ಹಕ್ಕುಗಳ ಕ್ಲಿಯರೆನ್ಸ್ ಅಡ್ಜಸ್ಟ್‌ಮೆಂಟ್‌ಗಳು

ರಚನೆಕಾರರು YouTube ಗೆ ಅಪ್‌ಲೋಡ್ ಮಾಡುವ ಕಂಟೆಂಟ್‌ಗೆ ಅಗತ್ಯವಿರುವ ಎಲ್ಲಾ ಹಕ್ಕುಗಳನ್ನು ಹೊಂದಿರಬೇಕು ಅಥವಾ ಕಂಟೆಂಟ್‌ನ ಹಕ್ಕುಗಳನ್ನು ಹೊಂದಿರುವವರಿಂದ ಅಗತ್ಯವಿರುವ ಎಲ್ಲಾ ಕಾನೂನು ಅನುಮತಿಗಳನ್ನು ಹೊಂದಿರಬೇಕು. ಅರ್ಹ ರಚನೆಕಾರರು ತಮ್ಮ ದೀರ್ಘಾವಧಿಯ ವೀಡಿಯೊಗಳಲ್ಲಿ ಬಳಸಲು ಬೆಳೆಯುತ್ತಿರುವ ಸಂಗೀತದ ಕ್ಯಾಟಲಾಗ್‌ಗೆ ಅದಕ್ಕೆ ಪರವಾನಗಿ ಪಡೆಯುವ ಮೂಲಕ ಅಥವಾ ಸಂಗೀತದ ಹಕ್ಕುಗಳನ್ನು ಹೊಂದಿರುವವರೊಂದಿಗೆ ಆದಾಯವನ್ನು ಹಂಚಿಕೊಳ್ಳುವ ಮೂಲಕ ಆ್ಯಕ್ಸೆಸ್ ಅನ್ನು ಹೊಂದಿರುತ್ತಾರೆ. ಪರವಾನಗಿಗಳನ್ನು ಮುಂಚಿತವಾಗಿ ಖರೀದಿಸದಿದ್ದಾಗ, ಬದಲಿಗೆ ಅರ್ಹ ರಚನೆಕಾರರು ಸಂಗೀತದ ಹಕ್ಕುಗಳನ್ನು ಹೊಂದಿರುವವರೊಂದಿಗೆ ಆದಾಯವನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

ಸಂಗೀತದ ಆದಾಯ ಹಂಚಿಕೆಯನ್ನು ಸಕ್ರಿಯಗೊಳಿಸಲು, ಸಂಗೀತದ ಹಕ್ಕುಗಳನ್ನು ಹೊಂದಿರುವವರೊಂದಿಗೆ ಕಾರ್ಯನಿರ್ವಹಣೆಯ ಹಕ್ಕುಗಳಂತಹ ಹೆಚ್ಚುವರಿ ಸಂಗೀತದ ಹಕ್ಕುಗಳನ್ನು YouTube ತೆರವುಗೊಳಿಸಬಹುದು. ರಚನೆಕಾರರ ಆದಾಯದ ಹಂಚಿಕೆಯಲ್ಲಿನ ಕಡಿತವು ಹೆಚ್ಚುವರಿ ಸಂಗೀತ ಹಕ್ಕುಗಳನ್ನು ತೆರವುಗೊಳಿಸುವ ವೆಚ್ಚವನ್ನು ಸರಿದೂಗಿಸುವುದಕ್ಕೆ ಸಂಬಂಧಿಸಿದ ಹಕ್ಕುಗಳ ಕ್ಲಿಯರೆನ್ಸ್ ಅಡ್ಜಸ್ಟ್‌ಮೆಂಟ್ ಆಗಿದೆ.

ಹಕ್ಕುಗಳ ಕ್ಲಿಯರೆನ್ಸ್ ಅಡ್ಜಸ್ಟ್‌ಮೆಂಟ್‌ಗಳು ಯಾವಾಗ ಅನ್ವಯಿಸುತ್ತವೆ?

ಹಕ್ಕುಗಳ ಕ್ಲಿಯರೆನ್ಸ್ ಅಡ್ಜಸ್ಟ್‌ಮೆಂಟ್‌ಗಳು ಹಕ್ಕುಗಳನ್ನು ಹೊಂದಿರುವ ದೇಶ/ಪ್ರದೇಶದ ಮೇಲೆ ಅವಲಂಬಿತವಾಗಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಹಕ್ಕುಗಳ ಕ್ಲಿಯರೆನ್ಸ್ ಅಡ್ಜಸ್ಟ್‌ಮೆಂಟ್‌ಗಳು ದೀರ್ಘಾವಧಿಯ ವೀಡಿಯೊಗಳು ಆದಾಯವನ್ನು ಗಳಿಸುವ ದೇಶಗಳು/ಪ್ರದೇಶಗಳಿಗೆ ಮಾತ್ರ ಅನ್ವಯಿಸುತ್ತವೆ.

ಆದಾಯದ ಹಂಚಿಕೆಗೆ ಯಾವ ಹಾಡುಗಳು ಅರ್ಹವಾಗಿವೆ ಎಂಬುದನ್ನು ನೋಡಲು, ಅರ್ಹ ರಚನೆಕಾರರು Creator Music ನಲ್ಲಿ ಟ್ರ್ಯಾಕ್ ಬಳಕೆಯ ವಿವರಗಳನ್ನು ಬ್ರೌಸ್ ಮಾಡಬಹುದು. ವೀಡಿಯೊವನ್ನು ಪ್ರಕಟಿಸಿದ ನಂತರ, ವೀಡಿಯೊವು ಯಾವ ದೇಶಗಳು/ಪ್ರದೇಶಗಳಲ್ಲಿ ಆದಾಯವನ್ನು ಹಂಚಿಕೊಳ್ಳುತ್ತಿದೆ ಎಂಬುದನ್ನು ಪರಿಶೀಲಿಸಲು ರಚನೆಕಾರರು YouTube Studio ಬಳಸಬಹುದು.

ನೆನಪಿಡಿ: ಹಕ್ಕುಗಳ ಕ್ಲಿಯರೆನ್ಸ್ ಅಡ್ಜಸ್ಟ್‌ಮೆಂಟ್‌ಗಳು ದೀರ್ಘಾವಧಿಯ ವೀಡಿಯೊಗಳಿಗೆ ಮಾತ್ರ ಅನ್ವಯಿಸುತ್ತವೆ, ಲೈವ್ ಸ್ಟ್ರೀಮ್‌ಗಳು ಅಥವಾ Shorts ಗೆ ಅಲ್ಲ. ಲೈವ್ ಸ್ಟ್ರೀಮ್‌ಗಳು ಮತ್ತು Shorts ಗೆ ಸಂಬಂಧಿಸಿದ ಮಾನಿಟೈಸೇಶನ್ ಕುರಿತು ಇನ್ನಷ್ಟು ತಿಳಿಯಿರಿ.

ಹಕ್ಕುಗಳ ಕ್ಲಿಯರೆನ್ಸ್ ಅಡ್ಜಸ್ಟ್‌ಮೆಂಟ್‌ಗಳು ಅನ್ವಯಿಸದಿದ್ದಾಗ ಏನಾಗುತ್ತದೆ?

ಈ ಪುಟದಲ್ಲಿ ವಿವರಿಸಲಾದ ಹಕ್ಕುಗಳ ಕ್ಲಿಯರೆನ್ಸ್ ಅಡ್ಜಸ್ಟ್‌ಮೆಂಟ್‌ಗಳು ಅನ್ವಯಿಸದಿದ್ದಾಗ, ಆದರೆ ರಚನೆಕಾರರು ಎಲ್ಲಾ ಅಗತ್ಯವಿರುವ ಹಕ್ಕುಗಳನ್ನು ಪಡೆದಿಲ್ಲದಿರಬಹುದು ಎಂಬುದನ್ನು ಒಂದು ಅಥವಾ ಹೆಚ್ಚಿನ ಥರ್ಡ್ ಪಾರ್ಟಿಗಳು YouTube ಗೆ ತಿಳಿಸುತ್ತಾರೆ, ನಂತರ ಪ್ರಭಾವಿತ ಕಂಟೆಂಟ್ ಅನ್ನು YouTube ನಿಂದ ತೆಗೆದುಹಾಕಬೇಕಾಗಬಹುದು ಮತ್ತು ರಚನೆಕಾರರು ಅದಕ್ಕೆ ಸಂಬಂಧಿಸಿದಂತೆ ಆದಾಯವನ್ನು ಸ್ವೀಕರಿಸಲು ಅರ್ಹರಲ್ಲದಿರಬಹುದು. 

ನಿರ್ದಿಷ್ಟವಾಗಿ ಹೇಳುವುದಾದರೆ, Content ID ಸಿಸ್ಟಂ ಮೂಲಕ ಮಾನಿಟೈಸೇಶನ್‌ಗಾಗಿ ಯಾವುದೇ ಕಂಟೆಂಟ್‌ನ ಒಂದು ಭಾಗವನ್ನು ಒಂದು ಅಥವಾ ಹೆಚ್ಚಿನ ಪಾರ್ಟಿಗಳು ಕ್ಲೇಮ್‌ ಮಾಡಿದರೆ, ರಚನೆಕಾರರಿಗೆ ಪಾವತಿಸಬೇಕಾದ ಆದಾಯಗಳನ್ನು ಕ್ಲೇಮ್‌ ಮಾಡುವ ಪಾರ್ಟಿಗೆ(ಗಳಿಗೆ) ಪಾವತಿಸಲಾಗುತ್ತದೆ. ಒಂದಕ್ಕಿಂತ ಹೆಚ್ಚು ಕ್ಲೇಮ್‌ ಮಾಡುವ ಪಾರ್ಟಿಗಳಿದ್ದಲ್ಲಿ, ಆ ಆದಾಯಗಳನ್ನು ಅವರ ನಡುವೆ ಅನುಪಾತದ ಆಧಾರದ ಮೇಲೆ ಹಂಚಲಾಗುತ್ತದೆ, ಆ ಅನುಪಾತದ ಪಾಲನ್ನು YouTube ತನ್ನ ಸಮಂಜಸವಾದ ವಿವೇಚನೆಯಿಂದ ನಿರ್ಧರಿಸುತ್ತದೆ. 

Content ID ಕ್ಲೇಮ್‌‌ಗಳ ಕುರಿತು ಇನ್ನಷ್ಟು ತಿಳಿಯಿರಿ.

ಹಕ್ಕುಗಳ ಕ್ಲಿಯರೆನ್ಸ್ ಅಡ್ಜಸ್ಟ್‌ಮೆಂಟ್‌ಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

Creator Music ಮೂಲಕ, ಆದಾಯ ಹಂಚಿಕೆಗೆ ಅರ್ಹವಾಗಿರುವ ಟ್ರ್ಯಾಕ್‌ಗಳನ್ನು ದಿರ್ಘಾವಧಿಯ ವೀಡಿಯೊದಲ್ಲಿ ಬಳಸಿದರೆ, ಈ ಕೆಳಗಿನ ಉದಾಹರಣೆಗಳಲ್ಲಿ ತೋರಿಸಿರುವಂತೆ ಸಂಗೀತ ಹಕ್ಕುಗಳನ್ನು ಕ್ಲಿಯರ್ ಮಾಡುವ ವೆಚ್ಚಗಳನ್ನು ಭರಿಸುವುದಕ್ಕಾಗಿ ಸ್ಟ್ಯಾಂಡರ್ಡ್ 55% ಆದಾಯ ಹಂಚಿಕೆಯನ್ನು ಸರಿಹೊಂದಿಸಲಾಗುತ್ತದೆ. ಇದು ಇವುಗಳನ್ನು ಅವಲಂಬಿಸಿರುತ್ತದೆ:

  • ಬಳಸಲಾಗಿರುವ ಟ್ರ್ಯಾಕ್‌ಗಳು: ರಚನೆಕಾರರು ತಮ್ಮ ವೀಡಿಯೊದಲ್ಲಿ ಎಷ್ಟು ಅರ್ಹ ಆದಾಯ ಹಂಚಿಕೆ ಟ್ರ್ಯಾಕ್‌ಗಳನ್ನು ಬಳಸುತ್ತಾರೆ (ಕೆಳಗಿನ ಉದಾಹರಣೆಗಳನ್ನು ನೋಡಿ).
  • ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳು: ಕಾರ್ಯನಿರ್ವಹಣೆಯ ಹಕ್ಕುಗಳು ಸೇರಿದಂತೆ, ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳನ್ನು ಭರಿಸುವುದಕ್ಕಾಗಿ ಕಡಿತ. ಈ ಕಡಿತವು ಗರಿಷ್ಠ 5% ವರೆಗೆ ಇರಬಹುದು ಮತ್ತು ಆದಾಯ ಹಂಚಿಕೆಗೆ ಅರ್ಹವಾಗಿರುವ Creator Music ಟ್ರ್ಯಾಕ್‌ಗಳಾದ್ಯಂತ ಈ ಹೆಚ್ಚುವರಿ ಸಂಗೀತ ಹಕ್ಕುಗಳ ಸಂಯೋಜಿತ ವೆಚ್ಚವನ್ನು ಪ್ರತಿಬಿಂಬಿಸುತ್ತದೆ.
ಆದಾಯ ಹಂಚಿಕೆ ಲೆಕ್ಕಾಚಾರಗಳ ಉದಾಹರಣೆಗಳು

ಉದಾಹರಣೆ: 1 ಆದಾಯ ಹಂಚಿಕೆ ಟ್ರ್ಯಾಕ್‌ನ ಬಳಕೆ

ಉದಾಹರಣೆ: ರಚನೆಕಾರರು ತಮ್ಮ ದೀರ್ಘಾವಧಿಯ ವೀಡಿಯೊದಲ್ಲಿ 1 ಆದಾಯ ಹಂಚಿಕೆ ಟ್ರ್ಯಾಕ್ ಅನ್ನು ಬಳಸುತ್ತಾರೆ ಮತ್ತು ಸ್ಟ್ಯಾಂಡರ್ಡ್ 55% ಆದಾಯ ಹಂಚಿಕೆಯಲ್ಲಿ ಅರ್ಧ ಭಾಗವನ್ನು (27.5%) ಗಳಿಸುತ್ತಾರೆ. ಉದಾಹರಣೆಗೆ, ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳಿಗಾಗಿ ಕಡಿತವು 2.5% ಆಗಬಹುದು.

ಈ ವೀಡಿಯೊಗಾಗಿ, ಕ್ರಿಯೇಟರ್ ಒಟ್ಟು ಆದಾಯದ 25% (27.5% - 2.5%) ಗಳಿಸುತ್ತಾರೆ.

 
ಉದಾಹರಣೆ: 1 ಆದಾಯ ಹಂಚಿಕೆ ಟ್ರ್ಯಾಕ್‌ನ ಬಳಕೆ
ಉದಾಹರಣೆ ಆದಾಯ ಹಂಚಿಕೆ: 55% ÷ 2 27.5%
ಉದಾಹರಣೆ ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳು - 2.5%
ಉದಾಹರಣೆ ಒಟ್ಟು ಆದಾಯ 25%

ಉದಾಹರಣೆ: 2 ಆದಾಯ ಹಂಚಿಕೆ ಟ್ರ್ಯಾಕ್‌ಗಳು ಮತ್ತು 1 ಪರವಾನಗಿ ಪಡೆದ ಟ್ರ್ಯಾಕ್‌ನ ಬಳಕೆ

ಉದಾಹರಣೆ: ಕ್ರಿಯೇಟರ್ ತಮ್ಮ ದೀರ್ಘಾವಧಿಯ ವೀಡಿಯೊದಲ್ಲಿ 2 ಆದಾಯ ಹಂಚಿಕೆ ಟ್ರ್ಯಾಕ್‌ಗಳು ಮತ್ತು 1 ಪರವಾನಗಿ ಪಡೆದ ಟ್ರ್ಯಾಕ್ ಅನ್ನು ಬಳಸುತ್ತಾರೆ ಮತ್ತು ಸ್ಟ್ಯಾಂಡರ್ಡ್ 55% ಆದಾಯ ಹಂಚಿಕೆಯ 1/3 ಭಾಗವನ್ನು (18.33%) ಗಳಿಸುತ್ತಾರೆ. ಉದಾಹರಣೆಗೆ, ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳಿಗಾಗಿ ಕಡಿತವು 2% ಆಗಬಹುದು.

ಈ ವೀಡಿಯೊಗಾಗಿ, ಕ್ರಿಯೇಟರ್ ಒಟ್ಟು ಆದಾಯದ 16.33% ಭಾಗವನ್ನು (18.33% - 2%) ಗಳಿಸುತ್ತಾರೆ.

 
ಉದಾಹರಣೆ: 2 ಆದಾಯ ಹಂಚಿಕೆ ಟ್ರ್ಯಾಕ್‌ಗಳು ಮತ್ತು 1 ಪರವಾನಗಿ ಪಡೆದ ಟ್ರ್ಯಾಕ್‌ನ ಬಳಕೆ
ಉದಾಹರಣೆ ಆದಾಯ ಹಂಚಿಕೆ: 55% ÷ 3 18.33%
ಉದಾಹರಣೆ ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳು - 2.5%
ಉದಾಹರಣೆ ಒಟ್ಟು ಆದಾಯ 15.83%

ಹಕ್ಕುಗಳ ಕ್ಲಿಯರೆನ್ಸ್ ಅಡ್ಜಸ್ಟ್‌ಮೆಂಟ್‌ಗಳ ಕುರಿತು ಸವಾಲು ಮಾಡಬಹುದೇ?

ಹಕ್ಕುಗಳ ಕ್ಲಿಯರೆನ್ಸ್ ಅಡ್ಜಸ್ಟ್‌ಮೆಂಟ್ ಕುರಿತು ವಿವಾದ ಸಲ್ಲಿಸಲು ರಚನೆಕಾರರು ಮಾನ್ಯವಾದ ಕಾರಣವನ್ನು ಹೊಂದಿದ್ದರೆ, ಉದಾಹರಣೆಗೆ ವಿವಾದಿತ ಕಂಟೆಂಟ್‌ಗೆ ಅಗತ್ಯವಿರುವ ಎಲ್ಲಾ ಹಕ್ಕುಗಳನ್ನು ಹೊಂದಿದ್ದರೆ, ಅವರು Content ID ಕ್ಲೇಮ್‌ ವಿರುದ್ಧ ವಿವಾದ ಸಲ್ಲಿಸಲು ಆಯ್ಕೆಮಾಡಬಹುದು.

ರಚನೆಕಾರರು Content ID ಕ್ಲೇಮ್‌ ವಿವಾದವಾಗುವ ಮೊದಲು Content ID ವಿವಾದಗಳ ಸಮಯದಲ್ಲಿ ಮಾನಿಟೈಸೇಶನ್‌ಗೆ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

Creator Music ಜೊತೆಗೆ ಆದಾಯದ ಹಂಚಿಕೆ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9297734843447424705
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false