YouTube ನಲ್ಲಿ ಶಾಲೆ ಖಾತೆಗಳಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಿ

Google Workspace for Education ಖಾತೆಯು ನಿಮ್ಮ ಶಾಲೆಯಿಂದ ನಿಮಗೆ ನೀಡಿದ ಇಮೇಲ್ ವಿಳಾಸವಾಗಿದೆ. ಈ ರೀತಿಯ ಖಾತೆಯಲ್ಲಿ, ನಿಮ್ಮ ಶಾಲೆಯ ನಿರ್ವಾಹಕರು YouTube ನಂತಹ Google ಉತ್ಪನ್ನಗಳಿಗೆ ಇರುವ ನಿಮ್ಮ ಆ್ಯಕ್ಸೆಸ್ ಅನ್ನು ನಿರ್ವಹಿಸುತ್ತಾರೆ.

1ನೇ ಸೆಪ್ಟೆಂಬರ್ 2021 ರಿಂದ, ನಿಮ್ಮ ಶಾಲೆಯ ನಿರ್ವಾಹಕರು ನಿಮ್ಮನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಗುರುತಿಸಿದರೆ, ನಿಮ್ಮ ಶಾಲೆಯ YouTube ಖಾತೆಯನ್ನು YouTube ನ ಸೀಮಿತ ಆವೃತ್ತಿಗೆ ಮೂವ್ ಮಾಡಲಾಗುತ್ತದೆ. ನಿಮ್ಮ YouTube ಚಾನಲ್ ಅನ್ನು ಇನ್ನು ಮುಂದೆ ನಿಮ್ಮ ಶಾಲೆಯ ಖಾತೆಗೆ ಜೋಡಿಸಲಾಗುವುದಿಲ್ಲ ಮತ್ತು ಇನ್ನು ಮುಂದೆ ಆ ಚಾನಲ್‌ನಲ್ಲಿ ಹೊಸ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಈ ಬದಲಾವಣೆಗಳು Google Workspace for Education ಮೂಲಕ ನಿಮ್ಮ ಶಾಲೆ ಖಾತೆಗೆ ಸಂಬಂಧಿಸಿದ ನಿಮ್ಮ YouTube ಅನುಭವದ ಮೇಲೆ ಮಾತ್ರ ಪರಿಣಾಮ ಬೀರುತ್ತವೆಯೇ ಹೊರತು ನಿಮ್ಮ ವೈಯಕ್ತಿಕ ಖಾತೆಯ ಮೇಲಲ್ಲ.

18 ವರ್ಷದೊಳಗಿನ ಬಳಕೆದಾರರಿಗಾಗಿ ಖಾತೆ ನಿರ್ಬಂಧಗಳು

ನೀವು ಪ್ರಾಥಮಿಕ ಅಥವಾ ಮಾಧ್ಯಮಿಕ ಸಂಸ್ಥೆಯಲ್ಲಿದ್ದರೆ ಮತ್ತು ನಿಮ್ಮ ಶಾಲೆಯ ನಿರ್ವಾಹಕರು ನಿಮ್ಮನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರೆಂದು ಗುರುತಿಸಿದ್ದರೆ, ನಿಮ್ಮ Google Workspace for Education ಖಾತೆಗೆ ಸೈನ್ ಇನ್ ಮಾಡಿದಾಗ YouTube ಕಂಟೆಂಟ್ ಮತ್ತು ಫೀಚರ್‌ಗಳ ಮೇಲೆ ನೀವು ನಿರ್ಬಂಧಗಳನ್ನು ಹೊಂದಿರುತ್ತೀರಿ.

ನಿಮ್ಮ ಶಾಲೆಯ ನಿರ್ವಾಹಕರು ನಿಮ್ಮನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರೆಂದು ಗುರುತಿಸಿದ್ದರೆ, ಲಭ್ಯವಿಲ್ಲದ ಕೆಲವು ಫೀಚರ್‌ಗಳು ಇಲ್ಲಿವೆ:

ವೀಕ್ಷಿಸಿ

  • ಲೈವ್ ಸ್ಟ್ರೀಮ್ ವೀಡಿಯೊಗಳು

ತೊಡಗಿಸಿಕೊಳ್ಳಿ

  • ನೋಟಿಫಿಕೇಶನ್‌ಗಳು (ಚಟುವಟಿಕೆಯ ಹೈಲೈಟ್‌ಗಳಿಗೆ ಸಂಬಂಧಿಸಿದ ವೈಯಕ್ತೀಕರಿಸಿದ ನೋಟಿಫಿಕೇಶನ್‌ಗಳನ್ನು ಹೊರತುಪಡಿಸಿದೆ)
  • ಕಾಮೆಂಟ್‌ಗಳು
  • ಲೈವ್ ಚಾಟ್
  • ರಚಿಸಿ
  • ಚಾನಲ್
  • ಲೈವ್ ಸ್ಟ್ರೀಮ್
  • ಪೋಸ್ಟ್‌ಗಳು
  • ಸಾರ್ವಜನಿಕ ಮತ್ತು ಪಟ್ಟಿಮಾಡದ ಪ್ಲೇಪಟ್ಟಿ
  • ಸ್ಟೋರಿಗಳು
  • Shorts
  • ವೀಡಿಯೊ ಅಪ್‌ಲೋಡ್‌ಗಳು

ಖರೀದಿಸಿ

  • ಚಾನಲ್ ಸದಸ್ಯತ್ವಗಳು
  • ಕ್ರಿಯೇಟರ್ ವ್ಯಾಪಾರದ ಸರಕು
  • ದೇಣಿಗೆಗಳು YouTube ಔದಾರ್ಯ
  • ಚಲನಚಿತ್ರಗಳು ಮತ್ತು ಟಿವಿ ಶೋಗಳು
  • ಸೂಪರ್ ಚಾಟ್ ಮತ್ತು ಸೂಪರ್ ಸ್ಟಿಕ್ಕರ್ಸ್

YouTube ಆ್ಯಪ್‌ಗಳು

  • YouTube Music
  • YouTube Studio
  • YouTube TV
  • YouTube VR

ಇತರೆ

  • ಟಿವಿಯಲ್ಲಿ ಕ್ಯಾಸ್ಟ್ ಮಾಡಿ
  • ಕನೆಕ್ಟ್ ಮಾಡಲಾದ ಗೇಮಿಂಗ್ ಖಾತೆಗಳು
  • ಅದೃಶ್ಯ
  • ವೈಯಕ್ತೀಕರಿಸಿದ ಆ್ಯಡ್‌ಗಳು
  • ನಿರ್ಬಂಧಿತ ಮೋಡ್

ನಿಮ್ಮ ಕಂಟೆಂಟ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಸೇವ್ ಮಾಡಿ

ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ:

ನಿಮ್ಮ ಶಾಲೆಯ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿರಿ:

  • ನಿಮ್ಮ ಖಾತೆಯನ್ನು 18 ಕ್ಕಿಂತ ಮೇಲ್ಪಟ್ಟವರು ಎಂದು ಗುರುತಿಸುವಂತೆ ನಿಮ್ಮ ಶಾಲೆಯ ನಿರ್ವಾಹಕರನ್ನು ಕೇಳಿ.

ನಿಮ್ಮ ನಿರ್ವಾಹಕರು ನಿಮ್ಮ ಸೆಟ್ಟಿಂಗ್‌ಗಳನ್ನು ಅಪ್‌ಡೇಟ್ ಮಾಡಿದ ನಂತರ:

  • YouTube ಗೆ ಸೈನ್ ಇನ್ ಮಾಡಿ.
  • ಚಾನಲ್ ಅನ್ನು ರಚಿಸಿ ಎಂಬಲ್ಲಿಗೆ ಹೋಗಿ ಮತ್ತು ವರ್ಕ್‌ಫ್ಲೋ ಪೂರ್ಣಗೊಳಿಸಿ. ನಿಮ್ಮ ಖಾತೆಯನ್ನು ಗೋಚರಿಸುವಂತೆ ಮಾಡಲಾಗುತ್ತದೆ ಮತ್ತು ನಿಮ್ಮ ಶಾಲೆ ಖಾತೆಯ YouTube ಚಾನಲ್‌ನಲ್ಲಿ ನೀವು ವೀಡಿಯೊಗಳ ರಚನೆಯನ್ನು ಮುಂದುವರಿಸಬಹುದು.

ನೀವು 18 ವರ್ಷದೊಳಗಿನವರಾಗಿದ್ದರೆ:

  • ನೀವು YouTube ನಲ್ಲಿ ರಚಿಸಿರುವ ನಿಮ್ಮ ವೀಡಿಯೊಗಳು ಮತ್ತು ಇತರ ಡೇಟಾವನ್ನು (ಉದಾ. ಕಾಮೆಂಟ್‌ಗಳು ಮತ್ತು ಹುಡುಕಾಟದ ಇತಿಹಾಸ) ಡೌನ್‌ಲೋಡ್ ಮಾಡಲು ಮತ್ತು ಸೇವ್ ಮಾಡಲು Google Takeout ಅನ್ನು ಬಳಸಿ. ನಿಮ್ಮ ಖಾತೆಯನ್ನು ಸೆಪ್ಟೆಂಬರ್ 2021 ರ ನಂತರ ರಚಿಸಿದ್ದರೆ, ನಿಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಲು ನಿಮ್ಮ ಶಾಲೆಯ ನಿರ್ವಾಹಕರು ನಿಮ್ಮನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಗುರುತಿಸಿದ ಸಮಯದಿಂದ 60 ದಿನಗಳವರೆಗೆ ನಿಮಗೆ ಅವಕಾಶವಿರುತ್ತದೆ.
ಗಮನಿಸಿ: ನಿಮ್ಮ ಶಾಲೆಯ ನಿರ್ವಾಹಕರು Google Takeout ಅನ್ನು ನಿಮ್ಮ ಖಾತೆಗಾಗಿ ಸಕ್ರಿಯಗೊಳಿಸಿದರೆ ಅದು ಲಭ್ಯವಿರುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7355676528343843349
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false