YouTube ಜಾಹೀರಾತು ಫಾರ್ಮ್ಯಾಟ್‌ಗಳು

ರಚನೆಕಾರರ ಆದಾಯವನ್ನು ಸುಧಾರಿಸಲು, ನಿಮ್ಮ ವೀಡಿಯೊದ ಮೊದಲು ಅಥವಾ ನಂತರ ಕಂಡುಬರುವ ಆ್ಯಡ್ ಫಾರ್ಮ್ಯಾಟ್‌ಗಳಿಗೆ ಸಂಬಂಧಿಸಿದ ಆಯ್ಕೆಗಳನ್ನು ನಾವು ಸರಳಗೊಳಿಸಿದ್ದೇವೆ. ಪ್ರೀ-ರೋಲ್, ಪೋಸ್ಟ್-ರೋಲ್, ಸ್ಕಿಪ್ ಮಾಡಬಹುದಾದ ಮತ್ತು ಸ್ಕಿಪ್ ಮಾಡಲಾಗದ ಆ್ಯಡ್‌ಗಳಿಗೆ ಸಂಬಂಧಿಸಿದ ಪ್ರತ್ಯೇಕ ಆ್ಯಡ್ ಆಯ್ಕೆಗಳನ್ನು ನಾವು ತೆಗೆದುಹಾಕಿದ್ದೇವೆ. ಈಗ, ಹೊಸ ದೀರ್ಘಾವಧಿ ವೀಡಿಯೊಗಳಿಗಾಗಿ ನೀವು ಆ್ಯಡ್‌ಗಳನ್ನು ಆನ್ ಮಾಡಿದಾಗ, ಸೂಕ್ತವೆನಿಸಿದಾಗ ನಾವು ನಿಮ್ಮ ವೀಕ್ಷಕರಿಗೆ ಪ್ರೀ-ರೋಲ್, ಪೋಸ್ಟ್-ರೋಲ್, ಸ್ಕಿಪ್ ಮಾಡಬಹುದಾದ ಅಥವಾ ಸ್ಕಿಪ್ ಮಾಡಲಾಗದ ಆ್ಯಡ್‌ಗಳನ್ನು ತೋರಿಸುತ್ತೇವೆ. ಈ ಬದಲಾವಣೆಯ ನಂತರ, ಎಲ್ಲಾ ಆ್ಯಡ್ ಫಾರ್ಮ್ಯಾಟ್‌ಗಳನ್ನು ತೋರಿಸುವ ಆಯ್ಕೆಯನ್ನು ಪ್ರಮಾಣಿತ ರೀತಿಯಲ್ಲಿ ಎಲ್ಲರಿಗಾಗಿ ಆನ್ ಸ್ಥಿತಿಯಲ್ಲಿಡಿ ಎಂದು ನಾವು ಶಿಫಾರಸು ಮಾಡುತ್ತೇವೆ, ಇದು ಉತ್ತಮ ಅಭ್ಯಾಸವಾಗಿದೆ. ಮಧ್ಯ-ರೋಲ್ ಆ್ಯಡ್‌ಗಳ ಕುರಿತ ನಿಮ್ಮ ಆಯ್ಕೆಗಳು ಬದಲಾಗಿಲ್ಲ. ನೀವು ಮಾನಿಟೈಸೇಶನ್ ಸೆಟ್ಟಿಂಗ್‌ಗಳನ್ನು ಬದಲಾಯಿಸದ ಹೊರತು, ಅಸ್ತಿತ್ವದಲ್ಲಿರುವ ದೀರ್ಘಾವಧಿ ವೀಡಿಯೊಗಳಿಗೆ ಸಂಬಂಧಿಸಿದ ನಿಮ್ಮ ಆ್ಯಡ್ ಆಯ್ಕೆಗಳನ್ನು ಸಹ ನಾವು ಉಳಿಸಿಕೊಂಡಿದ್ದೇವೆ.
ವೀಕ್ಷಕರ ಅನುಭವವನ್ನು ಸುಧಾರಿಸಲು ನೆರವಾಗುವುದಕ್ಕಾಗಿ ಮತ್ತು ಡೆಸ್ಕ್‌ಟಾಪ್ ಮತ್ತು ಮೊಬೈಲ್ ಸಾಧನಗಳಾದ್ಯಂತ ಹೆಚ್ಚಿನ ಕಾರ್ಯಕ್ಷಮತೆಯ ಆ್ಯಡ್ ಫಾರ್ಮ್ಯಾಟ್‌ಗಳನ್ನು ಆಪ್ಟಿಮೈಸ್ ಮಾಡುವ ನಿಟ್ಟಿನಲ್ಲಿ, 6 ಏಪ್ರಿಲ್, 2023 ರಿಂದ ಓವರ್‌ಲೇ ಆ್ಯಡ್‌ಗಳನ್ನು YouTube ರನ್ ಮಾಡುವುದಿಲ್ಲ. ಓವರ್‌ಲೇ ಆ್ಯಡ್‌ಗಳು ಪರಂಪರಾನುಗತ ಆ್ಯಡ್ ಫಾರ್ಮ್ಯಾಟ್ ಆಗಿದ್ದು ಇವುಗಳು ಡೆಸ್ಕ್‌ಟಾಪ್‌ನಲ್ಲಿ ಮಾತ್ರ ಗೋಚರಿಸುತ್ತವೆ ಮತ್ತು ತೊಡಗಿಸಿಕೊಳ್ಳುವಿಕೆಯು ಇತರ ಆ್ಯಡ್ ಫಾರ್ಮ್ಯಾಟ್‌ಗಳಿಗೆ ವರ್ಗಾವಣೆಗೊಳ್ಳುವ ಕಾರಣದಿಂದ ಹೆಚ್ಚಿನ ರಚನೆಕಾರರಿಗೆ ಗಳಿಕೆಗಳ ಮೇಲೆ ಸೀಮಿತ ಪರಿಣಾಮವಾಗುವುದೆಂದು ನಾವು ನಿರೀಕ್ಷಿಸಿದ್ದೇವೆ.

ನೀವು ವೀಡಿಯೊ ಮಾನಿಟೈಸೇಶನ್ ಅನ್ನು ಆನ್ ಮಾಡಿದಾಗ ನಿಮ್ಮ ವೀಡಿಯೊಗಳು ಪ್ಲೇ ಆಗುತ್ತಿರುವ ಸಮಯದಲ್ಲಿ ಅಥವಾ ಅವುಗಳ ಪಕ್ಕದಲ್ಲಿ ಹಲವಾರು ಪ್ರಕಾರಗಳ ಆ್ಯಡ್‌ಗಳು ಗೋಚರಿಸಬಹುದು. ಕೆಳಗಿನ ಟೇಬಲ್‌ನಲ್ಲಿ ನೀಡಲಾದ ಆ್ಯಡ್ ಫಾರ್ಮ್ಯಾಟ್‌ಗಳನ್ನು ವೀಡಿಯೊ ಪ್ಲೇ ಆಗುವ ಮುನ್ನ ("ಪ್ರೀ"), ಪ್ಲೇ ಆಗುವ ಸಮಯದಲ್ಲಿ ("ಮಧ್ಯ") ಅಥವಾ ನಂತರ ("ಪೋಸ್ಟ್") ನಾವು ತೋರಿಸಬಹುದು.

ಹೊಸ ದೀರ್ಘಾವಧಿ ವೀಡಿಯೊಗಳಿಗಾಗಿ ನೀವು ಆ್ಯಡ್‌ಗಳನ್ನು ಆನ್ ಮಾಡಿದಾಗ, ಸೂಕ್ತವೆನಿಸಿದಾಗ ನಾವು ನಿಮ್ಮ ವೀಕ್ಷಕರಿಗೆ ಸ್ವಯಂಚಾಲಿತವಾಗಿ ಪ್ರೀ-ರೋಲ್, ಪೋಸ್ಟ್-ರೋಲ್, ಸ್ಕಿಪ್ ಮಾಡಬಹುದಾದ ಅಥವಾ ಸ್ಕಿಪ್ ಮಾಡಲಾಗದ ಆ್ಯಡ್‌ಗಳನ್ನು ತೋರಿಸುತ್ತೇವೆ. ನೀವು 8 ನಿಮಿಷಗಳಿಗಿಂತ ಹೆಚ್ಚಿನ ಅವಧಿಯ ವೀಡಿಯೊಗಳಿಗಾಗಿಯೂ ಮಧ್ಯ-ರೋಲ್ ಆ್ಯಡ್‌ಗಳನ್ನು ಆನ್ ಮಾಡಬಹುದು ಮತ್ತು ಆ್ಯಡ್ ವಿರಾಮಗಳನ್ನು ಹಸ್ತಚಾಲಿತವಾಗಿ ಅಥವಾ ಸ್ವಯಂಚಾಲಿತವಾಗಿ ಸೇರಿಸಬೇಕೆ ಎಂಬುದನ್ನು ನಿರ್ಧರಿಸಬಹುದು. ಮಧ್ಯ-ರೋಲ್ ಆ್ಯಡ್ ವಿರಾಮಗಳನ್ನು ನಿರ್ವಹಿಸುವ ಕುರಿತು ಇನ್ನಷ್ಟು ತಿಳಿಯಿರಿ.

ವೀಡಿಯೊ ಆ್ಯಡ್ ಫಾರ್ಮ್ಯಾಟ್ ವಿವರಣೆ ಪ್ಲಾಟ್‌ಫಾರ್ಮ್ ವಿವರಣೆ
ಸ್ಕಿಪ್ ಮಾಡಬಹುದಾದ ವೀಡಿಯೊ ಜಾಹೀರಾತುಗಳು

ಸ್ಕಿಪ್ ಮಾಡಬಹುದಾದ ವೀಡಿಯೊ ಜಾಹೀರಾತುಗಳು ಪ್ರೇಕ್ಷಕರಿಗೆ 5 ಸೆಕೆಂಡುಗಳ ನಂತರ ಜಾಹೀರಾತುಗಳನ್ನು ಸ್ಕಿಪ್ ಮಾಡಲು ಅವಕಾಶ ನೀಡುತ್ತವೆ. ಕಂಪ್ಯೂಟರ್, ಮೊಬೈಲ್ ಸಾಧನಗಳು, TV ಮತ್ತು ಗೇಮ್ ಕನ್ಸೋಲ್‌ಗಳು ವೀಡಿಯೊ ಪ್ಲೇಯರ್‌ನಲ್ಲಿ ಪ್ಲೇ ಆಗುತ್ತದೆ (5 ಸೆಕೆಂಡುಗಳ ನಂತರ ಸ್ಕಿಪ್ ಮಾಡುವ ಆಯ್ಕೆ).

ಸ್ಕಿಪ್ ಮಾಡಲಾಗದ ವೀಡಿಯೊ ಜಾಹೀರಾತುಗಳು

ವೀಡಿಯೊ ವೀಕ್ಷಿಸಬಹುದಾದ ಮೊದಲು ಸ್ಕಿಪ್ ಮಾಡಲಾಗದ ವೀಡಿಯೊ ಜಾಹೀರಾತುಗಳನ್ನು ವೀಕ್ಷಿಸಬೇಕು. ಕಂಪ್ಯೂಟರ್, ಮೊಬೈಲ್ ಸಾಧನಗಳು, TV ಮತ್ತು ಗೇಮ್ ಕನ್ಸೋಲ್‌ಗಳು

ವೀಡಿಯೋ ಪ್ಲೇಯರ್‌ನಲ್ಲಿ ಪ್ಲೇ ಆಗುತ್ತದೆ.

ಪ್ರಾದೇಶಿಕ ಪ್ರಮಾಣಿತಗಳನ್ನು ಆಧರಿಸಿ 15 ಅಥವಾ 20 ಸೆಕೆಂಡ್‌ಗಳ ಅವಧಿ. ಟಿವಿಗಳಲ್ಲಿ ಮಾತ್ರ, 30 ಸೆಕೆಂಡ್‌ಗಳು ಇರಬಹುದು.

ಬಂಪರ್ ಆ್ಯಡ್‌ಗಳು

ವೀಡಿಯೊ ವೀಕ್ಷಿಸಬಹುದಾದ ಮೊದಲು ವೀಕ್ಷಿಸಲೇ ಬೇಕಾದ 6 ಸೆಕೆಂಡುಗಳ ತನಕದ Short, ಸ್ಕಿಪ್ ಮಾಡಲಾಗದ ವೀಡಿಯೋ ಜಾಹೀರಾತುಗಳು. ಸ್ಕಿಪ್ ಮಾಡಬಹುದಾದ ಅಥವಾ ಸ್ಕಿಪ್ ಮಾಡಲಾಗದ ಜಾಹೀರಾತುಗಳನ್ನು ಆನ್ ಮಾಡಿದಾಗ ಬಂಪರ್ ಜಾಹೀರಾತುಗಳನ್ನು ಆನ್ ಮಾಡಲಾಗುತ್ತದೆ. ಕಂಪ್ಯೂಟರ್, ಮೊಬೈಲ್ ಸಾಧನಗಳು, TV ಮತ್ತು ಗೇಮ್ ಕನ್ಸೋಲ್‌ಗಳು 6 ಸೆಕೆಂಡ್‌ಗಳ ಅವಧಿಯವರೆಗೆ, ವೀಡಿಯೊ ಪ್ಲೇಯರ್‌ನಲ್ಲಿ ಪ್ಲೇ ಆಗುತ್ತದೆ.

ಬಹು ವೀಡಿಯೊಗಳಿಗಾಗಿ ಆ್ಯಡ್‌ಗಳನ್ನು ಆನ್ ಮಾಡಿ

ನೀವು ಈಗಾಗಲೇ ಅಪ್‌ಲೋಡ್ ಮಾಡಿರುವ ಬಹು ವೀಡಿಯೊಗಳಿಗೆ ಆ್ಯಡ್‌ಗಳನ್ನು ಆನ್ ಮಾಡಲು:

  1. YouTube Studio ಗೆ ಹೋಗಿ.
  2. ಎಡಭಾಗದ ಮೆನುವಿನಲ್ಲಿ, ಕಂಟೆಂಟ್ ಎಂಬುದನ್ನು ಆಯ್ಕೆ ಮಾಡಿ.
  3. ನೀವು ಮಾನಿಟೈಸ್ ಮಾಡಲು ಬಯಸುವ ಯಾವುದೇ ವೀಡಿಯೊಗೆ ಸಂಬಂಧಿಸಿದ ವೀಡಿಯೊ ಥಂಬ್‌ನೇಲ್‌ನ ಎಡಭಾಗದಲ್ಲಿರುವ ಬೂದು ಬಣ್ಣದ ಬಾಕ್ಸ್ ಅನ್ನು ಆಯ್ಕೆಮಾಡಿ.
  4. ನಿಮ್ಮ ವೀಡಿಯೊ ಪಟ್ಟಿಯ ಮೇಲಿನ ಕಪ್ಪು ಬಾರ್‌ನಲ್ಲಿರುವ ಎಡಿಟ್ ಮಾಡಿ ಡ್ರಾಪ್‌ಡೌನ್ ನಂತರ ಮಾನಿಟೈಸೇಶನ್ ಎಂಬುದನ್ನು ಕ್ಲಿಕ್ ಮಾಡಿ.
  5. ಮಾನಿಟೈಸೇಶನ್ ಡ್ರಾಪ್‌ಡೌನ್‌ನಲ್ಲಿ ಆನ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
    • ಮಧ್ಯ-ರೋಲ್ ಆ್ಯಡ್‌ಗಳಿಗೆ ಸಂಬಂಧಿಸಿದ ಆ್ಯಡ್ ಸೆಟ್ಟಿಂಗ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಬದಲಾಯಿಸಲು: ಎಡಿಟ್ ಮಾಡಿ ನಂತರ ಆ್ಯಡ್ ಸೆಟ್ಟಿಂಗ್‌ಗಳು ನಂತರ ಎಂಬುದನ್ನು ಕ್ಲಿಕ್ ಮಾಡಿ, “ವೀಡಿಯೊ ಪ್ಲೇ ಆಗುತ್ತಿರುವ ಸಮಯದಲ್ಲಿ (ಮಧ್ಯ-ರೋಲ್) ಆ್ಯಡ್‌ಗಳನ್ನು ಇರಿಸಿ” ಎಂಬುದರ ಪಕ್ಕದಲ್ಲಿರುವ ಬಾಕ್ಸ್‌ಗೆ ಗುರುತು ಹಾಕಿ ಹಾಗೂ ಆ್ಯಡ್ ವಿರಾಮಗಳಿಲ್ಲದ ವೀಡಿಯೊಗಳಿಗಾಗಿ ಅಥವಾ ಎಲ್ಲಾ ವೀಡಿಯೊಗಳಿಗಾಗಿ ಸ್ವಯಂಚಾಲಿತ ಮಧ್ಯ-ರೋಲ್ ಆ್ಯಡ್‌ಗಳನ್ನು ಇರಿಸಲು ನೀವು ಬಯಸುತ್ತೀರಾ ಎಂಬುದನ್ನು ನಿರ್ಧರಿಸಿ.
  6. ವೀಡಿಯೊಗಳನ್ನು ಅಪ್‌ಡೇಟ್ ಮಾಡಿ ನಂತರ "ಈ ಕ್ರಿಯೆಯ ಪರಿಣಾಮಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ" ಎಂಬುದರ ಪಕ್ಕದಲ್ಲಿರುವ ಬಾಕ್ಸ್‌ಗೆ ಗುರುತು ಹಾಕಿ ನಂತರ ವೀಡಿಯೊಗಳನ್ನು ಅಪ್‌ಡೇಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

YouTube Shorts ಆ್ಯಡ್‌ಗಳು

Shorts ನಲ್ಲಿನ ಜಾಹೀರಾತುಗಳು ತಕ್ಷಣವೇ ಸ್ವೈಪ್ ಮಾಡಬಹುದಾದ ವೀಡಿಯೊ ಅಥವಾ ಚಿತ್ರದ ಜಾಹೀರಾತುಗಳಾಗಿದ್ದು ಅವುಗಳು Shorts ಫೀಡ್‌ನಲ್ಲಿ Shorts ನಡುವೆ ಗೋಚರಿಸುತ್ತವೆ. ನಮ್ಮ YouTube Shorts ಮಾನಿಟೈಸೇಶನ್ ನೀತಿಗಳು ಎಂಬಲ್ಲಿ Shorts ನಲ್ಲಿ ಆ್ಯಡ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಡೀಫಾಲ್ಟ್ ಮಧ್ಯ-ರೋಲ್ ಆ್ಯಡ್ ಸೆಟ್ಟಿಂಗ್‌ಗಳು

ಹೊಸ ಅಪ್‌ಲೋಡ್‌ಗಳಲ್ಲಿ ಮಧ್ಯ-ರೋಲ್ ಆ್ಯಡ್ ವಿರಾಮಗಳನ್ನು ತೋರಿಸಲು ನಿಮ್ಮ ಚಾನಲ್‌ನ ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

ವೀಡಿಯೊ ಪ್ಲೇಯರ್ ಹೊರಗಿನ ಆ್ಯಡ್‌ಗಳು

ವಾಚ್ ಫೀಡ್ ಜಾಹೀರಾತುಗಳು ಮೊಬೈಲ್‌ನಲ್ಲಿ ಪ್ಲೇಯರ್ ಕೆಳಗೆ ಮತ್ತು ಕಂಪ್ಯೂಟರ್‌ಗಳಲ್ಲಿ ಪ್ಲೇಯರ್ ಪಕ್ಕದಲ್ಲಿ ಶಿಫಾರಸು ಮಾಡಿರುವ ವೀಡಿಯೊಗಳ ಫೀಡ್‌ನಲ್ಲಿ ಗೋಚರಿಸುವ ಜಾಹೀರಾತುಗಳಾಗಿವೆ. ಈ ಪ್ರಕಾರಗಳ ಜಾಹೀರಾತುಗಳನ್ನು YouTube Studio ನಿಂದ ನಿಯಂತ್ರಿಸಲಾಗುವುದಿಲ್ಲ.

ಒಂದರ ಹಿಂದೆ ಮತ್ತೊಂದು ಆ್ಯಡ್‌ಗಳು

ಇವುಗಳನ್ನು ಆ್ಯಡ್ ಪಾಡ್‌ಗಳು ಎಂದೂ ಕರೆಯಲಾಗುತ್ತದೆ, ನಿಮ್ಮ ದೀರ್ಘಾವಧಿ ವೀಡಿಯೊಗಾಗಿ (ಕನಿಷ್ಠ 5 ನಿಮಿಷಗಳ ಅವಧಿ) ಆ್ಯಡ್‌ಗಳನ್ನು ಆನ್ ಮಾಡಿದಾಗ ಒಂದರ ಹಿಂದೆ ಮತ್ತೊಂದು ಎರಡು ವೀಡಿಯೊ ಆ್ಯಡ್‌ಗಳು ಕಾಣಿಸಬಹುದು. ಆ್ಯಡ್ ಪಾಡ್‌ಗಳು, ದೀರ್ಘಾವಧಿ ವೀಡಿಯೊಗಳ ವೀಕ್ಷಕರಿಗೆ ಉಂಟಾಗಬಹುದಾದ ಅಡಚಣೆಗಳನ್ನು ಕಡಿಮೆ ಮಾಡಲು ನೆರವಾಗುತ್ತವೆ, ಈ ಮೂಲಕ ಉತ್ತಮ ವೀಕ್ಷಣೆ ಅನುಭವವನ್ನು ನೀಡುತ್ತವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7223871307474852911
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false