ಮೇಲ್ವಿಚಾರಣೆ ಮಾಡಿದ ಖಾತೆಗಳ ಕುರಿತು ಪೋಷಕರಿಗೆ FAQ ಗಳು

ಮೇಲ್ವಿಚಾರಣೆ ಮಾಡಿದ ಖಾತೆ ಮತ್ತು ಸಾಮಾನ್ಯ YouTube ಅಥವಾ YouTube Music ಖಾತೆಗೂ ಇರುವ ವ್ಯತ್ಯಾಸವೇನು?

ನಿಮ್ಮ ಮಗುವಿನ ಮೇಲ್ವಿಚಾರಣೆ ಮಾಡಿದ ಖಾತೆ ಸಾಮಾನ್ಯ YouTube ಅಥವಾ YouTube Music ಖಾತೆಯಂತೆಯೇ ಕಾಣಿಸುತ್ತದೆ, ಆದರೆ ಲಭ್ಯವಿರುವ ಫೀಚರ್‌ಗಳು ಮತ್ತು ಸೆಟ್ಟಿಂಗ್‌ಗಳಲ್ಲಿ ಬೇರೆಯಾಗಿರುತ್ತದೆ.

ನಿಮ್ಮ ಮಗು ಪ್ಲೇ ಮಾಡುವ ಕಂಟೆಂಟ್ ನೀವು ಅವರ ಮೇಲ್ವಿಚಾರಣೆ ಮಾಡಿದ ಖಾತೆಗೆ ಆರಿಸಿದ ಕಂಟೆಂಟ್ ಸೆಟ್ಟಿಂಗ್ ಅನ್ನು ಅವಲಂಬಿಸಿರುತ್ತದೆ. YouTube ಮತ್ತು YouTube Music ನಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಕೆಲವು ಫೀಚರ್‌ಗಳು ಲಭ್ಯವಿರುವುದಿಲ್ಲ. ಲಭ್ಯವಿರುವ ಫೀಚರ್‌ಗಳ ಪಟ್ಟಿಯನ್ನು ಪಡೆಯಲು, YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವ ಎಂದರೇನು? ಎಂಬಲ್ಲಿಗೆ ಹೋಗಿ.

ಸ್ವಯಂ-ಅಭಿವ್ಯಕ್ತಿ ಮತ್ತು ಸಮುದಾಯಗಳು YouTube ನ ಮುಖ್ಯ ಭಾಗವಾಗಿರುವುದರಿಂದ, ಮೇಲ್ವಿಚಾರಣೆ ಮಾಡಿದ ಖಾತೆಗಳಿಗೆ ಯಾವ ಫೀಚರ್‌ಗಳು ಪರಿಣಾಮ ಬೀರುತ್ತವೆ ಎಂದು ನಿರ್ಧರಿಸುವಾಗ ನಾವು ಪೋಷಕರು ಮತ್ತು ತಜ್ಞರೊಂದಿಗೆ ಕಾರ್ಯ ನಿರ್ವಹಿಸುತ್ತೇವೆ.

YouTube Kids ಎಂದರೇನು? YouTube ನಲ್ಲಿರುವ ಮೇಲ್ವಿಚಾರಣೆ ಮಾಡಿದ ಖಾತೆಗಿಂತ ಇದು ಹೇಗೆ ಭಿನ್ನವಾಗಿದೆ?

YouTube Kids ಎಂಬುದು ಮಕ್ಕಳನ್ನು ಮನಸಿನಲ್ಲಿ ಇಟ್ಟುಕೊಂಡು ರಚಿಸಿದ ನಮ್ಮ ಸಮರ್ಪಿತ ಆ್ಯಪ್ ಆಗಿದೆ. ಮೇಲ್ವಿಚಾರಣೆ ಮಾಡಿದ ಖಾತೆಯ ಮೂಲಕ, YouTube ಮತ್ತು YouTube Music ನಲ್ಲಿ ಮಕ್ಕಳು ಏನನ್ನು ಹುಡುಕಬಹುದು ಮತ್ತು ಪ್ಲೇ ಮಾಡಬಹುದು ಎಂಬುದನ್ನು ಮಿತಿಗೊಳಿಸುವ ಕಂಟೆಂಟ್ ಸೆಟ್ಟಿಂಗ್ ಅನ್ನು ಪೋಷಕರು ಆಯ್ಕೆ ಮಾಡುತ್ತಾರೆ.

YouTube Kids ನಲ್ಲಿರುವ ವೀಡಿಯೊಗಳು ವೈವಿಧ್ಯತೆಯಿಂದ ಕೂಡಿರುತ್ತವೆ ಆದರೆ ಸಾಮಾನ್ಯ YouTube ನಲ್ಲಿ ಲಭ್ಯವಿರುವ ಆಯ್ಕೆಗಳಿಗಿಂತ ಕಡಿಮೆ ಪ್ರಮಾಣದ ವೀಡಿಯೊಗಳ ಆಯ್ಕೆಯನ್ನು ಹೊಂದಿರುತ್ತವೆ. ವೀಡಿಯೊಗಳನ್ನು ಹಲವಾರು ಸಂಯೋಜನೆಗಳ ಮೂಲಕ ಆಯ್ಕೆ ಮಾಡಲಾಗಿದೆ. ಈ ವೀಡಿಯೊಗಳನ್ನು ಮಾನವ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗಿದೆ ಮತ್ತು ಪ್ಲೇಪಟ್ಟಿಗಳನ್ನು ತಜ್ಞರಿಂದ ಕ್ಯುರೇಟ್ ಮಾಡಿಸಲಾಗಿದೆ. ಸೂಕ್ತವಾದ ವೀಡಿಯೊಗಳನ್ನು ಆಯ್ಕೆ ಮಾಡಲು ಅಲ್ಗಾರಿದಮಿಕ್ ಫಿಲ್ಟರ್ ಮಾಡುವಿಕೆಯು ಸಹ ಸಹಾಯ ಮಾಡುತ್ತದೆ.

YouTube Kids ಮತ್ತು ಮೇಲ್ವಿಚಾರಣೆ ಮಾಡಿದ ಖಾತೆಗಳ ನಡುವಿನ ವ್ಯತ್ಯಾಸಗಳನ್ನು ಕುರಿತು ಇನ್ನಷ್ಟು ತಿಳಿಯಲು, ಕುಟುಂಬವಾಗಿ ನಿಮ್ಮ ಆಯ್ಕೆಗಳನ್ನು ಅರ್ಥಮಾಡಿಕೊಳ್ಳಿ ಎಂಬಲ್ಲಿಗೆ ಹೋಗಿ.

ನಿರ್ಬಂಧಿತ ಮೋಡ್ ಎಂದರೇನು? YouTube ನಲ್ಲಿರುವ ಮೇಲ್ವಿಚಾರಣೆ ಮಾಡಿದ ಖಾತೆಗಿಂತ ಇದು ಹೇಗೆ ಭಿನ್ನವಾಗಿದೆ?

ನಿರ್ಬಂಧಿತ ಮೋಡ್ ಎಂಬುದು YouTube ನಲ್ಲಿರುವ ಒಂದು ಐಚ್ಛಿಕ ಸೆಟ್ಟಿಂಗ್ ಆಗಿದೆ. ನೋಡಲು ನೀವು ಆದ್ಯತೆ ನೀಡದ ಅಥವಾ ಅದನ್ನು ನೋಡಲು ಇತರರು ನಿಮ್ಮ ಸಾಧನವನ್ನು ಬಳಸುವುದನ್ನು ಬಯಸದ ಸಂಭಾವ್ಯ ವಯಸ್ಕರ ಕಂಟೆಂಟ್ ಅನ್ನು ಪರಿಶೀಲಿಸಲು ಇದು ಸಹಾಯ ಮಾಡುತ್ತದೆ. ಹೆಚ್ಚು ಸೀಮಿತವಾಗಿರುವ YouTube ಅನುಭವವನ್ನು ಬಯಸುವ ಬಳಕೆದಾರರು, ಅಂದರೆ ಗ್ರಂಥಾಲಯಗಳು, ಶಾಲೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳು ಸಾಮಾನ್ಯವಾಗಿ ನಿರ್ಬಂಧಿತ ಮೋಡ್ ಅನ್ನು ಆನ್ ಮಾಡುತ್ತವೆ.

13 ವರ್ಷಕ್ಕಿಂತ ಮೇಲ್ಪಟ್ಟ ಹದಿಹರೆಯದವರಿಗಾಗಿ ಪೋಷಕರು ಅವರ ಹದಿಹರೆಯದವರ Google ಖಾತೆಗೆ ಮೇಲ್ವಿಚಾರಣೆಯನ್ನು ಸೇರಿಸಿದ್ದರೆ ಸಂಭಾವ್ಯ ವಯಸ್ಕರ ಕಂಟೆಂಟ್ ಅನ್ನು ತೆಗೆದುಹಾಕುವುದಕ್ಕೆ ಸಹಾಯವಾಗಲು ಅವರು ನಿರ್ಬಂಧಿತ ಮೋಡ್ ಅನ್ನು ಸಹ ಬಳಸಬಹುದು.

ತಮ್ಮ ಅಸ್ತಿತ್ವದಲ್ಲಿರುವ Google ಖಾತೆಗಳಿಗೆ ಮೇಲ್ವಿಚಾರಣೆಯನ್ನು ಸೇರಿಸಿರುವ, ಅವರ ದೇಶ/ಪ್ರದೇಶದಲ್ಲಿರುವ ಸೂಕ್ತ ವಯಸ್ಸಿನ ಮೇಲ್ಪಟ್ಟ ಹದಿಹರೆಯದವರಿಗೆ ಮೇಲ್ವಿಚಾರಣೆ ಮಾಡಿದ ಖಾತೆಗಳು ಲಭ್ಯವಿರುವುದಿಲ್ಲ. 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ (ಅಥವಾ ತಮ್ಮ ದೇಶ/ಪ್ರದೇಶದಲ್ಲಿರುವ ಸೂಕ್ತ ವಯಸ್ಸು) ಮೇಲ್ವಿಚಾರಣೆ ಮಾಡಿದ ಖಾತೆಗಳು ಲಭ್ಯವಿರುತ್ತವೆ ಮತ್ತು ಪೋಷಕರು ಅವರ ಮಗುವಿನ YouTube ಅನುಭವವನ್ನು ನಿರ್ವಹಿಸಲು ಅವರಿಗೆ ನಿಯಂತ್ರಣಗಳನ್ನು ನೀಡುತ್ತದೆ.

ನನ್ನ ಮಗುವಿಗೆ ನಾನು ಮೇಲ್ವಿಚಾರಣೆ ಮಾಡಿದ ಖಾತೆಯನ್ನು ಹೊಂದಿಸಿದಾಗ ಕಂಟೆಂಟ್ ಸೆಟ್ಟಿಂಗ್‌ಗಳಿಗೆ ನನಗಿರುವ ಆಯ್ಕೆಗಳು ಯಾವುವು?

3 ಕಂಟೆಂಟ್ ಸೆಟ್ಟಿಂಗ್‌ಗಳಿಂದ ನೀವು ಆರಿಸಬಹುದು:

  • ಎಕ್ಸ್‌ಪ್ಲೋರ್: 9+ ವಯಸ್ಸಿನ ವೀಕ್ಷಕರಿಗೆ ಇರುವ ಕಂಟೆಂಟ್ ರೇಟಿಂಗ್‌ಗಳೊಂದಿಗೆ ಸಾಮಾನ್ಯವಾಗಿ ಒಟ್ಟುಗೂಡುತ್ತದೆ. ವೀಡಿಯೊಗಳು ವ್ಲಾಗ್‌ಗಳು, ಟುಟೋರಿಯಲ್‌ಗಳು, ಗೇಮಿಂಗ್ ವೀಡಿಯೊಗಳು, ಸಂಗೀತ ವೀಡಿಯೊಗಳು, ಸುದ್ದಿ, ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿರುತ್ತವೆ. ಪ್ರೀಮಿಯರ್‌ಗಳನ್ನು ಹೊರತುಪಡಿಸಿ ಯಾವುದೇ ಲೈವ್ ಸ್ಟ್ರೀಮ್‌ಗಳಿಲ್ಲ. ಕೆಲವು ವೀಡಿಯೊಗಳು ತೀವ್ರವಲ್ಲದ ಹಿಂಸೆ, ಆಕ್ಷೇಪಾರ್ಹ ಭಾಷೆ ಮತ್ತು ನಿಯಂತ್ರಿತ ರಾಸಾಯನಿಕ ಪದಾರ್ಥಗಳ ನಿದರ್ಶನಗಳನ್ನು ಒಳಗೊಂಡಿರುತ್ತವೆ. ಕೆಲವು ವೀಡಿಯೊಗಳು ದೇಹದ ಚಿತ್ರ ಮತ್ತು ಬದಲಾವಣೆಗಳು, ಮಾನಸಿಕ ಮತ್ತು ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಶೈಕ್ಷಣಿಕ ಕಂಟೆಂಟ್ ಅನ್ನು ಸಹ ಒಳಗೊಂಡಿರಬಹುದು.
  • ಇನ್ನಷ್ಟು ಎಕ್ಸ್‌ಪ್ಲೋರ್ ಮಾಡಿ: 13+ ವಯಸ್ಸಿನ ವೀಕ್ಷಕರಿಗೆ ಸಾಮಾನ್ಯವಾಗಿ ಕಂಟೆಂಟ್ ರೇಟಿಂಗ್‌ಗಳನ್ನು ಒಟ್ಟುಗೂಡಿಸುತ್ತದೆ. ಈ ಸೆಟ್ಟಿಂಗ್ ವೀಡಿಯೊಗಳ ಇನ್ನಷ್ಟು ದೊಡ್ಡ ಸೆಟ್ ಅನ್ನು ಒಳಗೊಂಡಿರುತ್ತದೆ. ವೀಡಿಯೊಗಳು ಲೈವ್ ಸ್ಟ್ರೀಮ್‌ಗಳು, ವ್ಲಾಗ್‌ಗಳು, ಟುಟೋರಿಯಲ್‌ಗಳು, ಗೇಮಿಂಗ್ ವೀಡಿಯೊಗಳು, ಸಂಗೀತದ ವೀಡಿಯೊಗಳು, ಸುದ್ದಿ, ಶೈಕ್ಷಣಿಕ ವೀಡಿಯೊಗಳು, DIY, ಕಲೆ ಮತ್ತು ಕರಕುಶಲ, ನೃತ್ಯ ಮತ್ತು ಹೆಚ್ಚಿನದನ್ನು ಒಳಗೊಂಡಿವೆ. ಕೆಲವು ವೀಡಿಯೊಗಳು ನೈಜ-ಜಗತ್ತಿನ ಹಿಂಸೆ, ಸೀಮಿತ ಬೈಗುಳ ಅಥವಾ ನಿಯಂತ್ರಿತ ರಾಸಾಯನಿಕ ಪದಾರ್ಥಗಳ ನಿದರ್ಶನಗಳನ್ನು ಒಳಗೊಂಡಿರುತ್ತವೆ. ಅಶ್ಲೀಲವಲ್ಲದ ಲೈಂಗಿಕ ಉಲ್ಲೇಖಗಳು ಮತ್ತು ದೈಹಿಕ, ಮಾನಸಿಕ ಮತ್ತು ಲೈಂಗಿಕ ಹಾಗೂ ಯೋಗಕ್ಷೇಮಕ್ಕೆ ಸಂಬಂಧಿಸಿದ ವಿಷಯಗಳು ಸಹ ಇರುತ್ತವೆ.
  • YouTube ನ ಹೆಚ್ಚಿನದು:ಈ ಸೆಟ್ಟಿಂಗ್ 18+ ಎಂದು ಗುರುತು ಮಾಡಲಾಗಿರುವ ವೀಡಿಯೊಗಳು ಮತ್ತು ಮೇಲ್ವಿಚಾರಣೆ ಮಾಡಿದ ಅನುಭವಗಳನ್ನು ಬಳಸುವ ವೀಕ್ಷಕರಿಗೆ ಸೂಕ್ತವೆನಿಸದೇ ಇರುವ ಇತರ ವೀಡಿಯೊಗಳನ್ನು ಹೊರತುಪಡಿಸಿ YouTube ನಲ್ಲಿರುವ ಎಲ್ಲದನ್ನೂ ಒಳಗೊಂಡಿರುತ್ತದೆ. ವೀಡಿಯೊಗಳು ಲೈವ್ ಸ್ಟ್ರೀಮ್‌ಗಳು, ವ್ಲಾಗ್‌ಗಳು, ಟುಟೋರಿಯಲ್‌ಗಳು, ಗೇಮಿಂಗ್ ವೀಡಿಯೊಗಳು, ಸಂಗೀತದ ವೀಡಿಯೊಗಳು, ಸುದ್ದಿ, ಶೈಕ್ಷಣಿಕ ವೀಡಿಯೊಗಳು, DIY, ಕಲೆ ಮತ್ತು ಕರಕುಶಲ, ನೃತ್ಯ ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿವೆ. ಕೆಲವು ವೀಡಿಯೊಗಳು ಪ್ರೌಢವಯಸ್ಸಿನ ಹದಿಹರೆಯದವರಿಗೆ ಸೂಕ್ತವಾಗಿರಬಹುದಾದ ಗ್ರಾಫಿಕ್ ಹಿಂಸೆ, ವಯಸ್ಕರ ಕಂಟೆಂಟ್, ಅಶ್ಲೀಲತೆ, ಅಶ್ಲೀಲ ಬೈಗುಳದಂತಹ ಸೂಕ್ಷ್ಮ ವಿಷಯಗಳನ್ನು ಮತ್ತು ಮಾನಸಿಕ ಅಸ್ವಸ್ಥತೆ, ಆಹಾರಪದ್ಧತಿ ಮತ್ತು ಲೈಂಗಿಕ ಆರೋಗ್ಯದಂತಹ ವಿಷಯಗಳನ್ನು ಒಳಗೊಂಡಿರುತ್ತವೆ.

ಮೇಲ್ವಿಚಾರಣೆ ಮಾಡಿದ ಅನುಭವವನ್ನು ಬಳಸಿಕೊಂಡು ಕುಟುಂಬಗಳಿಗಾಗಿ ಕಂಟೆಂಟ್ ಸೆಟ್ಟಿಂಗ್‌ಗಳು ಇದರಲ್ಲಿ ಇನ್ನಷ್ಟು ತಿಳಿಯಿರಿ.

ನನ್ನ ಮಗುವಿನ ಮೇಲ್ವಿಚಾರಣೆ ಮಾಡಿದ ಖಾತೆಯ ಆ್ಯಕ್ಸೆಸ್ ಅನ್ನು ನಾನು YouTube Music ಅಥವಾ YouTube TV ಗೆ ನೀಡಬಹುದೇ?

ಮೇಲ್ವಿಚಾರಣೆ ಮಾಡಿದ ಖಾತೆಗಳು YouTube Music ಅನ್ನು ಬೆಂಬಲಿಸುತ್ತವೆ. ನಿಮ್ಮ ಮಗುವಿನ ಮೇಲ್ವಿಚಾರಣೆ ಮಾಡಿದ ಖಾತೆಗೆ ನೀವು ಆರಿಸಿದ ಕಂಟೆಂಟ್ ಸೆಟ್ಟಿಂಗ್ ಅವರು ಆ್ಯಪ್ ಅಥವಾ ವೆಬ್‌ಸೈಟ್‌ಗೆ ಸೈನ್ ಇನ್ ಮಾಡಿದಾಗ YouTube Music ಕಂಟೆಂಟ್‌ಗೂ ಅನ್ವಯಿಸುತ್ತದೆ.

ನನ್ನ ಮಗುವಿನ iOS ಸಾಧನದಲ್ಲಿ YouTube ಅಥವಾ YouTube Music ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗದಿದ್ದರೆ ಏನಾಗುತ್ತದೆ?

YouTube ಅಥವಾ YouTube Music ಆ್ಯಪ್ ಅನ್ನು ಡೌನ್‌ಲೋಡ್ ಮಾಡಲು, ಪೋಷಕರು ಅವರ ಮಗುವಿನ iOS ಸಾಧನದಲ್ಲಿ ಅವರ ಕಂಟೆಂಟ್ ಮತ್ತು ಗೌಪ್ಯತೆ ನಿರ್ಬಂಧಗಳ ಸೆಟ್ಟಿಂಗ್‌ಗಳನ್ನು ಪರಿಶೀಲಿಸಬೇಕು.

ನನ್ನ ಮಗು ಮೇಲ್ವಿಚಾರಣೆ ಮಾಡಿದ ಖಾತೆಯನ್ನು ಹೊಂದಿದ್ದರೆ, ಅವರು ನನ್ನ TV ಯಲ್ಲಿ YouTube ಅನ್ನು ಬಳಸಬಹುದೇ?

ಮೇಲ್ವಿಚಾರಣೆ ಮಾಡಿದ ಖಾತೆಗಳು ಅತ್ಯಂತ ಅರ್ಹ ಸ್ಮಾರ್ಟ್ TV ಗಳು, Microsoft Xbox, Nintendo Switch, ಮತ್ತು Sony PlayStation ನಲ್ಲಿ YouTube ಅನ್ನು ಬಳಸಬಹುದು. ಮೇಲ್ವಿಚಾರಣೆ ಮಾಡಿದ ಖಾತೆಗಳು ಹಳೆಯ Android TV ಸಾಧನಗಳಲ್ಲಿ ಬೆಂಬಲಿತವಾಗಿಲ್ಲ.

Google Assistant ಅನ್ನು-ಸಕ್ರಿಯಗೊಳಿಸಲಾಗಿರುವ ಸಾಧನವನ್ನು ಬಳಸಿಕೊಂಡು ನಾನು ಮೇಲ್ವಿಚಾರಣೆ ಮಾಡಿದ ಖಾತೆಯನ್ನು ಹೇಗೆ ಹೊಂದಿಸುವುದು?

ನಿಮ್ಮ ಮಗುವನ್ನು ಸೇರಿಸಲು, ನಿಮ್ಮ ಮಗು ನಿಮ್ಮ ಸಾಧನಗಳಲ್ಲಿ Google Assistant ಅನ್ನು ಬಳಸಲು ಅನುಮತಿಸಿ ಎಂಬುದರಲ್ಲಿರುವ ಹಂತಗಳನ್ನು ಅನುಸರಿಸಿ.  ನಿಮ್ಮ ಮಗುವಿನ Google ಖಾತೆ ಮತ್ತು ಧ್ವನಿಯನ್ನು ಸಾಧನಕ್ಕೆ ಸೇರಿಸಿದರೆ, ಮೇಲ್ವಿಚಾರಣೆ ಮಾಡಿದ ಖಾತೆಗಳು ಹಂಚಿಕೊಂಡ ಸಾಧನಗಳಲ್ಲಿ Google Assistant ಅನ್ನು ಬಳಸಬಹುದು.

ಅನುಚಿತವಾದ ಕಂಟೆಂಟ್ ಅನ್ನು YouTube ಹೇಗೆ ಫಿಲ್ಟರ್ ಮಾಡುತ್ತದೆ?

YouTube ನಲ್ಲಿ ಏನನ್ನು ಅನುಮತಿಸಲಾಗಿದೆ ಮತ್ತು ಅನುಮತಿಸಲಾಗಿಲ್ಲ ಎಂಬುದರ ಕುರಿತು ನಮ್ಮ ಸಮುದಾಯ ಮಾರ್ಗಸೂಚಿಗಳು ಸ್ಥೂಲಚಿತ್ರಣವನ್ನು ಒದಗಿಸುತ್ತವೆ. ಅವರ ವಯಸ್ಸನ್ನು ಪರಿಗಣಿಸದೆ, ಈ ಮಾರ್ಗಸೂಚಿಗಳು ಪ್ರತಿಯೊಬ್ಬರಿಗೂ ಅನ್ವಯಿಸುತ್ತವೆ. ನಿಮ್ಮ ಮಗುವಿಗೆ ನೀವು ಮೇಲ್ವಿಚಾರಣೆ ಮಾಡಿದ ಖಾತೆಯನ್ನು ಹೊಂದಿಸಿದರೆ, ಬೇರೆ ಕಂಟೆಂಟ್ ಸೆಟ್ಟಿಂಗ್‌ಗಳಿಗೆ ಯಾವ ಕಂಟೆಂಟ್ ಅರ್ಹವಾಗಿದೆ ಎಂದು ಕಂಡುಹಿಡಿಯಲು ನೀತಿಗಳು ಇವೆ.

ನಮ್ಮ ಬಳಕೆದಾರರ ಕುರಿತು ನಾವು ಅಪಾರ ಕಾಳಜಿ ವಹಿಸುತ್ತೇವೆ ಮತ್ತು ಸೂಕ್ತವಲ್ಲದ ಕಂಟೆಂಟ್ ಅನ್ನು ಪ್ರತ್ಯೇಕಿಸಲು ಹೆಚ್ಚಿನ ಶ್ರಮವಹಿಸುತ್ತಿದ್ದೇವೆ, ಆದರೆ ಫಿಲ್ಟರ್‌ಗಳ ಯಾವುದೇ ಸ್ವಯಂಚಾಲಿತ ಸಿಸ್ಟಂ ಸಹ ಪರಿಪೂರ್ಣವಲ್ಲ. ನಿಮ್ಮ ಮಗುವಿಗಾಗಿ ನೀವು ಯಾವುದೇ ಸಮಯದಲ್ಲಿ ಆ್ಯಪ್ ಅನುಮತಿ ಮತ್ತು ಕಂಟೆಂಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು. YouTube ಗೆ ಇದು ಸೂಕ್ತವಲ್ಲ ಎಂದು ನೀವು ಭಾವಿಸುವ ವಿಷಯವೇನಾದರೂ ನಿಮಗೆ ಕಂಡುಬಂದರೆ, ನೀವು ಅದನ್ನು ವರದಿ ಮಾಡಬಹುದು.

ಮೇಲ್ವಿಚಾರಣೆ ಮಾಡಿದ ಖಾತೆಗಳೊಂದಿಗೆ ಜಾಹೀರಾತುಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಮಗುವನ್ನು ಉತ್ತಮವಾಗಿ ರಕ್ಷಿಸಲು, ಕೆಲವು ವರ್ಗಗಳಲ್ಲಿರುವ ಜಾಹೀರಾತುಗಳನ್ನು ನಿಷೇಧಿಸಲಾಗಿದೆ ಮತ್ತು ವೈಯಕ್ತೀಕರಿಸಿದ ಜಾಹೀರಾತುಗಳನ್ನು ಆಫ್ ಮಾಡಲಾಗಿದೆ. "ಮಕ್ಕಳಿಗಾಗಿ ರಚಿಸಲಾಗಿದೆ" ಕಂಟೆಂಟ್‌ನ ವೀಕ್ಷಕರು ವೀಡಿಯೊ ಜಾಹೀರಾತನ್ನು ತೋರಿಸುವ ಮೊದಲು ಮತ್ತು ನಂತರ ಜಾಹೀರಾತು ಬಂಪರ್ ಅನ್ನು ನೋಡಬಹುದು. ಜಾಹೀರಾತು ಪ್ರಾರಂಭವಾಗುವಾಗ ಮತ್ತು ಮುಗಿಯುವಾಗ ಅವರನ್ನು ಎಚ್ಚರಿಸಲು ಈ ಬಂಪರ್ ಸಹಾಯ ಮಾಡುತ್ತದೆ. ನೀವು YouTube Premium ಕುಟುಂಬ ಯೋಜನೆಯನ್ನು ಹೊಂದಿದ್ದರೆ, ನಿಮ್ಮ ಮಗು ಜಾಹೀರಾತು-ಮುಕ್ತ ಕಂಟೆಂಟ್‌ಗೆ ಮತ್ತು ಸದಸ್ಯತ್ವದ ಇತರ ಹಂಚಿಕೊಂಡ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.

ರಚನೆಕಾರರು ಅವರ ವೀಡಿಯೊದಲ್ಲಿ ಪಾವತಿಸಿದ ಉತ್ಪನ್ನ ಇರಿಸುವಿಕೆ ಅಥವಾ ಅನುಮೋದನೆ ಇದೆ ಎಂದು ನಮಗೆ ತಿಳಿಸಿದ್ದರೆ, YouTube ನಲ್ಲಿರುವ ಮೇಲ್ವಿಚಾರಣೆ ಮಾಡಿದ ಖಾತೆಗಳಲ್ಲಿ ಅದನ್ನು ತೋರಿಸಲಾಗುವುದು. ಈ ವೀಡಿಯೊಗಳು ಮಕ್ಕಳಿಗಾಗಿ ರಚಿಸಲಾಗಿರುವ ವೀಡಿಯೊಗಳಲ್ಲಿರುವ ಆ್ಯಡ್‌ ನೀತಿಯನ್ನು ಸಹ ಅನುಸರಿಸಬೇಕು.

ನನ್ನ ಮಗುವಿನ ಗೌಪ್ಯತೆಯನ್ನು YouTube ಹೇಗೆ ರಕ್ಷಿಸುತ್ತದೆ?

YouTube ಎಂಬುದು Google ನ ಭಾಗವಾಗಿದೆ ಮತ್ತು Google ನ ಗೌಪ್ಯತೆ ನೀತಿಗಳು ಮತ್ತು ತತ್ವಗಳನ್ನು ಪಾಲಿಸುತ್ತದೆ. ನಿಮ್ಮ ಮಗುವಿನ Google ಖಾತೆಗೆ ಸಂಬಂಧಿಸಿದಂತೆ ನಾವು ಯಾವ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಮುಖ್ಯ ಎಂದು ನಮಗೆ ತಿಳಿದಿದೆ. ನಾವು ಅದನ್ನು ಏಕೆ ಸಂಗ್ರಹಿಸುತ್ತೇವೆ ಮತ್ತು ಆ ಮಾಹಿತಿಯನ್ನು ನೀವು ಹೇಗೆ ನಿಯಂತ್ರಿಸಬಹುದು ಮತ್ತು ಅಳಿಸಬಹುದು ಎಂಬುದನ್ನು ನೀವು ತಿಳಿಯಲೇಬೇಕು ಎಂಬುದು ಸಹ ನಮಗೆ ತಿಳಿದಿದೆ. Google ಗೌಪ್ಯತಾ ನೀತಿ ಮತ್ತು 13 ವರ್ಷದೊಳಗಿನ ಮಕ್ಕಳಿಗಾಗಿ (ಅಥವಾ ಅವರ ದೇಶ/ಪ್ರದೇಶದಲ್ಲಿನ ಸೂಕ್ತವಾದ ವಯಸ್ಸು) ಇರುವ Google ಖಾತೆಗಳ ನಮ್ಮ ಗೌಪ್ಯತೆ ಸೂಚನೆಯು ನಮ್ಮ ಗೌಪ್ಯತೆಯ ರೂಢಿಗಳನ್ನು ವಿವರಿಸುತ್ತದೆ.

ನಿಮ್ಮ ಮಗು ತನ್ನ ಖಾತೆಯಲ್ಲಿ "YouTube ನಲ್ಲಿ ನಿಮ್ಮ ಡೇಟಾ" ಅಡಿಯಲ್ಲಿ ಅವರ YouTube ಗೌಪ್ಯತೆ ಸೆಟ್ಟಿಂಗ್‌ಗಳು ಮತ್ತು ನಿಯಂತ್ರಣಗಳನ್ನು ನಿರ್ವಹಿಸಬಹುದು ಮತ್ತು ಆ ಬಗ್ಗೆ ಇನ್ನಷ್ಟು ತಿಳಿಯಬಹುದು. ಈ ಪುಟವು ಅವರ ವೀಡಿಯೊ ಮತ್ತು ಚಟುವಟಿಕೆ ಡೇಟಾದ ಸಾರಾಂಶವನ್ನು ಮತ್ತು ಈ ಡೇಟಾವನ್ನು ನಿರ್ವಹಿಸಲು ಸೆಟ್ಟಿಂಗ್‌ಗಳನ್ನು ಒಳಗೊಂಡಿದೆ. ಪುಟವು ಅವರ YouTube ಅನುಭವವನ್ನು ಸುಧಾರಿಸಲು ಅವರ ಡೇಟಾವನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಕುರಿತು ಮಾಹಿತಿಯನ್ನು ವಿವರಿಸುತ್ತದೆ, ಉದಾಹರಣೆಗೆ ಅವರು ವೀಕ್ಷಿಸಿದ್ದನ್ನು ಅವರಿಗೆ ನೆನಪಿಸುವುದು ಮತ್ತು ಶಿಫಾರಸುಗಳನ್ನು ನೀಡುವುದು.

ನಿಮ್ಮ ಮಗುವಿನ Google ಖಾತೆಯ ಪೋಷಕ ನಿರ್ವಾಹಕರಾಗಿ, Family Link ನಿಂದ ನೀವು ಅವರ ಹುಡುಕಾಟ ಮತ್ತು ವೀಕ್ಷಣೆ ಇತಿಹಾಸವನ್ನು ವಿರಾಮಗೊಳಿಸಬಹುದು ಅಥವಾ ತೆರವುಗೊಳಿಸಬಹುದು. YouTube ನಲ್ಲಿರುವ ನಿಮ್ಮ ಪೋಷಕ ಸೆಟ್ಟಿಂಗ್‌ಗಳು ಪುಟದಿಂದ ನೀವು ಇತಿಹಾಸವನ್ನು ಸಹ ತೆರವುಗೊಳಿಸಬಹುದು.

ಶಾಲೆಗಳು ಅಥವಾ ಶೈಕ್ಷಣಿಕ ಸಂಸ್ಥೆಗಳಿಗೆ ಮೇಲ್ವಿಚಾರಣೆ ಮಾಡಿದ ಖಾತೆಗಳು ಲಭ್ಯ ಇವೆಯೇ?

ಮೇಲ್ವಿಚಾರಣೆ ಮಾಡಿದ ಖಾತೆಗಳು ಪ್ರಸ್ತುತ ವೈಯಕ್ತಿಕ ಖಾತೆಗಳಿಗಾಗಿ ಮಾತ್ರ ಲಭ್ಯ ಇವೆ. ಶಾಲೆಗಳು ಅಥವಾ ಶೈಕ್ಷಣಿಕ ಸಂಸ್ಥೆಗಳಿಗೆ ಮೇಲ್ವಿಚಾರಣೆ ಮಾಡಿದ ಖಾತೆಗಳು ಲಭ್ಯವಿಲ್ಲ. ನಿಮ್ಮ ಸಾಧನಕ್ಕೆ ನೀವು ಹೇಗೆ ಸೈನ್ ಆಗುತ್ತೀರಿ ಎಂಬುದು YouTube ಅನ್ನು ಬಳಸಬಹುದೇ ಎಂಬುದರ ಮೇಲೆ ಪರಿಣಾಮ ಬೀರಬಹುದು. ಮೇಲ್ವಿಚಾರಣೆ ಮಾಡಿದ ಖಾತೆಗಳನ್ನು ಕುರಿತು ಇನ್ನಷ್ಟು ತಿಳಿಯಿರಿ.

YouTube ನಲ್ಲಿರುವ ಮೇಲ್ವಿಚಾರಣೆ ಮಾಡಿದ ಖಾತೆಗಳಿಗೆ ಯಾರು ಅರ್ಹರು?

ನಿಮ್ಮ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ (ಅಥವಾ ಅವರ ದೇಶ/ಪ್ರದೇಶದಲ್ಲಿನ ಸೂಕ್ತವಾದ ವಯಸ್ಸು) ಮಗುವಿಗಾಗಿ ನೀವು YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಖಾತೆಯನ್ನು ಹೊಂದಿಸಬಹುದು.

ಕೆಳಗಿನ ಅಂಶಗಳ ಅನುಸಾರ ನೀವು YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಖಾತೆಗೆ ಅರ್ಹರಾಗುವುದಿಲ್ಲ:

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
374997963398755311
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false