ಸ್ಟ್ರೀಮಿಂಗ್ ಹಾಗೂ ವೀಡಿಯೊಗೆ ಸಂಬಂಧಿಸಿದ ಸಮಸ್ಯೆಗಳನ್ನು ಟ್ರಬಲ್‌ಶೂಟ್ ಮಾಡಿ

ನಿಮ್ಮ ಚಲನಚಿತ್ರ, ಶೋ ಅಥವಾ ಬೇಡಿಕೆಯ ಮೇರೆಗಿನ ಕಂಟೆಂಟ್ ಬಫರ್ ಆಗುತ್ತಿದ್ದರೆ, ಲ್ಯಾಗ್ ಆಗುತ್ತಿದ್ದರೆ ಅಥವಾ ಸರಿಯಾಗಿ ಪ್ಲೇ ಆಗದಿದ್ದರೆ, ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಲ್ಲಿನ ಸಮಸ್ಯೆಗಳನ್ನು ಸರಿಪಡಿಸಲು ಈ ಪರಿಹಾರಗಳಲ್ಲಿ ಒಂದನ್ನು ಪ್ರಯತ್ನಿಸಿ. ನಿಮ್ಮ ಟಿವಿಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ, ಈ ಹಂತಗಳನ್ನು ಪ್ರಯತ್ನಿಸಿ. ಈ ಟ್ರಬಲ್‌ಶೂಟಿಂಗ್ ಹಂತಗಳು, ಬಹುತೇಕ ಪ್ಲೇಬ್ಯಾಕ್ ಸಮಸ್ಯೆಗಳು ಹಾಗೂ ದೋಷಗಳನ್ನು ಬಗೆಹರಿಸಲು ಸಹಾಯ ಮಾಡಬಲ್ಲವು.

ನೀವು ಈ ಹಂತಗಳನ್ನು ಪ್ರಯತ್ನಿಸಿದ್ದು, ನಿಮ್ಮ ವೀಡಿಯೊ ಇನ್ನೂ ಸರಿಯಾಗಿ ಪ್ಲೇ ಆಗುತ್ತಿಲ್ಲವಾದರೆ, ಮತ್ತೊಂದು ಬೆಂಬಲಿತ ಸಾಧನದಲ್ಲಿ ವೀಕ್ಷಿಸಲು ಪ್ರಯತ್ನಿಸಿ.

ನಿಮ್ಮ iPhone ಅಥವಾ iPad ನಲ್ಲಿನ ವೀಡಿಯೊಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸಿ

ಸಾಮಾನ್ಯ ದೋಷ ಸಂದೇಶಗಳ ಉದಾಹರಣೆಗಳು:

  • ಕ್ಷಮಿಸಿ, ಈ ವೀಡಿಯೊವನ್ನು ಅನುಮತಿಸುವಲ್ಲಿ ದೋಷ ಕಂಡುಬಂದಿದೆ.
  • ಈ ವೀಡಿಯೊಗೆ ಹಣಪಾವತಿ ಮಾಡಬೇಕಿದೆ.
  • ದೋಷ ಎದುರಾಗಿದೆ. ನಂತರ ಪುನಃ ಪ್ರಯತ್ನಿಸಿ.
  • ನಮ್ಮ ಸರ್ವರ್‌ಗಳಲ್ಲಿ ಸಮಸ್ಯೆ ಇದೆ. ನಂತರ ಮತ್ತೆ ಪ್ರಯತ್ನಿಸಿ.
  • ಏನೋ ತಪ್ಪಾಗಿದೆ.

ಮೇಲಿನ ದೋಷಗಳನ್ನು ಹೋಲುವಂತಹ ದೋಷವನ್ನು ನೀವು ಪಡೆದರೆ, ಈ ಹಂತಗಳನ್ನು ಅನುಸರಿಸಿ:

  1. ನಿಮ್ಮ ಸಾಧನವು YouTube ಆ್ಯಪ್‌ನ ಇತ್ತೀಚಿನ ಆವೃತ್ತಿಯನ್ನು ಬಳಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  2. ಆ್ಯಪ್ ಅನ್ನು ಮುಚ್ಚಿ ಮತ್ತು ಪುನಃ ತೆರೆಯಿರಿ.
  3. ನಿಮ್ಮ ಸಾಧನವನ್ನು ಮರುಪ್ರಾರಂಭಿಸಿ.
  4. ಸಿಸ್ಟಂ ಅನ್ನು ಮರುಪ್ರಾರಂಭಿಸಿದ ನಂತರ, ನಿಮ್ಮ ವೀಡಿಯೊವನ್ನು ಮರುಪ್ಲೇ ಮಾಡಿ.

ಬಫರಿಂಗ್ ಆಗುವುದನ್ನು ಅಥವಾ ವೀಡಿಯೊಗಳನ್ನು ಲೋಡ್ ಮಾಡುವಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿ

ಹಂತ 1: ಬೇರೆ ಇಂಟರ್ನೆಟ್ ಕನೆಕ್ಷನ್ ಅನ್ನು ಬಳಸಿ ನೋಡಿ.

ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಬದಲಾಯಿಸಿ, ನಂತರ ನಿಮ್ಮ ವೀಡಿಯೊವನ್ನು ಮರುಪ್ಲೇ ಮಾಡಿ.

  • ನಿಮ್ಮ ಮೊಬೈಲ್ ನೆಟ್‌ವರ್ಕ್‌ಗೆ ನೀವು ಕನೆಕ್ಟ್ ಆಗಿದ್ದರೆ: ವೈ-ಫೈಗೆ ಕನೆಕ್ಟ್ ಮಾಡಿ.
  • ನೀವು Wi-Fi ಗೆ ಕನೆಕ್ಟ್ ಮಾಡಿದ್ದರೆ: ನಿಮ್ಮ ಮೊಬೈಲ್ ನೆಟ್‌ವರ್ಕ್‌ಗೆ ಕನೆಕ್ಟ್ ಮಾಡಿ. ಗಮನಿಸಿ: ಡೇಟಾ ದರಗಳು ಅನ್ವಯವಾಗಬಹುದು.

ಹಂತ 2: ಆ್ಯಪ್‌ನ ಕ್ಯಾಷ್ ಅನ್ನು ಅಳಿಸಿ

  1. ನಿಮ್ಮ iPhone ಅಥವಾ iPad ನಲ್ಲಿ, ನಿಮ್ಮ ಸಾಧನದ ಸೆಟ್ಟಿಂಗ್‌ಗಳನ್ನು ತೆರೆಯಿರಿ.
  2.  ಸಾಮಾನ್ಯ ನಂತರ iPhone ಸಂಗ್ರಹಣೆ (ಅಥವಾ iPad ಸಂಗ್ರಹಣೆ, ನೀವು ಐಪ್ಯಾಡ್‌ನಲ್ಲಿದ್ದರೆ) ಗೆ ಹೋಗಿ.
  3. ಆ್ಯಪ್‌ಗಳ ಪಟ್ಟಿಗೆ ಸ್ಕ್ರಾಲ್ ಮಾಡಿ ಮತ್ತು YouTube ಅನ್ನು ಟ್ಯಾಪ್ ಮಾಡಿ.
  4. ಆಫ್‌ಲೋಡ್ ಆ್ಯಪ್ ಅನ್ನು ಟ್ಯಾಪ್ ಮಾಡಿ, ನಂತರ ಆಫ್‌ಲೋಡ್ ಆ್ಯಪ್ ಅನ್ನು ಮತ್ತೊಮ್ಮೆ ಟ್ಯಾಪ್ ಮಾಡಿ.
  5. ಆಫ್‌ಲೋಡ್ ಆಗಲು ಆ್ಯಪ್ ಗೆ ಸ್ವಲ್ಪ ಸಮಯ ನೀಡಿ, ನಂತರ ಆ್ಯಪ್ ಅನ್ನು ಮರುಇನ್‌ಸ್ಟಾಲ್ ಮಾಡಿ ಅನ್ನು ಟ್ಯಾಪ್ ಮಾಡಿ.
  6. ನಿಮ್ಮ ವೀಡಿಯೊವನ್ನು ರಿಪ್ಲೇ ಮಾಡಿ.

ನಿಮ್ಮ ಚಲನಚಿತ್ರವು ಸ್ಟಕ್ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ

ಚಲನಚಿತ್ರದ ಟೈಮ್‌ಲೈನ್‌ನಲ್ಲಿ, ಮುಂದಿನ ಕೆಲವು ದೃಶ್ಯಗಳಿಗೆ ಫಾಸ್ಟ್-ಫಾರ್ವರ್ಡ್ ಮಾಡಲು ಕ್ಲಿಕ್ ಮಾಡಿ ಮತ್ತು ಚಲನಚಿತ್ರವು ಮತ್ತೆ ಸಾಮಾನ್ಯವಾಗಿ ಪ್ಲೇ ಆಗುತ್ತದೆಯೇ ಎಂದು ನೋಡಿ.

ಈ ಕ್ರಿಯೆಯು ಸಹಾಯ ಮಾಡದಿದ್ದರೆ, ನಿಮ್ಮ ಆ್ಯಪ್ ಅನ್ನು ಮುಚ್ಚಲು ಮತ್ತು ಪುನಃ-ತೆರೆಯಲು ಪ್ರಯತ್ನಿಸಿ. ನೀವು ಈಗಲೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಯಾವುದೇ ಆ್ಯಪ್ ಅಪ್‌ಡೇಟ್‌ಗಳಿವೆಯೇ ಎಂದು ಪರಿಶೀಲಿಸಿ, ನಂತರ ನಿಮ್ಮ ವೀಡಿಯೊವನ್ನು ಮರುಪ್ಲೇ ಮಾಡಲು ಪ್ರಯತ್ನಿಸಿ.

ಲೈಬ್ರರಿಯಲ್ಲಿ ಕಾಣೆಯಾದ ಖರೀದಿಗಳ ಕುರಿತಂತೆ ಇರುವ ಸಮಸ್ಯೆಗಳನ್ನು ಸರಿಪಡಿಸಿ

ನೀವು ಚಲನಚಿತ್ರಗಳು ಅಥವಾ ಶೋಗಳನ್ನು ಖರೀದಿಸಿದ್ದರೂ ಅವುಗಳನ್ನು ನಿಮ್ಮ ಲೈಬ್ರರಿಯಲ್ಲಿ ನೋಡಲು ಸಾಧ್ಯವಾಗದಿದ್ದರೆ, ನೀವು ಬ್ರ್ಯಾಂಡ್ ಖಾತೆಗೆ ಲಾಗ್ ಇನ್ ಆಗಿರಬಹುದು. ನಿಮ್ಮ ಚಲನಚಿತ್ರಗಳು ಮತ್ತು ಶೋಗಳನ್ನು ವೀಕ್ಷಿಸಲು, ನಿಮ್ಮ ವೈಯಕ್ತಿಕ ಖಾತೆಗೆ ನೀವು ಬದಲಾಯಿಸಬಹುದು. ನೀವು ಬ್ರ್ಯಾಂಡ್ ಖಾತೆಯನ್ನು ಹೊಂದಿರುವಿರಾ ಎಂಬುದನ್ನು ಸಹ ನೀವು ಪರಿಶೀಲಿಸಬಹುದು

ನೀವು ನಿರ್ವಹಿಸುವ ಬೇರೆ ಚಾನಲ್‌ಗೆ ಬದಲಾಯಿಸಲು:

  1. ನಿಮ್ಮ ಪ್ರೊಫೈಲ್ ಚಿತ್ರಕ್ಕೆ ಹೋಗಿ.
  2. ನಿಮ್ಮ ಹೆಸರಿನ ಮುಂದಿನ ಬಾಣದ ಗುರುತನ್ನು ಟ್ಯಾಪ್ ಮಾಡಿ.
  3. ಆ ಖಾತೆಯನ್ನು ಬಳಸುವುದನ್ನು ಪ್ರಾರಂಭಿಸಲು, ಪಟ್ಟಿಯಲ್ಲಿರುವ ಚಾನಲ್ ಅನ್ನು ಟ್ಯಾಪ್ ಮಾಡಿ.
     

ನಿಮ್ಮ ಟಿವಿಯಲ್ಲಿನ ವೀಡಿಯೊಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸಿ

ನಿಮ್ಮ ಇಂಟರ್‌ನೆಟ್ ಕನೆಕ್ಷನ್ ಅನ್ನು ಪರಿಶೀಲಿಸಿ

HD ಸ್ಟ್ರೀಮಿಂಗ್‌ಗಾಗಿ ಕನಿಷ್ಠ 7 Mbps ವೇಗದ ಕನೆಕ್ಷನ್ ಅನ್ನು ಶಿಫಾರಸು ಮಾಡಲಾಗಿದೆ. ನಿಮ್ಮ ಕನೆಕ್ಷನ್‌ನ ವೇಗವನ್ನು ನೀವು ಇಲ್ಲಿ ಪರೀಕ್ಷಿಸಬಹುದು.
ಟಿವಿಯ ಪಕ್ಕದಲ್ಲಿಯೇ ಈ ಪರೀಕ್ಷೆಯನ್ನು ನಡೆಸಲು ನಾವು ಶಿಫಾರಸು ಮಾಡುತ್ತೇವೆ. ನಿಮ್ಮ ಇಂಟರ್ನೆಟ್ ಕನೆಕ್ಷನ್‌ನ ವೇಗವು ಕಡಿಮೆ ಇದ್ದರೆ, ನಿಮ್ಮ ಸಾಧನ ಅಥವಾ ಸ್ಮಾರ್ಟ್ ಟಿವಿ ನಿಮ್ಮ ರೂಟರ್‌ನ ವ್ಯಾಪ್ತಿಯಲ್ಲಿದೆ ಹಾಗೂ ಹೆಚ್ಚಿನ ಅಡೆತಡೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಶಿಫಾರಸು ಮಾಡುತ್ತೇವೆ (ಉದಾ., ಗೋಡೆಯ ಒಳಗಿನ ಕಪಾಟಿನಲ್ಲಿ ರೂಟರ್ ಅನ್ನು ಇಟ್ಟಿರುವುದು, ರೂಟರ್‌ಗೆ ಲೋಹದ ವಸ್ತು ಅಡ್ಡಿಯಿರುವುದು, ಇತ್ಯಾದಿ.). ಕನೆಕ್ಷನ್‌ನ ವೇಗ ಸುಧಾರಿಸುತ್ತದೆಯೇ ಎಂಬುದನ್ನು ನೋಡಲು ನಿಮ್ಮ ಸಾಧನವನ್ನು ಸರಿಸಿ ನೋಡಿ. ನಿಮ್ಮ ನೆಟ್‌ವರ್ಕ್‌ಗೆ ಕನೆಕ್ಟ್ ಮಾಡಿರುವ ಇತರ ಸಾಧನಗಳ ಕನೆಕ್ಷನ್ ಅನ್ನು ತೆಗೆದುಹಾಕಿ ನೋಡಿ.

ನಿಮ್ಮ ಸ್ಟ್ರೀಮಿಂಗ್ ಗುಣಮಟ್ಟವನ್ನು ಪರಿಶೀಲಿಸಿ

ಗುಣಮಟ್ಟವನ್ನು ಹಸ್ತಚಾಲಿತವಾಗಿ ಅಡ್ಜಸ್ಟ್ ಮಾಡಲು ಪ್ರಯತ್ನಿಸಿ.
  1. ವೀಡಿಯೊ ಪ್ಲೇಯರ್‌ನಲ್ಲಿ ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆಮಾಡಿ.
  2. ಗುಣಮಟ್ಟ ಎಂಬುದನ್ನು ಆಯ್ಕೆಮಾಡಿ ಹಾಗೂ ಹಸ್ತಚಾಲಿತವಾಗಿ ಅಡ್ಜಸ್ಟ್ ಮಾಡಲು ನೀವು ಆಯ್ಕೆಯನ್ನು ಹೊಂದಿದ್ದೀರಾ ಎಂದು ನೋಡಿ.

YouTube ಆ್ಯಪ್ ಅನ್ನು ಮುಚ್ಚಿರಿ ಹಾಗೂ ಪುನಃ ತೆರೆಯಿರಿ

  1. ನಿಮ್ಮ ರಿಮೋಟ್‌ನಲ್ಲಿ ಹೋಮ್ ಬಟನ್ ಒತ್ತಿರಿ.
  2. YouTube ಆ್ಯಪ್ ಅನ್ನು ಪುನಃ ತೆರೆಯಿರಿ.
  3. ನಿಮ್ಮ ವೀಡಿಯೊವನ್ನು ಮರುಪ್ಲೇ ಮಾಡಲು ಪ್ರಯತ್ನಿಸಿ.

YouTube ಆ್ಯಪ್‌ನಿಂದ ಸೈನ್ ಔಟ್ ಮಾಡಿ ಮತ್ತು ಮತ್ತೆ ಸೈನ್ ಇನ್ ಮಾಡಿ

  1.  YouTube ಆ್ಯಪ್ ಅನ್ನು ತೆರೆಯಿರಿ.
  2. ನಿಮ್ಮ ಪ್ರೊಫೈಲ್ ಅನ್ನು ನಿರ್ವಹಿಸಲು, ನಿಮ್ಮ ಪ್ರೊಫೈಲ್ ಚಿತ್ರವನ್ನು  ಆಯ್ಕೆಮಾಡಿ, ತದನಂತರ ಅದರ ಕೆಳಗಿನ ಐಕಾನ್ ಅನ್ನು ಆಯ್ಕೆಮಾಡಿ.
  3. ಮುಂದುವರಿಸಲು ಹಾಗೂ ಸೈನ್ ಔಟ್ ಮಾಡಲು ಮುಂದಿನದು ಎಂಬುದನ್ನು ಆಯ್ಕೆಮಾಡಿ.
  4. ಸೆಟ್ಟಿಂಗ್‌ಗಳಿಗೆ ಹಿಂತಿರುಗಿ ಹಾಗೂ ಸೈನ್ ಇನ್ ಮಾಡಿ ಎಂಬುದನ್ನು ಆಯ್ಕೆಮಾಡಿ. ನೀವು ಕೋಡ್ ಅನ್ನು ನಮೂದಿಸಬೇಕಾಗಬಹುದು.
  5. ನಿಮ್ಮ ವೀಡಿಯೊವನ್ನು ಮರುಪ್ಲೇ ಮಾಡಲು ಪ್ರಯತ್ನಿಸಿ.

ನಿಮ್ಮ ಸಾಧನವನ್ನು ಮರುಪ್ರಾರಂಭಿಸಿ

  1. ನಿಮ್ಮ ಸಾಧನದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ.
  2. ಹಲವಾರು ಸೆಕೆಂಡುಗಳ ಕಾಲ ನಿರೀಕ್ಷಿಸಿ.
  3. ನಿಮ್ಮ ಸಾಧನವನ್ನು ಮರುಕನೆಕ್ಟ್ ಮಾಡಿ.
  4. YouTube ಆ್ಯಪ್‌ಗೆ ಹಿಂತಿರುಗಿ ಮತ್ತು ನಿಮ್ಮ ವೀಡಿಯೊವನ್ನು ಮರುಪ್ಲೇ ಮಾಡಲು ಪ್ರಯತ್ನಿಸಿ.

ನಿಮ್ಮ ಸಾಧನದ ಸಿಸ್ಟಂ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡಿ

ನಿಮ್ಮ ಸಾಧನದ ಸಿಸ್ಟಮ್‌ಗೆ ಲಭ್ಯವಿರುವ ಯಾವುದೇ ಅಪ್‌ಡೇಟ್‌ಗಳಿಗಾಗಿ ಪರಿಶೀಲಿಸಿ. ನಿಮ್ಮ ಸಾಧನದ ಸೆಟ್ಟಿಂಗ್‌ಗಳ ಸಿಸ್ಟಂ ನವೀಕರಣ ವಿಭಾಗದಲ್ಲಿ ನೋಡುವ ಮೂಲಕ ನೀವು ಅಪ್‌ಡೇಟ್‌ಗಳಿಗಾಗಿ ಪರಿಶೀಲಿಸಬಹುದು. ಅಪ್‌ಡೇಟ್ ಲಭ್ಯವಿದ್ದರೆ, ಸಿಸ್ಟಂ ಅನ್ನು ಅಪ್‌ಡೇಟ್ ಮಾಡಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ, ನಂತರ ನಿಮ್ಮ ವೀಡಿಯೊವನ್ನು ಮತ್ತೊಮ್ಮೆ ಪ್ರಯತ್ನಿಸಿ.

ಅಪ್‌ಡೇಟ್ ಮಾಡಲು ನೀವು ಸಮಸ್ಯೆಗಳನ್ನು ಹೊಂದಿದ್ದರೆ ಅಥವಾ ಹಲವಾರು ವಿಭಿನ್ನ ಸೇವೆಗಳಾದ್ಯಂತ ಸ್ಟ್ರೀಮಿಂಗ್ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಟ್ರಬಲ್‌ಶೂಟ್ ಮಾಡುವ ಕುರಿತು ನೆರವನ್ನು ಪಡೆಯುವುದಕ್ಕಾಗಿ ನಿಮ್ಮ ಸಾಧನದ ತಯಾರಕರ ಬೆಂಬಲ ಸೈಟ್ ಅನ್ನು ಪರಿಶೀಲಿಸಿ.

ನಿಮ್ಮ ಟಿವಿಯಲ್ಲಿ ಶೀರ್ಷಿಕೆಯನ್ನು ಪ್ಲೇ ಮಾಡಲು ನೀವು ಇನ್ನೊಂದು ವಿಧಾನವನ್ನು ಬಳಸಿ ನೋಡಬಹುದು:

  • ನೀವು Chromecast ಅನ್ನು ಹೊಂದಿದ್ದರೆ, ಇನ್ನೊಂದು ಸಾಧನದಲ್ಲಿ ಪ್ಲೇ ಮಾಡಿ ಹಾಗೂ ನಿಮ್ಮ ಟಿವಿಗೆ ಕಾಸ್ಟ್ ಮಾಡುವುದು.
  • ನೀವು HDMI ಕೇಬಲ್ ಅನ್ನು ಹೊಂದಿದ್ದರೆ, ಲ್ಯಾಪ್‌ಟಾಪ್‌ನಿಂದ ಪ್ಲೇ ಮಾಡಿ ಹಾಗೂ ನಿಮ್ಮ ಟಿವಿಗೆ ಕನೆಕ್ಟ್ ಮಾಡುವುದು.

ಅದೇ ರೀತಿ, ಅದೇ ಸಮಸ್ಯೆ ಮುಂದುವರಿಯುತ್ತದೆಯೇ ಎಂಬುದನ್ನು ನೋಡಲು ಇನ್ನೊಂದು ಸಾಧನದಲ್ಲಿ ವೀಕ್ಷಿಸಲು ಪ್ರಯತ್ನಿಸಿ.

ನಿಮ್ಮ ಟಿವಿಯಲ್ಲಿನ Primetime ಚಾನಲ್‌ಗಳಿಗೆ ಸಂಬಂಧಿಸಿದ ಪ್ರಸಾರದ ವಿಳಂಬವನ್ನು ಕಡಿಮೆ ಮಾಡಿ

ಪ್ರಸಾರದ ವಿಳಂಬ ಎಂಬುದು ಈವೆಂಟ್ ಅನ್ನು ಕ್ಯಾಮರಾ ಸೆರೆಹಿಡಿಯುವ ಹಾಗೂ ಆ ಈವೆಂಟ್ ನಿಮ್ಮ ಟಿವಿಯಲ್ಲಿ ಪ್ರದರ್ಶನಗೊಳ್ಳುವ ನಡುವಿನ ವಿಳಂಬವಾಗಿದೆ. 

ಪ್ರಸಾರದ ವಿಳಂಬವನ್ನು ಕಡಿಮೆ ಮಾಡುವುದರಿಂದ, ವೀಡಿಯೊ ಪ್ಲೇಯರ್‌ನ ಬಫರ್ ಕಡಿಮೆಯಾಗುತ್ತದೆ. ಪ್ರಸಾರದ ವಿಳಂಬವನ್ನು ಕಡಿಮೆ ಮಾಡಿದರೆ, ಪ್ಲೇಬ್ಯಾಕ್‌ಗೆ ಅಡಚಣೆ ಉಂಟಾಗುವ ಹೆಚ್ಚಿನ ಸಾಧ್ಯತೆ ಇರುತ್ತದೆ.

ನೆಟ್‌ವರ್ಕ್ ದಟ್ಟಣೆ ಮತ್ತು ಇತರ ಅಂಶಗಳು ಸಹ ಲೈವ್ ಪ್ರೋಗ್ರಾಮಿಂಗ್ ಸಮಸ್ಯೆಗಳನ್ನು ಉಂಟುಮಾಡಬಹುದು, ಇವು ಸ್ಟ್ರೀಮ್ ಅನ್ನು ವಿಳಂಬಗೊಳಿಸಬಹುದು. ನೀವು ಉತ್ತಮ ನೆಟ್‌ವರ್ಕ್ ಹೊಂದಿರುವಾಗಲೂ ವಿಳಂಬಗಳು ಸಂಭವಿಸಬಹುದು.

ನಿಮ್ಮ ಟಿವಿಯಲ್ಲಿನ YouTube ಆ್ಯಪ್‌ನಲ್ಲಿ ನಿಮ್ಮ ಪ್ರಸಾರದ ವಿಳಂಬವನ್ನು ಅಪ್‌ಡೇಟ್ ಮಾಡಿ

  1. ಕೆಳಗಿನ ಬಲಭಾಗದಲ್ಲಿರುವ, ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆಮಾಡಿ.
  2. ಪ್ರಸಾರದ ವಿಳಂಬ ಎಂಬುದನ್ನು ಆಯ್ಕೆಮಾಡಿ.
  3. ಕಡಿಮೆ ಮಾಡಿ ಅಥವಾ ಡೀಫಾಲ್ಟ್ ಎಂಬುದನ್ನು ಆಯ್ಕೆಮಾಡಿ.

ಪ್ಲೇಬ್ಯಾಕ್ ಅಡಚಣೆಗಳನ್ನು ಕಡಿಮೆ ಮಾಡಲು "ಡೀಫಾಲ್ಟ್" ಎಂಬುದು ಉತ್ತಮವಾಗಿದೆ. ಲೈವ್ ಸ್ಪಾಯ್ಲರ್‌ಗಳನ್ನು ಕಡಿಮೆ ಮಾಡಲು "ಕಡಿಮೆ ಮಾಡಿ" ಎಂಬುದು ಉತ್ತಮವಾಗಿದೆ. ಕನಿಷ್ಠ ಪ್ಲೇಬ್ಯಾಕ್ ಅಡಚಣೆಗಳ ಜೊತೆಗೆ ಪ್ರಸಾರದ ವಿಳಂಬ ಕಡಿಮೆ ಇರಬೇಕೆಂದು ನೀವು ಬಯಸಿದರೆ, "ಕಡಿಮೆ ಮಾಡಿ" ಎಂಬ ಆಯ್ಕೆಯನ್ನು ಆರಿಸಿ.

ಪ್ರತಿಕ್ರಿಯೆಯನ್ನು ಕಳುಹಿಸಿ

ನಿಮ್ಮ ಪ್ಲೇಬ್ಯಾಕ್ ಸಮಸ್ಯೆಯ ನಂತರ ನೇರವಾಗಿ, ನಿಮ್ಮ ಪ್ರೊಫೈಲ್ ಐಕಾನ್‌ ನಂತರ ಸಹಾಯ ಮತ್ತು ಪ್ರತಿಕ್ರಿಯೆ ನಂತರ ಪ್ರತಿಕ್ರಿಯೆ ಗಳುಹಿಸಿ ಗೆ ಹೋಗುವ ಮೂಲಕ YouTube ಆ್ಯಪ್ ಆಡಿಯೊಗಳನ್ನು ವೀಕ್ಷಿಸುವ ಸಮಸ್ಯೆಗಳ ಕುರಿತು ನೀವು ಪ್ರತಿಕ್ರಿಯೆಯನ್ನು ಸಲ್ಲಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11686157616390626296
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false