ಮಕ್ಕಳು ಮತ್ತು ಕುಟುಂಬಕ್ಕೆ ಸಂಬಂಧಿಸಿದ ಕಂಟೆಂಟ್‌ಗಾಗಿ ಉತ್ತಮ ಅಭ್ಯಾಸಗಳು

YouTube ನಲ್ಲಿ, ಮಕ್ಕಳು ಆನ್‌ಲೈನ್ ವೀಡಿಯೊದ ಮೂಲಕ ಜಗತ್ತನ್ನು ಅನ್ವೇಷಿಸಿದಾಗ ಅವರು ಹೊಸ ಆಸಕ್ತಿಗಳನ್ನು ಶೋಧಿಸಬಹುದು, ಕಲಿಯಬಹುದು ಮತ್ತು ಬೆಳೆಸಬಹುದು ಮತ್ತು ಒಳಗೊಳ್ಳುವಿಕೆಯ ಅನುಭವವನ್ನು ಪಡೆಯಬಹುದು ಎಂದು ನಾವು ನಂಬಿದ್ದೇವೆ. ಮಕ್ಕಳು ಮತ್ತು ಕುಟುಂಬಗಳಿಗಾಗಿ ಉತ್ಕೃಷ್ಟವಾದ, ಮನಸೂರೆಗೊಳ್ಳುವ ಮತ್ತು ಪ್ರೇರೇಪಿಸುವ ವೀಡಿಯೊಗಳನ್ನು ರಚಿಸುವುದು ಹೇಗೆ ಎಂದು ರಚನೆಕಾರರು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದಕ್ಕಾಗಿ ನಾವು ಕಾರ್ಯನಿರತರಾಗಿದ್ದೇವೆ.

ಮಕ್ಕಳು ಮತ್ತು ಕುಟುಂಬಕ್ಕೆ ಸಂಬಂಧಿಸಿದ ಕಂಟೆಂಟ್‌ಗಾಗಿ ಉತ್ತಮ ಅಭ್ಯಾಸಗಳು (ಅಧಿಕ ಮತ್ತು ಕಡಿಮೆ ಗುಣಮಟ್ಟದ ಕುರಿತಾದ ಸಿದ್ಧಾಂತಗಳು

ಚಾಲ್ತಿಯಲ್ಲಿರುವ ಈ ಪ್ರಯತ್ನಗಳ ಭಾಗವಾಗಿ, YouTube ನಲ್ಲಿ ಮಕ್ಕಳು ಮತ್ತು ಕುಟುಂಬಕ್ಕೆ ಸೂಕ್ತವಾದ ಕಂಟೆಂಟ್ ಅನ್ನು ರಚಿಸುವವರಿಗೆ ಮಾರ್ಗದರ್ಶನ ನೀಡಲು ಸಹಾಯ ಮಾಡುವುದಕ್ಕಾಗಿ ನಾವು ಒಂದಿಷ್ಟು ಗುಣಮಟ್ಟದ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಈ ಸಿದ್ಧಾಂತಗಳನ್ನು ಮಕ್ಕಳ ಅಭಿವೃದ್ಧಿ ವಿಶೇಷಜ್ಞರೊಂದಿಗೆ ಅಭಿವೃದ್ಧಿಪಡಿಸಲಾಗಿದೆ, ಮತ್ತು ಇವು ವಿಸ್ತೃತ ಸಂಶೋಧನೆಯನ್ನು ಆಧರಿಸಿವೆ.

ಯಾವುದನ್ನು ಕಡಿಮೆ- ಅಥವಾ ಅಧಿಕ ಗುಣಮಟ್ಟದ ಕಂಟೆಂಟ್ ಎಂಬುದಾಗಿ ಪರಿಗಣಿಸಬಹುದು ಎಂಬುದರ ಉತ್ತಮ ಕಲ್ಪನೆಯನ್ನು ಒದಗಿಸುವುದು ಈ ಪಟ್ಟಿಯ ಉದ್ದೇಶವಾಗಿದೆ ಮತ್ತು ಇದು ಸಂಪೂರ್ಣ ಪಟ್ಟಿಯಲ್ಲ. ಈ ಸಿದ್ಧಾಂತಗಳು ನಮ್ಮ ಸಮುದಾಯ ಮಾರ್ಗಸೂಚಿಗಳಿಗೆ ಪೂರಕವಾಗಿವೆ, ಮತ್ತು ಎಲ್ಲರಿಗಾಗಿ ಸುರಕ್ಷಿತ ವೀಕ್ಷಣೆಯ ಅನುಭವವನ್ನು ರಚಿಸಲು ಸಹಾಯ ಮಾಡುತ್ತವೆ ಮತ್ತು ಲಾಂಗ್-ಫಾರ್ಮ್ ಕಂಟೆಂಟ್ ಹಾಗೂ YouTube Shorts ಗೆ ಅನ್ವಯಿಸುತ್ತವೆ.

ನೀವು ರಚಿಸುವ ಎಲ್ಲಾ ಕಂಟೆಂಟ್‌ನಲ್ಲಿ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಲು ನೀವು ಜವಾಬ್ದಾರರಾಗಿದ್ದೀರಿ. ಈ ಪುಟದಲ್ಲಿರುವ ಸಿದ್ಧಾಂತಗಳನ್ನು ಮರುಮೌಲ್ಯಮಾಪನ ಮಾಡುವುದನ್ನು ಹಾಗೂ ಅಪ್‌ಡೇಟ್ ಮಾಡುವುದನ್ನು ನಾವು ಮುಂದುವರಿಸುತ್ತೇವೆ.

ಗಮನಿಸಿ: YouTube Kids ವೀಡಿಯೊಗಳಿಗಾಗಿ ನಮ್ಮ ಕಂಟೆಂಟ್ ನೀತಿಗಳ ಕುರಿತು ಇನ್ನಷ್ಟು ಓದಿ.

ಅಧಿಕ ಗುಣಮಟ್ಟದ ಕಂಟೆಂಟ್ ಸಿದ್ಧಾಂತಗಳು

ಅಧಿಕ-ಗುಣಮಟ್ಟದ ಕಂಟೆಂಟ್, ವಯಸ್ಸಿಗೆ ಸೂಕ್ತವಾಗಿರಬೇಕು, ಉತ್ಕೃಷ್ಟವಾಗಿರಬೇಕು, ತೊಡಗಿಸಿಕೊಳ್ಳುವಂತಿರಬೇಕು ಮತ್ತು ಪ್ರೇರೇಪಿಸಬೇಕು. ಈ ಕಂಟೆಂಟ್ ವಿವಿಧ ಫಾರ್ಮ್ಯಾಟ್‌ಗಳಲ್ಲಿ ಬರಬಹುದು ಮತ್ತು ವಿವಿಧ ವಿಷಯಗಳನ್ನು ಒಳಗೊಳ್ಳಬಹುದು, ಆದರೆ ಅದು ಇವುಗಳನ್ನು ಪ್ರಚಾರ ಮಾಡಬೇಕು:

  • ಒಳ್ಳೆಯ ವ್ಯಕ್ತಿಯಾಗಿರುವುದು: ಈ ಕಂಟೆಂಟ್, ಗೌರವ, ಉತ್ತಮ ವರ್ತನೆ ಮತ್ತು ಆರೋಗ್ಯಪೂರ್ಣ ಅಭ್ಯಾಸಗಳನ್ನು ಪ್ರದರ್ಶಿಸುತ್ತದೆ ಅಥವಾ ಪ್ರೋತ್ಸಾಹಿಸುತ್ತದೆ. ಉದಾಹರಣೆಗಳಲ್ಲಿ ಹಂಚಿಕೊಳ್ಳುವಿಕೆ ಅಥವಾ ಉತ್ತಮ ಸ್ನೇಹಿತನಾಗಿರುವುದರ ಕುರಿತಾದ ಕಂಟೆಂಟ್ ಒಳಗೊಂಡಿದೆ. ವೀಡಿಯೊಗಳು, ಹಲ್ಲುಜ್ಜುವುದು ಅಥವಾ ಮಕ್ಕಳು ತರಕಾರಿ ತಿನ್ನುವುದನ್ನು ಉತ್ತೇಜಿಸುವುದರ ಕುರಿತಾಗಿಯೂ ಇರಬಹುದು.
  • ಕಲಿಯುವುದು ಮತ್ತು ಕುತೂಹಲವನ್ನು ಪ್ರೇರೇಪಿಸುವುದು: ಈ ಕಂಟೆಂಟ್, ವಿಮರ್ಶಾತ್ಮಕ ಆಲೋಚನೆ, ಸಮಾನ ಪರಿಕಲ್ಪನೆಗಳ ಕುರಿತು ಚರ್ಚಿಸುವುದು ಮತ್ತು ಪ್ರಪಂಚವನ್ನು ಅನ್ವೇಷಿಸುವುದನ್ನು ಪ್ರಚಾರ ಮಾಡುತ್ತದೆ. ಕಂಟೆಂಟ್, ವಯಸ್ಸಿಗೆ ಸೂಕ್ತವಾಗಿರಬೇಕು ಮತ್ತು ಎಳೆಯ ಪ್ರೇಕ್ಷಕರಿಗಾಗಿ ವಿನ್ಯಾಸಗೊಳಿಸಿರಬೇಕು. ಅದು ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಕಲಿಕೆಯನ್ನು ವ್ಯಾಪಿಸಬಹುದು (ಉದಾಹರಣೆಗೆ ಶಿಕ್ಷಣ, ಅನೌಪಚಾರಿಕ ಕಲಿಕೆ, ಆಸಕ್ತಿ-ಆಧಾರಿತ ಅನ್ವೇಷಣೆ ಮತ್ತು ಟುಟೋರಿಯಲ್‌ಗಳು).
  • ಸೃಜನಾತ್ಮಕತೆ, ಆಟ ಮತ್ತು ಕಲ್ಪನೆಯ ಅಂಶ: ಈ ಕಂಟೆಂಟ್ ಆಲೋಚನೆಯನ್ನು ಪ್ರೇರೇಪಿಸುತ್ತದೆ ಅಥವಾ ಕಲ್ಪನಾತ್ಮಕವಾಗಿದೆ. ಮಕ್ಕಳು ಏನನ್ನಾದರೂ ಅರ್ಥಪೂರ್ಣವಾಗಿ ಮತ್ತು ಹೊಸದಾಗಿ ರಚಿಸಲು, ಮಾಡಲು ಮತ್ತು ತೊಡಗಿಸಿಕೊಳ್ಳಲು ಸಹ ಇದು ಪ್ರೇರೇಪಿಸಬಹುದು. ಉದಾಹರಣೆಗಳಲ್ಲಿ, ಕಾಲ್ಪನಿಕ ಪದಗಳು, ಕಥೆ ಹೇಳುವಿಕೆ, ಫುಟ್‌ಬಾಲ್ ತಂತ್ರಗಳು, ಜೊತೆಗೂಡಿ ಹಾಡುವುದು ಮತ್ತು ಕಲೆ ಹಾಗೂ ಕರಕುಶಲತೆಯಂತಹ ಸೃಜನಾತ್ಮಕ ಚಟುವಟಿಕೆಗಳು ಒಳಗೊಂಡಿವೆ.
  • ನೈಜ ಜಗತ್ತಿನ ಸಮಸ್ಯೆಗಳೊಂದಿಗೆ-ತೊಡಗಿಸಿಕೊಳ್ಳುವುದು: ಈ ಕಂಟೆಂಟ್, ಜೀವನ ಪಾಠಗಳು ಮತ್ತು ಪ್ರಬಲ ಪಾತ್ರಗಳನ್ನು ಒಳಗೊಂಡಿದೆ ಅಥವಾ ಸಾಮಾಜಿಕ-ಭಾವನಾತ್ಮಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು, ಸಮಸ್ಯೆ ಬಗೆಹರಿಸುವುದು ಮತ್ತು ಸ್ವತಂತ್ರವಾಗಿ ಆಲೋಚಿಸುವಂತಹ ವಿಷಯಗಳನ್ನು ಒಳಗೊಂಡಿದೆ. ಇದು ಹೆಚ್ಚಾಗಿ ಸಂಪೂರ್ಣ ನಿರೂಪಣೆಯನ್ನು (ಉದಾಹರಣೆಗೆ ಪಾತ್ರ ಅಭಿವೃದ್ಧಿ, ಯೋಜನೆ, ಬಗೆಹರಿಸುವಿಕೆ) ಮತ್ತು ಸ್ಪಷ್ಟ ಸಾರಾಂಶ ಅಥವಾ ಪಾಠವನ್ನು ಒಳಗೊಂಡಿರುತ್ತದೆ.
  • ವೈವಿಧ್ಯತೆ, ಸಮಾನತೆ ಮತ್ತು ಸೇರ್ಪಡೆ: ಈ ಕಂಟೆಂಟ್, ವೈವಿಧ್ಯಮಯ ದೃಷ್ಟಿಕೋನಗಳು ಮತ್ತು ಜನರ ಗುಂಪುಗಳ ಪ್ರತಿನಿಧಿತ್ವ ಮತ್ತು ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ. ಇದು ವಿವಿಧ ವಯೋಮಾನಗಳು, ಲಿಂಗಗಳು, ಜನಾಂಗೀಯತೆಗಳು, ಧರ್ಮಗಳು ಮತ್ತು ಲೈಂಗಿಕ ಅಭಿರುಚಿಗಳನ್ನು ತೋರಿಸುತ್ತದೆ. ಇದು, ಆ ವ್ಯತ್ಯಾಸಗಳನ್ನು ಸಮಾನವಾಗಿ ನೋಡುವುದನ್ನು ಸಹ ಪ್ರೋತ್ಸಾಹಿಸುತ್ತದೆ. ಉದಾಹರಣೆಗಳಲ್ಲಿ, ವೈವಿಧ್ಯತೆ ಹಾಗೂ ಸೇರ್ಪಡೆಯ ಪ್ರಯೋಜನಗಳನ್ನು ಚರ್ಚಿಸುವ ಕಂಟೆಂಟ್, ಅಥವಾ ಈ ಥೀಮ್‌ಗಳನ್ನು ಪ್ರದರ್ಶಿಸುವ ಕಥೆಗಳು/ಪಾತ್ರಗಳನ್ನು ತೋರಿಸುವ ಕಂಟೆಂಟ್ ಒಳಗೊಂಡಿವೆ.

ಕಡಿಮೆ ಗುಣಮಟ್ಟದ ಕಂಟೆಂಟ್ ಸಿದ್ಧಾಂತಗಳು

ಕಡಿಮೆ ಗುಣಮಟ್ಟದ ಕಂಟೆಂಟ್ ಅನ್ನು ರಚಿಸುವುದನ್ನು ತಪ್ಪಿಸಿ. ಕಡಿಮೆ ಗುಣಮಟ್ಟದ ಕಂಟೆಂಟ್ ಎಂದರೆ:

  • ಅತಿಯಾಗಿ ವಾಣಿಜ್ಯಾತ್ಮಕ ಅಥವಾ ಪ್ರಚಾರಾತ್ಮಕವಾಗಿರುವುದು: ಉತ್ಪನ್ನಗಳನ್ನು ಖರೀದಿಸುವುದು ಅಥವಾ ಬ್ರ್ಯಾಂಡ್‌ಗಳು ಹಾಗೂ ಲೋಗೋಗಳನ್ನು (ಆಟಿಕೆಗಳು ಮತ್ತು ಆಹಾರದ ಹಾಗೆ) ಪ್ರಚಾರ ಮಾಡುವುದರ ಮೇಲೆ ಪ್ರಾಥಮಿಕವಾಗಿ ಗಮನ ಕೇಂದ್ರೀಕರಿಸಿರುವ ಕಂಟೆಂಟ್. ಇದು, ಅತಿಯಾದ ಗ್ರಾಹಕೀಯತೆಯ ಮೇಲೆ ಗಮನ ಕೇಂದ್ರೀಕರಿಸಿದ ಕಂಟೆಂಟ್ ಅನ್ನು ಸಹ ಒಳಗೊಂಡಿದೆ.
  • ನಕಾರತ್ಮಕ ವರ್ತನೆಗಳು ಅಥವಾ ವರ್ತನೆಗಳನ್ನು ಪ್ರೋತ್ಸಾಹಿಸುವುದು: ಅಪಾಯಕಾರಿ ಚಟುವಟಿಕೆಗಳು, ವ್ಯರ್ಥ ಮಾಡುವುದು, ಬೆದರಿಸುವುದು, ಅಪ್ರಾಮಾಣಿಕತೆ ಅಥವಾ ಇತರರಿಗೆ ಗೌರವ ತೋರದಿರುವುದನ್ನು ಪ್ರೋತ್ಸಾಹಿಸುವ ಕಂಟೆಂಟ್. ಉದಾಹರಣೆಗೆ, ಕಂಟೆಂಟ್‌ನಲ್ಲಿ ಅಪಾಯಕಾರಿ/ಅಸುರಕ್ಷಿತ ಕೀಟಲೆಗಳು, ಅನಾರೋಗ್ಯಕರ ತಿನ್ನುವ ಅಭ್ಯಾಸಗಳು ಒಳಗೊಂಡಿರಬಹುದು.
  • ವಂಚನಾತ್ಮಕವಾಗಿ ಶೈಕ್ಷಣಿಕ: ಕಂಟೆಂಟ್‌ನಲ್ಲಿ ಶೈಕ್ಷಣಿಕ ಮೌಲ್ಯವಿದೆ ಎಂದು ಪ್ರತಿಪಾದಿಸುವ ಶೀರ್ಷಿಕೆ ಅಥವಾ ಥಂಬ್‌ನೇಲ್ ಅನ್ನು ಹೊಂದಿರುವ, ಆದರೆ ವಾಸ್ತವಿಕವಾಗಿ ಮಾರ್ಗದರ್ಶನ ಅಥವಾ ವಿವರಣೆಯನ್ನು ಹೊಂದಿರದ ಅಥವಾ ಮಕ್ಕಳಿಗೆ ಸೂಕ್ತವಾಗಿರದ ಕಂಟೆಂಟ್. ಉದಾಹರಣೆಗಾಗಿ, “ಬಣ್ಣಗಳ ಬಗ್ಗೆ ಕಲಿಯಲು” ಅಥವಾ “ಸಂಖ್ಯೆಗಳನ್ನು ಕಲಿಯಲು” ವೀಕ್ಷಕರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡುವ, ಆದರೆ ನಿಖರವಲ್ಲದ ಮಾಹಿತಿಯನ್ನು ಒಳಗೊಂಡಿರುವ ವೀಡಿಯೊ.
  • ಗ್ರಹಿಕೆಗೆ ಅಡ್ಡಿಪಡಿಸುವುದು: ವಿಚಾರಹೀನವಾದ, ಸಂಯೋಜಿತ ನಿರೂಪಣೆಯನ್ನು ಹೊಂದಿರದ, ಅಥವಾ ಕೇಳಿಸಲು ಸಾಧ್ಯವಾಗದ ಆಡಿಯೋದ ಹಾಗೆ, ಗ್ರಹಿಸಲು ಸಾಧ್ಯವಾಗದಿರುವ ಕಂಟೆಂಟ್. ಸಾಮೂಹಿಕ ಉತ್ಪಾದನೆ ಅಥವಾ ಸ್ವಯಂಚಾಲಿತ ರಚನೆಯಿಂದಾಗಿ ಹೆಚ್ಚಾಗಿ ಈ ರೀತಿಯ ವೀಡಿಯೊ ಉಂಟಾಗುತ್ತದೆ.
  • ಸಂವೇದನಾಶೀಲವಾಗಿರುವುದು ಅಥವಾ ದಾರಿ ತಪ್ಪಿಸುವುದು: ಸತ್ಯವಲ್ಲದ, ಉತ್ಪ್ರೇಕ್ಷಿತವಾದ ಅಥವಾ ಅಭಿಪ್ರಾಯ-ಆಧಾರಿತವಾದ ಮತ್ತು ಎಳೆಯ ಪ್ರೇಕ್ಷಕರನ್ನು ಗೊಂದಲಕ್ಕೆ ಈಡುಮಾಡಬಹುದಾದ ಕಂಟೆಂಟ್. ಇದು “ಕೀವರ್ಡ್ ತುರುಕುವಿಕೆ”, ಅಥವಾ ಪುನರಾವರ್ತಿತ, ಮಾರ್ಪಡಿಸಿದ ಅಥವಾ ಉತ್ಪ್ರೇಕ್ಷಿತ ವಿಧಾನದಲ್ಲಿ ಮಕ್ಕಳಿಗೆ ಆಸಕ್ತಿಯಿರುವ ಜನಪ್ರಿಯ ಕೀವರ್ಡ್‌ಗಳನ್ನು ಬಳಸುವ ಅಭ್ಯಾಸವನ್ನು ಸಹ ಇದು ಒಳಗೊಂಡಿರಬಹುದು. ಅರ್ಥಪೂರ್ಣವಾಗಿರದ ರೀತಿಯಲ್ಲೂ ಸಹ ಕೀವರ್ಡ್‌ಗಳನ್ನು ಬಳಸಬಹುದು.
  • ಮಕ್ಕಳ ಪಾತ್ರಗಳ ವಿಚಿತ್ರ ಬಳಕೆ: ಜನಪ್ರಿಯ ಮಕ್ಕಳ ಪಾತ್ರಗಳನ್ನು (ಆ್ಯನಿಮೇಟ್ ಮಾಡಿರುವುದು ಅಥವಾ ಲೈವ್ ಆ್ಯಕ್ಷನ್) ಆಕ್ಷೇಪಾರ್ಹ ಸನ್ನಿವೇಶಗಳಿಗೀಡುಮಾಡುವ ಕಂಟೆಂಟ್.

ಚಾನಲ್‌ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ

ಮಕ್ಕಳು ಮತ್ತು ಕುಟುಂಬದ ಕಂಟೆಂಟ್‌ಗಾಗಿ ಇರುವ ಗುಣಮಟ್ಟದ ಸಿದ್ಧಾಂತಗಳು ನಿಮ್ಮ ಚಾನಲ್‌ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. ಅಧಿಕ ಗುಣಮಟ್ಟದ “ಮಕ್ಕಳಿಗಾಗಿ ರಚಿಸಲಾಗಿರುವ” ಕಂಟೆಂಟ್ ಅನ್ನು ಶಿಫಾರಸುಗಳಲ್ಲಿ ಉನ್ನತ ಸ್ಥಾನಕ್ಕೆ ಏರಿಸಲಾಗುತ್ತದೆ. YouTube Kids ಹಾಗೂ ಚಾನಲ್ ಹಾಗೂ ವೀಡಿಯೊ ಮಾನಿಟೈಸೇಶನ್‌ನಲ್ಲಿ ಸೇರ್ಪಡೆಗಾಗಿ ಅವು ನಿರ್ಧಾರಗಳಿಗೆ ಮಾರ್ಗದರ್ಶನ ಒದಗಿಸುತ್ತವೆ. ಒಂದು ವೇಳೆ ಯಾವುದೇ ಚಾನಲ್, ಕಡಿಮೆ ಗುಣಮಟ್ಟದ “ಮಕ್ಕಳಿಗಾಗಿ ರಚಿಸಲಾಗಿದೆ” ಕಂಟೆಂಟ್‌ನ ಮೇಲೆ ಹೆಚ್ಚಾಗಿ ಗಮನ ಕೇಂದ್ರೀಕರಿಸುತ್ತಿದ್ದರೆ, ಅದನ್ನು YouTube ಪಾಲುದಾರ ಕಾರ್ಯಕ್ರಮದಿಂದ ಅಮಾನತುಗೊಳಿಸಬಹುದು. ಪ್ರತ್ಯೇಕ ವೀಡಿಯೊ ಈ ಗುಣಮಟ್ಟದ ಸಿದ್ಧಾಂತಗಳನ್ನು ಉಲ್ಲಂಘಿಸುತ್ತಿದೆ ಎಂದು ಕಂಡುಬಂದರೆ, ಅದನ್ನು ಸೀಮಿತಗೊಳಿಸಬಹುದು ಅಥವಾ ಆ್ಯಡ್‌ಗಳನ್ನು ಪಡೆಯದಿರಬಹುದು.

YouTube ನಲ್ಲಿ ಮಕ್ಕಳು ಮತ್ತು ಕುಟುಂಬಗಳಿಗಾಗಿ ಉತ್ಕೃಷ್ಟವಾದ ಮತ್ತು ಪ್ರೇರೇಪಿಸುವ ಕಂಟೆಂಟ್ ಅನ್ನು ರಚಿಸಲು ನಿಮ್ಮಲ್ಲಿ ಪ್ರತಿಯೊಬ್ಬರೂ ಸಹ ಸಹಾಯ ಮಾಡುವಿರೆಂದು ನಿರೀಕ್ಷಿಸುತ್ತೇವೆ.

ಗಮನಿಸಿ: ಮಕ್ಕಳಿಗಾಗಿ ಮತ್ತು ಕುಟುಂಬಕ್ಕೆ ರಚಿಸುವ ಕಂಟೆಂಟ್‌ನ ಈ ಗುಣಮಟ್ಟದ ಸಿದ್ಧಾಂತಗಳು, ಲಾಂಗ್-ಫಾರ್ಮ್ ವೀಡಿಯೊಗಳು ಹಾಗೂ YouTube Shorts ಗೆ ಅನ್ವಯಿಸುತ್ತವೆ ಎಂಬುದನ್ನು ನೆನಪಿಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11429314471320354918
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false