ಕ್ಲೈಮ್ ಮಾಡಲಾದ ವೀಡಿಯೊಗಳನ್ನು ಹುಡುಕಿ ಮತ್ತು ನಿರ್ವಹಿಸಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ನಿಮ್ಮ ಸ್ವತ್ತಿನ ಉಲ್ಲೇಖಕ್ಕೆ ಹೊಂದಾಣಿಕೆಯಾಗುವ ವೀಡಿಯೊವನ್ನು Content ID ಪತ್ತೆ ಮಾಡಿದಾಗ, ಒಂದು ಕ್ಲೈಮ್ ರಚನೆಯಾಗುತ್ತದೆ. ಕ್ಲೈಮ್ ಮಾಡಿದ ವೀಡಿಯೊ ಎಂದರೆ ಒಂದಕ್ಕಿಂತ ಹೆಚ್ಚು ಕ್ಲೈಮ್‌ಗಳನ್ನು ಹೊಂದಿರುವ ವೀಡಿಯೊ ಆಗಿದೆ.

Studio ಕಂಟೆಂಟ್ ಮ್ಯಾನೇಜರ್‌ನಲ್ಲಿ, ನಿಮ್ಮ ಕ್ಲೈಮ್ ಮಾಡಲಾದ ವೀಡಿಯೊಗಳ ಪಟ್ಟಿಯನ್ನು ನೋಡಬಹುದು ಮತ್ತು ನಿರ್ದಿಷ್ಟ ವೀಡಿಯೊಗಳನ್ನು ಹುಡುಕಲು ಪಟ್ಟಿಯನ್ನು ಫಿಲ್ಟರ್ ಮಾಡಬಹುದು. ನಿಮ್ಮ ಕ್ಲೈಮ್ ಮಾಡಲಾದ ವೀಡಿಯೊಗಳನ್ನು ನಿರ್ವಹಿಸಲು, ಅವುಗಳನ್ನು ಪ್ರತ್ಯೇಕವಾಗಿ ಅಥವಾ ಒಟ್ಟಾರೆಯಾಗಿ ಅಪ್‌ಡೇಟ್ ಮಾಡಬಹುದು, ಅವುಗಳ ಮೇಲಿನ ಕ್ಲೈಮ್‌ಗಳನ್ನು ನಿರ್ವಹಿಸಬಹುದು ಮತ್ತು ಅವುಗಳ ಕುರಿತಾದ ಡೇಟಾವನ್ನು ಎಕ್ಸ್‌ಪೋರ್ಟ್ ಮಾಡಬಹುದು.

ಕ್ಲೈಮ್ ಮಾಡಲಾದ ವೀಡಿಯೊಗಳನ್ನು ಹುಡುಕಿ

ನಿಮ್ಮ ಕ್ಲೈಮ್ ಮಾಡಲಾದ ವೀಡಿಯೊಗಳ ಪಟ್ಟಿಯನ್ನು ಅವುಗಳ ಮೂಲ ಮತ್ತು ವ್ಯಾಪ್ತಿಯ ಪ್ರಕಾರವಾಗಿ ವಿಭಾಗಿಸಬಹುದು, ನಂತರ ನೀವು ಹುಡುಕುತ್ತಿರುವ ಕ್ಲೈಮ್ ಮಾಡಲಾದ ವೀಡಿಯೊಗಳನ್ನು ಹುಡುಕಲು ನಿಮ್ಮ ಆಯ್ಕೆಯ ಫಿಲ್ಟರ್‌ಗಳನ್ನು ಅನ್ವಯಿಸಬಹುದು. ಕ್ಲೈಮ್ ಮಾಡಲಾದ ವೀಡಿಯೊಗಳನ್ನು ಹುಡುಕಲು:

  1. Studio ಕಂಟೆಂಟ್ ಮ್ಯಾನೇಜರ್ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಕ್ಲೈಮ್ ಮಾಡಲಾದ ವೀಡಿಯೊಗಳು ಆಯ್ಕೆಮಾಡಿ.
  3. ಫಿಲ್ಟರ್ ಬಾರ್‌ನಲ್ಲಿ , ಕ್ಲೈಮ್ ಮಾಡಲಾದ ವೀಡಿಯೊಗಳ ಮಾಹಿತಿಯ ಮೂಲವನ್ನು ಆಯ್ಕೆ ಮಾಡಲು ಮೂಲ ಕ್ಲಿಕ್ ಮಾಡಿ:
    • ಇತರ ಪಾರ್ಟಿಗಳ ವೀಡಿಯೊಗಳು: ನೀವು ಕ್ಲೈಮ್ ಮಾಡಿರುವ ವೀಡಿಯೊಗಳು
    • ಪಾಲುದಾರರು ಒದಗಿಸಿರುವ ವೀಡಿಯೊಗಳು: ಕಂಟೆಂಟ್ ಮಾಲೀಕರಿಗೆ ಲಿಂಕ್ ಆಗಿರುವ ಚಾನಲ್‌ಗಳ ಮೂಲಕ ಅಪ್‌ಲೋಡ್ ಮಾಡಿದ ವೀಡಿಯೊಗಳು
  4. ಫಿಲ್ಟರ್ ಬಾರ್‌ನಲ್ಲಿ , ವ್ಯಾಪ್ತಿ  ಕ್ಲಿಕ್ ಮಾಡಿ ಮತ್ತು ಫಿಲ್ಟರ್ ವ್ಯಾಪ್ತಿಯನ್ನು ಬದಲಾಯಿಸಿ:
    • ಎಲ್ಲಾ ಫಿಲ್ಟರ್‌ಗಳಿಗೆ ಹೊಂದಾಣಿಕೆಯಾಗುವ ವೀಡಿಯೊ: ನೀವು ಹಂತ 5 ರಲ್ಲಿ ಆಯ್ಕೆ ಮಾಡುವ ಎಲ್ಲಾ ಫಿಲ್ಟರ್‌ಗಳಿಗೆ ಹೊಂದಾಣಿಕೆಯಾಗುವ ಯಾವುದೇ ಕ್ಲೈಮ್ ಮಾಡಲಾದ ವೀಡಿಯೊವನ್ನು ತೋರಿಸುತ್ತದೆ.
    • ಎಲ್ಲಾ ಫಿಲ್ಟರ್‌ಗಳಿಗೆ ಹೊಂದಾಣಿಕೆಯಾಗುವ ಕ್ಲೈಮ್: ನೀವು ಹಂತ 5 ರಲ್ಲಿ ಆಯ್ಕೆ ಮಾಡುವ ಎಲ್ಲಾ ಫಿಲ್ಟರ್‌ಗಳಿಗೆ ಹೊಂದಾಣಿಕೆಯಾಗುವ ಯಾವುದೇ ಕ್ಲೈಮ್ ಅನ್ನು ತೋರಿಸುತ್ತದೆ.
  5. ಫಿಲ್ಟರ್ ಬಾರ್  ಕ್ಲಿಕ್ ಮಾಡಿ ಮತ್ತು ಒಂದಕ್ಕಿಂತ ಹೆಚ್ಚು ಫಿಲ್ಟರ್‌ಗಳನ್ನು ಆಯ್ಕೆಮಾಡಿ, ಉದಾಹರಣೆಗೆ:
    • ಕ್ಲೈಮ್ ಸ್ಥಿತಿ: ಕ್ಲೈಮ್ ಸ್ಥಿತಿಗಳು ಕುರಿತು ಇನ್ನಷ್ಟು ತಿಳಿಯಿರಿ.
    • ಕ್ಲೈಮ್ ಪ್ರಕಾರ: ಕ್ಲೈಮ್‌ಗಳು ಆಡಿಯೋ, ವಿಷುವಲ್ ಅಥವಾ ಆಡಿಯೋ ವಿಷುವಲ್‌ಗೆ ಸಂಬಂಧಿಸಿದೆಯೇ ಎಂಬುದರ ಪ್ರಕಾರವಾಗಿ ಫಿಲ್ಟರ್ ಮಾಡಲು.
    • ಇತ್ತೀಚೆಗೆ ರಚಿಸಿದ ಕ್ಲೈಮ್/ಇತ್ತೀಚೆಗೆ ಅಪ್‌ಡೇಟ್ ಮಾಡಿದ ಕ್ಲೈಮ್: ಸಂಬಂಧಪಟ್ಟ ವೀಡಿಯೊದಲ್ಲಿ ನಿಮ್ಮ ಕೊನೆಯ ಕ್ಲೈಮ್ ಅನ್ನು ರಚಿಸಿದ ಅಥವಾ ಅಪ್‌ಡೇಟ್ ಮಾಡಿದ ದಿನಾಂಕದ ಪ್ರಕಾರವಾಗಿ ಫಿಲ್ಟರ್ ಮಾಡಲು.
    • ನನ್ನ ಕ್ಲೈಮ್‌ಗಳ ಸಂಖ್ಯೆ / ನನ್ನ ಸಕ್ರಿಯ ಕ್ಲೈಮ್‌ಗಳ ಸಂಖ್ಯೆ / ನನ್ನ ನಿಷ್ಕ್ರಿಯ ಕ್ಲೈಮ್‌ಗಳ ಸಂಖ್ಯೆ: ಒಂದಕ್ಕಿಂತ ಹೆಚ್ಚು ಕ್ಲೈಮ್‌ಗಳನ್ನು ಹೊಂದಿರುವ ವೀಡಿಯೊಗಳನ್ನು ಹುಡುಕಲು.
    • ಪ್ರಕಟಣೆ ದಿನಾಂಕ: ಕ್ಲೈಮ್ ಮಾಡಲಾದ ವೀಡಿಯೊ ಪ್ರಕಟಣೆಯ ದಿನಾಂಕದ ಪ್ರಕಾರವಾಗಿ ಫಿಲ್ಟರ್ ಮಾಡಲು.
  6. ಮೌಲ್ಯವನ್ನು ನಮೂದಿಸಿ ನಂತರ ಅನ್ವಯಿಸಿ.
ಫಿಲ್ಟರ್ ವ್ಯಾಪ್ತಿಯ ಕುರಿತು ಹೆಚ್ಚಿನ ಮಾಹಿತಿ

ಯಾವ ಫಿಲ್ಟರ್ ವ್ಯಾಪ್ತಿಯನ್ನು ಆಯ್ಕೆ ಮಾಡಲಾಗಿದೆ ಮತ್ತು ಯಾವ ಇತರ ಫಿಲ್ಟರ್‌ಗಳನ್ನು ಅನ್ವಯಿಸಲಾಗಿದೆ ಎಂಬುದರ ಆಧಾರದ ಮೇಲೆ ಕ್ಲೈಮ್ ಮಾಡಲಾದ ವೀಡಿಯೊಗಳು ಕಾಣಿಸಿಕೊಳ್ಳುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಕೆಳಗಿನ ಉದಾಹರಣೆಗಳು ಪ್ರದರ್ಶಿಸುತ್ತವೆ.

ಉದಾಹರಣೆ 1: ಎಲ್ಲಾ ಫಿಲ್ಟರ್‌ಗಳಿಗೆ ಹೊಂದಾಣಿಕೆಯಾಗುವ ವೀಡಿಯೊ

ಆಯ್ಕೆ ಮಾಡಿದ ಫಿಲ್ಟರ್‌ಗಳು:

 ವ್ಯಾಪ್ತಿ: ಎಲ್ಲಾ ಫಿಲ್ಟರ್‌ಗಳಿಗೆ ಹೊಂದಾಣಿಕೆಯಾಗುವ ವೀಡಿಯೊ

 ಕ್ಲೈಮ್ ಸ್ಥಿತಿ: ಸಕ್ರಿಯ ಕ್ಲೈಮ್

 ಮೂಲ: ಆಡಿಯೋ ಹೊಂದಾಣಿಕೆ

  ಕ್ಲೈಮ್ ಸ್ಥಿತಿ ಮೂಲ ಈ ಕ್ಲೈಮ್ ಮಾಡಲಾದ ವೀಡಿಯೊ ಕಾಣಿಸುತ್ತದೆಯೇ?
ಕ್ಲೈಮ್ ಮಾಡಲಾದ ವೀಡಿಯೊ A ಕ್ಲೈಮ್ 1 ಸಕ್ರಿಯ ಆಡಿಯೋ ಹೊಂದಾಣಿಕೆ

ಹೌದು, ಏಕೆಂದರೆ ಕ್ಲೈಮ್ 1 ರಲ್ಲಿ ಎಲ್ಲಾ ಫಿಲ್ಟರ್‌ಗಳು ಹೊಂದಾಣಿಕೆಯಾಗಿವೆ (ಕ್ಲೈಮ್ 1, ಸಕ್ರಿಯ ಮತ್ತು ಆಡಿಯೋ ಹೊಂದಾಣಿಕೆ ಎರಡೂ ಆಗಿದೆ).

ಕ್ಲೈಮ್ 2 ನಿಷ್ಕ್ರಿಯ ವೀಡಿಯೊ ಹೊಂದಾಣಿಕೆ
ಕ್ಲೈಮ್ 3 ಬಾಕಿಯಿದೆ ವೀಡಿಯೊ ಹೊಂದಾಣಿಕೆ
ಕ್ಲೈಮ್ ಮಾಡಲಾದ ವೀಡಿಯೊ B ಕ್ಲೈಮ್ 1 ಸಕ್ರಿಯ ವೀಡಿಯೊ ಹೊಂದಾಣಿಕೆ

ಹೌದು, ಏಕೆಂದರೆ ಕ್ಲೈಮ್ 1 & 2 ರ ನಡುವೆ ಎಲ್ಲಾ ಫಿಲ್ಟರ್‌ಗಳು ಹೊಂದಾಣಿಕೆಯಾಗಿವೆ (ಕ್ಲೈಮ್ 1 ಸಕ್ರಿಯ ಆಗಿದ್ದರೆ, ಕ್ಲೈಮ್ 2 ಆಡಿಯೋ ಹೊಂದಾಣಿಕೆ ಆಗಿದೆ).

ಕ್ಲೈಮ್ 2 ನಿಷ್ಕ್ರಿಯ ಆಡಿಯೋ ಹೊಂದಾಣಿಕೆ
ಕ್ಲೈಮ್ 3 ಬಾಕಿಯಿದೆ ವೀಡಿಯೊ ಹೊಂದಾಣಿಕೆ
ಕ್ಲೈಮ್ ಮಾಡಲಾದ ವೀಡಿಯೊ C ಕ್ಲೈಮ್ 1 ಬಾಕಿಯಿದೆ ವೀಡಿಯೊ ಹೊಂದಾಣಿಕೆ

ಇಲ್ಲ, ಏಕೆಂದರೆ ಕೇವಲ ಒಂದು ಫಿಲ್ಟರ್ ಮಾತ್ರ ಹೊಂದಾಣಿಕೆಯಾಗಿದೆ (ಕ್ಲೈಮ್ 2 ಆಡಿಯೋ ಹೊಂದಾಣಿಕೆ ಆಗಿದೆ, ಬೇರೆ ಯಾವುದೇ ಕ್ಲೈಮ್‌ಗಳು ಸಕ್ರಿಯ ಸ್ಥಿತಿಯಲ್ಲಿಲ್ಲ)

ಕ್ಲೈಮ್ 2 ನಿಷ್ಕ್ರಿಯ ಆಡಿಯೋ ಹೊಂದಾಣಿಕೆ
ಕ್ಲೈಮ್ 3 ನಿಷ್ಕ್ರಿಯ ವೀಡಿಯೊ ಹೊಂದಾಣಿಕೆ

 

ಉದಾಹರಣೆ 2: ಎಲ್ಲಾ ಫಿಲ್ಟರ್‌ಗಳಿಗೆ ಹೊಂದಾಣಿಕೆಯಾಗುವ ಕ್ಲೈಮ್

ಆಯ್ಕೆ ಮಾಡಿದ ಫಿಲ್ಟರ್‌ಗಳು:

 ವ್ಯಾಪ್ತಿ: ಎಲ್ಲಾ ಫಿಲ್ಟರ್‌ಗಳಿಗೆ ಹೊಂದಾಣಿಕೆಯಾಗುವ ಕ್ಲೈಮ್

 ಕ್ಲೈಮ್ ಸ್ಥಿತಿ: ಸಕ್ರಿಯ ಕ್ಲೈಮ್

 ಮೂಲ: ಆಡಿಯೋ ಹೊಂದಾಣಿಕೆ

  ಕ್ಲೈಮ್ ಸ್ಥಿತಿ ಮೂಲ ಈ ಕ್ಲೈಮ್ ಮಾಡಲಾದ ವೀಡಿಯೊ ಕಾಣಿಸುತ್ತದೆಯೇ?
ಕ್ಲೈಮ್ ಮಾಡಲಾದ ವೀಡಿಯೊ A ಕ್ಲೈಮ್ 1 ಸಕ್ರಿಯ ಆಡಿಯೋ ಹೊಂದಾಣಿಕೆ

ಹೌದು, ಏಕೆಂದರೆ ಕ್ಲೈಮ್ 1 ರಲ್ಲಿ ಎಲ್ಲಾ ಫಿಲ್ಟರ್‌ಗಳು ಹೊಂದಾಣಿಕೆಯಾಗಿವೆ (ಕ್ಲೈಮ್ 1, ಸಕ್ರಿಯ ಮತ್ತು ಆಡಿಯೋ ಹೊಂದಾಣಿಕೆ ಎರಡೂ ಆಗಿದೆ).

ಕ್ಲೈಮ್ 2 ನಿಷ್ಕ್ರಿಯ ವೀಡಿಯೊ ಹೊಂದಾಣಿಕೆ
ಕ್ಲೈಮ್ 3 ಬಾಕಿಯಿದೆ ವೀಡಿಯೊ ಹೊಂದಾಣಿಕೆ
ಕ್ಲೈಮ್ ಮಾಡಲಾದ ವೀಡಿಯೊ B ಕ್ಲೈಮ್ 1 ಸಕ್ರಿಯ ವೀಡಿಯೊ ಹೊಂದಾಣಿಕೆ ಇಲ್ಲ, ಏಕೆಂದರೆ ಎಲ್ಲಾ ಫಿಲ್ಟರ್‌ಗಳು ಯಾವುದೇ ಏಕೈಕ ಕ್ಲೈಮ್‌ನಲ್ಲಿಯೂ ಹೊಂದಾಣಿಕೆಯಾಗಿಲ್ಲ.
ಕ್ಲೈಮ್ 2 ನಿಷ್ಕ್ರಿಯ ಆಡಿಯೋ ಹೊಂದಾಣಿಕೆ
ಕ್ಲೈಮ್ 3 ಬಾಕಿಯಿದೆ ವೀಡಿಯೊ ಹೊಂದಾಣಿಕೆ
ಕ್ಲೈಮ್ ಮಾಡಲಾದ ವೀಡಿಯೊ C ಕ್ಲೈಮ್ 1 ಬಾಕಿಯಿದೆ ವೀಡಿಯೊ ಹೊಂದಾಣಿಕೆ ಇಲ್ಲ, ಏಕೆಂದರೆ ಎಲ್ಲಾ ಫಿಲ್ಟರ್‌ಗಳು ಯಾವುದೇ ಏಕೈಕ ಕ್ಲೈಮ್‌ನಲ್ಲಿಯೂ ಹೊಂದಾಣಿಕೆಯಾಗಿಲ್ಲ.
ಕ್ಲೈಮ್ 2 ನಿಷ್ಕ್ರಿಯ ಆಡಿಯೋ ಹೊಂದಾಣಿಕೆ
ಕ್ಲೈಮ್ 3 ನಿಷ್ಕ್ರಿಯ ವೀಡಿಯೊ ಹೊಂದಾಣಿಕೆ

ಕ್ಲೈಮ್ ಮಾಡಲಾದ ವೀಡಿಯೊಗಳನ್ನು ನಿರ್ವಹಿಸಿ

ನಿಮ್ಮ ಕ್ಲೈಮ್ ಮಾಡಲಾದ ವೀಡಿಯೊಗಳನ್ನು ನಿರ್ವಹಿಸಲು, ಅವುಗಳನ್ನು ಪ್ರತ್ಯೇಕವಾಗಿ ಅಥವಾ ಒಟ್ಟಾರೆಯಾಗಿ ಅಪ್‌ಡೇಟ್ ಮಾಡಬಹುದು, ಅವುಗಳ ಮೇಲಿನ ಕ್ಲೈಮ್‌ಗಳನ್ನು ನಿರ್ವಹಿಸಬಹುದು ಮತ್ತು ಅವುಗಳ ಕುರಿತಾದ ಡೇಟಾವನ್ನು ಎಕ್ಸ್‌ಪೋರ್ಟ್ ಮಾಡಬಹುದು.

ಕ್ಲೈಮ್ ಮಾಡಲಾದ ವೀಡಿಯೊಗಳನ್ನು ಅಪ್‌ಡೇಟ್ ಮಾಡಿ
ಕ್ಲೈಮ್ ಪ್ರಕಾರವನ್ನು ಎಡಿಟ್ ಮಾಡಲು, ಅನ್ವಯಿಕ ನೀತಿಯನ್ನು ಅಪ್‌ಡೇಟ್ ಮಾಡಿ ಅಥವಾ ಒಂದಕ್ಕಿಂತ ಹೆಚ್ಚು ಕ್ಲೈಮ್ ಮಾಡಲಾದ ವೀಡಿಯೊಗಳ ಮೇಲಿನ ಕ್ಲೈಮ್‌ಗಳನ್ನು ಬಿಡುಗಡೆ ಮಾಡಿ:
  1. ನೀವು ಆಸಕ್ತಿ ಹೊಂದಿರುವ ಕ್ಲೈಮ್ ಮಾಡಲಾದ ವೀಡಿಯೊಗಳನ್ನು ಹುಡುಕಲು ಮೇಲಿನ ಹಂತಗಳನ್ನು ಅನುಸರಿಸಿ.
  2. ನೀವು ಅಪ್‌ಲೋಡ್ ಮಾಡಲು ಬಯಸುವ ಕ್ಲೈಮ್ ಮಾಡಲಾದ ವೀಡಿಯೊಗಳ ಪಕ್ಕದಲ್ಲಿ ಕಾಣಿಸುವ ಒಂದಕ್ಕಿಂತ ಹೆಚ್ಚು ಚೆಕ್‌ಬಾಕ್ಸ್‌ಗಳನ್ನು ಕ್ಲಿಕ್ ಮಾಡಿ.
    • ವೈಯಕ್ತಿಕವಾಗಿ ಕ್ಲೈಮ್ ಮಾಡಲಾದ ವೀಡಿಯೊವನ್ನು ಆಯ್ಕೆಮಾಡಲು, ಎಡಭಾಗದ ಕಾಲಮ್‌ನಲ್ಲಿರುವ ಅವುಗಳ ಬಾಕ್ಸ್‌ಗಳನ್ನು ಗುರುತು ಹಾಕಿ.
    • ಒಂದೇ ಪುಟದಲ್ಲಿ ಎಲ್ಲಾ ಕ್ಲೈಮ್ ಮಾಡಲಾದ ವೀಡಿಯೊಗಳನ್ನು ಆಯ್ಕೆಮಾಡಲು, ಮೇಲ್ಭಾಗದಲ್ಲಿ "ಎಲ್ಲಾ ಆಯ್ಕೆಮಾಡಿ" ಬಾಕ್ಸ್ ಗುರುತು ಹಾಕಿ.
    • ಎಲ್ಲಾ ಪುಟಗಳಲ್ಲಿ ಎಲ್ಲಾ ಕ್ಲೈಮ್ ಮಾಡಲಾದ ವೀಡಿಯೊಗಳನ್ನು ಆಯ್ಕೆಮಾಡಲು, ಮೇಲ್ಭಾಗದಲ್ಲಿರುವ "ಎಲ್ಲಾ ಆಯ್ಕೆಮಾಡಿ" ಬಾಕ್ಸ್ ಗುರುತು ಹಾಕಿನಂತರ ಎಲ್ಲಾ ಹೊಂದಾಣಿಕೆಯನ್ನು ಆಯ್ಕೆಮಾಡಿ.
  3. ಮೇಲ್ಭಾಗದ ಬ್ಯಾನರ್‌ನಲ್ಲಿ, ಎಡಿಟ್ ಮಾಡಿ ಕ್ಲಿಕ್ ಮಾಡಿ ಮತ್ತು ಒಂದು ಕ್ರಿಯೆಯನ್ನು ಆಯ್ಕೆಮಾಡಿ:
    • ಕ್ಲೈಮ್ ಪ್ರಕಾರ: ನೀವು ಆಡಿಯೋ ಕಂಟೆಂಟ್ (ಆಡಿಯೋ), ವೀಡಿಯೊ ಕಂಟೆಂಟ್ (ವಿಷುವಲ್) ಅಥವಾ ಎರಡನ್ನೂ (ಆಡಿಯೋ ವಿಷುವಲ್) ಕ್ಲೈಮ್ ಮಾಡುತ್ತೀರಾ ಎಂಬುದನ್ನು ನಿರ್ದಿಷ್ಟಪಡಿಸುತ್ತದೆ.
    • ಕ್ಲೈಮ್ ಮಾಡಲಾದ ವೀಡಿಯೊ ಕುರಿತಾದ ನೀತಿಯನ್ನು ಅಪ್‌ಡೇಟ್ ಮಾಡಿ: ಕ್ಲೈಮ್ ಮಾಡಲಾದ ವೀಡಿಯೊಗೆ ಅನ್ವಯಿಸಿರುವ ನೀತಿಯನ್ನು ಅಪ್‌ಡೇಟ್ ಮಾಡುತ್ತದೆ.
    • ಕ್ಲೈಮ್‌ಗಳನ್ನು ಬಿಡುಗಡೆ ಮಾಡಿ: ಆಯ್ಕೆ ಮಾಡಿದ ಕ್ಲೈಮ್‌ಗಳನ್ನು ಬಿಡುಗಡೆ ಮಾಡುತ್ತದೆ.
  4. ನಿಮ್ಮ ಆಯ್ಕೆಮಾಡಿದ ಕ್ರಿಯೆಗಾಗಿ ಸೆಟ್ಟಿಂಗ್ ಆಯ್ಕೆಮಾಡಿ.
    • ನೀವು ಕ್ಲೈಮ್ ಪ್ರಕಾರ ಅಥವಾ ಕ್ಲೈಮ್ ಮಾಡಲಾದ ವೀಡಿಯೊ ಕುರಿತಾದ ನೀತಿಯನ್ನು ಅಪ್‌ಡೇಟ್ ಮಾಡಿ ಆಯ್ಕೆ ಮಾಡಿದ್ದರೆ, ಇವೆರಡರಲ್ಲಿ ಯಾವುದಾದರೂ ಆಯ್ಕೆಮಾಡಿ:
      • ಆಯ್ಕೆ ಮಾಡಿದ ವೀಡಿಯೊಗಳಲ್ಲಿ ನಿಮ್ಮ ಎಲ್ಲಾ ಕ್ಲೈಮ್‌ಗಳನ್ನು ಅಪ್‌ಡೇಟ್ ಮಾಡಿ: ವೀಡಿಯೊಗಳಲ್ಲಿ ಹಲವಾರು ಕ್ಲೈಮ್‌ಗಳಿದ್ದರೆ, ನೀವು ಆಯ್ಕೆಮಾಡಿರುವ ವೀಡಿಯೊಗಳಿಗೆ ನಿಮ್ಮ ಆಯ್ಕೆ ಮಾಡಿದ ಕ್ರಿಯೆಯನ್ನು ಅನ್ವಯಿಸಲಾಗುತ್ತದೆ.
      • ಆಯ್ಕೆ ಮಾಡಿದ ವೀಡಿಯೊಗಳಲ್ಲಿ, ಫಿಲ್ಟರ್‌ಗಳಿಗೆ ಹೊಂದಾಣಿಕೆಯಾಗುವ ನಿಮ್ಮ ಕ್ಲೈಮ್‌ಗಳನ್ನು ಮಾತ್ರ ಅಪ್‌ಡೇಟ್ ಮಾಡಿ: ನಿಮ್ಮ ಕ್ಲೈಮ್ ಮಾಡಲಾದ ವೀಡಿಯೊಗಳ ಪಟ್ಟಿಗೆ ನೀವು ಹೆಚ್ಚುವರಿ ಫಿಲ್ಟರ್‌ಗಳನ್ನು ಅನ್ವಯಿಸಿದ್ದರೆ ಮಾತ್ರ ಲಭ್ಯವಿರುತ್ತದೆ.
        • ಉದಾಹರಣೆ: ನೀವು ಕ್ಲೈಮ್ ಮಾಡಿದ ವೀಡಿಯೊಗಳಲ್ಲಿ ಹಸ್ತಚಾಲಿತ ಕ್ಲೈಮ್‌ಗಳನ್ನು ಮಾತ್ರ ಅಪ್‌ಡೇಟ್ ಮಾಡಲು ಬಯಸಿದರೆ, ಫಿಲ್ಟರ್ ಅನ್ವಯಿಸಿ ಮೂಲ ನಂತರ ಹಸ್ತಚಾಲಿತ ಕ್ಲೈಮ್. ನೀವು ಆಯ್ಕೆ ಮಾಡಿದ ವೀಡಿಯೊಗಳಲ್ಲಿ, ಫಿಲ್ಟರ್‌ಗಳಿಗೆ ಹೊಂದಾಣಿಕೆಯಾಗುವ ನಿಮ್ಮ ಕ್ಲೈಮ್‌ಗಳನ್ನು ಮಾತ್ರ ಅಪ್‌ಡೇಟ್ ಮಾಡಿ ಸೆಟ್ಟಿಂಗ್ ಅನ್ನು ಆಯ್ಕೆ ಮಾಡಿದ್ದರೆ, ನೀವು ಆಯ್ಕೆ ಮಾಡಿದ ವೀಡಿಯೊಗಳಲ್ಲಿರುವ ಹಸ್ತಚಾಲಿತ ಕ್ಲೈಮ್‌ಗಳನ್ನು ಮಾತ್ರ ಅಪ್‌ಡೇಟ್ ಮಾಡಲಾಗುತ್ತದೆ.
    • ನೀವು ಕ್ಲೈಮ್‌ಗಳನ್ನು ಬಿಡುಗಡೆ ಮಾಡಿ ಆಯ್ಕೆಮಾಡಿದ್ದರೆ, ಇವೆರಡರಲ್ಲಿ ಯಾವುದಾದರೂ ಆಯ್ಕೆಮಾಡಿ:
      • ಆಯ್ಕೆ ಮಾಡಿದ ವೀಡಿಯೊಗಳಲ್ಲಿ ನಿಮ್ಮ ಕ್ಲೈಮ್‌ಗಳನ್ನು ಬಿಡುಗಡೆ ಮಾಡಿ: ವೀಡಿಯೊಗಳಲ್ಲಿ ಹಲವಾರು ಕ್ಲೈಮ್‌ಗಳಿದ್ದರೆ, ನೀವು ಆಯ್ಕೆ ಮಾಡಿರುವ ಎಲ್ಲಾ ವೀಡಿಯೊಗಳಲ್ಲಿನ ಎಲ್ಲಾ ಕ್ಲೈಮ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ.
      • ಆಯ್ಕೆ ಮಾಡಿದ ವೀಡಿಯೊಗಳಲ್ಲಿ, ಫಿಲ್ಟರ್‌ಗಳಿಗೆ ಹೊಂದಾಣಿಕೆಯಾಗುವ ನಿಮ್ಮ ಕ್ಲೈಮ್‌ಗಳನ್ನು ಮಾತ್ರ ಬಿಡುಗಡೆ ಮಾಡಿ: ನಿಮ್ಮ ಕ್ಲೈಮ್ ಮಾಡಲಾದ ವೀಡಿಯೊಗಳ ಪಟ್ಟಿಗೆ ನೀವು ಹೆಚ್ಚುವರಿ ಫಿಲ್ಟರ್‌ಗಳನ್ನು ಅನ್ವಯಿಸಿದ್ದರೆ ಮಾತ್ರ ಲಭ್ಯವಿರುತ್ತದೆ.
        • ಉದಾಹರಣೆ: ನೀವು ಕ್ಲೈಮ್ ಮಾಡಿದ ವೀಡಿಯೊಗಳಲ್ಲಿ ಹಸ್ತಚಾಲಿತ ಕ್ಲೈಮ್‌ಗಳನ್ನು ಮಾತ್ರ ಬಿಡುಗಡೆ ಮಾಡಲು ಬಯಸಿದರೆ, ಫಿಲ್ಟರ್ ಅನ್ವಯಿಸಿ ಮೂಲ ನಂತರ ಹಸ್ತಚಾಲಿತ ಕ್ಲೈಮ್. ನೀವು ಆಯ್ಕೆ ಮಾಡಿದ ವೀಡಿಯೊಗಳಲ್ಲಿ, ಫಿಲ್ಟರ್‌ಗಳಿಗೆ ಹೊಂದಾಣಿಕೆಯಾಗುವ ನಿಮ್ಮ ಕ್ಲೈಮ್‌ಗಳನ್ನು ಮಾತ್ರ ಬಿಡುಗಡೆ ಮಾಡಿ ಸೆಟ್ಟಿಂಗ್ ಅನ್ನು ಆಯ್ಕೆ ಮಾಡಿದ್ದರೆ, ನೀವು ಆಯ್ಕೆ ಮಾಡಿದ ವೀಡಿಯೊಗಳಲ್ಲಿರುವ ಹಸ್ತಚಾಲಿತ ಕ್ಲೈಮ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗುತ್ತದೆ.
  5. ಕ್ಲೈಮ್ ಮಾಡಲಾದ ವೀಡಿಯೊಗಳನ್ನು ಅಪ್‌ಡೇಟ್ ಮಾಡಿ ಕ್ಲಿಕ್ ಮಾಡಿ.
ಕ್ಲೈಮ್ ಮಾಡಲಾದ ವೀಡಿಯೊಗಳಲ್ಲಿನ ಕ್ಲೈಮ್‌ಗಳನ್ನು ನಿರ್ವಹಿಸಿ
  1. ನೀವು ಆಸಕ್ತಿ ಹೊಂದಿರುವ ಕ್ಲೈಮ್ ಮಾಡಲಾದ ವೀಡಿಯೊಗಳನ್ನು ಹುಡುಕಲು ಮೇಲಿನ ಹಂತಗಳನ್ನು ಅನುಸರಿಸಿ.
  2. ಕ್ಲೈಮ್ ಮಾಡಲಾದ ವೀಡಿಯೊವನ್ನು ಕ್ಲಿಕ್ ಮಾಡಿ. ವಿವರಗಳ ಪುಟವು ತೆರೆದುಕೊಳ್ಳುತ್ತದೆ ಮತ್ತು ಕ್ಲೈಮ್ ಸ್ಥಿತಿಯ ಪ್ರಕಾರವಾಗಿ ಆಯೋಜಿಸಲಾಗಿರುವ, ಆ ವೀಡಿಯೊದ ಕ್ಲೈಮ್‌ಗಳ ಕುರಿತಾದ ಅವಲೋಕನವನ್ನು ತೋರಿಸುತ್ತದೆ.
    • ಗಮನಿಸಿ: ನೀವು ಹಿಂದಿನ ಚಟುವಟಿಕೆಯನ್ನು ನೋಡಲು ಇತಿಹಾಸ ಟ್ಯಾಬ್ ಅನ್ನು ಸಹ ಕ್ಲಿಕ್ ಮಾಡಬಹುದು.
  3. ವೀಡಿಯೊದಲ್ಲಿನ ಕ್ಲೈಮ್‌ಗಳ ಕುರಿತು ಇನ್ನಷ್ಟು ವಿವರಗಳನ್ನು ನೋಡಲು, ವೀಡಿಯೊದಲ್ಲಿನ ಕ್ಲೈಮ್‌ಗಳು ಅಡಿಯಲ್ಲಿ, ವಿವರಗಳು ಕ್ಲಿಕ್ ಮಾಡಿ.
  4. ಕ್ಲೈಮ್ ಸ್ಥಿತಿಯನ್ನು ಆಧರಿಸಿ, ಈ ಕೆಳಕಂಡ ಕ್ರಿಯೆಗಳು ಲಭ್ಯವಿರಬಹುದು:
    • ಕ್ಲೈಮ್ ಬಿಡುಗಡೆ ಮಾಡಿ: ವೀಡಿಯೊದಿಂದ ಒಂದು ಅಥವಾ ಹೆಚ್ಚಿನ ಕ್ಲೈಮ್‌ಗಳನ್ನು ಬಿಡುಗಡೆ ಮಾಡಲು, (#) ಕ್ಲೈಮ್‌ಗಳನ್ನು ಬಿಡುಗಡೆ ಮಾಡಿ ಆಯ್ಕೆಮಾಡಿ.
    • ಕ್ಲೈಮ್ ಬಿಡುಗಡೆ ಮಾಡಿ ಅಥವಾ ಹೊರತುಪಡಿಸಿ: ಕ್ಲೈಮ್ ಬಿಡುಗಡೆ ಮಾಡಿ ಪಕ್ಕದಲ್ಲಿರುವ ಬಾಣದ ಗುರುತನ್ನು ನಂತರ ಕ್ಲಿಕ್ ಮಾಡಿ. ಕ್ಲೈಮ್ ಬಿಡುಗಡೆ ಮಾಡಲು ಮತ್ತು ಕ್ಲೈಮ್ ಅನ್ನು ರಚಿಸಿದಂತಹ ಉಲ್ಲೇಖದ ಭಾಗವನ್ನು ಹೊರತುಪಡಿಸಲು, ಕ್ಲೈಮ್ ಬಿಡುಗಡೆ ಮಾಡಿ ಮತ್ತು ಹೊರತುಪಡಿಸಿ ಆಯ್ಕೆಮಾಡಿ.
    • ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಿ: ವೀಡಿಯೊವನ್ನು ತೆಗೆದುಹಾಕುವ ನಿಟ್ಟಿನಲ್ಲಿ YouTube ಗೆ ಕೃತಿಸ್ವಾಮ್ಯ ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಲು ಕ್ಲೈಮ್ ಮಾಡಲಾದ ವೀಡಿಯೊವನ್ನು ತೆಗೆದುಹಾಕಿ ಕ್ಲಿಕ್ ಮಾಡಿ.
    • ಕ್ಲೈಮ್ ನೀತಿಯನ್ನು ಬದಲಾಯಿಸಿ: ನೀತಿ ಟ್ಯಾಬ್ ಕ್ಲಿಕ್ ಮಾಡಿ, ನಂತರ ಕ್ಲೈಮ್ ಮಾಡಲಾದ ವೀಡಿಯೊ ನಿರ್ದಿಷ್ಟ ನೀತಿ ಕ್ಲಿಕ್ ಮಾಡಿ.
      • ಅಸ್ತಿತ್ವದಲ್ಲಿರುವ ನೀತಿಯನ್ನು ಸೆಟ್ ಮಾಡಲು, ಪಟ್ಟಿಯಿಂದ ನೀತಿಯನ್ನು ಆಯ್ಕೆಮಾಡಿ, ತದನಂತರ ಅನ್ವಯಿಸಿ ಕ್ಲಿಕ್ ಮಾಡಿ.
      • ಹೊಸ ನೀತಿಯನ್ನು ಸೆಟ್ ಮಾಡಲು, ಕಸ್ಟಮ್ ನೀತಿಯನ್ನು ಸೆಟ್ ಮಾಡಿ, ನಿಮ್ಮ ನೀತಿಯನ್ನು ರಚಿಸಿ ಕ್ಲಿಕ್ ಮಾಡಿ, ನಂತರ ಉಳಿಸಿ ನಂತರ ಅನ್ವಯಿಸಿ ಕ್ಲಿಕ್ ಮಾಡಿ.
    • ಕ್ಲೈಮ್ ಪುನಃ ತೆರೆಯಿರಿ: ಕೆಲವೊಮ್ಮೆ ನೀವು (#) ಕ್ಲೈಮ್‌ಗಳನ್ನು ಪುನಃ ಕ್ಲೈಮ್ ಮಾಡಿ ಕ್ಲಿಕ್ ಮಾಡುವ ಮೂಲಕ ನಿಷ್ಕ್ರಿಯ ಕ್ಲೈಮ್‌ಗಳನ್ನು ಪುನಃ ತೆರೆಯಬಹುದು. ಉದಾಹರಣೆಗೆ, ಕೆಲವು ಸಂದರ್ಭಗಳಲ್ಲಿ ಹಸ್ತಚಾಲಿತವಾಗಿ ಮುಚ್ಚಿದ ಕ್ಲೈಮ್‌ಗಳನ್ನು ಮತ್ತು ಅವಧಿ ಮೀರಿದ ಸಂಭಾವ್ಯ ಕ್ಲೈಮ್‌ಗಳನ್ನು ನೀವು ಪುನಃ ಕ್ಲೈಮ್ ಮಾಡಬಹುದು.
      • ಗಮನಿಸಿ: ವಿವಾದ ಪ್ರಕ್ರಿಯೆಯಲ್ಲಿ ಹಸ್ತಚಾಲಿತವಾಗಿ ಬಿಡುಗಡೆಯಾದ ಕ್ಲೈಮ್‌ಗಳನ್ನು ನೀವು ಪುನಃ ತೆರೆಯಲು ಸಾಧ್ಯವಿಲ್ಲ.

ಕ್ಲೈಮ್ ಸಮಸ್ಯೆಗಳ ಪರಿಶೀಲನೆ ಮತ್ತು ಕ್ರಮ ಕೈಗೊಳ್ಳುವುದರ ಕುರಿತು ಇನ್ನಷ್ಟು ತಿಳಿಯಿರಿ.

ಗಮನಿಸಿ: ಇತರ ಚಾನಲ್‌ಗಳ ಮೂಲಕ ಅಪ್‌ಲೋಡ್ ಮಾಡಲಾಗಿರುವ ವೀಡಿಯೊಗಳಿಗೆ ಸಂಬಂಧಿಸಿದ ವಿತರಣೆ ಸೆಟ್ಟಿಂಗ್ ಅನ್ನು ಬದಲಾಯಿಸಲು ಸಾಧ್ಯವಿಲ್ಲ. ನಿಮ್ಮ ಸ್ವಂತದ ವೀಡಿಯೊಗಳಿಗಾಗಿ ವೀಡಿಯೊ ವಿತರಣೆ ಸೆಟ್ಟಿಂಗ್ ಅನ್ನು ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿಯಿರಿ.
ಕ್ಲೈಮ್ ಮಾಡಲಾದ ವೀಡಿಯೊಗಳ ಕುರಿತಾದ ಡೇಟಾವನ್ನು ಎಕ್ಸ್‌ಪೋರ್ಟ್ ಮಾಡಿ

ನೀವು ಒಂದು ಬಾರಿಗೆ ಗರಿಷ್ಠ 1 ಮಿಲಿಯನ್ ಕ್ಲೈಮ್ ಮಾಡಿದ ವೀಡಿಯೊಗಳ ಡೇಟಾವನ್ನು ಎಕ್ಸ್‌ಪೋರ್ಟ್ ಮಾಡಬಹುದು. ಕ್ಲೈಮ್ ಮಾಡಲಾದ ವೀಡಿಯೊಗಳ ಡೇಟಾವನ್ನು ಒಳಗೊಂಡಿರುವ ಫೈಲ್ ಅನ್ನು ಎಕ್ಸ್‌ಪೋರ್ಟ್ ಮಾಡಲು:

  1. ನೀವು ಆಸಕ್ತಿ ಹೊಂದಿರುವ ಕ್ಲೈಮ್ ಮಾಡಲಾದ ವೀಡಿಯೊಗಳನ್ನು ಹುಡುಕಲು ಮೇಲಿನ ಹಂತಗಳನ್ನು ಅನುಸರಿಸಿ.
  2. ನೀವು ಡೇಟಾವನ್ನು ಎಕ್ಸ್‌ಪೋರ್ಟ್ ಮಾಡಲು ಬಯಸುವ ಕ್ಲೈಮ್ ಮಾಡಿದ ವೀಡಿಯೊಗಳ ಪಕ್ಕದಲ್ಲಿ ಕಾಣಿಸುವ ಒಂದು ಅಥವಾ ಹೆಚ್ಚಿನ ಚೆಕ್‌ಬಾಕ್ಸ್‌ಗಳನ್ನು ಗುರುತು ಹಾಕಿ.
    • ವೈಯಕ್ತಿಕವಾಗಿ ಕ್ಲೈಮ್ ಮಾಡಲಾದ ವೀಡಿಯೊವನ್ನು ಆಯ್ಕೆಮಾಡಲು, ಎಡಭಾಗದ ಕಾಲಮ್‌ನಲ್ಲಿರುವ ಅವುಗಳ ಬಾಕ್ಸ್‌ಗಳನ್ನು ಗುರುತು ಹಾಕಿ.
    • ಒಂದೇ ಪುಟದಲ್ಲಿ ಎಲ್ಲಾ ಕ್ಲೈಮ್ ಮಾಡಲಾದ ವೀಡಿಯೊಗಳನ್ನು ಆಯ್ಕೆಮಾಡಲು, ಮೇಲ್ಭಾಗದಲ್ಲಿ "ಎಲ್ಲಾ ಆಯ್ಕೆಮಾಡಿ" ಬಾಕ್ಸ್ ಗುರುತು ಹಾಕಿ.
    • ಎಲ್ಲಾ ಪುಟಗಳಲ್ಲಿ ಎಲ್ಲಾ ಕ್ಲೈಮ್ ಮಾಡಲಾದ ವೀಡಿಯೊಗಳನ್ನು ಆಯ್ಕೆಮಾಡಲು, ಮೇಲ್ಭಾಗದಲ್ಲಿರುವ "ಎಲ್ಲಾ ಆಯ್ಕೆಮಾಡಿ" ಬಾಕ್ಸ್ ಗುರುತು ಹಾಕಿನಂತರ ಎಲ್ಲಾ ಹೊಂದಾಣಿಕೆಯನ್ನು ಆಯ್ಕೆಮಾಡಿ.
  3. ಟಾಪ್ ಬ್ಯಾನರ್‌ನಲ್ಲಿ, ಎಕ್ಸ್‌ಪೋರ್ಟ್ ಕ್ಲಿಕ್ ಮಾಡಿ ಮತ್ತು ಈ ಆಯ್ಕೆಮಾಡಿ:
    • ಪ್ರತಿ ಸಾಲಿಗೆ ಒಂದು ಕ್ಲೈಮ್ ಮಾಡಿದ ವೀಡಿಯೊ ಇರುವಂತೆ ಕ್ಲೈಮ್ ಮಾಡಲಾದ ವೀಡಿಯೊಗಳ ಪಟ್ಟಿಯನ್ನು ಎಕ್ಸ್‌ಪೋರ್ಟ್ ಮಾಡಲು, ಕ್ಲೈಮ್ ಮಾಡಲಾದ ವೀಡಿಯೊಗಳು (.csv) ಅಥವಾ ಕ್ಲೈಮ್ ಮಾಡಲಾದ ವೀಡಿಯೊಗಳು (Google Sheets) ಆಯ್ಕೆಮಾಡಿ.
    • ಪ್ರತಿ ಸಾಲಿಗೆ ಒಂದು ಕ್ಲೈಮ್ ಇರುವಂತೆ ಕ್ಲೈಮ್‌ಗಳ ಪಟ್ಟಿಯನ್ನು ಎಕ್ಸ್‌ಪೋರ್ಟ್ ಮಾಡಲು, ಕ್ಲೈಮ್‌ಗಳು (.csv) ಅಥವಾ ಕ್ಲೈಮ್‌ಗಳು (Google Sheets) ಆಯ್ಕೆಮಾಡಿ.
  4. ಫೈಲ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಫೈಲ್ ಪ್ರಕ್ರಿಯೆ ಪ್ರಗತಿಯಲ್ಲಿರುವಾಗ ನೀವು ಈ ಪುಟದಿಂದ ಬೇರೆಡೆಗೆ ನ್ಯಾವಿಗೇಟ್ ಮಾಡಬಹುದು ಅಥವಾ ಬೇರೆ ಬಲ್ಕ್ ಕ್ರಿಯೆಗಳನ್ನು ನಿರ್ವಹಿಸಬಹುದು.
  5. ಫೈಲ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ:
    • .csv ಫೈಲ್‌ಗಾಗಿ: ಮೇಲ್ಭಾಗದ ಬ್ಯಾನರ್‌ನಲ್ಲಿ ಡೌನ್‌ಲೋಡ್ ಮಾಡಿ ಕ್ಲಿಕ್ ಮಾಡಿ.
    • Google Sheets ಫೈಲ್‌ಗಾಗಿ: ಮೇಲ್ಭಾಗದ ಬ್ಯಾನರ್‌ನಲ್ಲಿ SHEETS ಅನ್ನು ಹೊಸ ವಿಂಡೋದಲ್ಲಿ ತೆರೆಯಿರಿ ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12662170211639676072
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false