ಕಾಮೆಂಟ್ ವಿಷಯಗಳನ್ನು ಎಕ್ಸ್‌ಪ್ಲೋರ್ ಮಾಡಿ

YouTube ವೀಡಿಯೊಗಳಲ್ಲಿನ ಕಾಮೆಂಟ್‌ಗಳನ್ನು ವ್ಯವಸ್ಥಿತಗೊಳಿಸಲು ಮತ್ತು ಸಾರಾಂಶಗೊಳಿಸಲು ಕಾಮೆಂಟ್ ವಿಷಯಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅನ್ನು ಬಳಸುತ್ತವೆ. ಈ ಫೀಚರ್, ಕಾಮೆಂಟ್ ವಿಭಾಗಗಳಲ್ಲಿ ಥೀಮ್‌ಗಳನ್ನು ಅನ್ವೇಷಿಸಲು ಹಾಗೂ ಪ್ರತಿಯೊಂದು ಕಾಮೆಂಟ್ ಅನ್ನು ಓದುವ ಅಗತ್ಯವಿಲ್ಲದೆ ಚರ್ಚೆಗೆ ಸೇರಿಕೊಳ್ಳಲು ನಿಮಗೆ ನೆರವಾಗಬಲ್ಲದು.

ಕಾಮೆಂಟ್ ವಿಷಯಗಳು ಎಲ್ಲಾ ವೀಡಿಯೊಗಳಲ್ಲಿ ಕಾಣಿಸುವುದಿಲ್ಲ. ಪ್ರಸ್ತುತ, ಈ ಫೀಚರ್ YouTube ಮೊಬೈಲ್ ಆ್ಯಪ್‌ನಲ್ಲಿನ ವೀಡಿಯೊಗಳ ದೊಡ್ಡ ಕಾಮೆಂಟ್ ವಿಭಾಗಗಳಲ್ಲಿ ಹಾಗೂ ಇಂಗ್ಲಿಷ್‌ನಲ್ಲಿನ ಕಾಮೆಂಟ್‌ಗಳಿಗೆ ಮಾತ್ರ ಲಭ್ಯವಿದೆ.

ಪ್ರಾರಂಭಿಸಲು, YouTube ಮೊಬೈಲ್ ಆ್ಯಪ್‌ನಲ್ಲಿನ ವೀಡಿಯೊದ ಕಾಮೆಂಟ್‌ಗಳ ವಿಭಾಗವನ್ನು ತೆರೆಯಿರಿ. ಲಭ್ಯವಿದ್ದರೆ, ಕಾಮೆಂಟ್ ವಿಷಯಗಳನ್ನು ಬ್ರೌಸ್ ಮಾಡಲು ವಿಷಯಗಳು  ಎಂಬುದನ್ನು ಟ್ಯಾಪ್ ಮಾಡಿ. 

ವಿಷಯಗಳನ್ನು AI ಸಾರಾಂಶಗೊಳಿಸುತ್ತದೆ, ಮಾನವರಲ್ಲ, ಆದ್ದರಿಂದ ಗುಣಮಟ್ಟ ಮತ್ತು ನಿಖರತೆ ಬದಲಾಗಬಹುದು.

FAQ ಗಳು

ನಾನು ಕಾಮೆಂಟ್ ವಿಷಯಗಳನ್ನು ಆಫ್ ಮಾಡಬಹುದೇ?

ಇಲ್ಲ. ಪ್ರಸ್ತುತ, ಕಾಮೆಂಟ್ ವಿಷಯಗಳನ್ನು ಆಫ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. 

ನೀವು ಕಾಮೆಂಟ್ ವಿಷಯಗಳ ಕುರಿತು ಫೀಡ್‌ಬ್ಯಾಕ್ ಅನ್ನು ಸಲ್ಲಿಸಲು ಬಯಸಿದರೆ, ಕೆಳಗಿನ ಹಂತಗಳನ್ನು ಅನುಸರಿಸಿ. 

ನೀವು ರಚನೆಕಾರರಾಗಿದ್ದರೆ, ಕಾಮೆಂಟ್ ವಿಷಯಗಳನ್ನು ಮಾಡರೇಟ್ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ.

ಕಾಮೆಂಟ್ ವಿಷಯಗಳ ಕುರಿತಂತೆ ನಾನು ಫೀಡ್‌ಬ್ಯಾಕ್ ಅನ್ನು ಸಲ್ಲಿಸಬಹುದೇ?

ಫೀಡ್‌ಬ್ಯಾಕ್ ಅನ್ನು ಸಲ್ಲಿಸುವ ಮೂಲಕ, ಕಾಮೆಂಟ್ ವಿಷಯಗಳ ಕುರಿತಾದ ನಿಮ್ಮ ಅಭಿಪ್ರಾಯಗಳನ್ನು ನೀವು ನಮಗೆ ತಿಳಿಸಬಹುದು ಅಥವಾ ತಪ್ಪುಗಳನ್ನು ವರದಿ ಮಾಡಬಹುದು. 

ಫೀಡ್‌ಬ್ಯಾಕ್ ಅನ್ನು ಸಲ್ಲಿಸಲು:

  1. YouTube ಆ್ಯಪ್‌ನಲ್ಲಿನ ವೀಡಿಯೊದ ಕಾಮೆಂಟ್‌ಗಳ ವಿಭಾಗವನ್ನು ತೆರೆಯಿರಿ. 
  2. ವಿಷಯಗಳು  ಎಂಬುದನ್ನು ಟ್ಯಾಪ್ ಮಾಡಿ.
  3. ಇನ್ನಷ್ಟು '' ಎಂಬುದನ್ನು ಟ್ಯಾಪ್ ಮಾಡಿ.
  4. ಫೀಡ್‌ಬ್ಯಾಕ್ ಅನ್ನು ಕಳುಹಿಸಿ ಎಂಬುದನ್ನು ಟ್ಯಾಪ್ ಮಾಡಿ. 

ನಿಮ್ಮ ಫೀಡ್‌ಬ್ಯಾಕ್ ಅನ್ನು ಹೇಗೆ ಬಳಸಲಾಗುತ್ತದೆ?

ಫೀಡ್‌ಬ್ಯಾಕ್ ಅನ್ನು:

  • ವಿಶೇಷವಾಗಿ ತರಬೇತಿ ಪಡೆದ ತಂಡಗಳು ರಿವ್ಯೂ ಮಾಡುತ್ತವೆ. ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಅಗತ್ಯವಿರುವುದು ಸೇರಿದಂತೆ ಫೀಡ್‌ಬ್ಯಾಕ್‌ನಲ್ಲಿ ಉಲ್ಲೇಖಿಸಲಾದ ಸಂಭಾವ್ಯ ಸಮಸ್ಯೆಗಳನ್ನು ಗುರುತಿಸಲು, ಬಗೆಹರಿಸಲು ಮತ್ತು ವರದಿ ಮಾಡಲು ನೆರವಾಗುವುದಕ್ಕೆ ಮಾನವ ರಿವ್ಯೂ ಅವಶ್ಯಕವಾಗಿದೆ.
  • ನಮ್ಮ ಗೌಪ್ಯತೆ ನೀತಿಗೆ ಅನುಗುಣವಾಗಿ ಬಳಸಲಾಗುತ್ತದೆ. ನಮ್ಮ ಗೌಪ್ಯತೆ ನೀತಿಯಲ್ಲಿ ಇನ್ನಷ್ಟು ವಿವರವಾಗಿ ವಿವರಿಸಿದಂತೆ, YouTube ಉತ್ಪನ್ನಗಳು, ಸೇವೆಗಳು ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನಗಳನ್ನು ಒದಗಿಸಲು, ಸುಧಾರಿಸಲು ಮತ್ತು ಅಭಿವೃದ್ಧಿಪಡಿಸಲು YouTube ಈ ಡೇಟಾವನ್ನು ಬಳಸುತ್ತದೆ.

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12427440288415139330
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false