂಭಾವ್ಯ ಮಾರುಕಟ್ಟೆ ಅಥವಾ ಮೌಲ್ಯದ ಮೇಲೆ ಆಗುವ ಪರಿಣಾಮ

ನಮ್ಮ ನ್ಯಾಯಯುತ ಬಳಕೆ FAQ ಇದರಲ್ಲಿ ಇನ್ನಷ್ಟು ತಿಳಿಯಿರಿ.

ಸಾರ್ವಜನಿಕ ಡೊಮೇನ್ ಎಂದರೇನು?

ಕೃತಿಗಳು ಕಾಲಕ್ರಮೇಣ ಅವುಗಳ ಕೃತಿಸ್ವಾಮ್ಯ ರಕ್ಷಣೆಯನ್ನು ಕಳೆದುಕೊಳ್ಳುತ್ತವೆ ಮತ್ತು “ಸಾರ್ವಜನಿಕ ಡೊಮೇನ್” ವ್ಯಾಪ್ತಿಗೆ ಬರುತ್ತವೆ. ಈ ಮೂಲಕ ಅವುಗಳನ್ನು ಪ್ರತಿಯೊಬ್ಬರೂ ಶುಲ್ಕವಿಲ್ಲದೇ ಬಳಸಲು ಸಾಧ್ಯವಾಗುತ್ತದೆ. ಕೃತಿಗಳು ಸಾರ್ವಜನಿಕ ಡೊಮೇನ್ ವ್ಯಾಪ್ತಿಗೆ ಬರಲು ಇದು ಸಾಮಾನ್ಯವಾಗಿ ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತದೆ.

ಇಲ್ಲಿ ಹೇಳಲಾದ ಅಂಶಗಳನ್ನು ಆಧರಿಸಿ ಕೃತಿಸ್ವಾಮ್ಯ ಸಂರಕ್ಷಣೆಯ ಕಾಲಾವಧಿಯು ಬದಲಾಗುತ್ತದೆ:

  • ಕೃತಿಯು ಎಲ್ಲಿ ಮತ್ತು ಯಾವಾಗ ಪ್ರಕಟವಾಗಿದೆ
  • ಕೃತಿಯನ್ನು ವರ್ಕ್ ಫಾರ್ ಹೈರ್ ಎಂದು ನಿಯೋಜಿಸಲಾಗಿತ್ತೆ

U.S. ಒಕ್ಕೂಟ ಸರ್ಕಾರದ ಏಜೆನ್ಸಿಗಳು ರಚಿಸಿರುವ ಕೆಲವು ಕೃತಿಗಳು ಪ್ರಕಟಣೆಯ ನಂತರ ಕೂಡಲೇ ಸಾರ್ವಜನಿಕ ಡೊಮೇನ್‌ಗೆ ಸೇರ್ಪಡೆಗೊಳ್ಳುತ್ತವೆ. ಸಾರ್ವಜನಿಕ ಡೊಮೇನ್‌ಗೆ ಇರುವ ನಿಯಮಗಳು ದೇಶಗಳ ನಡುವೆ ಬದಲಾಗುತ್ತವೆ ಎಂಬುದನ್ನು ನೆನಪಿಡಿ.

ನೀವು ಕೃತಿಯೊಂದನ್ನು YouTube ಗೆ ಅಪ್‌ಲೋಡ್ ಮಾಡುವ ಮೊದಲು ಅದು ಸಾರ್ವಜನಿಕ ಡೊಮೇನ್‌ನಲ್ಲಿದೆಯೇ ಎಂಬುದನ್ನು ಪರಿಶೀಲಿಸುವ ಜವಾಬ್ದಾರಿ ನಿಮ್ಮದಾಗಿರುತ್ತದೆ. ಸಾರ್ವಜನಿಕ ಡೊಮೇನ್‌ನಲ್ಲಿರುವ ಕೃತಿಗಳ ಯಾವುದೇ ಅಧಿಕೃತ ಪಟ್ಟಿಯಿಲ್ಲ. ಹಾಗಿದ್ದರೂ, ನಿಮಗೆ ಸಹಾಯವಾಗಬಹುದಾದ ಉಪಯುಕ್ತ ಮಾಹಿತಿಯ ಮೂಲಗಳು ಆನ್‌ಲೈನ್‌ನಲ್ಲಿ ಇವೆ. ಉದಾಹರಣೆಗೆ, ಕಾರ್ನೆಲ್ ವಿಶ್ವವಿದ್ಯಾಲಯವು ಸಾರ್ವಜನಿಕ ಡೊಮೇನ್ ವ್ಯಾಪ್ತಿಗೆ ಬರಬಹುದಾದ ಕೃತಿಗಳಿಗೆ ಮಾರ್ಗದರ್ಶಿಯನ್ನು ಒದಗಿಸುತ್ತದೆ. YouTube ಅನ್ನು ಒಳಗೊಂಡು ಇವುಗಳಲ್ಲಿ ಯಾವುದೇ ಘಟಕಗಳು ಲಿಂಕ್ ಆಗಿರುವ ಎಲ್ಲಾ ಕೃತಿಗಳು ಕೃತಿಸ್ವಾಮ್ಯ ರಕ್ಷಣೆಯಿಂದ ಮುಕ್ತವಾಗಿವೆ ಎಂಬ ಭರವಸೆ ನೀಡುವುದಿಲ್ಲ.

ವ್ಯುತ್ಪನ್ನ ಕೆಲಸ ಎಂದರೇನು?

ಹಕ್ಕುಸ್ವಾಮ್ಯದ ಮಾಲೀಕರ ಕಂಟೆಂಟ್ ಅನ್ನು ಆಧರಿಸಿ ಕೃತಿಗಳನ್ನು ರಚಿಸಲು ನಿಮಗೆ ಅವರ ಅನುಮತಿ ಬೇಕಾಗುತ್ತದೆ. ವ್ಯುತ್ಪನ್ನ ಕೆಲಸಗಳು ಫ್ಯಾನ್‌ಫಿಕ್ಷನ್, ಸೀಕ್ವೆಲ್‌ಗಳು, ಅನುವಾದಗಳು, ಸ್ಪಿನ್-ಆಫ್‌ಗಳು, ಅಳವಡಿಕೆಗಳು ಮತ್ತು ಇತರ ಅಂಶಗಳನ್ನು ಒಳಗೊಂಡಿರಬಹುದು. ಕೃತಿಸ್ವಾಮ್ಯ-ಸಂರಕ್ಷಿತ ವಿಷಯವಸ್ತುವಿನ ಪಾತ್ರಗಳು, ಕಥಾಹಂದರಗಳು ಮತ್ತು ಇತರ ಅಂಶಗಳನ್ನು ಆಧರಿಸಿದ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಮೊದಲು ತಜ್ಞರಿಂದ ಕಾನೂನು ಸಲಹೆ ಪಡೆಯಲು ಪ್ರಯತ್ನಿಸಿ.

U.S. ನಿಂದ ಹೊರಗೆ ಕೃತಿಸ್ವಾಮ್ಯದ ಕುರಿತು ಹೆಚ್ಚಿನ ಮಾಹಿತಿಯನ್ನು ನಾನು ಎಲ್ಲಿ ಪಡೆಯಬಹುದು?

ಯುರೋಪಿಯನ್ ಒಕ್ಕೂಟ ರಾಷ್ಟ್ರಗಳು/ಪ್ರದೇಶಗಳಲ್ಲಿರುವ ಕೃತಿಸ್ವಾಮ್ಯದ ಕುರಿತ ಕೆಲವು ಸಹಾಯಕ ಮಾಹಿತಿ ಮತ್ತು ಲಿಂಕ್‌ಗಳನ್ನು Your Europe ವೆಬ್‌ಸೈಟ್ ಹೊಂದಿದೆ.

ವರ್ಲ್ಡ್ ಇಂಟೆಲೆಕ್ಚುವಲ್ ಪ್ರಾಪರ್ಟಿ ಆರ್ಗನೈಜೇಶನ್ (WIPO) ಅಂತಾರಾಷ್ಟ್ರೀಯ ಬೌದ್ಧಿಕ ಸ್ವತ್ತು ಮತ್ತು ಕೃತಿಸ್ವಾಮ್ಯ ಕಚೇರಿಗಳ ಪಟ್ಟಿಯನ್ನು ಹೊಂದಿದ್ದು, ಅದರಲ್ಲಿ ನಿಮ್ಮ ಪ್ರದೇಶದ ಕೃತಿಸ್ವಾಮ್ಯ ಕಾನೂನುಗಳ ಕುರಿತು ನೀವು ತಿಳಿಯಬಹುದು.

ಮೇಲಿನ ಸೈಟ್‌ಗಳನ್ನು ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಉಲ್ಲೇಖಿಸಲಾಗಿದೆ ಮತ್ತು ಇವುಗಳು YouTube ನಿಂದ ಅನುಮೋದನೆ ಪಡೆದಿಲ್ಲ.

YouTube ಗೆ ಅಪ್‌ಲೋಡ್ ಮಾಡುವುದರ ಕುರಿತ ಪ್ರಶ್ನೆಗಳು

ನನ್ನ ವೀಡಿಯೊದಲ್ಲಿ ಬೇರೊಬ್ಬರ ಕಂಟೆಂಟ್ ಅನ್ನು ಬಳಸಲು ನಾನು ಅನುಮತಿಯನ್ನು ಹೇಗೆ ಪಡೆಯುವುದು?

ನಿಮ್ಮ ವೀಡಿಯೊದಲ್ಲಿ ನೀವು ಕೃತಿಸ್ವಾಮ್ಯ-ಸಂರಕ್ಷಿತ ವಿಷಯವಸ್ತುವನ್ನು ಸೇರಿಸಲು ಪ್ಲಾನ್ ಮಾಡಿದ್ದರೆ, ಹಾಗೆ ಮಾಡುವ ಮೊದಲು ನೀವು ಸಾಮಾನ್ಯವಾಗಿ ಅನುಮತಿಯನ್ನು ಕೇಳಬೇಕಾಗುತ್ತದೆ. YouTube ಈ ಹಕ್ಕುಗಳನ್ನು ನಿಮಗೆ ನೀಡಲು ಸಾಧ್ಯವಿಲ್ಲ ಮತ್ತು ಅವುಗಳನ್ನು ನಿಮಗೆ ನೀಡಬಹುದಾದ ವ್ಯಕ್ತಿಗಳನ್ನು ಹುಡುಕಲು ನಾವು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ಈ ಪ್ರಕ್ರಿಯೆಯ ಕುರಿತು ನೀವಾಗಿಯೇ ಅಥವಾ ವಕೀಲರ ಸಹಾಯದೊಂದಿಗೆ ಸಂಶೋಧನೆ ನಡೆಸಿ ನಿರ್ವಹಿಸಬೇಕು.

ಉದಾಹರಣೆಗೆ, ಸೈಟ್‌ನಲ್ಲಿ ಈಗಾಗಲೇ ಅಪ್‌ಲೋಡ್ ಮಾಡಲಾಗಿರುವ ಕಂಟೆಂಟ್ ಅನ್ನು ಬಳಸುವ ಹಕ್ಕನ್ನು YouTube ನಿಮಗೆ ನೀಡುವುದಿಲ್ಲ. ಬೇರೆ ಯಾರದ್ದೋ YouTube ವೀಡಿಯೊವನ್ನು ಬಳಸಲು ನೀವು ಬಯಸಿದರೆ, ನೀವು ಅವರನ್ನು ನೇರವಾಗಿ ಸಂಪರ್ಕಿಸುವುದನ್ನು ಬಯಸಬಹುದು. ಕೆಲವು ರಚನೆಕಾರರು, ತಮ್ಮನ್ನು ಯಾವ ರೀತಿ ಸಂಪರ್ಕಿಸಬೇಕು ಎನ್ನುವುದರ ಮಾಹಿತಿಯನ್ನು ತಮ್ಮ ಚಾನಲ್‌ನಲ್ಲಿ ಪಟ್ಟಿ ಮಾಡುತ್ತಾರೆ.

ನಿಮ್ಮ YouTube ವೀಡಿಯೊಗಳಿಗೆ ಹಿನ್ನೆಲೆ ಸಂಗೀತ ಅಥವಾ ಸೌಂಡ್ ಎಫೆಕ್ಟ್‌ಗಳನ್ನು ಹುಡುಕುವ ಸುಲಭವಾದ ವಿಧಾನವೆಂದರೆ ಅದು YouTube ನ ಆಡಿಯೋ ಲೈಬ್ರರಿ ಆಗಿದೆ. ನೀವು ಬಳಸುವುದಕ್ಕೆ ಶುಲ್ಕವಿಲ್ಲದ ಸಂಗೀತಕ್ಕಾಗಿ ನೀವು ಹುಡುಕಬಹುದು.

ನಿಮ್ಮ ವೀಡಿಯೊದಲ್ಲಿ ಇನ್ಯಾರದ್ದೋ ಸಂಗೀತವನ್ನು ಬಳಸಿಕೊಳ್ಳುವ ಕುರಿತು ಯೋಚಿಸುತ್ತಿದ್ದರೆ, ಸಂಗೀತವನ್ನು ಬಳಸಿಕೊಳ್ಳುವುದಕ್ಕಾಗಿ ಇರುವ ನಿಮ್ಮ ಆಯ್ಕೆಗಳ ಕುರಿತು ಇನ್ನಷ್ಟು ತಿಳಿಯಿರಿ:

Options for using music in your videos

ಮೂರನೇ ವ್ಯಕ್ತಿ ಕಂಟೆಂಟ್‌ಗೆ ನಾನು ಹೇಗೆ ಪರವಾನಗಿ ನೀಡುವುದು?

ನೀವು YouTube ಗೆ ವೀಡಿಯೊವೊಂದನ್ನು ಅಪ್‌ಲೋಡ್ ಮಾಡುವ ಮೊದಲು, ನಿಮ್ಮ ವೀಡಿಯೊದಲ್ಲಿರುವ ಎಲ್ಲಾ ಎಲಿಮೆಂಟ್‌ಗಳಿಗೆ ನೀವು ಹಕ್ಕುಗಳನ್ನು ಪಡೆದುಕೊಳ್ಳಬೇಕು. ಈ ಎಲಿಮೆಂಟ್‌ಗಳು ಯಾವುದೇ ಸಂಗೀತ (ಅದು ಹಿನ್ನೆಲೆಯಲ್ಲಿ ಮಾತ್ರ ಪ್ಲೇ ಆಗುತ್ತಿದ್ದರೂ ಸಹ), ವೀಡಿಯೊ ಕ್ಲಿಪ್‌ಗಳು, ಫೋಟೋಗಳು ಮತ್ತಿತರ ಅಂಶಗಳನ್ನು ಒಳಗೊಂಡಿರುತ್ತವೆ.

ಮೊದಲು, ಹಕ್ಕುಸ್ವಾಮ್ಯದ ಮಾಲೀಕರು ಅಥವಾ ಹಕ್ಕುಗಳನ್ನು ಹೊಂದಿರುವವರನ್ನು ನೇರವಾಗಿ ಸಂಪರ್ಕಿಸಿ ಮತ್ತು ನಿಮ್ಮ ಬಳಕೆಗಾಗಿ ಸೂಕ್ತವಾದ ಪರವಾನಗಿಗಳಿಗಾಗಿ ಮಾತುಕತೆ ನಡೆಸಿ.

ನಂತರ, ಪರವಾನಗಿಯನ್ನು ಪರಿಶೀಲಿಸಿ. ಪರವಾನಗಿಗಳು ಕಂಟೆಂಟ್ ಅನ್ನು ಬಳಸಿಕೊಳ್ಳಲು ಸ್ಪಷ್ಟವಾದ ಅನುಮತಿಯನ್ನು ಹೊಂದಿರುತ್ತವೆ ಮತ್ತು ಕೆಲವೊಮ್ಮೆ ಕಂಟೆಂಟ್ ಅನ್ನು ಹೇಗೆ ಬಳಸಲಾಗಿದೆ ಎಂಬ ಕುರಿತು ಮಿತಿಗಳನ್ನು ಒಳಗೊಂಡಿರುತ್ತವೆ. ಯಾವುದೇ ಪರವಾನಗಿ ಒಪ್ಪಂದಕ್ಕೆ ಯಾವ ಹಕ್ಕುಗಳನ್ನು ನೀಡಲಾಗಿದೆ ಮತ್ತು ಯಾವ ಹಕ್ಕುಗಳನ್ನು ಮಾಲೀಕರು ಉಳಿಸಿಕೊಂಡಿದ್ದಾರೆ ಎಂಬುದರ ಖಚಿತತೆಗಾಗಿ ಕಾನೂನು ಸಲಹೆಯನ್ನು ಪಡೆಯಿರಿ.

ನೀವು ಶುಲ್ಕವಿಲ್ಲದ ಸಂಗೀತ ಮತ್ತು ಸೌಂಡ್ ಎಫೆಕ್ಟ್‌ಗಳ YouTube ಲೈಬ್ರರಿಯನ್ನು ಸಹ ಬಳಸಬಹುದು, ಅದನ್ನು ನೀವು ನಿರ್ದಿಷ್ಟಪಡಿಸಲಾದ ನಿಯಮಗಳಿಗೆ ಅನುಸಾರವಾಗಿ ವೀಡಿಯೊಗಳಲ್ಲಿ ಬಳಸಬಹುದು.

ಗಮನಿಸಿ: ನೀವು ಕವರ್ ಸಾಂಗ್ ಅನ್ನು ನಿರ್ವಹಿಸಿದ್ದರೆ, ನೀವು ಹಕ್ಕುಸ್ವಾಮ್ಯದ ಮಾಲೀಕರಿಂದ (ಅಂದರೆ ಗೀತರಚನೆಕಾರರು ಅಥವಾ ಸಂಗೀತ ಪ್ರಕಾಶಕರು) ಅನುಮತಿ ಪಡೆದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ವೀಡಿಯೊದಲ್ಲಿರುವ ಹಾಡು ಸೇರಿದಂತೆ, ಮೂಲ ಸೌಂಡ್ ರೆಕಾರ್ಡಿಂಗ್ ಅನ್ನು ಮರುಉತ್ಪಾದಿಸಲು ಅಥವಾ ಸಾಹಿತ್ಯವನ್ನು ಪ್ರದರ್ಶಿಸಲು ನಿಮಗೆ ಇನ್ನಷ್ಟು ಪರವಾನಗಿಗಳು ಬೇಕಾಗಬಹುದು.

ನಾನು ಬಳಸಲು ಅನುಮತಿ ಹೊಂದಿರುವ ಕಂಟೆಂಟ್ ಅನ್ನು ಏಕೆ ತೆಗೆದುಹಾಕಲಾಗಿದೆ ಅಥವಾ ನಿರ್ಬಂಧಿಸಲಾಗಿದೆ?

ನಿಮ್ಮ ವೀಡಿಯೊದಲ್ಲಿ ಕೃತಿಸ್ವಾಮ್ಯ-ಸಂರಕ್ಷಿತ ವಸ್ತುವನ್ನು ಬಳಸಿಕೊಳ್ಳಲು ಹಕ್ಕುಗಳನ್ನು ಹೊಂದಿದ್ದರೆ, ಹಕ್ಕುಸ್ವಾಮ್ಯದ ಮಾಲೀಕರಿಗೆ ನಿಮ್ಮ ವೀಡಿಯೊದ ಶೀರ್ಷಿಕೆ ಮತ್ತು URL ಅನ್ನು ನೀಡಿ. ತಪ್ಪಾಗಿ ತೆಗೆದುಹಾಕುವುದು ಅಥವಾ ನಿರ್ಬಂಧಿಸುವುದನ್ನು ತಡೆಯಲು ಈ ಕ್ರಿಯೆಯು ಸಹಾಯ ಮಾಡಬಹುದು.

ದೋಷದಿಂದಾಗಿ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯ ಮೂಲಕ ನಿಮ್ಮ ವೀಡಿಯೊವನ್ನು ತೆಗೆದುಹಾಕಿದ್ದರೆ, ನೀವು:

Content ID ಕ್ಲೇಮ್ ನಿಮ್ಮ ವೀಡಿಯೊವನ್ನು ತಪ್ಪಾಗಿ ನಿರ್ಬಂಧಿಸಲಾಗಿದೆ ಎಂದು ನೀವು ಭಾವಿಸಿದ್ದರೆ:

  • ನೀವು ಅದಕ್ಕೆ ವಿವಾದ ಸಲ್ಲಿಸಬಹುದು

ಹಾಗಿದ್ದರೂ, ನೀವು ವಿವಾದ ಅಥವಾ ಪ್ರತಿವಾದಿ ನೋಟಿಫಿಕೇಶನ್ ಸಲ್ಲಿಸುವ ಮೊದಲು, ನಿಮಗೆ ನೀವೇ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಿ:

  1. ನಿಮ್ಮ ವೀಡಿಯೊದಲ್ಲಿರುವ ವಿಷಯವಸ್ತುವಿನ ಕೃತಿಸ್ವಾಮ್ಯ ಮಾಲೀಕರು ನೀವೇ?
  2. ನಿಮ್ಮ ವೀಡಿಯೊದಲ್ಲಿರುವ ಎಲ್ಲಾ ಮೂರನೇ ವ್ಯಕ್ತಿಯ ವಿಷಯವಸ್ತುವಿಗೆ ಸರಿಯಾದ ಹಕ್ಕುಸ್ವಾಮ್ಯ ಮಾಲೀಕರಿಂದ ಅನುಮತಿಯನ್ನು ಹೊಂದಿರುವಿರಾ?
  3. ನಿಮ್ಮ ವೀಡಿಯೊ ಸೂಕ್ತವಾದ ಕೃತಿಸ್ವಾಮ್ಯ ಕಾನೂನಿನ ಅಡಿಯಲ್ಲಿ ನ್ಯಾಯಯುತ ಬಳಕೆ, ನ್ಯಾಯೋಚಿತ ವ್ಯವಹಾರ ಅಥವಾ ಅಂತಹುದೇ ವಿನಾಯಿತಿಯ ವ್ಯಾಪ್ತಿಗೆ ಒಳಪಟ್ಟಿದೆಯೇ?

ಮೇಲಿನ ಷರತ್ತುಗಳಲ್ಲಿ ಯಾವುದಾದರೊಂದು ನಿಮ್ಮ ವೀಡಿಯೊಗೆ ಅನ್ವಯಿಸಿದರೆ, ನೀವು ಅತ್ಯಂತ ಸೂಕ್ತವಾದ ವಿವಾದ ಸಲ್ಲಿಕೆ ಪ್ರಕ್ರಿಯೆಯ ಕುರಿತು ಸಂಶೋಧನೆ ನಡೆಸಬೇಕಾಗಬಹುದು ಅಥವಾ ವಕೀಲರನ್ನು ಸಂಪರ್ಕಿಸಬೇಕಾಗಬಹುದು. ಇಲ್ಲದಿದ್ದರೆ, ನೀವು ಕೃತಿಸ್ವಾಮ್ಯ ಕಾನೂನುಗಳನ್ನು ಉಲ್ಲಂಘಿಸಿರಬಹುದು.

ನಾನು ರೆಕಾರ್ಡ್ ಮಾಡಿದ ಅಥವಾ ಸ್ವತಃ ಖರೀದಿಸಿದ ಕಂಟೆಂಟ್ ಅನ್ನು ಏಕೆ ತೆಗೆದುಹಾಕಲಾಗಿದೆ?

ನೀವು ಕಂಟೆಂಟ್ ಅನ್ನು ಖರೀದಿಸಿದ್ದೀರಿ ಎಂದ ಮಾತ್ರಕ್ಕೆ ನಿಮಗೆ ಅದನ್ನು YouTube ಗೆ ಅಪ್‌ಲೋಡ್ ಮಾಡುವ ಹಕ್ಕು ಇದೆ ಎಂದರ್ಥವಲ್ಲ. ನೀವು ಕೃತಿಸ್ವಾಮ್ಯ ಮಾಲೀಕರ ಕ್ರೆಡಿಟ್ ಅನ್ನು ನೀಡಿದರೂ ಸಹ, ನೀವು ಖರೀದಿಸಿರುವ ಕಂಟೆಂಟ್ ಅನ್ನು ಹೊಂದಿರುವ ವೀಡಿಯೊಗಳನ್ನು ಪೋಸ್ಟ್ ಮಾಡುವುದು ಸಹ ಕೃತಿಸ್ವಾಮ್ಯ ಉಲ್ಲಂಘನೆಯಾಗಬಹುದಾಗಿದೆ.

ಅಲ್ಲದೆ, ನೀವಾಗಿಯೇ ಏನನ್ನೋ ರೆಕಾರ್ಡ್ ಮಾಡಿದ್ದೀರಿ ಎಂದ ಮಾತ್ರಕ್ಕೆ ನೀವು ಅದನ್ನು YouTube ಗೆ ಅಪ್‌ಲೋಡ್ ಮಾಡುವ ಎಲ್ಲಾ ಹಕ್ಕುಗಳನ್ನು ಹೊಂದಿದ್ದೀರಿ ಎಂದು ಅರ್ಥವಲ್ಲ. ನಿಮ್ಮ ರೆಕಾರ್ಡಿಂಗ್ ಹಿನ್ನೆಲೆಯಲ್ಲಿ ಕೃತಿಸ್ವಾಮ್ಯಕ್ಕೆ ಒಳಪಟ್ಟ ಸಂಗೀತ ಪ್ಲೇ ಆಗುತ್ತಿರುವಂತಹ ಬೇರೆ ಯಾರದ್ದೋ ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಅನ್ನು ಒಳಗೊಂಡಿದ್ದರೆ, ಆಗಲೂ ನಿಮಗೆ ಸೂಕ್ತವಾದ ಹಕ್ಕುಗಳ ಮಾಲೀಕರಿಂದ ಅನುಮತಿ ಬೇಕಾಗುತ್ತದೆ.

ದುರುಪಯೋಗಪಡಿಸಿಕೊಳ್ಳುವ ಕ್ಲೇಮುದಾರರು ನನ್ನ ವೀಡಿಯೊವನ್ನು ತೆಗೆದುಹಾಕಲು YouTube ಏಕೆ ಅನುಮತಿ ನೀಡಿದೆ?
ನಮ್ಮ ಕೃತಿಸ್ವಾಮ್ಯ ತೆಗೆದುಹಾಕುವಿಕೆ ಪ್ರಕ್ರಿಯೆಗಳಲ್ಲಿ ದುರುಪಯೋಗ ಮತ್ತು ದುರ್ಬಳಕೆಯ ಪ್ರಕರಣಗಳನ್ನು ಬಗೆಹರಿಸಲು YouTube ಕ್ರಮ ತೆಗೆದುಕೊಳ್ಳುತ್ತದೆ . ನಿರ್ದಿಷ್ಟ ಪ್ರಕರಣಗಳು ಅಥವಾ ನಮ್ಮ ಪ್ರಕ್ರಿಯೆಗಳ ಕುರಿತು ನಾವು ಕಾಮೆಂಟ್ ಮಾಡಲು ಸಾಧ್ಯವಿಲ್ಲದಿದ್ದರೂ, ನಮ್ಮ ಕೃತಿಸ್ವಾಮ್ಯ ಪರಿಕರಗಳು ಮತ್ತು ಪ್ರಕ್ರಿಯೆಗಳ ದುರುಪಯೋಗದ ಕುರಿತು ತನಿಖೆ ನಡೆಸುತ್ತೇವೆ. ನಾವು ದುರುಪಯೋಗ ಎಂದು ಪರಿಗಣಿಸಿದ ದಾವೆದಾರರಿಗೆ ನಾವು ಶೂನ್ಯ-ಸಹಿಷ್ಣುತೆ ನೀತಿಯನ್ನು ಸಹ ಹೊಂದಿದ್ದೇವೆ. ಕೃತಿಸ್ವಾಮ್ಯ ಪ್ರಕ್ರಿಯೆಯನ್ನು (ತಗೆದುಹಾಕುವಿಕೆ ವಿನಂತಿಗಳು ಮತ್ತು ಪ್ರತಿವಾದಿ ನೋಟಿಫಿಕೇಶನ್‌ಗಳೆರಡಕ್ಕೂ) ದುರುಪಯೋಗಪಡಿಸಿಕೊಳ್ಳುವುದರಿಂದ ಖಾತೆಯು ಕೊನೆಗೊಳ್ಳಬಹುದು.
ಹಕ್ಕುನಿರಾಕರಣೆ: ಈ ಲೇಖನದಲ್ಲಿರುವ ಮಾಹಿತಿಯು ಕಾನೂನು ಸಲಹೆಯಲ್ಲ. ನಾವು ಅದನ್ನು ಮಾಹಿತಿಯ ಉದ್ದೇಶಗಳಿಗಾಗಿ ಒದಗಿಸಿದ್ದೇವೆ. ನೀವು ಕಾನೂನು ಸಲಹೆಗಾಗಿ ಹುಡುಕುತ್ತಿದ್ದರೆ, ನೀವು ವಕೀಲರನ್ನು ಸಂಪರ್ಕಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5303679614229600170
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false