ತೆಗೆದುಹಾಕಿರುವ ವೀಡಿಯೊಗಳ ಮರುಅಪ್‌ಲೋಡ್‌ಗಳನ್ನು ತಡೆಯಿರಿ

ದೃಢೀಕರಣವಿಲ್ಲದೆ, YouTube ನಲ್ಲಿ ನಿಮ್ಮ ಕೃತಿಸ್ವಾಮ್ಯ-ಸುರಕ್ಷಿತ ಕೃತಿಯನ್ನು ಪೋಸ್ಟ್ ಮಾಡಲಾಗಿದ್ದರೆ, ನೀವು ಕೃತಿಸ್ವಾಮ್ಯ ಹೊಂದಿರುವ ವಿಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಬಹುದು. ನಮ್ಮ ವೆಬ್‌ಫಾರ್ಮ್ ಅನ್ನು ಬಳಸಿಕೊಂಡು ನೀವು ಹಾಗೆ ಮಾಡಿದರೆ, ಒಂದೇ ಕಂಟೆಂಟ್‌ನ ಕಾಪಿಗಳು ಮರುಅಪ್‌ಲೋಡ್ ಆಗದಂತೆ ತಡೆಯುವ ಆಯ್ಕೆಯನ್ನು ನೀವು ಆಯ್ಕೆಮಾಡಬಹುದು.

ಈ ಆಯ್ಕೆಯನ್ನು ಆರಿಸುವುದು ಎಂದರೆ, ನೀವು ತೆಗೆದುಹಾಕಲು ವಿನಂತಿಸುತ್ತಿರುವ ಒಂದೇ ಕಂಟೆಂಟ್‌ನ ಕಾಪಿಗಳು ಭವಿಷ್ಯದಲ್ಲಿ ಮರುಅಪ್‌ಲೋಡ್ ಆಗದಂತೆ ಸ್ವಯಂಚಾಲಿತವಾಗಿ ತಡೆಯಲು YouTube ಪ್ರಯತ್ನಿಸುತ್ತದೆ. ಯಾವುದೇ ವೀಡಿಯೊಗಳನ್ನು ತೆಗೆದುಹಾಕುವ ಮೊದಲು ಅಥವಾ ಯಾವುದೇ ಕಾಪಿಗಳು ಮರುಅಪ್‌ಲೋಡ್ ಆಗದಂತೆ ತಡೆಯುವ ಮೊದಲು, ನಿಮ್ಮ ತೆಗೆದುಹಾಕುವಿಕೆ ವಿನಂತಿಯು ಸಂಪೂರ್ಣವಾಗಿರಬೇಕು ಮತ್ತು ಮಾನ್ಯವಾಗಿರಬೇಕು ಎಂಬುದನ್ನು ನೆನಪಿಡಿ.

ಈ ಫೀಚರ್ ಅನ್ನು ದುರುಪಯೋಗಪಡಿಸಿಕೊಳ್ಳುವುದರಿಂದ ಅದನ್ನು ಭವಿಷ್ಯದ ತೆಗೆದು ಹಾಕಲು ಮನವಿಗಳಿಗೆ ಬಳಸುವ ನಿಮ್ಮ ಸಾಮರ್ಥ್ಯ ಕಳೆದುಹೋಗಬಹುದು. ತಪ್ಪು ಮಾಹಿತಿಯನ್ನು ಸಲ್ಲಿಸುವಂತಹ ವೆಬ್‌ಫಾರ್ಮ್‌ ನ ದುರುಪಯೋಗದಿಂದ ನಿಮ್ಮ ಖಾತೆಯು ಅಮಾನತುಗೊಳ್ಳಬಹುದು ಅಥವಾ ಇತರ ಕಾನೂನು ಪರಿಣಾಮಗಳು ಉಂಟಾಗಬಹುದು.
ನೀವು ತೆಗೆದುಹಾಕಿರುವ ವೀಡಿಯೊಗಳು ಮರುಅಪ್‌ಲೋಡ್ ಆಗದಂತೆ ತಡೆಯುವುದು ಹೇಗೆ

ಕಾಪಿಗಳನ್ನು ತಡೆಯುವ ಆಯ್ಕೆಯನ್ನು ಆರಿಸುವುದು

ಕಾಪಿಗಳನ್ನು ತಡೆಯಿರಿ ಎಂಬ ಆಯ್ಕೆಯನ್ನು ಆರಿಸುವ ಮೊದಲು, ನಿಮ್ಮ ತೆಗೆದುಹಾಕುವ ವಿನಂತಿಯಲ್ಲಿ ನೀವು ವರದಿ ಮಾಡುತ್ತಿರುವ ವೀಡಿಯೊಗಳಿಗೆ ಸಂಬಂಧಿಸಿದಂತೆ ನಿಮ್ಮದೇ ಆದ ಪ್ರತ್ಯೇಕ ಪ್ರಪಂಚದಾದ್ಯಂತದ ಹಕ್ಕುಗಳನ್ನು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕಾಪಿಗಳನ್ನು ತಡೆಯಿರಿ ಆಯ್ಕೆಯನ್ನು ಆರಿಸಲು:

  1. ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯ ವೆಬ್‌ಫಾರ್ಮ್ ಭರ್ತಿ ಮಾಡುವುದನ್ನು ಪ್ರಾರಂಭಿಸಿ.
  2. ತೆಗೆದುಹಾಕುವ ಆಯ್ಕೆಗಳು ಅಡಿಯಲ್ಲಿ, "ಮುಂದಿನ ದಿನಗಳಲ್ಲಿ ಈ ವೀಡಿಯೊಗಳ ಕಾಪಿಗಳು YouTube ನಲ್ಲಿ ಕಾಣಿಸಿಕೊಳ್ಳುವುದನ್ನು ತಡೆಯಿರಿ" ಎಂಬುದರ ಮುಂದಿರುವ ಬಾಕ್ಸ್ ಅನ್ನು ಚೆಕ್ ಮಾಡಿ.
  3. ನೀವು ಫಾರ್ಮ್ ಭರ್ತಿ ಮಾಡುವುದು ಮುಗಿದ ಮೇಲೆ ಸಲ್ಲಿಸಿ ಎಂಬುದನ್ನು ಕ್ಲಿಕ್ ಮಾಡಿ.
    • ಗಮನಿಸಿ: ನಮ್ಮ ಸಿಸ್ಟಂ ಕಾಪಿಗಳನ್ನು ಹುಡುಕುವುದನ್ನು ಪ್ರಾರಂಭಿಸುವ ಮತ್ತು ಅಪ್‌ಲೋಡ್ ಆಗುವುದನ್ನು ತಡೆಯುವ ಮೊದಲು ನಿಮ್ಮ ತೆಗೆದು ಹಾಕಲು ಮನವಿಯು ಅನುಮೋದನೆಗೊಂಡಿರಬೇಕು.
  • YouTube Studioಕೃತಿಸ್ವಾಮ್ಯ ಪುಟದಿಂದ ಸಹ ನೀವು ವೆಬ್‌ಫಾರ್ಮ್ ಅನ್ನು ಆರಂಭಿಸಬಹುದು. ತೆಗೆದು ಹಾಕಲು ಮನವಿಗಳು ಟ್ಯಾಬ್‌ನಲ್ಲಿ, ಹೊಸ ತೆಗೆದು ಹಾಕುವಿಕೆ ಮನವಿ ಎಂಬುದನ್ನು ಕ್ಲಿಕ್ ಮಾಡಿ.
  • ಕೆಲವು ಸಂದರ್ಭಗಳಲ್ಲಿ, ನೀವು ಕಾಪಿಗಳನ್ನು ತಡೆಗಟ್ಟುವ ಆಯ್ಕೆಯನ್ನು ಆರಿಸದಿದ್ದರೂ ಸಹ, ಕೃತಿಸ್ವಾಮ್ಯ ಉಲ್ಲಂಘನೆಗಾಗಿ ಈ ಹಿಂದೆ ತೆಗೆದುಹಾಕಲಾದ ವೀಡಿಯೊ ಒಂದರ ಕಂಟೆಂಟ್‌ನ ಕಾಪಿಯನ್ನು ಹೊಂದಿರುವ ವೀಡಿಯೊವನ್ನು ಮರುಅಪ್‌ಲೋಡ್ ಮಾಡುವುದನ್ನು ಸಹ ನಾವು ತಡೆಗಟ್ಟಬಹುದು.

ಯಾವುದನ್ನು ಮರುಅಪ್‌ಲೋಡ್ ಮಾಡದಂತೆ ತಡೆಗಟ್ಟಲಾಗಿದೆ ಎಂಬುದನ್ನು ನೋಡಿ

ನಿಮ್ಮ ತೆಗೆದು ಹಾಕಲು ಮನವಿಯಲ್ಲಿ ಕಾಪಿಗಳನ್ನು ತಡೆಯಿರಿ ಎಂದು ನೀವು ಆಯ್ಕೆಮಾಡಿದರೆ ಮತ್ತು ನಿಮ್ಮ ತೆಗೆದು ಹಾಕಲು ಮನವಿಯನ್ನು ಅನುಮೋದಿಸಿದರೆ, ಮರುಅಪ್‌ಲೋಡ್ ಮಾಡದಂತೆ ಎಷ್ಟು ಕಾಪಿಗಳನ್ನು ಸ್ವಯಂಚಾಲಿತವಾಗಿ ತಡೆಯಲಾಗಿದೆ ಎಂಬುದನ್ನು ನೀವು ನೋಡಬಹುದು:

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕೃತಿಸ್ವಾಮ್ಯ ಎಂಬುದನ್ನು ಆಯ್ಕೆಮಾಡಿ .
  3. ತೆಗೆದುಹಾಕುವಿಕೆ ವಿನಂತಿಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. ಸಾಲನ್ನು ಕ್ಲಿಕ್ ಮಾಡಿ. ತೆಗೆದುಹಾಕುವುದಕ್ಕೆ ವಿನಂತಿಸಲಾದ ವೀಡಿಯೊ ಕುರಿತು ಹೆಚ್ಚಿನ ವಿವರಗಳನ್ನು ತೋರಿಸಲು ಸಾಲು ವಿಸ್ತೃತಗೊಳಿಸುತ್ತದೆ.
  5. ಸ್ವಯಂಚಾಲಿತವಾಗಿ ತಡೆಯಲಾಗಿದೆ ಕಾಲಮ್‌ನಲ್ಲಿ, ಮರುಅಪ್‌ಲೋಡ್ ಆಗುವುದರಿಂದ ಸ್ವಯಂಚಾಲಿತವಾಗಿ ತಡೆಯಲಾದ ವೀಡಿಯೊಗಳ ಸಂಖ್ಯೆಯನ್ನು ನೀವು ಕಾಣಬಹುದು.
    • ಈ ಕಾಲಮ್‌ನ ಸ್ಥಿತಿಯು ಸಕ್ರಿಯ ಎಂದಿದ್ದಾಗ, ಇತರರು ಈ ವೀಡಿಯೊಗಳ ಕಾಪಿಗಳನ್ನು ಮರುಅಪ್‌ಲೋಡ್ ಮಾಡುವುದನ್ನು ತಡೆಯಲು YouTube ಸಕ್ರಿಯವಾಗಿ ಪ್ರಯತ್ನಿಸುತ್ತಿದೆ ಎಂದರ್ಥ.
ಹೊಂದಾಣಿಕೆಗಳನ್ನು ಹುಡುಕಿ ಕಾಲಮ್‌ನಲ್ಲಿ ಕಾಣಿಸಿಕೊಳ್ಳುವ ವೀಡಿಯೊಗಳನ್ನು ಪರಿಶೀಲಿಸುವುದರ ಕುರಿತು ಇನ್ನಷ್ಟು ತಿಳಿಯಿರಿ.

ಕಾಪಿಗಳನ್ನು ತಡೆಯುವ ಆಯ್ಕೆಯನ್ನು ಆಫ್ ಮಾಡಿ

ನಿಮ್ಮ ತೆಗೆದು ಹಾಕಲು ಮನವಿಯಲ್ಲಿ ಕಾಪಿಗಳನ್ನು ತಡೆಯಿರಿ ಆಯ್ಕೆಯನ್ನು ನೀವು ಆರಿಸಿದರೆ, ನೀವು ಯಾವಾಗ ಬೇಕಾದರೂ ಆಯ್ಕೆಯನ್ನು ಆಫ್ ಮಾಡಬಹುದು. ಇದನ್ನು ಆಫ್ ಮಾಡುವುದರಿಂದ, ತೆಗೆದುಹಾಕಲಾದ ವೀಡಿಯೊಗಳ ಭವಿಷ್ಯದ ಕಾಪಿಗಳನ್ನು ಅಪ್‌ಲೋಡ್ ಮಾಡುವುದನ್ನು ಅನುಮತಿಸುತ್ತದೆ. ಆಯ್ಕೆಯನ್ನು ಆಫ್ ಮಾಡಲು:

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕೃತಿಸ್ವಾಮ್ಯ  ಎಂಬುದನ್ನು ಆಯ್ಕೆಮಾಡಿ.
  3. ತೆಗೆದುಹಾಕುವಿಕೆ ವಿನಂತಿಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. ಸಾಲನ್ನು ಕ್ಲಿಕ್ ಮಾಡಿ. ತೆಗೆದುಹಾಕುವುದಕ್ಕೆ ವಿನಂತಿಸಲಾದ ವೀಡಿಯೊ ಕುರಿತು ಹೆಚ್ಚಿನ ವಿವರಗಳನ್ನು ತೋರಿಸಲು ಸಾಲು ವಿಸ್ತೃತಗೊಳಿಸುತ್ತದೆ.
  5. ಕಾಪಿಗಳನ್ನು ತಡೆಯಿರಿ ಎಂಬುದರ ಮುಂದೆ ಇರುವ ಬಾಕ್ಸ್ ಗುರುತಿಸಿರುವುದನ್ನು ತೆಗೆಯಿರಿ.
ಟಿಪ್ಪಣಿಗಳು:
  • ಕಾಪಿಗಳನ್ನು ತಡೆಯಿರಿ ಎಂಬುದನ್ನು ಆಫ್ ಮಾಡುವುದು ಆ ಸಮಯದ ನಂತರದಲ್ಲಿ ಅಪ್‌ಲೋಡ್ ಮಾಡುವ ವೀಡಿಯೊಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಈಗಾಗಲೇ ತೆಗೆದುಹಾಕಿರುವ ವೀಡಿಯೊಗಳನ್ನು ಮರುಸ್ಥಾಪನೆ ಮಾಡಲು ಆಗುವುದಿಲ್ಲ.
  • ನಿಮ್ಮ ತೆಗೆದು ಹಾಕಲು ಮನವಿಯ ಹಿಂತೆಗೆದುಕೊಳ್ಳುವಿಕೆಯು ಫೀಚರ್ ಅನ್ನು ಸಹ ಸ್ವಯಂಚಾಲಿತವಾಗಿ ಆಫ್ ಮಾಡುತ್ತದೆ.

FAQ ಗಳು

ನೀವು ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಿದ್ದರೆ:

ನನ್ನ ತೆಗೆದು ಹಾಕಲು ಮನವಿಯನ್ನು ನಾನು ಸಲ್ಲಿಸಿದಾಗ “ಕಾಪಿಗಳನ್ನು ತಡೆಯಿರಿ” ಎಂಬುದನ್ನು ಆಯ್ಕೆಮಾಡಲು ಮರೆತಿದ್ದೇನೆ. ನಾನು ಹಿಂತಿರುಗಿ ಅದನ್ನು ಆಯ್ಕೆಮಾಡಬಹುದೇ?

ನೀವು ಪ್ರಾರಂಭದಲ್ಲಿ ಕಾಪಿಗಳನ್ನು ತಡೆಯಿರಿ ಎಂಬ ಆಯ್ಕೆಯನ್ನು ಆರಿಸಿರದಿದ್ದರೆ, ನೀವು ಈಗಾಗಲೇ ಸಲ್ಲಿಸಿರುವ ತೆಗೆದು ಹಾಕಲು ಮನವಿಗೆ ಅದನ್ನು ಆಯ್ಕೆಮಾಡಲು ಸಾಧ್ಯವಿಲ್ಲ. ನಿಮ್ಮ ಕೃತಿಸ್ವಾಮ್ಯವನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ಹೊಂದಿರುವ ಮತ್ತೊಂದು ವೀಡಿಯೊ ನಿಮಗೆ ಕಂಡುಬಂದರೆ, ಹೊಸ ತೆಗೆದು ಹಾಕಲು ಮನವಿಯನ್ನು ಸಲ್ಲಿಸಲು ವೆಬ್‌ಫಾರ್ಮ್ ಬಳಸಿ. ನೀವು ಸಲ್ಲಿಸುವ ಮೊದಲು ಕಾಪಿಗಳನ್ನು ತಡೆಯಿರಿ ಆಯ್ಕೆ ಆರಿಸುವುದನ್ನು ಖಚಿತಪಡಿಸಿಕೊಳ್ಳಿ.

ಮರುಅಪ್‌ಲೋಡ್ ಆಗದಂತೆ ಸ್ವಯಂಚಾಲಿತವಾಗಿ ತಡೆಯಲಾದ ಯಾವುದೇ ವೀಡಿಯೊಗಳನ್ನು ನಾನು ಏಕೆ ನೋಡುತ್ತಿಲ್ಲ?

ಈ ಕೆಳಗಿನ ಅಂಶಗಳಿದ್ದರೆ, ಮರುಅಪ್‌ಲೋಡ್ ಆಗದಂತೆ ಸ್ವಯಂಚಾಲಿತವಾಗಿ ತಡೆಯಲಾದ ಅದೇ ಕಂಟೆಂಟ್‌ನ ಯಾವುದೇ ಕಾಪಿಗಳನ್ನು ನೀವು ನೋಡದಿರಬಹುದು:

  • ನಿಮ್ಮ ತೆಗೆದು ಹಾಕಲು ಮನವಿಯನ್ನು ಅನುಮೋದಿಸಲಾಗಿಲ್ಲ.
  • ತೆಗೆದುಹಾಕಲಾದ ಕಂಟೆಂಟ್‌ನ ಯಾವುದೇ ಕಾಪಿಗಳನ್ನು ಗುರುತಿಸಲಾಗಿಲ್ಲ.

ನಾನು “ಕಾಪಿಗಳನ್ನು ತಡೆಯಿರಿ” ಎಂಬುದನ್ನು ಆಯ್ಕೆಮಾಡಿದೆ, ಆದರೆ ಸ್ವಯಂಚಾಲಿತವಾಗಿ ತೆಗೆದುಹಾಕದೇ ಇರುವ ನನ್ನ ವೀಡಿಯೊದ ಕಾಪಿಯು ಕಂಡುಬಂದಿದೆ. ಅದು ಏಕೆ ಪತ್ತೆಯಾಗಲಿಲ್ಲ?

ಕಾಪಿಗಳನ್ನು ತಡೆಯಿರಿ ಎಂಬ ಫೀಚರ್, ತೆಗೆದುಹಾಕಲಾದ ಕಂಟೆಂಟ್‌ನ ಕಾಪಿಗಳು ಮರುಅಪ್‌ಲೋಡ್ ಆಗದಂತೆ ತಡೆಯಲು ಪ್ರಯತ್ನಿಸುತ್ತದೆ. ನಿಮ್ಮ ತೆಗೆದುಹಾಕುವಿಕೆ ವಿನಂತಿಯು ಅನುಮೋದನೆಗೊಂಡ ನಂತರ ಫೀಚರ್ ಜಾರಿಗೆ ಬರುತ್ತದೆ. ನಿಮಗೆ ಕಂಡುಬಂದ ವೀಡಿಯೊ ಅದು ಅನುಮೋದನೆಗೊಳ್ಳುವ ಮೊದಲೇ ಅಪ್‌ಲೋಡ್ ಆಗಿರುವ ಸಾಧ್ಯತೆ ಇದೆ.

ನಿಮ್ಮ ಕಂಟೆಂಟ್‌ನ Short ಕ್ಲಿಪ್‌ಗಳನ್ನು ಅಪ್‌ಲೋಡ್ ಆಗದಂತೆ ತಡೆಯಲಾಗುವುದಿಲ್ಲ. ನಮ್ಮ ಸಿಸ್ಟಂ, ಇವುಗಳನ್ನು ತೆಗೆದುಹಾಕಲಾದ ಕಂಟೆಂಟ್‌ನ ಕಾಪಿ ಎಂದು ಪರಿಗಣಿಸದಿರಬಹುದು.

ತೆಗೆದುಹಾಕಲಾದ ಕಂಟೆಂಟ್‌ನ ಕಾಪಿ ನಿಮಗೆ ಕಂಡುಬಂದರೆ, ನಮ್ಮವೆಬ್‌ಫಾರ್ಮ್ ಅನ್ನು ಬಳಸಿಕೊಂಡು ನೀವು ಅದನ್ನು ವರದಿ ಮಾಡಬಹುದು. ನಿಮಗೆ ಕಂಡುಬಂದ ವೀಡಿಯೊ ನಿಮ್ಮ ಹೊಂದಾಣಿಕೆಗಳ ಟ್ಯಾಬ್‌ನಲ್ಲಿ ಕಾಣಿಸುತ್ತಿದೆಯೇ ಎಂಬುದನ್ನು ಸಹ ನೀವು ಪರಿಶೀಲಿಸಬಹುದು ಮತ್ತು ಅಲ್ಲಿಂದ ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಬಹುದು.

"ಸ್ವಯಂಚಾಲಿತವಾಗಿ ತಡೆಯಲಾಗಿದೆ" ಕಾಲಮ್ ಮತ್ತು "ಹೊಂದಾಣಿಕೆಗಳನ್ನು ಹುಡುಕಿ" ಕಾಲಮ್‌ಗಳ ನಡುವೆ ಏನು ವ್ಯತ್ಯಾಸವಿದೆ?

ಸ್ವಯಂಚಾಲಿತವಾಗಿ ತಡೆಯಲಾಗಿದೆ ಕಾಲಮ್ ತೆಗೆದುಹಾಕಿರುವ ಕಂಟೆಂಟ್‌ನ ಕಾಪಿಗಳ ಸಂಖ್ಯೆಯನ್ನು ತೋರಿಸುತ್ತದೆ. ಬಳಕೆದಾರರೊಬ್ಬರು ಈ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಪ್ರಯತ್ನಿಸಿದಾಗ YouTube ನಲ್ಲಿ ಇವು ಕಾಣಿಸಿಕೊಳ್ಳದಂತೆ ಸ್ವಯಂಚಾಲಿತವಾಗಿ ತಡೆಯಲಾಗಿದೆ.

ಸ್ವಯಂಚಾಲಿತವಾಗಿ ತಡೆಯಲಾಗಿದೆ ಸ್ಥಿತಿಯು ಸಕ್ರಿಯ ಎಂದು ಇದ್ದರೆ, ಇತರರು ಈ ಕಾಪಿಗಳನ್ನು ಅಪ್‌ಲೋಡ್ ಮಾಡುವುದನ್ನು ತಡೆಯಲು YouTube ಸಕ್ರಿಯವಾಗಿ ಪ್ರಯತ್ನಿಸುತ್ತಿದೆ ಎಂದರ್ಥ.

ಹೊಂದಾಣಿಕೆಗಳನ್ನು ಹುಡುಕಿ ಕಾಲಮ್ ತೆಗೆದುಹಾಕಿರುವ ಕಂಟೆಂಟ್‌ನ ಸಂಭಾವ್ಯ ಕಾಪಿಗಳು ಎಂದು ಗುರುತಿಸಲಾದ ವೀಡಿಯೊಗಳಿಗಾಗಿ YouTube ಹುಡುಕುತ್ತಿದೆಯೇ ಎಂಬುದನ್ನು ಸೂಚಿಸುತ್ತದೆ.

ಹೊಂದಾಣಿಕೆಗಳನ್ನು ಹುಡುಕಿ ಸ್ಥಿತಿಯು ಸಕ್ರಿಯ ಎಂದು ಇದ್ದರೆ, ತೆಗೆದುಹಾಕಿರುವ ಕಂಟೆಂಟ್‌ನ ಸಂಭಾವ್ಯ ಕಾಪಿಗಳಿಗಾಗಿ YouTube ಸಕ್ರಿಯವಾಗಿ ಹುಡುಕುತ್ತಿದೆ ಎಂದರ್ಥ. ಈ ಸಂಭಾವ್ಯ ಕಾಪಿಗಳನ್ನು ಅಪ್‌ಲೋಡ್ ಆಗದಂತೆ ಸ್ವಯಂಚಾಲಿತವಾಗಿ ತಡೆಯಲಾಗಿಲ್ಲ, ಏಕೆಂದರೆ ಅವುಗಳನ್ನು ಕಾಪಿಗಳು ಎಂದು ಗುರುತಿಸಿಲ್ಲ, ಆದರೆ ಸಂಭಾವ್ಯ ಕಾಪಿಗಳು ಎಂದು ಪರಿಗಣಿಸಲಾಗಿದೆ.

ಗಮನಿಸಿ: ನಿಮ್ಮ ತೆಗೆದು ಹಾಕಲು ಮನವಿಯು ನಿಷ್ಕ್ರಿಯವಾದಾಗ ಈ ಕಾಲಮ್‌ಗಳ ಸ್ಥಿತಿಯು ನಿಷ್ಕ್ರಿಯ ಎಂದು ಕಾಣಿಸಬಹುದು. ನಿಮ್ಮ ತೆಗೆದು ಹಾಕಲು ಮನವಿಯನ್ನು ನೀವು ಹಿಂತೆಗೆದುಕೊಂಡಾಗ ಅಥವಾ ಪ್ರತಿವಾದಿ ನೋಟಿಫಿಕೇಶನ್ ಪರಿಣಾಮವಾಗಿ ವೀಡಿಯೊವನ್ನು ಮರುಸ್ಥಾಪಿಸಲಾಗಿದ್ದರೆ ಹೀಗಾಗಬಹುದು.

ಕಾಪಿಗಳು ಎಂದು ಗುರುತಿಸದೇ ಇರುವ ವೀಡಿಯೊಗಳು ಸೇರಿದಂತೆ, ನನ್ನ ಕಂಟೆಂಟ್ ಅನ್ನು ಬಳಸುವ ಪ್ರತಿಯೊಂದು ವೀಡಿಯೊವನ್ನು ಅಪ್‌ಲೋಡ್ ಆಗದಂತೆ ಏಕೆ ತಡೆಯಲಾಗಿಲ್ಲ?

ನಿಮ್ಮ ಕಂಟೆಂಟ್‌ನ ಪ್ರತಿಯೊಂದು ಬಳಕೆಯು ನಿಮ್ಮ ಕೃತಿಸ್ವಾಮ್ಯವನ್ನು ಉಲ್ಲಂಘಿಸುವುದಿಲ್ಲ. ನ್ಯಾಯಯುತ ಬಳಕೆಯಂತಹ ಕೃತಿಸ್ವಾಮ್ಯ ವಿನಾಯಿತಿಗಳಿವೆ, ಇದು ನಿಮ್ಮ ಕಂಟೆಂಟ್‌ನ ಬಳಕೆಯು ಮಾನ್ಯವಾಗಿರಬಹುದು ಎಂದರ್ಥವಾಗಿರಬಹುದು.

ತೆಗೆದುಹಾಕಿರುವ ಕಂಟೆಂಟ್‌ನ ಸಂಭಾವ್ಯ ಕಾಪಿಗಳನ್ನು ನಮ್ಮ ಸಿಸ್ಟಂ ನಿಮಗೆ ತೋರಿಸುತ್ತದೆ, ಆದರೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಸಂಭಾವ್ಯ ಕಾಪಿಯು ನಿಮ್ಮ ಕೃತಿಸ್ವಾಮ್ಯವನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸಿದರೆ, ಆ ಸಂಭಾವ್ಯ ಕಾಪಿಗಾಗಿ ನೀವು ತೆಗೆದು ಹಾಕಲು ಮನವಿಯನ್ನು ಸಲ್ಲಿಸಬಹುದು.

ಅಪ್‌ಲೋಡ್ ಆಗದಂತೆ ಯಾವ ಪ್ರತ್ಯೇಕ ಕಾಪಿಗಳನ್ನು ಸ್ವಯಂಚಾಲಿತವಾಗಿ ತಡೆಯಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ನನಗೇಕೆ ಸಾಧ್ಯವಿಲ್ಲ?

ಈ ವೀಡಿಯೊಗಳನ್ನು ಅಪ್‌ಲೋಡ್ ಮಾಡದಿರುವುದರಿಂದ, ನೀವು ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ. ಸ್ವಯಂಚಾಲಿತವಾಗಿ ತಡೆಯಲಾಗಿದೆ ಕಾಲಮ್‌ನಲ್ಲಿ ತೋರಿಸಿರುವ ವೀಡಿಯೊಗಳ ರನ್ ಆಗುತ್ತಿರುವ ಸಂಖ್ಯೆಯು ಮರುಅಪ್‌ಲೋಡ್ ಆಗದಂತೆ ಎಷ್ಟು ಕಾಪಿಗಳನ್ನು ತಡೆಯಲಾಗಿದೆ ಎಂಬುದರ ಪರಿಕಲ್ಪನೆಯನ್ನು ನೀಡುತ್ತದೆ.

ತೆಗೆದುಹಾಕಿರುವ ಕಂಟೆಂಟ್‌ನ ಕಾಪಿಯನ್ನು ಖಾಸಗಿ ಎಂದು ಸೆಟ್ ಮಾಡಿದ್ದರೆ, ಅದನ್ನು ಅಪ್‌ಲೋಡ್ ಮಾಡದಂತೆ ತಡೆಯಲಾಗುತ್ತದೆಯೇ?

ಗೌಪ್ಯತೆ ಸೆಟ್ಟಿಂಗ್‌ಗಳ ಹೊರತಾಗಿಯೂ, ತೆಗೆದುಹಾಕಲಾದ ಕಂಟೆಂಟ್‌ನ ಕಾಪಿಗಳನ್ನು ಗುರುತಿಸಲು ನಮ್ಮ ಸಿಸ್ಟಮ್ ಪ್ರಯತ್ನಿಸುತ್ತದೆ ಮತ್ತು ಅವುಗಳನ್ನು ಮರುಅಪ್‌ಲೋಡ್ ಮಾಡದಂತೆ ಸ್ವಯಂಚಾಲಿತವಾಗಿ ತಡೆಯುತ್ತದೆ.

ನಿಮ್ಮ ಪರಿಶೀಲನೆ ಅಗತ್ಯವಿರುವ ಹೊಂದಾಣಿಕೆಗಳಿಗಾಗಿ, ಸಾರ್ವಜನಿಕವಾಗಿ ಲಭ್ಯವಿರುವ ವೀಡಿಯೊಗಳನ್ನು ಮಾತ್ರ ನಾವು ತೋರಿಸುತ್ತೇವೆ.

"ಕಾಪಿಗಳನ್ನು ತಡೆಯಿರಿ" ಫೀಚರ್ ಚಿತ್ರದಂತಹ ನನ್ನ ಕೃತಿಸ್ವಾಮ್ಯಕ್ಕೊಳಪಟ್ಟ ವೀಡಿಯೊ-ಅಲ್ಲದ ಕಂಟೆಂಟ್ ಅನ್ನು ಒಳಗೊಂಡಿರುವ ವೀಡಿಯೊಗಳನ್ನು ಸ್ವಯಂಚಾಲಿತವಾಗಿ ತಡೆಯುತ್ತದೆಯೇ?

ಹೌದು, ನಿಮ್ಮ ಕೃತಿಸ್ವಾಮ್ಯಕ್ಕೊಳಪಟ್ಟ ವೀಡಿಯೊ-ಅಲ್ಲದ ಕಂಟೆಂಟ್ ವೀಡಿಯೊದಲ್ಲಿ ಪತ್ತೆಯಾದರೆ, ಕಾಪಿಗಳನ್ನು ತಡೆಯಿರಿ ಫೀಚರ್ ಮರುಅಪ್‌ಲೋಡ್ ಮಾಡಲಾದ ವೀಡಿಯೊಗಳನ್ನು ತಡೆಯುತ್ತದೆ ಮತ್ತು ಸಂಭಾವ್ಯ ಕಾಪಿಗಳನ್ನು ತೋರಿಸುತ್ತದೆ.

YouTube ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊಗಳನ್ನು ಮಾತ್ರ ನಮ್ಮ ಸಿಸ್ಟಂ ಪರಿಶೀಲಿಸುತ್ತದೆ ಎಂಬುದನ್ನು ನೆನಪಿಡಿ. ನಿಮ್ಮ ವೀಡಿಯೊ-ಅಲ್ಲದ ಕಂಟೆಂಟ್, ವಿವರಣೆಯಲ್ಲಿ ಅಥವಾ ಥಂಬ್‌ನೇಲ್ ಚಿತ್ರದಲ್ಲಿ ಅಥವಾ ವೀಡಿಯೊದಲ್ಲೇ ಇಲ್ಲದಿರುವ ಬೇರೆಡೆ ಪತ್ತೆಯಾದರೆ, ನಮ್ಮ ಸಿಸ್ಟಂ ಅದನ್ನು ಗುರುತಿಸಲು ಆಗುವುದಿಲ್ಲ.

ತೆಗೆದುಹಾಕುವಂತೆ ನಾನು ವಿನಂತಿಸುತ್ತಿರುವ ಕಂಟೆಂಟ್‌ಗೆ ಜಾಗತಿಕ ಪ್ರತ್ಯೇಕ ಹಕ್ಕುಗಳನ್ನು ಪಡೆಯುವುದು ಎಂದರೆ ಏನು? 

ಜಾಗತಿಕ ಪ್ರತ್ಯೇಕ ಹಕ್ಕುಗಳನ್ನು ಹೊಂದುವುದು ಎಂದರೆ, ನೀವು ಅಥವಾ ನೀವು ಪ್ರತಿನಿಧಿಸುವ ಕ್ಲೈಂಟ್‌ ಮಾತ್ರ ಜಾಗತಿಕವಾಗಿ ಕಂಟೆಂಟ್‌ನ ಬಳಕೆ ಮತ್ತು ವಿತರಣೆಯನ್ನು ನಿಯಂತ್ರಿಸಬಹುದು.

Content ID ಗೆ ಆ್ಯಕ್ಸೆಸ್ ಪಡೆಯಲು ನನಗೇಕೆ ಸಾಧ್ಯವಿಲ್ಲ?

YouTube ನ ಕೃತಿಸ್ವಾಮ್ಯ ನಿರ್ವಹಣೆಯ ಟೂಲ್‌ಗಳನ್ನು ಸಾಂದರ್ಭಿಕವಾಗಿ ಅಪ್‌ಲೋಡ್ ಮಾಡುವವರಿಂದ ಹಿಡಿದು ನೆಲೆಗೊಂಡಿರುವ ಮಾಧ್ಯಮ ಕಂಪನಿಗಳವರೆಗೆ ವಿಭಿನ್ನ ಪ್ರಕಾರಗಳ ರಚನೆಕಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಅತ್ಯಂತ ಸಂಕೀರ್ಣ ಕೃತಿಸ್ವಾಮ್ಯ ನಿರ್ವಹಣೆ ಅಗತ್ಯಗಳನ್ನು ಹೊಂದಿರುವ ಕೃತಿಸ್ವಾಮ್ಯ ಮಾಲೀಕರಿಗೆ Content ID ಲಭ್ಯವಿದೆ.

Content ID ಗೆ ಅರ್ಹತೆ ಪಡೆಯಲು, YouTube ಗೆ ಆಗಾಗ ಅಪ್‌ಲೋಡ್ ಮಾಡಿರುವ ಮೂಲ ವಿಷಯವಸ್ತುವಿನ ಪ್ರಮುಖ ಭಾಗಕ್ಕೆ ಕೃತಿಸ್ವಾಮ್ಯ ಮಾಲೀಕರು ಪ್ರತ್ಯೇಕ ಹಕ್ಕುಗಳನ್ನು ಹೊಂದಿರಬೇಕು. ಕೃತಿಸ್ವಾಮ್ಯದ ಕುರಿತು ಮತ್ತು Content ID ಯನ್ನು ನಿರ್ವಹಿಸಲು ಅವಶ್ಯವಿರುವ ಮಾಹಿತಿಯ ಮೂಲಗಳ ಕುರಿತು ಅವರು ಸುಧಾರಿತ ಜ್ಞಾನವನ್ನು ಸಹ ಹೊಂದಿರಬೇಕು ಎಂಬುದು ಇತರ ಮಾನದಂಡಗಳಲ್ಲಿ ಒಂದು. Content ID ಅರ್ಹತೆ ಕುರಿತು ಇನ್ನಷ್ಟು ತಿಳಿಯಿರಿ.

ನಾನೊಬ್ಬ ಸಂಗೀತಗಾರ. ನನ್ನ ಹಾಡುಗಳ ಮರುಅಪ್‌ಲೋಡ್‌ಗಳನ್ನು ತಡೆಯಲು ನಾನು ಈ ಫೀಚರ್ ಅನ್ನು ಬಳಸಬಹುದೇ?

ಹೌದು. ಒಮ್ಮೆ ನೀವು ವೆಬ್‌ಫಾರ್ಮ್‌ನಲ್ಲಿ “ಮೂಲ ಹಾಡು” ಎಂಬ ಪ್ರಕಾರದ ಕೃತಿಯನ್ನು ಬಳಸಿಕೊಂಡು ವೀಡಿಯೊವನ್ನು ಯಶಸ್ವಿಯಾಗಿ ತೆಗೆದುಹಾಕಿದರೆ, ಒಂದೇ ಆಡಿಯೊದ ಕಾಪಿಗಳು ಮರುಅಪ್‌ಲೋಡ್ ಆಗದಂತೆ ತಡೆಯಲು YouTube ಪ್ರಯತ್ನಿಸುತ್ತದೆ. 

ಜೊತೆಗೆ, ನಿಮ್ಮ ಹಾಡು ಅಥವಾ ಆಡಿಯೊ ಕಂಟೆಂಟ್‌ಗೆ ಸಂಭಾವ್ಯವಾಗಿ ಹೊಂದಿಕೆಯಾಗಬಹುದಾದ ಆಡಿಯೊ ಇರುವ ವೀಡಿಯೊಗಳನ್ನು Copyright Match Tool ಪ್ರದರ್ಶಿಸುತ್ತದೆ. ನೆನಪಿಡಿ, ನಿಮ್ಮ ಹಾಡು ಅಥವಾ ಆಡಿಯೊ ಕಂಟೆಂಟ್‌ನ ಒಂದು ಭಾಗವನ್ನು ಬೇರೆ ಯಾರೋ ಅವರ ವೀಡಿಯೊದಲ್ಲಿ ಬಳಸಿದ್ದರೆ, ಅದನ್ನು Copyright Match Tool ತೋರಿಸುವುದಿಲ್ಲ.

ನಿಮ್ಮ ವೀಡಿಯೊವನ್ನು ಅಪ್‌ಲೋಡ್ ಆಗದಂತೆ ತಡೆಯಲಾಗಿದ್ದರೆ:

ನನ್ನ ವೀಡಿಯೊವನ್ನು ಏಕೆ ಅಪ್‌ಲೋಡ್ ಆಗದಂತೆ ತಡೆಯಲಾಗಿದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ನಾನು ಎಲ್ಲಿ ಪಡೆಯಬಹುದು?

YouTube Studio ದಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ನೋಡಬಹುದು:

  1. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆಮಾಡಿ.
  2. ನಿರ್ಬಂಧಗಳು ಕಾಲಮ್‌ನಲ್ಲಿ ನಿಯಮಗಳು ಮತ್ತು ನೀತಿಗಳು ಎಂಬುದರ ಮೇಲೆ ಹೋವರ್ ಮಾಡಿ. ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯ ಕಾರಣದಿಂದಾಗಿ ನಾವು ಈ ಹಿಂದೆ ತೆಗೆದುಹಾಕಿರುವ ವೀಡಿಯೊದಿಂದ ಪಡೆದ ಕಂಟೆಂಟ್‌ನ ಕಾಪಿಯನ್ನು ಒಳಗೊಂಡಿರುವುದರಿಂದ ನಿಮ್ಮ ವೀಡಿಯೊವನ್ನು ಅಪ್‌ಲೋಡ್ ಮಾಡಲು ಸಾಧ್ಯವಿಲ್ಲ ಎಂದು ಪಾಪ್-ಅಪ್ ನಿಮಗೆ ತಿಳಿಸುತ್ತದೆ. ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಯಾರು ನೀಡಿದರು, ವಿನಂತಿಯನ್ನು ಯಾವಾಗ ಸ್ವೀಕರಿಸಲಾಗಿದೆ ಎಂಬುದನ್ನು ಮತ್ತು ಕ್ಲೇಮುದಾರರ ಕೃತಿಸ್ವಾಮ್ಯ-ಸುರಕ್ಷಿತ ಕೃತಿಯ ಶೀರ್ಷಿಕೆಯನ್ನು ಇದು ನಿಮಗೆ ತೋರಿಸುತ್ತದೆ.

ನಿಮ್ಮ ವೀಡಿಯೊವನ್ನು ಅಪ್‌ಲೋಡ್ ಆಗದಂತೆ ತಡೆದಾಗ ನಾವು ನಿಮಗೆ ಇಮೇಲ್ ಕಳುಹಿಸುತ್ತೇವೆ, ಅದು ಈ ಮಾಹಿತಿಯನ್ನು ಒಳಗೊಂಡಿರುತ್ತದೆ.

ನನ್ನ ವೀಡಿಯೊಗಳಲ್ಲಿನ ಒಂದನ್ನು ಅಪ್‌ಲೋಡ್ ಆಗದಂತೆ ತಡೆದಿದ್ದರೆ, ನಾನು ಕೃತಿಸ್ವಾಮ್ಯ ಸ್ಟ್ರೈಕ್ ಪಡೆಯುತ್ತೇನೆ ಎಂದರ್ಥವೇ?

ಇಲ್ಲ, ವೀಡಿಯೊವನ್ನು ಅಪ್‌ಲೋಡ್ ಆಗದಿರುವಂತೆ ಸ್ವಯಂಚಾಲಿತವಾಗಿ ತಡೆಯಲಾಗಿದ್ದರೆ, ಅದು ನಿಮ್ಮ ಚಾನಲ್ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಕೃತಿಸ್ವಾಮ್ಯ ಸ್ಟ್ರೈಕ್‌ಗಳು ಅಥವಾ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳು ಉಂಟಾಗುವುದಿಲ್ಲ.

ನನ್ನ ವೀಡಿಯೊವನ್ನು ಅಪ್‌ಲೋಡ್ ಮಾಡಬೇಕು ಎಂದು ನಾನು ಭಾವಿಸಿದರೆ, ನಾನು ಏನು ಮಾಡಬಹುದು?

ನಿಮ್ಮ ವೀಡಿಯೊವನ್ನು ಅಪ್‌ಲೋಡ್ ಮಾಡಬೇಕು ಎಂದು ನೀವು ಭಾವಿಸಿದರೆ, ಪಾಪ್‌ಅಪ್‌ನಲ್ಲಿರುವ ಲಿಂಕ್ ಅನ್ನು ಬಳಸಿಕೊಂಡು ನೀವು ಮೇಲ್ಮನವಿಯನ್ನು ಸಲ್ಲಿಸಬಹುದು.

ನಿಮ್ಮ ಮೇಲ್ಮನವಿಯಲ್ಲಿ, ನೀವು ಈ ಕೆಳಗಿನ ಮಾಹಿತಿಯನ್ನು ನಮಗೆ ಒದಗಿಸಬೇಕು:

  1. ನಿಮ್ಮ ಸಂಪರ್ಕ ಮಾಹಿತಿ

YouTube ನಿಮ್ಮ ಮೇಲ್ಮನವಿಯನ್ನು ಸ್ವೀಕರಿಸಿದರೆ, ನಿಮ್ಮ ವೈಯಕ್ತಿಕ ಮಾಹಿತಿಯು ಒಳಗೊಂಡಂತೆ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಿದ ಕ್ಲೇಮುದಾರರಿಗೆ ನಾವು ಅದನ್ನು ಫಾರ್ವರ್ಡ್ ಮಾಡುತ್ತೇವೆ. ನಿಮ್ಮ ಮೇಲ್ಮನವಿಗೆ ಸಂಬಂಧಿಸಿದಂತೆ ನಿಮ್ಮನ್ನು ಸಂಪರ್ಕಿಸಲು ಅವರು ಈ ಮಾಹಿತಿಯನ್ನು ಬಳಸಬಹುದು. ಕ್ಲೇಮುದಾರರ ಜೊತೆಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ಕುರಿತು ನೀವು ಕಳವಳವನ್ನು ವ್ಯಕ್ತಪಡಿಸಿದರೆ, ನಿಮ್ಮ ಪರವಾಗಿ ಮೇಲ್ಮನವಿಗಳನ್ನು ಸಲ್ಲಿಸಲು ನೀವು ಅಧಿಕೃತ ಪ್ರತಿನಿಧಿಯನ್ನು (ಉದಾಹರಣೆಗೆ, ವಕೀಲರು) ನೇಮಿಸಬಹುದು. ವಿನಂತಿಯನ್ನು ಸಲ್ಲಿಸುವುದಕ್ಕಾಗಿ ಅಧಿಕೃತ ಪ್ರತಿನಿಧಿಯು ತಮ್ಮದೇ ಆದ YouTube ಖಾತೆಯನ್ನು ಬಳಸಬೇಕು. ಅಲ್ಲದೆ, ಅವರು ನಿಮ್ಮ ಜೊತೆಗಿನ ತಮ್ಮ ಸಂಬಂಧವನ್ನು ನಿರ್ದಿಷ್ಟಪಡಿಸಬೇಕು.

  1. ಅಪ್‌ಲೋಡ್ ಆಗದಂತೆ ತಡೆಯಲಾದ ವೀಡಿಯೊದ ಮಾನ್ಯವಾದ ವೀಡಿಯೊ URL

ಮೇಲ್ಮನವಿಯನ್ನು ಸಲ್ಲಿಸಲು ಪಾಪ್‌ಅಪ್‌ನಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ಇದು ಸ್ವಯಂಚಾಲಿತವಾಗಿ ಗೋಚರಿಸಬೇಕು.

  1. ವೀಡಿಯೊವನ್ನು ಅಪ್‌ಲೋಡ್ ಮಾಡಲು ನಿಮಗೆ ಅಗತ್ಯವಿರುವ ಎಲ್ಲಾ ಹಕ್ಕುಗಳಿವೆ ಎಂದು ನೀವು ಏಕೆ ನಂಬುತ್ತೀರಿ

ನಿಮ್ಮದೇ ಪದಗಳಲ್ಲಿ, ವೀಡಿಯೊವನ್ನು ಅಪ್‌ಲೋಡ್ ಮಾಡಲು ನೀವು ಅಗತ್ಯವಿರುವ ಎಲ್ಲಾ ಹಕ್ಕುಗಳನ್ನು ಏಕೆ ಹೊಂದಿದ್ದೀರಿ ಎಂಬುದನ್ನು ವಿವರಿಸಿ ಮತ್ತು ಪೂರಕ ದಾಖಲೆಗಳನ್ನು ಲಗತ್ತಿಸಿ. ಇದನ್ನು ಪರಿಶೀಲನೆಗಾಗಿ ಕ್ಲೇಮುದಾರರಿಗೆ ಕಳುಹಿಸಲಾಗುತ್ತದೆ.

  1. ಸ್ಟೇಟ್‌ಮೆಂಟ್‌ಗಳು

ನೀವು ಈ ಕೆಳಗಿನ 2 ಸ್ಟೇಟ್‌ಮೆಂಟ್‌ಗಳನ್ನು ಒಪ್ಪಿಕೊಳ್ಳಬೇಕು:

  • ಪ್ರಶ್ನೆಯಲ್ಲಿರುವ ಕಂಟೆಂಟ್ ಅನ್ನು YouTube ಗೆ ಅಪ್‌ಲೋಡ್ ಮಾಡಲು ನನಗೆ ಅಗತ್ಯವಿರುವ ಎಲ್ಲಾ ಹಕ್ಕುಗಳಿವೆ ಎಂದು ನಾನು ಘೋಷಿಸುತ್ತೇನೆ.
  • ಈ ಮೇಲ್ಮನವಿಯಲ್ಲಿರುವ ಮಾಹಿತಿಯು ನಿಜವಾಗಿದೆ ಮತ್ತು ಪೂರ್ಣವಾಗಿದೆ ಎಂದು ನಾನು ಘೋಷಿಸುತ್ತೇನೆ. ತಪ್ಪು ಮಾಹಿತಿಯನ್ನು ಒಳಗೊಂಡಿರುವ ಮೇಲ್ಮನವಿಯನ್ನು ಸಲ್ಲಿಸುವುದು ನನ್ನ YouTube ಖಾತೆಯ ಕೊನೆಗೊಳಿಸುವಿಕೆಗೆ ಕಾರಣವಾಗಬಹುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ.
  1. ನಿಮ್ಮ ಸಹಿ

ನಿಮ್ಮ ಅಥವಾ ನಿಮ್ಮ ಅಧಿಕೃತ ಪ್ರತಿನಿಧಿಯ (ಅನ್ವಯವಾಗುವಲ್ಲಿ) ಕಾನೂನುಬದ್ಧವಾದ ಪೂರ್ಣ ಹೆಸರನ್ನು ಟೈಪ್ ಮಾಡುವುದು ಡಿಜಿಟಲ್ ಸಹಿಯಾಗಿ ಕಾರ್ಯನಿರ್ವಹಿಸುತ್ತದೆ. ಕಾನೂನುಬದ್ಧವಾದ ಪೂರ್ಣ ಹೆಸರು ಮೊದಲ ಮತ್ತು ಕೊನೆಯ ಹೆಸರಾಗಿರಬೇಕು, ಕಂಪನಿ ಅಥವಾ ಚಾನಲ್ ಹೆಸರಲ್ಲ.

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4170116918233971267
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false