ಪಾವತಿಸಿದ ಉತ್ಪನ್ನ ಇರಿಸುವಿಕೆಗಳು, ಪ್ರಾಯೋಜಕತ್ವಗಳು ಮತ್ತು ಅನುಮೋದನೆಗಳನ್ನು ಸೇರಿಸುವುದು

ನಿಮ್ಮ ವೀಡಿಯೊಗಳಲ್ಲಿ ಪಾವತಿಸಿದ ಉತ್ಪನ್ನ ಇರಿಸುವಿಕೆಗಳು, ಅನುಮೋದನೆಗಳು, ಪ್ರಾಯೋಜಕತ್ವಗಳು ಅಥವಾ ವೀಕ್ಷಕರಿಗೆ ಬಹಿರಂಗಪಡಿಸುವಿಕೆಯ ಅಗತ್ಯವಿರುವ ಇತರ ಕಂಟೆಂಟ್ ಅನ್ನು ನೀವು ಸೇರಿಸಬಹುದು. ಅವುಗಳಲ್ಲಿ ಯಾವುದನ್ನಾದರೂ ನೀವು ಸೇರಿಸಿದರೆ, ನಿಮ್ಮ ವೀಡಿಯೊ ವಿವರಗಳಲ್ಲಿ ಪಾವತಿ ಪ್ರಚಾರ ಬಾಕ್ಸ್ ಆಯ್ಕೆಮಾಡುವ ಮೂಲಕ ನಮಗೆ ತಿಳಿಸಬೇಕಾಗುತ್ತದೆ. 

ಎಲ್ಲಾ ಪಾವತಿ ಪ್ರಚಾರಗಳು Google Ads ನೀತಿಗಳು ಮತ್ತು YouTube ನ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ನೀವು ಮತ್ತು ನಿಮ್ಮ ಜೊತೆಗೆ ಕಾರ್ಯನಿರ್ವಹಿಸುವ ಬ್ರ್ಯಾಂಡ್‍ಗಳು, ತಮ್ಮ ಕಂಟೆಂಟ್‍ನಲ್ಲಿನ ಪಾವತಿ ಪ್ರಚಾರವನ್ನು ಬಹಿರಂಗಪಡಿಸುವುದಕ್ಕೆ ಸಂಬಂಧಿಸಿದ ಸ್ಥಳೀಯ ಮತ್ತು ಕಾನೂನು ಹೊಣೆಗಾರಿಕೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ಅನುಸರಿಸಲು ಜವಾಬ್ದಾರರಾಗಿರುತ್ತೀರಿ. ಈ ಕೆಲವು ಹೊಣೆಗಾರಿಕೆಗಳಲ್ಲಿ ಯಾವಾಗ ಮತ್ತು ಹೇಗೆ ಬಹಿರಂಗಪಡಿಸಬೇಕು ಮತ್ತು ಅದನ್ನು ಯಾರಿಗೆ ಬಹಿರಂಗಪಡಿಸಬೇಕು ಎಂಬುದು ಸೇರಿರುತ್ತವೆ.

ರಚನೆಕಾರರು ಪಾವತಿಸಿದ ಪ್ರಚಾರವನ್ನು ಘೋಷಿಸಿರುವ ನಿರ್ದಿಷ್ಟ ವೀಡಿಯೊಗಳಿಗಾಗಿ ಹುಡುಕಲು ನೀವು ಬಯಸಿದರೆ, ಈ ಲಿಂಕ್ ಬಳಸಿ. ನೀವು ಮೊಬೈಲ್ ಸಾಧನವನ್ನು ಬಳಸುತ್ತಿದ್ದರೆ, ವೆಬ್ ವಿಳಾಸವನ್ನು ನಕಲಿಸಲು ಲಿಂಕ್ ಅನ್ನು ಸ್ಪರ್ಶಿಸಿ ಮತ್ತು ಒತ್ತಿ ಹಿಡಿಯಿರಿ, ತದನಂತರ ಅದನ್ನು ನಿಮ್ಮ ಬ್ರೌಸರ್‌ನ ನ್ಯಾವಿಗೇಶನ್ ಬಾರ್‌ಗೆ ಅಂಟಿಸಿ.
ಪಾವತಿಸಿದ ಉತ್ಪನ್ನ ಇರಿಸುವಿಕೆಗಳು, ಪ್ರಾಯೋಜಕತ್ವಗಳು ಮತ್ತು ಅನುಮೋದನೆಗಳನ್ನು ಎಲ್ಲಿ ಸೇರಿಸಿಕೊಳ್ಳಬಾರದು

Google Ads ನೀತಿಗಳನ್ನು ಅನುಸರಿಸುವುದು ಎಂದರೆ ನಿಮ್ಮ ಕಂಟೆಂಟ್‌ನಲ್ಲಿ ಈ ಮುಂದಿನ ಉತ್ಪನ್ನಗಳು ಮತ್ತು ಸೇವೆಗಳ ಪಾವತಿ ಪ್ರಚಾರಗಳನ್ನು ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದರ್ಥ:

  • ಕಾನೂನುಬಾಹಿರ ಉತ್ಪನ್ನಗಳು ಮತ್ತು ಸೇವೆಗಳು
  • ಲೈಂಗಿಕ ಅಥವಾ ಎಸ್ಕಾರ್ಟ್ ಸೇವೆಗಳು
  • ವಯಸ್ಕರ ಕಂಟೆಂಟ್
  • ಮೇಲ್-ಆರ್ಡರ್ ವಧುಗಳು
  • ಮನರಂಜನೆಗಾಗಿ ಬಳಸುವ ಡ್ರಗ್‌ಗಳು
  • ಪ್ರಿಸ್ಕ್ರಿಪ್ಷನ್ ಇಲ್ಲದ ಔಷಧಿಗಳು
  • Google ಅಥವಾ YouTube ಇನ್ನೂ ಪರಿಶೀಲಿಸಿರದ ಆನ್‌ಲೈನ್ ಗ್ಯಾಂಬ್ಲಿಂಗ್ ಸೈಟ್‌ಗಳು
  • ಪರೀಕ್ಷೆಗಳು ಅಥವಾ ಟೆಸ್ಟ್‌ಗಳಲ್ಲಿ ಮೋಸ ಮಾಡುವುದಕ್ಕೆ ಸಂಬಂಧಿಸಿದ ಸೇವೆಗಳು
  • ಹ್ಯಾಕಿಂಗ್, ಫಿಶಿಂಗ್ ಅಥವಾ ಸ್ಪೈವೇರ್
  • ಸ್ಫೋಟಕಗಳು
  • ವಂಚನೆಯ ಅಥವಾ ದಾರಿತಪ್ಪಿಸುವ ವ್ಯಾಪಾರಗಳು

ಈ ನೀತಿಯು ವೀಡಿಯೊಗಳು, ವೀಡಿಯೊ ವಿವರಣೆಗಳು, ಕಾಮೆಂಟ್‌ಗಳು, ಲೈವ್ ಸ್ಟ್ರೀಮ್‌ಗಳು, Shorts ಮತ್ತು ಇತರ ಯಾವುದೇ YouTube ಉತ್ಪನ್ನ ಅಥವಾ ಫೀಚರ್‌ಗೆ ಅನ್ವಯಿಸುತ್ತದೆ. ಈ ಪಟ್ಟಿಯು ಸಮಗ್ರವಾಗಿಲ್ಲ. ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಬಹುದು ಎಂದು ನಿಮಗೆ ಅನಿಸಿದರೆ, ಅದನ್ನು ಪೋಸ್ಟ್ ಮಾಡಬೇಡಿ. 

ಉದಾಹರಣೆಗಳು

YouTube ನಲ್ಲಿ ಅನುಮತಿಯಿಲ್ಲದ ಕಂಟೆಂಟ್‌ನ ಕೆಲವೊಂದು ಉದಾಹರಣೆಗಳು ಇಲ್ಲಿವೆ.

  • ಶೈಕ್ಷಣಿಕ ಪ್ರಬಂಧ-ಬರೆಯುವಿಕೆ ಸೇವೆಯ ಪಾವತಿ ಪ್ರಚಾರ
  • ನಕಲಿ ಪಾಸ್‌ಪೋರ್ಟ್‌ಗಳನ್ನು ಮಾರಾಟ ಮಾಡುವ ಅಥವಾ ನಕಲಿ ಅಧಿಕೃತ ದಾಖಲೆಗಳನ್ನು ಸೃಷ್ಟಿಸುವ ಕುರಿತು ಸೂಚನೆಗಳನ್ನು ಒದಗಿಸುವ ವೆಬ್‌ಸೈಟ್‌ನ ಪಾವತಿ ಪ್ರಚಾರ
  • ನಕಲಿ ಕ್ರೆಡಿಟ್ ಕಾರ್ಡ್ ಸಂಖ್ಯೆಗಳನ್ನು ಜನರೇಟ್ ಮಾಡುವ ಸಾಫ್ಟ್‌ವೇರ್‌ನ ಪಾವತಿ ಪ್ರಚಾರ
  • ಪ್ರಿಸ್ಕ್ರಿಪ್ಶನ್‌ಗಳಲ್ಲಿದೇ ನಿರ್ಬಂಧಿತ ಔಷಧಿಗಳನ್ನು ಮಾರಾಟ ಮಾಡುವ ಆನ್‌ಲೈನ್ ಫಾರ್ಮಸಿಯ ಪಾವತಿ ಪ್ರಚಾರ

ಒಂದು ವೇಳೆ ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ ಮತ್ತು ನಿಮಗೆ ತಿಳಿಸಲು ಇಮೇಲ್ ಕಳುಹಿಸುತ್ತೇವೆ. ಇದು ನಮ್ಮ ಸಮುದಾಯ ಮಾರ್ಗಸೂಚಿಗಳ ನಿಮ್ಮ ಮೊದಲ ಉಲ್ಲಂಘನೆಯಾಗಿದ್ದರೆ, ನಿಮ್ಮ ಚಾನಲ್‌ಗೆ ಯಾವುದೇ ದಂಡನೆಯಿಲ್ಲದೆ, ನೀವು ನಮ್ಮಿಂದ ಎಚ್ಚರಿಕೆಯೊಂದನ್ನು ಸ್ವೀಕರಿಸುವಿರಿ. 90 ದಿನಗಳ ನಂತರ ಎಚ್ಚರಿಕೆಯ ಅವಧಿಯು ಮುಕ್ತಾಯವಾಗಲು ನೀವು ನೀತಿ ತರಬೇತಿಯನ್ನು ತೆಗೆದುಕೊಳ್ಳಬಹುದು. ಆದರೂ, ನಿಮ್ಮ ಕಂಟೆಂಟ್ ಆ 90 ದಿನಗಳ ವಿಂಡೋದಲ್ಲಿ ಅದೇ ನೀತಿಯನ್ನು ಉಲ್ಲಂಘಿಸಿದರೆ, ಎಚ್ಚರಿಕೆಯ ಅವಧಿಯು ಮುಗಿಯುವುದಿಲ್ಲ ಮತ್ತು ನಿಮ್ಮ ಚಾನಲ್‌ಗೆ ಸ್ಟ್ರೈಕ್ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬೇರೆ ನೀತಿಯನ್ನು ಉಲ್ಲಂಘಿಸಿದರೆ, ನಿಮಗೆ ಮತ್ತೊಂದು ಎಚ್ಚರಿಕೆ ಸಿಗುತ್ತದೆ. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ನೀತಿ ತರಬೇತಿಗಳನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು.

ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುತ್ತದೆ. ನೀವು YouTube ನಲ್ಲಿ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗೆ ಸಂಬಂಧಿಸಿದ ಸಾಮಾನ್ಯ ಸಂಗತಿಗಳ ಕುರಿತು ಇನ್ನಷ್ಟು ತಿಳಿಯಬಹುದು. 

ಜೊತೆಗೆ, ಪ್ರಚಾರ ಮಾಡಲಾಗುತ್ತಿರುವ ಉತ್ಪನ್ನ ಅಥವಾ ಸೇವೆಯು ಎಲ್ಲಾ ವಯೋಮಾನದವರಿಗೂ ಸೂಕ್ತವಲ್ಲದಿದ್ದರೆ, ಕಂಟೆಂಟ್‍ನ ಮೇಲೆ ನಾವು ವಯಸ್ಸಿನ ನಿರ್ಬಂಧವನ್ನು ವಿಧಿಸಬಹುದು.

ನಾವು ಪಾವತಿಸಿದ ಉತ್ಪನ್ನ ಇರಿಸುವಿಕೆಗಳು, ಪ್ರಾಯೋಜಕತ್ವಗಳು ಮತ್ತು ಅನುಮೋದನೆಗಳ ಕುರಿತು ಮಾತನಾಡುವಾಗ ನಾವು ಏನು ಅರ್ಥಮಾಡಿಸಲು ಬಯಸುತ್ತೇವೆ?

ಪರಿಹಾರಕ್ಕೆ ವಿನಿಮಯವಾಗಿ ಥರ್ಡ್ ಪಾರ್ಟಿಗಾಗಿ ರಚಿಸಲಾದ ಕಂಟೆಂಟ್‌ನ ತುಣುಕುಗಳಿಗೆ ಪಾವತಿಸಿದ ಉತ್ಪನ್ನ ಇರಿಸುವಿಕೆಗಳು ಎಂದು ಕರೆಯುವರು. ಥರ್ಡ್ ಪಾರ್ಟಿಯ ಬ್ರ್ಯಾಂಡ್, ಸಂದೇಶ ಅಥವಾ ಉತ್ಪನ್ನವು ನೇರವಾಗಿ ಸಂಯೋಜಿತವಾಗಿರುವ ಕಂಟೆಂಟ್‍ ಸಹ ಈ ರೀತಿಯ ಕಂಟೆಂಟ್ ಆಗಿರುತ್ತದೆ.

ಅನುಮೋದನೆಗಳು ಜಾಹೀರಾತುದಾರರಿಗಾಗಿ (ಅಥವಾ ರಚನೆಕಾರರು/ಬ್ರ್ಯಾಂಡ್ ನಡುವಿನ ಸಂಬಂಧ ಸ್ಪಷ್ಟವಾಗಿರದೇ ಇದ್ದರೆ ರಚನೆಕಾರರ ಸ್ವಂತ ಬ್ರ್ಯಾಂಡ್‍ಗಳಿಗಾಗಿ) ರಚಿಸಲಾದ ಕಂಟೆಂಟ್ ಆಗಿದ್ದು, ಅವು ಕಂಟೆಂಟ್ ರಚನೆಕಾರರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಬಳಕೆದಾರರು ನಂಬುವ ಸಾಧ್ಯತೆಯಿರುವ ಸಂದೇಶವನ್ನು ಒಳಗೊಂಡಿರುತ್ತವೆ.

ಪ್ರಾಯೋಜಕತ್ವಗಳು ಎಂದರೆ, ಥರ್ಡ್ ಪಾರ್ಟಿಯು ಸಂಪೂರ್ಣವಾಗಿ ಅಥವಾ ಭಾಗಶಃ ಹಣ ಒದಗಿಸಿರುವ ಕಂಟೆಂಟ್‍ನ ತುಣುಕುಗಳಾಗಿವೆ. ಪ್ರಾಯೋಜಕತ್ವಗಳು ಸಾಮಾನ್ಯವಾಗಿ ಥರ್ಡ್ ಪಾರ್ಟಿಯ ಬ್ರ್ಯಾಂಡ್, ಸಂದೇಶ ಅಥವಾ ಉತ್ಪನ್ನವನ್ನು ನೇರವಾಗಿ ಕಂಟೆಂಟ್‍ನೊಂದಿಗೆ ಸಂಯೋಜಿಸದೇ ಬ್ರ್ಯಾಂಡ್, ಸಂದೇಶ ಅಥವಾ ಉತ್ಪನ್ನವನ್ನು ಪ್ರಚಾರ ಮಾಡುತ್ತವೆ.

ನಿಮಗೆ ಅನ್ವಯಿಸುವ ಕಾನೂನುಗಳು ಪಾವತಿ ಪ್ರಚಾರಗಳನ್ನು ವಿಭಿನ್ನವಾಗಿ ವ್ಯಾಖ್ಯಾನಿಸಬಹುದು ಎಂಬುದನ್ನು ಗಮನಿಸಿ. ರಚನೆಕಾರರು ಮತ್ತು ಬ್ರ್ಯಾಂಡ್‍ಗಳು, ತಮ್ಮ ಅಧಿಕಾರ ಕ್ಷೇತ್ರಕ್ಕೆ ಅನುಗುಣವಾಗಿ ತಮ್ಮ ಕಂಟೆಂಟ್‌ನಲ್ಲಿನ ಪಾವತಿ ಪ್ರಚಾರವನ್ನು ಬಹಿರಂಗಪಡಿಸುವುದಕ್ಕೆ ಸಂಬಂಧಿಸಿದ ಕಾನೂನು ಹೊಣೆಗಾರಿಕೆಗಳನ್ನು ತಿಳಿದುಕೊಳ್ಳಲು ಮತ್ತು ಸಂಪೂರ್ಣವಾಗಿ ಅನುಸರಿಸಲು ಜವಾಬ್ದಾರರಾಗಿರುತ್ತಾರೆ. ಕಾನೂನು ಹೊಣೆಗಾರಿಕೆಗಳು ಯಾವಾಗ ಮತ್ತು ಹೇಗೆ ಬಹಿರಂಗಪಡಿಸಬೇಕು, ಹಾಗೆಯೇ ಅದನ್ನು ಯಾರಿಗೆ ಬಹಿರಂಗಪಡಿಸಬೇಕು ಎಂಬುದನ್ನು ಒಳಗೊಂಡಿರಬಹುದು.

ತಮ್ಮ ಸ್ಥಳೀಯ ಕಾನೂನುಗಳ ಅಡಿಯಲ್ಲಿ ನಿರ್ದಿಷ್ಟ ಪ್ರಕಾರಗಳ ಪಾವತಿ ಪ್ರಚಾರಗಳನ್ನು ಅನುಮತಿಸಲಾಗಿದೆಯೇ ಎಂಬುದನ್ನು ಸಹ ರಚನೆಕಾರರು ಮತ್ತು ಬ್ರ್ಯಾಂಡ್‌ಗಳು ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ, UK ಮತ್ತು EU ನಲ್ಲಿ, ಆಡಿಯೋವಿಶುವಲ್ ಮೀಡಿಯಾ ಸರ್ವಿಸಸ್ ಡೈರೆಕ್ಟಿವ್ ಅಡಿಯಲ್ಲಿ “ಮಕ್ಕಳ ಕಾರ್ಯಕ್ರಮಗಳು” ಎಂಬುದಾಗಿ ವರ್ಗೀಕರಿಸಲಾಗಿರುವ ಕೆಲವು ವೀಡಿಯೊಗಳನ್ನು ಪ್ರಾಯೋಜಕತ್ವಗಳು ಅಥವಾ ಪಾವತಿಸಿದ ಉತ್ಪನ್ನ ಇರಿಸುವಿಕೆಗಳನ್ನು ಒಳಗೊಳ್ಳುವುದರಿಂದ ನಿಷೇಧಿಸಲಾಗಬಹುದು.
ಒಂದು ವೇಳೆ ಪಾವತಿಸಿದ ಉತ್ಪನ್ನ ಇರಿಸುವಿಕೆ, ಅನುಮೋದನೆ ಅಥವಾ ಇತರ ವಾಣಿಜ್ಯ ಸಂಬಂಧವನ್ನು ನನ್ನ ವೀಡಿಯೊ ಹೊಂದಿದ್ದರೆ ನಾನು YouTube ಗೆ ತಿಳಿಸಬೇಕೇ?
ನಿಮ್ಮ ಕಂಟೆಂಟ್, ಪಾವತಿಸಿದ ಉತ್ಪನ್ನ ಇರಿಸುವಿಕೆ, ಅನುಮೋದನೆ ಅಥವಾ ಇತರ ವಾಣಿಜ್ಯ ಸಂಬಂಧವನ್ನು ಹೊಂದಿದ್ದರೆ, ನೀವು YouTube ಗೆ ತಿಳಿಸಬೇಕು, ಇದರಿಂದ ಬಳಕೆದಾರರಿಗೆ ಪ್ರಕಟಣೆಗಳನ್ನು ಒದಗಿಸುವುದನ್ನು ನಾವು ಸುಗಮಗೊಳಿಸಬಹುದು. ನಿಮ್ಮ ಅಧಿಕಾರ ಕ್ಷೇತ್ರದ ಕಾನೂನುಗಳನ್ನು ಅವಲಂಬಿಸಿ, ನಿಮ್ಮ ಹೊಣೆಗಾರಿಕೆಗಳು ಹೆಚ್ಚಾಗಬಹುದು ಎಂಬುದನ್ನು ಗಮನಿಸಿ. ಆ ಹೊಣೆಗಾರಿಕೆಗಳನ್ನು ನೀವು ಅನುಸರಿಸದೇ ಇದ್ದರೆ, ನಿಮ್ಮ ಕಂಟೆಂಟ್ ಅಥವಾ ಖಾತೆಯ ವಿರುದ್ಧ ನಾವು ಕ್ರಮ ತೆಗೆದುಕೊಳ್ಳಬಹುದು. YouTube ಗೆ ತಿಳಿಸಲು:
  1. ಕಂಪ್ಯೂಟರ್‌ನಲ್ಲಿ, YouTube Studio ಗೆ ಸೈನ್ ಇನ್ ಮಾಡಿ.
  2. ಎಡ ವಿಭಾಗದಿಂದ, ಕಂಟೆಂಟ್ ಅನ್ನು ಆಯ್ಕೆಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊವನ್ನು ಕ್ಲಿಕ್ ಮಾಡಿ.
  4. ಹೆಚ್ಚಿನ ಆಯ್ಕೆಗಳು ಅನ್ನು ಆಯ್ಕೆಮಾಡಿ. 
  5. "ನನ್ನ ವೀಡಿಯೊ, ಉತ್ಪನ್ನ ಇರಿಸುವಿಕೆ, ಪ್ರಾಯೋಜಕತ್ವ ಅಥವಾ ಅನುಮೋದನೆಯಂತಹ ಪಾವತಿ ಪ್ರಚಾರವನ್ನು ಒಳಗೊಂಡಿದೆ" ಎಂಬುದರ ಪಕ್ಕದಲ್ಲಿರುವ ಬಾಕ್ಸ್‌ನಲ್ಲಿ ಗುರುತು ಹಾಕಿ.
  6. ಸೇವ್ ಮಾಡಿ ಎಂಬುದನ್ನು ಆಯ್ಕೆಮಾಡಿ.

ನಾನು "ನನ್ನ ವೀಡಿಯೊ, ಉತ್ಪನ್ನ ಇರಿಸುವಿಕೆ, ಪ್ರಾಯೋಜಕತ್ವ ಅಥವಾ ಅನುಮೋದನೆಯಂತಹ ಪಾವತಿ ಪ್ರಚಾರವನ್ನು ಒಳಗೊಂಡಿದೆ" ಬಾಕ್ಸ್‌ನಲ್ಲಿ ಗುರುತು ಹಾಕಿದಾಗ ಏನಾಗುತ್ತದೆ?
ನೀವು ನಿಮ್ಮ ಸುಧಾರಿತ ಸೆಟ್ಟಿಂಗ್‍ಗಳಲ್ಲಿನ "ಕಂಟೆಂಟ್ ಘೋಷಣೆ" ವಿಭಾಗದಲ್ಲಿರುವ "ವೀಡಿಯೊ ಪಾವತಿ ಪ್ರಚಾರವನ್ನು ಒಳಗೊಂಡಿದೆ" ಬಾಕ್ಸ್ ಅನ್ನು ಗುರುತು ಹಾಕಿದಾಗ, ಅತ್ಯುತ್ತಮ ವೀಕ್ಷಕ ಅನುಭವವನ್ನು ಕಾಪಾಡಲು ನೀವು ಸಹಾಯ ಮಾಡುತ್ತೀರಿ.
ಆಗಲೂ ಸಹ ಈ ವೀಡಿಯೊಗಳಲ್ಲಿ ನಾವು ಜಾಹೀರಾತುಗಳನ್ನು ರನ್ ಮಾಡುತ್ತೇವೆ. ಪಾವತಿ ಪ್ರಚಾರವನ್ನು ವೀಡಿಯೊ ಒಳಗೊಂಡಿದೆ ಎಂಬುದಾಗಿ ನೀವು ನಮಗೆ ತಿಳಿಸಿದಾಗ, ನಿಮ್ಮ ಬ್ರ್ಯಾಂಡ್ ಪಾಲುದಾರರ ಜೊತೆಗೆ ಸಂಘರ್ಷಕ್ಕೊಳಗಾಗುವ ಜಾಹೀರಾತನ್ನು ಪರ್ಯಾಯ ಜಾಹೀರಾತಿನೊಂದಿಗೆ ನಾವು ಬದಲಾಯಿಸಬಹುದು. ಹಾಗೆಯೇ, ನೀವು ನಮಗೆ ತಿಳಿಸಿದಾಗ, ನಮ್ಮ ಅಸ್ತಿತ್ವದಲ್ಲಿರುವ ನೀತಿಗಳ ಪ್ರಕಾರ YouTube Kids ಆ್ಯಪ್‌ನಿಂದ ನಿಮ್ಮ ವೀಡಿಯೊವನ್ನು ನಾವು ತೆಗೆದುಹಾಕುತ್ತೇವೆ.
ಈ ವೀಡಿಯೊಗಳಲ್ಲಿ YouTube ಆಗಲೂ ಸಹ ಜಾಹೀರಾತುಗಳನ್ನು ರನ್ ಮಾಡುತ್ತದೆಯೇ?
ಹೌದು, ಈ ವೀಡಿಯೊಗಳಲ್ಲಿ YouTube ಆಗಲೂ ಸಹ ಜಾಹೀರಾತುಗಳನ್ನು ರನ್ ಮಾಡುತ್ತದೆ.
 
ಕೆಲವೊಮ್ಮೆ, ಪಾವತಿ ಪ್ರಚಾರಗಳನ್ನು ಒಳಗೊಂಡಿರುವ ವೀಡಿಯೊಗಳಲ್ಲಿ, ನಿಮ್ಮ ಬ್ರ್ಯಾಂಡ್ ಪಾಲುದಾರರ ಜಾಹೀರಾತಿನೊಂದಿಗೆ ಸಂಘರ್ಷಕ್ಕೊಳಗಾಗುವ ಜಾಹೀರಾತನ್ನು ನಾವು ಬೇರೆ ಜಾಹೀರಾತಿನೊಂದಿಗೆ ಬದಲಾಯಿಸಬಹುದು. ಈ ಬದಲಾವಣೆಯನ್ನು ನಾವು ಜಾಹೀರಾತುದಾರರಿಗೆ ನೀಡುವ ಮೌಲ್ಯವನ್ನು ರಕ್ಷಿಸುವುದಕ್ಕಾಗಿ ಮಾಡಲಾಗುತ್ತದೆ.
 
ಉದಾಹರಣೆಗೆ, ಕಂಪನಿ A ಗೆ ಸಂಬಂಧಿಸಿದ ಬ್ರ್ಯಾಂಡ್ ಪ್ರಸ್ತಾಪಗಳನ್ನು ಮತ್ತು ಉತ್ಪನ್ನ ಇರಿಸುವಿಕೆಗಳನ್ನು ಹೊಂದಿರುವ ವೀಡಿಯೊವನ್ನು ನೀವು ಅಪ್‌ಲೋಡ್ ಮಾಡುತ್ತೀರಿ ಎಂದು ಭಾವಿಸೋಣ. ಆ ವೀಡಿಯೊಗೆ ಸಂಬಂಧಿಸಿದ ಜಾಹೀರಾತು ಸ್ಥಳವನ್ನು ಕಂಪನಿ B ಗೆ ಮಾರಾಟ ಮಾಡುವುದರಲ್ಲಿ ಅರ್ಥವಿಲ್ಲ.
ನನ್ನ ವೀಡಿಯೊಗೆ ಸಂಬಂಧಿಸಿದ ಯಾವುದೇ ವಾಣಿಜ್ಯ ಸಂಬಂಧದ ಕುರಿತು ಬೇರೆ ಯಾರಿಗಾದರೂ ನಾನು ತಿಳಿಸಬೇಕೇ?
ನೀವು ತಿಳಿಸಬೇಕಾಗಬಹುದು. ಪಾವತಿ ಪ್ರಚಾರದಲ್ಲಿ ತೊಡಗಿರುವ ರಚನೆಕಾರರು ಮತ್ತು ಬ್ರ್ಯಾಂಡ್‌ಗಳಿಗೆ ಸಂಬಂಧಿಸಿದಂತೆ ವಿಭಿನ್ನ ಅಧಿಕಾರ ಕ್ಷೇತ್ರಗಳು ವಿವಿಧ ಅಗತ್ಯತೆಗಳನ್ನು ಹೊಂದಿವೆ. 
 
ನಿಮ್ಮ ಕಂಟೆಂಟ್ ಪಾವತಿಸಿದ ಪ್ರಚಾರವನ್ನು ಒಳಗೊಂಡಿರುವಾಗ, ನಿಮ್ಮ ಕಂಟೆಂಟ್‌ನ ಮೇಲೆ ಪ್ರಭಾವ ಬೀರಿರಬಹುದಾದ ಯಾವುದೇ ವಾಣಿಜ್ಯ ಸಂಬಂಧಗಳ ಕುರಿತು ನೀವು ವೀಕ್ಷಕರಿಗೆ ತಿಳಿಸುವುದು, ಕೆಲವು ಅಧಿಕಾರ ಕ್ಷೇತ್ರಗಳು ಮತ್ತು ಬ್ರ್ಯಾಂಡ್ ಪಾಲುದಾರರಿಗೆ ಅಗತ್ಯವಿರುತ್ತದೆ. ನಿಮಗೆ ಅನ್ವಯಿಸುವ ಪಾವತಿ ಪ್ರಚಾರ ಕಂಟೆಂಟ್ ಕುರಿತಾದ ಕಾನೂನುಗಳು ಮತ್ತು ನಿಯಮಗಳನ್ನು ಪರಿಶೀಲಿಸುವುದು ಮತ್ತು ಅನುಸರಿಸುವುದು ನಿಮ್ಮ ಜವಾಬ್ದಾರಿಯಾಗಿದೆ. 
ನನ್ನ ವೀಡಿಯೊಗಳಲ್ಲಿನ ಪಾವತಿ ಪ್ರಚಾರದ ಕುರಿತು ವೀಕ್ಷಕರಿಗೆ ಮಾಹಿತಿ ನೀಡಲು ನನಗೆ ಸಹಾಯ ಮಾಡಬಹುದಾದ ಯಾವುದಾದರೂ ಫೀಚರ್ ಇದೆಯೇ?

ಹೌದು. ನಿಮ್ಮ ವೀಡಿಯೊವನ್ನು ಪಾವತಿ ಪ್ರಚಾರಗಳನ್ನು ಒಳಗೊಂಡಿರುವುದು ಎಂಬುದಾಗಿ ನೀವು ಗುರುತು ಮಾಡಿದಾಗ, ವೀಡಿಯೊದ ಆರಂಭದಲ್ಲಿ 10 ಸೆಕೆಂಡುಗಳ ಕಾಲ ವೀಕ್ಷಕರಿಗೆ ಪ್ರಕಟಣೆ ಸಂದೇಶವನ್ನು ನಾವು ಸ್ವಯಂಚಾಲಿತವಾಗಿ ತೋರಿಸುತ್ತೇವೆ. ಈ ಪ್ರಕಟಣೆ ಸಂದೇಶವು, ಈ ವೀಡಿಯೊ ಪಾವತಿಸಿದ ಪ್ರಚಾರಗಳನ್ನು ಒಳಗೊಂಡಿದೆ ಎಂದು ವೀಕ್ಷಕರಿಗೆ ತಿಳಿಸುತ್ತದೆ, ಮತ್ತು ಪಾವತಿಸಿದ ಉತ್ಪನ್ನದ ಇರಿಸುವಿಕೆಗಳು, ಪ್ರಾಯೋಜಕತ್ವಗಳು ಮತ್ತು ಅನುಮೋದನೆಗಳ ಕುರಿತು ಬಳಕೆದಾರರಿಗೆ ಮಾಹಿತಿ ನೀಡುವ ಈ ಪುಟಕ್ಕೆ ಲಿಂಕ್ ಮಾಡುತ್ತದೆ.

ಪಾವತಿ ಪ್ರಚಾರದಲ್ಲಿ ತೊಡಗಿರುವ ರಚನೆಕಾರರು ಮತ್ತು ಬ್ರ್ಯಾಂಡ್‌ಗಳಿಗೆ ವಿಭಿನ್ನ ಅಧಿಕಾರ ಕ್ಷೇತ್ರಗಳು ವಿವಿಧ ಅವಶ್ಯಕತೆಗಳನ್ನು ಹೊಂದಿದ್ದು, ಇದಕ್ಕಾಗಿ ನೀವು ಹೆಚ್ಚಿನದನ್ನು ಮಾಡಬೇಕಾಗಬಹುದು ಎಂಬುದನ್ನು ಗಮನಿಸಿ. ಅನ್ವಯಿಸುವ ಕಾನೂನುಗಳನ್ನು ಪರಿಶೀಲಿಸಲು ಮತ್ತು ಅನುಸರಿಸಲು ಮರೆಯದಿರಿ. 

ಇದರರ್ಥ, ನನ್ನ ವೀಡಿಯೊಗಳಲ್ಲಿ ನಾನು ವೀಡಿಯೊ ಜಾಹೀರಾತುಗಳನ್ನು (ಪ್ರೀ-ರೋಲ್, ಮಧ್ಯ-ರೋಲ್ ಮತ್ತು ಪೋಸ್ಟ್-ರೋಲ್) ಬರ್ನ್ ಮಾಡಬಹುದೇ?
ಇಲ್ಲ. YouTube ನ ಜಾಹೀರಾತುಗಳ ನೀತಿಗಳು ಜಾಹೀರಾತುದಾರರು ರಚಿಸಿದ ಮತ್ತು ಪೂರೈಸಿದ ವೀಡಿಯೊ ಜಾಹೀರಾತುಗಳನ್ನು ಅಥವಾ ಇತರ ವಾಣಿಜ್ಯ ವಿರಾಮಗಳನ್ನು ನಿಮ್ಮ ಕಂಟೆಂಟ್‌ಗೆ ಬರ್ನ್ ಮಾಡಲು ಅಥವಾ ಎಂಬೆಡ್ ಮಾಡಲು ನಿಮಗೆ ಅವಕಾಶ ನೀಡುವುದಿಲ್ಲ. 
 
ನಿರ್ದಿಷ್ಟವಾಗಿ ನಿಮ್ಮ ಕಂಟೆಂಟ್‌ನೊಂದಿಗೆ ಜಾಹೀರಾತುಗಳನ್ನು ತೋರಿಸಲು ಆಸಕ್ತಿ ಹೊಂದಿರುವ ಜಾಹೀರಾತುದಾರರನ್ನು ನೀವು ಹೊಂದಿದ್ದರೆ, ನಿಮ್ಮ ಪಾಲುದಾರ ವ್ಯವಸ್ಥಾಪಕರ ಜೊತೆಗೆ ಕಾರ್ಯನಿರ್ವಹಿಸಿ. ನಮ್ಮ ಥರ್ಡ್ ಪಾರ್ಟಿ ಎಂಬೆಡ್ ಮಾಡಿರುವ ಪ್ರಾಯೋಜಕತ್ವಗಳ ಕುರಿತಾದ ನೀತಿಗಳು ಎಂಬಲ್ಲಿ ಹೆಚ್ಚಿನ ಮಾಹಿತಿಯನ್ನು ನೋಡಿ.
 
ಈ ನೀತಿಯು ಬ್ರ್ಯಾಂಡ್‌ಗಳಿಂದ ಅಥವಾ ಬ್ರ್ಯಾಂಡ್‌ಗಳಿಗಾಗಿ ರಚಿಸಲಾದ ಮತ್ತು ಬ್ರ್ಯಾಂಡ್‌ನ YouTube ಚಾನಲ್‌ಗೆ ಅಪ್‌ಲೋಡ್ ಮಾಡಿದ ವೀಡಿಯೊಗಳಿಗೆ ಅನ್ವಯಿಸುವುದಿಲ್ಲ. 
ನಾನು ವೀಡಿಯೊದ ಮೊದಲು/ನಂತರದಲ್ಲಿ, ವ್ಯಾಪಾರಿಗಳ ಅಥವಾ ಪ್ರಾಯೋಜಕರ ಬ್ರ್ಯಾಂಡ್ ಹೆಸರು ಮತ್ತು ಉತ್ಪನ್ನ ಮಾಹಿತಿಯಿರುವ ಶೀರ್ಷಿಕೆ ಕಾರ್ಡ್ ಅನ್ನು ಬಳಸಬಹುದೇ?
ಹೌದು. ನಾವು ಪಾವತಿ ಪ್ರಚಾರವಿರುವಲ್ಲಿ ಸ್ಥಿರ ಶೀರ್ಷಿಕೆ ಕಾರ್ಡ್‌ಗಳು ಮತ್ತು ಅಂತ್ಯ ಕಾರ್ಡ್‌ಗಳನ್ನು ಅನುಮತಿಸುತ್ತೇವೆ. ಈ ಶೀರ್ಷಿಕೆ ಕಾರ್ಡ್‌ಗಳು ಮತ್ತು ಅಂತ್ಯ ಕಾರ್ಡ್‌ಗಳು ಗ್ರಾಫಿಕ್ಸ್ ಅನ್ನು ಮತ್ತು ಪ್ರಾಯೋಜಕರು ಅಥವಾ ವ್ಯಾಪಾರಿಗಳ ಲೋಗೋ ಮತ್ತು ಉತ್ಪನ್ನ ಬ್ರ್ಯಾಂಡಿಂಗ್ ಅನ್ನು ಒಳಗೊಂಡಿರಬಹುದು.
  • ಶೀರ್ಷಿಕೆ ಕಾರ್ಡ್‌ಗಳು: 5 ಸೆಕೆಂಡುಗಳು ಅಥವಾ ಅದಕ್ಕಿಂತ ಕಡಿಮೆ ಮತ್ತು ಸ್ಥಿರವಾಗಿರುವುದು. ಅವುಗಳನ್ನು ವೀಡಿಯೊದ ಆರಂಭದಲ್ಲಿ (0:01ಸೆ) ಇರಿಸಿದರೆ, ಕಾರ್ಡ್ ಅನ್ನು ರಚನೆಕಾರರ ಹೆಸರು/ಲೋಗೋ ಜೊತೆಗೆ ಸಹ-ಬ್ರ್ಯಾಂಡಿಂಗ್ ಮಾಡಬೇಕಾಗುತ್ತದೆ.
  • ಅಂತ್ಯ ಕಾರ್ಡ್‌ಗಳು: ವೀಡಿಯೊದ ಕೊನೆಯ 30 ಸೆಕೆಂಡುಗಳೊಳಗೆ ಇರಿಸಲಾಗಿರಬೇಕು ಮತ್ತು ಸ್ಥಿರವಾಗಿರಬೇಕು. 
ಇನ್ನಷ್ಟು ಮಾಹಿತಿ ಸಂಪನ್ಮೂಲಗಳು
ಹೆಚ್ಚಿನ ಮಾಹಿತಿಗಾಗಿ, ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಫೆಡರಲ್ ಟ್ರೇಡ್ ಕಮಿಷನ್ (FTC), ಯುನೈಟೆಡ್ ಕಿಂಗ್‌ಡಮ್‌ನಲ್ಲಿನ ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (ASA), ಫ್ರಾನ್ಸ್‌ನಲ್ಲಿನ ಡೈರೆಕ್ಟರೇಟ್ ಜನರಲ್ ಫಾರ್ ಕಾಂಪಿಟೇಶನ್, ಕನ್ಸ್ಯೂಮರ್ ಅಫೇರ್ಸ್ ಆ್ಯಂಡ್ ಫ್ರಾಡ್ ಪ್ರಿವೆನ್ಶನ್ (DGCCRF), ಜರ್ಮನಿಯಲ್ಲಿನ ಮೀಡಿಯಾ ಅಥಾರಿಟಿಗಳಾದ ಮಿಡಿಯನ್‌ಅನ್ಸ್ಟಾಲ್ಟನ್ ಅಥವಾ ಕೊರಿಯಾದಲ್ಲಿನ ಕೊರಿಯಾ ಫೇರ್ ಟ್ರೇಡ್ ಕಮಿಷನ್ (KFTC) ರೀತಿಯ ನಿಮ್ಮ ಸ್ಥಳೀಯ ಕಾನೂನು ಸಂಪನ್ಮೂಲಗಳನ್ನು ನಿಯಮಿತವಾಗಿ ಓದುವಂತೆ ನಾವು ಶಿಫಾರಸು ಮಾಡುತ್ತೇವೆ.
ಈ ಸಹಾಯ ಕೇಂದ್ರ ಲೇಖನದಲ್ಲಿ ಪ್ರಸ್ತುತಪಡಿಸಲಾದ ಮಾಹಿತಿಯು ಕಾನೂನು ಸಲಹೆಯಲ್ಲ. ನಾವು ಇದನ್ನು ಮಾಹಿತಿ ಉದ್ದೇಶಗಳಿಗಾಗಿ ಒದಗಿಸುತ್ತೇವೆ, ಆದ್ದರಿಂದ ನಿಮ್ಮ ಸ್ವಂತ ಕಾನೂನು ಪ್ರತಿನಿಧಿಗಳ ಜೊತೆಗೆ ಪರಿಶೀಲಿಸಲು ನೀವು ಬಯಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
783219086085683801
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false