ನಿಮ್ಮ ಪ್ರೀಮಿಯರ್ ಅನ್ನು ಕಸ್ಟಮೈಸ್ ಮಾಡಿ

ಪ್ರೀಮಿಯರ್ ಅನ್ನು ಕಸ್ಟಮೈಸ್ ಮಾಡುವ ಮೂಲಕ ನೀವು ಹೆಚ್ಚು ಪ್ರಯೋಜನ ಪಡೆಯಬಹುದು. ಬೇರೆ ಕೌಂಟ್‌ಡೌನ್ ಥೀಮ್ ಅನ್ನು ಆಯ್ಕೆ ಮಾಡಿ, ನಿಮ್ಮ ಪ್ರೀಮಿಯರ್ ಅನ್ನು ಮಾನಿಟೈಸ್ ಮಾಡಿ ಅಥವಾ ಟ್ರೇಲರ್ ಅನ್ನು ತೋರಿಸಿ.

ಕೌಂಟ್‌ಡೌನ್ ಥೀಮ್ ಅನ್ನು ಆಯ್ಕೆ ಮಾಡಿ

ನಿಮ್ಮ ಪ್ರೀಮಿಯರ್ ಆರಂಭವಾಗುವುದಕ್ಕಿಂತ ಎರಡು ನಿಮಿಷ ಮೊದಲು, ನೀವು ಹಾಗೂ ನಿಮ್ಮ ವೀಕ್ಷಕರು, ನಿಮ್ಮ ವೀಡಿಯೊ ಪ್ರೀಮಿಯರ್ ಆಗುವ ಸಮಯಕ್ಕೆ ಕೌಂಟ್‌ಡೌನ್ ಮಾಡುವ ಲೈವ್ ವೀಡಿಯೊವನ್ನು ನೋಡುವಿರಿ. ಕೌಂಟ್‌ಡೌನ್ ಥೀಮ್‌ಗಳ ಪಟ್ಟಿಯಿಂದ ನಿಮಗೆ ಬೇಕಾದ್ದನ್ನು ನೀವು ಆಯ್ಕೆ ಮಾಡಬಹುದು. 

  1. YouTube Studio ದಿಂದ ಒಂದು ವೀಡಿಯೊವನ್ನು ಅಪ್‌ಲೋಡ್ ಮಾಡಿ.
  2. “ಗೋಚರತೆ” ಹಂತದಿಂದ, ನಿಮ್ಮ ಅಪ್‌ಲೋಡ್ ಅನ್ನು ಪ್ರೀಮಿಯರ್ ಎಂಬುದಾಗಿ ನಿಗದಿಪಡಿಸಿ.
  3. ಪ್ರೀಮಿಯರ್ ಸೆಟ್ ಅಪ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  4. “ಕೌಂಟ್‌ಡೌನ್ ಥೀಮ್” ಎಂಬುದರ ಅಡಿಯಲ್ಲಿ, ಕೌಂಟ್‌ಡೌನ್ ಟೈಮರ್ ಅನ್ನು ಆಯ್ಕೆ ಮಾಡಿ.

ಟ್ರೇಲರ್ ಅನ್ನು ತೋರಿಸಿ

ಪ್ರೀಮಿಯರ್ ಪುಟದಲ್ಲಿ ನಿಮ್ಮ ಮುಂಬರುವ ವೀಡಿಯೊದ ಟ್ರೇಲರ್ ಅನ್ನು ತೋರಿಸುವ ಮೂಲಕ ನಿಮ್ಮ ಲೈವ್ ಪ್ರೇಕ್ಷಕರಲ್ಲಿ ಅದರ ಬಗ್ಗೆ ಕುತೂಹಲ ಮೂಡಿಸಿ. ಪ್ರೀಮಿಯರ್ ಪ್ರಾರಂಭವಾಗುವ ಮೊದಲು, ವೀಕ್ಷಣಾ ಪುಟದಲ್ಲಿ ನಿಮ್ಮ ಟ್ರೇಲರ್ ವೀಕ್ಷಕರಿಗಾಗಿ ಪ್ಲೇ ಆಗುತ್ತದೆ.

  1. ಸಾಮಾನ್ಯ ಅಪ್‌ಲೋಡ್‌ನಲ್ಲಿ ನೀವು ಮಾಡುವ ಹಾಗೆ, ನಿಮ್ಮ ಟ್ರೇಲರ್ ಅನ್ನು ನಿಮ್ಮ YouTube ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿ.
  2. ನೀವು ಪ್ರೀಮಿಯರ್ ಮಾಡಲು ಬಯಸುವ ವೀಡಿಯೊವನ್ನು YouTube Studio ದಿಂದ ಅಪ್‌ಲೋಡ್ ಮಾಡಿ.
  3. “ಗೋಚರತೆ” ಹಂತದಿಂದ, ಪ್ರೀಮಿಯರ್ ಎಂಬುದಾಗಿ ನಿಗದಿಪಡಿಸಿ.
  4. ಪ್ರೀಮಿಯರ್ ಸೆಟ್ ಅಪ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  5. “ಟ್ರೇಲರ್ ಸೇರಿಸಿ” ಎಂಬುದರ ಅಡಿಯಲ್ಲಿ ಸೇರಿಸಿ ಎಂಬುದನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಟ್ರೇಲರ್ ಅನ್ನು ಆಯ್ಕೆ ಮಾಡಿ.
ಅರ್ಹತೆ

1,000 ಕ್ಕಿಂತ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಮತ್ತು ಯಾವುದೇ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳನ್ನು ಹೊಂದಿಲ್ಲದಿರುವ ರಚನೆಕಾರರಿಗೆ ಈ ಫೀಚರ್ ಲಭ್ಯವಿದೆ. 

ಅವಶ್ಯಕತೆಗಳು
  • ವೀಡಿಯೊದ ಪ್ರಕಾರ: YouTube ಬೆಂಬಲಿತ ವೀಡಿಯೊ ಪ್ರಕಾರವನ್ನು ಬಳಸಿ.
  • ವೀಡಿಯೊದ ಅವಧಿ: 15 ಸೆಕೆಂಡ್‌ಗಳು – 3 ನಿಮಿಷಗಳು.
  • ದೃಶ್ಯಾನುಪಾತ ಮತ್ತು ರೆಸಲ್ಯೂಷನ್: ಪ್ರೀಮಿಯರ್ ಮಾಡುವ ವೀಡಿಯೊದಲ್ಲಿ ಬಳಸುವ ದೃಶ್ಯಾನುಪಾತ ಮತ್ತು ರೆಸಲ್ಯೂಷನ್ ಅನ್ನು ಇಲ್ಲೂ ಬಳಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ.
  • ಆಡಿಯೋ ಮತ್ತು ವೀಡಿಯೊ ಹಕ್ಕುಗಳು: ಟ್ರೇಲರ್, ಬೇರೆ ಕಂಟೆಂಟ್ ಅನ್ನು ಉಲ್ಲಂಘಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಯಾವುದೇ ಕಂಟೆಂಟ್ ಅದರಲ್ಲಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ನಿಮ್ಮ ಪ್ರೀಮಿಯರ್ ಅನ್ನು ಮಾನಿಟೈಸ್ ಮಾಡಿ

ನಿಮ್ಮ ವೀಡಿಯೊವನ್ನು ಪ್ರೀಮಿಯರ್ ಮಾಡುವ ಮೂಲಕ ನೀವು ಕೆಲವೊಂದು ವಿಧಗಳಲ್ಲಿ ಹಣ ಗಳಿಸಬಹುದು:

ಜಾಹೀರಾತುಗಳು

ನಿಮ್ಮ ಚಾನಲ್ ಜಾಹೀರಾತು ಆದಾಯಕ್ಕೆ ಅರ್ಹವಾಗಿದ್ದರೆ, ಪ್ರೀಮಿಯರ್ ಸಮಯದಲ್ಲಿ ಪ್ರಿ-ರೋಲ್‌ಗಳನ್ನು ನೀಡಲು ನೀವು ಆ್ಯಡ್‌ಗಳನ್ನು ಆನ್ ಮಾಡಬಹುದು. ಪ್ರೀಮಿಯರ್‌ನ ಸಮಯದಲ್ಲಿ ಮಧ್ಯ-ರೋಲ್ ಮತ್ತು ಪೋಸ್ಟ್-ರೋಲ್ ಆ್ಯಡ್‌ಗಳು ಲಭ್ಯವಿರುವುದಿಲ್ಲ.

ಪ್ರೀಮಿಯರ್ ಮುಗಿದ ನಂತರ, ಆ್ಯಡ್‌ಗಳಿಗಾಗಿ ನಿಮ್ಮ ಚಾನಲ್‌ನ ಅಪ್‌ಲೋಡ್ ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ನಾವು ಅನುಸರಿಸುತ್ತೇವೆ.

ನಿಮ್ಮ ವೀಡಿಯೊಗಾಗಿ ಆ್ಯಡ್‌ಗಳನ್ನು ಆನ್ ಮಾಡುವುದು ಹೇಗೆ ಅಥವಾ ನಿಮ್ಮ ಅಪ್‌ಲೋಡ್ ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

ಸೂಪರ್ ಚಾಟ್ ಹಾಗೂ ಸೂಪರ್ ಸ್ಟಿಕ್ಕರ್ಸ್

ಸೂಪರ್ ಚಾಟ್ ಹಾಗೂ ಸೂಪರ್ ಸ್ಟಿಕ್ಕರ್ಸ್, ಲೈವ್ ಚಾಟ್‌ನ ಸಂದರ್ಭದಲ್ಲಿ ಅಭಿಮಾನಿಗಳೊಂದಿಗೆ ಬೆರೆಯಲು ಲಭ್ಯವಿರುವ ಮಾರ್ಗಗಳಾಗಿವೆ. ಲೈವ್ ಚಾಟ್‌ನಲ್ಲಿ ತಮ್ಮ ಸಂದೇಶವನ್ನು ಹೈಲೈಟ್ ಮಾಡಲು ವೀಕ್ಷಕರು ಸೂಪರ್ ಚಾಟ್‌ಗಳನ್ನು ಖರೀದಿಸಬಹುದು. ಪ್ರೀಮಿಯರ್ ಪ್ರಾರಂಭವಾಗುವುದಕ್ಕಿಂತ ಮೊದಲು ಮತ್ತು ಪ್ರೀಮಿಯರ್ ನಡೆಯುತ್ತಿರುವಾಗ, ನೀವು ವೀಕ್ಷಕರಿಗಾಗಿ ಸೂಪರ್ ಚಾಟ್ ಹಾಗೂ ಸೂಪರ್ ಸ್ಟಿಕ್ಕರ್ಸ್ ಅನ್ನು ಆನ್ ಮಾಡಬಹುದು.

ನೀವು ಸೂಪರ್ ಚಾಟ್ ಹಾಗೂ ಸೂಪರ್ ಸ್ಟಿಕ್ಕರ್ಸ್‌ಗಾಗಿ ಅರ್ಹರಾಗಿದ್ದೀರಾ ಎಂದು ನೋಡಿ.

ಚಾನಲ್ ಸದಸ್ಯತ್ವಗಳು

ನೀವು ಅರ್ಹರಾಗಿದ್ದರೆ, ಸದಸ್ಯರಿಗೆ-ಮಾತ್ರ ಮೀಸಲಾದ ಚಾಟ್‌ನಂತಹ ಚಾನಲ್ ಸದಸ್ಯತ್ವದ ಪರ್ಕ್‌ಗಳ ಲಾಭವನ್ನು ನೀವು ಪಡೆದುಕೊಳ್ಳಬಹುದು. ನೀವು ಕಸ್ಟಮ್ ಎಮೋಜಿಗಳು ಹಾಗೂ ಲಾಯಲ್ಟಿ ಬ್ಯಾಡ್ಜ್‌ಗಳಂತಹ ಪರ್ಕ್‌ಗಳನ್ನು ಸಹ ಪಡೆಯಬಹುದು.

ಚಾನಲ್ ಸದಸ್ಯತ್ವಗಳ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2755610384450051582
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false