YouTube ಕುಟುಂಬ ಯೋಜನೆಯನ್ನು ನಿರ್ವಹಿಸಿ

ಕುಟುಂಬ ನಿರ್ವಾಹಕರಾಗಲು YouTube ಕುಟುಂಬ ಯೋಜನೆಯನ್ನು ಸೆಟ್ ಅಪ್ ಮಾಡಿ. ಕುಟುಂಬ ನಿರ್ವಾಹಕರಾಗಿ, ನಿಮ್ಮ YouTube Premium ಅಥವಾ YouTube Music Premium ಸದಸ್ಯತ್ವವನ್ನು ನೀವು ಹಂಚಿಕೊಳ್ಳಬಹುದು. ನಿಮ್ಮ ಕುಟುಂಬದ ಗರಿಷ್ಠ ಇತರ 5 ಸದಸ್ಯರೊಂದಿಗೆ ನಿಮ್ಮ ಸದಸ್ಯತ್ವವನ್ನು ನೀವು ಹಂಚಿಕೊಳ್ಳಬಹುದು. ನೀವು ಕುಟುಂಬದ ಸದಸ್ಯರಾಗಿದ್ದರೆ, YouTube ಕುಟುಂಬ ಯೋಜನೆಯನ್ನು ಹಂಚಿಕೊಳ್ಳಲು ನೀವು ಕುಟುಂಬ ಗುಂಪನ್ನು ಆಹ್ವಾನಿಸಬಹುದು. 

ಗಮನಿಸಿ: ನೀವು, ಅಸ್ತಿತ್ವದಲ್ಲಿರುವ Google ಕುಟುಂಬ ಗುಂಪಿನ ಸದಸ್ಯರಾಗಿದ್ದರೆ, ನೀವು YouTube ಕುಟುಂಬ ಯೋಜನೆಯನ್ನು ಖರೀದಿಸಲು ಸಾಧ್ಯವಿಲ್ಲ. ನಿಮ್ಮ ಕುಟುಂಬ ಗುಂಪಿನ ನಿರ್ವಾಹಕರು ಮಾತ್ರ ಈ ಖರೀದಿಯನ್ನು ಮಾಡಬಹುದು.

ನೀವು ಪ್ರಾರಂಭಿಸುವ ಮೊದಲು ತಿಳಿದುಕೊಳ್ಳಬೇಕಾದ ವಿಷಯಗಳು

  • YouTube ಕುಟುಂಬ ಯೋಜನೆಯನ್ನು ಹಂಚಿಕೊಳ್ಳುವ ಕುಟುಂಬ ಸದಸ್ಯರು, ಕುಟುಂಬ ನಿರ್ವಾಹಕರು ಇರುವ ಮನೆಯಲ್ಲೇ ವಾಸಿಸಬೇಕು. ಕುಟುಂಬ ಗುಂಪಿನ ಅವಶ್ಯಕತೆಗಳ ಕುರಿತು ಇನ್ನಷ್ಟು ತಿಳಿಯಿರಿ ಮತ್ತು ನಿಮ್ಮ ಕುಟುಂಬ ಯೋಜನೆಯನ್ನು ಸೆಟ್ ಅಪ್ ಮಾಡುವಾಗ ದೋಷಗಳು ಎದುರಾದರೆ ಏನು ಮಾಡಬೇಕು. 
  • ನೀವು ಪ್ರತಿ 12 ತಿಂಗಳಿಗೊಮ್ಮೆ ಮಾತ್ರ ಕುಟುಂಬ ಗುಂಪುಗಳನ್ನು ಬದಲಾಯಿಸಬಹುದು.
  • ಪ್ರತಿ ಕುಟುಂಬ ಸದಸ್ಯರ ಹೆಸರು, ಫೋಟೋ ಮತ್ತು ಇಮೇಲ್ ವಿಳಾಸವನ್ನು ಗುಂಪಿನೊಂದಿಗೆ ಹಂಚಿಕೊಳ್ಳಲಾಗುತ್ತದೆ.
  • ನಿಮ್ಮ YouTube TV ಕುಟುಂಬ ಯೋಜನೆಗೆ ಸಂಬಂಧಿಸಿದಂತೆ ನಿಮಗೆ ಸಹಾಯ ಬೇಕಾಗಿದ್ದರೆ, ನೀವು ಯಾವಾಗ ಬೇಕಾದರೂ  ಬೆಂಬಲವನ್ನು ಸಂಪರ್ಕಿಸಬಹುದು. 

YouTube ಮತ್ತು YouTube TV ಯಲ್ಲಿ ಕುಟುಂಬ ಗುಂಪುಗಳನ್ನು ಹೇಗೆ ರಚಿಸುವುದು

ಕುಟುಂಬ ನಿರ್ವಾಹಕರು: ಸೈನ್ ಅಪ್ ಮಾಡಿ ಮತ್ತು ಕುಟುಂಬ ಗುಂಪನ್ನು ರಚಿಸಿ

ಹೊಸ YouTube Premium ಅಥವಾ Music Premium ಸದಸ್ಯರು

ಪ್ರಾರಂಭಿಸಲು, 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿರುವ ಕುಟುಂಬ ನಿರ್ವಾಹಕರನ್ನು ಆರಿಸಿ. ಕುಟುಂಬ ಪ್ಲಾನ್ ಅನ್ನು ಖರೀದಿಸಬಲ್ಲ ಅಥವಾ ಸದಸ್ಯತ್ವದ ನಿರ್ಧಾರಗಳನ್ನು ಕೈಗೊಳ್ಳಬಲ್ಲ ಏಕೈಕ ವ್ಯಕ್ತಿಯೆಂದರೆ ಕುಟುಂಬ ನಿರ್ವಾಹಕರು. YouTube ಪಾವತಿಸಿದ ಸದಸ್ಯತ್ವಕ್ಕಾಗಿ ಸೈನ್ ಅಪ್ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ.

YouTube Premium ಅಥವಾ Music Premium ಸದಸ್ಯತ್ವಕ್ಕಾಗಿ ಸೈನ್ ಅಪ್ ಮಾಡಲು ಮತ್ತು ಕುಟುಂಬ ಗುಂಪನ್ನು ರಚಿಸಲು:

  1. YouTube Premium ಸದಸ್ಯತ್ವಕ್ಕೆ ಸೈನ್ ಅಪ್ ಮಾಡಲು ಮತ್ತು ಕುಟುಂಬ ಗುಂಪನ್ನು ರಚಿಸಲು, ವೆಬ್ ಬ್ರೌಸರ್‌ನಲ್ಲಿ https://www.youtube.com/premium/family ಗೆ ಹೋಗಿ. YouTube Music Premium ಸದಸ್ಯತ್ವಕ್ಕೆ ಸೈನ್ ಅಪ್ ಮಾಡಲು ಮತ್ತು ಕುಟುಂಬ ಗುಂಪನ್ನು ರಚಿಸಲು, ವೆಬ್ ಬ್ರೌಸರ್‌ನಲ್ಲಿ https://www.youtube.com/musicpremium/family ಗೆ ಹೋಗಿ.
  2. ಕುಟುಂಬ ಪ್ಲಾನ್ ಪಡೆಯಿರಿ ಎಂಬುದನ್ನು ಕ್ಲಿಕ್ ಮಾಡಿ. ನೀವು ಕುಟುಂಬ ಪ್ಲಾನ್ ಟ್ರಯಲ್‌ಗೆ ಅರ್ಹರಾಗಿದ್ದರೆ, ಟ್ರಯಲ್ ಅನ್ನು ಪ್ರಾರಂಭಿಸಲು ನೀವು ಒಂದು ಆಯ್ಕೆಯನ್ನು ನೋಡಬಹುದು.
  3. ನೀವು ಅಸ್ತಿತ್ವದಲ್ಲಿರುವ Google ಕುಟುಂಬ ಗುಂಪಿನ ಕುಟುಂಬ ನಿರ್ವಾಹಕರಾಗಿದ್ದರೆ, ನಿಮ್ಮ ಕುಟುಂಬ ಗುಂಪನ್ನು ಖಚಿತಪಡಿಸುವ ಒಂದು ಡೈಲಾಗ್ ಅನ್ನು ನೋಡುವಿರಿ. ಖರೀದಿಯನ್ನು ಮುಂದುವರಿಸಲು ಮತ್ತು ಅಸ್ತಿತ್ವದಲ್ಲಿರುವ ನಿಮ್ಮ ಕುಟುಂಬ ಗುಂಪಿನ ಸದಸ್ಯರೊಂದಿಗೆ ನಿಮ್ಮ ಕುಟುಂಬ ಪ್ಲಾನ್ ಅನ್ನು ಹಂಚಿಕೊಳ್ಳಲು ಮುಂದುವರಿಸಿ ಎಂಬುದನ್ನು ಆಯ್ಕೆಮಾಡಿ. ಹಂತ 3 ನಿಮಗೆ ಅನ್ವಯಿಸದಿದ್ದರೆ, ಹಂತ 4 ಕ್ಕೆ ಸ್ಕಿಪ್ ಮಾಡಿ.
  4. ನೀವು ಈಗಾಗಲೇ Google ಕುಟುಂಬ ಗುಂಪನ್ನು ಹೊಂದಿರದಿದ್ದರೆ, ಮೊದಲಿಗೆ ನಿಮ್ಮ ಸಬ್‌ಸ್ಕ್ರಿಪ್ಶನ್ ಅನ್ನು ಖರೀದಿಸಲು ಹಂತಗಳನ್ನು ಅನುಸರಿಸಿ. ಆನಂತರ, ಕುಟುಂಬ ಗುಂಪನ್ನು ರಚಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮಗೆ ಮಾರ್ಗದರ್ಶನ ನೀಡಲಾಗುವುದು.
ಗಮನಿಸಿ: ಕುಟುಂಬ ಪ್ಲಾನ್‌ಗೆ ಸೈನ್ ಅಪ್ ಮಾಡಲು ನಿಮಗೆ ಸಮಸ್ಯೆಯಿದ್ದರೆ, ನೀವು ಅನೇಕ Google Play ಪಾವತಿಗಳ ಪ್ರೊಫೈಲ್‌ಗಳನ್ನು ಹೊಂದಿರುವುದೇ ಅದಕ್ಕೆ ಕಾರಣವಾಗಿರಬಹುದು. ಹಾಗಿದ್ದಲ್ಲಿ, ನಿಮ್ಮ ದೇಶ/ಪ್ರದೇಶದ ಪ್ರೊಫೈಲ್ ಅನ್ನು ಅಪ್‌ಡೇಟ್ ಮಾಡುವುದು ಅಥವಾ ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಅಸ್ತಿತ್ವದಲ್ಲಿರುವ YouTube Premium ಅಥವಾ Music Premium ಸದಸ್ಯರು

ನಿಮ್ಮ ಪ್ರತ್ಯೇಕ YouTube Premium ಅಥವಾ Music Premium ಸದಸ್ಯತ್ವವನ್ನು ಕುಟುಂಬ ಪ್ಲಾನ್‌ಗೆ ಅಪ್‌ಡೇಟ್ ಮಾಡಲು:
  1. ವೆಬ್ ಬ್ರೌಸರ್‌ನಲ್ಲಿ youtube.com/paid_memberships ಗೆ ಹೋಗಿ.
  2. ಕುಟುಂಬ ಪ್ಲಾನ್ ಪಡೆಯಿರಿ ಎಂಬುದನ್ನು ಕ್ಲಿಕ್ ಮಾಡಿ.
  3. ಕುಟುಂಬ ಪ್ಲಾನ್ ಪಡೆಯಿರಿ ಎಂಬುದನ್ನು ಮತ್ತೊಮ್ಮೆ ಕ್ಲಿಕ್ ಮಾಡಿ.
  4. ಅಪ್‌ಗ್ರೇಡ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  5. ನಿಮ್ಮ Google ಕುಟುಂಬ ಗುಂಪನ್ನು ಸೆಟಪ್ ಮಾಡಿ.
    • ನೀವು, ಅಸ್ತಿತ್ವದಲ್ಲಿರುವ Google ಕುಟುಂಬ ಗುಂಪಿನ ಕುಟುಂಬ ನಿರ್ವಾಹಕರಾಗಿದ್ದೀರಾ? ಮುಂದುವರಿಸಲು ಮತ್ತು, ಅಸ್ತಿತ್ವದಲ್ಲಿರುವ ನಿಮ್ಮ ಕುಟುಂಬ ಗುಂಪಿನ ಸದಸ್ಯರೊಂದಿಗೆ ನಿಮ್ಮ ಕುಟುಂಬ ಪ್ಲಾನ್ ಅನ್ನು ಹಂಚಿಕೊಳ್ಳಲು ಮುಂದುವರಿಸಿ ಎಂಬುದನ್ನು ಆಯ್ಕೆಮಾಡಿ.
    • ನೀವು Google ಕುಟುಂಬ ಗುಂಪನ್ನು ರಚಿಸುತ್ತಿದ್ದೀರಾ? ಕುಟುಂಬ ಗುಂಪನ್ನು ಸೆಟಪ್ ಮಾಡಲು:
      • ನಿಮ್ಮ ಕುಟುಂಬ ಗುಂಪನ್ನು ಸೇರಿಕೊಳ್ಳುವುದಕ್ಕಾಗಿ ಕುಟುಂಬದ ಗರಿಷ್ಠ ಸದಸ್ಯರನ್ನು ಆಹ್ವಾನಿಸಿ ಮತ್ತು ಅವರಿಗೆ ಇಮೇಲ್ ಅಥವಾ ಪಠ್ಯದ ಮೂಲಕ ಆಹ್ವಾನಗಳನ್ನು ಕಳುಹಿಸಿ.
      • ಕಳುಹಿಸಿ ಎಂಬುದನ್ನು ಆಯ್ಕೆಮಾಡಿ.
      • ಕುಟುಂಬದ ಸದಸ್ಯರು ಆಹ್ವಾನವನ್ನು ಪಡೆಯುತ್ತಾರೆ ಮತ್ತು ಪ್ರಾರಂಭಿಸಿ ಎಂಬುದನ್ನು ಆಯ್ಕೆ ಮಾಡಬಹುದು ಮತ್ತು ತಮ್ಮ ಖಾತೆಯನ್ನು ಖಚಿತಪಡಿಸಬಹುದು.
      • ನಿಮ್ಮ ಆಹ್ವಾನಕ್ಕೆ ಸಮ್ಮತಿಸುವ ಕುಟುಂಬದ ಸದಸ್ಯರು ಕುಟುಂಬ ಗುಂಪನ್ನು ಸೇರಿಕೊಳ್ಳುತ್ತಾರೆ ಮತ್ತು ನಿಮ್ಮ ಕುಟುಂಬ ಪ್ಲಾನ್‌ಗೆ ಆ್ಯಕ್ಸೆಸ್ ಹೊಂದಿರುತ್ತಾರೆ.
    • ನೀವು, ಅಸ್ತಿತ್ವದಲ್ಲಿರುವ Google ಕುಟುಂಬ ಗುಂಪಿನ ಕುಟುಂಬ ಸದಸ್ಯರಾಗಿದ್ದೀರಾ? ನೀವು YouTube ಕುಟುಂಬ ಪ್ಲಾನ್ ಅನ್ನು ಖರೀದಿಸಲು ಸಾಧ್ಯವಿಲ್ಲ, ಆದರೆ ಖರೀದಿಯನ್ನು ಮಾಡಲು ನಿಮ್ಮ ಕುಟುಂಬ ನಿರ್ವಾಹಕರ ಬಳಿ ಕೇಳಿಕೊಳ್ಳಬಹುದು.

ಟಿಪ್ಪಣಿಗಳು:

  • ವಿಶೇಷ ಆಫರ್‌ಗಳನ್ನು YouTube ಕುಟುಂಬ ಪ್ಲಾನ್‌ಗಳಿಗೆ ವರ್ಗಾಯಿಸುವಂತಿಲ್ಲ. 1 ತಿಂಗಳಿಗಿಂತ ಹೆಚ್ಚು ದೀರ್ಘವಾದ ಟ್ರಯಲ್‌ನ ನಡುವೆ ನೀವು ಕುಟುಂಬ ಪ್ಲಾನ್ ಅನ್ನು ಅಪ್‌ಗ್ರೇಡ್ ಮಾಡಿದರೆ, ನಿಮ್ಮ ಟ್ರಯಲ್ ಅನ್ನು 1 ತಿಂಗಳಿಗೆ ಸೀಮಿತಗೊಳಿಸಲಾಗುವುದು. ನೀವು ಆನಂತರ ರದ್ದುಗೊಳಿಸಿದರೆ, ನಿಮ್ಮ ಟ್ರಯಲ್‌ಗೆ ಮರಳಿ ಹೋಗಲು ಸಾಧ್ಯವಾಗುವುದಿಲ್ಲ. ನಿಮ್ಮ YouTube ಪಾವತಿಸಿದ ಸದಸ್ಯತ್ವವನ್ನು ಅಪ್‌ಡೇಟ್ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ.
  • ಕುಟುಂಬ ಪ್ಲಾನ್‌ಗೆ ಸೈನ್ ಅಪ್ ಮಾಡಲು ನಿಮಗೆ ಸಮಸ್ಯೆಯಿದ್ದರೆ, ನೀವು ಅನೇಕ Google Play ಪಾವತಿಗಳ ಪ್ರೊಫೈಲ್‌ಗಳನ್ನು ಹೊಂದಿರುವುದೇ ಅದಕ್ಕೆ ಕಾರಣವಾಗಿರಬಹುದು. ಹಾಗಿದ್ದಲ್ಲಿ, ನಿಮ್ಮ ದೇಶ/ಪ್ರದೇಶದ ಪ್ರೊಫೈಲ್ ಅನ್ನು ಅಪ್‌ಡೇಟ್ ಮಾಡುವುದು ಅಥವಾ ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
  • ನೀವು ವಾರ್ಷಿಕ ಪ್ಲಾನ್ ಅನ್ನು ಹೊಂದಿದ್ದರೆ, ಕುಟುಂಬ ಪ್ಲಾನ್‌ಗೆ ಅಪ್‌ಗ್ರೇಡ್ ಮಾಡುವ ಮೊದಲು ನಿಮ್ಮ ಪ್ಲಾನ್ ಅವಧಿ ಮುಗಿಯುವವರೆಗೆ ನೀವು ಕಾಯಬೇಕಾಗುತ್ತದೆ.

ಕುಟುಂಬ ನಿರ್ವಾಹಕರು: ಕುಟುಂಬ ಸದಸ್ಯರನ್ನು ಸೇರಿಸಿ ಅಥವಾ ತೆಗೆದುಹಾಕಿ

ಕುಟುಂಬ ಸದಸ್ಯರನ್ನು ಸೇರಿಸಿ

ನೀವು ಕುಟುಂಬ ನಿರ್ವಾಹಕರಾಗಿದ್ದರೆ, ನಿಮ್ಮ ಕುಟುಂಬ ಗುಂಪಿಗೆ ನೀವು ಗರಿಷ್ಠ 5 ಕುಟುಂಬ ಸದಸ್ಯರನ್ನು ಆಹ್ವಾನಿಸಬಹುದು.
ಕುಟುಂಬದ ಸದಸ್ಯರನ್ನು ಸೇರಿಸಿ:
  1. ನಿಮ್ಮ YouTube Premium ಅಥವಾ Music Premium ಸದಸ್ಯತ್ವಕ್ಕೆ ಸಂಬಂಧಿಸಿದ Google ಖಾತೆಯನ್ನು ಬಳಸಿ ಸೈನ್ ಇನ್ ಮಾಡಿ.
  2. ವೆಬ್ ಬ್ರೌಸರ್‌ನಲ್ಲಿ youtube.com/paid_memberships ಗೆ ಹೋಗಿ.
  3. ಸದಸ್ಯತ್ವವನ್ನು ನಿರ್ವಹಿಸಿ ಎಂಬುದನ್ನು ಆಯ್ಕೆಮಾಡಿ.
  4. ಫ್ಯಾಮಿಲಿ ಶೇರಿಂಗ್ ಸೆಟ್ಟಿಂಗ್‌ಗಳ ಪಕ್ಕದಲ್ಲಿರುವ ಎಡಿಟ್ ಅನ್ನು ಟ್ಯಾಪ್ ಮಾಡಿ.
  5. ಕುಟುಂಬದ ಸದಸ್ಯರನ್ನು ಆಹ್ವಾನಿಸಿ ಎಂಬುದನ್ನು ಆಯ್ಕೆಮಾಡಿ.
  6. ನೀವು ಆಹ್ವಾನಿಸಲು ಬಯಸುವ ವ್ಯಕ್ತಿಯ ಇಮೇಲ್ ವಿಳಾಸ ಅಥವಾ ಫೋನ್ ಸಂಖ್ಯೆಯನ್ನು ನಮೂದಿಸಿ.
  7. ಕಳುಹಿಸಿ ಎಂಬುದನ್ನು ಆಯ್ಕೆಮಾಡಿ. ಯಾರಾದರೂ ನಿಮ್ಮ ಕುಟುಂಬವನ್ನು ಸೇರಿಕೊಂಡಾಗ ನೀವು ಇಮೇಲ್ ನೋಟಿಫಿಕೇಶನ್‌ ಅನ್ನು ಪಡೆಯುವಿರಿ.

ಕುಟುಂಬದ ಸದಸ್ಯರನ್ನು ತೆಗೆದುಹಾಕಿ

ನೀವು ಕುಟುಂಬ ನಿರ್ವಾಹಕರಾಗಿದ್ದರೆ, ನಿಮ್ಮ ಕುಟುಂಬ ಗುಂಪಿನಿಂದ ನೀವು ಯಾವಾಗ ಬೇಕಾದರೂ ಜನರನ್ನು ತೆಗೆದುಹಾಕಬಹುದು.
ಕುಟುಂಬ ಸದಸ್ಯರನ್ನು ತೆಗೆದುಹಾಕಿ:
  1. ನಿಮ್ಮ YouTube Premium ಅಥವಾ Music Premium ಸದಸ್ಯತ್ವಕ್ಕೆ ಸಂಬಂಧಿಸಿದ Google ಖಾತೆಯನ್ನು ಬಳಸಿ ಸೈನ್ ಇನ್ ಮಾಡಿ.
  2. ವೆಬ್ ಬ್ರೌಸರ್‌ನಲ್ಲಿ youtube.com/paid_memberships ಗೆ ಹೋಗಿ.
  3. ಸದಸ್ಯತ್ವವನ್ನು ನಿರ್ವಹಿಸಿ ಎಂಬುದನ್ನು ಆಯ್ಕೆಮಾಡಿ.
  4. ಫ್ಯಾಮಿಲಿ ಶೇರಿಂಗ್ ಸೆಟ್ಟಿಂಗ್‌ಗಳ ಪಕ್ಕದಲ್ಲಿರುವ ಎಡಿಟ್ ಅನ್ನು ಟ್ಯಾಪ್ ಮಾಡಿ.
  5. ನೀವು ತೆಗೆದುಹಾಕಲು ಬಯಸುವ ವ್ಯಕ್ತಿಯ ಹೆಸರನ್ನು ಆಯ್ಕೆಮಾಡಿ.
  6. ಸದಸ್ಯರನ್ನು ತೆಗೆದುಹಾಕಿ ಎಂಬುದನ್ನು ಕ್ಲಿಕ್ ಮಾಡಿ.

ತಿಳಿದುಕೊಳ್ಳಬೇಕಾದ ವಿಷಯಗಳು:

  • ನೀವು ತೆಗೆದುಹಾಕಿದ ಕುಟುಂಬ ಸದಸ್ಯರು ನಿಮ್ಮ YouTube ಕುಟುಂಬ ಪ್ಲಾನ್‌ಗೆ ಆ್ಯಕ್ಸೆಸ್ ಕಳೆದುಕೊಳ್ಳುತ್ತಾರೆ, ಆದರೆ ತಮ್ಮ Google ಖಾತೆಯನ್ನು ಉಳಿಸಿಕೊಳ್ಳುತ್ತಾರೆ.
  • ತಮ್ಮನ್ನು ತೆಗೆದುಹಾಕಲಾಗಿದೆ ಎಂದು ತಿಳಿಸುವ ಇಮೇಲ್ ನೋಟಿಫಿಕೇಶನ್‌ ಅನ್ನು ಅವರು ಪಡೆಯುತ್ತಾರೆ. ಕುಟುಂಬ ಗುಂಪಿನ ಇತರ ಸದಸ್ಯರಿಗೂ ಸಹ ಸೂಚನೆ ನೀಡಲಾಗುತ್ತದೆ.
  • ನಿಮ್ಮ ಕುಟುಂಬ ಗುಂಪು ಹಂಚಿಕೊಳ್ಳುವ ಯಾವುದೇ ಸೇವೆಗಳನ್ನು ಆ್ಯಕ್ಸೆಸ್ ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ.
  • ನಿಮ್ಮ ಕುಟುಂಬವು Google Play Store ಅನ್ನು ಬಳಸುತ್ತಿದ್ದರೆ: ತೆಗೆದುಹಾಕಿದ ಕುಟುಂಬ ಸದಸ್ಯರು ಮಾಡಿದ, ಬಾಕಿಯಿರುವ ಯಾವುದೇ ಖರೀದಿಗಳ ಶುಲ್ಕವನ್ನು ನಿಮಗೆ ವಿಧಿಸಲಾಗುತ್ತದೆ. ಅನಪೇಕ್ಷಿತ ಅಥವಾ ಆಕಸ್ಮಿಕ ಖರೀದಿಗಳಿಗಾಗಿ ನೀವು ಮರುಪಾವತಿಯನ್ನು ವಿನಂತಿಸಬಹುದು.
  • ನಿಮ್ಮ ಕುಟುಂಬವು Google Play Store ಅನ್ನು ಬಳಸುತ್ತಿದ್ದರೆ: ತೆಗೆದುಹಾಕಲಾದ ಕುಟುಂಬ ಸದಸ್ಯರು, ನಿಮ್ಮ Google Play ಕುಟುಂಬದ ಲೈಬ್ರರಿಯಲ್ಲಿ ಇತರ ಕುಟುಂಬ ಸದಸ್ಯರು ಸೇರಿಸಿದ, ಹಂಚಿಕೊಂಡ Google ಆ್ಯಪ್‌ಗಳು ಹಾಗೂ ಸೇವೆಗಳಿಗೆ ಆ್ಯಕ್ಸೆಸ್ ಕಳೆದುಕೊಳ್ಳುತ್ತಾರೆ . ಅವರು ಕುಟುಂಬದ ಲೈಬ್ರರಿಯಲ್ಲಿ ಸೇರಿಸಿದ ಯಾವುದೇ ಕಂಟೆಂಟ್ ಅನ್ನು ಸಹ ತೆಗೆದುಹಾಕಲಾಗುತ್ತದೆ ಮತ್ತು ಕುಟುಂಬದ ಎಲ್ಲಾ ಸದಸ್ಯರು ಆ ಕಂಟೆಂಟ್‌ಗೆ ಆ್ಯಕ್ಸೆಸ್ ಕಳೆದುಕೊಳ್ಳುತ್ತಾರೆ.

ಕುಟುಂಬ ನಿರ್ವಾಹಕರು: ಕುಟುಂಬ ನಿರ್ವಾಹಕರ ಇತರ ಕಾರ್ಯಗಳು

ನಿಮ್ಮ ಪಾವತಿ ವಿಧಾನವನ್ನು ಬದಲಾಯಿಸಿ

ಪಾವತಿ ವಿಧಾನವೂ ಸೇರಿದಂತೆ ನಿಮ್ಮ YouTube Premium ಅಥವಾ Premium Music ಸದಸ್ಯತ್ವವನ್ನು ಅಪ್‌ಡೇಟ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.

ನಿಮ್ಮ ಪಾವತಿಸಿದ ಸದಸ್ಯತ್ವವನ್ನು ರದ್ದುಗೊಳಿಸಿ

ನೀವು ಯಾವಾಗ ಬೇಕಾದರೂ ನಿಮ್ಮ YouTube ಪಾವತಿಸಿದ ಸದಸ್ಯತ್ವವನ್ನು ರದ್ದುಗೊಳಿಸಬಹುದು. ನೀವು ರದ್ದುಗೊಳಿಸಿದರೂ, ನಿಮ್ಮ ಮಾಸಿಕ ಬಿಲ್ಲಿಂಗ್ ಸೈಕಲ್‌ನ ಅಂತ್ಯದವರೆಗೆ ನಿಮ್ಮ ಪಾವತಿಸಿದ ಸದಸ್ಯತ್ವಕ್ಕೆ ಆ್ಯಕ್ಸೆಸ್ ಹೊಂದುವಿರಿ. ಆನಂತರ, ಎಲ್ಲಾ ಕುಟುಂಬ ಸದಸ್ಯರು ಪಾವತಿಸಿದ ಸದಸ್ಯತ್ವಕ್ಕೆ ಆ್ಯಕ್ಸೆಸ್ ಕಳೆದುಕೊಳ್ಳುತ್ತಾರೆ, ಆದರೆ ತಮ್ಮ Google ಖಾತೆಗಳನ್ನು ಉಳಿಸಿಕೊಳ್ಳುತ್ತಾರೆ.

ಕುಟುಂಬದ ಸದಸ್ಯರು: ಕುಟುಂಬ ಗುಂಪನ್ನು ಸೇರಿಕೊಳ್ಳಿ ಅಥವಾ ತೊರೆಯಿರಿ

ಕುಟುಂಬ ಗುಂಪನ್ನು ಸೇರಿಕೊಳ್ಳಿ

ಪಾವತಿಸಿದ ಸದಸ್ಯತ್ವವನ್ನು ಹೊಂದಿರುವ ಕುಟುಂಬ ನಿರ್ವಾಹಕರು, ಕುಟುಂಬ ಗುಂಪನ್ನು ಸೇರಿಕೊಳ್ಳಲು ನಿಮ್ಮನ್ನು ಆಹ್ವಾನಿಸಿದ್ದರೆ, ನೀವು ಇಮೇಲ್ ಅಥವಾ ಪಠ್ಯ ಆಹ್ವಾನವನ್ನು ಪಡೆಯುವಿರಿ. ಕುಟುಂಬ ಗುಂಪನ್ನು ಸೇರಿಕೊಳ್ಳಲು, ಆಹ್ವಾನದಲ್ಲಿರುವ ಸೂಚನೆಗಳನ್ನು ಅನುಸರಿಸಿ.
ಕುಟುಂಬ ಗುಂಪನ್ನು ಸೇರಿಕೊಳ್ಳುವ ಕುರಿತು ಇನ್ನಷ್ಟು ತಿಳಿಯಿರಿ.

ಕುಟುಂಬ ಗುಂಪನ್ನು ತೊರೆಯಿರಿ ಅಥವಾ ಪ್ರತ್ಯೇಕ YouTube ಪಾವತಿಸಿದ ಸದಸ್ಯತ್ವವನ್ನು ಪಡೆಯಿರಿ

ಕುಟುಂಬ ಗುಂಪುಗಳನ್ನು ತೊರೆಯುವುದು ಅಥವಾ ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮದೇ ಆದ YouTube ಪಾವತಿಸಿದ ಸದಸ್ಯತ್ವವನ್ನು ಪಡೆಯಲು:
  1. ನಿಮ್ಮ ಕುಟುಂಬ ಗುಂಪನ್ನು ತೊರೆಯಲು ಸೂಚನೆಗಳನ್ನು ಅನುಸರಿಸಿ.
  2. ನಿಮ್ಮದೇ YouTube ಪಾವತಿಸಿದ ಸದಸ್ಯತ್ವಕ್ಕೆ ಸೈನ್ ಅಪ್ ಮಾಡಿ.
ಗಮನಿಸಿ: ನಿಮ್ಮ ಕುಟುಂಬ ಗುಂಪನ್ನು ನೀವು ತೊರೆದರೆ, ನೀವು ಬೇರೊಂದು ಕುಟುಂಬ ಗುಂಪನ್ನು ಸೇರಿಕೊಳ್ಳುವ ಆಹ್ವಾನಕ್ಕೆ ಸಮ್ಮತಿಸಬಹುದು ಅಥವಾ ನಿಮ್ಮದೇ ಆದ ಗುಂಪನ್ನು ರಚಿಸಿಕೊಳ್ಳಬಹುದು. ಪ್ರತಿ 12 ತಿಂಗಳಿಗೊಮ್ಮೆ ಮಾತ್ರ ನೀವು ಒಂದು ಕುಟುಂಬದಿಂದ ಮತ್ತೊಂದಕ್ಕೆ ಬದಲಾಯಿಸಬಹುದು. ನೀವು ಕುಟುಂಬ ಗುಂಪನ್ನು ತೊರೆದರೆ, 12 ತಿಂಗಳವರೆಗೆ ನೀವು ಬೇರೊಂದು ಕುಟುಂಬ ಗುಂಪನ್ನು ಸೇರಿಕೊಳ್ಳಲು ಸಾಧ್ಯವಿಲ್ಲ.

ಕುಟುಂಬ ಪ್ಲಾನ್‌ಗಳಿಗಾಗಿ ಸ್ಥಳದ ಅವಶ್ಯಕತೆಗಳು

ಕುಟುಂಬ ಪ್ಲಾನ್‌ಗಾಗಿ ಸ್ಥಳದ ಅವಶ್ಯಕತೆಗಳು

YouTube ಕುಟುಂಬ ಸದಸ್ಯತ್ವವನ್ನು ಹಂಚಿಕೊಳ್ಳಲು ಅರ್ಹರಾಗುವುದಕ್ಕಾಗಿ, ಪ್ರತಿ ಕುಟುಂಬ ಸದಸ್ಯರೂ ಸಹ ಕುಟುಂಬ ನಿರ್ವಾಹಕರು ವಾಸಿಸುವ ಅದೇ ವಿಳಾಸದಲ್ಲಿ ವಾಸಿಸುತ್ತಿರಬೇಕು. ಪ್ರತಿ 30 ದಿನಗಳಿಗೊಮ್ಮೆ, ಇಲೆಕ್ಟ್ರಾನಿಕ್ ಚೆಕ್ ಇನ್ ಮೂಲಕ ಈ ಅವಶ್ಯಕತೆಯನ್ನು ಖಚಿತಪಡಿಸಿಕೊಳ್ಳಲಾಗುವುದು.

ನಿಮ್ಮ ಕುಟುಂಬ ಪ್ಲಾನ್ ಅನ್ನು ಸೆಟ್ ಮಾಡುವಾಗ ಸಮಸ್ಯೆಗಳು ಎದುರಾಗುತ್ತಿವೆಯೇ? ನೀವು ಈ ರೀತಿಯ ದೋಷ ಸಂದೇಶವನ್ನು ಎದುರಿಸುತ್ತಿದ್ದರೆ:

  • "ಕುಟುಂಬಕ್ಕೆ ಬೆಂಬಲವಿಲ್ಲ"

ಅಥವಾ

  • "ದೇಶಕ್ಕೆ ಬೆಂಬಲವಿಲ್ಲ"

ನಿಮ್ಮ Google Pay ಖಾತೆಯಲ್ಲಿ ಪಟ್ಟಿ ಮಾಡಲಾದ ದೇಶ/ಪ್ರದೇಶವು ನಿಮ್ಮ ಪ್ರಸ್ತುತ ಸ್ಥಳಕ್ಕೆ ಹೊಂದಿಕೆಯಾಗದಿರಬಹುದು.

ನಿಮ್ಮ ಪ್ರಸ್ತುತ ಸ್ಥಳಕ್ಕೆ ಹೊಂದಿಕೆಯಾಗುವ ಹಾಗೆನಿಮ್ಮ Google Pay ಪ್ರೊಫೈಲ್ ಅನ್ನು ಅಪ್‌ಡೇಟ್ ಮಾಡಿ ಮತ್ತು ನಿಮ್ಮ ಕುಟುಂಬ ಪ್ಲಾನ್ ಅನ್ನು ಸೆಟ್ ಅಪ್ ಮಾಡುವುದನ್ನು ಮುಂದುವರಿಸಿ.

ಕುಟುಂಬ ಸದಸ್ಯರ ದೇಶ/ಪ್ರದೇಶ ಸ್ಥಳವು ನಿಮ್ಮ ಸ್ಥಳಕ್ಕೆ ಹೊಂದಾಣಿಕೆಯಾಗದಿದ್ದರೆ, ಅವರು ಕುಟುಂಬ ಗುಂಪಿಗೆ ಸೇರಿಕೊಳ್ಳುವಂತಿಲ್ಲ.

ನಿಮ್ಮ YouTube ಕುಟುಂಬ ಪ್ಲಾನ್‌ಗೆ ಸಂಬಂಧಿಸಿದಂತೆ ನಿಮಗೆ ಸಹಾಯದ ಅಗತ್ಯವಿದ್ದರೆ, ಯಾವಾಗ ಬೇಕಾದರೂ ಬೆಂಬಲವನ್ನು ಸಂಪರ್ಕಿಸಿ.

ನಿಮ್ಮ YouTube ಕುಟುಂಬ ಯೋಜನೆಗೆ ಸಂಬಂಧಿಸಿದಂತೆ ನಿಮಗೆ ಸಹಾಯ ಬೇಕಾಗಿದ್ದರೆ, ಯಾವಾಗ ಬೇಕಾದರೂ ಬೆಂಬಲವನ್ನು ಸಂಪರ್ಕಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4429380392207774110
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false