YouTube Studio ದಲ್ಲಿ ಸಬ್‌ಟೈಟಲ್ ಎಡಿಟರ್ ಆ್ಯಕ್ಸೆಸ್ ಅನ್ನು ಸೇರಿಸಿ ಅಥವಾ ಪಡೆಯಿರಿ

ಸಬ್‌ಟೈಟಲ್ ಎಡಿಟರ್ ಎಂಬುದು YouTube Studio ದಲ್ಲಿನ ಹೊಸ ಚಾನಲ್ ಅನುಮತಿಯಾಗಿದ್ದು, ರಚನೆಕಾರರು ತಮ್ಮ ಚಾನಲ್‌ನಲ್ಲಿ ಸಬ್‌ಟೈಟಲ್ ರಚನೆಗಾಗಿ ಇತರರನ್ನು ನಿಯೋಜಿಸುವುದನ್ನು ಇದು ಸಾಧ್ಯವಾಗಿಸುತ್ತದೆ. ನಿಮ್ಮ YouTube ಚಾನಲ್‌ಗೆ ಆ್ಯಕ್ಸೆಸ್ ಅನ್ನು ಹೇಗೆ ಸೇರಿಸುವುದು ಅಥವಾ ತೆಗೆದುಹಾಕುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ನೀವು ಬ್ರ್ಯಾಂಡ್ ಖಾತೆಯನ್ನು ಬಳಸುತ್ತಿದ್ದರೆ ಸಬ್‌ಟೈಟಲ್ ಎಡಿಟರ್ ಪಾತ್ರ ಲಭ್ಯವಿರುವುದಿಲ್ಲ. ಬ್ರ್ಯಾಂಡ್ ಖಾತೆಯಿಂದ ಚಾನಲ್ ಅನುಮತಿಗಳಿಗೆ ಬದಲಾಗುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
ಚಾನಲ್ ಅನುಮತಿಗಳನ್ನು ಬಳಸಿಕೊಂಡು ಸಬ್‌ಟೈಟಲ್ ಎಡಿಟರ್ ಪಾತ್ರ

ಚಾನಲ್ ಮಾಲೀಕರು ಅಥವಾ ನಿರ್ವಾಹಕರಾಗಿ ಸಬ್‌ಟೈಟಲ್ ಎಡಿಟರ್ ಪಾತ್ರಕ್ಕೆ ಆ್ಯಕ್ಸೆಸ್ ಅನ್ನು ನೀಡಿ

ಪ್ರಮುಖ ಸೂಚನೆ: ನೀವು ನಂಬುವ ಬಳಕೆದಾರರಿಗೆ ಮಾತ್ರ ಆ್ಯಕ್ಸೆಸ್ ಅನ್ನು ನೀಡಿ. 
  1. ಕಂಪ್ಯೂಟರ್‌ನಲ್ಲಿ YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಸೆಟ್ಟಿಂಗ್‌ಗಳು ಎಂಬುದನ್ನು ಕ್ಲಿಕ್ ಮಾಡಿ.
  3. ಅನುಮತಿಗಳು ಎಂಬುದನ್ನು ಕ್ಲಿಕ್ ಮಾಡಿ.
  4. ಆಹ್ವಾನಿಸಿ ಎಂಬುದನ್ನು ಕ್ಲಿಕ್ ಮಾಡಿ ಮತ್ತು ನೀವು ಆಹ್ವಾನಿಸಲು ಬಯಸುವ ಚಾನಲ್‌ನ ಇಮೇಲ್ ವಿಳಾಸವನ್ನು ನಮೂದಿಸಿ.
    1. ಆಹ್ವಾನಿತ ಚಾನಲ್ ಒಂದು Google ಖಾತೆಯೊಂದಿಗೆ ಸಂಯೋಜಿತವಾಗಿರಬೇಕು.
  5. ಆ್ಯಕ್ಸೆಸ್ ಎಂಬುದನ್ನು ಕ್ಲಿಕ್ ಮಾಡಿ ಮತ್ತು ಸಬ್‌ಟೈಟಲ್ ಎಡಿಟರ್ ಪಾತ್ರವನ್ನು ಆಯ್ಕೆಮಾಡಿ.
  6. ಮುಗಿದಿದೆ ಎಂಬುದನ್ನು ಕ್ಲಿಕ್ ಮಾಡಿ.
  7. ಆಹ್ವಾನವನ್ನು ಕಳುಹಿಸಲು ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ಚಾನಲ್ ಮಾಲೀಕರು ಅಥವಾ ನಿರ್ವಾಹಕರಾಗಿ ವೀಡಿಯೊ ಭಾಷೆಯನ್ನು ಸೆಟ್ ಮಾಡಿ

ಸಬ್‌ಟೈಟಲ್ ಎಡಿಟರ್‌ಗಳು, ನೀವು ವೀಡಿಯೊ ಭಾಷೆಯನ್ನು ಸೆಟ್ ಮಾಡಿರುವ ವೀಡಿಯೊಗಳಲ್ಲಿ ಮಾತ್ರ ಸಬ್‌ಟೈಟಲ್‌ಗಳನ್ನು ಸೇರಿಸಬಹುದು ಅಥವಾ ಎಡಿಟ್ ಮಾಡಬಹುದು.

  1. ಕಂಪ್ಯೂಟರ್‌ನಲ್ಲಿ YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಕಂಟೆಂಟ್ ಎಂಬುದನ್ನು ಕ್ಲಿಕ್ ಮಾಡಿ.
  3. ನೀವು ಸಬ್‌ಟೈಟಲ್‌ಗಳನ್ನು ಸೇರಿಸಲು ಬಯಸುವ ಎಲ್ಲಾ ವೀಡಿಯೊಗಳ ಮುಂದಿನ ಚೆಕ್‌ಬಾಕ್ಸ್‌ಗಳನ್ನು ಕ್ಲಿಕ್ ಮಾಡಿ.
  4. ಮೇಲಿನ ಪಟ್ಟಿಯಲ್ಲಿ, ಎಡಿಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  5. ಡೌನ್ ಆ್ಯರೋ‌ದಿಂದ, ವೀಡಿಯೊ ಭಾಷೆಯನ್ನು ಆಯ್ಕೆಮಾಡಿ.
  6. ನಿಮ್ಮ ಆದ್ಯತೆಯ ವೀಡಿಯೊ ಭಾಷೆಯನ್ನು ಆಯ್ಕೆಮಾಡಿ.
  7. ವೀಡಿಯೊಗಳನ್ನು ಅಪ್‌ಡೇಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
ಭವಿಷ್ಯದ ಎಲ್ಲಾ ಅಪ್‌ಲೋಡ್‌ಗಳಿಗಾಗಿ ಡೀಫಾಲ್ಟ್ ವೀಡಿಯೊ ಭಾಷೆಯನ್ನು ಸೆಟ್ ಮಾಡಲು, YouTube Studio ದಲ್ಲಿ ಸೆಟ್ಟಿಂಗ್‌ಗಳಿಗೆ ಹೋಗಿ. ಸುಧಾರಿತ ಸೆಟ್ಟಿಂಗ್‌ಗಳ ಟ್ಯಾಬ್ ಅಡಿಯಲ್ಲಿ, ನಿಮ್ಮ ಆದ್ಯತೆಯ ವೀಡಿಯೊ ಭಾಷೆಯನ್ನು ಆಯ್ಕೆಮಾಡಿ.

ಚಾನಲ್ ಮಾಲೀಕರು/ನಿರ್ವಾಹಕರಲ್ಲದವರಾಗಿ ಸಬ್‌ಟೈಟಲ್ ಎಡಿಟರ್ ಪಾತ್ರಕ್ಕೆ ಆ್ಯಕ್ಸೆಸ್ ಪಡೆಯಿರಿ

  1. ಮೊದಲಿಗೆ, ರಚನೆಕಾರರು ತಮ್ಮ YouTube Studio ಸೆಟ್ಟಿಂಗ್‌ಗಳಲ್ಲಿ ಸಬ್‌ಟೈಟಲ್ ಎಡಿಟರ್ ಆಗಲು ನಿಮ್ಮನ್ನು ಆಹ್ವಾನಿಸಬೇಕಾಗುತ್ತದೆ.
  2. ರಚನೆಕಾರರು ನಿಮ್ಮನ್ನು ಆಹ್ವಾನಿಸಿದ ನಂತರ, “[ಚಾನಲ್ ಹೆಸರು] ಆ್ಯಕ್ಸೆಸ್ ಮಾಡಲು ಆಹ್ವಾನ” ಎಂಬ ಶೀರ್ಷಿಕೆಯಿರುವ ಸಂದೇಶಕ್ಕಾಗಿ ನಿಮ್ಮ ಇಮೇಲ್ ಅನ್ನು ಹುಡುಕಿ.
  3. YouTube Studio ಗೆ ಹೋಗಲು ಆಹ್ವಾನವನ್ನು ಸ್ವೀಕರಿಸಿ ಎಂಬುದನ್ನು ಕ್ಲಿಕ್ ಮಾಡಿ.
    1. ನೀವು ಸಬ್‌ಟೈಟಲ್‌ಗಳನ್ನು ಎಡಿಟ್ ಮಾಡಲಿರುವ ಚಾನಲ್ ಹೆಸರು ಮತ್ತು ನಿಮ್ಮ ಚಾನಲ್ ಪಾತ್ರವನ್ನು ಪಾಪ್ಅಪ್ ತೋರಿಸುತ್ತದೆ.
  4. ಸಬ್‌ಟೈಟಲ್ ಎಡಿಟರ್ ಆಗಿ Studio ದಲ್ಲಿ ಮುಂದುವರಿಯಲು ಮುಚ್ಚಿ ಎಂಬುದನ್ನು ಕ್ಲಿಕ್ ಮಾಡಿ.
ಗಮನಿಸಿ: ಸಬ್‌ಟೈಟಲ್ ಎಡಿಟರ್‌ಗಳು YouTube Studio ದ ಸಬ್‌ಟೈಟಲ್‌ಗಳು ವಿಭಾಗಕ್ಕೆ ಮಾತ್ರ ಆ್ಯಕ್ಸೆಸ್ ಅನ್ನು ಹೊಂದಿರುತ್ತಾರೆ. ಈ ಅನುಮತಿ ಮಟ್ಟವನ್ನು ಹೊಂದಿರುವ ಬಳಕೆದಾರರಿಗೆ ಚಾನಲ್‌ನ ಇತರ ಮಾಹಿತಿ ಅಥವಾ ಆದಾಯದ ಡೇಟಾವನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಸಬ್‌ಟೈಟಲ್ ಎಡಿಟರ್‌ಗೆ ಸಂಬಂಧಿಸಿದ ಅನುಮತಿಗಳ ಕುರಿತು ಇನ್ನಷ್ಟು ತಿಳಿಯಿರಿ.

ಸಬ್‌ಟೈಟಲ್ ಎಡಿಟರ್ ಆಗಿ ಸಬ್‌ಟೈಟಲ್‌ಗಳನ್ನು ಸೇರಿಸಿ

  1. ಕಂಪ್ಯೂಟರ್‌ನಲ್ಲಿ YouTube Studio ಗೆ ಸೈನ್ ಇನ್ ಮಾಡಿ.
  2. ನೀವು ಎಡಭಾಗದ ಮೆನುವಿನಲ್ಲಿ ಸಬ್‌ಟೈಟಲ್‌ಗಳು ವಿಭಾಗದಲ್ಲಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
  3. ಸಬ್‌ಟೈಟಲ್‌ಗಳನ್ನು ಸೇರಿಸುವುದಕ್ಕೆ ವೀಡಿಯೊವನ್ನು ಹುಡುಕಲು, ಎಲ್ಲಾ, ಡ್ರಾಫ್ಟ್‌ಗಳು ಅಥವಾ ಪ್ರಕಟಿಸಿರುವುದು ಟ್ಯಾಬ್‌ಗಳನ್ನು ಕ್ಲಿಕ್ ಮಾಡಿ.
  4. ನೀವು ಎಡಿಟ್ ಮಾಡಲು ಬಯಸುವ ವೀಡಿಯೊವನ್ನು ಕ್ಲಿಕ್ ಮಾಡಿ.
  5. ಭಾಷೆ ಸೇರಿಸಿ ಎನ್ನುವುದನ್ನು ಕ್ಲಿಕ್‌ ಮಾಡಿ ಹಾಗೂ ನಿಮ್ಮ ಭಾಷೆಯನ್ನು ಆಯ್ಕೆಮಾಡಿ.
  6. ಸಬ್‌ಟೈಟಲ್‌ಗಳ ಅಡಿಯಲ್ಲಿ, ಸೇರಿಸಿ ಎಂಬುದನ್ನು ಕ್ಲಿಕ್ ಮಾಡಿ.

ಸಬ್‌ಟೈಟಲ್‌ಗಳು ಮತ್ತು ಕ್ಯಾಪ್ಶನ್‌ಗಳನ್ನು ಸೇರಿಸುವುದು ಮತ್ತು ಸಬ್‌ಟೈಟಲ್‌ಗಳನ್ನು ಹೇಗೆ ಎಡಿಟ್ ಮಾಡುವುದು ಮತ್ತು ತೆಗೆದುಹಾಕುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5218276915078019076
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false