YouTube ಪಾಲುದಾರ ಕಾರ್ಯಕ್ರಮದ ನಿಯಮಗಳಲ್ಲಿನ ಬದಲಾವಣೆಗಳು

YouTube ನಲ್ಲಿ ಮಾನಿಟೈಸಿಂಗ್ ಅನ್ನು ಮುಂದುವರಿಸಲು, ಹೊಸ YouTube ಪಾಲುದಾರ ಕಾರ್ಯಕ್ರಮದ ನಿಯಮಗಳನ್ನು 10ನೇ ಜುಲೈ, 2023 ರೊಳಗೆ ಸಮ್ಮತಿಸಬೇಕು. 1 ಫೆಬ್ರವರಿ 2023 ರಷ್ಟು ಶೀಘ್ರವಾಗಿ ಅಥವಾ ಸಮ್ಮತಿಸಿದ ದಿನಾಂಕದಿಂದ Shorts ಜಾಹೀರಾತು ಆದಾಯ ಗಳಿಕೆಯನ್ನು ಪ್ರಾರಂಭಿಸಲು ಪಾಲುದಾರರು ಹೊಸ ನಿಯಮಗಳಿಗೆ ಸಹ ಸಮ್ಮತಿಸಬೇಕು.

Shorts ಗಾಗಿ ಹೊಸ ಅರ್ಹತೆಯ ಮಾನದಂಡಗಳು, YouTube ನಲ್ಲಿ ಆದಾಯ ಗಳಿಸಲು ಹೊಸ ವಿಧಾನಗಳು (Shorts ಗಾಗಿ ಜಾಹೀರಾತು ಆದಾಯದ ಹಂಚಿಕೆ ಸೇರಿದಂತೆ) ಮತ್ತು Creator Music ಗೆ ಆ್ಯಕ್ಸೆಸ್ ಅನ್ನು ತೆರೆಯುವ ಮೂಲಕ ನಾವು YouTube ಪಾಲುದಾರ ಕಾರ್ಯಕ್ರಮವನ್ನು (YPP) ಹೇಗೆ ವಿಸ್ತರಿಸುತ್ತಿದ್ದೇವೆ ಮತ್ತು ಅಭಿವೃದ್ಧಿಪಡಿಸುತ್ತಿದ್ದೇವೆ ಎಂಬುದನ್ನು ನಾವು ಇತ್ತೀಚೆಗೆ ಘೋಷಿಸಿದ್ದೇವೆ

ಈ ಬದಲಾವಣೆಗಳನ್ನು ಸಾಧ್ಯವಾಗಿಸಲು, ನಾವು ಹೊಸ YouTube ಪಾಲುದಾರ ಕಾರ್ಯಕ್ರಮದ ನಿಯಮಗಳನ್ನು ಹೊಂದಿದ್ದೇವೆ. ಈ ನಿಯಮಗಳಲ್ಲಿನ ಇತ್ತೀಚಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಓದಿ ಮತ್ತು ನಿಮ್ಮ ಚಾನಲ್ ಮಾನಿಟೈಸಿಂಗ್ ಅನ್ನು ಮುಂದುವರಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಿ.

ಮಾಡ್ಯುಲ್‌ಗಳನ್ನು ಪರಿಚಯಿಸಲಾಗುತ್ತಿದೆ

ರಚನೆಕಾರರು ತಮ್ಮ ಕಂಟೆಂಟ್‌ನಿಂದ ಗಳಿಸಬಹುದಾದ ರೀತಿಯಲ್ಲಿ ಹೆಚ್ಚು ನಮ್ಯತೆಯನ್ನು ನೀಡುವ ಹೊಸ ಮಾಡ್ಯುಲ್‌ಗಳನ್ನು ಸೇರಿಸಲು, ನಾವು YouTube ಪಾಲುದಾರ ಕಾರ್ಯಕ್ರಮದ ನಿಯಮಗಳನ್ನು ಮರುರಚಿಸಿದ್ದೇವೆ. ಪ್ಲ್ಯಾಟ್‌ಫಾರ್ಮ್‌ನಲ್ಲಿ ಮಾನಿಟೈಸ್ ಮಾಡಲು ಬಯಸುವ ಎಲ್ಲಾ ರಚನೆಕಾರರಿಗೆ ಸಂಬಂಧಿಸಿದ ಮೂಲಭೂತ ಒಪ್ಪಂದದ ನಿಯಮಗಳಾದ ಮೂಲ ನಿಯಮಗಳಿಗೆ ಸಹಿ ಮಾಡಿದ ನಂತರ, ರಚನೆಕಾರರು ಗಳಿಕೆಯ ಅವಕಾಶಗಳನ್ನು ಅನ್‌ಲಾಕ್ ಮಾಡಲು ಒಪ್ಪಂದದ ಮಾಡ್ಯುಲ್‌ಗಳನ್ನು ಆಯ್ಕೆಮಾಡಬಹುದು ಮತ್ತು ಆರಿಸಬಹುದು. 

ಮೂಲ ನಿಯಮಗಳು

ನಾವು ನಿಮಗೆ ಹೇಗೆ ಪಾವತಿಸುತ್ತೇವೆ, ನಮ್ಮ ಕಂಟೆಂಟ್ ನೀತಿಗಳಂತಹ ಮೂಲಭೂತ ಪ್ರೋಗ್ರಾಂ ನಿಯಮಗಳು ಮಾತ್ರವಲ್ಲದೆ, ದೇಶ ಪಾಸ್-ಥ್ರೂಗಳು ಮತ್ತು ಹಕ್ಕುಗಳ ಕ್ಲಿಯರೆನ್ಸ್ ಹೊಂದಾಣಿಕೆಗಳಂತಹ ಹೊಸ ನಿಯಮಗಳನ್ನು ಮೂಲ ನಿಯಮಗಳು ಒಳಗೊಂಡಿರುತ್ತವೆ. YouTube ಪಾಲುದಾರ ಕಾರ್ಯಕ್ರಮದಲ್ಲಿರುವ ಅಥವಾ ಸೇರಲು ಬಯಸುವ ಎಲ್ಲಾ ರಚನೆಕಾರರು ಮೂಲ ನಿಯಮಗಳನ್ನು ಸಮ್ಮತಿಸುವ ಅಗತ್ಯವಿದೆ. 

ವೀಕ್ಷಣೆ ಪುಟದ ಮಾನಿಟೈಸೇಶನ್ ಮಾಡ್ಯುಲ್

ವೀಕ್ಷಣಾ ಪುಟವು YouTube, YouTube Music ಮತ್ತು YouTube Kids ನಲ್ಲಿ ನಿಮ್ಮ ಲಾಂಗ್-ಫಾರ್ಮ್ ಅಥವಾ ಲೈವ್ ಸ್ಟ್ರೀಮಿಂಗ್ ವೀಡಿಯೊಗಳ ವಿವರಣೆ ಮತ್ತು ಪ್ಲೇಬ್ಯಾಕ್‌ಗೆ ಮೀಸಲಾಗಿರುವ ಪುಟಗಳನ್ನು ಪ್ರತಿನಿಧಿಸುತ್ತದೆ. ವೀಕ್ಷಣಾ ಪುಟದಲ್ಲಿ ವೀಕ್ಷಿಸಲಾದ ಅಥವಾ YouTube ವೀಡಿಯೊ ಪ್ಲೇಯರ್‌ನಲ್ಲಿ ಇತರ ಸೈಟ್‌ಗಳಲ್ಲಿ ಎಂಬೆಡ್ ಮಾಡಿದ ಲಾಂಗ್-ಫಾರ್ಮ್ ಅಥವಾ ಲೈವ್ ಸ್ಟ್ರೀಮಿಂಗ್ ವೀಡಿಯೊಗಳಲ್ಲಿ ಜಾಹೀರಾತು ಆದಾಯ ಮತ್ತು YouTube Premium ಆದಾಯವನ್ನು ಗಳಿಸಲು, ನೀವು ವೀಕ್ಷಣಾ ಪುಟದ ಮಾನಿಟೈಸೇಶನ್ ಮಾಡ್ಯುಲ್‌ಗೆ ಸಮ್ಮತಿಸಬೇಕು. YPP ನಲ್ಲಿ ಅಸ್ತಿತ್ವದಲ್ಲಿರುವ ರಚನೆಕಾರರು, ವೀಕ್ಷಣಾ ಪುಟದಿಂದ ಜಾಹೀರಾತು ಆದಾಯ ಗಳಿಸುವುದನ್ನು ಮುಂದುವರಿಸಲು ಈ ಮಾಡ್ಯುಲ್‌ಗೆ ಸಮ್ಮತಿಸಬೇಕು ಎಂಬುದು ಇದರ ಅರ್ಥ. 

Shorts ಮಾನಿಟೈಸೇಶನ್ ಮಾಡ್ಯುಲ್

Shorts ಮಾನಿಟೈಸೇಶನ್ ಮಾಡ್ಯುಲ್, Shorts ಫೀಡ್‌ನಲ್ಲಿನ ವೀಡಿಯೊಗಳ ನಡುವೆ ವೀಕ್ಷಿಸಲಾದ ಆ್ಯಡ್‌ಗಳಿಂದ ಬಂದ ಆದಾಯವನ್ನು ಹಂಚಿಕೊಳ್ಳಲು ನಿಮ್ಮ ಚಾನಲ್‌ಗೆ ಅನುಮತಿಸುತ್ತದೆ. ಒಮ್ಮೆ ನೀವು ಈ ಮಾಡ್ಯುಲ್ ಅನ್ನು ಸಮ್ಮತಿಸಿದರೆ, 1ನೇ ಫೆಬ್ರವರಿ, 2023 ರಿಂದ ನಿಮ್ಮ ಅರ್ಹವಾದ Shorts ವೀಕ್ಷಣೆಗಳಲ್ಲಿ ನೀವು Shorts ಫೀಡ್ ಆ್ಯಡ್‌ಗಳು ಮತ್ತು YouTube Premium ಆದಾಯದಿಂದ ಗಳಿಸಲು ಪ್ರಾರಂಭಿಸುತ್ತೀರಿ. 1ನೇ ಫೆಬ್ರವರಿ, 2023 ರ ನಂತರ ಸಮ್ಮತಿಸಿದರೆ, ನೀವು ಸಮ್ಮತಿಸಿದ ದಿನಾಂಕದಂದು Shorts ಆ್ಯಡ್‌ಗಳ ಆದಾಯದ ಹಂಚಿಕೆಯು ಪ್ರಾರಂಭವಾಗುತ್ತದೆ. Shorts ಗಾಗಿ ಜಾಹೀರಾತು ಆದಾಯ ಹಂಚಿಕೆ ಹೇಗೆ ಕೆಲಸ ಮಾಡುತ್ತದೆ ಎಂಬುದರ ಕುರಿತು ಹೆಚ್ಚಿನ ವಿವರಗಳಿಗಾಗಿ, ನಮ್ಮ YouTube Shorts ಮಾನಿಟೈಸೇಶನ್ ನೀತಿಗಳನ್ನು ನೋಡಿ. 

ವಾಣಿಜ್ಯ ಉತ್ಪನ್ನ ಮಾಡ್ಯೂಲ್ 

ವಾಣಿಜ್ಯ ಉತ್ಪನ್ನ ಮಾಡ್ಯೂಲ್ (ಈ ಮೊದಲು ಇದನ್ನು ವಾಣಿಜ್ಯ ಉತ್ಪನ್ನದ ಅನುಬಂಧ ಎಂದು ಕರೆಯಲಾಗುತ್ತಿತ್ತು), ನಿಮ್ಮ ಅಭಿಮಾನಿಗಳೊಂದಿಗೆ ಬೆರೆಯುತ್ತಾ ಹಣ ಗಳಿಸಲು ನಿಮಗೆ ಸಹಾಯ ಮಾಡುವ ಫ್ಯಾನ್ ಫಂಡಿಂಗ್ ಫೀಚರ್‌ಗಳ ಸರಣಿಯನ್ನು ಅನ್‌ಲಾಕ್ ಮಾಡುತ್ತದೆ; ಈ ಫೀಚರ್‌ಗಳಲ್ಲಿ ಚಾನಲ್ ಸದಸ್ಯತ್ವಗಳು, ಸೂಪರ್ ಚಾಟ್, ಸೂಪರ್ ಸ್ಟಿಕ್ಕರ್ಸ್ ಮತ್ತು ಸೂಪರ್ ಥ್ಯಾಂಕ್ಸ್‌ನಂತಹ ಫೀಚರ್‌ಗಳು ಒಳಗೊಂಡಿವೆ. ಈ ನಿಯಮಗಳು ಒಂದೇ ಆಗಿರುತ್ತವೆ, ಆದ್ದರಿಂದ ನೀವು ಈಗಾಗಲೇ ಸಮ್ಮತಿಸಿದ್ದರೆ, ನೀವು ಅವುಗಳಿಗೆ ಇನ್ನೊಮ್ಮೆ ಸಮ್ಮತಿಸುವ ಅಗತ್ಯವಿಲ್ಲ.

ಅಪ್‌ಡೇಟ್ ಮಾಡಲಾದ ನಿಯಮಗಳನ್ನು ನೀವು ಸಮ್ಮತಿಸದಿದ್ದರೆ ಏನಾಗುತ್ತದೆ

ಎಲ್ಲಾ ಪಾಲುದಾರರು ಹೊಸ YouTube ಪಾಲುದಾರ ಕಾರ್ಯಕ್ರಮದ ನಿಯಮಗಳನ್ನು ಪರಿಶೀಲಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. YPP ನಲ್ಲಿ ಸೇರಿಕೊಳ್ಳಲು ಅಥವಾ ಉಳಿಯಲು ಮೂಲ ನಿಯಮಗಳನ್ನು ಸಮ್ಮತಿಸುವ ಅಗತ್ಯವಿದೆ. 

Shorts ಆ್ಯಡ್ ಆದಾಯದ ಹಂಚಿಕೆ 1ನೇ ಫೆಬ್ರವರಿ, 2023 ರಿಂದ ಪ್ರಾರಂಭವಾಗುತ್ತದೆ. ನಿಮ್ಮ Shorts ವೀಕ್ಷಣೆಗಳಲ್ಲಿ ಆ್ಯಡ್ ಆದಾಯದ ಗಳಿಕೆಯನ್ನು ಪ್ರಾರಂಭಿಸಲು, ಮಾನಿಟೈಸಿಂಗ್ ಪಾಲುದಾರರು ಮೂಲ ನಿಯಮಗಳು ಮತ್ತು Shorts ಮಾನಿಟೈಸೇಶನ್ ಮಾಡ್ಯುಲ್ ಅನ್ನು ಸಮ್ಮತಿಸಬೇಕಾಗುತ್ತದೆ. ನೀವು ಹಾಗೆ ಮಾಡುವವರೆಗೂ Shorts ಫೀಡ್ ಆ್ಯಡ್‌ಗಳಿಂದ ಹಣ ಗಳಿಸಲು ನಿಮಗೆ ಸಾಧ್ಯವಾಗುವುದಿಲ್ಲ. Shorts ಮಾನಿಟೈಸೇಶನ್ ಮಾಡ್ಯುಲ್ ಅನ್ನು ಸಮ್ಮತಿಸುವ ಮೊದಲು ಸಂಗ್ರಹವಾದ Shorts ವೀಕ್ಷಣೆಗಳು Shorts ಆ್ಯಡ್ ಆದಾಯದ ಹಂಚಿಕೆಗೆ ಅರ್ಹವಾಗಿರುವುದಿಲ್ಲ.

YouTube ಪಾಲುದಾರ ಕಾರ್ಯಕ್ರಮದಲ್ಲಿ ಉಳಿಯಲು ಮತ್ತು YouTube ನಲ್ಲಿ ಮಾನಿಟೈಸಿಂಗ್ ಅನ್ನು ಮುಂದುವರಿಸಲು, ಎಲ್ಲಾ ಮಾನಿಟೈಸಿಂಗ್ ಪಾಲುದಾರರು ಹೊಸ ನಿಯಮಗಳನ್ನು ಪರಿಶೀಲಿಸಲು ಮತ್ತು ಸಮ್ಮತಿಸಲು 10ನೇ ಜುಲೈ, 2023 ರವರೆಗೆ ಸಮಯವನ್ನು ಹೊಂದಿರುತ್ತಾರೆ. ಆ ದಿನಾಂಕದೊಳಗೆ ನೀವು ಕನಿಷ್ಠಪಕ್ಷ ಮೂಲ ನಿಯಮಗಳಿಗೆ ಸಮ್ಮತಿಸದಿದ್ದರೆ, ನಿಮ್ಮ ಚಾನಲ್ ಅನ್ನು YouTube ಪಾಲುದಾರ ಕಾರ್ಯಕ್ರಮದಿಂದ ತೆಗೆದುಹಾಕಲಾಗುತ್ತದೆ ಮತ್ತು ನಿಮ್ಮ ಮಾನಿಟೈಸೇಶನ್ ಅಗ್ರಿಮೆಂಟ್ ಅನ್ನು ಕೊನೆಗೊಳಿಸಲಾಗುತ್ತದೆ. ಅದು ಸಂಭವಿಸಿದ ನಂತರ, ಇನ್ನೊಮ್ಮೆ ಸೇರಿಕೊಳ್ಳಲು ನೀವು ಮರು ಅರ್ಹತೆ ಪಡೆಯಬೇಕಾಗುತ್ತದೆ ಮತ್ತು ಮರು ಅರ್ಜಿ ಸಲ್ಲಿಸಬೇಕಾಗುತ್ತದೆ. 

ಒಮ್ಮೆ ನಿಮ್ಮ ಚಾನಲ್ ಅನ್ನು YPP ಯಿಂದ ತೆಗೆದುಹಾಕಿದರೆ, YouTube ನ ಸೇವಾ ನಿಯಮಗಳು ಇನ್ನೂ ಅನ್ವಯಿಸುತ್ತವೆ ಮತ್ತು YouTube ನ ನಿಮ್ಮ ಬಳಕೆಯನ್ನು ನಿಯಂತ್ರಿಸುತ್ತವೆ ಎಂಬುದನ್ನು ನೆನಪಿನಲ್ಲಿಡಿ. ಇದು YouTube ನ ಮಾನಿಟೈಸ್ ಹಕ್ಕು ಮತ್ತು ನಿಮ್ಮ ಕಂಟೆಂಟ್‌ನಲ್ಲಿ ಆ್ಯಡ್‌ಗಳನ್ನು ಪ್ರದರ್ಶಿಸುವ ಹಕ್ಕನ್ನು ಒಳಗೊಂಡಿರುತ್ತದೆ. ನೀವು ಪ್ರಸ್ತುತ YouTube ಪಾಲುದಾರ ಕಾರ್ಯಕ್ರಮದಲ್ಲಿ ಇಲ್ಲದಿದ್ದರೆ, ಆದರೆ ನೀವು ಈ ಹಿಂದೆ ಭಾಗವಹಿಸಿದ್ದರೆ, ನಿಮ್ಮ ಕಂಟೆಂಟ್‌ನಲ್ಲಿ ಆ್ಯಡ್‌ಗಳನ್ನು ನೀಡುತ್ತಿರುವುದನ್ನು ನೀವು ಈಗಲೂ ನೋಡಬಹುದು, ಆದರೆ ಪಾವತಿಗೆ ಅರ್ಹವಾಗಿರುವುದಿಲ್ಲ. 

ಪದೇಪದೇ ಕೇಳಲಾಗುವ ಪ್ರಶ್ನೆಗಳು

ನಿಯಮಗಳನ್ನು ಮಾಡ್ಯುಲರೈಸ್ ಮಾಡಲು ನೀವು ಏಕೆ ನಿರ್ಧರಿಸಿದ್ದೀರಿ?

YouTube ಪಾಲುದಾರ ಕಾರ್ಯಕ್ರಮದ ನಿಯಮಗಳಿಗೆ ಮಾಡ್ಯುಲ್‌ಗಳನ್ನು ಪರಿಚಯಿಸುವುದು ಎಂದರೆ, ನಾವು ಭವಿಷ್ಯದಲ್ಲಿ ಸಂಪೂರ್ಣ ಮಾನಿಟೈಸೇಶನ್ ಅಗ್ರಿಮೆಂಟ್ ಅನ್ನು ಅಪ್‌ಡೇಟ್ ಮಾಡದೆಯೇ ಅಥವಾ ತಿದ್ದುಪಡಿ ಮಾಡದೆಯೇ ಹೊಸ ಮಾನಿಟೈಸೇಶನ್ ಅವಕಾಶಗಳನ್ನು ಸೇರಿಸಬಹುದು.

ಈ ವಿಧಾನವು ರಚನೆಕಾರರಿಗೆ ಹೆಚ್ಚಿನ ಪಾರದರ್ಶಕತೆಯನ್ನು ನೀಡುತ್ತದೆ ಮತ್ತು ಅವರ ಚಾನಲ್‌ಗೆ ಯಾವ ಮಾನಿಟೈಸೇಶನ್ ಅವಕಾಶಗಳು ಸೂಕ್ತವೆಂದು ನಿರ್ಧರಿಸಲು ಫೋಕಸ್ ಅನ್ನು ನೀಡುತ್ತದೆ.

ನಾನು ಕೆಲವು ಮಾಡ್ಯುಲ್‌ಗಳನ್ನು ಸಮ್ಮತಿಸಿದ ನಂತರ ನಾನು ಅವುಗಳಿಂದ ಹೊರಗುಳಿಯಬಹುದೇ?

ಹೌದು. ರಚನೆಕಾರರ ಬೆಂಬಲವನ್ನು ಸಂಪರ್ಕಿಸುವ ಮೂಲಕ ನೀವು ಯಾವಾಗ ಬೇಕಾದರೂ ನಿರ್ದಿಷ್ಟ ಮಾನಿಟೈಸೇಶನ್ ಮಾಡ್ಯುಲ್‌ಗಳಿಂದ ಹೊರಗುಳಿಯಲು ಆಯ್ಕೆಮಾಡಬಹುದು.

ಬಹು-ಚಾನಲ್ ನೆಟ್‌ವರ್ಕ್‌ನಲ್ಲಿರುವ (MCN) ಚಾನಲ್‌ಗಳಿಗೆ ಇದು ಹೇಗೆ ಕೆಲಸ ಮಾಡುತ್ತದೆ?

ಮಾನಿಟೈಸಿಂಗ್ ಅನ್ನು ಮುಂದುವರಿಸಲು ಎಲ್ಲಾ ಮಾನಿಟೈಸಿಂಗ್ ಪಾಲುದಾರರು 10ನೇ ಜುಲೈ, 2023 ರೊಳಗೆ ಅಪ್‌ಡೇಟ್ ಮಾಡಲಾದ ಮೂಲ ನಿಯಮಗಳನ್ನು ಸಮ್ಮತಿಸಬೇಕು. ಜುಲೈ 10 ರೊಳಗೆ MCN ಅನ್ನು ನಿರ್ವಹಿಸುವವರು ಸಮ್ಮತಿಸದಿದ್ದರೆ, ಆದರೆ ಅವರ ಅಫಿಲಿಯೇಟ್ ಚಾನಲ್ ಸಮ್ಮತಿಸಿದ್ದರೆ, ನಂತರ ಅಫಿಲಿಯೇಟ್ ಚಾನಲ್ ಅನ್ನು ಅವರ MCN ನಿಂದ ಬಿಡುಗಡೆ ಮಾಡಲಾಗುತ್ತದೆ ಮತ್ತು ಅವರ ಮಾನಿಟೈಸೇಶನ್ ಸ್ಥಿತಿಗೆ ಯಾವುದೇ ಪರಿಣಾಮ ಬೀರದಂತೆ ಯಾವುದೇ ಇತರ YPP ಪಾಲುದಾರರಂತೆ ಪರಿಗಣಿಸಲಾಗುತ್ತದೆ.

ನಾನು Studio ಕಂಟೆಂಟ್ ಮ್ಯಾನೇಜರ್ (CMS) ಅನ್ನು ಬಳಸಿದರೆ ನಾನು ಏನು ತಿಳಿದುಕೊಳ್ಳಬೇಕು?

Studio ಕಂಟೆಂಟ್ ಮ್ಯಾನೇಜರ್ (CMS) ಗೆ ಆ್ಯಕ್ಸೆಸ್ ಹೊಂದಿರುವ ಪಾಲುದಾರರು ವೀಕ್ಷಣಾ ಪುಟದಲ್ಲಿರುವ ನಿಮ್ಮ ದೀರ್ಘಾವಧಿಯ ಕಂಟೆಂಟ್ ಮಾನಿಟೈಸೇಶನ್ ಅನ್ನು ಒಳಗೊಂಡಿರುವ ಮಾನಿಟೈಸೇಶನ್ ತಿದ್ದುಪಡಿಯನ್ನು ಸಮ್ಮತಿಸಬೇಕಾಗುತ್ತದೆ. ಇದು ನಾವು ನಿಮಗೆ ಹೇಗೆ ಪಾವತಿಸುತ್ತೇವೆ, ನಮ್ಮ ಕಂಟೆಂಟ್ ನೀತಿಗಳು ಮತ್ತು ಕಂಟ್ರಿ ಪಾಸ್-ಥ್ರೂಗಳು ಮತ್ತು ಹಕ್ಕುಗಳ ಕ್ಲಿಯರೆನ್ಸ್ ಅಡ್ಜಸ್ಟ್‌ಮೆಂಟ್‌ಗಳು ಮತ್ತು ರೀಮಿಕ್ಸ್ ಮಾಡಲು ಅರ್ಹವಾಗಿರುವ ಕಂಟೆಂಟ್‌ನ ಹೊಸ ನಿಯಮಗಳಂತಹ ಮೂಲ ಕಾರ್ಯಕ್ರಮದ ನಿಯಮಗಳನ್ನು ಒಳಗೊಂಡಿರುತ್ತದೆ. Shorts ಜಾಹೀರಾತು ಆದಾಯ ಹಂಚಿಕೆಯನ್ನು ಅನ್‌ಲಾಕ್ ಮಾಡಲು ಬಯಸುವ ಪಾಲುದಾರರು Shorts ಮಾನಿಟೈಸೇಶನ್ ಮಾಡ್ಯುಲ್‌ಗೆ ಸಹ ಸಮ್ಮತಿಸಬೇಕಾಗುತ್ತದೆ. 

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರು 10 ಜುಲೈ 2023 ರೊಳಗೆ ಹೊಸ ನಿಯಮಗಳನ್ನು ಪರಿಶೀಲಿಸಬೇಕು ಮತ್ತು ಅವುಗಳಿಗೆ ಸಮ್ಮತಿಸಬೇಕು. ಆ ದಿನಾಂಕದೊಳಗೆ ಕನಿಷ್ಠಪಕ್ಷ ಮಾನಿಟೈಸೇಶನ್ ತಿದ್ದುಪಡಿಗೆ ನೀವು ಸಮ್ಮತಿಸದಿದ್ದರೆ, ನಿಮ್ಮ ಮಾನಿಟೈಸೇಶನ್ ಅಗ್ರಿಮೆಂಟ್ ಅನ್ನು ಕೊನೆಗೊಳಿಸಲಾಗುತ್ತದೆ ಮತ್ತು ನಿಮ್ಮ ಚಾನಲ್‌ಗಳು ಇನ್ನು ಮುಂದೆ YouTube ನಲ್ಲಿ ಮಾನಿಟೈಸ್ ಮಾಡುವುದಿಲ್ಲ.
ಮಾನಿಟೈಸೇಶನ್‌ಗೆ ಸಂಬಂಧಿಸಿದ ಹೊಸ “ಅರ್ಹತೆ ಇಲ್ಲದ ಆದಾಯಗಳು“ ನಿಯಮಗಳ ಅರ್ಥವೇನು?

YouTube ನ ನಿಯಮಗಳು, ನಾವು ಅಡ್ವರ್‌ಟೈಸರ್‌ಗಳಿಗೆ ಮತ್ತು ಬಳಕೆದಾರರಿಗೆ ಮೌಲ್ಯವನ್ನು ಡೆಲಿವರ್ ಮಾಡುವ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತಿದ್ದೇವೆ ಮತ್ತು ರಚನೆಕಾರರಿಗೆ ಜವಾಬ್ದಾರಿಯುತವಾಗಿ ಮತ್ತು ತಕ್ಕಮಟ್ಟಿಗೆ ಪ್ರತಿಫಲವನ್ನು ನೀಡುತ್ತೇವೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ. ನಕಲಿ ವೀಕ್ಷಣೆಗಳಿಂದ ನ್ಯಾಯಯುತವಲ್ಲದ ರೀತಿಯಲ್ಲಿ ಗಳಿಕೆಯನ್ನು ಪಡೆಯುವ ಹಣಕಾಸಿನ ವಂಚನೆಯ ಉದಾಹರಣೆಗಳು ಅಥವಾ ಕದ್ದಿರುವ ಕ್ರೆಡಿಟ್ ಕಾರ್ಡ್‌ಗಳಿಂದ ಮಾಡಿದ ಖರೀದಿಗಳು, ಜಾಹೀರಾತುದಾರರು, ರಚನೆಕಾರರು ಮತ್ತು ವೀಕ್ಷಕರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲು ಕಾರಣವಾಗುವುದರ ಮೂಲಕ ನಮ್ಮ ಪರಿಸರ ವ್ಯವಸ್ಥೆಗೆ ಹಾನಿ ಮಾಡುತ್ತವೆ. 

ಅಂತಹ ದುರುಪಯೋಗವನ್ನು ನಾವು ಪತ್ತೆ ಮಾಡಿದಾಗ, ಸೂಕ್ತವಾದಲ್ಲಿ ಮತ್ತು ಸಾಧ್ಯವಾದಾಗ, ಋಣಾತ್ಮಕವಾಗಿ ಪ್ರಭಾವಿತಗೊಂಡ ಜಾಹೀರಾತುದಾರರು ಅಥವಾ ಬಳಕೆದಾರರಂತಹ ಪಾರ್ಟಿಗಳಿಗೆ ನಾವು ಮರುಪಾವತಿ ಮಾಡುತ್ತೇವೆ. YouTube ಈ ಆದಾಯವನ್ನು ಉಳಿಸಿಕೊಳ್ಳುವುದಿಲ್ಲ ಮತ್ತು ರಚನೆಕಾರರು ಯಾವುದೇ ಮರುಪಾವತಿ ಮಾಡಿದ ಆದಾಯದ ಪಾಲನ್ನು ಸಹ ಸ್ವೀಕರಿಸಬಾರದು. ಸಂಬಂಧಿತ ನೀತಿಗಳ ಅಡಿಯಲ್ಲಿ ವಿವರಿಸಿದ ಹಾಗೆ, ನಾವು ತೆಗೆದುಕೊಳ್ಳಬಹುದಾದ ಯಾವುದೇ ಕ್ರಮಗಳು ಸನ್ನಿವೇಶಕ್ಕೆ ತಕ್ಕುದಾಗಿರುತ್ತವೆ. ಉದಾಹರಣೆಗೆ, ಹಣಕಾಸಿನ ವಂಚನೆಯಿಂದ ಉಂಟಾಗುವ ಆದಾಯವನ್ನು ನಾವು ತುಂಬಿಕೊಡಬಹುದು ಮತ್ತು ಮರುಪಾವತಿ ಮಾಡಬಹುದಾದರೂ, ಆನಂತರ ವೀಡಿಯೊಗಳು ನಮ್ಮ ಜಾಹೀರಾತುದಾರ ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಪೂರೈಸದಿರುವುದು ಕಂಡುಬಂದರೆ ನಾವು ಆದಾಯವನ್ನು ಮರುಪಾವತಿಸಲು ಬಯಸುವುದಿಲ್ಲ.

ಹೊಸ YouTube ಪಾಲುದಾರ ಕಾರ್ಯಕ್ರಮದ ನಿಯಮಗಳ “ಅರ್ಹವಲ್ಲದ ಆದಾಯಗಳು” ವಿಭಾಗವು ಹೊಸ ನೀತಿಗಳನ್ನು ಪ್ರತಿಬಿಂಬಿಸುವುದಿಲ್ಲ. ಬದಲಿಗೆ ಈ ವಿಭಾಗವು, ಹಣಕಾಸಿನ ವಂಚನೆಯಂತಹ ನಿದರ್ಶನಗಳಲ್ಲಿ ಪಾವತಿಗಳಲ್ಲಿನ ಬದಲಾವಣೆಗಳು ಅಥವಾ ವಿಳಂಬಗಳ ಕುರಿತು ನಮ್ಮ ಅಸ್ತಿತ್ವದಲ್ಲಿರುವ ಪ್ರೋಗ್ರಾಮ್ ನೀತಿಗಳ ಕುರಿತು ಹೆಚ್ಚು ಪಾರದರ್ಶಕತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅಮಾನ್ಯ ಟ್ರಾಫಿಕ್‌ನಂತಹ ನಿರ್ದಿಷ್ಟ ಉಲ್ಲಂಘನೆಗಳ ಸಂದರ್ಭದಲ್ಲಿ ನಾವು ಆದಾಯವನ್ನು ಮರುಪಾವತಿಸಬಹುದಾದ 2 ವಿಭಿನ್ನ ಸನ್ನಿವೇಶಗಳನ್ನು “ಅರ್ಹವಲ್ಲದ ಆದಾಯಗಳು” ಒಳಗೊಂಡಿದೆ:

  1. ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ ಯಾವುದೇ ಪಾಲುದಾರರ ಗಳಿಕೆಗಳನ್ನು YouTube ತಡೆಹಿಡಿಯಬಹುದು ಅಥವಾ ಅಡ್ಜಸ್ಟ್ ಮಾಡಬಹುದು.
    1. ಪಾವತಿ ಮಾಡುವ ಮೊದಲು ನಾವು ಹಣಕಾಸಿನ ವಂಚನೆಯನ್ನು ಪತ್ತೆಹಚ್ಚಿದರೆ, ನಾವು ವಂಚನೆಯನ್ನು ತನಿಖೆ ಮಾಡುವಾಗ ಸಂಯೋಜಿತ ಆದಾಯವನ್ನು ತೆಗೆದುಹಾಕಲು ಪಾವತಿಯನ್ನು ಅಡ್ಜಸ್ಟ್ ಮಾಡಬಹುದು ಅಥವಾ ಆ ಆದಾಯದ ಭಾಗಕ್ಕೆ ಸಂಬಂಧಿಸಿದ ಪಾವತಿಯನ್ನು ತಡೆಹಿಡಿಯಬಹುದು. 
  2. ನಿಮಗೆ ಪಾವತಿಸಬೇಕಾದ ಭವಿಷ್ಯದ ಪಾಲುದಾರರ ಸಂಪಾದನೆಗಳಿಗೆ YouTube ಆ ಮೊತ್ತವನ್ನು ಚಾರ್ಜ್ ಬ್ಯಾಕ್ ಮಾಡಬಹುದು ಅಥವಾ ಸರಿದೂಗಿಸಬಹುದು.
    1. ಉದಾಹರಣೆಗೆ, ಪಾವತಿ ಮಾಡಿದ ನಂತರ ನಾವು ಹಣಕಾಸಿನ ವಂಚನೆಯನ್ನು ಪತ್ತೆಹಚ್ಚಿದರೆ, ಅದಕ್ಕೆ ಸಂಬಂಧಿಸಿದ ಆದಾಯವನ್ನು, ಇನ್ನೂ ವಿತರಿಸದಿರುವ ಯಾವುದೇ YouTube ಗಾಗಿ AdSense ಬ್ಯಾಲೆನ್ಸ್‌ಗೆ ಚಾರ್ಜ್ ಬ್ಯಾಕ್ ಮಾಡಬಹುದು ಅಥವಾ ಭವಿಷ್ಯದ ಗಳಿಕೆಗಳಲ್ಲಿ ಸರಿದೂಗಿಸಬಹುದು ಅಥವಾ ಕಡಿತಗೊಳಿಸಬಹುದು. ಹೀಗಾದಲ್ಲಿ, ಚಾರ್ಜ್‌ಬ್ಯಾಕ್‌ಗಳನ್ನು ನಿಮ್ಮ YouTube ಗಾಗಿ AdSense ಬ್ಯಾಲೆನ್ಸ್‌ನಿಂದ ಕಡಿತಗೊಳಿಸಲಾಗುತ್ತದೆಯೇ ಹೊರತು ನಿಮ್ಮ ಬ್ಯಾಂಕ್ ಖಾತೆಯಿಂದಲ್ಲ.
ಮಾನಿಟೈಸ್ ಮಾಡುವ ಪಾಲುದಾರರ ನಡುವಿನ Content ID ಕ್ಲೇಮ್‌ಗಳಿಗಾಗಿ ನಾವು ಆದಾಯವನ್ನು ಹೇಗೆ ಪ್ರಕ್ರಿಯೆಗೊಳಿಸುತ್ತೇವೆ ಎಂಬುದರಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ಸಂದರ್ಭಗಳಲ್ಲಿ, ವಿವಾದವು ಪ್ರಗತಿಯಲ್ಲಿರುವಾಗ ನಾವು ಆದಾಯ ತಡೆಹಿಡಿಯುವುದನ್ನು ಮುಂದುವರಿಸುತ್ತೇವೆ.

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10967134868452675101
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false