YouTube ವಾರ್ಷಿಕ ಪ್ಲಾನ್‍ಗೆ ಸೈನ್ ಅಪ್ ಮಾಡಿ

Premium ವಾರ್ಷಿಕ ಪ್ಲಾನ್‌ಗಳು ಪ್ರೀಪೇಯ್ಡ್, ಪುನರಾವರ್ತನೆಯಾಗದ ಸದಸ್ಯತ್ವಗಳಾಗಿವೆ. ನೀವು ಒಮ್ಮೆ ಸಬ್‌ಸ್ಕ್ರೈಬ್ ಮಾಡಿದರೆ, ನಿಮ್ಮ ಪ್ಲಾನ್‌ನ ಅವಧಿ ಮುಗಿಯುವವರೆಗೆ Premium ಸದಸ್ಯತ್ವದ ಪ್ರಯೋಜನಗಳನ್ನು 12 ತಿಂಗಳುಗಳ ಕಾಲ ನೀವು ಆನಂದಿಸಬಹುದು. ಅರ್ಹತೆಯ ಕುರಿತಾದ ವಿವರಗಳನ್ನು ಕೆಳಗೆ ನೀಡಲಾಗಿದೆ.

ನೀವು ವಾರ್ಷಿಕ ಪ್ಲಾನ್‍ಗೆ ಅರ್ಹರಾಗಿದ್ದೀರಾ ಎಂಬುದನ್ನು ಪರಿಶೀಲಿಸಿ

ವಾರ್ಷಿಕ ಪ್ಲಾನ್‍ಗೆ ಸೈನ್ ಅಪ್ ಮಾಡಲು, ಕೆಳಗಿನ ಹಂತಗಳನ್ನು ಅನುಸರಿಸಿ. ನಿಮ್ಮ ಖರೀದಿಯನ್ನು ಪೂರ್ಣಗೊಳಿಸಿದ ನಂತರ, ಹೊಂದಾಣಿಕೆಯಾಗುವ ಸ್ಮಾರ್ಟ್ ಟಿವಿಗಳು/ಗೇಮಿಂಗ್ ಕನ್ಸೋಲ್‌ಗಳು ಸೇರಿದಂತೆ ನಿಮ್ಮ ಸದಸ್ಯತ್ವವನ್ನು ಖರೀದಿಸಲು ಬಳಸಿದ Google ಖಾತೆಯ ಮೂಲಕ ಸೈನ್ ಇನ್ ಮಾಡಬಹುದಾದ ಎಲ್ಲೆಡೆಯಲ್ಲೂ ನಿಮ್ಮ YouTube Premium ಅಥವಾ YouTube Music Premium ಪ್ರಯೋಜನಗಳನ್ನು ನೀವು ಬಳಸಬಹುದು.

ವಾರ್ಷಿಕ ಪ್ಲಾನ್‍ಗೆ ಸೈನ್ ಅಪ್ ಮಾಡಲು, ನೀವು ಈ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು:

  • ಪ್ರಸ್ತುತ YouTube Premium ಅಥವಾ Music Premium ಸಬ್‌ಸ್ಕ್ರೈಬರ್ ಆಗಿರಬಾರದು. ನೀವು ಪ್ರಸ್ತುತ YouTube Premium ಅಥವಾ YouTube Music Premium ಸದಸ್ಯತ್ವವನ್ನು ಹೊಂದಿದ್ದು, ವಾರ್ಷಿಕ ಪ್ಲಾನ್‌ಗೆ ಬದಲಿಸಲು ಬಯಸಿದರೆ, ಹಾಗೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.
  • ಈ ಕೆಳಗಿನ ಯಾವುದೇ ಸ್ಥಳಗಳಲ್ಲಿ ವಾಸಿಸುತ್ತಿರಬೇಕು:
    • ಯುನೈಟೆಡ್ ಸ್ಟೇಟ್ಸ್, ಕೆನಡಾ, ಮೆಕ್ಸಿಕೋ, ಬ್ರೆಜಿಲ್, ರಷ್ಯಾ, ಜರ್ಮನಿ, ಥೈಲ್ಯಾಂಡ್, ಭಾರತ ಮತ್ತು ಜಪಾನ್.
    • ಭಾರತದ ಸಬ್‌ಸ್ಕ್ರೈಬರ್‌ಗಳ ಗಮನಕ್ಕೆ: ನೀವು 1 ತಿಂಗಳ ಅಥವಾ 3 ತಿಂಗಳುಗಳ ಪ್ರೀಪೇಯ್ಡ್ ಪ್ಲಾನ್ ಅನ್ನು ಹೊಂದಿದ್ದರೆ, ನಿಮ್ಮ ಪ್ರೀಪೇಯ್ಡ್ ಪ್ಲಾನ್‌ನ ಅವಧಿ ಮುಕ್ತಾಯಗೊಂಡ ನಂತರ ಪ್ರಾರಂಭವಾಗುವ ವಾರ್ಷಿಕ ಪ್ಲಾನ್‍ಗೆ ನೀವು ಸೈನ್ ಅಪ್ ಮಾಡಬಹುದು.
ಗಮನಿಸಿ: ವಾರ್ಷಿಕ ಪ್ಲಾನ್‌ಗಳು ವೈಯಕ್ತಿಕ ಬಳಕೆದಾರರಿಗೆ ಮಾತ್ರ ಲಭ್ಯವಿವೆ. ನಾವು ವಾರ್ಷಿಕ ಪ್ಲಾನ್‌ಗಳನ್ನು ಕುಟುಂಬ ಪ್ಲಾನ್ ಬಳಕೆದಾರರಿಗೆ ಒದಗಿಸುವುದಿಲ್ಲ.

YouTube Premium ವಾರ್ಷಿಕ ಪ್ಲಾನ್‍ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ನೀವು ವಾರ್ಷಿಕ ಪ್ಲಾನ್ ಅನ್ನು ಖರೀದಿಸಿದಾಗ, ಪುನರಾವರ್ತನೆಯಾಗದ ವೈಯಕ್ತಿಕ ಸಬ್‌ಸ್ಕ್ರಿಪ್ಶನ್‌ಗಾಗಿ ನೀವು ಮುಂಗಡ ಪಾವತಿಯನ್ನು ಮಾಡುತ್ತೀರಿ. ಇದರರ್ಥ ನಿಮ್ಮ ಪಾವತಿಸಿದ ಸದಸ್ಯತ್ವದ ಪ್ರಯೋಜನಗಳು, ನೀವು ಪಾವತಿಸಿದ 12 ತಿಂಗಳುಗಳ ಅವಧಿಯ ನಂತರ ಕೊನೆಗೊಳ್ಳುತ್ತವೆ. ನಿಗದಿತ ಸಮಯಾವಧಿಯಲ್ಲಿ, ನೀವು YouTube Music Premium ಅಥವಾ YouTube Premium ಗೆ ಗರಿಷ್ಠ 2 ವರ್ಷಗಳ ಅವಧಿಯ ಪ್ರೀಪೇಯ್ಡ್ ಆ್ಯಕ್ಸೆಸ್ ಅನ್ನು ಖರೀದಿಸಬಹುದು. ನಿಮ್ಮ ಪ್ರಯೋಜನಗಳಿಗೆ ಇರುವ ನಿಮ್ಮ ಆ್ಯಕ್ಸೆಸ್ ಅನ್ನು ಉಳಿಸಿಕೊಳ್ಳಲು, ನಿಮ್ಮ ಸದಸ್ಯತ್ವದ ಅವಧಿ ಮುಗಿದ ನಂತರ ನೀವು ಇನ್ನೊಂದು ಪ್ಲಾನ್ ಅನ್ನು ಖರೀದಿಸಬೇಕಾಗುತ್ತದೆ.

ವಾರ್ಷಿಕ ಪ್ಲಾನ್‍ಗಳಿಗೆ ಮರುಪಾವತಿಗಳು ಲಭ್ಯವಿರುವುದಿಲ್ಲ ಹಾಗೂ ವಾರ್ಷಿಕ ಪ್ಲಾನ್‍ಗಳನ್ನು ವಿರಾಮಗೊಳಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ವಾರ್ಷಿಕ ಪ್ಲಾನ್ ಕುರಿತಂತೆ ನೀವು ಪ್ರಶ್ನೆಗಳನ್ನು ಹೊಂದಿದ್ದರೆ, YouTube ಬೆಂಬಲ ತಂಡವನ್ನು ಸಂಪರ್ಕಿಸಿ. ನೀವು ವಂಚನೆಯ ವಹಿವಾಟನ್ನು ವರದಿ ಮಾಡಲು ಬಯಸಿದರೆ, ಇಲ್ಲಿ ಕ್ಲೇಮ್ ಅನ್ನು ಸಲ್ಲಿಸಿ.

ಸೈನ್ ಅಪ್ ಮಾಡುವುದು ಹೇಗೆ ಎಂಬುದರ ಕುರಿತು ಕೆಳಗೆ ಇನ್ನಷ್ಟು ತಿಳಿಯಿರಿ. ನಿಮಗೆ ಸೂಕ್ತವಾದ ಪ್ಲಾನ್ ಯಾವುದು ಎಂಬುದನ್ನು ನಿರ್ಧರಿಸಲು, ನಮ್ಮ ಪಾವತಿಸಿದ ಸದಸ್ಯತ್ವದ ಆಯ್ಕೆಗಳನ್ನು ಸಹ ನೀವು ಎಕ್ಸ್‌ಪ್ಲೋರ್ ಮಾಡಬಹುದು.

YouTube Premium ವಾರ್ಷಿಕ ಪ್ಲಾನ್‍ಗೆ ಸೈನ್ ಅಪ್ ಮಾಡಿ

YouTube Premium ಅಥವಾ Music Premium ವಾರ್ಷಿಕ ಪ್ಲಾನ್‍ಗೆ ಸೈನ್ ಅಪ್ ಮಾಡಲು, ಕೆಳಗಿನ ಹಂತಗಳನ್ನು ಅನುಸರಿಸಿ.

YouTube Premium ವಾರ್ಷಿಕ ಪ್ಲಾನ್‍ಗೆ ಸೈನ್ ಅಪ್ ಮಾಡಿ

  1. ಮೊಬೈಲ್ ಅಥವಾ ಡೆಸ್ಕ್‌ಟಾಪ್ ವೆಬ್ ಬ್ರೌಸರ್‌ನಿಂದ, youtube.com/premium/annual ಗೆ ಹೋಗಿ.
  2. ನಿಮ್ಮ ಸದಸ್ಯತ್ವವನ್ನು ಪ್ರಾರಂಭಿಸಲು ನೀವು ಬಯಸುವ Google ಖಾತೆಗೆ ಸೈನ್ ಇನ್ ಮಾಡಿ.
  3. ವಾರ್ಷಿಕ ಪ್ಲಾನ್ ಪಡೆಯಿರಿ ಎಂಬುದನ್ನು ಟ್ಯಾಪ್ ಮಾಡಿ.
  4. ನಿಮ್ಮ ಪಾವತಿ ವಿವರಗಳನ್ನು ನಮೂದಿಸಿ.
  5. ನಿಮ್ಮ ಖರೀದಿಯನ್ನು ಪೂರ್ಣಗೊಳಿಸಿ.

YouTube Music Premium ವಾರ್ಷಿಕ ಪ್ಲಾನ್‍ಗೆ ಸೈನ್ ಅಪ್ ಮಾಡಿ

  1. ಮೊಬೈಲ್ ಅಥವಾ ಡೆಸ್ಕ್‌ಟಾಪ್ ವೆಬ್ ಬ್ರೌಸರ್‌ನಿಂದ, youtube.com/musicpremium/annual ಗೆ ಹೋಗಿ.
  2. ನಿಮ್ಮ ಸದಸ್ಯತ್ವವನ್ನು ಪ್ರಾರಂಭಿಸಲು ನೀವು ಬಯಸುವ Google ಖಾತೆಗೆ ಸೈನ್ ಇನ್ ಮಾಡಿ.
  3. ವಾರ್ಷಿಕ ಪ್ಲಾನ್ ಪಡೆಯಿರಿ ಎಂಬುದನ್ನು ಟ್ಯಾಪ್ ಮಾಡಿ.
  4. ನಿಮ್ಮ ಪಾವತಿ ವಿವರಗಳನ್ನು ನಮೂದಿಸಿ.
  5. ನಿಮ್ಮ ಖರೀದಿಯನ್ನು ಪೂರ್ಣಗೊಳಿಸಿ.

ನಿಮ್ಮ ಖರೀದಿಯನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ಸದಸ್ಯತ್ವವನ್ನು ಖರೀದಿಸಲು ನೀವು ಬಳಸಿದ Google ಖಾತೆಗೆ ಸೈನ್ ಇನ್ ಮಾಡುವ ಮೂಲಕ ಕಂಪ್ಯೂಟರ್, Android ಅಥವಾ Apple ಸಾಧನದಲ್ಲಿ ನಿಮ್ಮ YouTube Premium ಅಥವಾ YouTube Music Premium ಪ್ರಯೋಜನಗಳನ್ನು ನೀವು ಬಳಸಬಹುದು. ನಿಮ್ಮ ಖಾತೆಯ ಪಾವತಿಸಿದ ಸದಸ್ಯತ್ವಗಳು ಎಂಬ ವಿಭಾಗಕ್ಕೆ ಹೋಗುವ ಮೂಲಕ ನಿಮ್ಮ ಪ್ಲಾನ್ ಕೊನೆಗೊಳ್ಳುವ ದಿನಾಂಕವನ್ನು ನೀವು ಪರಿಶೀಲಿಸಬಹುದು.

ನಿಮ್ಮ ಸದಸ್ಯತ್ವದ ಪ್ರಕಾರವನ್ನು ಬದಲಾಯಿಸಿ

ನೀವು ಪ್ರಸ್ತುತ YouTube Premium ಅಥವಾ Music Premium ಸದಸ್ಯತ್ವವನ್ನು ಹೊಂದಿದ್ದು, ವಾರ್ಷಿಕ ಪ್ಲಾನ್‌ಗೆ ಬದಲಿಸಲು ಬಯಸಿದರೆ, ವಾರ್ಷಿಕ ಪ್ಲಾನ್‌ಗಳು ಲಭ್ಯವಿರುವ ಈ ಸ್ಥಳಗಳಲ್ಲಿ ನೀವು ವಾಸಿಸುತ್ತಿದ್ದೀರಿ ಎಂಬುದನ್ನು ನೀವು ಮೊದಲು ಖಚಿತಪಡಿಸಬೇಕಾಗುತ್ತದೆ:

  • ಯುನೈಟೆಡ್ ಸ್ಟೇಟ್ಸ್
  • ಕೆನಡಾ
  • ಮೆಕ್ಸಿಕೊ
  • ಬ್ರೆಜಿಲ್
  • ರಷ್ಯಾ
  • ಜರ್ಮನಿ
  • ಥಾಯ್ಲೆಂಡ್
  • ಭಾರತ
  • ಜಪಾನ್

ನೀವು ವಾರ್ಷಿಕ ಪ್ಲಾನ್‍ಗೆ ಅರ್ಹರಾಗಿದ್ದರೆ, ನಿಮ್ಮ ಅಸ್ತಿತ್ವದಲ್ಲಿರುವ ಸದಸ್ಯತ್ವವನ್ನು ರದ್ದುಗೊಳಿಸಬೇಕಾಗುತ್ತದೆ. ನಿಮ್ಮ ಸದಸ್ಯತ್ವವನ್ನು ರದ್ದುಗೊಳಿಸಿದ ನಂತರ YouTube Premium ಅಥವಾ Music Premium ಗೆ ಸಂಬಂಧಿಸಿದ ವಾರ್ಷಿಕ ಪ್ಲಾನ್‍ಗೆ ನೀವು ಸೈನ್ ಅಪ್ ಮಾಡಬಹುದು. ನಿಮ್ಮ ಪ್ರಸ್ತುತ ಬಿಲ್ಲಿಂಗ್ ಸೈಕಲ್ ಮುಗಿದ ನಂತರ ನಿಮ್ಮ ವಾರ್ಷಿಕ ಪ್ಲಾನ್‌ಗೆ ಸಂಬಂಧಿಸಿದ ಆ್ಯಕ್ಸೆಸ್ ನಿಮಗೆ ದೊರೆಯುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9407688044469887046
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false