Content ID ಹೇಗೆ ಕಾರ್ಯನಿರ್ವಹಿಸುತ್ತದೆ

ಕೆಲವು ಕೃತಿಸ್ವಾಮ್ಯದ ಮಾಲೀಕರು YouTube ನಲ್ಲಿರುವ ಅವರ ಕೃತಿಸ್ವಾಮ್ಯ-ಸಂರಕ್ಷಿತ ಕಂಟೆಂಟ್ ಅನ್ನು ಸುಲಭವಾಗಿ ಗುರುತಿಸಲು ಮತ್ತು ನಿರ್ವಹಿಸಲು, YouTube ನ ಆಟೋಮೇಟೆಡ್ ಕಂಟೆಂಟ್ ಗುರುತಿಸುವಿಕೆ ವ್ಯವಸ್ಥೆಯಾಗಿರುವ Content ID ಅನ್ನು ಬಳಸುತ್ತಾರೆ.

Content ID ಏನು ಮಾಡುತ್ತದೆ?

ಕೃತಿಸ್ವಾಮ್ಯ ಮಾಲೀಕರು ಸಲ್ಲಿಸಿರುವ ಆಡಿಯೊ ಮತ್ತು ವಿಷುವಲ್ ಫೈಲ್‌ಗಳ ಡೇಟಾಬೇಸ್ ಅನ್ನು ಬಳಸಿಕೊಂಡು, Content ID ಯು ಕೃತಿಸ್ವಾಮ್ಯ-ಸಂರಕ್ಷಿತ ಕಂಟೆಂಟ್‌ನ ಹೊಂದಾಣಿಕೆಯನ್ನು ಗುರುತಿಸುತ್ತದೆ. YouTube ಗೆ ವೀಡಿಯೊವೊಂದನ್ನು ಅಪ್‌ಲೋಡ್ ಮಾಡಿದಾಗ, ಅದು Content ID ಮೂಲಕ ಸ್ವಯಂಚಾಲಿತವಾಗಿ ಸ್ಕ್ಯಾನ್ ಆಗುತ್ತದೆ.

Content ID ಯು ಹೊಂದಾಣಿಕೆಯನ್ನು ಹುಡುಕಿದರೆ, ಹೊಂದಾಣಿಕೆಯಾಗುವ ವೀಡಿಯೊ Content ID ಕ್ಲೈಮ್ ಅನ್ನು ಪಡೆಯುತ್ತದೆ. ಹಕ್ಕುಸ್ವಾಮ್ಯದ ಮಾಲೀಕರು ಮಾಡಿರುವ Content ID ಸೆಟ್ಟಿಂಗ್‌ಗಳ ಆಧಾರದ ಮೇಲೆ, Content ID ಕ್ಲೈಮ್ ಕೆಳಗಿನ ಕ್ರಿಯೆಗಳಲ್ಲಿ ಒಂದನ್ನು ಉಂಟು ಮಾಡಬಹುದು:

  • ವೀಡಿಯೊವನ್ನು ವೀಕ್ಷಿಸುವುದರಿಂದ ನಿರ್ಬಂಧಿಸುತ್ತದೆ
  • ಅದರ ವಿರುದ್ಧ ಜಾಹೀರಾತುಗಳನ್ನು ರನ್ ಮಾಡುವ ಮೂಲಕ ಮತ್ತು ಕೆಲವೊಮ್ಮೆ ಅಪ್‌ಲೋಡ್ ಮಾಡುವವರೊಂದಿಗೆ ಆದಾಯವನ್ನು ಹಂಚಿಕೊಳ್ಳುವ ಮೂಲಕ ವೀಡಿಯೊವನ್ನು ಮಾನಿಟೈಸ್ ಮಾಡುತ್ತದೆ
  • ವೀಡಿಯೊದ ವೀಕ್ಷಣೆಯ ಅಂಕಿಅಂಶಗಳನ್ನು ಟ್ರ್ಯಾಕ್ ಮಾಡುತ್ತದೆ

ಆಯಾ ಭೌಗೋಳಿಕ ಸ್ಥಳಗಳಿಗೆ ಅನುಗುಣವಾಗಿ ಈ ಮೇಲಿನ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ನೆನಪಿಡಿ. ಉದಾಹರಣೆಗೆ, ವೀಡಿಯೊವನ್ನು ಒಂದು ದೇಶ/ಪ್ರದೇಶದಲ್ಲಿ ಮಾನಿಟೈಸ್ ಮಾಡಬಹುದು ಮತ್ತು ಬೇರೆ ದೇಶ/ಪ್ರದೇಶದಲ್ಲಿ ನಿರ್ಬಂಧಿಸಬಹುದು ಅಥವಾ ಟ್ರ್ಯಾಕ್ ಮಾಡಬಹುದು.

Content ID ಅನ್ನು ಯಾರು ಬಳಸುತ್ತಾರೆ?

ನಿರ್ದಿಷ್ಟ ಮಾನದಂಡವನ್ನು ಪೂರೈಸುವ ಕೃತಿಸ್ವಾಮ್ಯದ ಮಾಲೀಕರಿಗೆ Content ID ಲಭ್ಯವಿರುತ್ತದೆ. ಅನುಮೋದನೆ ಪಡೆಯುವಂತಾಗಲು, YouTube ಗೆ ಆಗಾಗ ಅಪ್‌ಲೋಡ್ ಮಾಡಿರುವ ಮೂಲ ವಸ್ತುವಿನ ಗಣನೀಯ ಅಂಶಕ್ಕೆ ಅವರು ಪ್ರತ್ಯೇಕ ಹಕ್ಕುಗಳನ್ನು ಹೊಂದಿರಬೇಕು.

Content ID ಅನ್ನು ಹೇಗೆ ಬಳಸಬಹುದು ಎಂಬುದರ ಕುರಿತ ಸ್ಪಷ್ಟ ಮಾರ್ಗಸೂಚಿಗಳನ್ನು ಸಹ YouTube ಹೊಂದಿಸುತ್ತದೆ. ಈ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು Content ID ಯ ಬಳಕೆ ಮತ್ತು ವಿವಾದಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ.

ಪದೇ ಪದೇ ತಪ್ಪಾದ Content ID ಕ್ಲೈಮ್‌ಗಳನ್ನು ಮಾಡುವ ಹಕ್ಕುಸ್ವಾಮ್ಯದ ಮಾಲೀಕರ Content ID ಆ್ಯಕ್ಸೆಸ್ ಅನ್ನು ನಿಷ್ಕ್ರಿಯಗೊಳಿಸಬಹುದು ಮತ್ತು YouTube ಜತೆಗಿನ ಅವರ ಪಾಲುದಾರಿಕೆಯನ್ನು ಕೊನೆಗೊಳಿಸಬಹುದು.

ನೀವು ಹಕ್ಕುಸ್ವಾಮ್ಯದ ಮಾಲೀಕರಾಗಿದ್ದು, ನಿಮ್ಮ ಕಂಟೆಂಟ್ Content ID ಯೊಂದಕ್ಕೆ ಮಾನದಂಡವನ್ನು ಪೂರೈಸುತ್ತದೆ ಎಂದು ಭಾವಿಸದ್ದರೆ, ನಿಮ್ಮ ಕೃತಿಸ್ವಾಮ್ಯ ನಿರ್ವಹಣೆಯ ಅಗತ್ಯಗಳ ಕುರಿತು ನಮಗೆ ತಿಳಿಸಲು ನೀವು ಈ ಫಾರ್ಮ್ ಅನ್ನು ಭರ್ತಿ ಮಾಡಬಹುದು.

ಸಂಬಂಧಿತ ವಿಷಯಗಳು

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15037129689603440322
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false