ಆನ್‍ಲೈನ್ ಸುರಕ್ಷತೆ ಕುರಿತಾದ ಮಾಹಿತಿ– ಸಿಂಗಾಪುರ

YouTube ಎಂಬುದು, ಜನರು ತಮ್ಮ ಕಥೆಯನ್ನು ಹಂಚಿಕೊಳ್ಳಲು, ಅಭಿಪ್ರಾಯವನ್ನು ವ್ಯಕ್ತಪಡಿಸಲು ಮತ್ತು ಪರಸ್ಪರರೊಂದಿಗೆ ತೊಡಗಿಸಿಕೊಳ್ಲಲು ಬರುವಂತಹ ತಾಣವಾಗಿದೆ. ಈ ನಿಟ್ಟಿನಲ್ಲಿ ರಚನೆಕಾರರು ಮತ್ತು ವೀಕ್ಷಕರಲ್ಲಿ ಸುರಕ್ಷಿತ ಭಾವನೆ ಮೂಡಬೇಕೆಂದು ನಾವು ಬಯಸುತ್ತೇವೆ. YouTube ನ ಬಹುತೇಕ ರಚನೆಕಾರರು ಮತ್ತು ವೀಕ್ಷಕರು ಹಂಚಿಕೊಳ್ಳಲು, ಕಲಿಯಲು ಮತ್ತು ಸಂಪರ್ಕಿಸಲು ಬಯಸುತ್ತಾರಾದರೂ, ದುರುಪಯೋಗ ಮತ್ತು ಕಿರುಕುಳದ ನಿದರ್ಶನಗಳು ಸಹ ಇವೆ ಎಂದು ನಮಗೆ ತಿಳಿದಿದೆ. YouTube ನಲ್ಲಿ ನಿಮ್ಮನ್ನು ರಕ್ಷಿಸುವುದಕ್ಕಾಗಿ ಇರುವ ನೀತಿಗಳು ಹಾಗೂ ಪರಿಕರಗಳ ಕುರಿತು ಕೆಳಗೆ ಇನ್ನಷ್ಟು ತಿಳಿಯಿರಿ. 

YouTube ಅನ್ನು ಸುರಕ್ಷಿತ ಮತ್ತು ಆರೋಗ್ಯಕರವಾದ ಪ್ಲಾಟ್‌ಫಾರ್ಮ್ ಆಗಿರಿಸಲು ರಚನೆಕಾರರು ಹಾಗೂ ಬಳಕೆದಾರರು ಸಹ ಜವಾಬ್ದಾರರಾಗಿದ್ದಾರೆ. ಈ ಪ್ರಮಾಣಕಗಳನ್ನು ಕಾಯ್ದುಕೊಳ್ಳುವುದಕ್ಕಾಗಿ ನಾವು ರಚನೆಕಾರರು ಮತ್ತು ಬಳಕೆದಾರರನ್ನು ಹೇಗೆ ಜವಾಬ್ದಾರರನ್ನಾಗಿಸುತ್ತೇವೆ ಎಂಬ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ

YouTube ನ ನೀತಿಗಳ ಕುರಿತು ಇನ್ನಷ್ಟು ತಿಳಿಯಲು, ನಮ್ಮ ಸಮುದಾಯ ಮಾರ್ಗಸೂಚಿಗಳ ಸಂಪೂರ್ಣ ಪಟ್ಟಿಯನ್ನು ನೋಡಿ.

ದ್ವೇಷ ಮತ್ತು ಕಿರುಕುಳದ ಕುರಿತಾದ ನೀತಿಗಳು 

ದ್ವೇಷ ಮತ್ತು ಕಿರುಕುಳದ ವಿರುದ್ಧ ಸುರಕ್ಷತೆ ಒದಗಿಸಲು YouTube ಕೆಲವೊಂದು ನೀತಿಗಳನ್ನು ಹೊಂದಿದೆ.

  • ದ್ವೇಷಪೂರಿತ ಮಾತು: ಈ ನೀತಿಯು ನಿರ್ದಿಷ್ಟ ಗುಂಪುಗಳು ಹಾಗೂ ಆ ಗುಂಪುಗಳ ಸದಸ್ಯರನ್ನು ರಕ್ಷಿಸುತ್ತದೆ. ಒಂದು ವೇಳೆ ಕಂಟೆಂಟ್, ವಯಸ್ಸು, ಲಿಂಗ, ಜನಾಂಗ, ಜಾತಿ, ಧರ್ಮ, ಲೈಂಗಿಕ ಮನೋಧರ್ಮ ಅಥವಾ ವೆಟರನ್ ಸ್ಥಿತಿಯಂತಹ ಸಂರಕ್ಷಿತ ಗುಣಲಕ್ಷಣಗಳನ್ನು ಆಧರಿಸಿ, ಗುಂಪುಗಳ ವಿರುದ್ಧ ದ್ವೇಷ ಅಥವಾ ಹಿಂಸೆಯನ್ನು ಬಿತ್ತಿದರೆ, ಆ ಕಂಟೆಂಟ್ ಅನ್ನು ನಾವು ದ್ವೇಷಪೂರಿತ ಮಾತು ಎಂದು ಪರಿಗಣಿಸುತ್ತೇವೆ. ನಮ್ಮ ದ್ವೇಷಪೂರಿತ ಮಾತಿನ ಕುರಿತಾದ ನೀತಿ ಕುರಿತು ಇನ್ನಷ್ಟು ತಿಳಿಯಿರಿ.
  • ಕಿರುಕುಳ: ಈ ನೀತಿಯು ನಿರ್ದಿಷ್ಟ ವ್ಯಕ್ತಿಗಳನ್ನು ರಕ್ಷಿಸುತ್ತದೆ. ಒಂದು ವೇಳೆ ಕಂಟೆಂಟ್, ವ್ಯಕ್ತಿಗಳ ಸಂರಕ್ಷಿತ ಗುಂಪಿನ ಸ್ಥಿತಿ ಅಥವಾ ದೈಹಿಕ ಗುಣಕ್ಷಣಗಳನ್ನು ಒಳಗೊಂಡಂತೆ, ಅಂತರ್ಗತ ಗುಣಲಕ್ಷಣಗಳ ಆಧಾರದಲ್ಲಿ ದೀರ್ಘಕಾಲ ಅಥವಾ ದುರುದ್ದೇಶಪೂರಿತ ಅವಮಾನಗಳಿಗೆ ಗುರಿಯಾಗಿಸಿದರೆ, ಆ ಕಂಟೆಂಟ್ ಅನ್ನು ನಾವು ಕಿರುಕುಳ ಎಂದು ಪರಿಗಣಿಸುತ್ತೇವೆ. ಇದರಲ್ಲಿ ಬೆದರಿಕೆಗಳು, ನಿಂದನೆ, ಡಾಕ್ಸಿಂಗ್ ಅಥವಾ ಶೋಷಿಸುವ ಅಭಿಮಾನಿ ವರ್ತನೆಯಂತಹ ಹಾನಿಕಾರಕ ವರ್ತನೆಯೂ ಒಳಗೊಂಡಿದೆ. ನಮ್ಮ ಕಿರುಕುಳ ನೀತಿಯ ಕುರಿತು ಇನ್ನಷ್ಟು ತಿಳಿಯಿರಿ.

ಸೂಕ್ಷ್ಮ ಕಂಟೆಂಟ್ 

ವೀಕ್ಷಕರು, ರಚನೆಕಾರರು ಮತ್ತು ವಿಶೇಷವಾಗಿ ಅಪ್ರಾಪ್ತರನ್ನು ರಕ್ಷಿಸುವ ಆಶಯವನ್ನು ನಾವು ಹೊಂದಿದ್ದೇವೆ. ಆದ್ದರಿಂದ, ಮಕ್ಕಳನ್ನು ಸುರಕ್ಷಿತವಾಗಿರಿಸುವುದು, ಲೈಂಗಿಕತೆ ಮತ್ತು ಅಶ್ಲೀಲ ಹಾಗೂ ಸ್ವಯಂ-ಹಾನಿಗೆ ಸಂಬಂಧಿಸಿದಂತೆ ನಿಯಮಗಳನ್ನು ಹೊಂದಿದ್ದೇವೆ. YouTube ನಲ್ಲಿ ಏನನ್ನು ಅನುಮತಿಸಲಾಗುತ್ತದೆ ಮತ್ತು ಈ ನೀತಿಗಳನ್ನು ಅನುಸರಿಸದ ಕಂಟೆಂಟ್ ಅನ್ನು ನೀವು ನೋಡಿದರೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಆತ್ಮಹತ್ಯೆ ಮತ್ತು ಸ್ವಯಂ-ಹಾನಿ ಬೆಂಬಲಿಸುವ ಸಂಪನ್ಮೂಲಗಳು

ಕೆಳಗಡೆ ನೀಡಲಾಗಿರುವ ಸಂಸ್ಥೆಯು ಸಿಂಗಾಪುರದಲ್ಲಿ ಅಗತ್ಯವಿರುವ ಜನರಿಗೆ ಸಹಾಯ ಮಾಡುತ್ತದೆ. ಈ ಸಂಸ್ಥೆಯು ಮಾನ್ಯತೆ ಪಡೆದಿರುವ ಬಿಕ್ಕಟ್ಟು ನಿರ್ವಹಣಾ ಸೇವಾ ಪಾಲುದಾರವಾಗಿದೆ. 

Samaritans of Singapore

1800-221-4444

ಹಿಂಸಾತ್ಮಕ ಅಥವಾ ಅಪಾಯಕಾರಿ ಕಂಟೆಂಟ್

ದ್ವೇಷಪೂರಿತ ಮಾತು, ಹೊಂಚು ಹಾಕುವಂತಹ ವರ್ತನೆ, ಗ್ರಾಫಿಕ್ ಹಿಂಸೆ, ದುರುದ್ದೇಶಪೂರಿತ ದಾಳಿಗಳು ಮತ್ತು ಹಾನಿಕಾರಕ ಅಥವಾ ಅಪಾಯಕಾರಿ ವರ್ತನೆಯನ್ನು ಪ್ರಚಾರ ಮಾಡುವ ಕಂಟೆಂಟ್ ಅನ್ನು YouTube ನಲ್ಲಿ ಅನುಮತಿಸಲಾಗುವುದಿಲ್ಲ.

ನಿಯಂತ್ರಿತ ವಸ್ತುಗಳು

ಉಲ್ಲಂಘನೆಯ ಕಂಟೆಂಟ್ ಅನ್ನು ವರದಿ ಮಾಡಿ

ನೀವು ಮೇಲಿನ ನೀತಿಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ನೋಡಿದರೆ, YouTube ನಲ್ಲಿ ಅನುಚಿತ ವೀಡಿಯೊಗಳು, ಚಾನಲ್‍ಗಳು ಮತ್ತು ಇತರೆ ಕಂಟೆಂಟ್ ಅನ್ನು ವರದಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

ನೀವು ಕಾನೂನುಬಾಹಿರ ಕಂಟೆಂಟ್ ಅನ್ನು ನೋಡಿದರೆ, ಕಾನೂನಾತ್ಮಕ ದೂರನ್ನು ಸಲ್ಲಿಸುವುದು ಅಥವಾ ಅದನ್ನು ನೇರವಾಗಿ ವರದಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

ಪೋಷಕ ನಿಯಂತ್ರಣಗಳು

ನೀವು ಪೋಷಕರಾಗಿದ್ದಲ್ಲಿ, ಪೋಷಕ ನಿಯಂತ್ರಣಗಳು ಮತ್ತು YouTube Kids ಪ್ರೊಫೈಲ್‍ಗಳು ಮತ್ತು ಮೇಲ್ವಿಚಾರಣೆ ಮಾಡಿದ ಖಾತೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ.

ರಚನೆಕಾರರ ಸುರಕ್ಷತಾ ಕೇಂದ್ರ

ನೀವು ಒಬ್ಬ ರಚನೆಕಾರರಾಗಿದ್ದು YouTube ನಲ್ಲಿ ನಿಮಗೆ ಇನ್ನಷ್ಟು ಸುರಕ್ಷಿತವೆನಿಸುವ ಹಾಗೆ ಮಾಡುವ ನಿಟ್ಟಿನಲ್ಲಿ ಸಹಾಯ ಮಾಡುವಂತಹ ಸಲಹೆಗಳು ಮತ್ತು ವೀಡಿಯೊಗಳಿಗಾಗಿ, ರಚನೆಕಾರರ ಸುರಕ್ಷತೆ ಕೇಂದ್ರಕ್ಕೆ ಭೇಟಿ ನೀಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11569449966456525117
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false