Xbox Series X|S ನಲ್ಲಿ YouTube ವೀಕ್ಷಿಸಿ

ನೀವು Xbox Series X|S ನಲ್ಲಿ YouTube ವೀಡಿಯೊಗಳನ್ನು ಇದೀಗ ವೀಕ್ಷಿಸಬಹುದು. YouTube ಆ್ಯಪ್‌ನಲ್ಲಿ, ನಿಮ್ಮ ಸಬ್‌ಸ್ಕ್ರೈಬ್ ಮಾಡಿದ ಚಾನಲ್‌ಗಳನ್ನು ನೀವು ನೋಡಬಹುದು, ಕಂಟೆಂಟ್ ಹುಡುಕಬಹುದು ಮತ್ತು ನಿಮ್ಮ ಮೊಬೈಲ್ ಸಾಧನವನ್ನು ರಿಮೋಟ್ ಆಗಿ ಬಳಸಬಹುದು.

Xbox One S, Xbox One X, Xbox Series S ಮತ್ತು Xbox Series X ಮಾಡೆಲ್‌ಗಳಲ್ಲಿ 4K ರೆಸಲ್ಯೂಶನ್‌ನಲ್ಲಿ YouTube ಲಭ್ಯವಿದೆ. ಅಸಲಿ Xbox One ಕನ್ಸೋಲ್‌ನ ಗರಿಷ್ಠ ರೆಸಲ್ಯೂಶನ್ 1080p ಆಗಿದೆ. Xbox One S, Xbox One X, Xbox Series S ಮತ್ತು Xbox Series X ಮಾಡೆಲ್‌ಗಳಲ್ಲಿ HDR ಪ್ಲೇಬ್ಯಾಕ್ ಬೆಂಬಲಿತವಾಗಿದೆ.

 YouTube ಆ್ಯಪ್ ಡೌನ್‌ಲೋಡ್ ಮಾಡಿ

 YouTube ನಿಂದ ಸೈನ್ ಔಟ್ ಮಾಡಿ

ನೀವು ಮೊದಲ ಬಾರಿಗೆ YouTube ಆ್ಯಪ್ ತೆರೆದಾಗ, ನಿಮ್ಮ Google ಖಾತೆಯನ್ನು ಬಳಸಿಕೊಂಡು ಸೈನ್ ಇನ್ ಮಾಡಬಹುದು. ಸೈನ್ ಇನ್ ಮಾಡಿದಾಗ, ನಿಮ್ಮ ಪ್ಲೇಪಟ್ಟಿಗಳು ಮತ್ತು ಸಬ್‌ಸ್ಕ್ರಿಪ್ಶನ್‌ಗಳಂತಹ ಮತ್ತಷ್ಟು YouTube ಫೀಚರ್‌ಗಳಿಗೆ ನೀವು ಆ್ಯಕ್ಸೆಸ್ ಹೊಂದಿರುತ್ತೀರಿ. ಸೈನ್ ಇನ್ ಮಾಡಲು, ಈ ಹಂತಗಳನ್ನು ಅನುಸರಿಸಿ:

ನಿಮ್ಮ Xbox Series X|S ನಲ್ಲಿ:

  1. ಸೈನ್ ಇನ್ & ಸೆಟ್ಟಿಂಗ್‌ಗಳು ಎಂಬಲ್ಲಿಗೆ ನ್ಯಾವಿಗೇಟ್ ಮಾಡಿ
  2. ಸೈನ್ ಇನ್ ಆಯ್ಕೆಮಾಡಿ. ನಿಮಗೆ ಈಗ ಸಕ್ರಿಯಗೊಳಿಸುವಿಕೆ ಕೋಡ್ ಕಾಣಿಸುತ್ತದೆ.

ನಿಮ್ಮ ಕಂಪ್ಯೂಟರ್‌ನಲ್ಲಿ:

  1. www.youtube.com/activate ಗೆ ಹೋಗಿ ಮತ್ತು Xbox Series S ಅಥವಾ X ನಲ್ಲಿ ತೋರಿಸುವ ಸಕ್ರಿಯಗೊಳಿಸುವಿಕೆ ಕೋಡ್ ಅನ್ನು ನಮೂದಿಸಿ.
  2. ಆ್ಯಕ್ಸೆಸ್ ಅನುಮತಿಸಿ ಕ್ಲಿಕ್ ಮಾಡಿ, ಹೀಗೆ ಮಾಡಿದರೆ ಸೈನ್ ಇನ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ನಿಮ್ಮ Xbox Series X|S ನಿಂದ ನಿಮ್ಮ ಖಾತೆಯನ್ನು ಅನ್‌ಲಿಂಕ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.

ವೀಡಿಯೊ ಮತ್ತು ಧ್ವನಿ ನಿಯಂತ್ರಣಗಳು

ನೀವು ಒಮ್ಮೆ ವೀಡಿಯೊ ಪ್ಲೇ ಮಾಡಲು ಆಯ್ಕೆ ಮಾಡಿದರೆ, ನಿಮಗೆ ಪ್ಲೇಯರ್ ಕಂಟ್ರೋಲ್ ಬಾರ್ ಕಾಣಿಸಲಿದ್ದು ಅದು ಈ ಕೆಳಕಂಡ ಕಾರ್ಯಗಳನ್ನು ನಿರ್ವಹಿಸಲು ನಿಮಗೆ ಅವಕಾಶ ಮಾಡಿಕೊಡುತ್ತದೆ:

  • ರಿವೈಂಡ್ - ರಿವೈಂಡ್ ವೇಗವನ್ನು ಹೆಚ್ಚಿಸಲು A ಒತ್ತಿರಿ.
  • ವಿರಾಮ/ಪುನರಾರಂಭ - ವೀಡಿಯೊವನ್ನು ವಿರಾಮಗೊಳಿಸಿ ಅಥವಾ ಪುನರಾರಂಭಿಸಿ.
  • ಫಾಸ್ಟ್ ಫಾರ್ವರ್ಡ್ - ಫಾಸ್ಟ್ ಫಾರ್ವರ್ಡ್ ವೇಗವನ್ನು ಹೆಚ್ಚಿಸಲು A ಒತ್ತಿರಿ.
  • ಉಪಶೀರ್ಷಿಕೆಗಳು - ವೀಡಿಯೊ ಶೀರ್ಷಿಕೆಗಳನ್ನು ಹೊಂದಿದ್ದರೆ, ವೀಡಿಯೊದ ಉಪಶೀರ್ಷಿಕೆಗಳನ್ನು ನೋಡಲು ಇದನ್ನು ಆಯ್ಕೆಮಾಡಿ.

ವೀಡಿಯೊಗಳನ್ನು ಬ್ರೌಸ್ ಮಾಡುವುದಕ್ಕೆ ಹಿಂತಿರುಗಲು, B ಬಟನ್ ಬಳಸಿ.

ಗಮನಿಸಿ: ವೀಡಿಯೊಗಳನ್ನು ಪ್ರತಿ ಸೆಕೆಂಡ್‌ಗೆ 60 ಫ್ರೇಮ್ ರೇಟ್‌ಗಳಲ್ಲಿ ಗರಿಷ್ಠ 4K ರೆಸಲ್ಯೂಶನ್‌ನಲ್ಲಿ ಪ್ಲೇ ಮಾಡಬಹುದು.

ನಿಮ್ಮ ಧ್ವನಿಯ ಮೂಲಕವೂ YouTube ಆ್ಯಪ್ ಅನ್ನು ನೀವು ನಿಯಂತ್ರಿಸಬಹುದು. ಧ್ವನಿ ನಿಯಂತ್ರಣವನ್ನು ಸಕ್ರಿಯಗೊಳಿಸಲು, "Xbox Select" ಎಂದು ಹೇಳಿ. ನೀವು ಇದೀಗ ಸ್ಕ್ರೀನ್‌ನಲ್ಲಿ ಹೈಲೈಟ್ ಮಾಡಲಾಗಿರುವ ಯಾವುದೇ ಪದ ಅಥವಾ ಪದಗುಚ್ಛವನ್ನು ಹೇಳುವ ಮೂಲಕ ಆ ಐಟಂ ಅನ್ನು ತೆರೆಯಬಹುದು.

ನಿಮ್ಮ ಮೊಬೈಲ್ ಸಾಧನವನ್ನು ಜೋಡಿಸಿ
ನಿಮ್ಮ ಮೊಬೈಲ್ ಸಾಧನವನ್ನು ರಿಮೋಟ್ ಕಂಟ್ರೋಲ್ ಆಗಿ ಬಳಸಿ. m.youtube.com, Android ಗಾಗಿ YouTube ಆ್ಯಪ್ ಅಥವಾ YouTube iOS ಆ್ಯಪ್ ಮೂಲಕ ನಿಮ್ಮ Xbox Series X|S ಅನ್ನು ಹೇಗೆ ಜೋಡಿ ಮಾಡುವುದು ಎಂಬುದನ್ನು ತಿಳಿಯಿರಿ.

Xbox ದೋಷ ಸಂದೇಶ

ನಿಮಗೆ “YouTube ಸದ್ಯಕ್ಕೆ ಲಭ್ಯವಿಲ್ಲ” ಎಂಬ ದೋಷ ಸಂದೇಶವು ಕಾಣಿಸಿದರೆ, ನಿಮ್ಮ ಇಂಟರ್‌ನೆಟ್ ಕನೆಕ್ಷನ್ ನಿಧಾನವಾಗಿರುವುದು ಇದಕ್ಕೆ ಕಾರಣವಿರಬಹುದು.

ಸಮಸ್ಯೆಯನ್ನು ಬಗೆಹರಿಸಲು ಸಹಾಯ ಬೇಕಾದರೆ, ನಮ್ಮ ಸಮಸ್ಯೆ ನಿವಾರಣೆ ಮಾರ್ಗಸೂಚಿಗಳನ್ನು ಅನುಸರಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9701737043943191603
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false