ನಿಮ್ಮ ಬ್ರ್ಯಾಂಡ್ ಆಗಿರುವ ಕಂಟೆಂಟ್ ಅನ್ನು ಜಾಹೀರಾತುದಾರರಿಗೆ ಲಿಂಕ್ ಮಾಡಿ

ಬ್ರ್ಯಾಂಡೆಡ್ ಕಂಟೆಂಟ್ ಅಭಿಯಾನದಲ್ಲಿ ನೀವು ಜಾಹೀರಾತುದಾರರ ಜೊತೆ ಪಾಲುದಾರರಾಗಿದ್ದರೆ, ಅಭಿಯಾನದಲ್ಲಿರುವ ಕಂಟೆಂಟ್ ಅನ್ನು ತಮ್ಮ Google Ads ಖಾತೆಗೆ ಲಿಂಕ್ ಮಾಡಲು ಜಾಹೀರಾತುದಾರರು ಈಗ ವಿನಂತಿಯನ್ನು ಕಳುಹಿಸಬಹುದು. ನೀವು ಅವರ ವಿನಂತಿಗೆ ಸಮ್ಮತಿಸಿದರೆ, ಜಾಹೀರಾತುದಾರರು Google Ads ನಲ್ಲಿ ಕಂಟೆಂಟ್‌ನ ಪರ್ಫಾರ್ಮೆನ್ಸ್ ಮೆಟ್ರಿಕ್‌ಗಳನ್ನು ವೀಕ್ಷಿಸಬಹುದು. Google Ads ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ಅನುಮತಿಸಿದಂತೆ, ನಿಮ್ಮ YouTube ವೀಡಿಯೊದ ವೀಕ್ಷಕರಿಗೆ ಜಾಹೀರಾತುಗಳನ್ನು ಗುರಿಯಾಗಿಸಲು ಸಹ ಜಾಹೀರಾತುದಾರರಿಗೆ (ಮತ್ತು ಜಾಹೀರಾತುದಾರರ Google Ads ಖಾತೆಗೆ ಲಿಂಕ್ ಮಾಡಲಾದ ಯಾವುದೇ ಘಟಕಗಳು) YouTube ಅನುಮತಿಸುತ್ತದೆ.

ನಿಮ್ಮ ಜಾಹೀರಾತುದಾರರಿಗೆ ನಿಮ್ಮ ಬ್ರ್ಯಾಂಡ್ ಆಗಿರುವ ಕಂಟೆಂಟ್ ಅನ್ನು ಲಿಂಕ್ ಮಾಡಿದರೆ ನಿಮಗೆ ಈ ವಿಷಯಗಳ ಕುರಿತಾಗಿ ಸಹಾಯ ದೊರೆಯಬಹುದು:

  • ಬ್ರ್ಯಾಂಡ್‌ಗಳ ಜೊತೆಗಿನ ಪಾಲುದಾರಿಕೆಗಳನ್ನು ನಿರ್ವಹಿಸುವುದು
  • ಆರ್ಗ್ಯಾನಿಕ್ ವೀಡಿಯೊ ಮೆಟ್ರಿಕ್‌ಗಳನ್ನು ಹಂಚಿಕೊಳ್ಳುವುದು
  • ಜಾಹೀರಾತುದಾರರು ನಿಮ್ಮ ಕಂಟೆಂಟ್ ಅನ್ನು ಪ್ರಚಾರ ಮಾಡುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳುವುದು

ಬಹುತೇಕ ಲಿಂಕ್ ಮಾಡುವಿಕೆಯ ವಿನಂತಿಗಳು ನೀವು ಈ ಹಿಂದೆ ಕೆಲಸ ಮಾಡಿದ ಜಾಹೀರಾತುದಾರರಿಂದ ಬರುತ್ತವೆ, ಆದರೆ ನೀವು ಪಾಲುದಾರರಾಗಿರದ ಬ್ರ್ಯಾಂಡ್‌ಗಳು ನಿಮಗೆ ವಿನಂತಿಗಳನ್ನು ಕಳುಹಿಸಬಹುದು. ನೀವು ಜಾಹೀರಾತುದಾರರ ಜೊತೆ ಈ ಹಿಂದೆ ಕೆಲಸ ಮಾಡಿರಲಿ, ಇಲ್ಲದಿರಲಿ, ಅವರ ಲಿಂಕ್ ಮಾಡುವಿಕೆಯ ವಿನಂತಿಯನ್ನು ಸ್ವೀಕರಿಸುವುದು ಸಂಪೂರ್ಣವಾಗಿ ನಿಮಗೆ ಬಿಟ್ಟದ್ದು. ನಿಮ್ಮ ಚಾನಲ್‌ನ ಹಿತದೃಷ್ಟಿಯನ್ನು ಗಮನದಲ್ಲಿ ಇರಿಸಿಕೊಂಡು ನೀವು ಯಾವಾಗಲೂ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು.

ನೀವು ಜಾಹೀರಾತುದಾರರ ವಿನಂತಿಗೆ ಸಮ್ಮತಿಸಿದರೆ, ಅಗತ್ಯವಿರುವ ಹಕ್ಕುಗಳನ್ನು ಅವರಿಗೆ ನೀಡಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ, ಇದರಿಂದ ತಮ್ಮ ಜಾಹೀರಾತಿನಲ್ಲಿ ನಿಮ್ಮ ವೀಡಿಯೊವನ್ನು ಬಳಸಲು ಅವರಿಗೆ ಸಾಧ್ಯವಾಗುತ್ತದೆ ಹಾಗೂ ಆ ಒಪ್ಪಂದದಲ್ಲಿ YouTube ಭಾಗಿಯಾಗಿರುವುದಿಲ್ಲ. ನೀವು ಜಾಹೀರಾತುದಾರರೊಂದಿಗೆ ಸಹಿ ಮಾಡುವ ಯಾವುದೇ ಒಪ್ಪಂದದ ನಿಯಮಗಳು ನಿಮಗೆ ಅರ್ಥವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಲಿಂಕ್ ಮಾಡುವಿಕೆಯ ವಿನಂತಿಗೆ ಸಮ್ಮತಿಸಿ

ಜಾಹೀರಾತುದಾರರು ನಿಮ್ಮ ಕಂಟೆಂಟ್ ಅನ್ನು ತಮ್ಮ Google Ads ಖಾತೆಗೆ ಲಿಂಕ್ ಮಾಡಲು ಬಯಸಿದಾಗ, ನಾವು YouTube ಮತ್ತು YouTube Studio ದಲ್ಲಿ ಇಮೇಲ್ ಹಾಗೂ ನೋಟಿಫಿಕೇಶನ್‌ಗಳ ಮೂಲಕ ನಿಮಗೆ ತಿಳಿಸುತ್ತೇವೆ. ನೀವು YouTube Studio, YouTube Studio ಮೊಬೈಲ್ ಆ್ಯಪ್ ಮತ್ತು YouTube ಮೊಬೈಲ್ ಆ್ಯಪ್‌ನಲ್ಲಿ ವಿನಂತಿಗಳನ್ನು ಪರಿಶೀಲಿಸಬಹುದು ಮತ್ತು ಪ್ರತಿಕ್ರಿಯಿಸಬಹುದು.

ನಿಮ್ಮ ಇಮೇಲ್‌ನಲ್ಲಿರುವ ಲಿಂಕ್ ಅನ್ನು ಆಯ್ಕೆಮಾಡಿದರೆ, ನಿಮ್ಮನ್ನು ನೇರವಾಗಿ "ಬ್ರ್ಯಾಂಡ್ ಲಿಂಕ್ ವಿನಂತಿ" ಪುಟಕ್ಕೆ ರೀಡೈರೆಕ್ಟ್ ಮಾಡಲಾಗುತ್ತದೆ, ಅಲ್ಲಿ ನೀವು ನಿಮ್ಮ ವೀಡಿಯೊವನ್ನು ಲಿಂಕ್ ಮಾಡಬಹುದು ಅಥವಾ ವಿನಂತಿಯನ್ನು ನಿರಾಕರಿಸಬಹುದು.

ನೀವು YouTube Studio ದಲ್ಲಿ ವಿನಂತಿಗಳನ್ನು ಪರಿಶೀಲಿಸಬಹುದು ಮತ್ತು ಪ್ರತಿಕ್ರಿಯಿಸಬಹುದು:

  1. ಕಂಪ್ಯೂಟರ್‌ನಲ್ಲಿ, YouTube Studio ಎಂಬಲ್ಲಿಗೆ ಹೋಗಿ.
  2. ಎಡಭಾಗದ ಮೆನುವಿನಲ್ಲಿ, ಕಂಟೆಂಟ್ ಎಂಬುದನ್ನು ಕ್ಲಿಕ್ ಮಾಡಿ.
  3. ಸೂಕ್ತವಾದ ವೀಡಿಯೊವನ್ನು ಹುಡುಕಿ ಮತ್ತು ವೀಡಿಯೊದ ಥಂಬ್‌ನೇಲ್‌ನ ಪಕ್ಕದಲ್ಲಿರುವ, ವಿವರಗಳು ಎಂಬುದನ್ನು ಕ್ಲಿಕ್ ಮಾಡಿ.
  4. "ಬ್ರ್ಯಾಂಡ್ ಲಿಂಕ್ ಮಾಡುವಿಕೆ" ಎಂಬ ವಿಭಾಗದಲ್ಲಿ, ಜಾಹೀರಾತುದಾರರ ಪಕ್ಕದಲ್ಲಿರುವ, ಲಿಂಕ್ ಮಾಡುವಿಕೆಯ ವಿನಂತಿಯನ್ನು ಪರಿಶೀಲಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. ನಿಮ್ಮ ವೀಡಿಯೊವನ್ನು ಲಿಂಕ್ ಮಾಡುತ್ತೀರಾ ಅಥವಾ ವಿನಂತಿಯನ್ನು ನಿರಾಕರಿಸುತ್ತೀರಾ ಎಂಬುದನ್ನು ಆಯ್ಕೆಮಾಡಿ.

ನಿಮ್ಮ ಕಂಟೆಂಟ್ ಅನ್ನು ಅನ್‌ಲಿಂಕ್ ಮಾಡಿ

ಲಿಂಕ್ ಮಾಡಲಾದ ವೀಡಿಯೊವನ್ನು ನೀವು ಅಥವಾ ಜಾಹೀರಾತುದಾರರು ಯಾವಾಗ ಬೇಕಾದರೂ ಅನ್‌ಲಿಂಕ್ ಮಾಡಬಹುದು. ಜಾಹೀರಾತುದಾರರಿಂದ ವೀಡಿಯೊವನ್ನು ಅನ್‌ಲಿಂಕ್ ಮಾಡಲು, ನಿಮ್ಮ ವೀಡಿಯೊದ "ಬ್ರ್ಯಾಂಡ್ ಲಿಂಕ್ ಮಾಡುವಿಕೆ" ಎಂಬ ವಿಭಾಗಕ್ಕೆ ನ್ಯಾವಿಗೇಟ್ ಮಾಡಿ ಹಾಗೂ ಜಾಹೀರಾತುದಾರರ ಪಕ್ಕದಲ್ಲಿರುವ ಅನ್‌ಲಿಂಕ್ ಮಾಡಿ ಎಂಬುದನ್ನು ಆಯ್ಕೆಮಾಡಿ.

FAQ ಗಳು

ಲಿಂಕ್ ಮಾಡುವಿಕೆಯ ವಿನಂತಿಗಳು ಎಷ್ಟು ಸಮಯದವರೆಗೆ ಮಾನ್ಯವಾಗಿರುತ್ತವೆ?

ನಿರ್ದಿಷ್ಟ ಸಮಯದ ನಂತರ ವೀಡಿಯೊ ಲಿಂಕ್ ಮಾಡುವಿಕೆಯ ವಿನಂತಿಗಳ ಅವಧಿ ಮುಗಿಯುವುದಿಲ್ಲವಾದರೂ, ಜಾಹೀರಾತುದಾರರು ಬಾಕಿ ಉಳಿದಿರುವ ಲಿಂಕ್ ಮಾಡುವಿಕೆಯ ವಿನಂತಿಯನ್ನು ಹಿಂತೆಗೆದುಕೊಳ್ಳಬಹುದು. ನೀವು ವೀಡಿಯೊವನ್ನು ಯಾವಾಗ ಬೇಕಾದರೂ ಅನ್‌ಲಿಂಕ್ ಮಾಡಬಹುದು. ನಿಮ್ಮ ಕಂಟೆಂಟ್ ಅನ್ನು ಅನ್‌ಲಿಂಕ್ ಮಾಡಿದರೆ, ಜಾಹೀರಾತುದಾರರಿಗೆ ಇರುವ ಈ ಸೌಲಭ್ಯಗಳು ಕೊನೆಗೊಳ್ಳುತ್ತವೆ:
  • ಕಂಟೆಂಟ್‌ನ ಪರ್ಫಾರ್ಮೆನ್ಸ್ ಮೆಟ್ರಿಕ್‌ಗಳಿಗೆ ಇರುವ ಆ್ಯಕ್ಸೆಸ್
  • ಲಿಂಕ್ ಮಾಡಲಾದ ಕಂಟೆಂಟ್‌ನ ವೀಕ್ಷಕರಿಗೆ ಜಾಹೀರಾತುಗಳನ್ನು ಗುರಿಪಡಿಸುವ ಸಾಮರ್ಥ್ಯ
ಹೆಚ್ಚುವರಿಯಾಗಿ, ವಿನಂತಿಸಿದ ವೀಡಿಯೊವನ್ನು ಅಳಿಸಿದರೆ ಅಥವಾ ಖಾಸಗಿ ಎಂಬುದಾಗಿ ಗುರುತು ಮಾಡಿದರೆ, ಲಿಂಕ್ ಮಾಡುವಿಕೆಯ ವಿನಂತಿಯ ಅವಧಿ ಕೊನೆಗೊಳ್ಳುತ್ತದೆ.

ಜಾಹೀರಾತುದಾರರು ಈಗಾಗಲೇ ನನ್ನ ವೀಡಿಯೊಗಳನ್ನು ತಮ್ಮ ಜಾಹೀರಾತಿನಲ್ಲಿ ಬಳಸುತ್ತಿದ್ದರೆ ನಾನು ಅವರ Google Ads ಖಾತೆಗೆ ನನ್ನ ಬ್ರ್ಯಾಂಡ್ ಆಗಿರುವ ಕಂಟೆಂಟ್ ಅನ್ನು ಲಿಂಕ್ ಮಾಡಬೇಕೇ?

ಜಾಹೀರಾತುಗಳನ್ನು ನೀಡುವುದಕ್ಕಾಗಿ ಜಾಹೀರಾತುದಾರರು ತಮ್ಮ ಖಾತೆಯನ್ನು ನಿಮ್ಮ ಕಂಟೆಂಟ್‌ಗೆ ಲಿಂಕ್ ಮಾಡುವ ಅಗತ್ಯವಿಲ್ಲ, ಆದರೆ ನಿಮ್ಮ ಬ್ರ್ಯಾಂಡ್ ಆಗಿರುವ ಕಂಟೆಂಟ್ ಅನ್ನು ಅವರ ಖಾತೆಗೆ ಲಿಂಕ್ ಮಾಡಲು ನಾವು ಶಿಫಾರಸು ಮಾಡುತ್ತೇವೆ. ಲಿಂಕ್ ಮಾಡುವಿಕೆಯು ನಿಮ್ಮ ಬ್ರ್ಯಾಂಡ್ ಪಾಲುದಾರಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ ಮತ್ತು ವೀಡಿಯೊದ ಆರ್ಗ್ಯಾನಿಕ್ ಪರ್ಫಾರ್ಮೆನ್ಸ್ ಅನ್ನು ವೀಕ್ಷಿಸಲು ಜಾಹೀರಾತುದಾರರಿಗೆ ಅವಕಾಶ ನೀಡುತ್ತದೆ. ಹೆಚ್ಚುವರಿಯಾಗಿ, ಪ್ರತ್ಯೇಕ ವೀಡಿಯೊವನ್ನು ಮಾತ್ರ ಲಿಂಕ್ ಮಾಡುವ ಮೂಲಕ, ನಿಮ್ಮ ಚಾನಲ್‌ನ ಕಂಟೆಂಟ್‌ಗೆ ಇರುವ ಆ್ಯಕ್ಸೆಸ್ ಅನ್ನು ನೀವು ಸೀಮಿತಗೊಳಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9503838094306762806
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false