Twitter ನಲ್ಲಿ @TeamYouTube ನಿಂದ ಸಹಾಯ ಪಡೆಯಿರಿ

YouTube ನ ಬೆಂಬಲ ಮತ್ತು ಶಿಕ್ಷಣದ ತಂಡವಾದ TeamYouTube, Twitter ನಲ್ಲಿ @TeamYouTube ಮೂಲಕ ಅಪ್‌ಡೇಟ್‌ಗಳನ್ನು ಸಮಯಕ್ಕೆ ಸರಿಯಾಗಿ ಡೆಲಿವರ್ ಮಾಡುತ್ತದೆ ಹಾಗೂ ರಚನೆಕಾರರು, ವೀಕ್ಷಕರು ಮತ್ತು ಪಾವತಿಸಿದ ಸಬ್‌ಸ್ಕ್ರೈಬರ್‌ಗಳ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಇಲ್ಲಿ ನಮ್ಮ ಕುರಿತು ಇನ್ನಷ್ಟು ವಿವರಗಳಿವೆ:

  • ನಮ್ಮ ಹ್ಯಾಂಡಲ್ ಅನ್ನು ಸೋಮವಾರ 9 AM PT ಇಂದ ಶುಕ್ರವಾರ 5 PM PT ವರೆಗೆ ಹಗಲು-ರಾತ್ರಿ ಮಾನಿಟರ್ ಮಾಡಲಾಗುತ್ತದೆ.
  • ನಮ್ಮ ತಂಡವು ಇಂಗ್ಲಿಷ್, ಸ್ಪ್ಯಾನಿಶ್, ಪೋರ್ಚುಗೀಸ್, ಜರ್ಮನ್, ಫ್ರೆಂಚ್, ಜಪಾನೀಸ್, ಇಂಡೋನೇಷಿಯನ್, ಅರೇಬಿಕ್, ಹಿಂದಿ ಮತ್ತು ಕೊರಿಯನ್ ಭಾಷೆಗಳಲ್ಲಿ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತದೆ ಮತ್ತು ಪ್ರಶ್ನೆಗಳಿಗೆ ಉತ್ತರಿಸುತ್ತದೆ.
  • @YouTube ಅಥವಾ @YouTubeCreators ನಂತಹ ಇತರ ಅಧಿಕೃತ YouTube ಹ್ಯಾಂಡಲ್‌ಗಳನ್ನು ಟ್ಯಾಗ್ ಮಾಡಿರುವ ಪ್ರಶ್ನೆಗಳನ್ನು ಮತ್ತು ಬೆಂಬಲದ ವಿನಂತಿಗಳನ್ನು ಮಾನಿಟರ್ ಮಾಡಲು ನಾವು ನಮ್ಮ ಕೈಲಾದಷ್ಟು ಶ್ರಮಿಸುತ್ತೇವಾದರೂ, @TeamYouTube ಅನ್ನು ಟ್ಯಾಗ್ ಮಾಡುವುದು ಅತ್ಯಂತ ತ್ವರಿತವಾಗಿ ಸಹಾಯ ಪಡೆಯುವ ಮಾರ್ಗವಾಗಿದೆ.

Twitter ನಲ್ಲಿ @TeamYouTube ಕುರಿತು ಇನ್ನಷ್ಟು ತಿಳಿದುಕೊಳ್ಳಿ

@TeamYouTube ಅನ್ನು ಸಂಪರ್ಕಿಸುವಾಗ ನಾನು ಯಾವೆಲ್ಲ ಮಾಹಿತಿಯನ್ನು ಒದಗಿಸಬೇಕು?

ನೀವು ಸಾರ್ವಜನಿಕವಾಗಿ ಟ್ವೀಟ್ ಮಾಡುತ್ತಿದ್ದರೆ, ಯಾವುದೇ ವೈಯಕ್ತಿಕವಾಗಿ ಗುರುತಿಸಬಲ್ಲ ಮಾಹಿತಿಯನ್ನು ಸೇರಿಸಬೇಡಿ, ನಿಮ್ಮ ಇಮೇಲ್ ವಿಳಾಸ, ಫೋನ್ ಸಂಖ್ಯೆ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳು ಇದರ ಕೆಲವು ಉದಾಹರಣೆಗಳಾಗಿವೆ.

ಸಹಾಯಕ್ಕಾಗಿ @TeamYouTube ಅನ್ನು ಟ್ಯಾಗ್ ಮಾಡುವಾಗ, ಈ ಕೆಳಗಿನ ಸೂಕ್ತ ಮಾಹಿತಿಯನ್ನು ಸೇರಿಸಲು ಮರೆಯದಿರಿ:

  • ಚಾನಲ್ ಅಥವಾ ವೀಡಿಯೊ URL.
  • ನಿಮಗೆ ಕಾಣಿಸುತ್ತಿರುವ ನಿರ್ದಿಷ್ಟ ಸಮಸ್ಯೆ ಅಥವಾ ವಿಷಯದ ಸ್ಕ್ರೀನ್‌ಶಾಟ್‌ಗಳು.
  • ನೀವು ಬಳಸುತ್ತಿರುವ ಸಾಧನ, ಉದಾಹರಣೆಗೆ iPhone.
  • ನಿಮಗೆ YouTube TV ಯಲ್ಲಿ ತೊಂದರೆಯಾಗುತ್ತಿದ್ದರೆ, ನಿಮ್ಮ ನರ್ಡ್ಸ್‌ಗಾಗಿ ಅಂಕಿಅಂಶಗಳ ಸ್ಕ್ರೀನ್‌ಶಾಟ್.

ಸಹಾಯ ಮಾಡಲು @TeamYouTube ಗೆ ಸಾಧ್ಯವಾಗದಿರುವ ಸನ್ನಿವೇಶಗಳಿವೆಯೇ?

ಈ ಕೆಲವು ಸನ್ನಿವೇಶಗಳಲ್ಲಿ @TeamYouTube ಸಹಾಯ ಮಾಡಲಾರದು:

  • Amazon Fire Stick ಅಥವಾ Roku ನಂತಹ Google ಅಲ್ಲದ ಉತ್ಪನ್ನ ಅಥವಾ ಇತರ ಸೇವೆಯಲ್ಲಿ ಸಂಭವಿಸುತ್ತಿರುವ ಸಮಸ್ಯೆಗಳು.
  • ಹಕ್ಕುಗಳನ್ನು ಹೊಂದಿರುವವರ ಜೊತೆಗಿನ ಕೃತಿಸ್ವಾಮ್ಯದ ವಿವಾದಗಳು.
  • ಕಾನೂನು ವಿವಾದಗಳು.
  • Google AdSense ಖಾತೆಗಳ ಮರುಸಕ್ರಿಯಗೊಳಿಸುವಿಕೆ ಅಥವಾ ತೆಗೆದುಹಾಕುವಿಕೆ.
  • ನಿಮ್ಮ ಚಾನಲ್ ಅನ್ನು ಹ್ಯಾಕ್ ಮಾಡಲಾಗಿದ್ದರೆ, ನಮ್ಮ ರಚನೆಕಾರರ ಬೆಂಬಲ ತಂಡವನ್ನು ಸಂಪರ್ಕಿಸಿ.
  • ನೀವು ನೀತಿಯ ನಿರ್ಧಾರವೊಂದಕ್ಕೆ ಸಮ್ಮತಿಸುವುದಿಲ್ಲ.

YouTube ನ ಪಾವತಿಸಿದ ಉತ್ಪನ್ನವೊಂದರ ವಿಚಾರದಲ್ಲಿ ನನಗೆ ಸಮಸ್ಯೆಯಾಗಿದೆ, @TeamYouTube ಸಹಾಯ ಮಾಡಬಹುದೇ?

ಪಾವತಿಸಿದ ಉತ್ಪನ್ನಗಳಿಗೆ ಸಂಬಂಧಪಟ್ಟ ತ್ವರಿತ ಪ್ರಶ್ನೆಗಳು ಅಥವಾ ಫೀಡ್‌ಬ್ಯಾಕ್‌ಗಾಗಿ ನೀವು Twitter ನಲ್ಲಿ @TeamYouTube ಅನ್ನು ಸಂಪರ್ಕಿಸಬಹುದು.

ನಿಮ್ಮ ಖಾತೆ ಅಥವಾ ಸದಸ್ಯತ್ವಗಳಿಗೆ ಅನನ್ಯವಾದ ಬೆಂಬಲದ ಸಮಸ್ಯೆಗಳಿದ್ದಲ್ಲಿ, ಪಾವತಿಸಿದ ಉತ್ಪನ್ನಗಳಿಗಾಗಿ ಇಮೇಲ್, ಫೋನ್ ಅಥವಾ ಚಾಟ್ ಮೂಲಕ YouTube ಬೆಂಬಲ ತಂಡವನ್ನು ಸಂಪರ್ಕಿಸುವುದು ಉತ್ತಮ, ಏಕೆಂದರೆ ಇವುಗಳಿಗಾಗಿ ನಿಮ್ಮ ಪೋನ್ ಸಂಖ್ಯೆ ಅಥವಾ ಇಮೇಲ್‌ನಂತಹ ವೈಯಕ್ತಿಕ ಮಾಹಿತಿ ಬೇಕಾಗಬಹುದು. ಇದು ಇವುಗಳಿಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಒಳಗೊಂಡಿರಬಹುದು

  • ಬಿಲ್ಲಿಂಗ್
  • ಪ್ಯಾಕೇಜ್‌ಗಳನ್ನು ಸೇರಿಸುವುದು ಅಥವಾ ತೆಗೆದುಹಾಕುವುದು
  • ಸಬ್‌ಸ್ಕ್ರಿಪ್ಶನ್ ಅನ್ನು ನಿರ್ವಹಿಸುವುದು
  • ಪಾಸ್‌ವರ್ಡ್‌ಗಳನ್ನು ಮರೆತುಹೋಗುವುದು ಮತ್ತು ಖಾತೆಯ ಲಾಕ್‌ಔಟ್‌ಗಳು
  • ಈಗಾಗಲೇ ಮೇಲ್ಮನವಿ ಸಲ್ಲಿಸಲಾಗಿರುವ ಚಾನಲ್ ಕೊನೆಗೊಳಿಸುವಿಕೆಗಳು

ನೀವು ಈ ಕೆಳಗಿನ ಲಿಂಕ್‌ಗಳ ಮೂಲಕ YouTube ಬೆಂಬಲ ತಂಡವನ್ನು ಸಂಪರ್ಕಿಸಬಹುದು:

ಮರುಪಾವತಿಯ ವಿಚಾರದಲ್ಲಿ ಸಹಾಯ ಬೇಕೇ?

ಮರುಪಾವತಿಗಳ ವಿಚಾರದಲ್ಲಿ ಸಹಾಯ ಮಾಡಲು @TeamYouTube ಗೆ ಸಾಧ್ಯವಾಗುವುದಿಲ್ಲ, ಆದರೆ ಅನೇಕ ಉತ್ಪನ್ನಗಳಲ್ಲಿ, ನೀವೇ ಮರುಪಾವತಿಗಳನ್ನು ಪ್ರಾರಂಭಿಸಬಹುದು. ಪಾವತಿಸಿದ ಉತ್ಪನ್ನದ ಮರುಪಾವತಿಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.

ಇತರ YouTube ಹ್ಯಾಂಡಲ್‌ಗಳು ಲಭ್ಯವಿವೆಯೇ?

ಹೌದು, ಇತರ ಅಧಿಕೃತ YouTube ಹ್ಯಾಂಡಲ್‌ಗಳು ಕೆಳಕಂಡಂತಿವೆ:
  • @YouTube
  • @YouTubeCreators
  • @YouTubeTV
  • @CreatorLiason
  • @YTCretadores
  • @YTCriadores
  • @YTCreatorsIndia
  • @YTCreatorsJapan
  • @YTCreatorsDe
  • @YouTubeIndia
  • @YouTubeJapan
  • @YouTubeKorea
  • @YouTubeLATAM
  • @YouTubeMusic
  • @YouTubeInsider

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
667829937392597133
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false