Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸಿ ಮತ್ತು ನಿರ್ವಹಿಸಿ

ಈ ಲೇಖನದಲ್ಲಿ ವಿವರಿಸಲಾದ ಫೀಚರ್‌ಗಳು YouTube Studio ಕಂಟೆಂಟ್ ಮ್ಯಾನೇಜರ್ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತವೆ. YouTube Studio ದಲ್ಲಿ ವೀಡಿಯೊಗಳನ್ನು ನಿರ್ವಹಿಸುವ ಕುರಿತಾದ ಮಾಹಿತಿಗಾಗಿ, ಇಲ್ಲಿ ಇನ್ನಷ್ಟು ತಿಳಿಯಿರಿ.

YouTube Studio ಕಂಟೆಂಟ್ ಮ್ಯಾನೇಜರ್, ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಲಿಂಕ್ ಮಾಡಲಾದ ಚಾನಲ್‌ಗಳಲ್ಲಿನ ವೀಡಿಯೊಗಳನ್ನು ವೀಕ್ಷಿಸಲು ಮತ್ತು ನಿರ್ವಹಿಸಲು ನಿಮಗೆ ಅನುಮತಿಸುತ್ತದೆ. ವೀಡಿಯೊ ಅಪ್‌ಲೋಡ್ ವಿಧಾನಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ನಿಮ್ಮ ವೀಡಿಯೊಗಳನ್ನು ಅಪ್‌ಲೋಡ್ ಮಾಡಿ ಮತ್ತು ಕ್ಲೈಮ್ ಮಾಡಿ ಎಂಬಲ್ಲಿಗೆ ಹೋಗಿ.

ವೀಡಿಯೊಗಳನ್ನು ಹುಡುಕಿ

  1. Studio ಕಂಟೆಂಟ್ ಮ್ಯಾನೇಜರ್ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ವೀಡಿಯೊಗಳು ಎಂಬುದನ್ನು ಆಯ್ಕೆಮಾಡಿ.
  3. ವೀಡಿಯೊಗಳು ಪುಟದಲ್ಲಿ, ನೀವು ಅಪ್‌ಲೋಡ್‌ಗಳು ಮತ್ತು ಲೈವ್ ಟ್ಯಾಬ್‌ಗಳ ನಡುವೆ ಬದಲಿಸಬಹುದು.
    • ಅಪ್‌ಲೋಡ್‌ಗಳು, ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಲಿಂಕ್ ಮಾಡಲಾದ ಚಾನಲ್‌ಗಳಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊಗಳನ್ನು ತೋರಿಸುತ್ತವೆ.
    • ಲೈವ್, ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಲಿಂಕ್ ಮಾಡಲಾದ ಚಾನಲ್‌ಗಳಿಂದ ಈ ಹಿಂದೆ ಸೇವ್ ಮಾಡಿದ ಲೈವ್ ಸ್ಟ್ರೀಮ್‌ಗಳನ್ನು ತೋರಿಸುತ್ತದೆ.
  4. ಫಿಲ್ಟರ್ ಬಾರ್ ಅನ್ನು ಕ್ಲಿಕ್ ಮಾಡಿ ಮತ್ತು ಪಟ್ಟಿಯನ್ನು ಸಂಸ್ಕರಿಸಲು ಫಿಲ್ಟರ್ ಅನ್ನು ಆಯ್ಕೆ ಮಾಡಿ, ಉದಾಹರಣೆಗೆ: ಚಾನಲ್, ಕೃತಿಸ್ವಾಮ್ಯ ಸ್ಟ್ರೈಕ್‌ಗಳು, ಮಾನಿಟೈಸೇಶನ್, ವೀಡಿಯೊ ದಿನಾಂಕ ಅಥವಾ ವೀಡಿಯೊ ID.
  5. ವೀಡಿಯೊವನ್ನು ಕ್ಲಿಕ್ ಮಾಡಿ. ವೀಡಿಯೊದ ಮೆಟಾಡೇಟಾ, ಸೆಟ್ಟಿಂಗ್‌ಗಳು, ಥಂಬ್‌ನೇಲ್ ಚಿತ್ರ ಮತ್ತು ಇತರ ಮಾಹಿತಿಯ ಅವಲೋಕನವನ್ನು ತೋರಿಸಲು ವಿವರಗಳ ಪುಟವು ತೆರೆಯುತ್ತದೆ.
  6. ಎಡಭಾಗದ ಮೆನುವಿನಿಂದ, ಹೆಚ್ಚಿನ ಕ್ರಿಯೆಗಳನ್ನು ಮಾಡಲು ಟ್ಯಾಬ್ ಒಂದನ್ನು ಆಯ್ಕೆಮಾಡಿ:
    • Analytics: ವೀಡಿಯೊದ ಕಾರ್ಯಕ್ಷಮತೆಯ ಡೇಟಾವನ್ನು ಪಡೆಯಿರಿ.
    • ಎಡಿಟರ್: ನಿಮ್ಮ ವೀಡಿಯೊವನ್ನು ಎಡಿಟ್ ಮಾಡಿ, ಕಾರ್ಡ್‌ಗಳನ್ನು ಸೇರಿಸಿ ಮತ್ತು ಇತರ ವೀಡಿಯೊ ಎಲಿಮೆಂಟ್‌ಗಳನ್ನು ಬದಲಾಯಿಸಿ.
    • ಸಬ್‌ಟೈಟಲ್‌ಗಳು: ವೀಡಿಯೊಗೆ ಸಬ್‌ಟೈಟಲ್‌ಗಳನ್ನು ಸೇರಿಸಿ.
    • ಮಾನಿಟೈಸೇಶನ್: ಅಪ್‌ಲೋಡ್ ನೀತಿಯನ್ನು ಆಯ್ಕೆಮಾಡುವ ಮೂಲಕ ಮತ್ತು ಆ್ಯಡ್ ಫಾರ್ಮ್ಯಾಟ್‌ಗಳನ್ನು ಆಯ್ಕೆಮಾಡುವ ಮೂಲಕ ವೀಡಿಯೊ ಮಾನಿಟೈಸೇಶನ್ ಅನ್ನು ಆನ್ ಮಾಡಿ. ಇನ್ನಷ್ಟು ತಿಳಿಯಿರಿ.
    • ಹಕ್ಕುಗಳ ನಿರ್ವಹಣೆ: Content ID ಹೊಂದಾಣಿಕೆಯನ್ನು ಆನ್ ಮಾಡಿ ಮತ್ತು ಹೊಂದಾಣಿಕೆ ನೀತಿಯನ್ನು ಆಯ್ಕೆಮಾಡಿ.
      • ಗಮನಿಸಿ: Content ID ಗಾಗಿ ಅರ್ಹವಾಗಿರುವ ಕಂಟೆಂಟ್ ಅನ್ನು ಹೊಂದಿರುವ ಅರ್ಹ ಪಾಲುದಾರರಿಗೆ ಮಾತ್ರ Content ID ಲಭ್ಯವಿರುತ್ತದೆ. ವೀಡಿಯೊದ ಎಲ್ಲಾ ಆಡಿಯೊ ಹಾಗೂ ವಿಷುವಲ್ ಕಂಟೆಂಟ್‌ನ ವಿಶೇಷ ಹಕ್ಕುಗಳನ್ನು ನೀವು ಹೊಂದಿದ್ದಾಗ ಮಾತ್ರ, ಅದರ Content ID ಹೊಂದಾಣಿಕೆಯನ್ನು ಆನ್ ಮಾಡಬೇಕು.
    • ಕ್ಲೈಮ್‌ಗಳು: ಕ್ಲೈಮ್ ಮಾಡಿದ ವೀಡಿಯೊಗಳ ವೀಕ್ಷಣೆಯಲ್ಲಿ ವೀಡಿಯೊವನ್ನು ತೆರೆಯಿರಿ ಮತ್ತು ವೀಡಿಯೊದಲ್ಲಿನ ಇತರ ಕ್ಲೈಮ್‌ಗಳನ್ನು ನೋಡಿ.
    • ನೀತಿ: ವೀಡಿಯೊದಲ್ಲಿ ಅನ್ವಯಿಸಲಾದ ನೀತಿಗಳನ್ನು ವೀಕ್ಷಿಸಿ.

ವೀಡಿಯೊಗಳ ಪಟ್ಟಿಯನ್ನು ರಫ್ತು ಮಾಡಿ

ನಿಮ್ಮ ವೀಡಿಯೊಗಳ ಕುರಿತು ಮಾಹಿತಿಯನ್ನು ಹೊಂದಿರುವ ಫೈಲ್ ಅನ್ನು ಡೌನ್‌ಲೋಡ್ ಮಾಡಲು:

  1. Studio ಕಂಟೆಂಟ್ ಮ್ಯಾನೇಜರ್ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ವೀಡಿಯೊಗಳು ಎಂಬುದನ್ನು ಆಯ್ಕೆಮಾಡಿ.
  3. (ಐಚ್ಛಿಕ) ಮೇಲ್ಭಾಗದಲ್ಲಿರುವ ಫಿಲ್ಟರ್ ಬಾರ್ ಅನ್ನು ಕ್ಲಿಕ್ ಮಾಡಿ ಮತ್ತು ವೀಡಿಯೊಗಳ ಪಟ್ಟಿಯನ್ನು ಸಂಸ್ಕರಿಸಲು ಫಿಲ್ಟರ್‌ಗಳನ್ನು ಅನ್ವಯಿಸಿ.
  4. ನೀವು ರಫ್ತು ಮಾಡಲು ಬಯಸುವ ವೀಡಿಯೊಗಳನ್ನು ಆಯ್ಕೆಮಾಡಿ.
    • ಪ್ರತ್ಯೇಕ ವೀಡಿಯೊಗಳನ್ನು ಆಯ್ಕೆಮಾಡಲು, ಎಡ ಕಾಲಮ್‌ನಲ್ಲಿರುವ ಬಾಕ್ಸ್‌ಗಳನ್ನು ಗುರುತು ಮಾಡಿ.
    • ಪುಟದಲ್ಲಿರುವ ಎಲ್ಲಾ ವೀಡಿಯೊಗಳನ್ನು ಆಯ್ಕೆಮಾಡಲು, ಮೇಲ್ಭಾಗದಲ್ಲಿರುವ "ಎಲ್ಲವನ್ನೂ ಆಯ್ಕೆಮಾಡಿ" ಬಾಕ್ಸ್ ಅನ್ನು ಗುರುತು ಮಾಡಿ.
    • ಚಾನಲ್ ಮೂಲಕ ಫಿಲ್ಟರ್ ಮಾಡಿದರೆ, ನೀವು ಮೇಲ್ಭಾಗದಲ್ಲಿರುವ "ಎಲ್ಲವನ್ನೂ ಆಯ್ಕೆಮಾಡಿ" ಎಂಬುದನ್ನು ಗುರುತು ಮಾಡಬಹುದು ಮತ್ತು ಎಲ್ಲಾ ಪುಟಗಳಲ್ಲಿನ ಎಲ್ಲಾ ವೀಡಿಯೊಗಳನ್ನು ಆಯ್ಕೆಮಾಡಲು ಹೊಂದಿಕೆಯಾಗುವ ಎಲ್ಲವನ್ನೂ ಆಯ್ಕೆಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  5. ಮೇಲ್ಭಾಗದ ಬ್ಯಾನರ್‌ನಲ್ಲಿ, ರಫ್ತು ಮಾಡಿ ನಂತರ ಎಂಬುದನ್ನು ಕ್ಲಿಕ್ ಮಾಡಿ ಮತ್ತು ವೀಡಿಯೊಗಳು (.csv) ಅಥವಾ ವೀಡಿಯೊಗಳು (Google Sheets) ಎಂಬುದನ್ನು ಆಯ್ಕೆಮಾಡಿ.
  6. ಫೈಲ್ ಅನ್ನು ಪ್ರಕ್ರಿಯೆಗೊಳಿಸಿದಾಗ:
    • .csv ಫೈಲ್‍ಗಾಗಿ: ಮೇಲಿನ ಬ್ಯಾನರ್‌ನಿಂದ ಡೌನ್‍ಲೋಡ್ ಮಾಡಿ ಅನ್ನು ಕ್ಲಿಕ್ ಮಾಡಿ.
    • Google Sheets ಫೈಲ್‌ಗಾಗಿ: ಮೇಲ್ಭಾಗದ ಬ್ಯಾನರ್‌ನಲ್ಲಿ SHEETS ಅನ್ನು ಹೊಸ ವಿಂಡೋದಲ್ಲಿ ತೆರೆಯಿರಿ ಎಂಬುದನ್ನು ಕ್ಲಿಕ್ ಮಾಡಿ.

ಒಂದೇ ಬಾರಿಗೆ ಬಹು ವೀಡಿಯೊಗಳನ್ನು ನಿರ್ವಹಿಸಿ

  1. Studio ಕಂಟೆಂಟ್ ಮ್ಯಾನೇಜರ್ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ವೀಡಿಯೊಗಳು ಎಂಬುದನ್ನು ಆಯ್ಕೆಮಾಡಿ.
  3. ನೀವು ಅಪ್‌ಡೇಟ್ ಮಾಡಲು ಬಯಸುವ ವೀಡಿಯೊಗಳನ್ನು ಹುಡುಕಿ. ಪಟ್ಟಿಯನ್ನು ಸಂಸ್ಕರಿಸಲು, ಫಿಲ್ಟರ್ ಬಾರ್ ಅನ್ನು ಕ್ಲಿಕ್ ಮಾಡಿ ಮತ್ತು ಫಿಲ್ಟರ್‌ಗಳನ್ನು ಅನ್ವಯಿಸಿ.
    • ಪುಟದಲ್ಲಿರುವ ಎಲ್ಲಾ ವೀಡಿಯೊಗಳನ್ನು ಆಯ್ಕೆಮಾಡಲು, ಮೇಲ್ಭಾಗದಲ್ಲಿರುವ ಬಾಕ್ಸ್ ಅನ್ನು ಗುರುತು ಮಾಡಿ. ಎಲ್ಲಾ ಪುಟಗಳಲ್ಲಿರುವ ಎಲ್ಲಾ ವೀಡಿಯೊಗಳನ್ನು ಆಯ್ಕೆಮಾಡಲು, ಮೇಲ್ಭಾಗದಲ್ಲಿರುವ ಬಾಕ್ಸ್ ಅನ್ನು ಗುರುತು ಮಾಡಿ ಮತ್ತು ಹೊಂದಿಕೆಯಾಗುವ ಎಲ್ಲವನ್ನೂ ಆಯ್ಕೆಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  4. ನೀವು ಅಪ್‌ಡೇಟ್ ಮಾಡಲು ಬಯಸುವ ವೀಡಿಯೊಗಳ ಪಕ್ಕದಲ್ಲಿರುವ ಒಂದು ಅಥವಾ ಹೆಚ್ಚಿನ ಚೆಕ್‌ಬಾಕ್ಸ್‌ಗಳನ್ನು ಕ್ಲಿಕ್ ಮಾಡಿ.
  5. ಮೇಲ್ಭಾಗದ ಬ್ಯಾನರ್‌ನಲ್ಲಿನ ಎಡಿಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ ಮತ್ತು ಒಂದು ಅಥವಾ ಹೆಚ್ಚಿನ ಕ್ರಿಯೆಗಳನ್ನು ಆಯ್ಕೆಮಾಡಿ. ಉದಾಹರಣೆಗೆ:
    • Content ID ಹೊಂದಾಣಿಕೆ: Content ID ಯನ್ನು ಆನ್ ಮಾಡಿ ಮತ್ತು ಒಂದೇ ಬಾರಿಗೆ ಅನೇಕ ವೀಡಿಯೊಗಳಿಗಾಗಿ ಉಲ್ಲೇಖಗಳನ್ನು ರಚಿಸಿ.
    • ನೀತಿಯನ್ನು ಅಪ್‌ಲೋಡ್ ಮಾಡಿ: ಒಂದೇ ಬಾರಿಗೆ ಅನೇಕ ವೀಡಿಯೊಗಳಿಗಾಗಿ ಮಾನಿಟೈಸೇಶನ್ ಅನ್ನು ಆನ್ ಮಾಡಿ.
  6. ವೀಡಿಯೊಗಳನ್ನು ಅಪ್‌ಡೇಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14631842310988326210
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false