ಲೈವ್ ಚಾಟ್ ಮತ್ತು ಕಾಮೆಂಟ್‌ಗಳಿಗಾಗಿ ಮಾಡರೇಶನ್ ಟೂಲ್‌ಗಳನ್ನು ಬಳಸುವುದು ಹೇಗೆ

ವೀಡಿಯೊದಲ್ಲಿ ಬಳಕೆದಾರರು ಮಾಡುವ ಕಾಮೆಂಟ್‌ಗಳನ್ನು ಅಥವಾ ನಿಮ್ಮ ಸ್ಟ್ರೀಮ್‌ನ ಲೈವ್ ಚಾಟ್‌ನಲ್ಲಿ ಭಾಗವಹಿಸುವವರು ಕಳುಹಿಸುವ ಸಂದೇಶಗಳನ್ನು ಪರಿಶೀಲಿಸಲು ಮತ್ತು ನಿರ್ವಹಿಸಲು ಮಾಡರೇಟರ್‌ಗಳು ಸಹಾಯ ಮಾಡಬಹುದು. ರಚನೆಕಾರರು ಮಾಡರೇಟರ್ ಅನ್ನು ಸೇರಿಸಿದಾಗ, ಅವರು ಸ್ಟ್ಯಾಂಡರ್ಡ್ ಮಾಡರೇಟರ್ ಅಥವಾ ಮ್ಯಾನೇಜಿಂಗ್ ಮಾಡರೇಟರ್ ಎಂಬುದನ್ನು ಅವರು ಆಯ್ಕೆ ಮಾಡಬಹುದು. ಸ್ಟ್ಯಾಂಡರ್ಡ್ ಮಾಡರೇಟರ್‌ಗಳಿಗಿಂತ ಮ್ಯಾನೇಜಿಂಗ್ ಮಾಡರೇಟರ್‌ಗಳು ಹೆಚ್ಚಿನ ಆಯ್ಕೆಗಳ ಲಭ್ಯತೆಯನ್ನು ಹೊಂದಿರುತ್ತವೆ.

ಕಾಮೆಂಟ್ ಮಾಡರೇಶನ್ ಮತ್ತು ಲೈವ್ ಚಾಟ್ ಮಾಡರೇಶನ್ ಕುರಿತು ಇನ್ನಷ್ಟು ತಿಳಿಯಿರಿ. ರಚನೆಕಾರರು ಮಾಡರೇಟರ್‌ಗಳನ್ನು ತೆಗೆದುಹಾಕುವವರೆಗೆ ಅವುಗಳು ತಮ್ಮ ಸ್ಥಿತಿಯನ್ನು ಉಳಿಸಿಕೊಳ್ಳುತ್ತವೆ.

ಲೈವ್ ಚಾಟ್

  1. YouTube.com ಗೆ ಹೋಗಿ. 
  2. ಮೇಲೆ ಬಲ ಮೂಲೆಯಲ್ಲಿ, ಹುಡುಕಿ ಎಂಬುದನ್ನು ಕ್ಲಿಕ್ ಮಾಡಿ ಮತ್ತು ವೀಕ್ಷಣಾ ಪುಟವನ್ನು ಆ್ಯಕ್ಸೆಸ್ ಮಾಡಲು ಚಾನಲ್ ಹೆಸರನ್ನು ನಮೂದಿಸಿ. 
  3. ಲೈವ್ ಚಾಟ್ ಅನ್ನು ಪ್ರವೇಶಿಸಲು ನಿಮ್ಮ ಲೈವ್ ಸ್ಟ್ರೀಮ್ ಆಯ್ಕೆ ಮಾಡಿ. 
  4. ಮಾಡರೇಶನ್ ಕ್ರಮವನ್ನು ಆಯ್ಕೆ ಮಾಡಲು ಸಂದೇಶ ಅಥವಾ ಕಾಮೆಂಟ್‌ನ ಪಕ್ಕದಲ್ಲಿರುವ ಸೆಟ್ಟಿಂಗ್‌ಗಳು ಎಂಬುದನ್ನು ಕ್ಲಿಕ್ ಮಾಡಿ. ಅಲ್ಲದೇ, ಚಾಟ್ ಅನ್ನು ವಿರಾಮಗೊಳಿಸಲು ನೀವು Control + Alt ಕೀಗಳನ್ನು ಒತ್ತಿಹಿಡಿಯಬಹುದು.

ಎರಡು ಪ್ರಕಾರಗಳ ಮಾಡರೇಟರ್‌ಗಳಿರುತ್ತಾರೆ: ಸ್ಟ್ಯಾಂಡರ್ಡ್ ಮಾಡರೇಟರ್ ಮತ್ತು ಮ್ಯಾನೇಜಿಂಗ್ ಮಾಡರೇಟರ್. ಸ್ಟ್ಯಾಂಡರ್ಡ್ ಮಾಡರೇಟರ್ ಇವುಗಳನ್ನು ಮಾಡಬಹುದು:

  • ಚಾನಲ್‌ಗೆ ಹೋಗುವುದು: ಲೈವ್ ಚಾಟ್‌ನಲ್ಲಿ ಪಾಲ್ಗೊಂಡಿರುವ ವ್ಯಕ್ತಿಯೊಬ್ಬರ ಮೇಲೆ ಮಾಡರೇಶನ್ ಕ್ರಮವನ್ನು ತೆಗೆದುಕೊಳ್ಳುವ ಮೊದಲು ನೇರವಾಗಿ ಅವರ ಚಾನಲ್‌ಗೆ ಹೋಗುವ ಮೂಲಕ ನೀವು ಅವರ ಬಗ್ಗೆ ತಿಳಿದುಕೊಳ್ಳಬಹುದು.
  • ತೆಗೆದುಹಾಕುವುದು: ಅನುಚಿತವಾಗಿರುವ, ಅಥವಾ ನಿಂದನಾತ್ಮಕ ಅಥವಾ ಆಕ್ಷೇಪಾರ್ಹವಾಗಿರುವ ಸಾಧ್ಯತೆಯಿರುವ ಯಾವುದೇ ಕಂಟೆಂಟ್ ಅನ್ನು ನೀವು ತೆಗೆದುಹಾಕಬಹುದು. ನೀವು ಸಂದೇಶವೊಂದನ್ನು ಅಳಿಸಿದಾಗ, ಅದನ್ನು ಲೈವ್ ಚಾಟ್‌ನಿಂದ ಅದರ ಪ್ರತ್ಯುತ್ತರಗಳ ಜೊತೆಗೆ ಶಾಶ್ವತವಾಗಿ ತೆಗೆದುಹಾಕಲಾಗುತ್ತದೆ.
  • ಬಳಕೆದಾರರನ್ನು ಈ ಚಾನಲ್‌ನಿಂದ ಮರೆಮಾಡುವುದು: ನೀವು ಯಾರನ್ನಾದರೂ ಚಾನಲ್‌ನಿಂದ ಮರೆಮಾಡಿದಾಗ, ಅವರ ಚಾಟ್ ಸಂದೇಶಗಳು ಹಾಗೂ ಕಾಮೆಂಟ್‌ಗಳು ಇತರ ವೀಕ್ಷಕರಿಗೆ ಕಾಣಿಸುವುದಿಲ್ಲ. YouTube ಆ ವ್ಯಕ್ತಿಗೆ ನೀವು ಅವರನ್ನು ಮರೆಮಾಡಿರುವ ವಿಚಾರ ತಿಳಿಸುವುದಿಲ್ಲ.
  • ಸಂಭಾವ್ಯ ಅನುಚಿತವಾದ ಸಂದೇಶಗಳನ್ನು ಪರಿಶೀಲಿಸುವುದು: ನಿಮ್ಮ ಸಮುದಾಯ ಸೆಟ್ಟಿಂಗ್‌ಗಳನ್ನು ಆಧರಿಸಿ ಪರಿಶೀಲನೆಗಾಗಿ ತಡೆಹಿಡಿಯಲಾಗಿರುವ ಕಾಮೆಂಟ್‌ಗಳು ಅಥವಾ ಸಂದೇಶಗಳನ್ನು ನೀವು ತೋರಿಸಬಹುದು ಅಥವಾ ಮರೆಮಾಡಬಹುದು.

ಮ್ಯಾನೇಜಿಂಗ್ ಮಾಡರೇಟರ್, ಈ ಮೇಲಿನವುಗಳ ಜೊತೆಗೆ, ಇವುಗಳನ್ನು ಸಹ ಮಾಡಬಲ್ಲರು:

  • ಸಮುದಾಯ ಡೀಫಾಲ್ಟ್: ಕಾಮೆಂಟ್‌ಗಳಲ್ಲಿ ಸ್ಪ್ಯಾಮ್, ಸ್ವಯಂ-ಪ್ರಚಾರ, ಅರ್ಥವಿಲ್ಲದ ಮತ್ತು ಇತರ ಸಂಭಾವ್ಯ ಅನುಚಿತವಾದ ಕಂಟೆಂಟ್ ಅನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಲು ತಂತ್ರಜ್ಞಾನವನ್ನು ಬಳಸುವುದಕ್ಕಾಗಿ ನೀವು ಈ ಫೀಚರ್ ಅನ್ನು ಆನ್ ಮಾಡಬಹುದು. ಇನ್ನಷ್ಟು ತಿಳಿಯಿರಿ.
  • ಲೈವ್ ಚಾಟ್ ಆನ್/ಆಫ್ ಮಾಡುವುದು: ನೀವು ಯಾವಾಗ ಬೇಕಾದರೂ ಲೈವ್ ಚಾಟ್ ಅನ್ನು ಆನ್ ಅಥವಾ ಆಫ್ ಮಾಡಬಹುದು. ಇದನ್ನು ಮಾಡುವುದು ಈವೆಂಟ್ ಪ್ರಾರಂಭವಾದ ನಂತರವೂ ಸಾಧ್ಯವಾಗುತ್ತದೆ.
  • ಭಾಗವಹಿಸುವಿಕೆ ಮೋಡ್: ಸಬ್‌ಸ್ಕ್ರೈಬರ್ ಮಾತ್ರ, ಸದಸ್ಯರು ಮಾತ್ರ ಅಥವಾ ಲೈವ್ ಕಾಮೆಂಟರಿ ಎಂಬುದನ್ನು ಆಯ್ಕೆಮಾಡುವ ಮೂಲಕ ನೀವು ಲೈವ್ ಚಾಟ್‌ನಲ್ಲಿ ಭಾಗವಹಿಸುವಿಕೆ ಮೋಡ್‌ಗಳನ್ನು ಬದಲಾಯಿಸಬಹುದು.
  • ಸಂದೇಶದಲ್ಲಿ ವಿಳಂಬ: ಸಂದೇಶಗಳ ನಡುವೆ ಸಮಯದ ಮಿತಿಯನ್ನು ಸೆಟ್ ಮಾಡುವ ಮೂಲಕ, ಪ್ರತಿ ಬಳಕೆದಾರರು ಎಷ್ಟು ಬಾರಿ ಚಾಟ್ ಸಂದೇಶವನ್ನು ಕಳುಹಿಸಬಹುದು ಎಂಬುದನ್ನು ನೀವು ಸೀಮಿತಗೊಳಿಸಬಹುದು.
  • ನಿರ್ಬಂಧಿತ ಪದಗಳು: ನಿರ್ದಿಷ್ಟ ಪದಗಳನ್ನು ಒಳಗೊಂಡಿರುವ ಅಥವಾ ಅವುಗಳಿಗೆ ನಿಕಟವಾಗಿ ತಾಳೆಯಾಗುವ ಪದಗಳನ್ನು ಹೊಂದಿರುವ ಲೈವ್ ಚಾಟ್ ಸಂದೇಶಗಳನ್ನು ನೀವು ನಿರ್ಬಂಧಿಸಬಹುದು.
  • ಸ್ಟ್ಯಾಂಡರ್ಡ್ ಮಾಡರೇಟರ್‌ಗಳನ್ನು ನಿರ್ವಹಿಸುವುದು: ನೀವು ಅನುಮೋದಿತ ಬಳಕೆದಾರರನ್ನು ಸೇರಿಸಬಹುದು ಮತ್ತು ತೆಗೆದುಹಾಕಬಹುದು.

ಗಮನಿಸಿ: ಮ್ಯಾನೇಜಿಂಗ್ ಮಾಡರೇಟರ್‌ಗಳು, ಲೈವ್ ನಿಯಂತ್ರಣ ಕೊಠಡಿ ಅಥವಾ YouTube Studio ಗೆ ಆ್ಯಕ್ಸೆಸ್ ಹೊಂದಿರುವುದಿಲ್ಲ. ಮ್ಯಾನೇಜಿಂಗ್ ಮಾಡರೇಟರ್‌ಗಳು ಇತರ ಮಾಡರೇಟರ್‌ಗಳನ್ನು ನಿಯೋಜಿಸಲು ಸಾಧ್ಯವಿಲ್ಲ.

ಲೈವ್ ಚಾಟ್ ಫೀಡ್‌ನಿಂದ ಚಾನಲ್ ಚಟುವಟಿಕೆಯನ್ನು ಆ್ಯಕ್ಸೆಸ್ ಮಾಡಿ:

ಮೆನುವಿನಲ್ಲಿ ಚಾನಲ್ ಚಟುವಟಿಕೆ ಎಂಬುದನ್ನು ಕ್ಲಿಕ್ ಮಾಡುವ ಮೂಲಕ ನೀವು ಮತ್ತು ನಿಮ್ಮ ಮಾಡರೇಟರ್‌ಗಳು ಲೈವ್ ಚಾಟ್ ಫೀಡ್‌ನಿಂದ ಸಾರ್ವಜನಿಕ ಬಳಕೆದಾರರ ಇತಿಹಾಸವನ್ನು ಆ್ಯಕ್ಸೆಸ್ ಮಾಡಬಹುದು. ಇನ್ನಷ್ಟು ತಿಳಿಯಿರಿ.  

ಲೈವ್ ಚಾಟ್ ಭಾಗಿಗಳು

ಲೈವ್ ಚಾಟ್‌ನಲ್ಲಿ, ನಿರ್ದಿಷ್ಟ ಭಾಗಿಗಳನ್ನು ದೃಷ್ಟಿಯಿಂದಲೇ ಗುರುತಿಸಲು ಐಕಾನ್‌ಗಳು ಹಾಗೂ ಬಣ್ಣಗಳನ್ನು ಬಳಸಲಾಗುತ್ತದೆ. ಒಂದು ಸಮಯದಲ್ಲಿ ಒಬ್ಬರ ಬಳಕೆದಾರ ಹೆಸರಿನ ಪಕ್ಕದಲ್ಲಿ 1 ಕ್ಕಿಂತ ಹೆಚ್ಚು ಐಕಾನ್ ಕಾಣಿಸಿಕೊಳ್ಳಬಹುದು.

ಐಕಾನ್‌ ಅರ್ಥ
ರಚನೆಕಾರರು / ಚಾನಲ್ ಮಾಲೀಕರು
ದೃಢೀಕೃತ ಖಾತೆಯನ್ನು ಹೊಂದಿರುವ ರಚನೆಕಾರರು
ದೃಢೀಕೃತ ಖಾತೆಯನ್ನು ಹೊಂದಿರುವ ಭಾಗಿ
ಚಾನಲ್‌ನ ಸದಸ್ಯರು
ಚಾನಲ್ ಮಾಡರೇಟರ್

ಕಾಮೆಂಟ್‌ಗಳು

YouTube ಮೊಬೈಲ್ ಆ್ಯಪ್‌ನಲ್ಲಿ ಕಾಮೆಂಟ್ ಮಾಡರೇಶನ್ ಟೂಲ್‌ಗಳನ್ನು ಆ್ಯಕ್ಸೆಸ್ ಮಾಡಲು ಕೆಲವು ವಿಧಾನಗಳಿವೆ.

ಕಾಮೆಂಟ್ ಸೆಟ್ಟಿಂಗ್‌ಗಳಿಂದ ಮಾಡರೇಟ್ ಮಾಡಿ

ನೀವು ಚಾನಲ್ ಮಾಲೀಕರು ಅಥವಾ ಮಾಡರೇಟರ್ ಆಗಿದ್ದರೆ, ಯಾವುದೇ ವೀಡಿಯೊಗೆ ಹೋಗಿ ಹಾಗೂ ಕಾಮೆಂಟ್‌ಗಳ ನಂತರ ಸೆಟ್ಟಿಂಗ್‌ಗಳು ಅನ್ನು ಟ್ಯಾಪ್ ಮಾಡಿ. ಅಲ್ಲಿಂದ, ನಿಮ್ಮ ಚಾನಲ್‌ನ ಕಾಮೆಂಟ್ ಸೆಟ್ಟಿಂಗ್‌ಗಳನ್ನು ನೀವು ನಿರ್ವಹಿಸಬಹುದು, ಅವುಗಳೆಂದರೆ:

ಕ್ರಿಯೆ ಚಾನಲ್‌ ಮಾಲೀಕರು ಮ್ಯಾನೇಜಿಂಗ್ ಮಾಡರೇಟರ್ ಸ್ಟ್ಯಾಂಡರ್ಡ್ ಮಾಡರೇಟರ್
ವೀಡಿಯೊ ಕಾಮೆಂಟ್ ಸೆಟ್ಟಿಂಗ್‌ಗಳು  ಹೌದು ಹೌದು ಇಲ್ಲ
ಎಲ್ಲಾ ನಿರ್ಬಂಧಿಸಿರುವ ಪದಗಳನ್ನು ಸೇರಿಸಿ, ಅಳಿಸಿ ಅಥವಾ ಕಾಪಿ ಮಾಡಿ ಹೌದು ಹೌದು ಇಲ್ಲ
ನಿರ್ಬಂಧ ಲಿಂಕ್‌ಗಳ ಫೀಚರ್ ಅನ್ನು ಆನ್ ಅಥವಾ ಆಫ್ ಮಾಡಿ ಹೌದು ಹೌದು ಇಲ್ಲ

ವೀಕ್ಷಣೆ ಪುಟದಿಂದ ಕಾಮೆಂಟ್ ಅನ್ನು ಮಾಡರೇಟ್ ಮಾಡಿ

ನೀವು ಚಾನಲ್ ಮಾಲೀಕರು ಅಥವಾ ಮಾಡರೇಟರ್ ಆಗಿದ್ದರೆ, ಮಾಡರೇಶನ್ ಆಯ್ಕೆಗಳನ್ನು ವೀಕ್ಷಿಸಲು ವೀಡಿಯೊದಲ್ಲಿನ ಕಾಮೆಂಟ್ ಪಕ್ಕದಲ್ಲಿರುವ ಇನ್ನಷ್ಟು '' ಅನ್ನು ಟ್ಯಾಪ್ ಮಾಡಿ. ಅಲ್ಲಿಂದ, ನೀವು ವೈಯಕ್ತಿಕ ಕಾಮೆಂಟ್‌ಗಳನ್ನು ನಿರ್ವಹಿಸಬಹುದು, ಅವುಗಳೆಂದರೆ:

ಕ್ರಿಯೆ ಚಾನಲ್‌ ಮಾಲೀಕರು ಮ್ಯಾನೇಜಿಂಗ್ ಮಾಡರೇಟರ್ ಸ್ಟ್ಯಾಂಡರ್ಡ್ ಮಾಡರೇಟರ್
ಕಾಮೆಂಟ್ ಅನ್ನು ಪಿನ್ ಮಾಡಿ ಅಥವಾ ಅನ್‌ಪಿನ್ ಮಾಡಿ ಹೌದು ಇಲ್ಲ ಇಲ್ಲ
ವಿಮರ್ಶೆಗಾಗಿ ಕಾಮೆಂಟ್ ಅನ್ನು ಅಳಿಸಿ ಅಥವಾ ಹೋಲ್ಡ್ ಮಾಡಿ ಹೌದು - ಅಳಿಸಿ ಹೌದು - ವಿಮರ್ಶೆಗಾಗಿ ಹೋಲ್ಡ್ ಮಾಡಿ  ಹೌದು - ವಿಮರ್ಶೆಗಾಗಿ ಹೋಲ್ಡ್ ಮಾಡಿ
ಕಾಮೆಂಟ್ ಅನ್ನು ವರದಿ ಮಾಡಿ ಹೌದು ಹೌದು ಹೌದು
ಮ್ಯಾನೇಜಿಂಗ್ ಮಾಡರೇಟರ್‌ಗಳನ್ನು ಸೇರಿಸಿ ಅಥವಾ ತೆಗೆದುಹಾಕಿ ಹೌದು ಇಲ್ಲ ಇಲ್ಲ
ಸ್ಟ್ಯಾಂಡರ್ಡ್ ಮಾಡರೇಟರ್‌ಗಳನ್ನು ಸೇರಿಸಿ ಅಥವಾ ತೆಗೆದುಹಾಕಿ ಹೌದು ಹೌದು ಇಲ್ಲ
ಅನುಮೋದಿತ ಬಳಕೆದಾರರನ್ನು ಸೇರಿಸಿ ಅಥವಾ ತೆಗೆದುಹಾಕಿ ಹೌದು ಹೌದು ಇಲ್ಲ
ಮರೆಮಾಡಿ ಬಳಕೆದಾರರನ್ನು ಸೇರಿಸಿ ಅಥವಾ ತೆಗೆದುಹಾಕಿ ಹೌದು ಹೌದು ಹೌದು

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
18243478767245825940
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false