YouTube ನಲ್ಲಿನ “ಕೆಳಗಿನ ಕಂಟೆಂಟ್ ಈ ಆ್ಯಪ್‌ನಲ್ಲಿ ಲಭ್ಯವಿಲ್ಲ” ಎಂಬ ದೋಷ ಸಂದೇಶವನ್ನು ಸರಿಪಡಿಸಿ

“ಕೆಳಗಿನ ಕಂಟೆಂಟ್ ಈ ಆ್ಯಪ್‌ನಲ್ಲಿ ಲಭ್ಯವಿಲ್ಲ” ಎಂಬ ದೋಷ ಸಂದೇಶವನ್ನು ನೀವು ಪಡೆದುಕೊಂಡರೆ, ನೀವು ಬಳಸುವ ಆ್ಯಪ್ YouTube ಕಂಟೆಂಟ್ ಅನ್ನು ಬೆಂಬಲಿಸುವುದಿಲ್ಲ. YouTube ನಲ್ಲಿ ಕಂಟೆಂಟ್ ಅನ್ನು ವೀಕ್ಷಿಸಲು, ಈ ಕೆಳಗಿನ ಹಂತಗಳನ್ನು ಪ್ರಯತ್ನಿಸಿ.

YouTube ಆ್ಯಪ್‌ಗೆ ಬದಲಿಸಿ

YouTube ಗೆ ಹೋಗಲು ನೀವು ಥರ್ಡ್ ಪಾರ್ಟಿ ಆ್ಯಪ್ ಅನ್ನು ಬಳಸಿದರೆ, ನೀವು YouTube ಆ್ಯಪ್‌ಗೆ ಬದಲಿಸಬೇಕಾಗಬಹುದು. YouTube ಆ್ಯಪ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ ಅಥವಾ ನಿಮ್ಮ ಬ್ರೌಸರ್‌ನಲ್ಲಿ www.youtube.com ಅನ್ನು ಆ್ಯಕ್ಸೆಸ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ. ಆ್ಯಡ್-ಫ್ರೀ ಅನುಭವಕ್ಕಾಗಿ, ನೀವು YouTube Premium ಗೆ ಸೈನ್ ಅಪ್ ಮಾಡಬಹುದು.

YouTube ಮತ್ತು ಥರ್ಡ್ ಪಾರ್ಟಿ ಆ್ಯಪ್‌ಗಳ ಕುರಿತು

ಥರ್ಡ್ ಪಾರ್ಟಿ ಆ್ಯಪ್‌ಗಳು ನಮ್ಮ API ಸೇವೆಗಳ ಸೇವಾ ನಿಯಮಗಳನ್ನು ಅನುಸರಿಸಿದಾಗ ಮಾತ್ರ ನಮ್ಮ API ಅನ್ನು ಬಳಸಲು ನಾವು ಅನುಮತಿಸುತ್ತೇವೆ. ನಮ್ಮ ನಿಯಮಗಳು ಥರ್ಡ್ ಪಾರ್ಟಿ ಆ್ಯಪ್‌ಗಳಿಗೆ ಆ್ಯಡ್‌ಗಳನ್ನು ಆಫ್ ಮಾಡಲು ಅನುಮತಿಸುವುದಿಲ್ಲ ಏಕೆಂದರೆ ಅದು ಕ್ರಿಯೇಟರ್‌ಗಳು ತಮ್ಮ ವೀಕ್ಷಕರಿಗಾಗಿ ರಿವಾರ್ಡ್ ನೀಡದಂತೆ ತಡೆಯುತ್ತದೆ. ನಮ್ಮ ನಿಯಮಗಳನ್ನು ಉಲ್ಲಂಘಿಸುವ ಆ್ಯಪ್ ಅನ್ನು ನಾವು ಪತ್ತೆಹಚ್ಚಿದರೆ, ನಮ್ಮ ಪ್ಲ್ಯಾಟ್‌ಫಾರ್ಮ್, ಕ್ರಿಯೇಟರ್‌ಗಳು ಮತ್ತು ವೀಕ್ಷಕರನ್ನು ರಕ್ಷಿಸಲು ನಾವು ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತೇವೆ.

YouTube ಆ್ಯಪ್ ಅನ್ನು ಅಪ್‌ಡೇಟ್ ಮಾಡಿ

ನೀವು YouTube ಆ್ಯಪ್ ಅನ್ನು ಬಳಸಿದರೆ, ಅದನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. YouTube ಆ್ಯಪ್ ಅನ್ನು ಅಪ್‌ಡೇಟ್ ಮಾಡುವುದು ಹೇಗೆ ಎಂದು ತಿಳಿಯಿರಿ.

ಗಮನಿಸಿ:

  • ನೀವು ದೋಷವನ್ನು ಪಡೆಯುವುದನ್ನು ಮುಂದುವರಿಸಿದರೆ, ನಿಮ್ಮ ಸಾಧನದಲ್ಲಿ Google Play Store ಅಪ್ ಟು ಡೇಟ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. Google Play Store ಅನ್ನು ಅಪ್‌ಡೇಟ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.
  • ಆ್ಯಪ್ ಅನ್ನು ಅಪ್‌ಡೇಟ್ ಮಾಡದೆಯೇ YouTube ಬಳಕೆಯನ್ನು ಮುಂದುವರಿಸಲು, ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ, m.youtube.com ಗೆ ಹೋಗಿ.

ಹಳೆಯ ಸಾಧನಗಳು

ನೀವು ಇನ್ನೂ ದೋಷ ಸಂದೇಶವನ್ನು ಪಡೆದರೆ, ನೀವು ಹಳೆಯ ಸಾಧನ ಅಥವಾ ಹಳೆಯ ಸಾಧನ ಕಾನ್ಫಿಗರೇಶನ್ ಅನ್ನು ಹೊಂದಿರಬಹುದು. ನಿಮ್ಮ ಸಾಧನವನ್ನು ಬದಲಾಯಿಸದೆಯೇ YouTube ಬಳಕೆಯನ್ನು ಮುಂದುವರಿಸಲು, ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ, m.youtube.com ಗೆ ಹೋಗಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
358973475435404093
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false