ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್ ಅಥವಾ ವೀಡಿಯೊ ತೆಗೆದುಹಾಕುವಿಕೆಯ ವಿರುದ್ಧ ಮೇಲ್ಮನವಿ ಸಲ್ಲಿಸುವುದು

ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳು ಮತ್ತು ತೆಗೆದುಹಾಕುವಿಕೆಗಳ ಕುರಿತು ಹೇಗೆ ಮೇಲ್ಮನವಿ ಸಲ್ಲಿಸುವುದು ಎಂಬುದನ್ನು ಈ ಕಂಟೆಂಟ್ ಒಳಗೊಂಡಿದೆ. ಕೃತಿಸ್ವಾಮ್ಯದ ಕಾರಣಗಳಿಗಾಗಿ ನಿಮ್ಮ ವೀಡಿಯೊವನ್ನು ತೆಗೆದುಹಾಕಿದ್ದರೆ, ಕೃತಿಸ್ವಾಮ್ಯ ಸ್ಟ್ರೈಕ್‌ಗಳಿಗಾಗಿ ನೀವು ಹೊಂದಿರುವ ಆಯ್ಕೆಗಳ ಕುರಿತು ತಿಳಿಯಿರಿ.

ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಾಗಿ ನಿಮ್ಮ ಕಂಟೆಂಟ್ ಅನ್ನು ನಾವು ತೆಗೆದುಹಾಕಿದರೆ, ನಿಮಗೆ ಸ್ಟ್ರೈಕ್ ಅನ್ನು ನೀಡಬಹುದು. YouTube ನಲ್ಲಿನ ಕಂಟೆಂಟ್ ಅನ್ನು YouTube ಸಮುದಾಯದ ಸದಸ್ಯರಾಗಲೀ ಅಥವಾ ನಮ್ಮ ಸ್ಮಾರ್ಟ್ ಪತ್ತೆ ಮಾಡುವಿಕೆ ತಂತ್ರಜ್ಞಾನವು ಪರಿಶೀಲನೆಗಾಗಿ ಫ್ಲ್ಯಾಗ್ ಮಾಡಿದಾಗ ಮತ್ತು ನಮ್ಮ ಪರಿಶೀಲನೆ ತಂಡಗಳು ಅದು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಣೆ ಮಾಡುತ್ತಿಲ್ಲ ಎಂಬುದಾಗಿ ನಿರ್ಧರಿಸಿದಾಗ ಸ್ಟ್ರೈಕ್‌ಗಳನ್ನು ನೀಡಲಾಗುತ್ತದೆ. ಒಂದು ವೇಳೆ ನಿಮ್ಮ ಚಾನಲ್ ಸ್ಟ್ರೈಕ್ ಅನ್ನು ಪಡೆದರೆ, ನೀವು ಮೊಬೈಲ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಇಮೇಲ್ ನೋಟಿಫಿಕೇಶನ್ ಅನ್ನು ಮತ್ತು ಮುಂದಿನ ಬಾರಿ ನೀವು YouTube ಗೆ ಸೈನ್ ಇನ್ ಮಾಡಿದಾಗ ಚಾನಲ್ ಸೆಟ್ಟಿಂಗ್‌ಗಳಲ್ಲಿ ಎಚ್ಚರಿಕೆಯನ್ನು ಪಡೆಯುತ್ತೀರಿ.

ನೀವು ಪ್ರಾರಂಭಿಸುವುದಕ್ಕೂ ಮೊದಲು, ಸ್ಟ್ರೈಕ್‍ಗೆ ಸಂಬಂಧಿಸಿದ ನೀತಿಯನ್ನು ಪರಿಶೀಲಿಸಿ. ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗೆ ಕಾರಣವಾಗುವ ಕಂಟೆಂಟ್‌ನ ಉದಾಹರಣೆಗಳನ್ನು ಸಹ ನಾವು ಪಟ್ಟಿ ಮಾಡುತ್ತೇವೆ. ಎಚ್ಚರಿಕೆ ಅಥವಾ ಸ್ಟ್ರೈಕ್ ಅನ್ನು ನೀಡಲಾದ ನಂತರ 90 ದಿನಗಳ ತನಕ ಮಾತ್ರ ನೀವು ಮೇಲ್ಮನವಿ ಸಲ್ಲಿಸಬಹುದು.

Android ಗಾಗಿ YouTube Studio ಆ್ಯಪ್

  1. YouTube Studio ಆ್ಯಪ್ ತೆರೆಯಿರಿ.
  2. ಕೆಳಗಿನ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಟ್ಯಾಪ್ ಮಾಡಿ.
  3. ನಿರ್ಬಂಧವಿರುವ ವೀಡಿಯೊವೊಂದನ್ನು ಆಯ್ಕೆ ಮಾಡಿ, ನಂತರ ಆ ನಿರ್ಬಂಧದ ಮೇಲೆ ಟ್ಯಾಪ್ ಮಾಡಿ.
  4. ಸಮಸ್ಯೆಗಳನ್ನು ಪರಿಶೀಲಿಸಿ ಎಂಬುದನ್ನು ಟ್ಯಾಪ್ ಮಾಡಿ.
  5. ಸಂಬಂಧಿತ ಕ್ಲೇಮ್ ಅನ್ನು ಟ್ಯಾಪ್ ಮಾಡಿ.
  6. ಮೇಲ್ಮನವಿ ಸಲ್ಲಿಸುವುದಕ್ಕೆ ನಿಮ್ಮ ಕಾರಣವನ್ನು ನಮೂದಿಸಿ ಮತ್ತು ಸಲ್ಲಿಸಿ ಅನ್ನು ಕ್ಲಿಕ್ ಮಾಡಿ.

ಅದು ಪ್ಲೇಪಟ್ಟಿ ಅಥವಾ ಥಂಬ್‌ನೇಲ್ ಆಗಿದ್ದರೆ:

ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಕಾರಣಕ್ಕಾಗಿ ನಿಮ್ಮ ಪ್ಲೇಪಟ್ಟಿ ಅಥವಾ ಥಂಬ್‌ನೇಲ್ ಅನ್ನು ತೆಗೆದುಹಾಕಲಾಗಿದ್ದರೆ ನೀವು ಇಮೇಲ್ ಅನ್ನು ಸ್ವೀಕರಿಸುತ್ತೀರಿ. ನಿಮ್ಮ ಕಂಟೆಂಟ್, ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿಲ್ಲ ಮತ್ತು ಅದನ್ನು ತಪ್ಪಾಗಿ ತೆಗೆದುಹಾಕಲಾಗಿದೆ ಎಂಬುದಾಗಿ ನೀವು ಭಾವಿಸಿದರೆ, ಮೇಲ್ಮನವಿಯನ್ನು ಸಲ್ಲಿಸುವುದಕ್ಕಾಗಿ ಇಮೇಲ್‌ನಲ್ಲಿ ಒದಗಿಸಲಾಗಿರುವ ಫಾರ್ಮ್ ಅನ್ನು ಬಳಸಿ.

ಗಮನಿಸಿ: ವೀಡಿಯೊವನ್ನು ಅಳಿಸುವುದು ಸ್ಟೈಕ್‌ಗೆ ಪರಿಹಾರವಲ್ಲ. ನಿಮ್ಮ ವೀಡಿಯೊವನ್ನು ನೀವು ಅಳಿಸಿದರೆ, ಸ್ಟ್ರೈಕ್ ನಿಮ್ಮ ಚಾನಲ್‌ನಲ್ಲಿಯೇ ಇರುತ್ತದೆ ಹಾಗೂ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಲು ನಿಮಗೆ ಸಾಧ್ಯವಾಗುವುದಿಲ್ಲ.

ನಿಮ್ಮ ಕಂಟೆಂಟ್‌ನಲ್ಲಿರುವ ಲಿಂಕ್‌ಗಳಿಗಾಗಿ ನೀವು ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್ ಅನ್ನು ಸ್ವೀಕರಿಸಿದ್ದರೆ, ನಿಮ್ಮ ಕಂಟೆಂಟ್‌ನಲ್ಲಿರುವ ಲಿಂಕ್‌ಗಳ ಬಗೆಗಿನ ನಮ್ಮ ನೀತಿ ಮತ್ತು ಮೇಲ್ಮನವಿಗಳ ಪ್ರಕ್ರಿಯೆಯ ಕುರಿತು ನೀವು ಪರಿಚಿತರಾಗಿರಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್ ವಿರುದ್ಧ ಮೇಲ್ಮನವಿ ಸಲ್ಲಿಸುವುದು

ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಾಗಿ ನಿಮ್ಮ ಕಂಟೆಂಟ್ ಅನ್ನು ನಾವು ತೆಗೆದುಹಾಕಿದರೆ, ನಿಮಗೆ ಸ್ಟ್ರೈಕ್ ಅನ್ನು ನೀಡಬಹುದು. YouTube ನಲ್ಲಿನ ಕಂಟೆಂಟ್ ಅನ್ನು YouTube ಸಮುದಾಯದ ಸದಸ್ಯರಾಗಲೀ ಅಥವಾ ನಮ್ಮ ಸ್ಮಾರ್ಟ್ ಪತ್ತೆ ಮಾಡುವಿಕೆ ತಂತ್ರಜ್ಞಾನವು ಪರಿಶೀಲನೆಗಾಗಿ ಫ್ಲ್ಯಾಗ್ ಮಾಡಿದಾಗ ಮತ್ತು ನಮ್ಮ ಪರಿಶೀಲನೆ ತಂಡಗಳು ಅದು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಣೆ ಮಾಡುತ್ತಿಲ್ಲ ಎಂಬುದಾಗಿ ನಿರ್ಧರಿಸಿದಾಗ ಸ್ಟ್ರೈಕ್‌ಗಳನ್ನು ನೀಡಲಾಗುತ್ತದೆ. ಒಂದು ವೇಳೆ ನಿಮ್ಮ ಚಾನಲ್ ಸ್ಟ್ರೈಕ್ ಅನ್ನು ಪಡೆದರೆ, ನೀವು ಮೊಬೈಲ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಇಮೇಲ್ ನೋಟಿಫಿಕೇಶನ್ ಅನ್ನು ಮತ್ತು ಮುಂದಿನ ಬಾರಿ ನೀವು YouTube ಗೆ ಸೈನ್ ಇನ್ ಮಾಡಿದಾಗ ಚಾನಲ್ ಸೆಟ್ಟಿಂಗ್‌ಗಳಲ್ಲಿ ಎಚ್ಚರಿಕೆಯನ್ನು ಪಡೆಯುತ್ತೀರಿ.

ನೀವು ಪ್ರಾರಂಭಿಸುವುದಕ್ಕೂ ಮೊದಲು, ಸ್ಟ್ರೈಕ್‍ಗೆ ಸಂಬಂಧಿಸಿದ ನೀತಿಯನ್ನು ಪರಿಶೀಲಿಸಿ. ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗೆ ಕಾರಣವಾಗುವ ಕಂಟೆಂಟ್‌ನ ಉದಾಹರಣೆಗಳನ್ನು ಸಹ ನಾವು ಪಟ್ಟಿ ಮಾಡುತ್ತೇವೆ. ಎಚ್ಚರಿಕೆ ಅಥವಾ ಸ್ಟ್ರೈಕ್ ಅನ್ನು ನೀಡಲಾದ ನಂತರ 90 ದಿನಗಳ ತನಕ ಮಾತ್ರ ನೀವು ಮೇಲ್ಮನವಿ ಸಲ್ಲಿಸಬಹುದು.

ಸ್ಟ್ರೈಕ್ ಕುರಿತಂತೆ ಮೇಲ್ಮನವಿ ಸಲ್ಲಿಸುವುದು 

  1. YouTube Studio ದಲ್ಲಿ ನಿಮ್ಮ ಡ್ಯಾಶ್‌ಬೋರ್ಡ್‌ಗೆ ಹೋಗಿ.
  2. ಚಾನಲ್ ಉಲ್ಲಂಘನೆಗಳ ಕಾರ್ಡ್ ಆಯ್ಕೆಮಾಡಿ.
  3. ಮೇಲ್ಮನವಿ ಅನ್ನು ಆಯ್ಕೆ ಮಾಡಿ.
ಗಮನಿಸಿ: ವೀಡಿಯೊವನ್ನು ಅಳಿಸುವುದು ಸ್ಟ್ರೈಕ್‌ಗೆ ಪರಿಹಾರವಾಗುವುದಿಲ್ಲ. ನಿಮ್ಮ ವೀಡಿಯೊವನ್ನು ನೀವು ಅಳಿಸಿದರೆ, ಸ್ಟ್ರೈಕ್ ನಿಮ್ಮ ಚಾನಲ್‌ನಲ್ಲಿಯೇ ಇರುತ್ತದೆ ಹಾಗೂ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಲು ನಿಮಗೆ ಸಾಧ್ಯವಾಗುವುದಿಲ್ಲ.

ನಿಮ್ಮ ಕಂಟೆಂಟ್‌ನಲ್ಲಿರುವ ಲಿಂಕ್‌ಗಳಿಗಾಗಿ ನೀವು ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್ ಅನ್ನು ಸ್ವೀಕರಿಸಿದ್ದರೆ, ನಿಮ್ಮ ಕಂಟೆಂಟ್‌ನಲ್ಲಿರುವ ಲಿಂಕ್‌ಗಳ ಬಗೆಗಿನ ನಮ್ಮ ನೀತಿ ಮತ್ತು ಮೇಲ್ಮನವಿಗಳ ಪ್ರಕ್ರಿಯೆಯ ಕುರಿತು ನೀವು ಪರಿಚಿತರಾಗಿರಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಒಂದು ವೇಳೆ ಅದು ಪ್ಲೇಪಟ್ಟಿ ಅಥವಾ ಥಂಬ್‌ನೇಲ್ ಆಗಿದ್ದರೆ:
ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಕಾರಣಕ್ಕಾಗಿ ನಿಮ್ಮ ಪ್ಲೇಪಟ್ಟಿ ಅಥವಾ ಥಂಬ್‌ನೇಲ್ ಅನ್ನು ತೆಗೆದುಹಾಕಲಾಗಿದ್ದರೆ ನೀವು ಇಮೇಲ್ ಅನ್ನು ಸ್ವೀಕರಿಸುತ್ತೀರಿ. ಸಮುದಾಯ ಮಾರ್ಗಸೂಚಿಗಳನ್ನು ನಿಮ್ಮ ಕಂಟೆಂಟ್ ಉಲ್ಲಂಘಿಸುತ್ತಿಲ್ಲ ಮತ್ತು ಅದನ್ನು ತಪ್ಪಾಗಿ ತೆಗೆದುಹಾಕಲಾಗಿದೆ ಎಂಬುದಾಗಿ ನೀವು ಭಾವಿಸಿದರೆ, ಮೇಲ್ಮನವಿಯನ್ನು ಸಲ್ಲಿಸುವುದಕ್ಕಾಗಿ ಇಮೇಲ್‌ನಲ್ಲಿ ಒದಗಿಸಲಾಗಿರುವ ಫಾರ್ಮ್ ಅನ್ನು ಬಳಸಿ.

ಗಮನಿಸಿ: ವೀಡಿಯೊಗಳನ್ನು ಹಲವಾರು ಕಾರಣಗಳಿಗಾಗಿ ತೆಗೆದುಹಾಕಬಹುದು. ವೀಡಿಯೊ ತೆಗೆದುಹಾಕಲಾದ ಕುರಿತಂತೆ ಮೇಲ್ಮನವಿಯನ್ನು ಸಲ್ಲಿಸುವಲ್ಲಿ ನಿಮಗೆ ತೊಂದರೆ ಇದ್ದರೆ, ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಯನ್ನು ಹೊರತಾದ ಕಾರಣಗಳಿಗಾಗಿ ಅದನ್ನು ತೆಗೆದುಹಾಕಲಾಗಿರಬಹುದು. ವೀಡಿಯೊ ತೆಗೆದುಹಾಕುವಿಕೆಗಳ ಟ್ರಬಲ್‌ಶೂಟ್ ಕುರಿತಾಗಿನ ವಿವರಗಳನ್ನು ಈ ಸಹಾಯ ಕೇಂದ್ರ ಲೇಖನದಲ್ಲಿ ಕಾಣಬಹುದು. 

ನೀವು ಮೇಲ್ಮನವಿಯನ್ನು ಸಲ್ಲಿಸಿದ ನಂತರ

ನಿಮ್ಮ ಮೇಲ್ಮನವಿ ವಿನಂತಿಯ ಫಲಿತಾಂಶವನ್ನು ನಿಮಗೆ ತಿಳಿಸುವ YouTube ನ ಇಮೇಲ್ ಅನ್ನು ನೀವು ಪಡೆಯುತ್ತೀರಿ. ಈ ಕೆಳಗಿನವುಗಳಲ್ಲಿ ಒಂದು ಸಂಭವಿಸಬಹುದು:

  • ನಿಮ್ಮ ಕಂಟೆಂಟ್ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಿದೆ ಎಂಬುದಾಗಿ ನಮಗೆ ಕಂಡುಬಂದರೆ, ನಾವು ಅದನ್ನು ಮರುಸ್ಥಾಪಿಸುತ್ತೇವೆ ಮತ್ತು ನಿಮ್ಮ ಚಾನಲ್‌ನಿಂದ ಸ್ಟ್ರೈಕ್ ಅನ್ನು ತೆಗೆದುಹಾಕುತ್ತೇವೆ. ಒಂದು ವೇಳೆ ನೀವು ಎಚ್ಚರಿಕೆ ಕುರಿತು ಮೇಲ್ಮನವಿ ಸಲ್ಲಿಸಿದರೆ ಮತ್ತು ಮೇಲ್ಮನವಿಯನ್ನು ಪುರಸ್ಕರಿಸಲಾದರೆ, ಮುಂದಿನ ಕೃತ್ಯವು ಎಚ್ಚರಿಕೆ ಆಗಿರುತ್ತದೆ.
  • ನಿಮ್ಮ ಕಂಟೆಂಟ್ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಿದೆ ಆದರೆ ಅದು ಎಲ್ಲಾ ಪ್ರೇಕ್ಷಕರಿಗೆ ಸೂಕ್ತವಾಗಿಲ್ಲ ಎಂಬುದಾಗಿ ನಮಗೆ ಕಂಡುಬಂದರೆ, ನಾವು ವಯಸ್ಸಿನ ನಿರ್ಬಂಧವನ್ನು ಅನ್ವಯಿಸುತ್ತೇವೆ. ಅದು ವೀಡಿಯೊ ಆಗಿದ್ದರೆ, ಅದು ಸೈನ್ ಔಟ್ ಮಾಡಲಾದ ಬಳಕೆದಾರರಿಗೆ, 18 ವರ್ಷ ವಯಸ್ಸಿನ ಕೆಳಗಿನವರಿಗೆ ಅಥವಾ ನಿರ್ಬಂಧಿತ ಮೋಡ್ ಆನ್ ಮಾಡಿದವರಿಗೆ ಗೋಚರಿಸುವುದಿಲ್ಲ. ಅದು ಕಸ್ಟಮ್ ಥಂಬ್‌ನೇಲ್ ಆಗಿದ್ದರೆ, ಅದನ್ನು ತೆಗೆದುಹಾಕಲಾಗುತ್ತದೆ.
  • ನಿಮ್ಮ ಕಂಟೆಂಟ್ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂಬುದಾಗಿ ನಮಗೆ ಕಂಡುಬಂದರೆ, ಸ್ಟ್ರೈಕ್ ಹಾಗೆಯೇ ಇರುತ್ತದೆ ಮತ್ತು ವೀಡಿಯೊ ಸೈಟ್‌ನಲ್ಲಿ ಕಂಡುಬರುವುದಿಲ್ಲ. ತಿರಸ್ಕರಿಸಿದ ಮೇಲ್ಮನವಿಗಳಿಗೆ ಯಾವುದೇ ಹೆಚ್ಚುವರಿ ದಂಡವಿರುವುದಿಲ್ಲ.

ಪ್ರತಿ ಸ್ಟ್ರೈಕ್ ಕುರಿತು ನೀವು ಒಮ್ಮೆ ಮಾತ್ರ ಮೇಲ್ಮನವಿ ಸಲ್ಲಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9653774919430247951
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false