YouTube ರಚನೆಕಾರರ ಡೆಮೋಗ್ರಾಫಿಕ್ಸ್ ಕುರಿತು

ರಚನೆಕಾರರ ಮತ್ತು ಕಲಾವಿದರ ಸಮೀಕ್ಷೆಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸ್ವಯಂಪ್ರೇರಿತವಾಗಿದೆ. ಯುನೈಟೆಡ್ ಕಿಂಗ್‌ಡಮ್. ಬ್ರೆಜಿಲ್, ಭಾರತ ಮೂಲದ ಕಲಾವಿದರು ಮತ್ತು ರಚನೆಕಾರರ YouTube ಚಾನಲ್‌ಗಳು.

ಸಮೀಕ್ಷೆಯನ್ನು YouTube Studio ಸೆಟ್ಟಿಂಗ್‌ಗಳು ವಿಭಾಗದಲ್ಲಿರುವ ರಚನೆಕಾರರ ಡೆಮೋಗ್ರಾಫಿಕ್ಸ್ ಅಡಿಯಲ್ಲಿ ಕಾಣಬಹುದಾಗಿದೆ. ಪ್ರಸ್ತುತವಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾತ್ರ. ಯುನೈಟೆಡ್ ಕಿಂಗ್‌ಡಮ್. ಬ್ರೆಜಿಲ್ ಮತ್ತು ಭಾರತ ಮೂಲದ ಚಾನಲ್ ಮಾಲೀಕರು ಈ ಸೆಟ್ಟಿಂಗ್ ಅನ್ನು ಬಳಸಬಹುದು.

YouTube Studio ಮೊಬೈಲ್ ಆ್ಯಪ್‌ನ ಸೆಟ್ಟಿಂಗ್‌ಗಳು ವಿಭಾಗದಲ್ಲಿಯೂ ಸಹ ರಚನೆಕಾರರ ಡೆಮೋಗ್ರಾಫಿಕ್ಸ್ ಅನ್ನು ನೀವು ಕಾಣಬಹುದು.

YouTube ಕಲಾವಿದರು ಮತ್ತು ರಚನೆಕಾರರು ರಚನೆಕಾರರ ಡೆಮೋಗ್ರಾಫಿಕ್ಸ್‌ನಲ್ಲಿ ಹಂಚಿಕೊಳ್ಳುವ ಡೇಟಾವು ಅವರ ಕುರಿತು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ನಾವು ಸಂಗ್ರಹಿಸುವ ನಿರ್ದಿಷ್ಟ ಮಾಹಿತಿಯು ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ, ಆದರೆ ರಚನೆಕಾರರು ಹಾಗೆ ಮಾಡಲು ಆಯ್ಕೆ ಮಾಡಿದರೆ, ಈಗ YouTube ಜನಸಂಖ್ಯಾ ಮತ್ತು ಗುರುತಿನ ಮಾಹಿತಿಯನ್ನು ಹಂಚಿಕೊಳ್ಳಬಹುದು.

YouTube ಚಾನಲ್‌ಗಳ ಕುರಿತಾದ ಈ ಮಾಹಿತಿಯು ನಮ್ಮ ಸಿಸ್ಟಂಗಳು ಉದ್ದೇಶಪೂರ್ವಕವಾಗಿ ಪೂರ್ವಗ್ರಹ ಧೋರಣೆಯನ್ನು ತೋರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.

YouTube ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ ಮತ್ತು ಎಲ್ಲರಿಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ಇಂದು, ನಮ್ಮ ಸಿಸ್ಟಂಗಳ ಮೌಲ್ಯಮಾಪನ ಪ್ರಕ್ರಿಯೆಯು ಸೀಮಿತವಾಗಿದೆ. ನಾವು YouTube ನಲ್ಲಿ ಚಾನಲ್‌ಗಳಿಗೆ ಸಂಬಂಧಪಟ್ಟ ಗುರುತಿನ ಮಾಹಿತಿಯನ್ನು ಹೊಂದಿಲ್ಲದಿರುವುದು ಇದಕ್ಕೆ ಕಾರಣ. ನಿರ್ದಿಷ್ಟ ಡೆಮೋಗ್ರಾಫಿಕ್ ಅಥವಾ ಗುರುತಿನ ರಚನೆಕಾರರು ಮತ್ತು ಕಲಾವಿದರ ಸಮುದಾಯಗಳ ಚಾನಲ್‌ಗಳಿಗಾಗಿ, ನಮ್ಮ ಉತ್ಪನ್ನಗಳು ಮತ್ತು ನೀತಿಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಮೌಲ್ಯಮಾಪನ ಮಾಡಲು ನಮ್ಮ ಬಳಿ ನಿಖರವಾದ ವಿಧಾನಗಳಿಲ್ಲ.

ಸೂಚನೆ: ಗುರುತಿಸುವಿಕೆಯು ವೈಯಕ್ತಿಕ ಎಂಬುದು ನಮಗೆ ಗೊತ್ತಿದೆ; ಈ ಮಾಹಿತಿಯನ್ನು ಹಂಚಿಕೊಳ್ಳುವುದು ನಿಮಗೆ ಬಿಟ್ಟದ್ದು. YouTube ನಲ್ಲಿ ರಚನೆಕಾರರು ಮತ್ತು ಕಲಾವಿದರ ಚಾನಲ್‌ಗಳ ಕುರಿತು ನಮಗೆ ತಿಳಿದಿಲ್ಲದ ಗುರುತಿನ ಡೇಟಾವನ್ನು ಈ ಸೆಟ್ಟಿಂಗ್ ನಮಗೆ ಒದಗಿಸುತ್ತದೆ. ನಿಮ್ಮ ಸಮೀಕ್ಷೆಯ ಪ್ರತಿಕ್ರಿಯೆ ಮಾಹಿತಿಯನ್ನು ನಿಮ್ಮ YouTube ಚಾನಲ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಅದನ್ನು ಇತರ Google ಉತ್ಪನ್ನಗಳಲ್ಲಿ ಬಳಸುವುದಿಲ್ಲ. YouTube ಸಿಸ್ಟಂಗಳಲ್ಲಿ ವೈಯಕ್ತಿಕ ವೀಡಿಯೊ ಅಥವಾ ಚಾನಲ್‌ನ ಪರ್ಫಾರ್ಮೆನ್ಸ್ ಮೇಲೆ ಪರಿಣಾಮ ಬೀರುವ ಸಲುವಾಗಿ ನೀವು ನೀಡುವ ಮಾಹಿತಿಯನ್ನು ಬಳಸುವುದಿಲ್ಲ.

ಎಲ್ಲಾ ಯುಕೆ ರಚನೆಕಾರರಿಗೆ ಕರೆ ನೀಡಲಾಗುತ್ತಿದೆ: ರಚನೆಕಾರರ ಡೆಮೋಗ್ರಾಫಿಕ್ಸ್ Studio ಸೆಟ್ಟಿಂಗ್

ನಾವು ರಚನೆಕಾರರ ಡೆಮೋಗ್ರಾಫಿಕ್ಸ್ ಡೇಟಾವನ್ನು ಹೇಗೆ ಬಳಸುತ್ತೇವೆ

ವಿವಿಧ ಸಮುದಾಯಗಳಿಗೆ ಸೇರಿದ ರಚನೆಕಾರರು ಮತ್ತು ಕಲಾವಿದರ ಚಾನಲ್‌ಗಳಿಗಾಗಿ YouTube ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡಲು ನಾವು ಈ ಸಂಗ್ರಹಿಸಿದ ಡೇಟಾವನ್ನು ಬಳಸುತ್ತೇವೆ. ನೀವು ಹಂಚಿಕೊಳ್ಳುವ ಡೇಟಾವನ್ನು ನಾವು ಈ ಕೆಳಗಿನ ಕಾರ್ಯಗಳಿಗಾಗಿ ಬಳಸುತ್ತೇವೆ:

  • ವಿವಿಧ ಸಮುದಾಯಗಳು ಒದಗಿಸುವ ಕಂಟೆಂಟ್ ಅನ್ನು ನಮ್ಮ ಅಲ್ಗಾರಿದಮ್‌ಗಳು ಮತ್ತು ಸಿಸ್ಟಂಗಳು ಹೇಗೆ ಪರಿಗಣಿಸುತ್ತವೆ ಎಂಬುದನ್ನು ಪರೀಕ್ಷಿಸಲು
  • ವಿವಿಧ ಸಮುದಾಯಗಳು YouTube ನಲ್ಲಿ ಹೇಗೆ ಬೆಳೆಯುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು
  • ಕಿರುಕುಳ ಮತ್ತು ದ್ವೇಷ ಸೇರಿದಂತೆ, ದುರುಪಯೋಗದ ಸಂಭಾವ್ಯ ಮಾದರಿಗಳನ್ನು ಗುರುತಿಸಲು
  • ನಮ್ಮ ಈಗಿರುವ ಪ್ರೋಗ್ರಾಂಗಳು, ಕ್ಯಾಂಪೇನ್‌ಗಳು ಮತ್ತು ಆಫರ್‌ಗಳನ್ನು ಸುಧಾರಿಸಲು

ನಮ್ಮ ಸಿಸ್ಟಂಗಳಲ್ಲಿ, ನಿರ್ದಿಷ್ಟ ಸಮುದಾಯಗಳ ಮೇಲೆ ಪರಿಣಾಮ ಬೀರಬಹುದಾದ ಸಮಸ್ಯೆಗಳಿವೆ ಎಂಬುದು ನಮ್ಮ ಗಮನಕ್ಕೆ ಬಂದರೆ, ಅವುಗಳನ್ನು ಬದ್ಧತೆಯಿಂದ ಸರಿಪಡಿಸಲು ಅವಿರತ ಶ್ರಮಿಸುತ್ತೇವೆ. ಈ ಪ್ರಚಲಿತ ಪ್ರಯತ್ನಗಳಲ್ಲಿ ಸಾಧಿಸಿರುವ ನಮ್ಮ ಪ್ರಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮುಂದುವರಿಸುತ್ತೇವೆ.

ನಿಮ್ಮ ಮಾಹಿತಿಯನ್ನು ರಚನೆಕಾರರ ಡೆಮೋಗ್ರಾಫಿಕ್ಸ್‌ನಲ್ಲಿ ಹಂಚಿಕೊಳ್ಳಲು ನೀವು ಆರಿಸಿಕೊಂಡರೆ, Google LLC ಯು ನಿಮ್ಮ ಮಾಹಿತಿಯನ್ನು Google ಗೌಪ್ಯತಾ ನೀತಿಗೆ ಅನುಸಾರವಾಗಿ ಇರಿಸುತ್ತದೆ. ನೀವು ಹಂಚಿಕೊಳ್ಳುವ ಮಾಹಿತಿಯನ್ನು ನಿಮ್ಮ YouTube ಚಾನಲ್‌ನಲ್ಲಿ ಸಂಗ್ರಹಿಸಲಾಗಿದೆ ಹಾಗೂ ಅದನ್ನು ಇತರ Google ಉತ್ಪನ್ನಗಳಲ್ಲಿ ಬಳಸುವುದಿಲ್ಲ. ನಿಮ್ಮ ಸಮ್ಮತಿ ಇಲ್ಲದೆಯೇ ಅದನ್ನು ಸಾರ್ವಜನಿಕಗೊಳಿಸುವುದಿಲ್ಲ ಅಥವಾ ಜಾಹೀರಾತು ಉದ್ದೇಶಗಳಿಗಾಗಿ ಬಳಸುವುದಿಲ್ಲ.

ನೀವು ಹಂಚಿಕೊಂಡ ಡೇಟಾವನ್ನು ನಾವು ಹೇಗೆ ಬಳಸುತ್ತೇವೆ ಎಂಬುದರ ಕುರಿತ ಹೆಚ್ಚಿನ ವಿವರಗಳು ಇಲ್ಲಿವೆ:

ವಿವಿಧ ಸಮುದಾಯಗಳು ಒದಗಿಸುವ ಕಂಟೆಂಟ್ ಅನ್ನು ನಮ್ಮ ಅಲ್ಗಾರಿದಮ್‌ಗಳು ಮತ್ತು ಸಿಸ್ಟಂಗಳು ಹೇಗೆ ಪರಿಗಣಿಸುತ್ತವೆ ಎಂಬುದನ್ನು ಪರೀಕ್ಷಿಸಲು

ವಿವಿಧ ಸಮುದಾಯಗಳು ಒದಗಿಸುವ ಕಂಟೆಂಟ್ ಅನ್ನು ನಮ್ಮ ಸಿಸ್ಟಂಗಳು ಹೇಗೆ ಪರಿಗಣಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಡೇಟಾ ನಮಗೆ ಸಹಾಯ ಮಾಡುತ್ತದೆ.
ನಮ್ಮ ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಸಂಭವನೀಯ ಸಮಸ್ಯೆಗಳನ್ನು ಉತ್ತಮವಾಗಿ ಗುರುತಿಸುವುದು ನಮ್ಮ ಗುರಿಯಾಗಿದೆ. ನಮ್ಮ ಸಿಸ್ಟಂಗಳು ಸಮಗ್ರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆಯೇ ಎಂದು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ, ನಮ್ಮ ಗಮನಕ್ಕೆ ಬರಬಹುದಾದ ದೋಷಗಳನ್ನು ಸರಿಪಡಿಸಲು ಬಯಸುತ್ತೇವೆ.

ವಿವಿಧ ಸಮುದಾಯಗಳು YouTube ನಲ್ಲಿ ಹೇಗೆ ಬೆಳೆಯುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು

YouTube ನಲ್ಲಿ ವಿವಿಧ ರಚನೆಕಾರರ ಸಮುದಾಯಗಳು ಹೇಗೆ ಬೆಳೆಯುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ನಮಗೆ ಸಹಾಯವಾಗುವಂತೆ ಈ ಡೇಟಾವನ್ನು ಸಹ ಬಳಸಲಾಗುತ್ತದೆ.

YouTube ನಲ್ಲಿ ವಿವಿಧ ಸಮುದಾಯಗಳು ಹೇಗೆ ಮಾನಿಟೈಸ್ ಮಾಡುತ್ತಿವೆ ಎಂಬುದನ್ನು ಪರಿಶೀಲಿಸುವುದು ಕೂಡ ಬೆಳವಣಿಗೆಯನ್ನು ನಾವು ಹೇಗೆ ಮೌಲ್ಯಮಾಪನ ಮಾಡುತ್ತೇವೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಮಾನಿಟೈಸೇಶನ್ ಸಿಸ್ಟಂಗಳು ನಿರೀಕ್ಷಿಸಿದಂತೆ ಕೆಲಸ ಮಾಡದಿರುವ ಸಂದರ್ಭಗಳಲ್ಲಿ ರಚನೆಕಾರರು ಮತ್ತು ಕಲಾವಿದರಿಂದ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ. ಎಲ್ಲಾ ರಚನೆಕಾರರು ಮತ್ತು ಕಂಟೆಂಟ್‌ನ ಪ್ರಕಾರಗಳಿಗೆ ನಮ್ಮ ಸಿಸ್ಟಂಗಳು ಮತ್ತು ನೀತಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಕೆಲಸ ಮಾಡುತ್ತಿದ್ದೇವೆ.

ಕಿರುಕುಳ ಮತ್ತು ದ್ವೇಷ ಸೇರಿದಂತೆ, ನಡವಳಿಕೆಗೆ ಸಂಬಂಧಿಸಿದ ಸಂಭವನೀಯ ಹಾನಿಕಾರಕ ಮಾದರಿಗಳನ್ನು ಗುರುತಿಸುವುದು

ಕಂಟೆಂಟ್, ನಮ್ಮ ದ್ವೇಷ ಮತ್ತು ಕಿರುಕುಳಕ್ಕೆ ಸಂಬಂಧಿಸಿದ ನೀತಿಗಳನ್ನು ಉಲ್ಲಂಘಿಸಿದರೆ, ನಾವು ಅದನ್ನು ತೆಗೆದುಹಾಕುತ್ತೇವೆ. ಆದರೂ, ನಾವು ಕೇಳಿದ ಫೀಡ್‌ಬ್ಯಾಕ್ ಆಕ್ಷೇಪಾರ್ಹ ಮತ್ತು ನೋವುಂಟುಮಾಡುವ ಕಂಟೆಂಟ್ ಮತ್ತು ಕಾಮೆಂಟ್ ನಡವಳಿಕೆಯು ಅನೇಕ ರಚನೆಕಾರರ ಮೇಲೆ ಪರಿಣಾಮ ಬೀರುವುದನ್ನು ಮುಂದುವರಿಸುತ್ತದೆ ಎಂದು ಸೂಚಿಸುತ್ತದೆ. ಈ ರೀತಿಯ ನಡವಳಿಕೆಯು ವಿವಿಧ ರಚನೆಕಾರರ ಸಮುದಾಯಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಡೇಟಾವು ನಮಗೆ ಪೂರ್ವಭಾವಿಯಾಗಿ ಸಹಾಯ ಮಾಡುತ್ತದೆ. ಇದು ಕಾಲಾನಂತರದಲ್ಲಿ ನಮ್ಮ ಸ್ವಯಂಚಾಲಿತ ವ್ಯವಸ್ಥೆಗಳನ್ನು ಕೂಡ ಸುಧಾರಿಸುತ್ತದೆ.

ನಮ್ಮ ಈಗಿರುವ ಪ್ರೋಗ್ರಾಂಗಳು, ಕ್ಯಾಂಪೇನ್‌ಗಳು ಮತ್ತು ಆಫರ್‌ಗಳನ್ನು ಸುಧಾರಿಸಲು

ರಚನೆಕಾರರ ಡೆಮೋಗ್ರಾಫಿಕ್ಸ್ ಅಡಿಯಲ್ಲಿ, ಪ್ರೋಗ್ರಾಂಗಳು ಮತ್ತು ಈವೆಂಟ್‌ಗಳಿಗೆ ಆಹ್ವಾನಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ನಿಮ್ಮ ಮಾಹಿತಿಯನ್ನು ಬಳಸಲು ನೀವು ನಮಗೆ ಒಪ್ಪಿಗೆಯನ್ನು ನೀಡಬಹುದು. ನಮ್ಮ ಪ್ರಸ್ತುತ ಪ್ರೋಗ್ರಾಂಗಳು, ಕ್ಯಾಂಪೇನ್‌ಗಳು ಮತ್ತು ಆಫರ್‌ಗಳ ಕುರಿತು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಈ ಮಾಹಿತಿಯು ನಮಗೆ ಸಹಾಯ ಮಾಡಬಹುದು. ಈ ಆಫರ್‌ಗಳು ರಚನೆಕಾರರ ಈವೆಂಟ್‌ಗಳು ಮತ್ತು ಉದಯೋನ್ಮುಖ ರಚನೆಕಾರರ ಬೆಳವಣಿಗೆಗೆ ಸಹಾಯ ಮಾಡುವ ಕಾರ್ಯಕ್ರಮಗಳಂತಹ ಪ್ರೋಗ್ರಾಂಗಳನ್ನು ಒಳಗೊಂಡಿವೆ. ನಾವು ರಚನೆಕಾರರ ಜೊತೆಗೆ ಫೋಕಸ್ ಗುಂಪುಗಳು, ವ್ಯಕ್ತಿಗತ ಪ್ರತಿಕ್ರಿಯೆ ಸೆಷನ್‌ಗಳು, ಸಮೀಕ್ಷೆಗಳು ಮತ್ತು ಇತರ ರೀತಿಯ ಸಂಶೋಧನೆಗಳಂತಹ ಸಂಶೋಧನೆಯನ್ನು ನಡೆಸುತ್ತೇವೆ. ಈ ಕೆಲಸದ ಮೂಲಕ, ನಮ್ಮ ಉತ್ಪನ್ನ ಅಭಿವೃದ್ಧಿ ತಂಡಗಳಿಗೆ ರಚನೆಕಾರರ ದೃಷ್ಟಿಕೋನಗಳ ಕುರಿತು ತಿಳಿಸಬಹುದು. ರಚನೆಕಾರರ ಡೆಮೋಗ್ರಾಫಿಕ್ಸ್ YouTube ನಲ್ಲಿ ಸಮುದಾಯಗಳ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಹೆಚ್ಚಿನ ರಚನೆಕಾರರ ಬಳಿಗೆ ಸಂಶೋಧನೆಗೆ ಸಂಬಂಧಪಟ್ಟ ಆಹ್ವಾನಗಳನ್ನು ಕೊಂಡೊಯ್ಯಲು ನಮಗೆ ಅನುಮತಿಸುತ್ತದೆ.

ನಿಮ್ಮ ಪ್ರತಿಕ್ರಿಯೆ ಮಾಹಿತಿಯನ್ನು ಎಡಿಟ್ ಮಾಡುವ ಅಥವಾ ಅಳಿಸುವ ಆಯ್ಕೆ

ನಿಮ್ಮ ಪ್ರತಿಕ್ರಿಯೆ ಮಾಹಿತಿಯನ್ನು ಅಳಿಸುವುದು ಹೇಗೆ ಎಂಬುದರ ಕುರಿತು ಸೂಚನೆಗಳಿಗಾಗಿ ಕೆಳಗೆ ಓದಿ. 45-ದಿನಗಳ ಅವಧಿಯಲ್ಲಿ ಒಂದು ಬಾರಿ ನೀವು ಹಂಚಿಕೊಳ್ಳುವ ಮಾಹಿತಿಯನ್ನು ನೀವು ಎಡಿಟ್ ಮಾಡಬಹುದು. ನೀವು ಮತ್ತೊಮ್ಮೆ ಮಾಹಿತಿಯನ್ನು ಕಳುಹಿಸಲು ಪ್ರಯತ್ನಿಸಬಹುದಾದ ಮುಂದಿನ ಸಂಭವನೀಯ ದಿನಾಂಕವು Studio ನಲ್ಲಿ ಗೋಚರಿಸುತ್ತದೆ. ನಿಮ್ಮ ಪ್ರತಿಕ್ರಿಯೆಗಳನ್ನು ಯಾವಾಗ ಬೇಕಾದರೂ ಸಂಪೂರ್ಣವಾಗಿ ಅಳಿಸಬಹುದು.

ಸೂಚನೆ: ನೀವು ಈ ಮಾಹಿತಿಯನ್ನು ಎಡಿಟ್ ಮಾಡಲು ಅಥವಾ ಅಳಿಸಲು ಆಯ್ಕೆ ಮಾಡಿದರೆ, YouTube ನಲ್ಲಿರುವ ನಿಮ್ಮ ಕಂಟೆಂಟ್‌ನ ಪರ್ಫಾರ್ಮೆನ್ಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

YouTube Studio ನಲ್ಲಿ ರಚನೆಕಾರರ ಡೆಮೋಗ್ರಾಫಿಕ್ಸ್ ಪ್ರತಿಕ್ರಿಯೆಗಳನ್ನು ಎಡಿಟ್ ಮಾಡಲು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಬದಿಯಲ್ಲಿ ಸೆಟ್ಟಿಂಗ್‍ಗಳು ಎಂಬುದನ್ನು ಕ್ಲಿಕ್ ಮಾಡಿ.
  3. ರಚನೆಕಾರರ ಡೆಮೋಗ್ರಾಫಿಕ್ಸ್ ಎಂಬುದನ್ನು ಆಯ್ಕೆಮಾಡಿ.
  4. ಸಮೀಕ್ಷೆಯನ್ನು ಎಡಿಟ್ ಮಾಡಿ ಆಯ್ಕೆಮಾಡಿ.
  5. ನಿಮ್ಮ ಪ್ರತಿಕ್ರಿಯೆಗಳನ್ನು ಎಡಿಟ್ ಮಾಡಿ.
  6. ಸಲ್ಲಿಸಿ ಆಯ್ಕೆಮಾಡಿ.

YouTube Studio ಆ್ಯಪ್‌ನಲ್ಲಿ ರಚನೆಕಾರರ ಡೆಮೋಗ್ರಾಫಿಕ್ಸ್ ಪ್ರತಿಕ್ರಿಯೆಗಳನ್ನು ಎಡಿಟ್ ಮಾಡಲು:

  1. YouTube Studio ಆ್ಯಪ್ ಅನ್ನು ತೆರೆಯಿರಿ.
  2. ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ
  3. ಮೆನುವಿನಲ್ಲಿ ಸೆಟ್ಟಿಂಗ್‌ಗಳು ಎಂಬುದನ್ನು ಟ್ಯಾಪ್ ಮಾಡಿ.
  4. ಚಾನಲ್ ಅಡಿಯಲ್ಲಿ, ರಚನೆಕಾರರ ಡೆಮೋಗ್ರಾಫಿಕ್ಸ್ ಎಂಬುದನ್ನು ಟ್ಯಾಪ್ ಮಾಡಿ.
  5. ಸಮೀಕ್ಷೆಯನ್ನು ಎಡಿಟ್ ಮಾಡಿ ಆಯ್ಕೆಮಾಡಿ.
  6. ನಿಮ್ಮ ಪ್ರತಿಕ್ರಿಯೆಗಳನ್ನು ಎಡಿಟ್ ಮಾಡಿ.
  7. ಸಲ್ಲಿಸಿ ಆಯ್ಕೆಮಾಡಿ.

YouTube Studio ನಲ್ಲಿ ರಚನೆಕಾರರ ಡೆಮೋಗ್ರಾಫಿಕ್ಸ್ ಪ್ರತಿಕ್ರಿಯೆಗಳನ್ನು ಅಳಿಸಲು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಬದಿಯಲ್ಲಿ ಸೆಟ್ಟಿಂಗ್‍ಗಳು ಎಂಬುದನ್ನು ಕ್ಲಿಕ್ ಮಾಡಿ.
  3. ರಚನೆಕಾರರ ಡೆಮೋಗ್ರಾಫಿಕ್ಸ್ ಎಂಬುದನ್ನು ಆಯ್ಕೆಮಾಡಿ.
  4. ಡೇಟಾ ಅಳಿಸಿ ಆಯ್ಕೆಮಾಡಿ.
  5. ದೃಢೀಕರಣ ವಿಂಡೋ ಪಾಪ್-ಅಪ್ ಆದಾಗ, ಅಳಿಸಿ ಆಯ್ಕೆಮಾಡಿ.

YouTube Studio ಆ್ಯಪ್‌ನಲ್ಲಿ ರಚನೆಕಾರರ ಡೆಮೋಗ್ರಾಫಿಕ್ಸ್ ಪ್ರತಿಕ್ರಿಯೆಗಳನ್ನು ಅಳಿಸಲು:

  1. YouTube Studio ಆ್ಯಪ್ ಅನ್ನು ತೆರೆಯಿರಿ.
  2. ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ
  3. ಮೆನುವಿನಲ್ಲಿ ಸೆಟ್ಟಿಂಗ್‌ಗಳು ಎಂಬುದನ್ನು ಟ್ಯಾಪ್ ಮಾಡಿ.
  4. ಚಾನಲ್ ಅಡಿಯಲ್ಲಿ, ರಚನೆಕಾರರ ಡೆಮೋಗ್ರಾಫಿಕ್ಸ್ ಎಂಬುದನ್ನು ಟ್ಯಾಪ್ ಮಾಡಿ.
  5. ಡೇಟಾ ಅಳಿಸಿ ಆಯ್ಕೆಮಾಡಿ.
  6. ದೃಢೀಕರಣ ವಿಂಡೋ ಪಾಪ್-ಅಪ್ ಆದಾಗ, ಅಳಿಸಿ ಆಯ್ಕೆಮಾಡಿ.

ರಚನೆಕಾರರ ಡೆಮೋಗ್ರಾಫಿಕ್ಸ್ ಪ್ರತಿಕ್ರಿಯೆಗಳನ್ನು ಡೌನ್‌ಲೋಡ್ ಮಾಡಿ:

ನಿಮ್ಮ ರಚನೆಕಾರರ ಡೆಮೋಗ್ರಾಫಿಕ್ಸ್ ಡೇಟಾವನ್ನು ಡೌನ್‌ಲೋಡ್ ಮಾಡಲು, ಈ ಸೂಚನೆಗಳನ್ನು ಅನುಸರಿಸಿ. ನಿಮ್ಮ YouTube ಚಾನಲ್ ಅಥವಾ ಚಾನಲ್‌ಗಳಿಗಾಗಿ ನೀವು ಡೇಟಾವನ್ನು ಡೌನ್‌ಲೋಡ್ ಮಾಡಲು ಬಯಸಿದರೆ, ನಿಮ್ಮ ವೈಯಕ್ತಿಕ Google ಖಾತೆಯನ್ನು ಬಳಸಿಕೊಂಡು ಸೈನ್ ಇನ್ ಮಾಡಬೇಕೇ ಹೊರತು, ಬ್ರ್ಯಾಂಡ್ ಖಾತೆ ಮೂಲಕ ಅಲ್ಲ.

ರಚನೆಕಾರರ ಡೆಮೋಗ್ರಾಫಿಕ್ಸ್ ಕುರಿತು ಇನ್ನಷ್ಟು ತಿಳಿಯಿರಿ

ನಾನು ಈ ಸೆಟ್ಟಿಂಗ್ ಅನ್ನು ಯಾವಾಗ ಬಳಸಬಹುದು?

ನಾವು 2021 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಲಾವಿದರು ಮತ್ತು ರಚನೆಕಾರರಿಗಾಗಿ ರಚನೆಕಾರರು ಮತ್ತು ಕಲಾವಿದರ ಡೆಮೋಗ್ರಾಫಿಕ್ಸ್‌ ಸಮೀಕ್ಷೆಯನ್ನು ಪ್ರಾರಂಭಿಸಿದ್ದೇವೆ, ಜುಲೈ 2023 ರಲ್ಲಿ ಯುನೈಟೆಡ್ ಕಿಂಗ್‌ಡಮ್, ಸೆಪ್ಟೆಂಬರ್ 2023 ರಲ್ಲಿ ಬ್ರೆಜಿಲ್‌ನಲ್ಲಿ ಸಮೀಕ್ಷೆ ನಡೆಸಿ ಮತ್ತು ಈಗ ಭಾರತಕ್ಕೂ ವಿಸ್ತರಿಸುತ್ತಿದ್ದೇವೆ. ಈ ಪ್ರಶ್ನೆಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ YouTube Studio ಸೆಟ್ಟಿಂಗ್‌ಗಳು ವಿಭಾಗದ ರಚನೆಕಾರರ ಡೆಮೋಗ್ರಾಫಿಕ್ಸ್ ಅಡಿಯಲ್ಲಿ ಇದೀಗ ಕಾಣಬಹುದಾಗಿದೆ.

ನೀವು ಈ ಸೆಟ್ಟಿಂಗ್‌ಗೆ ಹೋಗಲು ಬಯಸಿದರೆ, ನೀವು ಚಾನಲ್ ಮಾಲೀಕರಾಗಿರಬೇಕು. ನೀವು ಬ್ರ್ಯಾಂಡ್ ಖಾತೆಯನ್ನು ಬಳಸುತ್ತಿದ್ದರೆ, ನೀವು ಪ್ರಾಥಮಿಕ ಮಾಲೀಕರಾಗಿರಬೇಕು. ನೀವು YouTube ಚಾನಲ್ ಅನುಮತಿಗಳನ್ನು ಬಳಸುತ್ತಿದ್ದರೆ, ನೀವೇ ಮಾಲೀಕರಾಗಿರಬೇಕು.

ನೀವು ಈ ಸೆಟ್ಟಿಂಗ್ ಅನ್ನು ಇತರ ದೇಶಗಳು ಅಥವಾ ಪ್ರದೇಶಗಳಿಗೆ ಮತ್ತು ಹೆಚ್ಚಿನ ಗುರುತುಗಳಿಗೆ ಯಾವಾಗ ವಿಸ್ತರಿಸುತ್ತೀರಿ?

ನಾವು 2023 ರಲ್ಲಿ ಭಾರತಕ್ಕೆ ವಿಸ್ತರಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಹೆಚ್ಚಿನ ದೇಶಗಳು ಅಥವಾ ಪ್ರದೇಶಗಳಿಗೆ ವಿಸ್ತರಿಸುವ ಯೋಜನೆ ಇದೆ. ಸಮೀಕ್ಷೆಯಲ್ಲಿರುವ ವರ್ಗಗಳು ಮತ್ತು ಆಯ್ಕೆಗಳು ಜಗತ್ತಿನೆಲ್ಲೆಡೆ ಇರುವ ವ್ಯಕ್ತಿಗಳು ತಮ್ಮ ಗುರುತುಗಳನ್ನು ವ್ಯಾಖ್ಯಾನಿಸುವ ಎಲ್ಲಾ ವಿಧಾನಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ನಮಗೆ ತಿಳಿದಿದೆ. ಭವಿಷ್ಯದಲ್ಲಿ ಈ ವಿಭಾಗಗಳು ಮತ್ತು ಆಯ್ಕೆಗಳನ್ನು ಮತ್ತಷ್ಟು ವಿಸ್ತರಿಸಲು ಎದುರು ನೋಡುತ್ತಿದ್ದೇವೆ.

ಎಲ್ಲಾ ರಚನೆಕಾರರು ಮತ್ತು ವೀಕ್ಷಕರ ಅನುಭವವನ್ನು ಸುಧಾರಿಸುವ ನಿಟ್ಟಿನಲ್ಲಿ ನಮಗೆ ಸಹಾಯ ಮಾಡಲು, ಮಾಡುತ್ತಿರುವ ಇತರ ಪ್ರಯತ್ನಗಳ ಜೊತೆಗೆ ಈ ಸೆಟ್ಟಿಂಗ್ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ, ಪ್ಲಾಟ್‌ಫಾರ್ಮ್ ಅನ್ನು ಸುಲಭವಾಗಿ ಆ್ಯಕ್ಸೆಸ್ ಮಾಡಲು ಮತ್ತು YouTube ನಲ್ಲಿ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣಲಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಸಹಾಯ ಮಾಡಲು ವೀಕ್ಷಕರು ಮತ್ತು ವಿಕಲಚೇತನ ರಚನೆಕಾರರ ಜೊತೆಗೆ YouTube ತನ್ನ ಕೆಲಸವನ್ನು ಯಥಾಪ್ರಕಾರವಾಗಿ ಮುಂದುವರಿಸುತ್ತದೆ.

ರಚನೆಕಾರರ ಡೆಮೋಗ್ರಾಫಿಕ್ಸ್‌ನಲ್ಲಿ ನಾನು ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಬೇಕೇ?

ಇಲ್ಲ, ನೀವು ರಚನೆಕಾರರ ಡೆಮೋಗ್ರಾಫಿಕ್ಸ್ ಸೆಟ್ಟಿಂಗ್‌ನಲ್ಲಿ ಪ್ರತಿಕ್ರಿಯೆಯನ್ನು ಭರ್ತಿ ಮಾಡಲು ಆಯ್ಕೆ ಮಾಡಿಕೊಂಡರೆ, ಪ್ರತಿಯೊಂದು ಪ್ರಶ್ನೆಯೂ ಐಚ್ಛಿಕವಾಗಿರುತ್ತದೆ. ನೀವು ಕೆಲವು ಪ್ರಶ್ನೆಗಳನ್ನು ಖಾಲಿ ಬಿಡಬಹುದು ಅಥವಾ “ಉತ್ತರಿಸಲು ಬಯಸುವುದಿಲ್ಲ” ಆಯ್ಕೆಮಾಡಬಹುದು.

ಈ ಸೆಟ್ಟಿಂಗ್ ನನ್ನ ಚಾನಲ್‌ನ ಪರ್ಫಾರ್ಮೆನ್ಸ್ ಮೇಲೆ ಪರಿಣಾಮ ಬೀರುತ್ತದೆಯೇ?

ನೀವು ಹಂಚಿಕೊಳ್ಳುವ ಮಾಹಿತಿಯನ್ನು YouTube ಸಿಸ್ಟಂಗಳಲ್ಲಿ ವೈಯಕ್ತಿಕ ಕಂಟೆಂಟ್‌ನ ಪರ್ಫಾರ್ಮೆನ್ಸ್ ಮೇಲೆ ಪರಿಣಾಮ ಬೀರಲು ಬಳಸಲಾಗುವುದಿಲ್ಲ.

ನಮ್ಮ ಸಿಸ್ಟಂಗಳು ಉದ್ದೇಶಪೂರ್ವಕ ಪೂರ್ವಗ್ರಹವನ್ನು ಪ್ರತಿಬಿಂಬಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ. ನಮ್ಮ ಹುಡುಕಾಟ, ಅನ್ವೇಷಣೆ ಮತ್ತು ಮಾನಿಟೈಸೇಶನ್ ಸಿಸ್ಟಂಗಳಂತಹ YouTube ನ ಕಾರ್ಯಗಳನ್ನು ಮೌಲ್ಯಮಾಪನ ಮಾಡಲು ರಚನೆಕಾರರ ಡೆಮೋಗ್ರಾಫಿಕ್ಸ್ ಡೇಟಾವನ್ನು ಬಳಸಲಾಗುತ್ತದೆ. ನಿಮ್ಮ ಸಿಸ್ಟಂಗಳಲ್ಲಿರುವ ದೋಷಗಳಿಂದಾಗಿ ಕೆಲವು ಸಮುದಾಯಗಳ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ನಾವು ಕಂಡುಕೊಂಡರೆ, ನಮ್ಮ ಸಿಸ್ಟಂಗಳು ಇನ್ನಷ್ಟು ನಿಖರವಾಗಿ ಮತ್ತು ಸಮಗ್ರವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ನಿಟ್ಟಿನಲ್ಲಿ ಅವುಗಳಿಗೆ ನೀಡಲಾಗುವ ತರಬೇತಿಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರುವುದರ ಮೇಲೆ ಗಮನಹರಿಸುತ್ತೇವೆ.

ನೀವು ರಚನೆಕಾರರ ಡೆಮೋಗ್ರಾಫಿಕ್ಸ್‌ಗೆ ಸಂಬಂಧಿಸಿದ ಪ್ರಶ್ನಾವಳಿಯನ್ನು ಹೇಗೆ ರಚಿಸಿದ್ದೀರಿ?

ನಾವು ನಾಗರಿಕ ಮತ್ತು ಮಾನವ ಹಕ್ಕುಗಳ ತಜ್ಞರು ಮತ್ತು ವಿವಿಧ ಸಮುದಾಯಗಳಿಗೆ ಸೇರಿದ ರಚನೆಕಾರರ ಜೊತೆಗೆ ನಿಕಟವಾಗಿ ಕೆಲಸ ಮಾಡಿದ್ದೇವೆ.

ನನ್ನ ಪ್ರತಿಕ್ರಿಯೆಗಳನ್ನು YouTube ನಿಂದ ಹೊರಗೆ ಹಂಚಿಕೊಳ್ಳಲಾಗುತ್ತದೆಯೇ?

ರಚನೆಕಾರರ ಮತ್ತು ಕಲಾವಿದರ ಸಮೀಕ್ಷೆ ಅಥವಾ ರಚನೆಕಾರರ ಡೆಮೋಗ್ರಾಫಿಕ್ಸ್ ಸೆಟ್ಟಿಂಗ್‌ನಲ್ಲಿ ನೀವು ಹಂಚಿಕೊಳ್ಳುವ ಮಾಹಿತಿಯನ್ನು ನಿಮ್ಮ YouTube ಚಾನಲ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಅದನ್ನು ಇತರ Google ಉತ್ಪನ್ನಗಳಲ್ಲಿ ಬಳಸುವುದಿಲ್ಲ. ನಿಮ್ಮ ಹೆಚ್ಚುವರಿ ಸಮ್ಮತಿ ಇಲ್ಲದೆಯೇ ಅದನ್ನು ಸಾರ್ವಜನಿಕಗೊಳಿಸುವುದಿಲ್ಲ ಅಥವಾ ಅದನ್ನು ಜಾಹೀರಾತು ಉದ್ದೇಶಗಳಿಗಾಗಿ ಬಳಸುವುದಿಲ್ಲ. ನಾವು ಈ ಮಾಹಿತಿಯನ್ನು ಜಾಹೀರಾತುದಾರರ ಜೊತೆಗೆ ಹಂಚಿಕೊಳ್ಳುವುದಿಲ್ಲ ಅಥವಾ ಜಾಹೀರಾತುಗಳನ್ನು ಗುರಿಯಾಗಿಸಲು ಸಹ ಬಳಸುವುದಿಲ್ಲ.

ಪ್ರೋಗ್ರಾಂಗಳು ಮತ್ತು ಈವೆಂಟ್‌ಗಳಿಗೆ ಆಹ್ವಾನಗಳನ್ನು ವಿಸ್ತರಿಸಲು ನಿಮ್ಮ ಮಾಹಿತಿಯನ್ನು ಬಳಸುವುದಕ್ಕೆ ನಮಗೆ ಒಪ್ಪಿಗೆ ನೀಡಬೇಕೆ, ಬೇಡವೇ ಎಂಬುದು ನಿಮಗೆ ಬಿಟ್ಟದ್ದು. ಇದು ನಿಮ್ಮ ಚಾನಲ್ ಅಥವಾ ಕಂಟೆಂಟ್; ಅಥವಾ ಕಾರ್ಯಾಗಾರಗಳು, ಬಳಕೆದಾರರ ಕುರಿತಾದ ಅಧ್ಯಯನ ಅಥವಾ ಇತರ ಕ್ಯಾಂಪೇನ್‌ಗಳನ್ನು ಹೈಲೈಟ್ ಮಾಡುವುದನ್ನು ಒಳಗೊಂಡಿರುತ್ತದೆ.

ನನ್ನ ಮಾಹಿತಿಯನ್ನು ಸಲ್ಲಿಸಿದ ಬಳಿಕ ಅದನ್ನು ನಾನು ಅಪ್‌ಡೇಟ್/ಎಡಿಟ್ ಮಾಡಬಹುದೇ?

ನಿಮ್ಮ ರಚನೆಕಾರರ ಡೆಮೋಗ್ರಾಫಿಕ್ಸ್ ಪ್ರತಿಕ್ರಿಯೆಗಳನ್ನು 45 ದಿನಗಳ ಅವಧಿಯಲ್ಲಿ ನೀವು ಒಂದು ಬಾರಿ ಎಡಿಟ್ ಮಾಡಬಹುದು. ನೀವು ಮತ್ತೊಮ್ಮೆ ಮಾಹಿತಿಯನ್ನು ಕಳುಹಿಸಲು ಪ್ರಯತ್ನಿಸಬಹುದಾದ ಮುಂದಿನ ಸಂಭವನೀಯ ದಿನಾಂಕವು Studio ನಲ್ಲಿ ಗೋಚರಿಸುತ್ತದೆ. ನಿಮ್ಮ ಪ್ರತಿಕ್ರಿಯೆಗಳನ್ನು ಯಾವಾಗ ಬೇಕಾದರೂ ಸಂಪೂರ್ಣವಾಗಿ ಅಳಿಸಬಹುದು.

ರಚನೆಕಾರರ ಡೆಮೋಗ್ರಾಫಿಕ್ಸ್ ಪ್ರತಿಕ್ರಿಯೆಗಳನ್ನು ಎಡಿಟ್ ಮಾಡಲು:

  1. ಕಂಪ್ಯೂಟರ್‌ನಲ್ಲಿ YouTube ಗೆ ಸೈನ್ ಇನ್ ಮಾಡಿ ಅಥವಾ ನಿಮ್ಮ ಚಾನಲ್ ಮಾಲೀಕತ್ವ ಖಾತೆಯನ್ನು ಬಳಸಿಕೊಂಡು YouTube Studio ಆ್ಯಪ್ ಅನ್ನು ಬಳಸಿ.
  2. YouTube Studio ಸೆಟ್ಟಿಂಗ್‌ಗಳು ಎಂಬಲ್ಲಿಗೆ ಹೋಗಿ ಮತ್ತು ರಚನೆಕಾರರ ಡೆಮೋಗ್ರಾಫಿಕ್ಸ್ ಆಯ್ಕೆಮಾಡಿ.
    • YouTube Studio ಆ್ಯಪ್‌ನಲ್ಲಿ, ನಿಮ್ಮ ಪ್ರೊಫೈಲ್ ಚಿತ್ರ Profile ಮತ್ತು ಸೆಟ್ಟಿಂಗ್‌ಗಳು ಟ್ಯಾಪ್ ಮಾಡುವ ಮೂಲಕ ರಚನೆಕಾರರ ಡೆಮೋಗ್ರಾಫಿಕ್ಸ್ ಅನ್ನು ಹುಡುಕಿ.
  3. ಸಮೀಕ್ಷೆಯನ್ನು ಎಡಿಟ್ ಮಾಡಿ ಆಯ್ಕೆಮಾಡಿ.
  4. ನಿಮ್ಮ ಪ್ರತಿಕ್ರಿಯೆಗಳನ್ನು ಎಡಿಟ್ ಮಾಡಿ.
  5. ಸಲ್ಲಿಸಿ ಆಯ್ಕೆಮಾಡಿ.

ರಚನೆಕಾರರ ಡೆಮೋಗ್ರಾಫಿಕ್ಸ್ ಪ್ರತಿಕ್ರಿಯೆಗಳನ್ನು ಅಳಿಸಲು:

  1. ಕಂಪ್ಯೂಟರ್‌ನಲ್ಲಿ YouTube ಗೆ ಸೈನ್ ಇನ್ ಮಾಡಿ ಅಥವಾ ನಿಮ್ಮ ಚಾನಲ್ ಮಾಲೀಕತ್ವ ಖಾತೆಯನ್ನು ಬಳಸಿಕೊಂಡು YouTube Studio ಆ್ಯಪ್ ಅನ್ನು ಬಳಸಿ.
  2. YouTube Studio ಸೆಟ್ಟಿಂಗ್‌ಗಳು ಎಂಬಲ್ಲಿಗೆ ಹೋಗಿ ಮತ್ತು ರಚನೆಕಾರರ ಡೆಮೋಗ್ರಾಫಿಕ್ಸ್ ಆಯ್ಕೆಮಾಡಿ.
    • YouTube Studio ಆ್ಯಪ್‌ನಲ್ಲಿ, ನಿಮ್ಮ ಪ್ರೊಫೈಲ್ ಚಿತ್ರ Profile ಮತ್ತು ಸೆಟ್ಟಿಂಗ್‌ಗಳು ಟ್ಯಾಪ್ ಮಾಡುವ ಮೂಲಕ ರಚನೆಕಾರರ ಡೆಮೋಗ್ರಾಫಿಕ್ಸ್ ಅನ್ನು ಹುಡುಕಿ.
  3. ಡೇಟಾ ಅಳಿಸಿ ಆಯ್ಕೆಮಾಡಿ.
  4. ದೃಢೀಕರಣ ವಿಂಡೋ ಪಾಪ್-ಅಪ್ ಆದಾಗ, ಅಳಿಸಿ ಆಯ್ಕೆಮಾಡಿ.

ರಚನೆಕಾರರ ಡೆಮೋಗ್ರಾಫಿಕ್ಸ್ ಪ್ರತಿಕ್ರಿಯೆಗಳನ್ನು ಡೌನ್‌ಲೋಡ್ ಮಾಡಿ:

ನಿಮ್ಮ ರಚನೆಕಾರರ ಡೆಮೋಗ್ರಾಫಿಕ್ಸ್ ಡೇಟಾವನ್ನು ಡೌನ್‌ಲೋಡ್ ಮಾಡಲು, ಈ ಸೂಚನೆಗಳನ್ನು ಅನುಸರಿಸಿ. ನಿಮ್ಮ YouTube ಚಾನಲ್ ಅಥವಾ ಚಾನಲ್‌ಗಳಿಗಾಗಿ ನೀವು ಡೇಟಾವನ್ನು ಡೌನ್‌ಲೋಡ್ ಮಾಡಲು ಬಯಸಿದರೆ, ನಿಮ್ಮ ವೈಯಕ್ತಿಕ Google ಖಾತೆಯನ್ನು ಬಳಸಿಕೊಂಡು ಸೈನ್ ಇನ್ ಮಾಡಬೇಕೇ ಹೊರತು, ಬ್ರ್ಯಾಂಡ್ ಖಾತೆ ಮೂಲಕ ಅಲ್ಲ.

ಇದು ನನ್ನ Google ಖಾತೆಯ ಕುರಿತಾದ ಯಾವುದೇ ಮಾಹಿತಿಯನ್ನು ಬದಲಿಸುತ್ತದೆಯೇ?

ರಚನೆಕಾರರ ಮತ್ತು ಕಲಾವಿದರ ಸಮೀಕ್ಷೆ ಅಥವಾ ರಚನೆಕಾರರ ಡೆಮೋಗ್ರಾಫಿಕ್ಸ್ ಸೆಟ್ಟಿಂಗ್‌ನಲ್ಲಿ ನೀವು ಹಂಚಿಕೊಳ್ಳುವ ಮಾಹಿತಿಯನ್ನು ನಿಮ್ಮ YouTube ಚಾನಲ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಅದನ್ನು ಇತರ Google ಉತ್ಪನ್ನಗಳಲ್ಲಿ ಬಳಸಲಾಗುವುದಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7992168678053542573
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false