YouTube ನಲ್ಲಿನ ಮಾತುಕತೆಯಾಡುವ AI ಟೂಲ್ ಕುರಿತು ತಿಳಿಯಿರಿ

ಪ್ರಸ್ತುತವಾಗಿ, ಈ ಟೂಲ್ ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ 18 ವರ್ಷಕ್ಕೂ ಮೇಲ್ಪಟ್ಟ YouTube Premium ಸದಸ್ಯರಿಗೆ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಲಭ್ಯವಿದೆ. ಈ ಟೂಲ್ ಬಳಸಲು, ನೀವು Android ಸಾಧನವನ್ನು ಬಳಸುತ್ತಿರಬೇಕು. ಒಂದು ವೇಳೆ ನೀವು ಪ್ರಾಯೋಗಿಕ ಆವೃತ್ತಿಗೆ ಆ್ಯಕ್ಸೆಸ್ ಪಡೆದಿದ್ದರೆ, ಆಯ್ದ ಇಂಗ್ಲಿಷ್ ಭಾಷೆಯ ವೀಡಿಯೊಗಳಲ್ಲಿ ಈ ಟೂಲ್ ಕಾಣಿಸುತ್ತದೆ. ಭವಿಷ್ಯದಲ್ಲಿ ಲಭ್ಯತೆ ಬದಲಾಗಬಹುದು.

ನೀವು YouTube ನಲ್ಲಿ ವೀಡಿಯೊವನ್ನು ವೀಕ್ಷಿಸುತ್ತಿರುವಾಗ, ಮಾತುಕತೆಯಾಡುವ AI ಟೂಲ್ ಕಂಟೆಂಟ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು AI ಜೊತೆಗೆ ಸಂವಹನ ನಡೆಸಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಉದಾಹರಣೆಗೆ, ನೀವು ವೀಕ್ಷಿಸುತ್ತಿರುವ ವೀಡಿಯೊದ ಕುರಿತು ಪ್ರಶ್ನೆಗಳನ್ನು ಕೇಳಬಹುದು ಅಥವಾ “ಸಂಬಂಧಿತ ಕಂಟೆಂಟ್ ಅನ್ನು ಶಿಫಾರಸು ಮಾಡಿ” ಎಂಬಂತಹ ಸೂಚಿಸಲಾದ ಪ್ರಾಂಪ್ಟ್‌ಗಳನ್ನು ಆಯ್ಕೆ ಮಾಡಬಹುದು. 

ಪ್ರಾರಂಭಿಸಲು: 

  1. ಕೇಳಿ  ಟ್ಯಾಪ್ ಮಾಡಿ.
  2. ಸೂಚಿಸಲಾದ ಪ್ರಾಂಪ್ಟ್‌ಗಳಲ್ಲಿ ಒಂದನ್ನು ಆಯ್ಕೆಮಾಡಿ ಅಥವಾ ನಿಮ್ಮ ಸ್ವಂತ ಪ್ರಶ್ನೆಯನ್ನು ಟೈಪ್ ಮಾಡಿ.
ಗಮನಿಸಿ: AI-ಜನರೇಟೆಡ್ ಪ್ರತಿಕ್ರಿಯೆಗಳು ಪ್ರಾಯೋಗಿಕವಾಗಿರುತ್ತವೆ ಹಾಗೂ ಅವುಗಳು YouTube ನ ದೃಷ್ಟಿಕೋನಗಳಿಗೆ ಸಂಬಂಧಪಟ್ಟಿರುವುದಿಲ್ಲ. ಗುಣಮಟ್ಟ ಮತ್ತು ನಿಖರತೆಯು ಬದಲಾಗಬಹುದು. ನಾವು ನಿರಂತರವಾಗಿ ಕಲಿಯುತ್ತಿದ್ದೇವೆ ಮತ್ತು ಈ ಫೀಚರ್ ಅನ್ನು ಸುಧಾರಿಸಲು ಬಯಸುತ್ತೇವೆ, ಹೀಗಾಗಿ ನಿಮಗೇನಾದರೂ ಸಮಸ್ಯೆ ಕಂಡುಬಂದರೆ ಫೀಡ್‌ಬ್ಯಾಕ್ ಸಲ್ಲಿಸಿ.

 FAQ ಗಳು

YouTube ನಲ್ಲಿನ ಮಾತುಕತೆಯಾಡುವ AI ಟೂಲ್ ಅನ್ನು ಯಾರು ಬಳಸಬಹುದು?

ಪ್ರಸ್ತುತವಾಗಿ, ಮಾತುಕತೆಯಾಡುವ AI ಟೂಲ್ ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ 18 ವರ್ಷಕ್ಕೂ ಮೇಲ್ಪಟ್ಟ YouTube Premium ಸದಸ್ಯರಿಗೆ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಲಭ್ಯವಿದೆ. ಈ ಟೂಲ್ ಬಳಸಲು, ನೀವು Android ಸಾಧನವನ್ನು ಬಳಸುತ್ತಿರಬೇಕು. 

ಒಂದು ವೇಳೆ ನೀವು ಪ್ರಾಯೋಗಿಕ ಆವೃತ್ತಿಗೆ ಆ್ಯಕ್ಸೆಸ್ ಪಡೆದಿದ್ದರೆ, ಆಯ್ದ ಇಂಗ್ಲಿಷ್ ಭಾಷೆಯ ವೀಡಿಯೊಗಳಿಗೆ ಸಂಬಂಧಿಸಿದ ವೀಕ್ಷಣಾ ಪುಟದಲ್ಲಿ ಟೂಲ್ ಕಾಣಿಸುತ್ತದೆ.

YouTube ನಲ್ಲಿನ ಮಾತುಕತೆಯಾಡುವ AI ಟೂಲ್ ಹೇಗೆ ಕೆಲಸ ಮಾಡುತ್ತದೆ?

ನೀವು ವೀಕ್ಷಿಸುತ್ತಿರುವ ವೀಡಿಯೊಗಳ ಕುರಿತ ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸಲು ಈ ಟೂಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿಕ್ರಿಯೆಗಳನ್ನು ದೊಡ್ಡ ಲ್ಯಾಂಗ್ವೇಜ್‌ ಮಾಡಲ್‌ಗಳಿಂದ (LLM ಗಳು) ಜನರೇಟ್ ಮಾಡಲಾಗುತ್ತದೆ. LLM ಗಳು YouTube ಮತ್ತು ವೆಬ್‌ನಿಂದ ಮಾಹಿತಿಯನ್ನು ಪಡೆಯುತ್ತವೆ. LLM ಗಳು ಮತ್ತು ಜನರೇಟಿವ್ AI ಕುರಿತು ಇನ್ನಷ್ಟು ತಿಳಿಯಿರಿ.

ಜನರೇಟಿವ್ AI ಪ್ರಾಯೋಗಿಕ ತಂತ್ರಜ್ಞಾನವಾಗಿದೆ ಮತ್ತು ಇದು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಆಗಿದೆ. AI-ಜನರೇಟೆಡ್ ಪ್ರತಿಕ್ರಿಯೆಗಳನ್ನು ವೈದ್ಯಕೀಯ, ಕಾನೂನು, ಹಣಕಾಸು ಅಥವಾ ಇತರ ವೃತ್ತಿಪರ ಸಲಹೆಯಾಗಿ ಅವಲಂಬಿಸಬೇಡಿ.

ಯಾವ ಡೇಟಾವನ್ನು ಸಂಗ್ರಹಿಸಲಾಗುತ್ತದೆ? ಅದನ್ನು ಹೇಗೆ ಬಳಸಲಾಗುತ್ತದೆ?

ನೀವು ಈ ಟೂಲ್ ಜೊತೆಗೆ ಸಂವಹನ ನಡೆಸಿದಾಗ, ನಿಮ್ಮ ಟೂಲ್ ಬಳಕೆ ಮತ್ತು ನೀವು ಸಲ್ಲಿಸುವ ಪ್ರಶ್ನೆಗಳು ಮತ್ತು ಫೀಡ್‌ಬ್ಯಾಕ್ ಕುರಿತು ನಾವು ಡೇಟಾವನ್ನು ಸಂಗ್ರಹಿಸುತ್ತೇವೆ. ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು, ಸುಧಾರಿಸಲು ಮತ್ತು ಅಭಿವೃದ್ಧಿಪಡಿಸಲು ಈ ಡೇಟಾ ನಮಗೆ ಸಹಾಯ ಮಾಡುತ್ತದೆ. ನಿಮ್ಮ Google ಖಾತೆಗೆ ಸಂಬಂಧಿಸಿರುವ ಮಾತುಕತೆಗಳನ್ನು 30 ದಿನಗಳ ನಂತರ ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ. 

ಈ ಟೂಲ್‌ಗೆ ಶಕ್ತಿ ತುಂಬುವಂತಹ ಜನರೇಟಿವ್ ಮಷಿನ್ ಲರ್ನಿಂಗ್ ಮಾಡಲ್‌ಗಳ ರೀತಿಯ ನಮ್ಮ ಉತ್ಪನ್ನಗಳ ಗುಣಮಟ್ಟ ಮತ್ತು ಸುಧಾರಣೆಗಳ ಕುರಿತು ಸಹಾಯ ಮಾಡಲು, ಈ ಟೂಲ್ ಜೊತೆಗಿನ ನಿಮ್ಮ ಮಾತುಕತೆಗಳನ್ನು ಮಾನವ ರಿವ್ಯೂವರ್‌ಗಳು ಓದುತ್ತಾರೆ, ಅವುಗಳ ಕುರಿತು ಟಿಪ್ಪಣಿಗಳನ್ನು ಒದಗಿಸುತ್ತಾರೆ ಮತ್ತು ಅವುಗಳನ್ನು ಪ್ರಕ್ರಿಯೆಗೊಳಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ನಿಮ್ಮ ಗೌಪ್ಯತೆಯನ್ನು ರಕ್ಷಿಸುವ ಸಲುವಾಗಿ ನಾವು ಕ್ರಮಗಳನ್ನು ಕೈಗೊಳ್ಳುತ್ತೇವೆ. ರಿವ್ಯೂವರ್‌ಗಳು ನಿಮ್ಮ ಮಾತುಕತೆಗಳನ್ನು ನೋಡುವ ಅಥವಾ ಟಿಪ್ಪಣಿಗಳನ್ನು ಮಾಡುವುದಕ್ಕೂ ಮೊದಲು, ಅವುಗಳನ್ನು ನಿಮ್ಮ Google ಖಾತೆಯಿಂದ ಪ್ರತ್ಯೇಕಗೊಳಿಸುವುದು ಈ ಕ್ರಮಗಳಲ್ಲಿ ಸೇರಿರುತ್ತದೆ. ಜೊತೆಗೆ, ಇಮೇಲ್ ವಿಳಾಸಗಳು ಮತ್ತು ಫೋನ್ ಸಂಖ್ಯೆಗಳಂತಹ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕಲು ಸ್ವಯಂಚಾಲಿತ ಟೂಲ್‌ಗಳನ್ನು ನಾವು ಬಳಸುತ್ತೇವೆ. 

ಮಾನವ ರಿವ್ಯೂವರ್‌ಗಳು ರಿವ್ಯೂ ಮಾಡಿದ ಅಥವಾ ಟಿಪ್ಪಣಿ ಮಾಡಿದ ಮಾತುಕತೆಗಳನ್ನು 30 ದಿನಗಳ ನಂತರ ಸ್ವಯಂಚಾಲಿತವಾಗಿ ಅಳಿಸಲಾಗುವುದಿಲ್ಲ. ಈ ಮಾತುಕತೆಗಳನ್ನು ಪ್ರತ್ಯೇಕವಾಗಿ ಇರಿಸಲಾಗಿರುತ್ತದೆ ಮತ್ತು ಅವುಗಳು ನಿಮ್ಮ Google ಖಾತೆಗೆ ಕನೆಕ್ಟ್ ಆಗಿರುವುದಿಲ್ಲ. ಅದರ ಬದಲಿಗೆ, ಅವುಗಳನ್ನು 3 ವರ್ಷಗಳವರೆಗೆ ಹಾಗೆಯೇ ಉಳಿಸಲಾಗಿರುತ್ತದೆ.

ರಿವ್ಯೂವರ್‌ಗಳು ನೋಡಬಾರದೆಂದು ನೀವು ಬಯಸುವ ಗೌಪ್ಯ ಮಾಹಿತಿ ಅಥವಾ ಯಾವುದೇ ವಿಷಯವನ್ನು ನಿಮ್ಮ ಮಾತುಕತೆಗಳಲ್ಲಿ ಒದಗಿಸಬೇಡಿ. ನೀವು ನೀಡುವ ಮಾಹಿತಿಯನ್ನು ನಮ್ಮ ಉತ್ಪನ್ನಗಳು, ಸೇವೆಗಳು ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನಗಳನ್ನು ಸುಧಾರಿಸಲು ಬಳಸಬಹುದು.
ಗಮನಿಸಿ: ಟೂಲ್ ಅನ್ನು ಪರೀಕ್ಷಿಸಲು ಸೈನ್ ಅಪ್ ಮಾಡಿದ Premium ಸದಸ್ಯರು ಯಾವುದೇ ಸಮಯದಲ್ಲಿ ಪ್ರಯೋಗವನ್ನು ತೊರೆಯಬಹುದು.

 

ನಾನು ಟೂಲ್ ಕುರಿತು ಫೀಡ್‌ಬ್ಯಾಕ್ ಸಲ್ಲಿಸುವುದು ಹೇಗೆ?
ನೀವು ಉಪಯುಕ್ತವಲ್ಲ, ಸುರಕ್ಷಿತವಲ್ಲ, ನಿಖರವಲ್ಲ ಅಥವಾ ಬೇರೆ ಯಾವುದೇ ಕಾರಣಕ್ಕಾಗಿ ಕಳಪೆಯಾಗಿದೆ ಎಂದು ಭಾವಿಸುವ AI-ಜನರೇಟೆಡ್ ಪ್ರತಿಕ್ರಿಯೆಯನ್ನು ಸ್ವೀಕರಿಸಿದರೆ, ಫೀಡ್‌ಬ್ಯಾಕ್ ಸಲ್ಲಿಸುವ ಮೂಲಕ ನಮಗೆ ತಿಳಿಸಬಹುದು. ನಿಮ್ಮ ಫೀಡ್‌ಬ್ಯಾಕ್ ಈ ಅನುಭವವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಟೂಲ್ ಕುರಿತು ಫೀಡ್‌ಬ್ಯಾಕ್ ಸಲ್ಲಿಸಿ

ಫೀಡ್‌ಬ್ಯಾಕ್ ಸಲ್ಲಿಸಲು:

  1. ವೀಡಿಯೊ ಕೆಳಭಾಗದಲ್ಲಿ ಕಾಣಿಸುವ ಕೇಳಿ  ಎಂಬುದನ್ನು ಟ್ಯಾಪ್ ಮಾಡಿ
  2. ಪ್ರತಿಕ್ರಿಯೆಯನ್ನು ಪಡೆಯಲು ಸೂಚಿಸಲಾದ ಪ್ರಾಂಪ್ಟ್‌ಗಳಲ್ಲಿ ಒಂದನ್ನು ಆಯ್ಕೆಮಾಡಿ ಅಥವಾ ನಿಮ್ಮ ಸ್ವಂತ ಪ್ರಶ್ನೆಯನ್ನು ಟೈಪ್ ಮಾಡಿ.
  3. ಪ್ರತಿಕ್ರಿಯೆಯಲ್ಲಿ, ಥಂಬ್ಸ್ ಅಪ್ ಅಥವಾ ಥಂಬ್ಸ್ ಡೌನ್ ಆಯ್ಕೆಮಾಡಿ.
ನೀವು ಥಂಬ್ಸ್ ಡೌನ್ ಅನ್ನು ಆಯ್ಕೆ ಮಾಡಿದರೆ, ನಿಮ್ಮ ರೇಟಿಂಗ್‌ಗಾಗಿ ನೀವು ಐಚ್ಛಿಕವಾಗಿ ಕಾರಣವನ್ನು ಹಂಚಿಕೊಳ್ಳಬಹುದು.

ಕಾನೂನು ಸಮಸ್ಯೆ ಕುರಿತು ವರದಿ ಮಾಡಿ

ಕಾನೂನು ಕಾರಣಗಳಿಗಾಗಿ ಪ್ರತಿಕ್ರಿಯೆಯನ್ನು ವರದಿ ಮಾಡಲು:

  1. ಪ್ರತಿಕ್ರಿಯೆಯಲ್ಲಿ, ಥಂಬ್ಸ್ ಡೌನ್ ಆಯ್ಕೆಮಾಡಿ.
  2. ಕಾನೂನು ಸಮಸ್ಯೆಗಳನ್ನು ವರದಿ ಮಾಡಿ ಎಂಬುದನ್ನು ಆಯ್ಕೆಮಾಡಿ. 
  3. ಕಾನೂನು ಸಮಸ್ಯೆಯನ್ನು ವರದಿ ಮಾಡಲು ಪ್ರಾಂಪ್ಟ್‌ಗಳನ್ನು ಅನುಸರಿಸಿ. 

ಫೀಡ್‌ಬ್ಯಾಕ್ ಅನ್ನು:

  • ವಿಶೇಷವಾಗಿ ತರಬೇತಿ ಪಡೆದ ತಂಡಗಳು ರಿವ್ಯೂ ಮಾಡುತ್ತವೆ. ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಅಗತ್ಯವಿರುವುದು ಸೇರಿದಂತೆ ಫೀಡ್‌ಬ್ಯಾಕ್‌ನಲ್ಲಿ ಉಲ್ಲೇಖಿಸಲಾದ ಸಂಭಾವ್ಯ ಸಮಸ್ಯೆಗಳನ್ನು ಗುರುತಿಸಲು, ಬಗೆಹರಿಸಲು ಮತ್ತು ವರದಿ ಮಾಡಲು ನೆರವಾಗುವುದಕ್ಕೆ ಮಾನವ ರಿವ್ಯೂ ಅವಶ್ಯಕವಾಗಿದೆ.
  • ನಮ್ಮ ಗೌಪ್ಯತೆ ನೀತಿಗೆ ಅನುಗುಣವಾಗಿ ಬಳಸಲಾಗುತ್ತದೆ. ನಮ್ಮ ಗೌಪ್ಯತೆ ನೀತಿಯಲ್ಲಿ ಇನ್ನಷ್ಟು ವಿವರವಾಗಿ ವಿವರಿಸಿದಂತೆ, YouTube ಉತ್ಪನ್ನಗಳು, ಸೇವೆಗಳು ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನಗಳನ್ನು ಒದಗಿಸಲು, ಸುಧಾರಿಸಲು ಮತ್ತು ಅಭಿವೃದ್ಧಿಪಡಿಸಲು YouTube ಈ ಡೇಟಾವನ್ನು ಬಳಸುತ್ತದೆ.

ಈ ಟೂಲ್ ಬಳಸಿಕೊಂಡು ನಾನು YouTube ಬೆಂಬಲದ ಜೊತೆಗೆ ಚಾಟ್ ಮಾಡಬಹುದೇ?

ಇಲ್ಲ. ಈ ಟೂಲ್ ನಿಮ್ಮನ್ನು YouTube ಬೆಂಬಲಕ್ಕೆ ಸಂಪರ್ಕಿಸುವುದಿಲ್ಲ ಮತ್ತು ಇದು YouTube ಉತ್ಪನ್ನಗಳನ್ನು ಬಳಸುವುದಕ್ಕಾಗಿ ಬೆಂಬಲವನ್ನು ಒದಗಿಸುವ ಉದ್ದೇಶವನ್ನು ಸಹ ಹೊಂದಿರುವುದಿಲ್ಲ.

ನನಗೆ ಆ್ಯಡ್‌ಗಳನ್ನು ತೋರಿಸಲು YouTube ನನ್ನ ಮಾತುಕತೆಗಳನ್ನು ಬಳಸುತ್ತದೆಯೇ?

ಇಲ್ಲ, ನಿಮಗೆ ಆ್ಯಡ್‌ಗಳನ್ನು ತೋರಿಸಲು ನಿಮ್ಮ ಮಾತುಕತೆಗಳನ್ನು ಬಳಸಲಾಗುತ್ತಿಲ್ಲ. ಒಂದು ವೇಳೆ ಇದು ಬದಲಾದರೆ, ಬದಲಾವಣೆಯ ಕುರಿತು ನಾವು ನಿಮಗೆ ಸ್ಪಷ್ಟವಾಗಿ ತಿಳಿಸುತ್ತೇವೆ. 

ನಮ್ಮ ಬಳಕೆದಾರರ ಡೇಟಾವನ್ನು ನಾವು ಹೇಗೆ ಖಾಸಗಿಯಾಗಿ, ಸುರಕ್ಷಿತವಾಗಿ ಮತ್ತು ಸುಭದ್ರವಾಗಿರಿಸಿಕೊಳ್ಳುತ್ತೇವೆ ಎಂಬುದರ ಕುರಿತು ತಿಳಿಯಲು, ನಮ್ಮ ಗೌಪ್ಯತೆ ಮತ್ತು ಭದ್ರತಾ ತತ್ವಗಳನ್ನು ಓದಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16103775360406238650
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false