YouTube ನಲ್ಲಿ Playables

Playables, ಉಚಿತವಾಗಿ ಆಡಬಹುದಾದ ಗೇಮ್‌ಗಳಾಗಿದ್ದು, ಇವುಗಳನ್ನು YouTube ನಲ್ಲಿ ನೇರವಾಗಿ ಆಡಬಹುದಾಗಿದೆ.

ಆಡುವುದು ಹೇಗೆ

Playables ಅನ್ನು ಮುಖ್ಯ YouTube ಹೋಮ್ ಪೇಜ್‌ನಲ್ಲಿರುವ Playables ಶೆಲ್ಫ್‌ನಲ್ಲಿ ಅಥವಾ ಎಕ್ಸ್‌ಪ್ಲೋರ್ ಮೆನುವಿನಿಂದ ತಲುಪಬಹುದಾದ ಹೊಸ Playables ಡೆಸ್ಟಿನೇಷನ್ ಪುಟದಲ್ಲಿ ಕಾಣಬಹುದು. ನಾವು ಇನ್ನಷ್ಟು ಗೇಮ್‌ಗಳನ್ನು ಸೇರಿಸುತ್ತಲೇ ಇರುತ್ತೇವೆ, ಹಾಗಾಗಿ ಹೊಸ ಶೀರ್ಷಿಕೆಗಳಿಗಾಗಿ ಎದುರುನೋಡುತ್ತಿರಿ.

ಗೇಮ್‌ಪ್ಲೇಗೆ ತೆರಳಲು ಗೇಮ್ ಕಾರ್ಡ್‌ಗಳಲ್ಲಿ ಯಾವುದನ್ನಾದರೂ ಕ್ಲಿಕ್ ಮಾಡಿ. ನೀವು ಕಾರ್ಡ್ ಒಂದರಿಂದ ಅಥವಾ ಮೂರು ಚುಕ್ಕೆ ಇನ್ನಷ್ಟು '' ಮೆನುವಿನ ಮೂಲಕ ಆಡುವಾಗ ಸಹ ಗೇಮ್ ಅನ್ನು ಹಂಚಿಕೊಳ್ಳಬಹುದು.

Playables FAQ

ಬೆಂಬಲವಿರುವ ಸಾಧನಗಳು ಮತ್ತು ಅವಶ್ಯಕತೆಗಳು

Playables ಗಾಗಿ ನಿಮಗೆ ಯಾವುದೇ ಹೆಚ್ಚುವರಿ ಹಾರ್ಡ್‌ವೇರ್, ಸಾಫ್ಟ್‌ವೇರ್ ಅಥವಾ ಡೌನ್‌ಲೋಡ್‌ಗಳು ಬೇಕಾಗುವುದಿಲ್ಲ. ನಿಮ್ಮ ಬಳಿ YouTube ನ ಇತ್ತೀಚಿನ ಆವೃತ್ತಿ, ಬೆಂಬಲವಿರುವ ಸಾಧನ ಇಷ್ಟಿದ್ದರೆ ಸಾಕಾಗುತ್ತದೆ ಮತ್ತು ಅದು ವೈ-ಫೈ ಅಥವಾ ಡೇಟಾ ಪ್ಲಾನ್‌ಗೆ (ಡೇಟಾ ದರಗಳು ಅನ್ವಯವಾಗಬಹುದು) ಕನೆಕ್ಟ್ ಆಗಿರಬೇಕಾಗುತ್ತದೆ.

Playables ಅನ್ನು ಪ್ರಸ್ತುತ ಈ ಕೆಳಗಿನ ಸಾಧನಗಳಲ್ಲಿ ಬೆಂಬಲಿಸಲಾಗುತ್ತಿದೆ:

  • Android
    • YouTube ಆ್ಯಪ್ ಆವೃತ್ತಿ: 18.33 ಮತ್ತು ಅದಕ್ಕಿಂತ ಮೇಲಿನದು
    • ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಳು:
      • Android S ಮತ್ತು ಅದಕ್ಕಿಂತ ಮೇಲಿನವು
      • Android O, P, Q, R (64 ಬಿಟ್ ಅಥವಾ ಅಧಿಕ ಮೆಮೊರಿಯ 32 ಬಿಟ್ ಸಾಧನಗಳಲ್ಲಿ ಮಾತ್ರ)
  • iOS
    • YouTube ಆ್ಯಪ್ ಆವೃತ್ತಿ: 18.33 ಮತ್ತು ಅದಕ್ಕಿಂತ ಮೇಲಿನದು
    • ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಳು: iOS 14 ಮತ್ತು ಅದಕ್ಕಿಂತ ಮೇಲಿನವು
  • ಡೆಸ್ಕ್‌ಟಾಪ್ ವೆಬ್
    • ಬ್ರೌಸರ್‌ಗಳು: Chrome, Safari ಮತ್ತು Firefox

Playables ಲಭ್ಯತೆ

ಪ್ರಸ್ತುತ, Playables ಅರ್ಹ ದೇಶಗಳು/ಪ್ರದೇಶಗಳಲ್ಲಿ ಆಯ್ದ ಬಳಕೆದಾರರಿಗಾಗಿ ಬಿಡುಗಡೆ ಮಾಡಲಾಗಿರುವ ಪ್ರಾಯೋಗಿಕ ಫೀಚರ್ ಆಗಿದೆ. ಇದಲ್ಲದೇ, ಈ ಪ್ರದೇಶಗಳಲ್ಲಿರುವ ಕೆಲವು ಬಳಕೆದಾರರಿಗೆ YouTube ನಲ್ಲಿ Playables ಕಾಣಿಸಿಕೊಳ್ಳದೇ ಇರಬಹುದು, ಆದರೆ ಪ್ರತಿ ಆಟಕ್ಕೆ ವಿಶಿಷ್ಟವಾಗಿರುವ ಹಂಚಿಕೊಳ್ಳಬಹುದಾದ ಲಿಂಕ್‌ಗಳ ಮೂಲಕ ಅವುಗಳನ್ನು ಆ್ಯಕ್ಸೆಸ್ ಮಾಡಲು ಅವರಿಗೆ ಈಗಲೂ ಸಾಧ್ಯವಾಗಬಹುದು. ಭವಿಷ್ಯದಲ್ಲಿ ಲಭ್ಯತೆಯನ್ನು ವಿಸ್ತರಿಸುವುದು ನಮ್ಮ ಗುರಿಯಾಗಿದೆ.

ನೀವು YouTube Premium ಅನ್ನು ಹೊಂದಿದ್ದರೆ ಮತ್ತು ನಿಮ್ಮ ದೇಶ/ಪ್ರದೇಶದಲ್ಲಿ Playables ಅರ್ಹವಾಗಿದ್ದರೆ, Playables ನ ಪ್ರಾಯೋಗಿಕ ಆವೃತ್ತಿಗೆ ಆ್ಯಕ್ಸೆಸ್ ಪಡೆಯುವುದಕ್ಕಾಗಿ ಈ ಹಂತಗಳನ್ನು ಅನುಸರಿಸುವ ಮೂಲಕ ನೀವು ಪ್ರಾಯೋಗಿಕ ಫೀಚರ್‌ಗಳನ್ನು ಆಯ್ಕೆಮಾಡಿಕೊಳ್ಳಬಹುದು.

ಕಡಿಮೆ Playables ನೋಡುವುದು ನಿಮ್ಮ ಆದ್ಯತೆಯಾಗಿದ್ದರೆ, YouTube ನಲ್ಲಿ "ಆಸಕ್ತಿಯಿಲ್ಲ" ಎಂಬುದನ್ನು ಕ್ಲಿಕ್ ಮಾಡುವ ಮೂಲಕ ನೀವು Playables ಶೆಲ್ಫ್ ಅಥವಾ ಪ್ರತ್ಯೇಕ Playables ಅನ್ನು ಕೆಳದರ್ಜೆಗೆ ಇಳಿಸಬಹುದು.

ಗೇಮ್‌ನ ಪ್ರಗತಿ ಮತ್ತು ಸೇವ್ ಮಾಡಲಾದ ಇತಿಹಾಸ

ಗೇಮ್‌ನ ಪ್ರಗತಿಯನ್ನು ಸ್ವಯಂಚಾಲಿತವಾಗಿ ಸೇವ್ ಮಾಡಲಾಗುತ್ತದೆ ಮತ್ತು ನಿಮ್ಮ YouTube ಖಾತೆಗೆ ನೀವು ಲಾಗಿನ್ ಮಾಡಿರುವ ಯಾವುದೇ ಬೆಂಬಲಿತ ಸಾಧನದಾದ್ಯಂತ ಅದನ್ನು ಸಿಂಕ್ ಮಾಡಲಾಗುತ್ತದೆ

ಪ್ರತಿ ಗೇಮ್‌ಗೆ ಸಂಬಂಧಿಸಿದ ನಿಮ್ಮ ಸೇವ್ ಮಾಡಲಾದ ಪ್ರಗತಿಯನ್ನು YouTube ಇತಿಹಾಸ > ಸಂವಹನಗಳು ಎಂಬಲ್ಲಿ ಸಂಗ್ರಹಿಸಲಾಗುತ್ತದೆ. ಪ್ರತಿ ಗೇಮ್‌ಗೆ ಕೇವಲ ಒಂದು ಸೇವ್ ಫೈಲ್ ಇರುತ್ತದೆ ಮತ್ತು ನಿಮ್ಮ ಗೇಮ್‌ನ ಪ್ರಗತಿಯನ್ನು ಶಿಫಾರಸುಗಳಿಗಾಗಿ ಬಳಸಲಾಗುವುದಿಲ್ಲ. ನೀವು ಗೇಮ್ ಸೇವ್ ಫೈಲ್ ಅನ್ನು ಅಳಿಸಿದರೆ, ನೀವು ಎಲ್ಲಾ ಸಾಧನಗಳಾದ್ಯಂತದ ಆ ಗೇಮ್‌ನ ಪ್ರಗತಿಯನ್ನು ಕಳೆದುಕೊಳ್ಳುತ್ತೀರಿ.

Playables ಇತಿಹಾಸವನ್ನು YouTube ಇತಿಹಾಸದಲ್ಲಿ ಸಂಗ್ರಹಿಸಲಾಗುತ್ತದೆ, ಅಲ್ಲಿ ನೀವು ಇತ್ತೀಚೆಗೆ ಆಡಿದ ಗೇಮ್‌ಗಳನ್ನು ಹುಡುಕುವುದು ಸುಲಭವಾಗುತ್ತದೆ. ಅದನ್ನು ಆನ್ ಮಾಡಿದಾಗ, ಇತಿಹಾಸವು ಸೂಕ್ತ ಶಿಫಾರಸುಗಳನ್ನು ಒದಗಿಸಲು ನಮಗೆ ಅನುವು ಮಾಡಿಕೊಡುತ್ತದೆ. ನಿಮ್ಮ ಇತಿಹಾಸವನ್ನು ಅಳಿಸುವ ಅಥವಾ ಆಫ್ ಮಾಡುವ ಮೂಲಕ ನಿಮ್ಮ Playables ಇತಿಹಾಸವನ್ನು ನೀವು ನಿಯಂತ್ರಿಸಬಹುದು. ಇತಿಹಾಸ ಆಫ್ ಆಗಿರುವಾಗ ನೀವು ಆಡುವ ಯಾವುದೇ ಗೇಮ್‌ಗಳು YouTube ಇತಿಹಾಸದಲ್ಲಿ ಕಾಣಿಸಿಕೊಳ್ಳುವುದಿಲ್ಲ.  

ನಿಮ್ಮ YouTube ಇತಿಹಾಸ ಸೆಟ್ಟಿಂಗ್‌ಗಳನ್ನು ಬದಲಾಯಿಸಲು

  1. myactivity.google.com ಗೆ ಹೋಗಿ. 
  2. YouTube ಇತಿಹಾಸವನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಆದ್ಯತೆಗೆ ತಕ್ಕಂತೆ ಎಡಿಟ್ ಮಾಡಿ. 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17857048623652152446
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false