ಅಪ್‌ಲೋಡ್ ಮಾಡುವಿಕೆಗೆ ಸಂಬಧಿಸಿದ ಸಾಮಾನ್ಯ ದೋಷಗಳು

ನಿಮ್ಮ ವೀಡಿಯೊವನ್ನು ಅಪ್‌ಲೋಡ್ ಮಾಡುವಾಗ ನಿಮಗೆ ಸಮಸ್ಯೆಗಳು ಎದುರಾಗುತ್ತಿದ್ದರೆ, ಸಮಸ್ಯೆಯನ್ನು ಬಗೆಹರಿಸಲು, ನಿಮಗೆ ಕಾಣಿಸಿದ ದೋಷ ಸಂದೇಶವನ್ನು ಆಯ್ಕೆ ಮಾಡಿ ಮತ್ತು ಸಮಸ್ಯೆ ನಿವಾರಣೆ ಹಂತಗಳನ್ನು ಅನುಸರಿಸಿ.

Shorts ಆಡಿಯೋ ಲೈಬ್ರರಿ ವಾಣಿಜ್ಯ ಬಳಕೆ ಮತ್ತು ಪಾವತಿಸಿದ ಪ್ರಚಾರಗಳು

ಪಾವತಿಸಿದ ಉತ್ಪನ್ನ ಇರಿಸುವಿಕೆಯನ್ನು ಒಳಗೊಂಡಿರುವ Shorts ಸೇರಿದಂತೆ ವಾಣಿಜ್ಯ ಉದ್ದೇಶಗಳಿಗಾಗಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಚಾನಲ್‌ಗಳು, Shorts ಆಡಿಯೋ ಲೈಬ್ರರಿಯಿಂದ ಪಡೆಯಲಾದ ಧ್ವನಿಗಳನ್ನು ಹೊಂದಿರುವ Shorts ಅನ್ನು ಅಪ್‌ಲೋಡ್ ಮಾಡಿದಾಗ ದೋಷಗಳು ಕಂಡುಬರಬಹುದು. ಈ ದೋಷಗಳು ಕೆಲವು ಸಂಗೀತ ಪಾಲುದಾರರೊಂದಿಗಿನ ನಮ್ಮ ಒಪ್ಪಂದದ ಫಲಿತಾಂಶವಾಗಿ ಉಂಟಾಗುತ್ತವೆ; ಈ ಒಪ್ಪಂದಗಳು, Shorts ನಲ್ಲಿ ಸಂಗೀತದ ಬಳಕೆಯನ್ನು ವೈಯಕ್ತಿಕ ಮತ್ತು ವಾಣಿಜ್ಯೇತರ ಬಳಕೆಗಳಿಗೆ ಸೀಮಿತಗೊಳಿಸುತ್ತವೆ.

ಇದಕ್ಕೆ ಪರ್ಯಾಯವಾಗಿ:

  • ನಿಮ್ಮ Short ಅನ್ನು ನೀವು ಮತ್ತೊಮ್ಮೆ ಅಪ್‌ಲೋಡ್ ಮಾಡಬಹುದು ಮತ್ತು Shorts ಆಡಿಯೋ ಲೈಬ್ರರಿಯಿಂದ ಸೇರಿಸಲಾದ ಸಂಗೀತವನ್ನು ತೆಗೆದುಹಾಕಬಹುದು.
  • ನಿಮ್ಮ Short ಅನ್ನು ನೀವು ಮತ್ತೊಮ್ಮೆ ಅಪ್‌ಲೋಡ್ ಮಾಡಬಹುದು, ಆದರೆ Shorts ರಚನೆಯ ಪರಿಕರಗಳ ಹೊರಗೆ ಸಂಗೀತವನ್ನು ಸೇರಿಸಿ.
    • ಗಮನಿಸಿ: ನಿಮ್ಮ Short ಅನ್ನು ಪ್ರಕಟಿಸುವ ಮೊದಲು, ಹಕ್ಕುಸ್ವಾಮ್ಯದ ಮಾಲೀಕರು ಅಥವಾ ಮಾಲೀಕರೊಂದಿಗೆ ನೀವು ಎಲ್ಲಾ ಅಗತ್ಯ ಹಕ್ಕುಗಳನ್ನು ಕ್ಲಿಯರ್ ಮಾಡಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಅವರೊಂದಿಗೆ ಹಕ್ಕುಗಳನ್ನು ಕ್ಲಿಯರ್ ಮಾಡಿಕೊಳ್ಳದಿದ್ದರೆ ನಿಮ್ಮ Short ಅನ್ನು ಕೃತಿಸ್ವಾಮ್ಯ ಉಲ್ಲಂಘನೆಗಾಗಿ ತೆಗೆದುಹಾಕುವಿಕೆಗಳು ಅಥವ ಇತರ ಕಾನೂನು ಕ್ರಮಗಳು ಒಳಗೊಂಡಂತೆ ಜಾರಿಗೊಳಿಸುವಿಕೆಗೆ ಒಳಪಡಿಸಬೇಕಾಗಬಹುದು.
  • ನಿಮ್ಮ Short ಅನ್ನು ನೀವು ಮತ್ತೊಮ್ಮೆ ಅಪ್‌ಲೋಡ್ ಮಾಡಬಹುದು, ಆದರೆ ರಾಯಲ್ಟಿ-ಫ್ರೀ ಸಂಗೀತವನ್ನು ಬಳಸಿ. ರಾಯಲ್ಟಿ-ಫ್ರೀ ಸಂಗೀತವನ್ನು ಹುಡುಕಲು:
    1. Shorts ಆಡಿಯೋ ಲೈಬ್ರರಿಗೆ ಹೋಗಿ.
    2. "YouTube ಆಡಿಯೋ ಲೈಬ್ರರಿ" ಎಂಬುದನ್ನು ಹುಡುಕಿ.

ಅಪ್‌ಲೋಡ್ ಮಾಡುವ ಮೊದಲು ನೀವು ಆಯ್ಕೆ ಮಾಡಿದ ಹಾಡು ಇದನ್ನು ಹೊಂದಿದೆಯೇ ಎಂಬುದನ್ನು ಡಬಲ್ ಚೆಕ್ ಮಾಡಿ: 

  • “YouTube ಆಡಿಯೋ ಲೈಬ್ರರಿ” ಎಂದು ಹೇಳುವ ಹಸಿರು ಆಲ್ಬಮ್‌ ಆರ್ಟ್‌ವರ್ಕ್
  • YouTube ಲೋಗೋ

ಹುಡುಕಾಟ ಫಲಿತಾಂಶಗಳು ಈ ಮಾನದಂಡವನ್ನು ಪೂರ್ಣಗೊಳಿಸಿದರೆ, ನೀವು ಮೊದಲೇ ಹಕ್ಕುಗಳನ್ನು ಕ್ಲಿಯರ್ ಮಾಡುವ ಅಗತ್ಯವಿರುವುದಿಲ್ಲ. ಹುಡುಕಾಟ ಫಲಿತಾಂಶಗಳು ಈ ಮಾನದಂಡವನ್ನು ಪೂರೈಸದಿದ್ದರೆ, ಅವುಗಳನ್ನು ಬಳಕೆಗೆ ಕ್ಲಿಯರ್ ಮಾಡದಿರುವ ಸಾಧ್ಯತೆಯಿದೆ.

ಗಮನಿಸಿ: ಇಂಗ್ಲಿಷ್ ಭಾಷೆ ಮಾತನಾಡದವರಿಗಾಗಿ, ನಿಖರವಾದ ಫಲಿತಾಂಶಗಳಿಗಾಗಿ ಇಂಗ್ಲಿಷ್‌ನಲ್ಲಿ “YouTube ಆಡಿಯೋ ಲೈಬ್ರರಿಯನ್ನು” ಹುಡುಕಲು ಶಿಫಾರಸು ಮಾಡಲಾಗುತ್ತದೆ.

 

"ನಮಗೆ ಅನಿರೀಕ್ಷಿತ ಸಮಸ್ಯೆಗಳು ಎದುರಾಗಿವೆ"

ಕೆಲವು ನಿಮಿಷಗಳವರೆಗೆ ಕಾದು ನೋಡಿ, ನಂತರ ಮತ್ತೊಮ್ಮೆ ಅಪ್‌ಲೋಡ್ ಮಾಡಿ.

"ಸರ್ವರ್, ಫೈಲ್ ಅನ್ನು ನಿರಾಕರಿಸಿದೆ"

ನೀವು ಫೈಲ್ ಅನ್ನು ತಪ್ಪಾದ ಫಾರ್ಮ್ಯಾಟ್‌ನಲ್ಲಿ ಅಪ್‌ಲೋಡ್ ಮಾಡಿದಾಗ ಈ ದೋಷ ಸಂದೇಶ ಕಾಣಿಸಿಕೊಳ್ಳುತ್ತದೆ. ನೀವು ಬೆಂಬಲಿತ ಫೈಲ್ ಪ್ರಕಾರವನ್ನು ಬಳಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

"ನೆಟ್‌ವರ್ಕ್‌ನ ಮೂಲಕ ಡೇಟಾವನ್ನು ಕಳುಹಿಸುವಾಗ ದೋಷ ಉಂಟಾಗಿದೆ"

ನಿಮ್ಮ ಬ್ರೌಸರ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡುವ ಅಗತ್ಯವಿರುವಾಗ ಈ ದೋಷ ಸಂದೇಶ ಕಾಣಿಸಿಕೊಳ್ಳುತ್ತದೆ. ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದಕ್ಕಾಗಿ ಬಳಸಲು ನಾವು ಶಿಫಾರಸು ಮಾಡುವ ಕೆಲವು ಬ್ರೌಸರ್‌ಗಳು ಹೀಗಿವೆ:
ನೀವು ಬ್ರೌಸರ್ ಅನ್ನು ಅಪ್‌ಡೇಟ್ ಮಾಡಿದ ಬಳಿಕ, ಮತ್ತೊಮ್ಮೆ ಅಪ್‌ಲೋಡ್ ಮಾಡಲು ಪ್ರಯತ್ನಿಸಿ.

"ಪ್ರಕ್ರಿಯೆಯನ್ನು ತ್ಯಜಿಸಲಾಗಿದೆ"

ಅಪ್‌ಲೋಡ್ ಮಾಡಿದ ಫೈಲ್ ಅನ್ನು ಕಿರಿದುಗೊಳಿಸಿದ್ದರೆ ಅಥವಾ ಅದು ಅಮಾನ್ಯವಾಗಿದ್ದರೆ ಈ ದೋಷ ಸಂದೇಶ ಕಾಣಿಸಿಕೊಳ್ಳುತ್ತದೆ. ಕಡಿಮೆ ವೇಗದಲ್ಲಿ ಅಪ್‌ಲೋಡ್ ಮಾಡಿದಾಗಲೂ ಸಹ ಇದು ಉಂಟಾಗಬಹುದು. ನಿಮ್ಮ ಸಾಧನದಲ್ಲಿ ನಿಮ್ಮ ವೀಡಿಯೊವನ್ನು ಪುನಃ ಪ್ಲೇ ಮಾಡಲು ಪ್ರಯತ್ನಿಸಿ ಮತ್ತು ನೀವು ಬೆಂಬಲಿತ ಫೈಲ್ ಪ್ರಕಾರವನ್ನು ಬಳಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ, ನಂತರ ಮತ್ತೊಮ್ಮೆ ಅಪ್‌ಲೋಡ್ ಮಾಡಿ. ಸಮಸ್ಯೆ ಮುಂದುವರಿದರೆ, ನಿಮ್ಮ ವೀಡಿಯೊವನ್ನು ಬೇರೊಂದು ಪ್ಲ್ಯಾಟ್‌ಫಾರ್ಮ್‌ನಿಂದ ಅಪ್‌ಲೋಡ್ ಮಾಡಿ ನೋಡಿ.

"ನೆಟ್‌ವರ್ಕ್ ದೋಷ ಸಂಭವಿಸಿದೆ"

ನಿಮ್ಮ ಬ್ರೌಸರ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡುವ ಅಗತ್ಯವಿರುವಾಗ ಈ ದೋಷ ಸಂದೇಶ ಕಾಣಿಸಿಕೊಳ್ಳುತ್ತದೆ. ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದಕ್ಕಾಗಿ ಬಳಸಲು ನಾವು ಶಿಫಾರಸು ಮಾಡುವ ಕೆಲವು ಬ್ರೌಸರ್‌ಗಳು ಹೀಗಿವೆ:
ನೀವು ಬ್ರೌಸರ್ ಅನ್ನು ಅಪ್‌ಡೇಟ್ ಮಾಡಿದ ಬಳಿಕ, ಮತ್ತೊಮ್ಮೆ ಅಪ್‌ಲೋಡ್ ಮಾಡಲು ಪ್ರಯತ್ನಿಸಿ.
"ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮ ಚಾನಲ್ ಸ್ಥಿತಿ ಅಥವಾ ಖಾತೆಯ ಸೆಟ್ಟಿಂಗ್‌ಗಳು ಪ್ರಸ್ತುತ, ಅಪ್‌ಲೋಡ್‌ಗಳನ್ನು ಬೆಂಬಲಿಸುತ್ತಿಲ್ಲ."
ಈ ದೋಷ ಸಂದೇಶವು ಈ ಸಂದರ್ಭಗಳಲ್ಲಿ ಕಾಣಿಸಿಕೊಳ್ಳಬಹುದು:

"ಸುರಕ್ಷತಾ ದೋಷ ಸಂಭವಿಸಿದೆ"

ನಿಮ್ಮ ಬ್ರೌಸರ್‌ನಲ್ಲಿ ಅಸಹಜ ಸುರಕ್ಷತಾ ಸೆಟ್ಟಿಂಗ್‌ಗಳಿದ್ದಾಗ ಈ ದೋಷ ಸಂದೇಶ ಕಾಣಿಸಿಕೊಳ್ಳುತ್ತದೆ. ಈ ಸೆಟ್ಟಿಂಗ್‌ಗಳು ಫೈರ್‌ವಾಲ್, ಆ್ಯಂಟಿವೈರಸ್, ಆ್ಯಂಟಿ-ಸ್ಪೈವೇರ್ ಅಥವಾ ಇತರ ಸಂಬಂಧಿತ ಸಾಫ್ಟ್‌ವೇರ್‌ನಿಂದ ಬಂದಿರಬಹುದು. ನೀವು ಈ ಸಾಫ್ಟ್‌ವೇರ್ ಅನ್ನು ತಾತ್ಕಾಲಿಕವಾಗಿ ಆಫ್ ಮಾಡಬೇಕು ಮತ್ತು ಮತ್ತೊಮ್ಮೆ ಅಪ್‌ಲೋಡ್ ಮಾಡಲು ಪ್ರಯತ್ನಿಸಬೇಕು ಎಂದು ನಾವು ಶಿಫಾರಸು ಮಾಡುತ್ತೇವೆ.

"ನಿರಾಕರಿಸಲಾಗಿದೆ (ಫೈಲ್ ತೀರಾ ಸಣ್ಣದಾಗಿದೆ)"

ನೀವು 2 KB ಗಿಂತ ಕಡಿಮೆ ಗಾತ್ರದ ಫೈಲ್ ಅನ್ನು ಅಪ್‌ಲೋಡ್ ಮಾಡಲು ಪ್ರಯತ್ನಿಸಿದಾಗ ಈ ದೋಷ ಸಂದೇಶ ಕಾಣಿಸಿಕೊಳ್ಳುತ್ತದೆ. ನಿಮ್ಮ ವೀಡಿಯೊ ಫೈಲ್ ಕನಿಷ್ಠ 2 KB ಗಾತ್ರವನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ ಹಾಗೂ ಮತ್ತೊಮ್ಮೆ ಅಪ್‌ಲೋಡ್ ಮಾಡಿ.

"ವಿಫಲವಾಗಿದೆ (ಖಾಲಿ .mov ಫೈಲ್)"

QuickTime ಚಲನಚಿತ್ರಗಳನ್ನು ರೆಫರೆನ್ಸ್ ಚಲನಚಿತ್ರವಾಗಿ ಸೇವ್ ಮಾಡಿದಾಗ ಈ ದೋಷ ಸಂದೇಶ ಕಾಣಿಸಿಕೊಳ್ಳುತ್ತದೆ. ನಿಮ್ಮ ವೀಡಿಯೊ ಸರಿಯಾಗಿ ಪರಿವರ್ತನೆಯಾಗುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು, "ಸ್ವತಂತ್ರ ಚಲನಚಿತ್ರವನ್ನು ಸೇವ್ ಮಾಡಿ" ಎಂಬುದನ್ನು ಆಯ್ಕೆ ಮಾಡಿ ಹಾಗೂ ಮತ್ತೊಮ್ಮೆ ಅಪ್‌ಲೋಡ್ ಮಾಡಲು ಪ್ರಯತ್ನಿಸಿ.

"ದೈನಂದಿನ ಅಪ್‌ಲೋಡ್ ಮಿತಿಯನ್ನು ತಲುಪಲಾಗಿದೆ. 24 ಗಂಟೆಗಳ ನಂತರ ನೀವು ಇನ್ನಷ್ಟು ವೀಡಿಯೊಗಳನ್ನು ಅಪ್‌ಲೋಡ್ ಮಾಡಬಹುದು."

YouTube ನಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ, ಡೆಸ್ಕ್‌ಟಾಪ್, ಮೊಬೈಲ್ ಮತ್ತು YouTube API ಆದ್ಯಂತ 24-ಗಂಟೆಯ ಅವಧಿಯಲ್ಲಿ ಒಂದು ಚಾನಲ್ ಎಷ್ಟು ವೀಡಿಯೊಗಳನ್ನು ಅಪ್‌ಲೋಡ್ ಮಾಡಬಹುದು ಎಂಬುದನ್ನು ನಾವು ಸೀಮಿತಗೊಳಿಸುತ್ತೇವೆ.
ಮಿತಿಗಳು, ದೇಶ/ಪ್ರದೇಶ ಅಥವಾ ಚಾನಲ್ ಇತಿಹಾಸವನ್ನು ಆಧರಿಸಿ ಬದಲಾಗಬಹುದು. ಕೃತಿಸ್ವಾಮ್ಯ ಸ್ಟ್ರೈಕ್‌ಗಳು ಚಾನಲ್ ಇತಿಹಾಸದ ಅರ್ಹತೆಯ ಮೇಲೆ ಪ್ರಭಾವ ಬೀರಬಹುದು. ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳು ನೀವು ಎಷ್ಟು ಅಪ್‌ಲೋಡ್ ಮಾಡಬಹುದು ಎಂಬುದರ ಮೇಲೆ ಇದೀಗ ಪ್ರಭಾವ ಬೀರುತ್ತವೆ.
YouTube ನಲ್ಲಿ ಒಂದು ವೀಡಿಯೊವನ್ನು ಅಪ್‌ಲೋಡ್ ಮಾಡಲು ಪ್ರಯತ್ನಿಸುವಾಗ "ದೈನಂದಿನ ಮಿತಿಯನ್ನು ತಲುಪಲಾಗಿದೆ" ಎಂಬ ದೋಷ ಕಂಡುಬಂದರೆ, 24 ಗಂಟೆಗಳ ಬಳಿಕ ಮತ್ತೊಮ್ಮೆ ಪ್ರಯತ್ನಿಸಿ.

ಇತರ

ನೀವು ಫೈಲ್ ಅನ್ನು ತಪ್ಪಾದ ಫಾರ್ಮ್ಯಾಟ್‍ನಲ್ಲಿ ಅಪ್‌ಲೋಡ್ ಮಾಡಿದಾಗ ನೀವು ದೋಷ ಸಂದೇಶವನ್ನು ಪಡೆಯಬಹುದು. ನೀವು ಬೆಂಬಲಿತ ಫೈಲ್ ಪ್ರಕಾರವನ್ನು ಬಳಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಕೋಡೆಕ್‌ಗಳು ಅಥವಾ ಎಡಿಟಿಂಗ್ ಸಾಫ್ಟ್‌ವೇರ್ ಅನ್ನು ಬದಲಾಯಿಸಲು ಸಹ ನೀವು ಪ್ರಯತ್ನಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
645864066331415522
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false