ಮೇಲ್ವಿಚಾರಣೆ ಮಾಡಿದ ಅನುಭವಗಳಿಗಾಗಿ ಕಂಟೆಂಟ್ ಸೆಟ್ಟಿಂಗ್‌ಗಳನ್ನು ಹೊಂದಿಸಿ

ಪೋಷಕರು ತಮ್ಮ ಮಕ್ಕಳ YouTube ಪ್ರಯಾಣಕ್ಕೆ ಮಾರ್ಗದರ್ಶನ ನೀಡಲು ಅವರಿಗೆ ಆಯ್ಕೆಗಳನ್ನು ನೀಡುತ್ತೇವೆ. ಮಕ್ಕಳು YouTube ನಾದ್ಯಂತ ವೀಡಿಯೊಗಳ ಲೋಕವನ್ನು ಎಕ್ಸ್‌ಪ್ಲೋರ್ ಮಾಡಿದಾಗ ಅವರು ಹೊಸ ಆಸಕ್ತಿಗಳನ್ನು ಕಂಡುಹಿಡಿಯಬಹುದು, ವೈವಿಧ್ಯಮಯ ದೃಷ್ಟಿಕೋನಗಳಿಂದ ಕಲಿಯಬಹುದು ಮತ್ತು ಇವರಲ್ಲಿ ನಾನೂ ಸೇರಿದ್ದೇನೆ ಎಂಬ ಭಾವಪ್ರಜ್ಞೆ ಉಂಟಾಗಬಹುದು ಎಂದು ನಾವು ಭಾವಿಸಿದ್ದೇವೆ. YouTube ನಲ್ಲಿ ಕಂಟೆಂಟ್‌ನ ವಿಶಾಲ ಜಗತ್ತನ್ನು ಎಕ್ಸ್‌ಪ್ಲೋರ್ ಮಾಡಲು ನಿಮ್ಮ ಮಗು ಸಿದ್ಧವಾಗಿರಬಹುದು ಎಂದು ನೀವು ಭಾವಿಸಿದರೆ, ಕೆಲವು ಆಯ್ಕೆಗಳಿವೆ. ಸುರಕ್ಷಿತ ಮತ್ತು ಸರಳವಾದ ಅನುಭವಕ್ಕಾಗಿ ನೀವು ನಮ್ಮ ಪ್ರತ್ಯೇಕ YouTube Kids ಆ್ಯಪ್, ಅಥವಾ YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವವನ್ನು ರಚಿಸುವುದು ಮತ್ತು ನಿರ್ವಹಿಸುವುದು ಇವನ್ನು ಬಳಸಿಕೊಂಡು ಈ ಎರಡರಲ್ಲಿ ಒಂದನ್ನು ಆರಿಸಬಹುದು.

ಮೇಲ್ವಿಚಾರಣೆ ಮಾಡಿದ ಅನುಭವವನ್ನು ಬಳಸುವ ಕುಟುಂಬಗಳಿಗಾಗಿ ಕಂಟೆಂಟ್ ಸೆಟ್ಟಿಂಗ್‌ಗಳು

YouTube ನಲ್ಲಿ, ವೈವಿಧ್ಯಮಯ ಕಂಟೆಂಟ್ ಮತ್ತು ಧ್ವನಿಗಳ ಶ್ರೇಣಿಯಿಂದ ಕೇಳಿಸಿಕೊಳ್ಳುವುದು ನಾವು ಒಬ್ಬರು ಮತ್ತೊಬ್ಬರನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ ಎಂದು ನಾವು ನಂಬಿದ್ದೇವೆ. ಈ ವೈವಿಧ್ಯತೆ ಎಂದರೆ ನೀವು ಒಪ್ಪದಿರುವ ದೃಷ್ಟಿಕೋನಗಳಿಗೆ ಒಡ್ಡಿಕೊಳ್ಳುವುದು ಎಂದರ್ಥ. ಎಲ್ಲರಿಗಾಗಿ ಸುರಕ್ಷಿತ ವೀಕ್ಷಣಾ ಅನುಭವವನ್ನು ನಿರ್ಮಿಸುವುದಕ್ಕೆ ಸಹಾಯ ಮಾಡಲು ನಾವು ಸಮುದಾಯ ಮಾರ್ಗಸೂಚಿಗಳನ್ನು ಹೊಂದಿದ್ದೇವೆ. ಮೇಲ್ವಿಚಾರಣೆ ಮಾಡಿದ ಅನುಭವದಲ್ಲಿರುವ ಯುವ ವೀಕ್ಷಕರಿಗೆ ನಿರ್ದಿಷ್ಟವಾಗಿ ಅನ್ವಯಿಸುವ ಹೆಚ್ಚಿನ ಕಂಟೆಂಟ್ ನೀತಿಗಳನ್ನು ಸಹ ನಾವು ಕೆಳಗೆ ವಿವರಿಸಿದ್ದೇವೆ. ನಿಮ್ಮ ಮಕ್ಕಳಿಗೆ ನೀವು YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವವನ್ನು ಪರಿಗಣಿಸುತ್ತಿದ್ದರೆ, ಪ್ರಾರಂಭಿಸುವ ಮೊದಲು ನಿಮ್ಮ ಕುಟುಂಬದೊಂದಿಗೆ ಈ ಗೈಡ್ ಅನ್ನು ಪರಿಶೀಲಿಸಲು ನಾವು ಉತ್ತೇಜಿಸುತ್ತೇವೆ.

ನಮ್ಮ ಅಪ್ರೋಚ್

ಕಂಟೆಂಟ್ ಸೂಕ್ತತೆ ಕುರಿತು YouTube ಕಾರ್ಯನೀತಿಗಳ ಗುಂಪನ್ನು ಅಭಿವೃದ್ಧಿಪಡಿಸಿದ್ದು, ಅದು ಸಾಮಾನ್ಯವಾಗಿ TV ಮತ್ತು ಚಲನಚಿತ್ರ ಕಂಟೆಂಟ್ ರೇಟಿಂಗ್‌ಗಳೊಂದಿಗೆ ಒಟ್ಟುಗೂಡುತ್ತದೆ. ಕುಟುಂಬಗಳಿಗೆ ಲಭ್ಯವಿರುವ ಬೇರೆ ಬೇರೆ ಕಂಟೆಂಟ್ ಸೆಟ್ಟಿಂಗ್‌ಗಳಲ್ಲಿ ಯಾವ ವೀಡಿಯೊಗಳು ಅರ್ಹವಾಗಿವೆ ಎಂಬುದಕ್ಕೆ ಮಾರ್ಗದರ್ಶನ ನೀಡುವುದಕ್ಕೆ ಈ ಕಾರ್ಯನೀತಿಗಳು ಸಹಾಯ ಮಾಡುತ್ತವೆ. ಮಕ್ಕಳ ಅಭಿವೃದ್ಧಿ, ಮಕ್ಕಳ ಮಾಧ್ಯಮ, ಡಿಜಿಟಲ್ ಕಲಿಕೆ ಮತ್ತು ಪೌರತ್ವದಲ್ಲಿ ವಿವಿಧ ಬಾಹ್ಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಈ ಕಾರ್ಯನೀತಿಗಳನ್ನು ಮತ್ತಷ್ಟು ಜ್ಞಾನಭರಿತವಾಗಿಸಲಾಗಿದೆ. ಈ ಕಂಟೆಂಟ್ ನೀತಿಗಳನ್ನು ಗಣನೆಗೆ ತೆಗೆದುಕೊಳ್ಳುವ ನಮ್ಮ ಸ್ವಯಂಚಾಲಿತ ಸಿಸ್ಟಂಗಳು, ನಂತರ ಪ್ರತಿ ಕಂಟೆಂಟ್ ಸೆಟ್ಟಿಂಗ್‌ನಲ್ಲಿ ಸೇರಿಸಲು ಸೂಕ್ತವಾದ ವೀಡಿಯೊಗಳನ್ನು ಗುರುತಿಸುತ್ತವೆ. ನಮ್ಮ ಸಿಸ್ಟಂಗಳು ಪರಿಪೂರ್ಣವಲ್ಲ ಮತ್ತು ಅವು ತಪ್ಪುಗಳನ್ನು ಮಾಡುತ್ತವೆ ಎಂದು ನಮಗೆ ತಿಳಿದಿದೆ. ನಮ್ಮ ಸಿಸ್ಟಂಗಳನ್ನು ನಿರಂತರವಾಗಿ ಸುಧಾರಿಸಲು ನಾವು ಎಂಜಿನಿಯರ್‌ಗಳು ಮತ್ತು ಮಾನವ ವಿಮರ್ಶಕರ ತಂಡದ ಜತೆಗಿನ ಪಾಲುದಾರಿಕೆಯನ್ನು ಹೊಂದಿದ್ದೇವೆ. ನಮ್ಮ ನೀತಿಗಳನ್ನು ನಾವು ನಿಯಮಿತವಾಗಿ ಮರುಮೌಲ್ಯಮಾಪನ ಮಾಡುತ್ತೇವೆ, ಆದ್ದರಿಂದ ಕೆಳಗೆ ಪಟ್ಟಿ ಮಾಡಲಾದ ನೀತಿಗಳು ಸಮಗ್ರವಾಗಿಲ್ಲದಿರಬಹುದು.

YouTube ಗೆ ಇದು ಸೂಕ್ತವಲ್ಲ ಎಂದು ನೀವು ಭಾವಿಸುವ ವಿಷಯವೇನಾದರೂ ನಿಮಗೆ ಕಂಡುಬಂದರೆ, ನೀವು ಅದನ್ನು ವರದಿ ಮಾಡಬಹುದು.

ಕಂಟೆಂಟ್ ಸೆಟ್ಟಿಂಗ್‌ಗಳು

ಎಕ್ಸ್‌ಪ್ಲೋರ್ ಮಾಡಿ 9+ ವಯಸ್ಸಿನ ವೀಕ್ಷಕರಿಗೆ ಸಾಮಾನ್ಯವಾಗಿ ಕಂಟೆಂಟ್ ರೇಟಿಂಗ್‌ಗಳನ್ನು ಒಟ್ಟುಗೂಡಿಸುತ್ತದೆ
ಇನ್ನಷ್ಟು ಎಕ್ಸ್‌ಫ್ಲೋರ್ ಮಾಡಿ 13+ ವಯಸ್ಸಿನ ವೀಕ್ಷಕರಿಗೆ ಸಾಮಾನ್ಯವಾಗಿ ಕಂಟೆಂಟ್ ರೇಟಿಂಗ್‌ಗಳನ್ನು ಒಟ್ಟುಗೂಡಿಸುತ್ತದೆ
YouTube ನಲ್ಲಿರುವ ಬಹುತೇಕ ಎಲ್ಲವೂ 18+ ಎಂದು ಗುರುತಿಸಲಾದ ಕಂಟೆಂಟ್ ಮತ್ತು ವೀಕ್ಷಕರಿಗೆ ಸೂಕ್ತವಲ್ಲದೆ ಇರಬಹುದಾದ ಇತರ ವೀಡಿಯೊಗಳನ್ನು ಹೊರತುಪಡಿಸಿ YouTube ನಲ್ಲಿರುವ ಬಹುತೇಕ ಎಲ್ಲಾ ವೀಡಿಯೊಗಳು ಮೇಲ್ವಿಚಾರಣೆ ಮಾಡಿದ ಅನುಭವಗಳನ್ನು ಬಳಸುತ್ತವೆ

ಕಂಟೆಂಟ್ ನೀತಿಗಳು

ನಿಮ್ಮ ಮಗುವಿಗೆ ನೀವು ಮೇಲ್ವಿಚಾರಣೆ ಮಾಡಿದ ಖಾತೆಯನ್ನು ಹೊಂದಿಸಿದಾಗ ನಿಮಗೆ ಲಭ್ಯವಿರುವ ಭಿನ್ನ ಕಂಟೆಂಟ್ ಸೆಟ್ಟಿಂಗ್‌ಗಳ ನಡುವೆ ನಮ್ಮ ಕಂಟೆಂಟ್ ನೀತಿಗಳು ಭಿನ್ನವಾಗಿರುತ್ತವೆ. ಈ ಕಂಟೆಂಟ್ ನೀತಿಗಳನ್ನು ಗಣನೆಗೆ ತೆಗೆದುಕೊಳ್ಳುವ ನಮ್ಮ ಸ್ವಯಂಚಾಲಿತ ಸಿಸ್ಟಂಗಳು, ನಂತರ ಪ್ರತಿ ಕಂಟೆಂಟ್ ಸೆಟ್ಟಿಂಗ್‌ನಲ್ಲಿ ಸೇರಿಸಲು ಸೂಕ್ತವಾದ ಕಂಟೆಂಟ್ ಅನ್ನು ಗುರುತಿಸುತ್ತವೆ. ನಮ್ಮ ಸಿಸ್ಟಂಗಳು ಪರಿಪೂರ್ಣವಲ್ಲ ಮತ್ತು ಅವು ತಪ್ಪುಗಳನ್ನು ಮಾಡುತ್ತವೆ ಎಂದು ನಮಗೆ ತಿಳಿದಿದೆ. 

ಎಕ್ಸ್‌ಪ್ಲೋರ್ ಮಾಡಿ

YouTube Kids ಬಳಕೆಯನ್ನು ನಿಲ್ಲಿಸಲು ಮತ್ತು YouTube ನಲ್ಲಿ ಕಂಟೆಂಟ್‌ನ ಇನ್ನಷ್ಟು ಬೃಹತ್ ಲೋಕವನ್ನು ಅನ್ವೇಷಿಸುವುದನ್ನು ಪ್ರಾರಂಭಿಸಲು ಸಿದ್ಧವಾಗಿರುವ ಕುಟುಂಬಗಳಿಗಾಗಿ "ಎಕ್ಸ್‌ಪ್ಲೋರ್" ಇದೆ. ಈ ಸೆಟ್ಟಿಂಗ್ 9+ ವಯಸ್ಸಿನ ವೀಕ್ಷಕರಿಗೆ ಇರುವ ಕಂಟೆಂಟ್ ರೇಟಿಂಗ್‌ಗಳೊಂದಿಗೆ ಸಾಮಾನ್ಯವಾಗಿ ಒಟ್ಟುಗೂಡುವ ವಿಶಾಲ ಶ್ರೇಣಿಯ ವೀಡಿಯೊಗಳನ್ನು ಫೀಚರ್ ಮಾಡುತ್ತದೆ. ವೀಡಿಯೊಗಳು ವ್ಲಾಗ್‌ಗಳು, ಟುಟೋರಿಯಲ್‌ಗಳು, ಗೇಮಿಂಗ್ ವೀಡಿಯೊಗಳು, ಸಂಗೀತ ವೀಡಿಯೊಗಳು, ಸುದ್ದಿ, ಶೈಕ್ಷಣಿಕ ಕಂಟೆಂಟ್, DIY, ಕಲೆ ಮತ್ತು ಕರಕುಶಲ, ನೃತ್ಯ ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿರುತ್ತವೆ. ಕೆಲವು ವೀಡಿಯೊಗಳಲ್ಲಿ ಈ ಕೆಳಗಿನವುಗಳು ಒಳಗೊಂಡಿರಬಹುದು:

ವಯಸ್ಕರ ಕಂಟೆಂಟ್: ಪ್ರೀತಿ ಮತ್ತು ಆಕರ್ಷಣೆಯ ತೀಕ್ಷ್ಣವಲ್ಲದ ಪ್ರದರ್ಶನಗಳು ಸೇರಿದಂತೆ, ರೊಮ್ಯಾಂಟಿಕ್ ಥೀಮ್‌ಗಳಿರುವ ವೀಡಿಯೊಗಳು. ಲೈಂಗಿಕ ಮತ್ತು ಲಿಂಗ ಗುರುತಿಸುವಿಕೆ ಹಾಗೂ ಪ್ರೌಢಾವಸ್ಥೆ ಮತ್ತು ಸಂತಾನೋತ್ಪತ್ತಿಯಂತಹ ಲೈಂಗಿಕ ಶಿಕ್ಷಣ ವಿಷಯಗಳ ಕುರಿತು, ವಯಸ್ಸಿಗೆ ಸೂಕ್ತವಾದ ಶೈಕ್ಷಣಿಕ ವೀಡಿಯೊಗಳು.

ಹಿಂಸೆ: ಶೈಕ್ಷಣಿಕವಾಗಿದ್ದರೂ, ಘಟನೆಯ ಸಂದರ್ಭದಕ್ಕೆ ತಕ್ಕಂತೆ ಲಘುವಾದ ಹಿಂಸೆಯನ್ನು ಒಳಗೊಂಡಿರಬಹುದಾದ, ಐತಿಹಾಸಿಕ ಘಟನೆಗಳಿಗೆ ಸಂಬಂಧಿಸಿದ, ವಯಸ್ಸಿಗೆ-ಸೂಕ್ತವಾದ ವೀಡಿಯೊಗಳು. ಕಾರ್ಟೂನ್‌ಗಳು, ಗೇಮಿಂಗ್, ಟೆಲಿವಿಷನ್ ಶೋಗಳು ಹಾಗೂ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿರುವ, ಸ್ಕ್ರಿಪ್ಟ್ ಮಾಡಿರುವ ಮತ್ತು ಆ್ಯನಿಮೇಟ್ ಮಾಡಿರುವ, ಗ್ರಾಫಿಕ್ ಅಲ್ಲದ ಹಿಂಸೆ.

ಆಯುಧಗಳು: ಟಾಯ್ ಪ್ಲೇ, ಗೇಮಿಂಗ್, ಆ್ಯನಿಮೇಶನ್ ಸಂದರ್ಭದಲ್ಲಿ ಅವಾಸ್ತವಿಕ ಆಯುಧಗಳನ್ನು ಮತ್ತು ಐತಿಹಾಸಿಕ ಸಂದರ್ಭದಲ್ಲಿ ಕಲಾತ್ಮಕ ಆಯುಧಗಳನ್ನು ಒಳಗೊಂಡಿರುವ ವೀಡಿಯೊಗಳು. 

ಅಪಾಯಕಾರಿ ಕಂಟೆಂಟ್: ಸಾಹಸದೃಶ್ಯಗಳು, ಕೀಟಲೆಗಳು ಮತ್ತು ಅಪ್ರಾಪ್ತರಿಂದ ಸುಲಭವಾಗಿ ಅನುಕರಿಸಲು ಆಗದ ಸವಾಲುಗಳನ್ನು ಒಳಗೊಂಡಿರುವ ಅಥವಾ ಸೂಕ್ತವಾದ ಸುರಕ್ಷತಾ ಪ್ರಕಟಣೆಗಳನ್ನು ಹೊಂದಿರುವ ಪ್ರಮುಖ ಹಕ್ಕುನಿರಾಕರಣೆಯನ್ನು ಒಳಗೊಂಡಿರುವ ವೀಡಿಯೊಗಳು. ಮದ್ಯ ಅಥವಾ ತಂಬಾಕನ್ನು ಸಂಕ್ಷಿಪ್ತವಾಗಿ ಪ್ರದರ್ಶಿಸುವ ವೀಡಿಯೊಗಳು. 

ಸೂಕ್ತವಲ್ಲದ ಭಾಷೆ:ಕಿರುಕುಳ-ರಹಿತ ಸಂದರ್ಭದಲ್ಲಿ "ಡ್ಯಾಮ್ನಿಟ್" ಅಥವಾ "ಹೆಲ್" ಎಂಬಂತಹ ಲಘುವಾದ ಆಕ್ಷೇಪಾರ್ಹ ಭಾಷೆಯನ್ನು ವಿರಳವಾಗಿ ಬಳಸುವ ವೀಡಿಯೊಗಳು.

ಪಥ್ಯ, ಫಿಟ್‌ನೆಸ್ ಮತ್ತು ಸೌಂದರ್ಯ: ಸೌಂದರ್ಯ ಉತ್ಪನ್ನಗಳ ವಿಮರ್ಶೆಗಳು, ವಯಸ್ಸಿಗೆ ಸೂಕ್ತವಾದ ಮೇಕಪ್ ಟುಟೋರಿಯಲ್‌ಗಳು ಹಾಗೂ ಯೋಗಕ್ಷೇಮದ ಕುರಿತಾದ ಶೈಕ್ಷಣಿಕ ಕಂಟೆಂಟ್ ಅನ್ನು ಹೊಂದಿರುವ ವೀಡಿಯೊಗಳು. ಈ ಕಂಟೆಂಟ್ ಆರೋಗ್ಯಪೂರ್ಣ ಆಹಾರಸೇವನೆ ಮತ್ತು ವ್ಯಾಯಾಮವನ್ನು ಒಳಗೊಂಡಿದೆ. 

ಸೂಕ್ಷ್ಮ ವಿಷಯಗಳು: ಮಾನಸಿಕ ಆರೋಗ್ಯ, ವ್ಯಸನ, ತಿನ್ನುವುದಕ್ಕೆ ಸಂಬಂಧಿಸಿದ ಅಸ್ವಸ್ಥತೆಗಳು, ನಷ್ಟ ಮತ್ತು ಯಾತನೆಯಂತಹ ಸೂಕ್ಷ್ಮ ವಿಷಯಗಳ ಕುರಿತು ಚರ್ಚಿಸುವ, ವಯಸ್ಸಿಗೆ ಸೂಕ್ತವಾದ ವೀಡಿಯೊಗಳು. ಈ ಸೆಟ್ಟಿಂಗ್‌ನಲ್ಲಿರುವ ವೀಡಿಯೊಗಳು ಗ್ರಾಫಿಕ್ ಚಿತ್ರಣವನ್ನು ತೋರಿಸುವುದಿಲ್ಲ ಮತ್ತು ಸಕಾರಾತ್ಮಕ ನಿಭಾಯಿಸುವಿಕೆ ಹಾಗೂ ಚೇತರಿಸಿಕೊಳ್ಳುವಿಕೆ ಕಾರ್ಯತಂತ್ರಗಳು ಹಾಗೂ ಸಹಾಯ ಕೋರುವುದರ ಮಹತ್ವದ ಮೇಲೆ ಗಮನ ಕೇಂದ್ರೀಕರಿಸುತ್ತವೆ.

ಸಂಗೀತದ ವೀಡಿಯೊಗಳು: ಸಂಗೀತದ ವೀಡಿಯೊಗಳು ಲಘು ಆಕ್ಷೇಪಾರ್ಹ ಭಾಷೆಯ ಸಾಹಿತ್ಯವನ್ನು ಹೊಂದಿರಬಹುದು ಅಥವಾ ಮದ್ಯ ಅಥವಾ ತಂಬಾಕನ್ನು ಪ್ರಸ್ತಾಪಿಸಬಹುದು. ವೀಡಿಯೊಗಳು ಅತಿಯಾಗಿರದ ಲೈಂಗಿಕ ನೃತ್ಯವನ್ನು ಮತ್ತು ಮದ್ಯ ಹಾಗೂ ತಂಬಾಕಿನ ವಿರಳ ಪ್ರದರ್ಶನಗಳನ್ನು ಸಹ ಒಳಗೊಂಡಿರಬಹುದು.

ಇನ್ನಷ್ಟು ಎಕ್ಸ್‌ಫ್ಲೋರ್ ಮಾಡಿ

YouTube ನ ವಿಶಾಲ ಲೋಕದ ಹೆಚ್ಚಿನದನ್ನು ಎಕ್ಸ್‌ಪ್ಲೋರ್ ಮಾಡಲು ಸಿದ್ಧವಾಗಿರುವ ಮಗುವಿಗೆ "ಎಕ್ಸ್‌ಪ್ಲೋರ್ ಮೋರ್" ಎಂಬುದಿದೆ. ಎಕ್ಸ್‌ಪ್ಲೋರ್‌ನಲ್ಲಿರುವ ಎಲ್ಲವನ್ನೂ ಈ ಸೆಟ್ಟಿಂಗ್ ಒಳಗೊಂಡಿರುತ್ತದೆ ಮತ್ತು 13+ ವಯೋಮಾನದ ವೀಕ್ಷಕರಿಗೆ ಸಾಮಾನ್ಯವಾಗಿ ಕಂಟೆಂಟ್ ರೇಟಿಂಗ್‌ಗಳೊಂದಿಗೆ ಒಟ್ಟುಗೂಡಿಸುವ ಇನ್ನೂ ವಿಶಾಲವಾದ ವೀಡಿಯೊಗಳನ್ನು ಒಳಗೊಂಡಿದೆ. ವೀಡಿಯೊಗಳು ಲೈವ್ ಸ್ಟ್ರೀಮ್‌ಗಳು, ವ್ಲಾಗ್‌ಗಳು, ಟುಟೋರಿಯಲ್‌ಗಳು, ಗೇಮಿಂಗ್ ವೀಡಿಯೊಗಳು, ಸುದ್ದಿ, ಶೈಕ್ಷಣಿಕ ವೀಡಿಯೊಗಳು, DIY, ಕಲೆ ಮತ್ತು ಕರಕುಶಲ, ನೃತ್ಯ ಮತ್ತು ಹೆಚ್ಚಿನದನ್ನು ಒಳಗೊಂಡಿವೆ. ಕೆಲವು ವೀಡಿಯೊಗಳಲ್ಲಿ ಈ ಕೆಳಗಿನವುಗಳು ಒಳಗೊಂಡಿರಬಹುದು:

ವಯಸ್ಕರ ಕಂಟೆಂಟ್: ಲೈಂಗಿಕ ಅನುಭವಗಳನ್ನು ಮತ್ತು ದೈಹಿಕ ಸಂಪರ್ಕದ ಪ್ರದರ್ಶನಗಳನ್ನು ಅಶ್ಲೀಲವಲ್ಲದ ರೀತಿ ಪರಿಗಣಿಸುವಂತಹ ಲೈಂಗಿಕ ಥೀಮ್‌ಗಳಿರುವ ವೀಡಿಯೊಗಳು. ಲೈಂಗಿಕ ಮತ್ತು ಲಿಂಗ ಗುರುತಿಸುವಿಕೆ ಹಾಗೂ ಲೈಂಗಿಕ ಅಭಿವೃದ್ಧಿ, ಸಂತಾನೋತ್ಪತ್ತಿ ಆರೋಗ್ಯ, ಇಂದ್ರಿಯನಿಗ್ರಹ ಮತ್ತು ರೋಗ ತಡೆಯುವಿಕೆಯಂತಹ ಲೈಂಗಿಕ ಶಿಕ್ಷಣ ವಿಷಯಗಳನ್ನು ಕುರಿತ ವೀಡಿಯೊಗಳು. 

ಹಿಂಸೆ: ಪ್ರಸ್ತುತ ಮತ್ತು ಐತಿಹಾಸಿಕ ಘಟನೆಗಳಿಗೆ ಸಂಬಂಧಿಸಿದ ಗ್ರಾಫಿಕ್-ಅಲ್ಲದ ಶೈಕ್ಷಣಿಕ ವೀಡಿಯೊಗಳು. ಗೇಮಿಂಗ್, ಟೆಲಿವಿಷನ್ ಶೋಗಳು ಹಾಗೂ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿರುವ, ಸ್ಕ್ರಿಪ್ಟ್ ಮಾಡಿರುವ ಮತ್ತು ಆ್ಯನಿಮೇಟ್ ಮಾಡಿರುವ ಕ್ಷಣಿಕವಾದ ಗ್ರಾಫಿಕ್ ಹಿಂಸೆ.

ಆಯುಧಗಳು: ಟೆಲಿವಿಷನ್ ಶೋಗಳು ಮತ್ತು ಚಲನಚಿತ್ರಗಳಲ್ಲಿ ಸಾಮಾನ್ಯವಾಗಿರುವ ಸ್ಕ್ರಿಪ್ಟ್ ಮಾಡಲಾದ ವೀಡಿಯೊಗಳಲ್ಲಿರುವ ನೈಜ ಮತ್ತು ವಾಸ್ತವವಾದ ಆಯುಧಗಳನ್ನು ಒಳಗೊಂಡಿರುವ ವೀಡಿಯೊಗಳು. ಕ್ರೀಡೆಯಲ್ಲಿ ಅಥವಾ ಗನ್ ಸುರಕ್ಷತೆ ಕುರಿತ ಶೈಕ್ಷಣಿಕ ಸಂದರ್ಭದಲ್ಲಿ ಬಳಸಲಾದ ನೈಜ ಗನ್‌ಗಳನ್ನು ಒಳಗೊಂಡಿರುವ ವೀಡಿಯೊಗಳು.

ಅಪಾಯಕಾರಿ ಕಂಟೆಂಟ್: ಸಾಹಸದೃಶ್ಯಗಳು, ಕೀಟಲೆಗಳು ಮತ್ತು ಗಂಭೀರವಾದ ಅಪಾಯ ಉಂಟು ಮಾಡಬಹುದಾದ ಆದರೆ ಅಪ್ರಾಪ್ತರು ಸುಲಭವಾಗಿ ಅನುಕರಿಸಬಹುದಾದ ಸವಾಲುಗಳಂತಹ ಅಪಾಯಕಾರಿ ಅಂಶಗಳನ್ನು ಒಳಗೊಂಡಿರುವ ವೀಡಿಯೊಗಳು. ಮದ್ಯ ಅಥವಾ ತಂಬಾಕಿನ ಪುನರಾವರ್ತಿತ ಬಳಕೆಯನ್ನು ಪ್ರದರ್ಶಿಸುವ ಅಥವಾ ತೋರಿಸುವ ವೀಡಿಯೊಗಳು. 

ಸೂಕ್ತವಲ್ಲದ ಭಾಷೆ: ಆಕ್ಷೇಪಾರ್ಹ ಭಾಷೆಯನ್ನು ಅಥವಾ ಕಿರುಕುಳವಲ್ಲದ ಅಥವಾ ಲೈಂಗಿಕವಲ್ಲದ ಸಂದರ್ಭದಲ್ಲಿ "ಬಿಚ್" ಅಥವಾ "ಆಸ್" ನಂತಹ ಬೈಗುಳವನ್ನು ಪದೇ ಪದೇ ಬಳಸುವುದನ್ನು ಒಳಗೊಂಡಿರುವ ವೀಡಿಯೊಗಳು. ವಿರಳವಾಗಿದ್ದು ಮತ್ತು ಕಿರುಕುಳವಲ್ಲದ ಸಂದರ್ಭದಲ್ಲಿ ಬಳಸಿದ್ದರೆ, ಮಾನಹಾನಿಕರವಾದ ನಿಂದನೆಗಳು ಕಟ್ಟುನಿಟ್ಟಾಗಿ ಶೈಕ್ಷಣಿಕ ಅಥವಾ ಸಂಗೀತದ ವೀಡಿಯೊ ಸಂದರ್ಭದಲ್ಲಿ ಕಾಣಿಸಿಕೊಳ್ಳಬಹುದು. 

ಪಥ್ಯ, ಫಿಟ್‌ನೆಸ್ ಮತ್ತು ಸೌಂದರ್ಯ: ಮೇಕಪ್ ಟುಟೋರಿಯಲ್‌ಗಳು, ಸೌಂದರ್ಯ ಟಿಪ್ಸ್ ಮತ್ತು ಲೈಫ್ ಹ್ಯಾಕ್‌ಗಳನ್ನು ಒಳಗೊಂಡ ವೀಡಿಯೊಗಳು ಮತ್ತು ಆರೋಗ್ಯಕರ ಆಹಾರ ಸೇವನೆ ಮತ್ತು ವ್ಯಾಯಾಮಕ್ಕೆ ಸಂಬಂಧಿಸಿದ ವೀಡಿಯೊಗಳು.

ಸೂಕ್ಷ್ಮ ವಿಷಯಗಳು: ಮಾನಸಿಕ ಆರೋಗ್ಯ, ಯೋಜಿತ ಆತ್ಮಹತ್ಯ, ಸ್ವಯಂ-ಹಾನಿ, ವ್ಯಸನ, ಆಹಾರ ಸೇವನೆಯ ಕಾಯಿಲೆಗಳು ಹಾಗೂ ನಷ್ಟ ಮತ್ತು ವ್ಯಥೆಯಂತಹ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದ ಗ್ರಾಫಿಕ್-ಅಲ್ಲದ ವೀಡಿಯೊಗಳು. ಈ ವೀಡಿಯೊಗಳು ಸಕಾರಾತ್ಮಕ ನಿಭಾಯಿಸುವಿಕೆ ಮತ್ತು ಚೇತರಿಸಿಕೊಳ್ಳುವಿಕೆ ಕಾರ್ಯತಂತ್ರಗಳು ಹಾಗೂ ಸಹಾಯ ಕೋರುವುದರ ಮಹತ್ವದ ಮೇಲೆ ಗಮನ ಕೇಂದ್ರೀಕರಿಸುತ್ತವೆ.

ಸಂಗೀತದ ವೀಡಿಯೊಗಳು: ಸಂಗೀತದ ವೀಡಿಯೊಗಳು ಲೈಂಗಿಕ ಉಲ್ಲೇಖಗಳು, ವಿರಳವಾದ ಅಶ್ಲೀಲ ಬೈಗುಳ ಅಥವಾ ಕಿರುಕುಳವಲ್ಲದ ಅಥವಾ ದ್ವೇಷಪೂರಿತ ಸಂದರ್ಭದಲ್ಲಿನ ಅವಮಾನಕಾರಿ ನಿಂದನೆಯನ್ನು ಒಳಗೊಂಡಿರಬಹುದು. ವೀಡಿಯೊಗಳು ಲೈಂಗಿಕ ನೃತ್ಯವನ್ನು ಮತ್ತು ಮದ್ಯ, ತಂಬಾಕು ಅಥವಾ ಗಾಂಜಾ ಬಳಕೆಯನ್ನು ಸಹ ಒಳಗೊಂಡಿರಬಹುದು. 

YouTube ನಲ್ಲಿರುವ ಬಹುತೇಕ ಎಲ್ಲವೂ
ವಯಸ್ಕ ಹರೆಯದವರ ಕಂಟೆಂಟ್ ಅನ್ನು ಒಳಗೊಂಡಂತೆ, YouTube ವಿಶಾಲ ಲೋಕವನ್ನು ಎಕ್ಸ್‌ಪ್ಲೋರ್ ಮಾಡಲು ಸಿದ್ಧವಾಗಿರುವ ಮಗುವಿಗಾಗಿ “ಮೋಸ್ಟ್ ಆಫ್ YouTube'' ಇದೆ. 18+ ಎಂದು ಗುರುತಿಸಲಾದ ವೀಡಿಯೊಗಳು ಮತ್ತು ಮೇಲ್ವಿಚಾರಣೆ ಮಾಡಿದ ಅನುಭವಗಳನ್ನು ಬಳಸುವ ವೀಕ್ಷಕರಿಗೆ ಸೂಕ್ತವಲ್ಲದ ಇತರ ವೀಡಿಯೊಗಳನ್ನು ಹೊರತುಪಡಿಸಿ YouTube ನಲ್ಲಿರುವ ಬಹುತೇಕ ಎಲ್ಲವನ್ನೂ ಈ ಸೆಟ್ಟಿಂಗ್ ಒಳಗೊಂಡಿದೆ. ವೀಡಿಯೊಗಳು ಲೈವ್ ಸ್ಟ್ರೀಮ್‌ಗಳು, ವ್ಲಾಗ್‌ಗಳು, ಟುಟೋರಿಯಲ್‌ಗಳು, ಗೇಮಿಂಗ್ ವೀಡಿಯೊಗಳು, ಸುದ್ದಿ, ಶೈಕ್ಷಣಿಕ ವೀಡಿಯೊಗಳು, DIY, ಕಲೆ ಮತ್ತು ಕರಕುಶಲ, ನೃತ್ಯ ಮತ್ತು ಹೆಚ್ಚಿನದನ್ನು ಒಳಗೊಂಡಿವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14503200305118263747
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false