YouTube ನಲ್ಲಿ ನಿರ್ಬಂಧಿತ ಮೋಡ್ ಅನ್ನು ಆನ್ ಅಥವಾ ಆಫ್ ಮಾಡಿ

ನಿರ್ಬಂಧಿತ ಮೋಡ್ ಎಂಬುದು ನೀವು YouTube ನಲ್ಲಿ ಬಳಸಬಹುದಾದ ಐಚ್ಛಿಕ ಸೆಟ್ಟಿಂಗ್ ಆಗಿದೆ. ಈ ಫೀಚರ್ ನೀವು ಅಥವಾ ನಿಮ್ಮ ಸಾಧನಗಳನ್ನು ಬಳಸುವ ಇತರರು ವೀಕ್ಷಿಸದಿರಲು ಬಯಸಬಹುದಾದ ಸಂಭಾವ್ಯ ವಯಸ್ಕರ ಕಂಟೆಂಟ್ ಅನ್ನು ತಡೆಹಿಡಿಯಲು ಸಹಾಯ ಮಾಡುತ್ತದೆ. 

ಗ್ರಂಥಾಲಯಗಳು, ವಿಶ್ವವಿದ್ಯಾನಿಲಯಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಲ್ಲಿನ ಕಂಪ್ಯೂಟರ್‌ಗಳಲ್ಲಿ ನೆಟ್‌ವರ್ಕ್ ನಿರ್ವಾಹಕರು ನಿರ್ಬಂಧಿತ ಮೋಡ್ ಅನ್ನು ಆನ್ ಮಾಡಬಹುದು.

ಗಮನಿಸಿ: ನಿರ್ಬಂಧಿತ ಮೋಡ್ ಅನ್ನು ಆನ್ ಮಾಡುವುದು ಮತ್ತು ವೀಡಿಯೊಗಳಿಗೆ ವಯಸ್ಸಿನ ನಿರ್ಬಂಧ ವಿಧಿಸುವುದು ಎರಡೂ ಒಂದೇ ಅಲ್ಲ. ವಯೋಮಾನ ನಿರ್ಬಂಧಿತ ಕಂಟೆಂಟ್ ಕುರಿತು ಇನ್ನಷ್ಟು ತಿಳಿಯಿರಿ..

How to turn Restricted Mode on and off

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

ನಿರ್ಬಂಧಿತ ಮೋಡ್ ಅನ್ನು ಆನ್ ಅಥವಾ ಆಫ್ ಮಾಡಿ

  1. ನಿಮ್ಮ ಖಾತೆಗೆ ಸೈನ್ ಇನ್ ಮಾಡಿ.
  2. ಮೇಲಿನ ಬಲಭಾಗದಲ್ಲಿರುವ, ನಿಮ್ಮ ಪ್ರೊಫೈಲ್ ಫೋಟೋ ಕ್ಲಿಕ್ ಮಾಡಿ .
  3. ಕೆಳಭಾಗದಲ್ಲಿರುವ, ನಿರ್ಬಂಧಿತ ಮೋಡ್ ಅನ್ನು ಕ್ಲಿಕ್ ಮಾಡಿ.
  4. ಮೇಲೆ ಬಲಗಡೆ ತೆರೆಯುವ ಬಾಕ್ಸ್‌‌ನಲ್ಲಿ, ನಿರ್ಬಂಧಿತ ಮೋಡ್ ಅನ್ನು ಆನ್ ಅಥವಾ ಆಫ್ ಮಾಡಲು, ನಿರ್ಬಂಧಿತ ಮೋಡ್ ಅನ್ನು ಸಕ್ರಿಯಗೊಳಿಸಿ ಕ್ಲಿಕ್ ಮಾಡಿ.

ನಿರ್ಬಂಧಿತ ಮೋಡ್ ಅನ್ನು ಆಫ್ ಮಾಡುವ ಮೂಲಕ ಟ್ರಬಲ್‌ಶೂಟ್ ಮಾಡಿ

ನಿಮ್ಮ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನೀವು ನಮೂದಿಸಿದ್ದರೆ ಮತ್ತು ನಿರ್ಬಂಧಿತ ಮೋಡ್ ಆನ್ ಆಗಿದ್ದರೆ, ಹೆಚ್ಚಿನ ಮಾಹಿತಿಗಾಗಿ ನೀವು YouTube ಕಂಟೆಂಟ್ ನಿರ್ಬಂಧಗಳ ಪುಟದಲ್ಲಿರುವ ನಿಮ್ಮ ಸೆಟ್ಟಿಂಗ್‌ಗಳನ್ನು ಪರಿಶೀಲಿಸಬಹುದು. ನಿರ್ವಾಹಕರು ಈ ನಿರ್ಬಂಧಗಳನ್ನು ಸೆಟ್ ಅಪ್ ಮಾಡಿದ್ದಾರೆಯೇ ಅಥವಾ ಅವುಗಳು ನಿಮ್ಮ ವೈಯಕ್ತಿಕ ಖಾತೆಯಲ್ಲಿವೆಯೇ ಎಂದು ಟೂಲ್ ಪರಿಶೀಲಿಸುತ್ತದೆ. ಸಂಬಂಧಿತ ನಿರ್ಬಂಧದ ಪಕ್ಕದಲ್ಲಿ ಚೆಕ್ ಮಾರ್ಕ್ ಪ್ರದರ್ಶಿಸುತ್ತದೆ. ಹೆಚ್ಚಿನ ಸಹಾಯದ ಅಗತ್ಯವಿದ್ದರೆ, ಟ್ರಬಲ್‌ಶೂಟಿಂಗ್‌ಗಾಗಿ ಟೂಲ್, ಮುಂದಿನ ಹಂತದತ್ತ ನಿಮಗೆ ಮಾರ್ಗದರ್ಶನ ನೀಡುತ್ತದೆ.

ಗಮನಿಸಿ: ಕೆಲವು ಮೊಬೈಲ್ ನೆಟ್‌ವರ್ಕ್ ಪೂರೈಕೆದಾರರು ಕಂಟೆಂಟ್ ಫಿಲ್ಟರ್‌ಗಳನ್ನು ನೀಡುತ್ತಾರೆ. ನಿಮ್ಮ ಸಾಧನವು ಅವರ ಮೊಬೈಲ್ ನೆಟ್‌ವರ್ಕ್‌ಗೆ ಸಂಪರ್ಕಗೊಂಡಾಗ ನೀವು ಆ್ಯಕ್ಸೆಸ್ ಮಾಡಬಹುದಾದ ವೆಬ್ ಕಂಟೆಂಟ್ ಪ್ರಕಾರವನ್ನು ಈ ಫಿಲ್ಟರ್‌ಗಳು ನಿರ್ಬಂಧಿಸುತ್ತವೆ. ನೀವು ಯಾವುದೇ ನೆಟ್‌ವರ್ಕ್ ಅಥವಾ ಖಾತೆ ಮಟ್ಟದ ನಿರ್ಬಂಧಗಳನ್ನು ಹೊಂದಿದ್ದೀರಾ ಎಂದು ನೋಡಲು YouTube ಕಂಟೆಂಟ್ ನಿರ್ಬಂಧಗಳ ಪುಟವನ್ನು ಪರಿಶೀಲಿಸಿ. ಸಂಬಂಧಪಟ್ಟ ನಿರ್ಬಂಧದ ಪಕ್ಕದಲ್ಲಿ ಚೆಕ್ ಮಾರ್ಕ್ ಪ್ರದರ್ಶಿಸುತ್ತದೆ ಮತ್ತು ಕೆಳಗಿನ ಪಠ್ಯವು ನಿರ್ಬಂಧದ ಮಟ್ಟವನ್ನು ಸೂಚಿಸುತ್ತದೆ. ನಿಮ್ಮ DNS ನಿರ್ಬಂಧಗಳು ಆನ್ ಆಗಿದ್ದರೆ ಮತ್ತು ಮಟ್ಟವನ್ನು "ಮಧ್ಯಮ" ಅಥವಾ "ಕಟ್ಟುನಿಟ್ಟು" ಎಂದು ಸೆಟ್ ಮಾಡಿದ್ದರೆ, ನೀವು ಕಂಟೆಂಟ್ ಫಿಲ್ಟರಿಂಗ್ ಅನ್ನು ಆನ್ ಮಾಡಿದ್ದೀರಿ ಎಂದರ್ಥ. ಈ ಸೆಟ್ಟಿಂಗ್ ಅನ್ನು ಹೇಗೆ ನಿರ್ವಹಿಸುವುದು ಅಥವಾ ಆಫ್ ಮಾಡುವುದು ಹೇಗೆ ಎಂಬುದನ್ನು ತಿಳಿಯಲು, ನಿಮ್ಮ ಮೊಬೈಲ್ ನೆಟ್‌ವರ್ಕ್ ಪೂರೈಕೆದಾರರನ್ನು ಸಂಪರ್ಕಿಸಲು ಪ್ರಯತ್ನಿಸಿ.

ನಿಮ್ಮ ಕುಟುಂಬಕ್ಕಾಗಿ ನಿರ್ಬಂಧಿತ ಮೋಡ್ ಅನ್ನು ನಿಯಂತ್ರಿಸಿ

ನೀವು Family Link ಆ್ಯಪ್ ಅನ್ನು ಬಳಸುತ್ತಿರುವ ಪೋಷಕರಾಗಿದ್ದರೆ, YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವಕ್ಕಾಗಿ ನಿಮ್ಮ ಮಗು ಅರ್ಹತೆ ಹೊಂದಿಲ್ಲದಿದ್ದರೆ ನೀವು ಅವರ ಖಾತೆಗೆ ನಿರ್ಬಂಧಿತ ಮೋಡ್ ಅನ್ನು ಆನ್ ಮಾಡಬಹುದು. Family Link ಆ್ಯಪ್‌ನ ಸೆಟ್ಟಿಂಗ್‌ಗಳು ಅಲ್ಲಿ ನಿರ್ಬಂಧಿತ ಮೋಡ್ ಅನ್ನು ಆನ್ ಮಾಡುವುದು ಹೇಗೆ ಎಂದು ತಿಳಿಯಿರಿ.

Family Link ನಲ್ಲಿ ನಿರ್ಬಂಧಿತ ಮೋಡ್ ಅನ್ನು ಆನ್ ಮಾಡಿದಾಗ, ನಿಮ್ಮ ಮಗು ಸೈನ್ ಇನ್ ಮಾಡಿರುವ ಯಾವುದೇ ಸಾಧನದಲ್ಲಿ ನಿರ್ಬಂಧಿತ ಮೋಡ್ ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಸಾಧ್ಯವಿಲ್ಲ.

ಗಮನಿಸಿ: ನಿಮ್ಮ ಮಗುವಿಗೆ ನೀವು ನಿರ್ಬಂಧಿತ ಮೋಡ್ ಅನ್ನು ಸೆಟ್ ಅಪ್ ಮಾಡಲು ಸಾಧ್ಯವಿಲ್ಲ, ಈ ಸಂದರ್ಭಗಳಲ್ಲಿ:

ನಿರ್ಬಂಧಿತ ಮೋಡ್ ಕುರಿತು ಇನ್ನಷ್ಟು ತಿಳಿಯಿರಿ

  • ನಾವು ವೀಡಿಯೊ ಶೀರ್ಷಿಕೆ, ವಿವರಣೆ, ಮೆಟಾಡೇಟಾ, ಸಮುದಾಯ ಮಾರ್ಗಸೂಚಿಗಳು ವಿಮರ್ಶೆಗಳು ಮತ್ತು ಸಂಭಾವ್ಯ ವಯಸ್ಕರ ಕಂಟೆಂಟ್ ಅನ್ನು ಗುರುತಿಸಲು ಮತ್ತು ಫಿಲ್ಟರ್ ಮಾಡಲು ವಯಸ್ಸಿನ ನಿರ್ಬಂಧಗಳಂತಹ ಹಲವು ಸಂಕೇತಗಳನ್ನು ಬಳಸುತ್ತೇವೆ.
  • ನಿರ್ಬಂಧಿತ ಮೋಡ್ ಪ್ರತಿ ಭಾಷೆಯಲ್ಲಿ ಲಭ್ಯವಿದೆ, ಆದರೆ ಸಾಂಸ್ಕೃತಿಕ ರೂಢಿಗಳು ಮತ್ತು ಸೂಕ್ಷ್ಮತೆಗಳಲ್ಲಿನ ವ್ಯತ್ಯಾಸಗಳಿಂದಾಗಿ, ಗುಣಮಟ್ಟವು ಬದಲಾಗಬಹುದು.
  • ನಿರ್ಬಂಧಿತ ಮೋಡ್ ಅನ್ನು ಆನ್ ಮಾಡಿದಾಗ, ನೀವು ವೀಕ್ಷಿಸುವ ವೀಡಿಯೊಗಳಲ್ಲಿನ ಕಾಮೆಂಟ್‌ಗಳನ್ನು ವೀಕ್ಷಿಸಲು ನಿಮಗೆ ಸಾಧ್ಯವಾಗುವುದಿಲ್ಲ.
  • ನಿರ್ಬಂಧಿತ ಮೋಡ್ ಬ್ರೌಸರ್ ಅಥವಾ ಸಾಧನದ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ನೀವು ಬಳಸುವ ಪ್ರತಿಯೊಂದು ಬ್ರೌಸರ್‌ಗೆ ನೀವು ಅದನ್ನು ಆನ್ ಮಾಡಬೇಕಾಗುತ್ತದೆ. ನಿಮ್ಮ ಬ್ರೌಸರ್ ಅಥವಾ ಸಾಧನವು ಬಹು ಪ್ರೊಫೈಲ್‌ಗಳನ್ನು ಬೆಂಬಲಿಸಿದರೆ, ನೀವು ಪ್ರತಿ ಪ್ರೊಫೈಲ್‌ಗೆ ಈ ಮೋಡ್ ಅನ್ನು ಆನ್ ಮಾಡಬೇಕು.
  • ರಚನೆಕಾರರು: ನಿರ್ಬಂಧಿತ ಮೋಡ್ ನಿಮ್ಮ ಕಂಟೆಂಟ್‌ನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ತಿಳಿಯಿರಿ.

Assistant ಸ್ಪೀಕರ್‌ಗಳು ಮತ್ತು ಸ್ಮಾರ್ಟ್ ಡಿಸ್‌ಪ್ಲೇ‌ಗಳು

  1. ನಿಮ್ಮ ಮೊಬೈಲ್ ಸಾಧನದಲ್ಲಿ Home ಆ್ಯಪ್ ತೆರೆಯಿರಿ.
  2. ನೀವು ಮಾರ್ಪಡಿಸಲು ಬಯಸುವ ಸ್ಪೀಕರ್ ಅಥವಾ ಸ್ಮಾರ್ಟ್ ಡಿಸ್‌ಪ್ಲೇ ಅನ್ನು ಟ್ಯಾಪ್ ಮಾಡಿ.
  3. ಸೆಟ್ಟಿಂಗ್‌ಗಳು ಅನ್ನು ಟ್ಯಾಪ್ ಮಾಡಿ.
  4. ನೋಟಿಫಿಕೇಶನ್‌ಗಳು ಮತ್ತು ಡಿಜಿಟಲ್ ಯೋಗಕ್ಷೇಮ ಅನ್ನು ಟ್ಯಾಪ್ ಮಾಡಿ.
  5. YouTube ಸೆಟ್ಟಿಂಗ್‌ಗಳು ಅನ್ನು ಟ್ಯಾಪ್ ಮಾಡಿ.
  6. ನಿಮ್ಮ ಸ್ಮಾರ್ಟ್ ಡಿಸ್‌ಪ್ಲೇಗಾಗಿ ನಿರ್ಬಂಧಿತ ಮೋಡ್ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಲು ನಿಮಗೆ ಎರಡು ಮಾರ್ಗಗಳಿವೆ. ಅವು ಯಾವುವೆಂದರೆ:
    1. ನಿಮಗಾಗಿ ನಿರ್ಬಂಧಿತ ಮೋಡ್ ಅನ್ನು ನೀವು ಆನ್ ಅಥವಾ ಆಫ್ ಮಾಡಬಹುದು ಮತ್ತು
    2. ಒಂದು ವೇಳೆ ನೀವು ಸಾಧನದ ನಿರ್ವಾಹಕರಾಗಿದ್ದಲ್ಲಿ, ನೀವು ಇತರ ಎಲ್ಲಾ ಬಳಕೆದಾರರಿಗಾಗಿ ನಿರ್ಬಂಧಿತ ಮೋಡ್ ಅನ್ನು ಆನ್ ಅಥವಾ ಆಫ್ ಮಾಡಬಹುದು.
ಗಮನಿಸಿ: ನಿರ್ಬಂಧಿತ ಮೋಡ್ ಅನ್ನು ಸಾಧನ ಮಟ್ಟದಲ್ಲಿ ಸೆಟ್ ಮಾಡಲಾಗುತ್ತದೆ. ನಿಮ್ಮ ಸಾಧನದ ಮೂಲಕ ಕಂಟೆಂಟ್ ಪ್ಲೇ ಆಗದಿದ್ದರೆ, ನಿಮ್ಮ ನಿರ್ಬಂಧಿತ ಮೋಡ್ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ. 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5882765318842734706
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false