ಗೇಮಿಂಗ್ ಮತ್ತು ಮಾನಿಟೈಸೇಶನ್

ಗೇಮಿಂಗ್, ಇದು YouTube ನಲ್ಲಿರುವ ವೀಡಿಯೊಗಳಿಗೆ ಜನಪ್ರಿಯ ವಿಷಯವಾಗಿದೆ. ಈ ಪುಟವು ಗೇಮಿಂಗ್ ವೀಡಿಯೊಗಳ ರಚನೆಕಾರರಿಗೆ ಅನ್ವಯವಾಗಬಹುದಾದ ವಿವಿಧ ಮಾನಿಟೈಸೇಶನ್ ಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇವುಗಳು ಹೊಸ ನೀತಿಗಳಲ್ಲ, ಬದಲಿಗೆ YouTube ನ ಜಾಹೀರಾತುದಾರ-ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳಿಂದ ಪಡೆಯಲಾದ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳಾಗಿವೆ. ಈ ಪುಟವು ಗೇಮಿಂಗ್ ವೀಡಿಯೊಗಳಿಗೆ ಸಂಬಂಧಿಸಿದ ಸಾಮಾನ್ಯ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿದ್ದರೂ ಸಹ, ನಿಮ್ಮ ಎಲ್ಲಾ ವೀಡಿಯೊಗಳಿಗೆ ಎಲ್ಲಾ ಜಾಹೀರಾತುದಾರ-ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳು ಯಥಾಪ್ರಕಾರ ಅನ್ವಯವಾಗಿರುತ್ತವೆ ಎಂಬುದು ನಿಮ್ಮ ನೆನಪಿನಲ್ಲಿರಲಿ.

ಕೆಳಗಿನವುಗಳ ಉಲ್ಲಂಘನೆಯು, ಜಾಹೀರಾತುದಾರರು ನಿಮ್ಮ ಮಾನಿಟೈಸ್ ಮಾಡಿದ ವೀಡಿಯೊಗಳಲ್ಲಿ ಸೀಮಿತ ಪ್ರಮಾಣದಲ್ಲಿ ಅಥವಾ ಯಾವುದೇ ಜಾಹೀರಾತುಗಳನ್ನು ಪ್ರದರ್ಶಿಸದಿರಲು ತೀರ್ಮಾನಿಸಬಹುದು. ನಿಮ್ಮ ವೀಡಿಯೊಗಳು YouTube ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವುದಿಲ್ಲ ಎಂಬುದನ್ನು ಕಾಲಕಾಲಕ್ಕೆ ಪರಿಶೀಲಿಸುವುದು ಉತ್ತಮವಾಗಿದೆ, ಇದು ಅವುಗಳ ಮಾನಿಟೈಸೇಶನ್ ಸ್ಥಿತಿಯ ಮೇಲೂ ಪರಿಣಾಮ ಬೀರಬಹುದು.

ಗೇಮಿಂಗ್ ವೀಡಿಯೊಗಳಿಂದ ಮಾನಿಟೈಸ್ ಮಾಡುವ ಕುರಿತು ಸಲಹೆಗಳು

ಗೇಮಿಂಗ್ ವಿಷಯಗಳಿಗೆ ಸಂಬಂಧಿಸಿದ ನಮ್ಮ ಜಾಹೀರಾತುದಾರ-ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳು ಸೂಚಿಸಿರುವ ಕೆಲವು ಉದಾಹರಣೆಗಳನ್ನು ಕೆಳಗೆ ನೀಡಲಾಗಿದೆ. ಆಡಿಯೋ ಅಥವಾ ವಿಷುವಲ್ ಫಾರ್ಮ್‌ನಲ್ಲಿ (ಪಠ್ಯ ಸೇರಿದಂತೆ) ನೀತಿ ಉಲ್ಲಂಘನೆಗಳು ಕಂಡುಬಂದರೆ, ನೈಜವಾಗಿ ಅಥವಾ ಕಂಪ್ಯೂಟರ್ ರಚಿಸಿದ ವಿಷಯಗಳಲ್ಲಿ ಕಾಣಿಸಿಕೊಳ್ಳುವ ವೀಡಿಯೊಗಳಿಗೆ ಕೆಳಗಿನ ಎಲ್ಲಾ ಮಾನಿಟೈಸೇಶನ್ ಐಕಾನ್ ಬದಲಾವಣೆಗಳು ಅನ್ವಯಿಸಬಹುದು. ಇದು ವೀಡಿಯೊ ಥಂಬ್‌ನೇಲ್ ಮತ್ತು ಶೀರ್ಷಿಕೆಯಲ್ಲಿನ ಬದಲಾವಣೆಗಳನ್ನು ಸಹ ಒಳಗೊಂಡಿರುತ್ತದೆ.

ಅನುಚಿತವಾದ ಭಾಷೆ

ನಿಮ್ಮ ಗೇಮಿಂಗ್ ವೀಡಿಯೊಗಳ ಪ್ರಾರಂಭದಲ್ಲಿ ಅಥವಾ ಅದರ ಉದ್ದಕ್ಕೂ ಅಶ್ಲೀಲತೆ ಅಥವಾ ಅಸಭ್ಯತೆಯಿಂದ ಕೂಡಿದ ಅಂಶಗಳನ್ನು ತೋರಿಸುವುದು ಮಾನಿಟೈಸೇಶನ್ ಸ್ಥಿತಿಯ ಬದಲಾವಣೆಗಳಿಗೆ ಕಾರಣವಾಗಬಹುದು. ನಿಮ್ಮ ಕಂಟೆಂಟ್‌ನಲ್ಲಿ (ಅಂದರೆ, ಸಂಗೀತದ ವೀಡಿಯೊಗಳು, ಬ್ಯಾಕಿಂಗ್ ಟ್ರ್ಯಾಕ್‌ಗಳು, ಇಂಟ್ರೊ/ಔಟ್ರೊ ಸಂಗೀತ ಅಥವಾ ಹಿನ್ನೆಲೆಯಲ್ಲಿ ಪ್ಲೇ ಮಾಡಿದ ಸಂಗೀತ) ಅಪರೂಪಕ್ಕೆ ಅಥವಾ ಸಾಂದರ್ಭಿಕವಾಗಿ ಅಸಭ್ಯ ಭಾಷೆಯ ಬಳಕೆಯು, ನಿಮ್ಮ ವೀಡಿಯೊ ಜಾಹೀರಾತು ಪ್ರಸಾರಕ್ಕೆ ಸೂಕ್ತವಲ್ಲ ಎಂಬುದಕ್ಕೆ ಕಾರಣವಾಗುವುದಿಲ್ಲ.

ಕೆಲವು ಉದಾಹರಣೆಗಳು ಇಲ್ಲಿವೆ (ಇಷ್ಟಕ್ಕೆ ಸೀಮಿತವಾಗಿಲ್ಲ):

ಜಾಹೀರಾತುಗಳ ಮಾರ್ಗದರ್ಶನ ಪ್ರಶ್ನಾವಳಿ ಆಯ್ಕೆಗಳು ಮತ್ತು ವಿವರಗಳು

ಈ ಕಂಟೆಂಟ್ ಜಾಹೀರಾತು ಆದಾಯವನ್ನು ಗಳಿಸಬಹುದು

ಸಂಕ್ಷಿಪ್ತ ಅಥವಾ ಸೆನ್ಸಾರ್ ಮಾಡಲಾದ ಅಶ್ಲೀಲ ಬೈಗುಳ ಅಥವಾ ಶೀರ್ಷಿಕೆ, ಥಂಬ್‌ನೇಲ್ ಅಥವಾ ವೀಡಿಯೊದಲ್ಲಿ “ಇವನಜ್ಜಿ” ಅಥವಾ “ಇವನಮ್ಮನ್” ನಂತಹ ಪದಗಳು. "ಸೂಳೆ", "ಪಿವೋಟ್ ನನ್ಮಗ", "ತಿಕ" ಮತ್ತು "ಹೇಲು" ಎಂಬಂತಹ ಮಧ್ಯಮ ಪ್ರಮಾಣದ ಬೈಗುಳವನ್ನು ವೀಡಿಯೊದಲ್ಲಿ ಆಗಾಗ್ಗೆ ಬಳಸುವುದು. ಸಂಗೀತ ಅಥವಾ ಸ್ಟ್ಯಾಂಡ್ ಅಪ್ ಕಾಮಿಡಿ ವೀಡಿಯೊ ಕಂಟೆಂಟ್‌ನಲ್ಲಿ ಹೆಚ್ಚಿನ ಬೈಗುಳವನ್ನು ಬಳಸುವುದು.

ವ್ಯಾಖ್ಯಾನಗಳು:

  • “ಸೆನ್ಸಾರ್ ಮಾಡಲಾದ ಅಸಭ್ಯ ಮಾತುಗಳು” ಎಂದರೆ ಪದವನ್ನು ಬ್ಲೀಪ್ ಮಾಡುವುದು ಅಥವಾ ಮ್ಯೂಟ್ ಮಾಡುವುದು ಮತ್ತು ಲಿಖಿತ ಪದಗಳನ್ನು ಕಪ್ಪು ಪಟ್ಟಿಗಳು, ಸಂಕೇತಗಳು ಅಥವಾ ಪೋಸ್ಟ್-ಪ್ರೊಡಕ್ಷನ್‌ನಲ್ಲಿ ಸೇರಿಸಲಾದ ಪಠ್ಯದ ಮೂಲಕ ಮರೆಮಾಡುವುದು.
  • "ಸಂಕ್ಷಿಪ್ತ ಅಸಭ್ಯ ಬೈಗುಳ" WTF ("ವಾಟ್ ದ ಫ*") ನಂತಹ ಸಂಕ್ಷಿಪ್ತ ಪದವನ್ನು ಸೂಚಿಸುತ್ತದೆ, ಇದು ಸಂಕ್ಷಿಪ್ತ ಪದವನ್ನು ಬಳಸಿಕೊಂಡು ಮೂಲ ಪದವನ್ನು ಸಂಕ್ಷಿಪ್ತಗೊಳಿಸುತ್ತದೆ.

ಈ ಕಂಟೆಂಟ್ ಸೀಮಿತ ಆದಾಯವನ್ನು ಗಳಿಸಬಹುದು ಅಥವಾ ಯಾವುದೇ ಜಾಹೀರಾತು ಆದಾಯವನ್ನು ಗಳಿಸದೇ ಇರಬಹುದು

ಮೊದಲ 7 ಸೆಕೆಂಡ್‌ಗಳಲ್ಲಿ ತೀವ್ರವಾದ ಬೈಗುಳವನ್ನು (ಉದಾಹರಣೆಗೆ, ದೆಂ*) ಬಳಸುವುದು ಅಥವಾ ಶೀರ್ಷಿಕೆ ಅಥವಾ ಥಂಬ್‌ನೇಲ್‌ನಲ್ಲಿ ಮಧ್ಯಮ ಪ್ರಮಾಣದ ಬೈಗುಳವನ್ನು (ಉದಾಹರಣೆಗೆ "ಹೇಲು") ಬಳಸಲಾಗಿದೆ.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

  • ವೀಡಿಯೊದಾದ್ಯಂತ ಬೈಗುಳವನ್ನು ಯಥೇಚ್ಛವಾಗಿ ಬಳಸುವುದು (ಉದಾಹರಣೆಗೆ, ಹೆಚ್ಚಿನ ವಾಕ್ಯಗಳಲ್ಲಿ ಬೈಗುಳವನ್ನು ಬಳಸುವುದು).
  • ಸಂಗೀತ ಅಥವಾ ಸ್ಟ್ಯಾಂಡ್ ಅಪ್ ಕಾಮಿಡಿ ಕಂಟೆಂಟ್‌ನ ಶೀರ್ಷಿಕೆ ಅಥವಾ ಥಂಬ್‌ನೇಲ್‌ನಲ್ಲಿ ಬೈಗುಳವನ್ನು ಬಳಸುವುದು.

ಈ ಕಂಟೆಂಟ್ ಯಾವುದೇ ಜಾಹೀರಾತು ಆದಾಯವನ್ನು ಗಳಿಸುವುದಿಲ್ಲ

ಥಂಬ್‌ನೇಲ್‌ಗಳು ಅಥವಾ ಶೀರ್ಷಿಕೆಗಳಲ್ಲಿ ಹೆಚ್ಚು ಬೈಗುಳವನ್ನು (ಉದಾಹರಣೆಗೆ, ದೆಂ*) ಬಳಸಲಾಗಿದೆ. ವೀಡಿಯೊ, ಥಂಬ್‌ನೇಲ್ ಅಥವಾ ಶೀರ್ಷಿಕೆಯಲ್ಲಿ "ನೀಗ್**" ಅಥವಾ "ಹೋಮೊ" ನಂತಹ ದ್ವೇಷಪೂರ್ಣ ಭಾ‍‍ಷೆ ಅಥವಾ ನಿಂದನೆಗಳನ್ನು ಒಳಗೊಂಡಿರುವ ತೀವ್ರವಾದ ಬೈಗುಳದ ಯಾವುದೇ ಬಳಕೆ.

ದ್ವೇಷಪೂರಿತ ಭಾಷೆ ಅಥವಾ ನಿಂದನೆಗಳ ಕುರಿತು ಹೆಚ್ಚುವರಿ ಮಾಹಿತಿಗಾಗಿ, ನಮ್ಮ ಸಹಾಯ ಕೇಂದ್ರದಲ್ಲಿ ನಮ್ಮ ದ್ವೇಷಪೂರಿತ ಮತ್ತು ಅವಹೇಳನಕಾರಿ ಕಂಟೆಂಟ್ ಮಾರ್ಗಸೂಚಿಯನ್ನು ಸಹ ನೀವು ಉಲ್ಲೇಖಿಸಬಹುದು.

ವಯಸ್ಕರ ಕಂಟೆಂಟ್

ಜಾಹೀರಾತುಗಳ ಮಾರ್ಗದರ್ಶನ ಲೈಂಗಿಕವಾಗಿ ಪ್ರಚೋದಕ ನಗ್ನತೆ ಪ್ರಶ್ನಾವಳಿ ಆಯ್ಕೆಗಳು ಮತ್ತು ವಿವರಗಳು

ಈ ಕಂಟೆಂಟ್ ಜಾಹೀರಾತು ಆದಾಯವನ್ನು ಗಳಿಸಬಹುದು

ತೃಪ್ತಿಕರವಲ್ಲದ ಲೈಂಗಿಕ ವಿಷಯಗಳು (ಉದಾಹರಣೆಗೆ, ಸ್ತ್ರೀರೋಗತಜ್ಞರ ಭೇಟಿಯ ಕುರಿತಾದ ಕಥಾವಸ್ತು).

ಸಾಮಾನ್ಯ ಪ್ರಣಯ ದೃಶ್ಯಗಳು (ಅಂದರೆ, ಪಾತ್ರಗಳ ನಡುವೆ ಪ್ರೀತಿಯ ಚುಂಬನ ದೃಶ್ಯಗಳು).

ಅಸಭ್ಯ ಅಥವಾ ಅಶ್ಲೀಲ ಪದಗಳನ್ನು ಬಳಸದ ಲೈಂಗಿಕ ಹಾಸ್ಯಗಳು ಮತ್ತು ವ್ಯಂಗ್ಯೋಕ್ತಿಗಳ ಬಳಕೆ (ಉದಾ. ಕೈಗಳ ಮೂಲಕ ಹಾಸ್ಯಮಯ ರೀತಿಯಲ್ಲಿ ಲೈಂಗಿಕ ಕ್ರಿಯೆಗಳನ್ನು ಅನುಕರಿಸುವುದು).

ಫೀಚರ್‌ಗಳು ಅಸ್ಪಷ್ಟವಾಗಿ ಕಾಣಿಸುವ ಸಂಪೂರ್ಣವಾಗಿ ಸೆನ್ಸಾರ್ ಮಾಡಲಾದ ಬೆತ್ತಲೆ ದೇಹಗಳು.

ಪೂಲ್ (ಕಥೆಯ ಭಾಗವಾಗಿ ಬಿಕಿನಿಯಲ್ಲಿ ಈಜುವ ಆಟದ ಪಾತ್ರಗಳು) ನಂತಹ ಸೂಕ್ತವಾದ ಸೆಟ್ಟಿಂಗ್‌ನಲ್ಲಿ ಸೀಮಿತ ಉಡುಪುಗಳ ಉದ್ರೇಕಕಾರಿಯಲ್ಲದ ಚಿತ್ರಣ.

ಕೇಂದ್ರೀಕರಿಸಿರದ, ಸಂಪೂರ್ಣವಾಗಿ ಸೆನ್ಸಾರ್ ಮಾಡಿದ ನಗ್ನತೆ (ಉದಾಹರಣೆಗೆ, ಸಂಪೂರ್ಣವಾಗಿ ಸೆನ್ಸಾರ್ ಮಾಡಿದ ಬೆತ್ತಲೆ ದೇಹದ ಭಾಗಗಳು).

ಪ್ರಣಯದ ದೃಶ್ಯಗಳು ಅಥವಾ ಚುಂಬನ; ಸಂಭೋಗವನ್ನು ಉಲ್ಲೇಖಿಸದೆ ಪ್ರಣಯ ಸಂಬಂಧಗಳು ಅಥವಾ ಲೈಂಗಿಕತೆಯ ಕುರಿತಾದ ಚರ್ಚೆಗಳು; ಸ್ಪಷ್ಟವಾಗಿ ಗ್ರಹಿಸಲಾಗದ ಮತ್ತು ಪ್ರೇಕ್ಷಕರನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿರದ, ಸಂಪೂರ್ಣವಾಗಿ ಸೆನ್ಸಾರ್ ಮಾಡಿದ ನಗ್ನತೆ; ಮಗು ಇರುವಾಗ ಎದೆ ಹಾಲುಣಿಸುವುದನ್ನು ತೋರಿಸುವ ನಗ್ನತೆ; ಗ್ರಾಫಿಕ್ ಅಲ್ಲದ ಲೈಂಗಿಕ ಶಿಕ್ಷಣ; ಅಪೇಕ್ಷಣೀಯ ಅಥವಾ ಆಕರ್ಷಕವಾಗಿ ಕಾಣಿಸಿಕೊಳ್ಳುವ ಪ್ರಯತ್ನದಲ್ಲಿ ಸಾಮಾನ್ಯವಾಗಿ ಲೈಂಗಿಕವಾಗಿ ಬಿಂಬಿಸಲಾಗುವ ದೇಹದ ಭಾಗಗಳ ಲಯಬದ್ಧ ದೇಹದ ಚಲನೆಯನ್ನು ಒಳಗೊಂಡಿರುವ, ಆದರೆ ಲೈಂಗಿಕವಾಗಿ ಗ್ರಾಫಿಕ್ ಆಗಿರದ ನೃತ್ಯ; ನೃತ್ಯ ಸಂಯೋಜನೆ ಮಾಡಿರುವ ನೃತ್ಯ ಅಥವಾ ಸಂಗೀತ ವೀಡಿಯೊದಲ್ಲಿರುವ ಹಾಗೆ ವೃತ್ತಿಪರ ಸೆಟ್ಟಿಂಗ್‌ನಲ್ಲಿ ಲೈಂಗಿಕವಾಗಿ ಗ್ರಾಫಿಕ್ ಆಗಿರುವ ನೃತ್ಯ.

ಈ ಕಂಟೆಂಟ್ ಸೀಮಿತ ಆದಾಯವನ್ನು ಗಳಿಸಬಹುದು ಅಥವಾ ಯಾವುದೇ ಜಾಹೀರಾತು ಆದಾಯವನ್ನು ಗಳಿಸದೇ ಇರಬಹುದು

ಡ್ಯಾನ್ಸ್ ಸ್ಟುಡಿಯೋ ಅಥವಾ ಲೈವ್ ಈವೆಂಟ್‌ಗಳಂತಹ ವೃತ್ತಿಪರ ಸೆಟ್ಟಿಂಗ್‌ನಲ್ಲಿ ಕನಿಷ್ಠ ಉಡುಪನ್ನು ಕೇಂದ್ರೀಕರಿಸಿರುವ ಪ್ರಚೋದನಕಾರಿ ನೃತ್ಯ (ಉದಾ. ಟ್ವರ್ಕಿಂಗ್).

ಯಾವುದೂ ಅಲ್ಲ.

ಸ್ಪಷ್ಟವಾಗಿ ಗ್ರಹಿಸಬಹುದಾದ ಸಂಭೋಗವನ್ನು ಪ್ರದರ್ಶಿಸುವ ಶಾಸ್ತ್ರೀಯ ಕಲೆ (ಉದಾಹರಣೆಗೆ ಲೈಂಗಿಕ ಕ್ರಿಯೆಯ ಚಿತ್ರ) ಅಥವಾ ಥಂಬ್‌ನೇಲ್‌ಗಳಲ್ಲಿ ಜನನಾಂಗಗಳ ಮೇಲೆ ಗಮನ ಕೇಂದ್ರೀಕರಿಸುವುದು; ಆ್ಯನಿಮೇಟ್ ಮಾಡಿದ ಲೈಂಗಿಕ ಕ್ರಿಯೆಗಳನ್ನು ಒಳಗೊಂಡಿರುವ ಪ್ರಚೋದಕವಲ್ಲದ ಲೈಂಗಿಕ ಶಿಕ್ಷಣ; ಲೈಂಗಿಕ ಥೀಮ್‌ಗಳನ್ನು ಒಳಗೊಂಡಿರುವ ಪ್ರಾಂಕ್‌ಗಳು; ಕನಿಷ್ಠ ಉಡುಪನ್ನು ಕೇಂದ್ರೀಕರಿಸಿದ ನೃತ್ಯ; ನೃತ್ಯದಲ್ಲಿ ದೇಹದ ಲೈಂಗಿಕ ಭಾಗಗಳನ್ನು ಉದ್ದೇಶಪೂರ್ವಕವಾಗಿ ಸ್ಪರ್ಶಿಸುವುದು ಅಥವಾ ಅವುಗಳ ಮೇಲೆ ನಿರಂತರವಾಗಿ ಗಮನ ಕೇಂದ್ರೀಕರಿಸುವುದು.

ಈ ಕಂಟೆಂಟ್ ಯಾವುದೇ ಜಾಹೀರಾತು ಆದಾಯವನ್ನು ಗಳಿಸುವುದಿಲ್ಲ

ಗೋಚರಿಸುವ ಲೈಂಗಿಕ ಕ್ರಿಯೆಗಳು ಅಥವಾ ಲೈಂಗಿಕ ದೇಹ-ದ್ರವಗಳ ದೃಶ್ಯಗಳು.

ಕಥಾವಸ್ತುವಿನ ಭಾಗವಾಗಿ ಲೈಂಗಿಕ-ಸಂಬಂಧಿತ ಮನರಂಜನೆಯನ್ನು (ಸ್ಟ್ರಿಪ್ ಕ್ಲಬ್‌ಗಳಂತಹ) ಒಳಗೊಂಡಿರುವ ಆಟದ ಕಥೆ (ಇದು ತ್ವರಿತ ನಿಲುಗಡೆ/ಟಾಸ್ಕ್ ಆಗಿದ್ದರೂ ಸಹ).

ಅಸಹಜ ಬಯಕೆಗಳ ಚಿತ್ರಣಗಳು ಅಥವಾ ಚರ್ಚೆಗಳು.

"hot s3x" (ಉದ್ದೇಶಪೂರ್ವಕ ತಪ್ಪು ಕಾಗುಣಿತ ಸೇರಿದಂತೆ) ಅಥವಾ "ಜರ್ಕ್ ಆಫ್ ಕಂಪೈಲೇಶನ್" ಎಂಬಂತಹ ಅಶ್ಲೀಲ ಮತ್ತು ಅಸಭ್ಯ ಶೀರ್ಷಿಕೆಗಳು ಅಥವಾ ಥಂಬ್‌ನೇಲ್‌ಗಳು.

ವೀಡಿಯೊದಲ್ಲಿ ವಯಸ್ಕರ ಕಂಟೆಂಟ್ ಇಲ್ಲದಿದ್ದರೂ ದಾರಿ ತಪ್ಪಿಸುವ ಮೆಟಾಡೇಟಾ (ಉದಾಹರಣೆಗೆ, ಲೈಂಗಿಕ ಕ್ರಿಯೆಯ ಕುರಿತು ಭರವಸೆ ನೀಡುವ ಶೀರ್ಷಿಕೆ).

ಹೆಚ್ಚು ಲೈಂಗಿಕತೆಯನ್ನು ಬಿಂಬಿಸುವ ಶೀರ್ಷಿಕೆಗಳು ಅಥವಾ ಥಂಬ್‌ನೇಲ್‌ಗಳು (ಉದಾಹರಣೆಗೆ "18+," "ವಯಸ್ಕರಿಗೆ ಮಾತ್ರ").

ವಯಸ್ಕರನ್ನು ಗುರಿಯಾಗಿಸಿರುವ ಲೈಂಗಿಕ ವೀಡಿಯೊ ಗೇಮ್‌ಗಳು, ಅಥವಾ ಪ್ರೇಕ್ಷಕರನ್ನು ಪ್ರಚೋದಿಸುವ ಅಥವಾ ತೃಪ್ತಿಪಡಿಸುವ ಉದ್ದೇಶದಿಂದ ವೀಡಿಯೊ ಗೇಮ್‌ನ ಪಾತ್ರಗಳನ್ನು ಲೈಂಗಿಕವಾಗಿ ಬಿಂಬಿಸುವುದು.

ಅಸಭ್ಯ ಪದಗಳನ್ನು ಒಳಗೊಂಡಂತೆ ಅಶ್ಲೀಲ ಭಾಷೆಯ ಬಳಕೆ (ಉದಾಹರಣೆಗೆ, ಆಟದ ಸಮಯದಲ್ಲಿ ತು*-ಪದವನ್ನು ಸ್ಪಷ್ಟವಾಗಿ ಉಚ್ಚರಿಸುವುದು ಅಥವಾ ಮಾತನಾಡುವುದು).

ಲೈಂಗಿಕ ಆಟಿಕೆಗಳು ಅಥವಾ ಅದೇ ರೀತಿಯ ಬಳಕೆಯಲ್ಲಿಲ್ಲದ ಲೈಂಗಿಕ ಉದ್ರೇಕವನ್ನು ಹೆಚ್ಚಿಸುವ ಉತ್ಪನ್ನಗಳು (ಉದಾಹರಣೆಗೆ, ಆಟದ ವಸ್ತುಗಳು ಅಥವಾ ಹಿನ್ನೆಲೆಯಲ್ಲಿ ಕಾಣಿಸಿಕೊಳ್ಳುವುದು).

ಸೂಚಿತ ಲೈಂಗಿಕ ಕ್ರಿಯೆಗಳು (ಕಂಬಳಿಯ ಕೆಳಗೆ ಹೊರಳಾಡುವುದು) ಅಥವಾ ಲೈಂಗಿಕ ಕ್ರಿಯೆಗಳ ಶಬ್ದಗಳು (ನರಳಾಡುವುದು).

ಗೇಮ್‌ನಲ್ಲಿ ಉಲ್ಲೇಖಿಸಲಾದ ವಿವರಣಾತ್ಮಕ ಲೈಂಗಿಕ ವಿಷಯಗಳು (ಉದಾಹರಣೆಗೆ, ಹಸ್ತಮೈಥುನ ಅಥವಾ ಆಟದ ಪಾತ್ರ ಅಥವಾ ದೃಶ್ಯದ ಆಧಾರದ ಮೇಲೆ ಲೈಂಗಿಕ ವಿಷಯದ ಕುರಿತು ವಿವರಿಸುವುದು).

ಸಂಪೂರ್ಣವಾಗಿ ಬಹಿರಂಗಪಡಿಸಿದ ಲೈಂಗಿಕ ದೇಹದ ಭಾಗಗಳು (ಉದಾಹರಣೆಗೆ, ಜನನಾಂಗಗಳನ್ನು ತೋರಿಸುವುದು).

ಚಿತ್ರವನ್ನು ಪಿಕ್ಸಲೇಟ್ ಮಾಡಿ ತೋರಿಸಿದ್ದರೂ ಅಥವಾ ಸೆನ್ಸಾರ್ ಮಾಡಿದ್ದರೂ ದೇಹದ ಲೈಂಗಿಕ ಅಂಗಾಂಗಗಳನ್ನು ಗುರುತಿಸಲು ಸಾಧ್ಯವಾಗುವುದು (ಉದಾಹರಣೆಗೆ, ಬೆತ್ತಲೆ ದೇಹಗಳ ಮೇಲೆ ನಕ್ಷತ್ರ ಹಾಕಿದ ಅಥವಾ ಮಸುಕಾಗಿರುವ ದೃಶ್ಯಗಳಿದ್ದರೂ, ಅವುಗಳ ಸಿಲೂಯೆಟ್‌ಗಳಿಂದ ಇನ್ನೂ ಗುರುತಿಸಬಹುದಾಗಿರುವುದು).

ಪ್ರೇಕ್ಷಕರನ್ನು ಲೈಂಗಿಕವಾಗಿ ಪ್ರಚೋದಿಸುವ ಉದ್ದೇಶದಿಂದ, ಎದೆಯ ಸೀಳು ಅಥವಾ ಉಬ್ಬುಗಳನ್ನು ಪುನರಾವರ್ತಿತವಾಗಿ ಅಥವಾ ಕೇಂದ್ರಬಿಂದುವಾಗಿ ತೋರಿಸುವ ಹಾಗೆ, ದೇಹದ ಲೈಂಗಿಕ ಭಾಗಗಳ ಚಿತ್ರಣಗಳು (ಉದಾಹರಣೆಗೆ, ಗೇಮ್‌ನ ಪಾತ್ರಗಳ ಸ್ತನದ ಕ್ಲೋಸ್ ಅಪ್ ಶಾಟ್‌ಗಳು ಅಥವಾ ಉಬ್ಬಿರುವ ಜನನಾಂಗದ ಔಟ್‌ಲೈನ್ ಶಾಟ್‌ಗಳು).

ಪ್ರದರ್ಶಿಸಲಾದ, ಕನಿಷ್ಠ ಉಡುಪಿನಿಂದ ಮುಚ್ಚಿದ ದೇಹದ ಲೈಂಗಿಕ ಭಾಗಗಳು ಅಥವಾ ಪೂರ್ಣ ನಗ್ನತೆ; ದೃಶ್ಯದಲ್ಲಿ ಮಗು ಇಲ್ಲದೆ ಎದೆ ಹಾಲುಣಿಸುವುದನ್ನು ತೋರಿಸುವ ನಗ್ನತೆ; ಲೈಂಗಿಕ ಕ್ರಿಯೆಗಳು (ಅಸ್ಪಷ್ಟ ಅಥವಾ ಸೂಚ್ಯವಾಗಿದ್ದರೂ ಸಹ), ಅಸಹಜ ಲೈಂಗಿಕ ಬಯಕೆಗಳು, ಸಲಹೆಗಳು, ಅನುಭವಗಳಂತಹ ಲೈಂಗಿಕ ವಿಷಯಗಳ ಕುರಿತು ಚರ್ಚೆ; ಲೈಂಗಿಕ ಕಂಟೆಂಟ್ (ಪಠ್ಯಗಳು ಅಥವಾ ಲಿಂಕ್‌ಗಳು ಸೇರಿದಂತೆ) ಇರುವ ವೀಡಿಯೊ ಥಂಬ್‌ನೇಲ್; ಲೈಂಗಿಕವಾಗಿ ಪ್ರಚೋದಿಸುವ ದೃಶ್ಯಗಳು ಮತ್ತು ಗೆಸ್ಚರ್‌ಗಳು; ಲೈಂಗಿಕ ಆಟಿಕೆಗಳು ಅಥವಾ ಸಾಧನಗಳು ಕಾಣುವುದು; ಲೈಂಗಿಕ ಉದ್ಯಮ ಮತ್ತು ಅದರ ವೃತ್ತಿಪರರಿಗೆ ಸಂಬಂಧಿಸಿದ ಕಂಟೆಂಟ್; ಜನನಾಂಗಗಳು ಅಥವಾ ಮಿಲನದ ದೃಶ್ಯಗಳನ್ನು ಒಳಗೊಂಡಿರುವ ಪ್ರಾಣಿಗಳ ಲೈಂಗಿಕತೆ; ನೃತ್ಯದಲ್ಲಿ ಲೈಂಗಿಕ ಚಲನೆಗಳು ಅಥವಾ ಕ್ರಿಯೆಗಳ ಅನುಕರಣೆ ಅಥವಾ ನಟನೆ; ಪ್ರೇಕ್ಷಕರನ್ನು ಪ್ರಚೋದಿಸಲು ಸ್ಪಷ್ಟವಾಗಿ ಉದ್ದೇಶಿಸಲಾದ ಕಾಮಪ್ರಚೋದಕ ನೃತ್ಯಗಳು.

ಹಿಂಸೆ

ಜಾಹೀರಾತುಗಳ ಮಾರ್ಗದರ್ಶನ ಗೇಮಿಂಗ್ ಹಿಂಸೆ ಪ್ರಶ್ನಾವಳಿ ಆಯ್ಕೆಗಳು ಮತ್ತು ವಿವರಗಳು

ಈ ಕಂಟೆಂಟ್ ಜಾಹೀರಾತು ಆದಾಯವನ್ನು ಗಳಿಸಬಹುದು

ಗ್ರಾಫಿಕ್ ಅಲ್ಲದ ಗೇಮ್ ಪ್ಲೇ ಹೊಂದಿರುವ ಹಿಂಸೆ. ಗ್ರಾಫಿಕ್ ಅಲ್ಲದ ಗೇಮ್‌ಪ್ಲೇ ಎಂದರೆ:

  • ವೀಡಿಯೊದಲ್ಲಿ ಮೊದಲ 15 ಸೆಕೆಂಡ್‌ಗಳ ನಂತರ ಗ್ರಾಫಿಕ್ ದೃಶ್ಯಗಳು (ಉದಾ. ವ್ಯಕ್ತಿಯ ಮೇಲೆ ಘೋರ ದಾಳಿ).

ಸೆನ್ಸಾರ್ ಮಾಡಲಾದ ಗ್ರಾಫಿಕ್ ಹಿಂಸಾಚಾರದ ಕ್ಲಿಪ್‌ಗಳು (ಉದಾಹರಣೆಗೆ, ಕೊಲೆ ನಡೆದ ಕ್ಷಣ ಅಥವಾ ಮಸುಕಾಗಿರುವ ಶಿರಚ್ಛೇದ ದೃಶ್ಯ).

ಗ್ರಾಫಿಕ್ ಹಿಂಸೆಯನ್ನು ಒಳಗೊಂಡಿರದ ಸಾಮಾನ್ಯ ಗೇಮ್ ಪ್ಲೇ (ಗ್ರಾಫಿಕ್ ಹಿಂಸೆಯ ವ್ಯಾಖ್ಯಾನಕ್ಕಾಗಿ, ಕೆಳಗಿನ "ಈ ಕಂಟೆಂಟ್ ಸೀಮಿತವಾದ ಅಥವಾ ಯಾವುದೇ ಜಾಹೀರಾತು ಆದಾಯವನ್ನು ಗಳಿಸದೇ ಇರಬಹುದು" ವಿಭಾಗವನ್ನು ನೋಡಿ).

ಅವಾಸ್ತವಿಕವಾದ, ತಮಾಷೆಯ ಮತ್ತು ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೂ ಸ್ವೀಕಾರಾರ್ಹವಾದ ಹಿಂಸಾಚಾರ (ಉದಾ. ರಾಕ್ಷಸರಿಂದ ತಪ್ಪಿಸಿಕೊಂಡು ಓಡುವುದನ್ನು ತೋರಿಸುವ ಕುಟುಂಬ-ಸ್ನೇಹಿ ವೀಡಿಯೊ ಗೇಮ್‌ಗಳು).
ನಿಯಮಿತ ಕರ್ತವ್ಯ ನಿರ್ವಹಣೆಯೂ ಸೇರಿದಂತೆ ಕಾನೂನು ಜಾರಿಗೊಳಿಸುವಿಕೆ (ಉದಾಹರಣೆಗೆ ಬಲವಂತದ ಬಂಧನ, ಜನಜಂಗುಳಿ ನಿಯಂತ್ರಣ, ಅಧಿಕಾರಿಯೊಂದಿಗೆ ವಿವಾದ, ಬಲವಂತದ ಪ್ರವೇಶ); ಎಡಿಟ್ ಮಾಡದ ವೀಡಿಯೊ ಗೇಮ್‌ಪ್ಲೇನ ಭಾಗವಾಗಿ ಸಂಭವಿಸುವ ಹಿಂಸೆ; ಕನಿಷ್ಠ ಪ್ರಮಾಣದಲ್ಲಿ ರಕ್ತವಿರುವ ಸಣ್ಣ ಹಿಂಸೆ; ಶೈಕ್ಷಣಿಕ ವೀಡಿಯೊದ ಭಾಗವಾಗಿ ಸಂಪೂರ್ಣವಾಗಿ ಸೆನ್ಸಾರ್ ಮಾಡಲಾದ, ಬ್ಲರ್ ಮಾಡಿರುವ, ಸಮಾಧಿ ಮಾಡಲು ಸಿದ್ಧಪಡಿಸಿದ ಅಥವಾ ಯುದ್ಧಗಳಂತಹ ಐತಿಹಾಸಿಕ ಘಟನೆಗಳಲ್ಲಿ ತೋರಿಸಲಾದ ಮೃತ ದೇಹಗಳು.
ಈ ಕಂಟೆಂಟ್ ಸೀಮಿತ ಆದಾಯವನ್ನು ಗಳಿಸಬಹುದು ಅಥವಾ ಯಾವುದೇ ಜಾಹೀರಾತು ಆದಾಯವನ್ನು ಗಳಿಸದೇ ಇರಬಹುದು

ಥಂಬ್‌ನೇಲ್‌ನಲ್ಲಿ ಅಥವಾ ವೀಡಿಯೊದ ಮೊದಲ 8 ರಿಂದ 15 ಸೆಕೆಂಡುಗಳಲ್ಲಿ ಗ್ರಾಫಿಕ್ ಗೇಮ್ ಹಿಂಸಾಚಾರ.

  • "ಗ್ರಾಫಿಕ್ ಗೇಮ್ ಹಿಂಸಾಚಾರವು" ಶಿರಚ್ಛೇದ ಮತ್ತು ಛಿದ್ರಗೊಳಿಸುವಿಕೆಯಂತಹ ಕ್ರೂರ ಹತ್ಯೆಗಳು, ಅಥವಾ ದೈಹಿಕ ದ್ರವಗಳು ಮತ್ತು ಭಾಗಗಳನ್ನು ಕೇಂದ್ರೀಕರಿಸುವ ತೀವ್ರ ಗಾಯಗಳನ್ನು ಒಳಗೊಂಡಿದೆ.
ಗ್ರಾಫಿಕ್ ಕಾನೂನು ಜಾರಿಗೊಳಿಸುವಿಕೆ, ಉದಾಹರಣೆಗೆ ಗೋಚರಿಸುವ ಗಾಯಗಳು; ಶೈಕ್ಷಣಿಕ ಅಥವಾ ಡಾಕ್ಯುಮೆಂಟರಿ ಸೆಟ್ಟಿಂಗ್‌ಗಳಲ್ಲಿ (ಇತಿಹಾಸ ಕಲಿಕೆಯ ಚಾನಲ್‌ನಂತಹದು) ಸ್ಪಷ್ಟವಾದ ಗಾಯ ಅಥವಾ ಹಾನಿಯಾಗಿರುವ ಮೃತ ದೇಹಗಳು; ಥಂಬ್‌ನೇಲ್‌ನಲ್ಲಿ ಅಥವಾ ಕಂಟೆಂಟ್‌ನ ಆರಂಭದಲ್ಲಿ ಗ್ರಾಫಿಕ್ ಗೇಮ್‌ನ ಹಿಂಸೆ; ಗಾಯಗಳಿಲ್ಲದೆ ಸಶಸ್ತ್ರ ಸಂಘರ್ಷದ ಕಚ್ಚಾ ಫೂಟೇಜ್; ದುರಂತಗಳ ಗ್ರಾಫಿಕ್ ವಿವರಗಳ ವರ್ಣನೆ; ತೀವ್ರ ಮತ್ತು ಆಘಾತಕಾರಿ ಗಾಯಗಳನ್ನು ನಾಟಕೀಯವಾಗಿ ಪ್ರದರ್ಶಿಸುವುದು.
ಈ ಕಂಟೆಂಟ್ ಯಾವುದೇ ಜಾಹೀರಾತು ಆದಾಯವನ್ನು ಗಳಿಸುವುದಿಲ್ಲ

ಆಘಾತಕಾರಿ ಅನುಭವವನ್ನು ರಚಿಸಲು ತಯಾರಿಸಲಾದ ಗೇಮ್‌ಪ್ಲೇಯನ್ನು ಕೇಂದ್ರೀಕರಿಸಿರುವುದು. ಉದಾಹರಣೆಗಳು ಇವುಗಳನ್ನು ಒಳಗೊಂಡಿವೆ:

  • ಸಾಮೂಹಿಕ ಹತ್ಯೆಗಳಿಗಾಗಿ ಆಡಲಾಗದ ಪಾತ್ರಗಳನ್ನು ಒಟ್ಟುಗೂಡಿಸುವುದು.

ಥಂಬ್‌ನೇಲ್‌ನಲ್ಲಿ ಅಥವಾ ವೀಡಿಯೊದ ಮೊದಲ ಏಳು ಸೆಕೆಂಡುಗಳಲ್ಲಿ ಗ್ರಾಫಿಕ್ ಗೇಮ್ ಹಿಂಸಾಚಾರ.

  • ದೀರ್ಘಕಾಲದ ಅಥವಾ ತೀವ್ರತರಹದ ಯಾತನೆಯನ್ನು ಅನುಭವಿಸುವುದನ್ನು ತೋರಿಸುವುದರ ಜೊತೆಗೆ ಶಾರೀರಿಕ ದ್ರವಗಳು ಮತ್ತು/ಅಥವಾ ದೈಹಿಕ ಭಾಗಗಳ ಮೇಲೆ ಗಮನ ಕೇಂದ್ರೀಕರಿಸುವಂತಹ ಗಂಭೀರ ಪ್ರಮಾಣದ ಗಾಯಗಳನ್ನು (ಉದಾ. ಶಿರಚ್ಛೇದಗಳು, ಕೈಕಾಲು ಕತ್ತರಿಸುವುದು) "ಗ್ರಾಫಿಕ್ ಗೇಮ್ ಹಿಂಸಾಚಾರ" ಒಳಗೊಂಡಿದೆ.

ಲೈಂಗಿಕ ಹಿಂಸೆಯನ್ನು ತೋರಿಸುವ ವೀಡಿಯೊ ಗೇಮ್‌ಪ್ಲೇ (ಉದಾಹರಣೆಗೆ, ಒಂದು ಪಾತ್ರಕ್ಕೆ ಲೈಂಗಿಕ ಕಿರುಕುಳ ನೀಡುತ್ತಿರುವಾಗ ಆ ಪಾತ್ರದ ಯಾತನೆಯನ್ನು ಗಮನಿಸಲು ಸಾಧ್ಯವಾಗುವುದು).

ದ್ವೇಷದಿಂದ ಪ್ರೇರಿತವಾದ ಹಿಂಸಾಚಾರ ಅಥವಾ ಸಂರಕ್ಷಿತ ಗುಂಪುಗಳನ್ನು ಗುರಿಯಾಗಿಸಿರುವ ಹಿಂಸಾಚಾರವನ್ನು ತೋರಿಸುವ ವೀಡಿಯೊ ಗೇಮ್‌ಪ್ಲೇ (ಉದಾಹರಣೆಗೆ, ನಿರ್ದಿಷ್ಟ ಧಾರ್ಮಿಕ ಗುಂಪನ್ನು ದ್ವೇಷ ಭಾವನೆಯಿಂದ ಕೊಲ್ಲುವುದು).

ಗ್ರಾಫಿಕ್ ಚಿತ್ರಹಿಂಸೆಯನ್ನು ತೋರಿಸುವ ವೀಡಿಯೊ ಗೇಮ್‌ಪ್ಲೇ.

ಅಪ್ರಾಪ್ತ ವಯಸ್ಕರನ್ನು ಗುರಿಯಾಗಿಸಿದ ಗ್ರಾಫಿಕ್ ಹಿಂಸೆಯನ್ನು ತೋರಿಸುವ ವೀಡಿಯೊ ಗೇಮ್‌ಪ್ಲೇ (ಉದಾಹರಣೆಗೆ, ಅಪ್ರಾಪ್ತ ವಯಸ್ಸಿನ ಪಾತ್ರಕ್ಕೆ ಹೊಡೆಯುವುದು).

ನಿಜವಾದ ಹೆಸರಿನ ವ್ಯಕ್ತಿಗಳನ್ನು ಗುರಿಯಾಗಿಸಿದ ಗ್ರಾಫಿಕ್ ಹಿಂಸಾಚಾರವನ್ನು ತೋರಿಸುವ ವೀಡಿಯೊ ಗೇಮ್‌ಪ್ಲೇ (ಉದಾಹರಣೆಗೆ, ಸಾರ್ವಜನಿಕ ವ್ಯಕ್ತಿಯ ಹೆಸರಿನ ಪಾತ್ರವನ್ನು ಕೊಲ್ಲುವುದು).

ಶೈಕ್ಷಣಿಕವಲ್ಲದ ವೀಡಿಯೊದಲ್ಲಿ ಗ್ರಾಫಿಕ್ ಮೃತ ದೇಹಗಳು; ನಿಷೇಧಿತ ಥೀಮ್‌ಗಳನ್ನು ಒಳಗೊಂಡಿರುವ ವೀಡಿಯೊ ಗೇಮ್‌ಪ್ಲೇ (ಲೈಂಗಿಕ ಆಕ್ರಮಣದಂತಹ).

ಅಲ್ಟ್ರಾ ಗ್ರಾಫಿಕ್ ಹಿಂಸಾತ್ಮಕ ಕೃತ್ಯಗಳು (ಕಾನೂನು ಜಾರಿಗೊಳಿಸುವಿಕೆ ಒಳಗೊಂಡಂತೆ) ಮತ್ತು ಗಾಯಗಳು.

ಹಿಂಸೆಯ ಪ್ರಚೋದನೆ ಅಥವಾ ವೈಭವೀಕರಣ.

ವಿವಾದಾತ್ಮಕ ವಿಷಯಗಳು

ಜಾಹೀರಾತುಗಳ ಮಾರ್ಗದರ್ಶನ ವಿವಾದಾತ್ಮಕ ವಿಷಯಗಳು ಪ್ರಶ್ನಾವಳಿ ಆಯ್ಕೆಗಳು ಮತ್ತು ವಿವರಗಳು

ಈ ಕಂಟೆಂಟ್ ಜಾಹೀರಾತು ಆದಾಯವನ್ನು ಗಳಿಸಬಹುದು

ಆ್ಯಡ್‌ಗಳಿಲ್ಲ ಎಂಬ ಕಾಲಮ್‌ನಲ್ಲಿ ಪಟ್ಟಿ ಮಾಡಿರುವ ಯಾವುದೇ ವಿಷಯಗಳು ಅಥವಾ ಈವೆಂಟ್‌ಗಳ ಕ್ಷಣಿಕ, ಗ್ರಾಫಿಕ್-ಅಲ್ಲದ ಮತ್ತು ವಿವರಣಾತ್ಮಕವಲ್ಲದ ಉಲ್ಲೇಖಗಳು.

  • ವೀಡಿಯೊ ಗೇಮ್ ಸಂದರ್ಭದಲ್ಲಿ "ಆತ್ಮಹತ್ಯೆ" ಪದದ ಬಳಕೆ (ಉದಾಹರಣೆಗೆ, ಗೇಮ್ ಅನ್ನು ಮರುಪ್ರಾರಂಭಿಸುವ ಸಲುವಾಗಿ ಗೇಮ್‌ನ ಪಾತ್ರವನ್ನು ಕೊಲ್ಲುವುದು).
  • ಪಾತ್ರಗಳು ಅಥವಾ ಗೇಮರ್‌ಗಳು “ನಾನು ಜೀವ ತೆಗೆದುಕೊಳ್ಳುತ್ತೇನೆ" ಎಂದು ಹೇಳುವುದು.

ವಿವಾದಾತ್ಮಕ ವಿಷಯಗಳನ್ನು ತಡೆಗಟ್ಟುವುದಕ್ಕೆ ಸಂಬಂಧಿಸಿದ ಕಂಟೆಂಟ್. ವಿವಾದಾತ್ಮಕ ವಿಷಯಗಳನ್ನು ವೀಡಿಯೊದಲ್ಲಿ ಸಂಕ್ಷಿಪ್ತವಾಗಿ ಉಲ್ಲೇಖಿಸಲಾಗಿದೆ ಮತ್ತು ಗ್ರಾಫಿಕ್ ಅಲ್ಲದ ಅಥವಾ ವಿವರಣಾತ್ಮಕವಲ್ಲದ ಕಂಟೆಂಟ್ ಆಗಿದೆ. ಕೌಟುಂಬಿಕ ಹಿಂಸೆ, ಸ್ವಯಂ-ಹಾನಿ, ವಯಸ್ಕ ಲೈಂಗಿಕ ದೌರ್ಜನ್ಯ, ಗರ್ಭಪಾತ ಮತ್ತು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಗ್ರಾಫಿಕ್ ಅಲ್ಲದ, ವಿವರಣಾತ್ಮಕವಲ್ಲದ ಕಂಟೆಂಟ್.

ಈ ಕಂಟೆಂಟ್ ಸೀಮಿತ ಆದಾಯವನ್ನು ಗಳಿಸಬಹುದು ಅಥವಾ ಯಾವುದೇ ಜಾಹೀರಾತು ಆದಾಯವನ್ನು ಗಳಿಸದೇ ಇರಬಹುದು

ಕಂಟೆಂಟ್‌ನಲ್ಲಿ ಅಥವಾ ಥಂಬ್‌ನೇಲ್‌ನಲ್ಲಿ, ಶಿಶು ದೌರ್ಜನ್ಯವನ್ನು ಹೊರತುಪಡಿಸಿ ವಿವಾದಾತ್ಮಕ ವಿಷಯಗಳ ಗ್ರಾಫಿಕ್ ಚಿತ್ರಣಗಳು ಅಥವಾ ವಿವರಣೆಗಳು.

  • ಥಂಬ್‌ನೇಲ್‌ನಲ್ಲಿ ಯಾರೋ ಒದೆ ತಿನ್ನುತ್ತಿರುವುದರ ಚಿತ್ರ.
ನೋಡಲು ಮುಜುಗರಗೊಳಿಸದ, ವಿವರಣಾತ್ಮಕ ಭಾಷೆಯನ್ನು ಹೊಂದಿರಬಹುದಾದ ವಿವಾದಾತ್ಮಕ ವಿಷಯಗಳ ಕುರಿತಾದ ಕಂಟೆಂಟ್. ವಿವಾದಾತ್ಮಕ ವಿಷಯಗಳ ನಾಟಕೀಯ, ಕಲಾತ್ಮಕ, ಸಾಕ್ಷ್ಯಚಿತ್ರ, ಶೈಕ್ಷಣಿಕ ಅಥವಾ ವೈಜ್ಞಾನಿಕ ಪ್ರಾತಿನಿಧ್ಯ. ಶಿಶು ದೌರ್ಜನ್ಯಕ್ಕೆ ಸಂಬಂಧಿಸಿದ ಗ್ರಾಫಿಕ್ ಅಲ್ಲದ, ವಿವರಣಾತ್ಮಕವಲ್ಲದ, ಮುಖ್ಯ ವಿಷಯ. ವಯಸ್ಕ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಅಥವಾ ಕೌಟುಂಬಿಕ ಹಿಂಸೆಗೆ ಸಂಬಂಧಿಸಿದ ಗ್ರಾಫಿಕ್ ಅಲ್ಲದ, ವಿವರಣಾತ್ಮಕವಾದ ಕಂಟೆಂಟ್.
ಈ ಕಂಟೆಂಟ್ ಯಾವುದೇ ಜಾಹೀರಾತು ಆದಾಯವನ್ನು ಗಳಿಸುವುದಿಲ್ಲ

ಗ್ರಾಫಿಕ್ ಚಿತ್ರಣಗಳು (ರಕ್ತಸಿಕ್ತ ಗಾಯದ ರೀತಿ) ಅಥವಾ ವಿವಾದಾತ್ಮಕ ಸಮಸ್ಯೆಗಳಿಗೆ ಸಂಬಂಧಿಸಿದ ವಿವರಾತ್ಮಕ ವಿವರಣೆಗಳು.

  • ಮಕ್ಕಳ ಶೋಷಣೆ
  • ಶಿಶುಕಾಮ
  • ಬಾಲ್ಯ ವಿವಾಹ
  • ಸ್ವಯಂ ಹಾನಿ
  • ಆತ್ಮಹತ್ಯೆ
  • ಕೌಟುಂಬಿಕ ಹಿಂಸೆ
  • ದಯಾಮರಣ

ತಮ್ಮ ಮಣಿಕಟ್ಟುಗಳನ್ನು ಕತ್ತರಿಸಿಕೊಂಡು, ರಕ್ತಸ್ರಾವದಿಂದ ಸಾವಿಗೀಡಾಗುವ ಮೂಲಕ ಗೇಮ್‌ನಲ್ಲಿ ಸ್ವಯಂ-ಹಾನಿಯನ್ನು ಮಾಡಿಕೊಳ್ಳುವ ಪಾತ್ರವನ್ನು ತೋರಿಸುವುದು.

ಕಂಟೆಂಟ್, ಶೀರ್ಷಿಕೆ ಅಥವಾ ಥಂಬ್‌ನೇಲ್‌ನಲ್ಲಿ ವಿವಾದಾತ್ಮಕ ವಿಷಯಗಳ ಪ್ರಚಾರ ಅಥವಾ ವೈಭವೀಕರಣ.

  • "ನಾನು ನನ್ನ ಪತ್ನಿಗೆ ಹೊಡೆಯುತ್ತೇನೆ, ಅವಳು ಅದಕ್ಕೆ ಅರ್ಹಳು” ಎಂಬಂತಹ ಉಲ್ಲೇಖಗಳು.

ಸಂವೇದನಾಶೀಲ ರೀತಿಯಲ್ಲಿ ಪ್ರಸ್ತುತಪಡಿಸಲಾದ ವಿವಾದಾತ್ಮಕ ವಿಷಯಗಳ ಆ್ಯನಿಮೇಟೆಡ್ ಚಿತ್ರಣ.

  • ಪಾತ್ರಗಳು ಇತರರನ್ನು ಬೆದರಿಸುವುದನ್ನು ತೋರಿಸುವುದು.

ವಿವಾದಾತ್ಮಕ ವಿಷಯಗಳ ಗ್ರಾಫಿಕ್ ಚಿತ್ರಣಗಳು ಅಥವಾ ವಿವರವಾದ ವರ್ಣನೆಗಳು ಮುಖ್ಯ ವಿಷಯವಾಗಿರುವುದು; ಕೆಳಗಿನ ಯಾವುದೇ ಉಲ್ಲೇಖಗಳು ಅಥವಾ ಸಂದರ್ಭದೊಂದಿಗೆ, ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳ ಸ್ಪಷ್ಟ ಉಲ್ಲೇಖ.

  • ಅತೀ ಕಡಿಮೆ BMI ಅಥವಾ ತೂಕ.
  • ಅತಿಯಾದ ತೆಳ್ಳಗಿನ ಅಥವಾ ಸಣಕಲು ದೇಹವನ್ನು ತೋರಿಸುವುದು.
  • ತೂಕ ಅಥವಾ ದೇಹ ಆಧಾರಿತ ಅವಹೇಳನ ಅಥವಾ ನಿಂದನೆ.
  • ಬಿಂಗಿಂಗ್, ಮರೆಮಾಚುವುದು ಅಥವಾ ಆಹಾರವನ್ನು ಸಂಗ್ರಹಿಸುವ ಕುರಿತು ಉಲ್ಲೇಖ.
  • ಕ್ಯಾಲೋರಿ ಕೊರತೆಯನ್ನು ಸಾಧಿಸಲು ವ್ಯಾಯಾಮ.
  • ವಿರೇಚಕಗಳನ್ನು ವಾಂತಿ ಮಾಡುವುದು ಅಥವಾ ದುರುಪಯೋಗಪಡಿಸಿಕೊಳ್ಳುವುದು.
  • ತೂಕ ಕಳೆದುಕೊಳ್ಳುವಿಕೆ ಪ್ರಗತಿಯನ್ನು ಪರಿಶೀಲಿಸುವುದು.
  • ಮೇಲಿನ ಯಾವುದೇ ವರ್ತನೆಗಳನ್ನು ಮರೆಮಾಚುವುದರ ಕುರಿತು ಉಲ್ಲೇಖ.

ಉಪಯುಕ್ತ ವ್ಯಾಖ್ಯಾನಗಳು:

  • ಗಮನ ಕೇಂದ್ರೀಕರಿಸುವಿಕೆ ಅಥವಾ ಕೇಂದ್ರಬಿಂದು ಎಂದರೆ ಒಂದು ವಿಭಾಗ ಅಥವಾ ಪೂರ್ಣ ವೀಡಿಯೊ ನೀಡಿದ ವಿಷಯದ ಕುರಿತು ಮತ್ತು ಪುನರಾವರ್ತಿತ ಉಲ್ಲೇಖ ಮತ್ತು ವಿಷಯದ ಮೇಲೆ ಗಮನಹರಿಸುವುದು. ವಿವಾದಾತ್ಮಕ ಅಥವಾ ಸೂಕ್ಷ್ಮ ಎಂಬುದಾಗಿ ಪಟ್ಟಿ ಮಾಡಿರುವ ವಿಷಯಗಳಲ್ಲಿ ಯಾವುದೇ ವಿಷಯದ ಕುರಿತಾದ ಕ್ಷಣಿಕ ಉಲ್ಲೇಖವು, ಜಾಹೀರಾತುಗಳನ್ನು ತೋರಿಸದಿರಲು ಕಾರಣವಾಗಲಾರದು. ಉದಾಹರಣೆಗೆ, ಒಂದು ವಿವಾದಾತ್ಮಕ ಅಥವಾ ಸೂಕ್ಷ್ಮ ವಿಷಯವನ್ನು ಸಂಕ್ಷಿಪ್ತವಾಗಿ ಅಂಗೀಕರಿಸುವುದನ್ನು (ಉದಾ., "ಮುಂದಿನ ವಾರದ ವೀಡಿಯೊದಲ್ಲಿ, ಆತ್ಮಹತ್ಯೆಯ ಪ್ರಕರಣಗಳು ಕಡಿಮೆಯಾಗುತ್ತಿರುವುದರ ಕುರಿತು ನಾವು ಚರ್ಚಿಸಲಿದ್ದೇವೆ.") ಕೇಂದ್ರಬಿಂದು ಎಂದು ಪರಿಗಣಿಸಲಾಗುವುದಿಲ್ಲ, ಆದರೆ ಇಂತಹ ವಿಷಯದ ಕುರಿತು ವೀಡಿಯೊದ ಒಂದು ಭಾಗವು ನಿರ್ದಿಷ್ಟವಾಗಿ ಮಾತನಾಡಿದರೆ, ಅದನ್ನು ಕೇಂದ್ರಬಿಂದು ಎಂದು ಪರಿಗಣಿಸಲಾಗುತ್ತದೆ. ಗಮನ ಕೇಂದ್ರೀಕರಿಸುವಿಕೆಯು ಮೌಖಿಕವಾಗಿರಬೇಕೆಂದೇನಿಲ್ಲ. ಸೂಕ್ಷ್ಮ ವಿಷಯದ ಮೇಲೆ ಗಮನ ಕೇಂದ್ರೀಕರಿಸುವ ಚಿತ್ರ ಅಥವಾ ಪಠ್ಯವಿದ್ದರೆ, ಅದನ್ನು ಸಹ ಗಮನ ಕೇಂದ್ರೀಕರಿಸುವಿಕೆ ಎಂದು ಪರಿಗಣಿಸಲಾಗುವುದು. ಕೆಲವು ಉದಾಹರಣೆಗಳು:

    • ಸ್ವಯಂ-ಹಾನಿಯನ್ನು ಹೇಗೆ ನಿರ್ವಹಿಸುವುದು ಎಂಬುದರ ಮೇಲೆ ಗಮನ ಕೇಂದ್ರೀಕರಿಸಿದ ವೀಡಿಯೊ.
    • ಇತರ ಸಂದರ್ಭ ಅಥವಾ ಕಾರಣವಿಲ್ಲದೆ ಬಲವಾದ ಅಶ್ಲೀಲತೆಯನ್ನು ಬಳಸುವುದರ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದ ಕಂಟೆಂಟ್.
  • ಕ್ಷಣಿಕ ಎಂದರೆ ಕಂಟೆಂಟ್ ಇವುಗಳ ಮೇಲೆ ಗಮನ ಕೇಂದ್ರೀಕರಿಸಿರುವುದಿಲ್ಲ (ಕೇಂದ್ರಬಿಂದು ಅಲ್ಲ) ಮತ್ತು ವಿವಾದಾತ್ಮಕ ಅಥವಾ ಸೂಕ್ಷ್ಮ ಎಂದು ಪಟ್ಟಿ ಮಾಡಲಾದ ವಿಷಯಗಳಿಗೆ ಸಂಬಂಧಿಸಿದ ಕಿರು ಉಲ್ಲೇಖಗಳನ್ನು ಒಳಗೊಂಡಿರುತ್ತವೆ. ಉದಾಹರಣೆಗೆ, ಒಂದು ವಿವಾದಾತ್ಮಕ ಅಥವಾ ಸಂವೇದನಾಶೀಲ ವಿಷಯವನ್ನು ಸಂಕ್ಷಿಪ್ತವಾಗಿ ಅಂಗೀಕರಿಸುವುದು (ಉದಾ., "ಮುಂದಿನ ವಾರದ ವೀಡಿಯೊದಲ್ಲಿ, ಆತ್ಮಹತ್ಯೆಯ ಪ್ರಕರಣಗಳು ಕಡಿಮೆಯಾಗಿರುವುದರ ಕುರಿತು ಮಾತನಾಡಲಿದ್ದೇವೆ.”).

ನಮ್ಮ ಜಾಹೀರಾತುದಾರ-ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳಲ್ಲಿ ಬಳಸಲಾದ ಪ್ರಮುಖ ಪದಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವ್ಯಾಖ್ಯಾನಗಳ ಪರಿವಿಡಿ ಮೇಲೆ ಕಣ್ಣಾಡಿಸಿ.

ಅನ್ವಯವಾಗುವ ಪ್ರಕಾರಗಳು

ನಮ್ಮ ಗೇಮಿಂಗ್ ಮಾನಿಟೈಸೇಶನ್ ನೀತಿಗಳಿಗೆ ಯಾವ ರೀತಿಯ ವೀಡಿಯೊಗಳು ಪ್ರಸ್ತುತವಾಗಿವೆ ಎಂಬುದರ ಕುರಿತು ವಿವರಗಳನ್ನು ವೀಕ್ಷಿಸಿ.

ಅನ್ವಯವಾಗುವ ವೀಡಿಯೊ ಪ್ರಕಾರಗಳು

ಇನ್-ಗೇಮ್ ಕಟ್‌ಸೀನ್‍ಗಳು ಅಥವಾ ಸಿನೆಮ್ಯಾಟಿಕ್ಸ್

ನಿಜವಾದ ಗೇಮ್ ನಡುವೆ ಸೇರಿಸಲಾದ ಆ್ಯನಿಮೇಟೆಡ್ ಅನುಕ್ರಮಗಳು ಸಹ ನಮ್ಮ ನೀತಿ ಮಾರ್ಗಸೂಚಿಗಳ ವ್ಯಾಪ್ತಿಯಲ್ಲಿರುತ್ತವೆ. ಫೋಕಲ್ ಗ್ರಾಫಿಕ್ ದೃಶ್ಯವನ್ನು ಹಂಚಿಕೊಳ್ಳಲು ಅವುಗಳನ್ನು ಎಡಿಟ್ ಮಾಡುವುದು ಅಥವಾ ವಿಡಂಬನಾತ್ಮಕ ಕ್ಲಿಪ್‌ಗಳನ್ನು ಹೊಂದಿರುವ ಈ ದೃಶ್ಯಗಳಿಂದ ಸಂಕಲನಗಳನ್ನು ಮಾಡುವುದು, ಹಳದಿ ಐಕಾನ್ ವಿಧಿಸುವುದಕ್ಕೆ ಕಾರಣವಾಗಬಹುದು.

ಪ್ರತಿಕ್ರಿಯೆ ವೀಡಿಯೊಗಳು

ನಿಮ್ಮ ಪ್ರತಿಕ್ರಿಯೆಯ ವೀಡಿಯೊದಲ್ಲಿ ಎಂಬೆಡ್ ಮಾಡಲಾದ ಮೂಲ ಕ್ಲಿಪ್, ನಮ್ಮ ನೀತಿಗಳನ್ನು ಉಲ್ಲಂಘಿಸುವ ದೃಶ್ಯಗಳನ್ನು ಹೊಂದಿದ್ದರೆ, ಅದು ಈಗಲೂ ನಮ್ಮ ಮಾರ್ಗಸೂಚಿಗಳು ಮತ್ತು ಜಾರಿಗೊಳಿಸುವಿಕೆಯ ವ್ಯಾಪ್ತಿಗೆ ಒಳಪಟ್ಟಿರುತ್ತದೆ; ಆದ್ದರಿಂದ ನೀವು ಮೂಲ ಉಲ್ಲಂಘನೆಯ ಕ್ಲಿಪ್ ಅನ್ನು ರಚಿಸಿಲ್ಲದಿದ್ದರೂ ಅದಕ್ಕೆ ಹಳದಿ ಐಕಾನ್ ಅನ್ನು ಹೇರಲಾಗುತ್ತದೆ.

ಸಂಭಾಷಣೆ / ವಾಯ್ಸ್ಓವರ್ ಗೇಮ್‌ಪ್ಲೇ

ಆಡಿಯೋವನ್ನು ಗೇಮ್ ಮೂಲಕ ಅಲ್ಲದಿದ್ದರೂ, ಗೇಮ್‌ಪ್ಲೇ‌ನಲ್ಲಿ ಫೀಚರ್ ಮಾಡುವ ಸಲುವಾಗಿ (ವಾಯ್ಸ್ಓವರ್) ನೀವೇ ರಚಿಸಿದ್ದರೂ ಕೂಡ ಅದು ಜಾಹೀರಾತುದಾರ-ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳಿಗೆ ಅನುಗುಣವಾಗಿರಬೇಕು.

ವೀಡಿಯೊದಲ್ಲಿ ಸೇರಿಸಲಾಗಿರುವ ಪಠ್ಯಗಳು ಅಥವಾ ಗ್ರಾಫಿಕ್‌ಗಳು

ಯಾವುದೇ ಪಠ್ಯದಲ್ಲಿನ ಬ್ರ್ಯಾಂಡ್ ಅಸುರಕ್ಷಿತ ಕಂಟೆಂಟ್ (ಉದಾಹರಣೆಗೆ, ಸ್ವಯಂ-ರಚಿಸಿದ ಕ್ಲೋಸ್ಡ್ ಕ್ಯಾಪ್ಶನ್‌ಗಳು ಅಥವಾ ವೀಡಿಯೊದಲ್ಲಿ ಎಂಬೆಡ್ ಮಾಡಿದ ಸಬ್‌ಟೈಟಲ್‌ಗಳು), ಆಡಿಯೋ (ಸಿಗ್ನೇಚರ್ ಓಪನಿಂಗ್ ಸಾಂಗ್, ಇತ್ಯಾದಿ) ಅಥವಾ ಗ್ರಾಫಿಕ್ ಚಿತ್ರಗಳನ್ನು (ಉದಾಹರಣೆಗೆ, ನಿಮ್ಮ ಬ್ರ್ಯಾಂಡ್ ಐಕಾನ್, ಸ್ಲೋಗನ್, ಇತ್ಯಾದಿ.) ನಿಮ್ಮ ವೀಡಿಯೊದಲ್ಲಿ ಸೇರಿಸಲಾಗಿದ್ದರೆ, ಹಳದಿ ಐಕಾನ್‌ಗೆ ಕಾರಣವಾಗುತ್ತದೆ.

ನಿಮ್ಮ ವೀಡಿಯೊದಲ್ಲಿ ಕ್ಯಾಪ್ಚರ್ ಮಾಡಿದ ಮತ್ತು ಸ್ಪಷ್ಟವಾದ ಕಾಮೆಂಟ್‌ಗಳು

ನಿಮ್ಮ ವೀಡಿಯೊ ಕಂಟೆಂಟ್‌ನಲ್ಲಿ ತೋರಿಸಲಾದ ವೀಕ್ಷಕರು-ರಚಿಸಿದ ಕಾಮೆಂಟ್‌ಗಳನ್ನು (ಉದಾಹರಣೆಗೆ, ವೇಗದ ಸ್ಕ್ರಾಲಿಂಗ್ ಕಾಮೆಂಟ್‌ಗಳು, ಬಳಕೆದಾರರ ದೇಣಿಗೆ ಪಾಪ್-ಅಪ್‌ಗಳು, ಇತ್ಯಾದಿ.) ಹೇಗಾದರೂ ಸ್ಪಷ್ಟವಾಗಿ ಸೂಚಿಸದ ಹೊರತು (ಉದಾಹರಣೆಗೆ, ವೀಡಿಯೊದಲ್ಲಿ ಓದುವುದು ಅಥವಾ ಅದನ್ನು ಝೂಮ್ ಮಾಡುವ ಮೂಲಕ ಹೈಲೈಟ್ ಮಾಡುವುದು) ನಮ್ಮ ವಿಮರ್ಶೆಗಳ ವ್ಯಾಪ್ತಿಗೆ ಬರುವುದಿಲ್ಲ. ಅದೇ ರೀತಿ, ವೀಡಿಯೊಗೆ ಸಂಬಂಧಿಸಿದ ಕಾಮೆಂಟ್‌ಗಳ ವಿಭಾಗಗಳಲ್ಲಿನ ಕಂಟೆಂಟ್, ಜಾಹೀರಾತುದಾರ-ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳಿಗೆ ಒಳಪಟ್ಟಿರುವುದಿಲ್ಲ ಮತ್ತು ನೀವು ಅನುಚಿತ ಕಾಮೆಂಟ್‌ಗಳನ್ನು ನೋಡಿದರೆ ಅವುಗಳನ್ನು ಮಾಡರೇಟ್ ಮಾಡುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ (ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ನೋಡಿ).

ಗೇಮ್‌ಪ್ಲೇಗೆ ಸಂಬಂಧಿಸಿದ ಗ್ಯಾಂಬ್ಲಿಂಗ್ ಕಂಟೆಂಟ್

'ಹೇಗೆ' ವೀಡಿಯೊಗಳು, ಟುಟೋರಿಯಲ್‌ಗಳು ಮತ್ತು ಗ್ಯಾಂಬ್ಲಿಂಗ್ ವೆಬ್‌ಸೈಟ್‌ಗಳಿಗೆ (ಉದಾಹರಣೆಗೆ, ವರ್ಚುವಲ್ ಸರಕುಗಳನ್ನು ಕರೆನ್ಸಿಯ ರೂಪದಲ್ಲಿ ಬಳಸಿಕೊಂಡು ಪಂದ್ಯಗಳ ಮೇಲೆ ಬೆಟ್ಟಿಂಗ್ ಕಟ್ಟುವುದು) ನೇರ ಲಿಂಕ್‌ಗಳು ಅಥವಾ ಗೇಮ್‌ನಲ್ಲಿನ ಕರೆನ್ಸಿಯನ್ನು ಬಳಸಿ ಬೆಟ್ಟಿಂಗ್ ಮಾಡುವ ಚಟುವಟಿಕೆಗಳು ನಮ್ಮ “ಕಾನೂನುಬಾಹಿರ ಕಂಟೆಂಟ್” ನೀತಿ ಉಲ್ಲಂಘನೆಗಳ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಗೇಮ್‌ಪ್ಲೇಯ ಸಾಮಾನ್ಯ ಅವಧಿಯ ಹೊರಗೆ ವರ್ಚುವಲ್ ಐಟಂಗಳನ್ನು ಪಡೆದುಕೊಳ್ಳುವುದು ಸಹ ನೀತಿಯ ಉಲ್ಲಂಘನೆಯಾಗಿದೆ (ಇದು ಅಫಿಲಿಯೇಟ್ ಪ್ರೋಗ್ರಾಂಗಳ ಹಾಗೆ ರಚನೆಕಾರರ ಕೋಡ್ ಅನ್ನು ಒಳಗೊಂಡಿರುವುದಿಲ್ಲ). YouTube ಬಳಕೆದಾರರು ನಮ್ಮ ನೀತಿಯ ನಿಯಮಗಳಿಗೆ ಬದ್ಧರಾಗಿರಬೇಕು ಮತ್ತು ಹಾಗೆ ಮಾಡಲು ವಿಫಲರಾದರೆ, ಬಳಕೆಯ ನಿರ್ಬಂಧಗಳಿಗೆ ಒಳಪಡುವ ಸಾಧ್ಯತೆಗಳಿರುತ್ತವೆ. ಪುಟದಲ್ಲಿ ಮತ್ತಷ್ಟು ಮಾಹಿತಿಯನ್ನು ನೋಡಿ.

ಲಾಂಗ್-ಫಾರ್ಮ್ ಕಂಟೆಂಟ್

ವೀಡಿಯೊ ಅವಧಿಯು ಮುಖ್ಯವೆನಿಸಿದರೂ, ವೀಡಿಯೊದ ಉದ್ದೇಶ ಮತ್ತು ಸಂದರ್ಭಗಳು ಅತೀ ಮುಖ್ಯವಾಗಿರುತ್ತದೆ. ವೀಡಿಯೊದಲ್ಲಿ ಆಕ್ಷೇಪಾರ್ಹ ಅಂಶಗಳಿದ್ದರೆ, ಅದನ್ನು ಜಾಹೀರಾತುದಾರ-ಸ್ನೇಹಿ ಎಂದು ಪರಿಗಣಿಸಲಾಗುವುದಿಲ್ಲ. ಉದಾಹರಣೆಗೆ, ಸರಿಸುಮಾರು ಒಂದು ಗಂಟೆಯಷ್ಟು ಅವಧಿಯ ಗೇಮಿಂಗ್ ವೀಡಿಯೊಗಳಲ್ಲಿ ದ್ವೇಷಪೂರಿತ ಜನಾಂಗೀಯ ನಿಂದನೆಗಳು ಬಳಕೆಯಾಗಿರುವುದು ಕಂಡುಬಂದಲ್ಲಿ, ಅವುಗಳ ಮೇಲೂ ಹಳದಿ ಐಕಾನ್ ಹೇರಲಾಗುತ್ತದೆ.

ಕೇಂದ್ರಬಿಂದು ವಿಷಯವಾಗಿ ಪ್ರಸ್ತುತಪಡಿಸಿರುವ ಉಲ್ಲಂಘನೆಗಳು

ಉಲ್ಲಂಘನೆಯ ಅಂಶಗಳು ಕೆಳಗಿನ ಯಾವುದಾದರೂ ಒಂದು ವರ್ಗದ ಅಡಿಯಲ್ಲಿ ಬಂದರೆ, ಅಂತಹವುಗಳನ್ನು ಕೇಂದ್ರಬಿಂದು ಎಂದು ನಾವು ಪರಿಗಣಿಸುತ್ತೇವೆ:

  • ಪ್ರೇಕ್ಷಕರಿಗೆ ಆಘಾತವನ್ನುಂಟು ಮಾಡಬಹುದಾದ ಯಾವುದೇ ಅಂಶಗಳ ಪ್ರಸ್ತಾಪ ಅಥವಾ ಪ್ರದರ್ಶನ (ಗೇಮ್‌ನಲ್ಲಿ ಗಂಭೀರವಾದ ಮತ್ತು ರಕ್ತಸಿಕ್ತ ಸನ್ನಿವೇಶಗಳಿಂದ ಕೂಡಿದ ಹಿಂಸಾತ್ಮಕ ದಾಳಿಯನ್ನು ಅನಗತ್ಯವಾಗಿ ಝೂಮ್ ಮಾಡುವುದು).
  • ಉಲ್ಲಂಘನೆಯ ಅಂಶವು ವೀಡಿಯೊದ ಕೇಂದ್ರಬಿಂದು ವಿಷಯವಾಗಿದೆ (ಉದಾಹರಣೆಗೆ, ಗೇಮ್‌ನಲ್ಲಿ ಶಿರಚ್ಛೇದನ ಮಾಡುವ ಸನ್ನಿವೇಶಗಳ ಕಂಪೈಲೇಶನ್).

ನಿಮ್ಮ ವೀಡಿಯೊದಲ್ಲಿ ಅಂತಹ ದೃಶ್ಯಗಳನ್ನು ಸೇರಿಸುವುದು ನಿಮಗೆ ಅನಿವಾರ್ಯವಾಗಿದ್ದರೆ, ನಿಮ್ಮ ವೀಡಿಯೊವನ್ನು ನೀವು ಹಳದಿ ಐಕಾನ್ ಮೂಲಕ ಸ್ವಯಂಪ್ರೇರಣೆಯಿಂದ ಗುರುತಿಸಬೇಕು.

ಥಂಬ್‌ನೇಲ್‌ಗಳು ಮತ್ತು ಶೀರ್ಷಿಕೆಗಳು

ಸಾಮಾನ್ಯವಾಗಿ, ವೀಕ್ಷಕರನ್ನು ಆಕರ್ಷಿಸಲು ಥಂಬ್‌ನೇಲ್‌ಗಳು ಅಥವಾ ಶೀರ್ಷಿಕೆಗಳಲ್ಲಿ ಆಘಾತಕಾರಿ ಮತ್ತು ಉತ್ತೇಜನಕಾರಿ ನುಡಿಗಟ್ಟುಗಳನ್ನು ಸೇರಿಸಲಾಗುತ್ತದೆ. ಆದಾಗ್ಯೂ, ವೀಡಿಯೊ ಕಂಟೆಂಟ್‌ನಂತೆಯೇ, ಥಂಬ್‌ನೇಲ್‌ಗಳು ಅಥವಾ ಶೀರ್ಷಿಕೆಗಳಲ್ಲಿ ಗುರುತಿಸಲಾದ ಉಲ್ಲಂಘನೆಯ ಅಂಶಗಳು ಜಾಹೀರಾತುಗಳಿಂದ ಸೀಮಿತ ಪ್ರಮಾಣದಲ್ಲಿ ಹಣಗಳಿಸಬಹುದು ಅಥವಾ ಹಣಗಳಿಸದೆಯೂ ಇರಬಹುದು.

ಕೆಲವು ಥಂಬ್‌ನೇಲ್ ಉದಾಹರಣೆಗಳೆಂದರೆ (ಈ ಪಟ್ಟಿಯು ಇಷ್ಟಕ್ಕೇ ಸೀಮಿತವಾಗಿರುವುದಿಲ್ಲ):

  • ಸುತ್ತುವರಿಯುವುದು ಅಥವಾ ಗಮನ ಸೆಳೆಯಲು ವಿನಂತಿಸುವುದು (ಅಂದರೆ, ಜನನಾಂಗಗಳನ್ನು ಬ್ಲರ್ ಆಗಿ ಹೈಲೈಟ್ ಮಾಡುವುದು)
  • ಲೈಂಗಿಕ ಕ್ರಿಯೆಗಳಿಗೆ ಸಂಬಂಧಿಸಿದ ಅಶ್ಲೀಲ ಪಠ್ಯ (ಉದಾಹರಣೆಗೆ "ಈ ಪಾತ್ರವು ವೀರ್ಯಸ್ಖಲನ ಮಾಡುವುದನ್ನು ನೋಡಿ")
  • ಸ್ಪಷ್ಟವಾದ ಲೈಂಗಿಕ ಕ್ರಿಯೆಗಳು ಅಥವಾ ಗ್ರಾಫಿಕ್ ಹಿಂಸೆಯಂತಹ ಆಘಾತಕಾರಿ ಚಿತ್ರಗಳು

ಕೆಲವು ಶೀರ್ಷಿಕೆ ಉದಾಹರಣೆಗಳೆಂದರೆ (ಈ ಪಟ್ಟಿಯು ಇಷ್ಟಕ್ಕೇ ಸೀಮಿತವಾಗಿರುವುದಿಲ್ಲ):

  • ಸಂಪೂರ್ಣವಾಗಿ ಉಚ್ಚರಿಸಲಾದ, ಸೆನ್ಸಾರ್ ಮಾಡಲಾದ ಅಥವಾ ಉದ್ದೇಶಪೂರ್ವಕವಾಗಿ ತಪ್ಪಾಗಿ ಬರೆಯಲಾದ ಅಶ್ಲೀಲ ಪದಗಳು (ಉದಾಹರಣೆಗೆ “ಇವನ**ನ್”)
  • ಲೈಂಗಿಕ ಕಂಟೆಂಟ್ ಕುರಿತು ಭರವಸೆ ನೀಡುವ ತಪ್ಪುದಾರಿಗೆಳೆಯುವ ಶೀರ್ಷಿಕೆಗಳು
  • ವಯಸ್ಕರಿಗೆ-ಮಾತ್ರ ಉಲ್ಲೇಖಗಳನ್ನು ಹೊಂದಿರುವ ಶೀರ್ಷಿಕೆಗಳು (ಉದಾಹರಣೆಗೆ, 19+ ಅಥವಾ ವಯಸ್ಕರಿಗೆ ಮಾತ್ರ)
  • ಗಮನ ಸೆಳೆಯಲು ಶೀರ್ಷಿಕೆಯಲ್ಲಿ ಎಲ್ಲಾ ದೊಡ್ಡಕ್ಷರಗಳನ್ನು ಬಳಸುವುದು (ಉದಾಹರಣೆಗೆ, “EXTREME FATALITY WINS”)

ಇನ್ನಷ್ಟು ತಿಳಿಯಿರಿ

ನೀತಿ ಅಪ್‌ಡೇಟ್‌ಗಳಿಗೆ ಸಬ್‌ಸ್ಕ್ರೈಬ್ ಮಾಡಬೇಕೇ? ನಾವು ನೀತಿಗೆ ಸಂಬಂಧಿಸಿದಂತೆ ಅಪ್‌ಡೇಟ್‌ಗಳನ್ನು ಮಾಡಿದಾಗಲೆಲ್ಲಾ ಇಮೇಲ್ ಅಲರ್ಟ್ ಅನ್ನು ಪಡೆಯಲು ಇಲ್ಲಿ ನಮ್ಮ YouTube ಸಮುದಾಯ ಫೋರಮ್‌ಗೆ ಸಬ್‌ಸ್ಕ್ರೈಬ್ ಮಾಡಿ. ನೀವು @teamyoutube ಅಥವಾ @youtubecreators ಮೂಲಕ ನಮ್ಮನ್ನು Twitter ನಲ್ಲಿ ಸಹ ಫಾಲೋ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2705310089386532530
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false